ಪೋಸ್ಟ್‌ಗಳು

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಸಮಸ್ತ ನಾಗರಿಕರಿಗೆ ಗಣರಾಜ್ಯೋತ್ಸವದ ಶುಭಾಷಯಗಳು - ೨೦೨೫/ಜನವರಿ ೨೬.

ಇಮೇಜ್
  ಕ್ರಿ.ಶ. 1498 ರಲ್ಲಿ ವಾಸ್ಕೋ-ಡ- ಗಾಮ ನು ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಪರಿಣಾಮ   ಭಾರತವು ವಸಾಹತುಶಾಹಿ ರಾಷ್ಟ್ರವಾಗಿ ಸುಮಾರು 4 ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಗೆ ಒಳಪಟ್ಟಿತ್ತು .   1947 ರಲ್ಲಿ ವಸಾಹತುಶಾಹಿಗಳಿಂದ ಬಿಡುಗಡೆಗೊಂಡು   ಭಾರತ ಸರ್ವ ಸ್ವತಂತ್ರ ರಾಷ್ಟ್ರವಾಗುವುದರ   ಮೂಲಕ ಹೊಸ ಸರ್ಕಾರ ಸ್ಥಾಪನೆಗೆ ಮುಂದಾಯಿತು. ವಿಶಾಲ ಭಾರತದಲ್ಲಿದ್ದ ಎಲ್ಲಾಸಣ್ಣ ಪುಟ್ಟ ಸಂಸ್ಥಾನಗಳನ್ನು ಒಟ್ಟುಗೂಡಿಸಿ ಪ್ರಜಾಪ್ರಭುತ್ವ ಸರ್ಕಾರವನ್ನು ಜಾರಿಗೆ ತಂದರು. ಹೀಗಿದ್ದಾಗ ಸ್ವತಂತ್ರ ಭಾರತಕ್ಕೆ ಒಂದು ಸಂವಿಧಾನದ ಅವಶ್ಯಕತೆಯನ್ನ ಮನಗಂಡ ಹಿರಿಯ ಮುತ್ಸದ್ಧಿಗಳು ಸಂವಿಧಾನ ರಚನೆಗೆ ಒಂದು ಸಭೆಯನ್ನು ರೂಪಿಸಿದರು . ಕ್ರಿ.ಶ. 1946 ರ ಸೆಪ್ಟಂಬರ್‌ ನಲ್ಲಿ   ಪಂಡಿತ ಜವಹರ್‌ ಲಾಲ್‌ ನೆಹರೂ ರವರ ನೇತೃತ್ವದಲ್ಲಿ   ಮಧ್ಯಮಾವಧಿ ಸರ್ಕಾರ ಸ್ಥಾಪನೆಯಾದ ಸಂದರ್ಭದಲ್ಲಿ   ೩೦೮ ಸದಸ್ಯರಿರುವ ಸಂವಿಧಾನ ರಚನಾ ಸಮಿತಿಯು   ನವೆಂಬರ್‌ 26 ರಿಂದ   ಸಂವಿಧಾನ ರಚಿಸಿಕೊಳ್ಳುವ   ಜವಾಬ್ದಾರಿಯನ್ನು ಕೈಗೆತ್ತಿಕೊಂಡಿತು.   ಸಂವಿಧಾನ ರಚನಾ ಸಮಿತಿಯ   ಅಧ್ಯಕ್ಷರಾಗಿ ಡಾ// ಬಾಬು ರಾಜೇಂದ್ರ ಪ್ರಸಾದ ರವರು ನೇಮಕವಾದರು.   ಡಾ// ಬಿ. ಆರ್‌ ಅಂಬೇಡ್ಕರ್‌ ರವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಕ್ರಿ. ಶ 1949    ನವೆಂಬರ್...

ಭಾರತೀಯ ಪ್ರವಾಸೋದ್ಯಮ ದಿನ 25 ನೇ ಜನವರಿ 2025…….

ಇಮೇಜ್
  ಭಾರತದ ನೈಸರ್ಗಿಕ ಸೌಂದರ್ಯವನ್ನು   ಗುರುತಿಸಲು , ಮತ್ತು ಭಾರತದ ಆರ್ಥಿಕತೆಗೆ ಭಾರತೀಯ ಪ್ರವಾಸೋದ್ಯಮ   ಮಹತ್ವ ಬಗ್ಗೆ ಜನಜಾಗೃತಿ ಗೊಳಿಸಲು   ಜನವರಿ 25 ನೇ ತಾರೀಖಿನಂದು   ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ನೆನಪುಗಳ ಮಾತು ಮಧುರ….   ಇಂತಹ ಮಧುರ   ನೆನಪುಗಳ ಅವಗಾಹನೆ ಮಾಡುವ, ಒಂದು ಮೂಲ, ನಾವು ಮಾಡುವ ಪ್ರಯಾಣ. ಈ ಪ್ರಯಾಣವು   ಇಂದಿಗೂ ತಲುಪಿಲ್ಲದ   ಮತ್ತು ನಮ್ಮ ಗಡಿಯನ್ನು ತಳ್ಳಿದ   ಸ್ಥಳಗಳನ್ನು ಆಯ್ದುಕೊಂಡರೆ ಬಹುಶ ಇದುವರೆಗೂ ಕಾಣದ ಶ್ರೀಮಂತ ನೆನಪುಗಳ ಕಟ್ಟಿಕೊಡಬಲ್ಲದು. ಪ್ರವಾಸೋದ್ಯಮ ಎಂದರೇನು?. ವ್ಯಕ್ತಿಗಳು ತಾವು ಈ ಮೊದಲು ಭೇಟಿ ನೀಡದ ಮತ್ತು ಅನ್ವೇಷಿಸದ ಹೊಸ ಸ್ತಳಗಳಿಗೆ ಪ್ರಯಾಣ ಮಾಡಬಹುದು, ಆದರೆ ಪ್ರವಾಸೋದ್ಯಮವು ಇದನ್ನು ಮೀರಿದೆ. ಒಂದಷ್ಟು ವಿಭಿನ್ನ ಸಂಸ್ಕ್ರತಿಗಳನ್ನು ಅರಿಯಲು,   ಹೊಸ ವಿಷಯಗಳನ್ನು ಕಲಿಯಲು ಮತ್ತು ತಮ್ಮ ಗಡಿಯನ್ನು ಇನ್ನಷ್ಟು ವಿಸ್ತರಿಸಲು   ಸಹಾಯ ಮಾಡುತ್ತದೆ. ಜನರು ವಿವಿಧ ಕಾರಣಗಳಿಗೆ ಪ್ರಯಾಣಿಸುತ್ತಾರೆ, ವಿನೋಧ, ವಿರಾಮ, ವ್ಯಾಪಾರ, ಕುತೂಹಲ ತಣಿಸಲು,   ಹೀಗೆ ಅವರು ಮಾಡಿದಾಗಲೆಲ್ಲ, ಅವರಿಗೆ ಹೊಸ ಜನರೊಂದಿಗೆ ಸಂಪರ್ಕ   ರಚಿಸಲು, ಹೊಸ ಸಂಪ್ರದಾಯಗಳನ್ನು ಕಲಿಯಲು, ಜನರ ವಿಶಿಷ್ಟ ಕಥಗಳನ್ನು ಕೇಳಲು, ವಿಭಿನ್ನ ಆಹಾರ ರುಚಿಗಳನ್ನು ಪ್ರಯತ್ನಿಸಲು ಸಹಾಯ ಮಾಡುತ್ತದ...

ಸುಳ್ಳು ಸುದ್ದಿಗೆ ಹೆಣವಾದವರು?............ಈ ಸಾವು ನ್ಯಾಯವೇ????????????

ಇಮೇಜ್
ಮಹಾರಾಷ್ಟ್ರದ ಜಲಗಾಂವ್‌ ನಲ್ಲಿ  ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಬೆಂಕಿ ಬಿದ್ದಿದೆ ಎಂಬ ಸುಳ್ಳು ಸುದ್ದಿ ನಂಬಿ ಆತುರಾತುರವಾಗಿ ರೈಲಿನಿಂದ ಇಳಿದು ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಇಲ್ಲಿವರೆಗೂ ಇಪ್ಪತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ                                                                                                                                                                                               ...

ಮಳೆಯ ಹುಟ್ಟಿನ ಹೊತ್ತು……. ನಿಮಗೆಷ್ಟು ಗೊತ್ತು!!!!!!!!!!!!

  ಹಸಿರೇ ಉಸಿರು ಮಳೆಯ   ರಭಸವು ನಿಲ್ಲುವಂತೆ ಕಾಣಲಿಲ್ಲ ಕಿಟಕಿಗೆ ಬೀಳುತ್ತಿದ್ದ ಹನಿಗಳ ಸದ್ದು   ಗುಂಡಿಗೆಯ ಸದ್ದನ್ನು ಹೆಚ್ಚು ಮಾಡುತ್ತಿದ್ದವು.     ಆ ಬೆಳಗಿನ ಜಾವ   ಸುಂದರ ಕನಸುಗಳ   ಬಿತ್ತಿ ಹೋಗುತ್ತಿದ್ದ ಚಂದ್ರಮನು   ಮೋಡಗಳ ಆರ್ಭಟಕ್ಕೆ ಹೆದರಿ ಅವಿತುಕೊಂಡಿದ್ದ.   ರಾತ್ರಿ ಶುರುವಾದ ಮಳೆಯು ಇನ್ನು ನಿಂತಿರಲಿಲ್ಲ.   ೪ ಗಂಟೆಗೆ ಎದ್ದು ಹೊರಡಬೇಕಿದ್ದ ವಿವೇಕನಿಗೆ   ಏನು ಮಾಡಬೇಕೆಂದೆ ತೋಚಲಿಲ್ಲ. ೫ ಗಂಟೆಗೆ ಮುಂಬೈಗೆ ಹೊರಡುವ ಟ್ರೈನಿಗೆ ಹೋಗಬೇಕಿದ್ದವ , ಮುಂಬೈನ ಹೆಸರಾಂತ ಕಂಪನಿಯಲ್ಲಿ ಈ ದಿನ ಸಂದರ್ಶನ ಎದುರಿಸುವವನಿದ್ದ,   ಆದರೆ ಈ ಮಳೆ………………..   ಬಿಸಿ ಬಿಸಿ ಚಾಯ್…‌,   ಬಿಸಿ ಬಿಸಿ ಚಾಯ್‌ …, ಕಾಫಿ , ಕಾಫಿ   ಎಂದು ಕೂಗುತ್ತ ಅತ್ತಿತ್ತ ಪಕ್ಕದಲ್ಲಿಯೇ ನೋಡುತ್ತ   ಯಾರಾದರೂ ಕೈ ಚಾಚುತ್ತರೆನೊ ಎಂದು ಒಂದು ಕೈಯಲ್ಲಿ ಫ್ಲಾಸ್ಕ್‌ ಮತ್ತ ಪೇಪರ್‌ ಕಪ್‌ ಗಳ ಹಿಡಿದು   ರೈಲು ಬೋಗಿಗಳಲ್ಲಿ ಓಂಕಾರ ನು ಓಡಾಡುತ್ತಿದ್ದನು, ಮಳೆಯ ನೀರಿನಿಂದ ತೋಯ್ದು ಹೋದ   ರೈನ್‌ ಕೋಟ್‌   ನ್ನು ಕಂಬಕ್ಕೆ ಸಿಕ್ಕಿಸಿ ಪಕ್ಕದ ಚೇರ್‌ ನಲ್ಲಿ ಕಳಿತು ಸಣ್ಣದಾಗಿ ಸುರಿಯುತ್ತಿದ್ದ ಮಳೆಯನ್ನೆ ನೋಡುತ್ತಿದ್ದನು, ಬಣ್ಣ ಬಣ್ಣ ದ ರೈನ್‌ ಕೋಟ್‌ ಗಳನ್ನು ಧರಿಸಿ ಅದರಲ್ಲಿಯೇ ತಮ್ಮ ಬ್ಯಾಗುಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್...

ವರ್ಷಪೂರ್ತಿ ಹಸಿರಾಗಿರುವ ರೆಸೊಲ್ಯೂಷನ್‌ 💚💚 💚 ......ನೀವೂ ಕೂಡ ಪ್ರಯತ್ನಿಸಿ.

ಹಸಿರೇ ಉಸಿರು ಹೊಸ ವರ್ಷದ ರೆಸೊಲ್ಯೂಷನ್‌ (ಮುಲಾಜುಗಳು)ಗಳು ಡೈರಿಗೆ ಮಾತ್ರ ಸೀಮಿತವೇ?!!........... ಈ ಹೊಸ ವರ್ಷದಲ್ಲಿ ಇಂತಿಷ್ಟು ಕೆಲಸಗಳನ್ನು ಮಾಡಿಯೇ ತೀರುತ್ತೇನೆಂದು ಅಂದುಕೊಳ್ಳುವ ಒಂದಷ್ಟು ಖಾಸಗಿ ಒಡಂಬಡಿಕೆಗಳನ್ನು ಮುಲಾಜುಗಳು ಎಂದು ಕರೆಯುವುದಾದರೆ ಅವುಗಳಲ್ಲಿ ಕೆಲವೊಂದು ಜೀವನವನ್ನೆ ರೇಜಿಗೆ ಹುಟ್ಟಿಸುವಂತಹವುಗಳಾದರೆ, ಇನ್ನು ಕೆಲವು ನಮ್ಮ ನಿತ್ಯ ಜೀವನವನ್ನು ನವನವೀನವಾಗಿಸಿ ಬದುಕನ್ನು ಸಂಭ್ರಮಿಸುವಂತೆ ಮಾಡುತ್ತವೆ. ಇವನೊಬ್ಬ ಬೆಳಗಾಗೊದನ್ನೆ ಕಾಯ್ತಿರ್ತನೆ,   ರಿಂಗಣಿಸಿದ ಫೋನ್‌ ಪರದೆಯನ್ನು ನೋಡುತ್ತಾ ಮಲಗಿದ್ದಲ್ಲೆ ಗೊಣಗಿಕೊಂಡಿದ್ದನು   ಸೂರ್ಯ.       ಅಂದು ಹೊಸ ವರ್ಷದ ಹಿಂದಿನ ದಿನ . ‌ ಸೂರ್ಯ ಬೆಳಗ್ಗೆ ರೆಡಿಯಾಗಿ ಬಂದವನೆ   ತನ್ನ ಬೈಕ್‌ ನ್ನು ಸ್ಟಾರ್ಟ್‌ ಮಾಡಲು ನೋಡಿದ್ದನು, ಆದರೆ ಪೆಟ್ರೋಲ್‌ ಖಾಲಿಯಾಗಿ ಬರಿ ಗುರು ಗುರು ಎಂದಷ್ಟೆ ಸೌಂಡು ಮಾಡಲು ಶಕ್ಯ್ತವಾಗಿತ್ತು ಅವನ ಟು ವೀಲರ್‌ ಬೈಕ್…... ಬರಿದಾದ ಜೇಬನ್ನು ನೋಡಿಕೊಂಡವನು, ಯೋಚಿಸಿ ತಕ್ಷಣ ಅರುಣನಿಗೆ ಕರೆ ಮಾಡಿ, ಅವನಿಂದ ಒಂದಷ್ಟು ಉಗಿಸಿಕೊಂಡು ಪೆಟ್ರೋಲ್‌ ಹಣವನ್ನು ಫೋನ್‌ ಪೆ ಮಾಡಿಸಿಕೊಂಡಿದ್ದನು. ಸೂರ್ಯ “ ಇವನಜ್ಜಿ ನನ್ನ ಹತ್ರ ದುಡ್ಡು ಇದ್ದಾಗೆಲ್ಲ ಅದು ಇದು ತಿಂದು ತೇಗ್ತರೆ, ಪೆಟ್ರೋಲ್‌ ಗೆ   ಇವರತ್ರ ದುಡ್ಡು ಕೇಳುದ್ರೆ ಎಷ್ಟು ಮಾತಾಡ್ತರೆ… ಇರಲಿ ಈ ನನ್‌ ಮಕ್ಕಳಿಗೆ ಮಾಡ್ತಿನಿ” ಎಂದ...