ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಸಮಸ್ತ ನಾಗರಿಕರಿಗೆ ಗಣರಾಜ್ಯೋತ್ಸವದ ಶುಭಾಷಯಗಳು - ೨೦೨೫/ಜನವರಿ ೨೬.

 


ಕ್ರಿ.ಶ. 1498 ರಲ್ಲಿ ವಾಸ್ಕೋ-ಡ- ಗಾಮ ನು ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಪರಿಣಾಮ  ಭಾರತವು ವಸಾಹತುಶಾಹಿ ರಾಷ್ಟ್ರವಾಗಿ ಸುಮಾರು 4 ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಗೆ ಒಳಪಟ್ಟಿತ್ತು .  1947ರಲ್ಲಿ ವಸಾಹತುಶಾಹಿಗಳಿಂದ ಬಿಡುಗಡೆಗೊಂಡು  ಭಾರತ ಸರ್ವ ಸ್ವತಂತ್ರ ರಾಷ್ಟ್ರವಾಗುವುದರ  ಮೂಲಕ ಹೊಸ ಸರ್ಕಾರ ಸ್ಥಾಪನೆಗೆ ಮುಂದಾಯಿತು. ವಿಶಾಲ ಭಾರತದಲ್ಲಿದ್ದ ಎಲ್ಲಾಸಣ್ಣ ಪುಟ್ಟ ಸಂಸ್ಥಾನಗಳನ್ನು ಒಟ್ಟುಗೂಡಿಸಿ ಪ್ರಜಾಪ್ರಭುತ್ವ ಸರ್ಕಾರವನ್ನು ಜಾರಿಗೆ ತಂದರು.

ಹೀಗಿದ್ದಾಗ ಸ್ವತಂತ್ರ ಭಾರತಕ್ಕೆ ಒಂದು ಸಂವಿಧಾನದ ಅವಶ್ಯಕತೆಯನ್ನ ಮನಗಂಡ ಹಿರಿಯ ಮುತ್ಸದ್ಧಿಗಳು ಸಂವಿಧಾನ ರಚನೆಗೆ ಒಂದು ಸಭೆಯನ್ನು ರೂಪಿಸಿದರು .

ಕ್ರಿ.ಶ. 1946 ರ ಸೆಪ್ಟಂಬರ್‌ ನಲ್ಲಿ  ಪಂಡಿತ ಜವಹರ್‌ ಲಾಲ್‌ ನೆಹರೂ ರವರ ನೇತೃತ್ವದಲ್ಲಿ  ಮಧ್ಯಮಾವಧಿ ಸರ್ಕಾರ ಸ್ಥಾಪನೆಯಾದ ಸಂದರ್ಭದಲ್ಲಿ  ೩೦೮ ಸದಸ್ಯರಿರುವ ಸಂವಿಧಾನ ರಚನಾ ಸಮಿತಿಯು  ನವೆಂಬರ್‌ 26 ರಿಂದ  ಸಂವಿಧಾನ ರಚಿಸಿಕೊಳ್ಳುವ  ಜವಾಬ್ದಾರಿಯನ್ನು ಕೈಗೆತ್ತಿಕೊಂಡಿತು.  ಸಂವಿಧಾನ ರಚನಾ ಸಮಿತಿಯ  ಅಧ್ಯಕ್ಷರಾಗಿ ಡಾ// ಬಾಬು ರಾಜೇಂದ್ರ ಪ್ರಸಾದ ರವರು ನೇಮಕವಾದರು.  ಡಾ// ಬಿ. ಆರ್‌ ಅಂಬೇಡ್ಕರ್‌ ರವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

ಕ್ರಿ. ಶ 1949  ನವೆಂಬರ್‌ 26  ರಂದು ಕರಡು ಸಂವಿಧಾನಕ್ಕೆ  ಸಂವಿಧಾನ ರಚನಾ ಸಮಿತಿಯು ಒಪ್ಪಿಗೆ ನೀಡಿತು.   ಜನವರಿ 26 1929 ರಂದು  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪೂರ್ಣ ಸ್ವರಾಜ್ಯವನ್ನು ಸ್ಥಾಪಿಸಬೇಕೆಂದು  ಲಾಹೋರ್‌ ನಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಮತ್ತು ಈ ದಿನವನ್ನು ಪೂರ್ಣ ಸ್ವರಾಜ್‌ ದಿನ ಎಂದು ಘೋಷಿಸಲಾಯಿತು,  ಈ ಕಾರಣಕ್ಕಾಗಿಯೇ  ಭಾರತದ ಸಂವಿಧಾನವನ್ನು ಸ್ವಾತಂತ್ರ್ಯದ ನಂತರದ ಈ ದಿನದಂದು ಜಾರಿಗೆ ತರಲಾಯಿತು.

ಜನವರಿ 26 ಕ್ರಿ.ಶ 1950 ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸುವ ಮೂಲಕ ಭಾರತವು ಗಣರಾಜ್ಯವಾಯಿತು. ಇದರ ಪ್ರಯುಕ್ತ  ಜನವರಿ 26 ರಂದು ಪ್ರತಿ ವರ್ಷ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ.

 ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವವನ್ನು ರಾಷ್ಟ್ರಪತಿಗಳ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಪ್ರತಿವರ್ಷ ನಡೆಸಲಾಗುತ್ತದೆ. ಭಾರತಕ್ಕೆ ಗೌರವವಾಗಿ ನಡೆಸಲಾಗುವ,  ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕ್ರತಿಕ ಪರಂಪರೆಯಲ್ಲಿ ಅದರ ಏಕತೆಯನ್ನು ಸಾರುವ  ವಿವಿಧ ರಾಜ್ಯಗಳ ಟ್ಯಾಬ್ಲೋಗಳ ವಿಧ್ಯುಕ್ತ ಮೆರವಣಿಗೆಗಳು ನಡೆಯುತ್ತವೆ.

ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯನ್ನು ರಕ್ಷಣಾ ಸಚಿವಾಲಯವು ಆಯೋಜಿಸುತ್ತದೆ. ರಾಷ್ಟ್ರಪತಿ ಭವನದ ದ್ವಾರದಿಂದ ಪ್ರಾರಂಭವಾಗುವ ಈ ಮೆರವಣಿಗೆ ಮೂರು ದಿನಗಳ ಕಾಲ ನಡೆಯುತ್ತದೆ ಇದು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ,  ಈ ಮೆರವಣಿಗೆ  ಭಾರತದ  ರಕ್ಷಣಾ ಸಾಮರ್ಥ್ಯ , ಸಾಂಸ್ಕೃತಿಕ ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ.

 ಭಾರತೀಯ ಸೇನೆಯ ನೌಕಾಪಡೆಯು ಹೆಚ್ಚುವರಿಯಾಗಿ ಒಂಭತ್ತರಿಂದ  ಹನ್ನೆರಡು  ವಿಭಿನ್ನ ರೆಜಿಮೆಂಟ್‌  ಮತ್ತು ವಾಯುಪಡೆಯು ತಮ್ಮ ಎಲ್ಲಾ ಬ್ಯಾಂಡ್‌ ಗಳೊಂದಿಗೆ  ಉತ್ಕೃಷ್ಟ ಮತ್ತು ಅಧಿಕೃತ ಅಲಂಕಾರದಲ್ಲಿ , ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್‌ ಇನ್‌ ಚೀಫ್‌ ಆಗಿರುವ ಭಾರತದ  ರಾಷ್ಟ್ರಪತಿಗಳಿಗೆ ವಂದನೆ ಸಲ್ಲಿಸಲಾಗುತ್ತದೆ.

ಭಾರತದ ವಿವಿಧ ಪ್ಯಾರಾ ಮಿಲಿಟರಿ ಪಡೆಗಳು ಮತ್ತು ಇತರ ನಾಗರಿಕ ಪಡೆಗಳ ಹನ್ನೆರಡು  ತುಕಡಿಗಳು  ಈ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ.

ಕರ್ನಾಟಕದಲ್ಲಿ 76ನೇ ಗಣರಾಜ್ಯೋತ್ಸವದ , …….

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ರಾಜ್ಯಪಾಲ ಥಾವರ್‌ ಚಂದ್‌  ಗೆಹ್ಲೋಟ್‌ ರಿಂದ ದ್ವಜಾರೋಹಣೆ ನೆರವೇರಿಸಲಾಯಿತು.  ನಂತರ ರಾಷ್ಟ್ರಗೀತೆಯೊಂದಿಗೆ  ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು,  ನಂತರ ಪೋಲೀಸರಿಂದ ವಂದನಾ ಗೌರವ ಸ್ವೀಕರಿಸಿ, ಪರೇಡ್‌ ವೀಕ್ಷಿಸಿದ ರಾಜ್ಯಪಾಲರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ದೆಹಲಿಯ ಸ್ತಬ್ಧ ಚಿತ್ರದಲ್ಲಿ ಕರ್ನಾಟಕದ ಸಾಧನೆ.

ದೆಹಲಿಯ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಸ್ತಬ್ಧಚಿತ್ರದೊಂದಿಗೆ  ಭಾಗವಹಿಸುವುದು ಪ್ರತಿ ರಾಜ್ಯಕ್ಕೂ ಹೆಮ್ಮೆಯ ಮತ್ತು ಪ್ರತಿಷ್ಠೆಯ ಸಂಕೇತ.  ಭದ್ರತೆ ಮತ್ತು ಪ್ರಾತಿನಿಧ್ಯತೆಯ ಕಾರಣವಾಗಿ  ಸ್ತಬ್ದ ಚಿತ್ರಕ್ಕಾಗಿ  ಪ್ರತಿನಿಧಿಸುವ  ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯನ್ನು ಇಳಿಸಲಾಗಿದೆ. ಇದು ತೀವ್ರ ಪೈಪೋಟಿಗೆ ಕಾರಣವಾಗಿ ಗುಣಮಟ್ಟಕ್ಕೆ ಮತ್ತು ವಿನ್ಯಾಸಕ್ಕೆ ಹೆಚ್ಚಿನ  ಒತ್ತು ನೀಡಲಾಗಿದೆ.  ಪಥಸಂಚಲನದಲ್ಲಿ ಭಾಗವಹಿಸುವುದು ಪ್ರತಿಷ್ಠೆಯ ಸಂಕೇತವಾಗಿದೆ.

ದೆಹಲಿಯ ಕರ್ತವ್ಯ ಪಥದಲ್ಲಿ ಸೇನೆಯ ಪೇರೇಡ್‌ , ಈ ಬಾರಿಯ ಪ್ರಮುಖ ಆಕರ್ಷಣೆಯ ʼಪ್ರಳಯ್‌ʼ ವೈಮಾನಿಕ ಕಸರತ್ತು – ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋ ಗಳು.

ದೆಹಲಿಯ ಪಥಸಂಚಲನದಲ್ಲಿ ಕರ್ನಾಟಕದ ಟ್ಯಾಬ್ಲೋ ಲಕ್ಕುಂಡಿಯ ಶಿಲ್ಪಕಲೆಯನ್ನು ಪ್ರದರ್ಶಿಸಲಾಯಿತು, ದ್ರಾವಿಡ ಶೈಲಿ ಶಿಲ್ಪಕಲೆಯ ಲಕ್ಕುಂಡಿ ಬ್ರಹ್ಮ ಜಿನಾಲಯ,   ಗರ್ಭಗೃಹ, ಗೂಢ ಮಂಟಪ, ಆಗಮ ಮಂಟಪವಿರುವ ಕರ್ನಾಟಕ ಕಲಾಪರಂಪರೆ ಪ್ರತಿಬಿಂಬಿಸುವ ಸ್ತಬ್ದಚಿತ್ರ. ಶಿಲ್ಪಕಲೆಯ ತೊಟ್ಟಿಲು ಕರ್ನಾಟಕದ ಟ್ಯಾಬ್ಲೋ.

ದೆಹಲಿಯ ಕರ್ತವ್ಯ ಪಥದಲ್ಲಿ ಸುಮಾರು 15 ಬಾರಿ ಪಥಸಂಚಲನದಲ್ಲಿ ಕರ್ನಾಟಕವು ಭಾಗವಹಿಸುವ ಮೂಲಕ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಅದರಲ್ಲಿ,…..

2005 ರಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಸ್ತಕಾಭೀಷೇಕದ ಸ್ತಬ್ದಚಿತ್ರಕ್ಕೆ ಪ್ರಥಮ ಪ್ರಶಸ್ತಿ ದೊರೆತಿತ್ತು.

2008 ರಲ್ಲಿ ಹೊಯ್ಸಳ ಕಲೆಯ ಸ್ತಬ್ಧ ಚಿತ್ರವು  ದ್ವಿತೀಯ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಶನ್‌ ಗಾಗಿ ಪ್ರಶಸ್ತಿ ಲಬಿಸಿತ್ತು. ಒಂದೇ ಸ್ತಬ್ಧ ಚಿತ್ರಕ್ಕಾಗಿ  ಮೂರು ಪ್ರಶಸ್ತಿಗಳನ್ನು ಪಡೆದಂತಹ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ.

2011 ರಲ್ಲಿ  ಬೀದರ್‌ ನ ಪಾರಂಪರಿಕ ಕಲೆಯಾದ ʼಬಿದರಿʼ ಸ್ತಬ್ದ ಚಿತ್ರಕ್ಕೆ ದ್ವಿತೀಯ ಪ್ರಶಸ್ತಿ,2012 ರಲ್ಲಿ ದಕ್ಷಿಣ ಕನ್ನಡದ ಭೂತಾರಾಧನೆಗೆ ತೃತೀಯ ಪ್ರಶಸ್ತಿ, 2015 ರಲ್ಲಿ ರಾಜ್ಯವು ಚನ್ನಪಟ್ಟಣದ ಗೊಂಬೆಗಳಿಗೆ ತೃತೀಯ ಪ್ರಶಸ್ತಿ, 2022 ರಲ್ಲಿ ಪ್ರದರ್ಶಿಸಿದ್ದ ʼ ಸಾಂಪ್ರದಾಯಿಕ ಕಸೂತಿ ತೊಟ್ಟಿಲುʼ ಗೆ  ದ್ವಿತೀಯ ಪ್ರಶಸ್ತಿ ಲಭಿಸಿತ್ತು.

ದೆಹಲಿಯ 76 ನೇ ಗಣತಂತ್ರದ ಸಂಭ್ರಮ:-

76ನೇ ಗಣರಾಜ್ಯೋತ್ಸವ ದ ಸಂಭ್ರಮ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಈ ಬಾರಿ  ಪ್ರಧಾನ ಮಂತ್ರಿ ನರೇಂದ್ರ ಮೋದಿಯ ನೇತೃತ್ವದ ಗಣರಾಜ್ಯೋತ್ಸವಕ್ಕೆ , ಸಾರ್ವಜನಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸಲಾಗಿತ್ತು. ಇದರಲ್ಲಿ ಹತ್ತು ಸಾವಿರ ಮಂದಿಯನ್ನು ಆಹ್ವಾನಿಸಿದ್ದು, ಈ ಕಾರ್ಯಕ್ರಮವನ್ನು ಜನಭಾಗೀದಾರಿ ಎಂದು ಕೂಡ ಕರೆಯಲಾಗಿದೆ.

ಪರಂಪರೆ ಮತ್ತು ಪ್ರಗತಿ ಎಂಬ ಥೀಮ್‌ ನಲ್ಲಿ ಕಾರ್ಯಕ್ರಮವನ್ನು  ಆಯೋಜಿಸಲಾಗಿದ್ದ, ಸುವರ್ಣ ಭಾರತ ನಿರ್ಮಾಣಕ್ಕೆ ಕಾರಣರಾದವರಿಗೆ ಆಹ್ವಾನ ನೀಡಲಾಗಿದೆ. ಗ್ರಾಮ ಪಂಚಾಯತ್‌ ಗಳ ಮುಖ್ಯಸ್ಥರು, ಸ್ವಸಹಾಯ ಗುಂಪುಗಳ ಸದಸ್ಯರು, ಪಿಎಂ- ಜನಮನ್‌ ಯೋಜನೆಯ ಭಾಗೀದಾರರು, ಬುಡಕಟ್ಟು ಕಲಾವಿದರು, ಆಶಾ ಕಾರ್ಯಕರ್ತರು, ವಿಪತ್ತು ನಿರ್ವಹಣಾ ದಳಗಳ ಸಿಬ್ಬಂದಿ, ಪ್ಯಾರಾ ಒಲಿಂಪಿಕ್ಸ್ ಸ್ಫರ್ಧಿಗಳು ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿತ್ತು.

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕರ್ತವ್ಯಪಥದಲ್ಲಿ  ೩ ಸೇನಾಪಡೆಗಳ ಜಂಟಿ ಸ್ತಬ್ದಚಿತ್ರವನ್ನು ಪ್ರದರ್ಶನ ಮಾಡಲಾಯಿತು, ಭೂಸೇನೆ, ನೌಕಾಪಡೆ, ವಾಯುಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಥೀಮ್‌ ಅನ್ನು ಈ ಜಂಟಿ ಸ್ತಬ್ದಚಿತ್ರ ಒಳಗೊಂಡಿತ್ತು. ಈ ಸ್ತಬ್ದಚಿತ್ರವು ಜಂಟಿ ಆಪರೇಷನ್‌ ಕೊಠಡಿ, ಅರ್ಜುನ್‌ ಟ್ಯಾಂಕರ್‌,ತೇಜಸ್‌, ಐಎನ್‌ ಎಸ್‌ ವಿಶಾಖಪಟ್ಟಣ ನೌಕೆ ಮಾದರಿಯನ್ನು ಹೊಂದಿತ್ತು.

ಈ ಬಾರಿ ಗಣರಾಜ್ಯೋತ್ಸವದ ಪರೇಡ್‌ ನಲ್ಲಿ ಒಟ್ಟು 31 ಸ್ತಬ್ದಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು, ಇದರಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸರಕಾರದ ಸಚಿವಾಲಯಗಳ 10 ಸ್ತಬ್ದ ಚಿತ್ರಗಳು ಪ್ರದರ್ಶನ ಮಾಡಲಾಯಿತು.

ಭಾರತದ ಸಂಸ್ಕೃತಿಯನ್ನು ಬಿಂಬಿಸುವಂತೆ  ಈ ಬಾರಿಯ ಗಣರಾಜ್ಯೋತ್ಸವದ ಪರೇಡನ್ನು  ಆಯೋಜನೆ ಮಾಡಲಾಗಿತ್ತು.

ಮೊದಲ ಬಾರಿಗೆ  ಕರ್ತವ್ಯಪಥದಲ್ಲಿ, ಡಿಆರ್‌ ಡಿಒ ನಿರ್ಮಾಣ ಮಾಡಿರುವ ಯುದ್ಧತಂತ್ರ ಕ್ಷಿಪಣಿ ಪ್ರಳಯ್‌ ಹಾಗು ಸೇನೆಯ ಕಣ್ಗಾವಲು ವ್ಯವಸ್ಥೆಯ ಸಂಜಯ್‌ ಕ್ಷಿಪಣಿಗಳನ್ನು, ಮತ್ತು ಬ್ರಹ್ಮೋಸ್‌, ಪಿನಾಕ, ಆಕಾಶ್‌ ನಂತಹ ಅತ್ಯಾಧುನಿಕ ರಕ್ಷಣಾ ಸಾಧನಗಳು 40 ಐಎಎಫ್‌ ವಿಮಾನ,  ಕರಾವಳಿ ಪಡೆಯ 3 ಡಾರ್ನಿಯರ್‌ ವಿಮಾನಗಳೂ ಪ್ರದರ್ಶನಗೊಂಡವು.

ಕೆಲವೊಂದು ಟ್ಯಾಬ್ಲೋ ಗಳನ್ನು ನಾವು ನೋಡುವುದಾದರೆ,……………

 ಪಶ್ಚಿಮ ಬಂಗಾಳದ ಅಭಿವೃದ್ದಿ ಟ್ಯಾಬ್ಲೋ, ಚಂಡಿಗಡದ ಸುಂದರ ನಗರದ ಟ್ಯಾಬ್ಲೋ,  ಸಂಸ್ಕೃತಿ ಸಚಿವಾಲಯದ ಟ್ಯಾಬ್ಲೋ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಟ್ಯಾಬ್ಲೋ,  ಉತ್ತರ ಪ್ರದೇಶದ ಸಮುದ್ರ ಮಂಥನದ ಥೀಮ್‌, ಪಶುಸಂಗೋಪನಾ ಸಚಿವಾಲಯದ ಟ್ಯಾಬ್ಲೋ,  ಸಾಮಾಜಿಕ ನ್ಯಾಯ ಸಚಿವಾಲಯದ ಟ್ಯಾಬ್ಲೋ,  ಜಾರ್ಖಂಡ್‌ ಅಭಿವೃದ್ದಿ ಟ್ಯಾಬ್ಲೋ, ಆಂದ್ರ ಎಟಿಕೊಪ್ಪದ ಮರದ ಆಟಿಕೆ ಟ್ಯಾಬ್ಲೋ. ಬಿಹಾರದ ನಳಂದ ವಿಶ್ವವಿದ್ಯಾಲಯದ ಟ್ಯಾಬ್ಲೋ.   ದೆಹಲಿಯ  ಕಲೆ ಮತ್ತು ಸಂಸ್ಕೃತಿ ಇಲಾಕೆಯ ಟ್ಯಾಬ್ಲೊ, ಜಾನಪದ ಬುಡಕಟ್ಟು ಪರಂಪರೆಗಳ ಅನಾವರಣ, ಸಾಂಸ್ಕೃತಿಕ ಸಚಿವಾಲಯದಿಂದ ಕಲಾ ಪ್ರದರ್ಶನ. ಇನ್ನು ಮೊದಲಾದ ಆಕರ್ಷಕ ಪರಂಪರೆ ಮತ್ತು ಅಭಿವೃದ್ದಿಗೆ ಸಂಬಂಧಿಸಿದ ಟ್ಯಾಬ್ಲೋಗಳ ಪ್ರದರ್ಶನ ನಡೆಯಿತು.

ದೆಹಲಿಯ ಕರ್ತವ್ಯ ಪಥದಲ್ಲಿ ಟ್ಯಾಬ್ಲೋ ಪ್ರದರ್ಶನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕರ್ತವ್ಯ ಪಥದಲ್ಲಿ ಮೊದಲ ಬಾರಿಗೆ ಐದು ಸಾವಿರ ಕಲಾವಿದರಿಂದ  ನೃತ್ಯ ಪ್ರದರ್ಶನ, ಇದರಲ್ಲಿ ವಿವಿಧ ಬಗೆಯ 45 ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಕಲಾವಿದರಿಂದ ಪ್ರದರ್ಶನ.

ಸಂಗೀತ ಮತ್ತು ಗಾಯನ ಶಂಕರ್‌ ಮಹಾದೇವನ್‌ . ನೃತ್ಯಪ್ರದರ್ಶನ ಭಾರತದ ಏಕತೆಯನ್ನು ಪ್ರತಿಬಿಂಬಿಸುವ ಅತಿ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮವಾಗಿತ್ತು, ಇದರಲ್ಲಿ ಕಲಾವಿದರು”  ಜಯ ಜಯ್‌ ಮಮ ಭಾರತಂ” ಹಾಡಿಗೆ ಹೆಜ್ಜೆ ಹಾಕಿದರು. ಸುಭಾಷ್‌ ಸೆಹಗಲ್‌ ರಚಿತ ಗಾಯನ.

ಭಾರತದ ಪರಂಪರೆ ಮತ್ತು ಪ್ರಗತಿಯನ್ನು ಜಗತ್ತಿಗೆ ತೋರಿಸುವ ನಿಟ್ಟಿನಲ್ಲಿ ಇವುಗಳನ್ನು ತಯಾರು ಮಾಡಲಾಗಿತ್ತು. ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಬಾರಿಯ  ಗಣರಾಜ್ಯೋತ್ಸವದಲ್ಲಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಒಂದು ಜೋಡಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉಡುಪುಗಳನ್ನು ಧರಿಸಿ ಭಾಗವಹಿಸಿದ್ದು ವಿಶೇಷ.  ಕರ್ತವ್ಯಪಥದಲ್ಲಿ ಭಾಗವಹಿಸಿದ ಕಲಾತಂಡಗಳು ಸಹ   ಸಂಸ್ಕೃತಿಯನ್ನು ಬಿಂಬಿಸುವ ಉಡುಪನ್ನು ಧರಿಸಿ ಭಾಗಿಯಾಗಿದ್ದರು.

ಕರ್ತವ್ಯ ಪಥದ ಸುತ್ತಮುತ್ತಲಿನ ಪ್ರದೇಶವನ್ನು ಸಹ  ಭಾರತದ ಪರಂಪರೆಯನ್ನು ಬಿಂಬಿಸುವಂತೆ ಸಿಂಗರಿಸಲಾಗಿತ್ತು.

 

ಧನ್ಯವಾದಗಳು……🌷

ಮುಂದಿನ ಸಂಚಿಕೆಯಲ್ಲಿ, ಗಣ ರಾಜ್ಯೋತ್ಸವದ ಸಾಧಕರು ಮತ್ತು ಪ್ರಶಸ್ತಿಗಳು…..


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......