ಪೋಸ್ಟ್‌ಗಳು

ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

“ಪ್ರತಿಯೊಂದು ಸವಾಲು ಒಂದು ಹೊಸ ಅವಕಾಶ, ಮನಸ್ಸು ಸಕಾರಾತ್ಮಕವಾಗಿದ್ರೆ ಮಾತ್ರ ಕಾಣುತ್ತದೆ.” “7 ದಿನಗಳ ಸಕಾರಾತ್ಮಕ ಚಿಂತನೆಯ ಅಭ್ಯಾಸದ ಮಾರ್ಗದರ್ಶನ"

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ.ಎನ್.‌ ದಿನಾಂಕ: ೩೧.೦೮.೨೦೨೫. ಮಾನವನ ಜೀವನವೆಂದರೆ ಸವಾಲುಗಳ ಸರಮಾಲೆ . ಯಾವ ವಯಸ್ಸಿನಲ್ಲಿದ್ದರೂ , ಯಾವ ವೃತ್ತಿಯಲ್ಲಿದ್ದರೂ ಜೀವನದಲ್ಲಿ ಅಡೆತಡೆಗಳು , ವಿಫಲತೆಗಳು , ನೋವುಗಳು , ನಿರಾಶೆಗಳು ನಮ್ಮನ್ನು ಬೆಂಬಿಡುತ್ತಲೇ ಇರುತ್ತವೆ . ಆದರೆ , ಈ ಸವಾಲುಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದೇ ನಮ್ಮ ಯಶಸ್ಸಿನ ಅಳತೆಗೋಲಾಗುತ್ತದೆ . ಇಲ್ಲಿ ಸಕಾರಾತ್ಮಕ ಚಿಂತನೆ (Positive Thinking) ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ . ಸಕಾರಾತ್ಮಕ ಚಿಂತನೆ ಎಂದರೇನು ? ಸಕಾರಾತ್ಮಕ ಚಿಂತನೆ ಅಂದರೆ ಕೇವಲ " ಎಲ್ಲವೂ ಚೆನ್ನಾಗಿರುತ್ತದೆ " ಎಂದುಕೊಳ್ಳುವುದು ಅಲ್ಲ . ಆದರೆ ಬಂದ   ಸಮಸ್ಯೆಗಳನ್ನು ಎದುರುಗೊಳ್ಳುತ್ತಾ , ಅವುಗಳೊಳಗೆ ಅವಕಾಶಗಳನ್ನು ಕಂಡುಕೊಳ್ಳುವುದು ಮತ್ತು ಯಶಸ್ಸಿನತ್ತ ಸಾಗುವುದು . ಎಂತಹ   ನಕಾರಾತ್ಮಕ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸ , ತಾಳ್ಮೆ , ಮತ್ತು ಉತ್ಸಾಹದಿಂದ ಮುಂದೆ ಸಾಗುವ ಮನೋಭಾವದ ಸಮಸ್ಥಿತಿಯೇ ಸಕಾರಾತ್ಮಕ ಚಿಂತನೆ . ಸವಾಲುಗಳನ್ನು ಎದುರಿಸುವಲ್ಲಿ ಸಕಾರಾತ್ಮಕ ಚಿಂತನೆಯ ಪಾತ್ರ ಸಕಾರಾತ್ಮಕ ಚಿಂತನೆಯು ಮನಸ್ಸಿಗೆ ಶಕ್ತಿ ನೀಡುತ್ತದೆ. ಕಷ್ಟಗಳ ಸಮಯದಲ್ಲಿ ಭಯ , ನಿರಾಶೆ , ಕಳವಳ ಇಂತಹ ಸ್ಥಿತಿಗಳು   ನಮ್ಮ ಮನಸ್ಸನ್ನು ಕುಗ್ಗಿಸುತ್ತವೆ . ಆದರೆ ಸಕಾರಾತ...

“Discipline Vs Motivation: ದೀರ್ಘಾವಧಿಯ ಯಶಸ್ಸಿಗೆ ಯಾವುದು ಮುಖ್ಯ?”

ಇಮೇಜ್
  ಶಿಸ್ತು Vs. ಪ್ರೇರಣೆ – ಯಾವುದು ದೀರ್ಘಕಾಲದ ಯಶಸ್ಸನ್ನು ನೀಡುತ್ತದೆ ? ಮಾನವನ ಜೀವನದಲ್ಲಿ ಯಶಸ್ಸು ಎಂಬ ಪದವು ಸದಾ ಆಕರ್ಷಕ . ಆದರೆ ಯಶಸ್ಸನ್ನು ಪಡೆಯಲು ಯಾವುದು ಮುಖ್ಯ ? – ಶಿಸ್ತು (Discipline) ಅಥವಾ ಪ್ರೇರಣೆ (Motivation)? ಈ ಪ್ರಶ್ನೆ ನಮ್ಮಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಯಾವಾಗಲಾದರೂ ಮೂಡಿರುತ್ತದೆ . ಕೆಲವರಿಗೆ ಪ್ರೇರಣೆ ಬಂದಾಗ ಮಾತ್ರ ಕೆಲಸ ಮಾಡಲು ಇಷ್ಟವಾಗುತ್ತದೆ . ಮತ್ತೊಬ್ಬರಿಗೆ ಶಿಸ್ತು ಮುಖ್ಯ ; ದಿನವೂ ಒಂದೇ ರೀತಿಯಲ್ಲಿ ಕ್ರಮಬದ್ಧವಾಗಿ ನಡೆದುಕೊಂಡು ಗುರಿಯನ್ನು ತಲುಪುತ್ತಾರೆ . ಹೀಗಾಗಿ , ಶಿಸ್ತು ಮತ್ತು ಪ್ರೇರಣೆ ಎರಡರ ನಡುವೆ ಯಾವುದು ದೀರ್ಘಕಾಲಿಕ ಯಶಸ್ಸಿಗೆ ಹಾದಿ ಮಾಡುತ್ತದೆ ಎಂಬುದನ್ನು ಇಂದು ನೋಡೋಣ .   ೧ . ಪ್ರೇರಣೆ   ಎಂಬುದು   ಕ್ಷಣಿಕ ಚೈತನ್ಯದ ಶಕ್ತಿ ಪ್ರೇರಣೆ ಎಂದರೆ ಒಂದು ಅಂತರಂಗದ ಚೈತನ್ಯ ಅಥವಾ ಹೊರಗಿನ ಪ್ರೇರಕ ಕಾರಣದಿಂದ ಬಂದ ಉತ್ಸಾಹ . ಉದಾಹರಣೆಗೆ – ಯಶಸ್ವಿಯಾದ ವ್ಯಕ್ತಿಯ ಕಥೆ ಓದಿದಾಗ , ಪ್ರೇರಣಾದಾಯಕ ವೀಡಿಯೊ ನೋಡಿದಾಗ , ಗುರುಗಳಿಂದ ಶ್ಲಾಘನೆ ಸಿಕ್ಕ ಸಮಯದಲ್ಲಿ ಮಾತ್ರ ನಮ್ಮೊಳಗೆ ಪ್ರೇರಣೆ ಉಕ್ಕುತ್ತದೆ . ಈ ರೀತಿ ಆ ಸಮಯಕ್ಕೆ ಸಿಕ್ಕ ಪ್ರೇರಣೆಯಿಂದ ಏನಾದರೊಂದು ಹೊಸದನ್ನು   ಪ್ರಾರಂಭಿಸಲು ಬೇಕಾದ ಚೈತನ್ಯವನ್ನು ಕೊಡುತ್ತದೆ . ಮನಸ್ಸಿಗೆ ಉ...