ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ವಾಸವಿ ಅಗ್ನಿಪ್ರವೇಶ ದಿನ (ಪುರಾಣ ಪುಣ್ಯಕಥೆ)

ಹಿಂದೂಗಳು ಪೂಜಿಸುವ ಆದಿಶಕ್ತಿ ಯ ಕಲಿಯುಗದ ಅವತಾರವೆಂದೇ ನಂಬಿದ , ವೈಶ್ಯ ರ ದೇವತೆ ವಾಸವಿ ಕನ್ಯಕಾಪರಮೇಶ್ವರಿ ದೇವಿಯು ಅಗ್ನಿ ಪ್ರವೇಶ ಮಾಡಿದ ದಿನ.   ಕನ್ಯಕಾಪರಮೇಶ್ವರಿಯು ಆರ್ಯವೈಶ್ಯ   ಪಂಥದ ಕುಲದೇವತೆಯಾಗಿ ಪೂಜಿಸಲ್ಪಡುತ್ತಾಳೆ, ಇಂದಿಗೂ ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಗಳಲ್ಲಿ ಈ ಪಂಥದವರು ವಾಸಿಸುತ್ತಿದ್ದಾರೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡದಲ್ಲಿ   ವಾಸವಿ ಕನ್ಯಕಾ ಪರಮೇಶ್ವರಿಯ ಅತಿ ದೊಡ್ಡ ದೇವಾಲಯವಿದೆ.   ಏಳು ಅಂತಸ್ತುಗಳುಳ್ಳ ಗಾಲಿ ಗೋಪುರವು ಅದ್ಭುತ ಶಿಲ್ಪಕಲಾಕೃತಿಗಳಿಂದಲೂ   ಮನಮೋಹಕವಾದ ಬಣ್ಣಗಳಿಂದ ಸಿಂಗರಿಸಿದ ಅದ್ಬುತ ದೇವಾಲಯವೆನಿಸಿದೆ. ಇದು   ವೈಶ್ಯರ ಪವಿತ್ರ ಸ್ಥಳವಾಗಿದೆ. ವೈಶ್ಯ ಪಂಥದ   ಹೆಚ್ಚು ಜನರು ಇಲ್ಲಿಯೇ ವಾಸಿಸುತ್ತಿದ್ದಾರೆ. ೧೦ , ೧೧ ನೇ ಶತಮಾನದಲ್ಲಿ ವೆಂಗಿಯ ದೇಶವನ್ನು ಆಳುತ್ತಿದ್ದ ಒಬ್ಬ ಅತ್ಯುತ್ತಮ ವೈಶ್ಯ ರಾಜ ಕುಸುಮಾಂಬ ಶ್ರೇಷ್ಠಿ, ಅವನ ಪತ್ನಿ ಕುಸುಮಾ ಇಬ್ಬರೂ ಆದರ್ಶ ದಂಪತಿಗಳಾಗಿ ರಾಜ್ಯಬಾರ ಮಾಡುತ್ತಿದ್ದರು.   ಪೆನೊಗೊಂಡವನ್ನು ರಾಜಧಾನಿಯಾಗಿ ಮಾಡಿಕೊಂಡು ೧೮ ಪರಗಣಗಳನ್ನು ಆಳ್ವಿಕೆ ಮಾಡುತ್ತಿದ್ದರು. ಈ ಪ್ರದೇಶ ಎಲ್ಲವೂ ವಿಮಲಾದಿತ್ಯ (ವಿಷ್ಣುವರ್ಧನ) ನ ನಿಯಂತ್ರಣದಲ್ಲಿತ್ತು. ಕುಸುಮಾ ಶ್ರೇಷ್ಠಿಯು ಶಾಂತಿಯುತವಾಗಿ ರಾಜ್ಯಬಾರ ಮಾಡುತ್ತಿರುವಾಗ, ದೇವರ ದೇವ ಮಹಾದೇವರ ಆರಾಧನೆಯನ್ನು ನಿತ್ಯ ಜೀವನದ...

ಗಾಂಧೀಜಿಯವರ ಪ್ರತಿಜ್ಞೆಗಳು

ಇಮೇಜ್
                                                      ಚಿತ್ರ:ಅಂತರ್ಜಾಲ                                                                                                          ಹುತಾತ್ಮರ   ದಿನ - ಗಾಂಧೀಜಿಯ ಪುಣ್ಯ ತಿಥಿ ಭಾರತದ ರಾಷ್ಟ್ರಪಿತ, ಮೋಹನದಾಸ ಕರಮಚಂದ ಗಾಂಧಿಯವರು ಮಹಾತ್ಮ ಗಾಂದಿಯೆಂದೆನಿಸಿ ಭಾರತ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿ ೧೯೪೭ ರಲ್ಲಿ , ಭಾರತಕ್ಕೆ ಸ್ವಾತಂತ್ರ್ಯ ವನ್ನು ಮರಳಿಸಿದರು, ಇದು ನಡೆದು ಕೆಲವು ತಿಂಗಳುಗಳ ಅವಧಿಯಲ್ಲಿ ಅಂದರೆ ೧೯೪೮ ರ ಜನವರಿ ೩೦ ರಂದು ಗಂಡೇಟಿಗೆ ಬಲಿಯಾಗಿ ಜೀವ ಬಿಟ್ಟರು, ಇಂತಹ ರಾಷ್ಟ್ರಪಿತನಿಗೆ   ಗೌರವ ಸಲ್ಲಿಸಲು ಭಾರತವು ಪ್ರತಿವರ್ಷವು   ಈ ದಿನವನ್ನ...

ಪುರಂದರ ದಾಸರ ಜಯಂತಿ ಜನವರಿ ೨೯, ೨೦೨೫

ಇಮೇಜ್
  ಕರ್ನಾಟಕದ ಹರಿದಾಸರಲ್ಲಿ ಅತ್ಯಂತ ಪ್ರಸಿದ್ದರಾಗಿದ್ದ ಮತ್ತು ಕರ್ನಾಟಕದ ಸಂಗೀತ ಪಿತಾಮಹರೆನಿಸಿದವರು ಪುರಂದರದಾಸರು. ದಕ್ಷಿಣ ಭಾರತದಲ್ಲಿ ಭಕ್ತಿ ಚಳುವಳಿಯ ಪ್ರಚಾರಕರಲ್ಲಿ ಅತ್ಯಂತ ಪ್ರಮುಖರು.   ಪುರಂದರ ದಾಸರ ಮೊದಲ ಹೆಸರು   ಶ್ರೀನಿವಾಸ ನಾಯಕ, ತಂದೆ ವರದಪ್ಪ ನಾಯಕ , ಶ್ರೀಮಂತ ವ್ಯಾಪಾರಿಗಳು. ತಾಯಿ ರುಕ್ಮಿಣಿ.   ವರದಪ್ಪನವರು ಲೇವಾದೇವಿ ವೃತ್ತಿಯಲ್ಲಿದ್ದವರು , ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು ನಾಯಕ ಜನಾಂಗದವರಾದ್ದರಿಂದ ಮಗನಿಗೆ ಶ್ರೀನಿವಾಸ ನಾಯಕ ಎಂಬ ಹೆಸರಿಟ್ಟಿದ್ದಾರೆ ಎಂದು ನಂಬಲಾಗುತ್ತದೆ. ಕುಟುಂಬ ಸಂಪ್ರದಾಯಗಳಿಗೆ ಅನುಗುಣವಾಗಿ   ಉತ್ತಮ ಶಿಕ್ಷಣವನ್ನು ಪಡೆದರು,   ಕನ್ನಡ, ಸಂಸ್ಕೃತ, ಪವಿತ್ರ ಜ್ಞಾನ, ಮತ್ತು ಸಂಗೀತದಲ್ಲಿ ಪಾಂಡಿತ್ಯವನ್ನು ಪಡೆದರು. ಶ್ರೀನಿವಾಸ ನಾಯಕ ಹದಿನಾರು ವಯಸ್ಸಿನಲ್ಲಿರುವಾಗ, ಮಹಾನ್‌ ದೈವಭಕ್ತೆಯಾಗಿದ್ದ ಸರಸ್ವತಿ ಬಾಯಿ ಯೊಂದಿಗೆ ವಿವಾಹವಾದರು,   ಇಪ್ಪತ್ತನೇ   ವಯಸ್ಸಿನಲ್ಲಿರುವಾಗ   ತಂದೆ ತಾಯಿಯರ ವಿಯೋಗವುಂಟಾಯಿತು.               ಮೊದಲು ಮಹಾರಾಷ್ಟ್ರದಲ್ಲಿರುವ ಪುರಂದರಗಢ ಶ್ರೀನಿವಾಸ ನಾಯಕರ ಜನ್ಮಸ್ಥಳವೆಂದು ನಂಬಲಾಗಿತ್ತು, ಆದರೆ ಕರ್ನಾಟಕ ಸರ್ಕಾ...

ಜನವರಿ ೨೮ ರಂದು ಲಾಲ ಲಜಪತ್‌ ರಾಯ್‌ ಜಯಂತಿ - ೨೦೨೫.

ಇಮೇಜ್
                                                         ಪೋಟೋ: ಗೂಗಲ್‌ ಕೃಪೆ                                                 ಲಾಲ ಲಜಪತ್‌ ರಾಯ್‌ ಜಯಂತಿ ೨೦೨೫. ಲಾಲ ಲಜಪತ್‌ ರಾಯ್‌ ರವರ ೧೬೦ ನೇ ಜನ್ಮ ದಿನದ ಕಾರಣ ಈ ಲೇಖನವನ್ನು ನಾನು ಬರೆಯುತ್ತಿದ್ದೇನೆ. ಕಾರಣ ಸ್ವತಂತ್ರ ಭಾರತದಲ್ಲಿ   ಜೀವಿಸುತ್ತಿರುವ   ಪ್ರತಿಯೊಬ್ಬರ ನಾಗರಿಕರ ಆದ್ಯ ಕರ್ತವ್ಯ ,   ಭಾರತಕ್ಕೆ ಸ್ವತಂತ್ರ   ತಂದುಕೊಡುವಲ್ಲಿ ಶ್ರಮಿಸಿದ ಮಹಾನ್‌ ನಾಯಕರನ್ನು ಸ್ಮರಿಸುವುದು. ಸ್ವತಂತ್ರ ಪೂರ್ವದಲ್ಲಿ ಭಾರತಕ್ಕೆ ಸ್ವರಾಜ್ಯದ ಕಲ್ಪನೆಯನ್ನು ಕಂಡವರಲ್ಲಿ ಒಬ್ಬರು   ಪಂಜಾಬ್‌ ನ ಕೇಸರಿಯೆಂದೆನಿಸಿದ ಲಾಲ ಲಜಪತ್‌ ರಾಯ್‌ ರವರು. ೧೯ ನೇಶತಮಾನವನ್ನು   ಆಧುನಿಕ ಭಾರತದ ಇತಿಹಾಸದಲ್ಲಿ ಭಾರತೀಯ ಪುನರುಜ್ಜೀವನ ಅಥವಾ ನವೋದಯ ಕಾಲವೆಂದು ಕರೆಯಲಾಗಿದೆ.   ಬ್ರಿಟಿಷ್‌ ಆಡಳಿತದಿಂದ ಉಂಟಾದ ಶಾಂತಿ, ಸುವ್ಯವಸ್ಥೆ...

೭೬ ನೇ ಗಣರಾಜ್ಯೋತ್ಸವ ದಿನದ ವಿಶೇಷತೆಯ ಮುಂದುವರಿದ ಭಾಗ………..

ಇಮೇಜ್
             ದಿನದ ಪ್ರಾರಂಭದಲ್ಲಿ , ನ್ಯಾಷನಲ್ ‌ ವಾರ್ ‌ ಮೆಮೋರಿಯಂ ಗೆ ಪ್ರಧಾನಿ ನರೇಂದ್ರ ಮೋದಿ , ರಕ್ಷಣಾ ಸಚಿವರ   ಭೇಟಿ , ೨೦೧೯ ರಿಂದ ದೆಹಲಿಯಲ್ಲಿರುವ ಅಮರ್ ‌ ಜವಾನ್ ‌ ಜ್ಯೋತಿ ಯಲ್ಲಿ ಭಾರತಕ್ಕೆ ದೇಶಕ್ಕೆ ಸೇವೆ ಸಲ್ಲಿಸಿ ಮಡಿದ   ವೀರ ಯೋದರಿಗೆ ನಮನ .   ಈ ರೂಢೀ ಹಿಂದಿನಿಂದಲೂ ನಡೆದು , ಸ್ವಾತಂತ್ರೊತ್ಸವ ಸಂದರ್ಭ ಮತ್ತು ಗಣರಾಜ್ಯೋತ್ಸ ಸಂದರ್ಭಗಳಲ್ಲಿ ಹುತಾತ್ಮ ಸೈನಿಕರಿಗೆ ಮೌನ ನಮನ ಸಲ್ಲಿಸಿ ಮುಂದಿನ ಕಾರ್ಯಕ್ರಮಕ್ಕೆ ಕೆಂಪುಕೋಟೆಗೆ ತೆರಳಲಾಗುತ್ತದೆ . ರಾಷ್ಟ್ರಪತಿಯನ್ನು ಸ್ವಾಗತಿಸುವ ಮೂಲಕ ಗಣರಾಜ್ಯೋತ್ಸವದ ಆಚರಣೆಯನ್ನು ಕರ್ತವ್ಯಪಥದಲ್ಲಿ ಪ್ರಾರಂಭಿಸಲಾಗುತ್ತದೆ . ಜೊತೆಗೆ ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷರಾದ ಸುಬಿಯಾಂತೊ ಅವರು ಭಾಗವಹಿಸಿದ್ದರು . ಭಾರತದ ರಾಷ್ಟ್ರಪತಿಗಳ ಅಂಗರಕ್ಷಕ ರೆಜಿಮೆಂಟ್ ‌ ಗೆ ೨೫೧ ವರ್ಷಗಳ ಇತಿಹಾಸವಿದೆ . ೧೭೭೩ ರಲ್ಲಿ ಬ್ರಿಟೀಷರು ಹುಟ್ಟುಹಾಕಿದ ಈ ಅಂಗರಕ್ಷಕದಳದ ಸದಸ್ಯರು ಪ್ರತಿಷ್ಟಿತ ಯೋಧರು ಕೆಲವು ಆಯ್ಕೆ ಮಾಡಿದ ಸ್ಥಳಗಳಿಂದ ಮಾತ್ರ ಇವರನ್ನು ಆಯ್ಕೆ ಮಾಡಲಾಗುತ್ತದೆ . ರಕ್ಷಣಾ ಸಚಿವರು ಪ್ರಧಾನಿ ಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ , ಪ್ರಧಾನಿ ಮಂತ್ರಿಗಳು ರಾಷ್ಟ...