ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಭಾರತೀಯ ಪ್ರವಾಸೋದ್ಯಮ ದಿನ 25 ನೇ ಜನವರಿ 2025…….

 


ಭಾರತದ ನೈಸರ್ಗಿಕ ಸೌಂದರ್ಯವನ್ನು  ಗುರುತಿಸಲು , ಮತ್ತು ಭಾರತದ ಆರ್ಥಿಕತೆಗೆ ಭಾರತೀಯ ಪ್ರವಾಸೋದ್ಯಮ  ಮಹತ್ವ ಬಗ್ಗೆ ಜನಜಾಗೃತಿ ಗೊಳಿಸಲು  ಜನವರಿ 25 ನೇ ತಾರೀಖಿನಂದು  ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.

ನೆನಪುಗಳ ಮಾತು ಮಧುರ….  ಇಂತಹ ಮಧುರ  ನೆನಪುಗಳ ಅವಗಾಹನೆ ಮಾಡುವ, ಒಂದು ಮೂಲ, ನಾವು ಮಾಡುವ ಪ್ರಯಾಣ. ಈ ಪ್ರಯಾಣವು  ಇಂದಿಗೂ ತಲುಪಿಲ್ಲದ  ಮತ್ತು ನಮ್ಮ ಗಡಿಯನ್ನು ತಳ್ಳಿದ  ಸ್ಥಳಗಳನ್ನು ಆಯ್ದುಕೊಂಡರೆ ಬಹುಶ ಇದುವರೆಗೂ ಕಾಣದ ಶ್ರೀಮಂತ ನೆನಪುಗಳ ಕಟ್ಟಿಕೊಡಬಲ್ಲದು.

ಪ್ರವಾಸೋದ್ಯಮ ಎಂದರೇನು?.

ವ್ಯಕ್ತಿಗಳು ತಾವು ಈ ಮೊದಲು ಭೇಟಿ ನೀಡದ ಮತ್ತು ಅನ್ವೇಷಿಸದ ಹೊಸ ಸ್ತಳಗಳಿಗೆ ಪ್ರಯಾಣ ಮಾಡಬಹುದು, ಆದರೆ ಪ್ರವಾಸೋದ್ಯಮವು ಇದನ್ನು ಮೀರಿದೆ. ಒಂದಷ್ಟು ವಿಭಿನ್ನ ಸಂಸ್ಕ್ರತಿಗಳನ್ನು ಅರಿಯಲು,  ಹೊಸ ವಿಷಯಗಳನ್ನು ಕಲಿಯಲು ಮತ್ತು ತಮ್ಮ ಗಡಿಯನ್ನು ಇನ್ನಷ್ಟು ವಿಸ್ತರಿಸಲು  ಸಹಾಯ ಮಾಡುತ್ತದೆ. ಜನರು ವಿವಿಧ ಕಾರಣಗಳಿಗೆ ಪ್ರಯಾಣಿಸುತ್ತಾರೆ, ವಿನೋಧ, ವಿರಾಮ, ವ್ಯಾಪಾರ, ಕುತೂಹಲ ತಣಿಸಲು,  ಹೀಗೆ ಅವರು ಮಾಡಿದಾಗಲೆಲ್ಲ, ಅವರಿಗೆ ಹೊಸ ಜನರೊಂದಿಗೆ ಸಂಪರ್ಕ  ರಚಿಸಲು, ಹೊಸ ಸಂಪ್ರದಾಯಗಳನ್ನು ಕಲಿಯಲು, ಜನರ ವಿಶಿಷ್ಟ ಕಥಗಳನ್ನು ಕೇಳಲು, ವಿಭಿನ್ನ ಆಹಾರ ರುಚಿಗಳನ್ನು ಪ್ರಯತ್ನಿಸಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಪ್ರವಾಸೋದ್ಯಮ ಆಚರಣೆ ಏಕೆ? ಮತ್ತು ಅದರ ಮಹತ್ವ….

ಪ್ರವಾಸವೆಂದರೆ ಎಲ್ಲರಿಗೂ ಇಷ್ಟ, ಯಾರಿಗೆ ಇಷ್ಟವಿರುವುದಿಲ್ಲ ಹೇಳಿ,….. ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ  ತಮ್ಮ ಸುತ್ತಮುತ್ತಲಿರುವ ತಾಣಗಳಿಗೆ ಸಮಯ ಸಿಕ್ಕಾಗೆಲ್ಲಾ ಬೇಟಿ ನೀಡುವುದನ್ನು ಎಲ್ಲರೂ ಆನಂದಿಸುವವರೆ, ಮಕ್ಕಳಿಂದ ಹಿಡಿದು ಹಿರಿಯವರೆಗೂ  ಪ್ರವಾಸದ ಅನುಭವವನ್ನು ಪಡೆಯಲು ಇಚ್ಚಿಸುವರೆ.

ವಾರಾಂತ್ಯಗಳಲ್ಲಿ ಅಥವಾ ಕೆಲಸದಿಂದ ಬಿಡುವ ಸಿಕ್ಕ ವೇಳೆಯಲ್ಲಿ  ಪ್ರತಿಯೊಬ್ಬರು ಪ್ರವಾಸವನ್ನು ಮಾಡುವುದರಿಂದ ಸುತ್ತಲಿನ ತಾಣಗಳು, ಪ್ರದೇಶಗಳ ಪರಿಚಯ ಮಾಡಿಕೊಳ್ಳಬಹುದು. ಇದರಿಂದ ಜ್ಞಾನಾರ್ಜನೆಯಾಗುತ್ತದೆ, ಜೊತೆಗೆ  ಆ ಪ್ರದೇಶಗಳ ಸಂಸ್ಕ್ರತಿ, ಸಂಪ್ರದಾಯ ನಡೆ ನುಡಿ ಆಚಾರ ವಿಚಾರಗಳು ಎಲ್ಲವನ್ನೂ ನಾವು ತಿಳಿದುಕೊಳ್ಳಬಹುದು ಜೊತೆಗೆ  ಮನುಷ್ಯನ ಬುದ್ದಿಮಟ್ಟಕ್ಕೆ ಮೀರಿದ ಪ್ರಕೃತಿಯ ಕೈಚಳಕವನ್ನು ಅರಿಯಬಹುದು.

ಈ ಪ್ರವಾಸಗಳು ನಮ್ಮ ಅನುಭವವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಹಾಗೆಯೆ ಮನಸ್ಸು ಕೂಡ ರಿಲ್ಯಾಕ್ಸ್‌ ಆಗುತ್ತದೆ.

ಭಾರತದಲ್ಲಿ ಲೆಕ್ಕವಿಲ್ಲದಷ್ಟು ಕಣ್ಮನ ಸೆಳೆಯುವ ಪ್ರವಾಸಿ ತಾಣಗಳಿವೆ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನೋಡುಗರ ಕಣ್ಮನ ಸೆಳೆಯುವ ಪ್ರವಾಸಿ ತಾಣಗಳಿಗೆ, ಪ್ರವಾಸಿಗರ ಬೇಟಿಯನ್ನು ಉತ್ತೇಜಿಸಲು  ಪ್ರತಿವರ್ಷ ಜನವರಿ 25 ರಂದು ಪ್ರವಾಸೋದ್ಯಮವನ್ನು ಆಚರಿಸಲಾಗುತ್ತದೆ.

            ಟ್ರಿಪ್‌ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಪ್ರತಿಯೊಬ್ಬರು ತಮ್ಮ ಬಿಡುವಿನ ವೇಳೆಯಲ್ಲಿ  ಪಿಕ್ನಿಕ್‌ ಆಥವಾ ಸಣ್ಣ ಪ್ರವಾಸಗಳನ್ನು ಮಾಡಿ ದೇಹದ ದಣಿವಾರಿಸಿಕೊಂಡು ರಿಲ್ಯಾಕ್ಸ  ಫೀಲ್‌ ಮಾಡಲು ಬಯಸುತ್ತಾರೆ.   ಇತ್ತೀಚಿನ ದಿನಗಳಲ್ಲಿ ಪ್ರವಾಸಕ್ಕೆ ಹೋಗುವವರ ಸಂಖ್ಯೆಯು ಹೆಚ್ಚಾಗುತ್ತಿದೆ, ಇದರಿಂದ ಪ್ರವಾಸೋದ್ಯಮವು ಹಿಂದೆಂದಿಗಿಂತಲೂ  ಬೃಹತ್‌ ರೀತಿಯಲ್ಲಿ ಬೆಳೆಯುತ್ತಿದೆ. ಇದರಿಂದ ಬೆಳೆಯುತ್ತಿರುವ ಪ್ರವಾಸೋದ್ಯಮವು ಭಾರತದ ಆರ್ಥಿಕತೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಇದರಿಂದ ಪ್ರವಾಸಿ ತಾಣದ ಸಣ್ಣ ಸಣ್ಣ ವ್ಯಾಪಾರಿಗಳಿಗೆ, ಲೋಕಲ್‌ ಟ್ರಾನ್ಸ್‌ ಪೋರ್ಟ್‌ ಗಳಿಗೆ, ಹೊಟೆಲ್‌ ಗಳಿಗೆ  ನಿರಂತರ ಗಳಿಕೆಯ ತಾಣಗಳಾಗಿವೆ. ಅನೇಕ ಜನರಿಗೆ ಉದ್ಯೋಗ ದೊರೆತಿದೆ. ಇಂತಹ ಪ್ರವಾಸಿ ತಾಣಗಳನ್ನು  ಉತ್ತೇಜಿಸಲು ಪ್ರತಿವರ್ಷ ಜನವರಿ ೨೫ ರಂದು ಪ್ರವಾಸೋದ್ಯಮ ದಿನವಾಗಿ ಆಚರಿಸುತ್ತಾ ಬರಲಾಗುತ್ತಿದೆ.

 

ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಆಚರಣೆಯ ಇತಿಹಾಸ.

ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದ ನಂತರದಲ್ಲಿ ಮೊದಲ ಬಾರಿಗೆ ಅಂದರೆ  1948 ರಲ್ಲಿ ಭಾರತ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು.  ಅದೇ ವರ್ಷ ದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು           ಪ್ರವಾಸೋದ್ಯಮ ಸಾರಿಗೆ ಸಮಿತಿಯನ್ನು ರಚಿಸಲಾಯಿತು. 1998 ರಲ್ಲಿ ಪ್ರವಾಸೋದ್ಯಮ   ಸಂಪರ್ಕ ಸಚಿವಾಲಯದ ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆ ಆರಂಭಿಸಲಾಯಿತು.

 

ಪ್ರವಾಸೋದ್ಯಮ ದಿನದ ಮಹತ್ವ.

ಒಂದು ದೇಶದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಹೇಗೆ ಮಹತ್ವ ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ, ಬದಾಲುಗುತ್ತಿರುವ ಜನರ ಹವ್ಯಾಸ ಅಭ್ಯಾಸಗಳು, ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಬೆಳವಣಿಗೆಯ ನಿರೀಕ್ಷೆಗಳು  ಭಾರತದ ಆರ್ಥಿಕ ಅಭಿವೃದ್ದಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬದನ್ನು ತಿಳಿಸುವ ಸಲುವಾಗಿಯೂ ಈ ದಿನದ ಆಚರಣೆ ಮಹತ್ವದ್ದಾಗಿದೆ.

ಈ ರಾಷ್ಟ್ರೀಯ ಪ್ರವಾಸೋದ್ಯಮ ದಿನದಂದು, ಎಲ್ಲ ರಾಜ್ಯಗಳು ತಮ್ಮ  ಪ್ರವಾಸೋದ್ಯಮವನ್ನು ಉತ್ತೇಜಿಸಲು, ಹಲವು ಕಾರ್ಯಾಗಾರಗಳು, ಸೆಮಿನಾರ್‌ ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಪ್ರವಾಸೋದ್ಯಮದ ಮಹತ್ವವನ್ನು ನಾಗರಿಕರಿಗೆ ತಿಳಿಸಲಾಗುತ್ತದೆ.

 

ದೇಶದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಮಹತ್ವ.

            ಭಾರತದ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಪ್ರವಾಸೋದ್ಯಮ ಅತಿದೊಡ್ಡ ಪಾತ್ರವನ್ನು ವಹಿಸುತ್ತದೆ. ಈಗಾಗಲೇ ಈ ಪ್ರವಾಸೋದ್ಯಮವು  ಭಾರತದ ಆರ್ಥಕತೆಯ ಅತಿದೊಡ್ಡ ಸೇವಾವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ ೬.೨೩%  ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ ೮.೭೮% ರಷ್ಟು  ಕೊಡುಗೆ ನೀಡುತ್ತದೆ. ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿಯ ಪ್ರಕಾರ ವಾರ್ಷಿಕ  ಐದು ಲಕ್ಷಕ್ಕಿಂತಲೂ  ಹೆಚ್ಚು ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಇದರಿಂದ ವರ್ಷದಿಂದ ವರ್ಷಕ್ಕೆ  ಭಾರತದ ಆರ್ಥಿಕತೆಗೆ ಪ್ರವಾಸೋದ್ಯಮದಿಂದ ಬರುತ್ತಿರುವ  ಆದಾಯವು ಹೆಚ್ಚುತ್ತಲೇ ಇದೆ.  ಸಾರ್ವಜನಿಕ ಸಾರಿಗೆ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆ  ಮತ್ತು ಅಭಿವೃಧ್ಧಿ  ತಾಣಗಳಲಲ್ಲಿನ ಮೂಲ ಸೌಕರ್ಯಗಳ ವ್ಯವಸ್ಥೆಯ ಬಗೆಗೆ ಇನ್ನಷ್ಟು ಗಮನ ಹರಿಸಿದರೆ ದೇಶೀಯರು ಸೇರಿದಂತೆ ವಿದೇಶಿ  ಪ್ರವಾಸಿಗರ ಸಂಖ್ಯೆಯು ಅಧಿಕವಾಗಿ ಭಾರತದ ಆರ್ಥಿಕತೆಗೆ ಲಾಭವನ್ನು ತಂದುಕೊಡುತ್ತದೆ.

ಪ್ರವಾಸೋದ್ಯಮವು ಭಾರತ ಆರ್ಥಿಕತೆಯ ಬೃಹತ್‌ ಬಾಗವಾಗಿರುವುದು ಮಾತ್ರವಲ್ಲದೆ,  ವಿವಿಧ ಭಾಗಗಳ ಸಂಪ್ರದಾಯ ಮತ್ತು ಸಂಸ್ಕ್ರತಿಯ ಸೇತುವೆಯಾಗಿ ಸಹ ಕಾರ್ಯನಿರ್ವಹಿಸುತ್ತದೆ. ಪ್ರಪಂಚದ ವಿವಿಧ ಭಾಗಗಳಿಂದ ಜನರನ್ನು ಸಂಪರ್ಕಿಸುತ್ತದೆ.

ಪ್ರವಾಸಿಗರು  ವೈವಿಧ್ಯಮಯ ಸಂಸ್ಕೃತಿಗಳ ಒಳನೋಟವನ್ನು ಪಡೆಯುತ್ತಾರೆ. ಜಾಗತಿಕ ವೈವಿಧ್ಯತೆಯ ತಿಳುವಳಿಕೆ, ಸಹಿಷ್ಣತೆ ಮತ್ತು ಮೆಚ್ಚುಗೆಯನ್ನು ಬೆಳೆಸುತ್ತಾರೆ. ಈ ಸಾಂಸ್ಕೃತಿಕ ವಿನಿಮಯವು  ಮೇಲ್ಮೈ ಮಟ್ಟದ ಸಂವಹನಗಳನ್ನು ಮೀರಿ ಜನರು ಮತ್ತು ಸಮುದಾಯಗಳ ನಡುವೆ  ಅರ್ಥಪೂರ್ಣ ಸಂಪರ್ಕಗಳನ್ನು ಸೃಷ್ಟಿಸುತ್ತದೆ.

ಭಾರತದಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಪ್ರಾಮುಖ್ಯತೆ.

ಪ್ರಂಚದ ಅತ್ಯಂತ ಹಳೆಯ  ಶ್ರೀಮಂತ ನಾಗರಿಕತೆಗಳಲ್ಲಿ ಒಂದಾದ ಭಾರತವು  ಪರಂಪರೆ, ಸಂಸ್ಕೃತಿ, ಆಧ್ಯಾತ್ಮಿಕತೆ, ವಿಜ್ಞಾನಗಳಲ್ಲಿ  ವೈವಿಧ್ಯತೆಯ ಮೇರು ನಿಧಿಯಾಗಿದೆ. ಉನ್ನತ ಪರಂಪರೆ  ಸಾಂಪ್ರಾದಾಯಿಕ ಆಚರಣೆಗಳಿಗೆ ಹೆಸರುವಾಸಿಯಾದ ಭಾರತ ದೇಶವು,  ಸಮಯ ಮತ್ತು ಸಂಪ್ರದಾಯಗಳ  ಮೂಲಕ ಪ್ರಯಾಣವನ್ನು ಬಯಸುವ ಜಾಗತಿಕ  ಪ್ರವಾಸಿಗರಿಗೆ ಒಂದು ಮ್ಯಾಗ್ನೆಟ್‌ ಆಗಿ ಕಾರ್ಯನಿರ್ವಹಿಸುತ್ತದೆ.

ಈ ದಿನವು ನಮ್ಮ ಆಳವಾದ  ಬೇರೂರಿರುವ  ಸಂಸ್ಕ್ರತಿ ಪರಂಪರೆಯನ್ನು ಅನ್ವೇಷಿಸಲು  ಸಮುದ್ರಯಾನ  ಬಯಸುವವರಿಗೆ ಜಾಗತಿಕ ಒಳಹರಿವನ್ನು ಗುರುತಿಸುತ್ತದೆ ಮತ್ತುಗೌರವಿಸುತ್ತದೆ.

ಭಾರತದ ವೈವಿಧ್ಯಮಯ ಭೂದೃಶ್ಯಗಳನ್ನು ಅನ್ವೇಷಿಸುವ ಪ್ರವಾಸಿಗರು, ಪ್ರಾಚೀನ ಸ್ಥಳಗಳಿಂದ ಹಿಡಿದು  ರಮಣೀಯ ಸೌಂದರ್ಯದವರೆಗೆ,  ದೇಶದ ಆರ್ಥಿಕ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಪ್ರವಾಸೋದ್ಯಮವು ಕೇವಲ ವಿರಾಮದ ಪ್ರಯಾಣವಲ್ಲ  ಎಂಬುದನ್ನು ನಮಗೆ  ನೆನಪಿಸಲು  ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.

ಆರ್ಥಿಕ ಸಮೃಧ್ಧಿ,  ಉದ್ಯೋಗ ಸೃಷ್ಟಿ ಮತ್ತು  ಸ್ಥಳೀಯ ಸಮುದಾಯಗಳ  ಒಟ್ಟು ಬೆಳವಣಿಗೆಗೆ ಚಾಲನೆ ನೀಡುವ ಶಕ್ತಿ ಕೇಂದ್ರವಾಗಿದೆ.

 

ರಾಷ್ಟ್ರೀಯ ಪ್ರವಾಸೋದ್ಯಮ ದಿನದ  ಥೀಮ್

            ರಾಷ್ಟ್ರೀಯ ಪ್ರವಾಸೋದ್ಯಮ ದಿನದ  ವಿಷಯವು,   ಜವಾಬ್ದಾರಿಯುತವಾದ  ಅಭ್ಯಾಸಗಳು,  ಸುಸ್ಥಿರ ಬೆಳವಣಿಗೆಯ ಕಡೆಗೆ ಪ್ರವಾಸೋದ್ಯಮ ವಲಯವನ್ನು ಮಾರ್ಗದರ್ಶಿಸುವ ದಾರಿದೀಪವಾಗಿವೆ. ಪ್ರತಿ ವರ್ಷ ಹೊಸ ಥೀಮ್‌ ಅನ್ನು ಆಯ್ಕೆ ಮಾಡಲಾಗುತ್ತದೆ.

 ಇತ್ತೀಚಿನ ವರ್ಷಗಳಲ್ಲಿ  ಪ್ರವಾಸೋದ್ಯಮ ಕ್ಷೇತ್ರವು ಎದುರಿಸುತ್ತಿರುವ ವಿಕಸನಗೊಳ್ಳುತ್ತಿರುವ ಆದ್ಯತೆಗಳು  ಮತ್ತು ಸವಾಲುಗಳನ್ನು ಪ್ರತಿಬಿಂಬಿಸುವ  ವಿಭಿನ್ನ ವಿಷಯಗಳೊಂದಿಗೆ  ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ವಿಷಯಗಳು ಒಟ್ಟಾರೆಯಾಗಿ  ಜವಾಬ್ದಾರಿಯುತ  ಪ್ರವಾಸೋದ್ಯಮ,  ಸಾಂಸ್ಕ್ರತಿಕ ಮೆಚ್ಚುಗೆ  ಮತ್ತು ಸುಸ್ಥಿರ  ಪ್ರಯಾಣದ ಅಭ್ಯಾಸಗಳಿಗೆ ಪ್ರಾಮಾಣಿಕತೆಯನ್ನು ಪ್ರತಿನಿಧಿಸುತ್ತವೆ.

 

೨೦೨೫ ರಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್‌  “ ಅಂತರ್ಗತ  ಬೆಳವಣಿಗೆಗಾಗಿ ಪ್ರವಾಸೋದ್ಯಮ”  ಆಗಿದೆ. ಇದು ಆಂತರಿಕ ಬೆಳವಣಿಗೆಯನ್ನು ಪ್ರೇರೇಪಿಸುವಲ್ಲಿ ಪ್ರವಾಸೋದ್ಯಮದ ಮಹತ್ವವನ್ನು ಎತ್ತಿ ತೋರಿಸುತ್ತದೆ ಮತ್ತು ಪ್ರಯೋಜನಗಳು ಭಾರತ ಸಮಾಜದ ಎಲ್ಲಾ ವರ್ಗಗಳನ್ನು ತಲುಪುತ್ತದೆ ಎಂದು ಖಚಿತಪಡಿಸುತ್ತದೆ.

ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಅಭೈಸಗಳನ್ನು ಉತ್ತೇಜಿಸುವ ಮೂಲಕ ಮತ್ತು ಸುಸ್ಥಿರ ಪ್ರವಾಸೋದ್ಯಮ , ವೈವಿದ್ಯಮಯ ಭಾರತೀಯ ಸಾಂಸ್ಕ್ರತಿಕ ಪರಂಪರೆ ಮತ್ತು ಡಿಜಿಟಲ್‌  ರೂಪಾಂತರದ ಮೂಲಕ ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವುದರ ಮೇಲೆ  ಗಮನ ಕೇಂದ್ರೀಕರಿಸಿದೆ.

 

ನಾವು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲು ಇವು ಕೆಲವು ಕಾರಣಗಳಾಗಿವೆ.  ಭಾರತವು ತನ್ನ ವೈವಿಧ್ಯಮಯ ಭೂ ದೃಶ್ಯಗಳು ಮತ್ತು ರೋಮಾಂಚಕ ಇತಿಹಾಸವನ್ನು  ಹೊಂದಿರುವ ಈ ದಿನವು ಕೃತಜ್ಞತೆಯ ಕೇಂದ್ರಬಿಂದುವಾಗಿದೆ. ದೇಶದ ಅನನ್ಯ  ಸಂಸ್ಕ್ರತಿ  ಮತ್ತು ಪರಂಪರೆಯನ್ನು ಅನ್ವೇಷಿಸಲು , ಪ್ರವಾಸ ಆರಂಭಿಸುವ ಪ್ರಪಂಚದ ಸಕಲ  ಸಂದರ್ಶಕರಿಗೆ  ಇದು ಮೆಚ್ಚುಗೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಕೇವಲ ಆಚರಿಸುವ ಬದಲು, ರಾಷ್ಟ್ರೀಯ ಪ್ರವಾಸೋದ್ಯಮ ದಿನವು  ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಾರತಕ್ಕೆ ನೀಡಿದ ಕೊಡುಗೆಗಾಗಿ ಪ್ರವಾಸಿಗರಿಗೆ  ಧನ್ಯವಾದ  ಸಲ್ಲಿಸುವ ಅವಕಾಶವನ್ನು ಹೃದಯ ತುಂಬಿ ಆಚರಿಸಲ್ಪಡುತ್ತದೆ.

 

ಧನ್ಯವಾದಗಳು. 🌷 

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......