ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಮಳೆಯ ಹುಟ್ಟಿನ ಹೊತ್ತು……. ನಿಮಗೆಷ್ಟು ಗೊತ್ತು!!!!!!!!!!!!

 

ಹಸಿರೇ ಉಸಿರು

ಮಳೆಯ  ರಭಸವು ನಿಲ್ಲುವಂತೆ ಕಾಣಲಿಲ್ಲ ಕಿಟಕಿಗೆ ಬೀಳುತ್ತಿದ್ದ ಹನಿಗಳ ಸದ್ದು  ಗುಂಡಿಗೆಯ ಸದ್ದನ್ನು ಹೆಚ್ಚು ಮಾಡುತ್ತಿದ್ದವು.    ಆ ಬೆಳಗಿನ ಜಾವ  ಸುಂದರ ಕನಸುಗಳ  ಬಿತ್ತಿ ಹೋಗುತ್ತಿದ್ದ ಚಂದ್ರಮನು  ಮೋಡಗಳ ಆರ್ಭಟಕ್ಕೆ ಹೆದರಿ ಅವಿತುಕೊಂಡಿದ್ದ.  ರಾತ್ರಿ ಶುರುವಾದ ಮಳೆಯು ಇನ್ನು ನಿಂತಿರಲಿಲ್ಲ.  ೪ ಗಂಟೆಗೆ ಎದ್ದು ಹೊರಡಬೇಕಿದ್ದ ವಿವೇಕನಿಗೆ  ಏನು ಮಾಡಬೇಕೆಂದೆ ತೋಚಲಿಲ್ಲ. ೫ ಗಂಟೆಗೆ ಮುಂಬೈಗೆ ಹೊರಡುವ ಟ್ರೈನಿಗೆ ಹೋಗಬೇಕಿದ್ದವ , ಮುಂಬೈನ ಹೆಸರಾಂತ ಕಂಪನಿಯಲ್ಲಿ ಈ ದಿನ ಸಂದರ್ಶನ ಎದುರಿಸುವವನಿದ್ದ,  ಆದರೆ ಈ ಮಳೆ………………..

 

ಬಿಸಿ ಬಿಸಿ ಚಾಯ್…‌,  ಬಿಸಿ ಬಿಸಿ ಚಾಯ್‌ …, ಕಾಫಿ , ಕಾಫಿ  ಎಂದು ಕೂಗುತ್ತ ಅತ್ತಿತ್ತ ಪಕ್ಕದಲ್ಲಿಯೇ ನೋಡುತ್ತ  ಯಾರಾದರೂ ಕೈ ಚಾಚುತ್ತರೆನೊ ಎಂದು ಒಂದು ಕೈಯಲ್ಲಿ ಫ್ಲಾಸ್ಕ್‌ ಮತ್ತ ಪೇಪರ್‌ ಕಪ್‌ ಗಳ ಹಿಡಿದು  ರೈಲು ಬೋಗಿಗಳಲ್ಲಿ ಓಂಕಾರ ನು ಓಡಾಡುತ್ತಿದ್ದನು, ಮಳೆಯ ನೀರಿನಿಂದ ತೋಯ್ದು ಹೋದ  ರೈನ್‌ ಕೋಟ್‌  ನ್ನು ಕಂಬಕ್ಕೆ ಸಿಕ್ಕಿಸಿ ಪಕ್ಕದ ಚೇರ್‌ ನಲ್ಲಿ ಕಳಿತು ಸಣ್ಣದಾಗಿ ಸುರಿಯುತ್ತಿದ್ದ ಮಳೆಯನ್ನೆ ನೋಡುತ್ತಿದ್ದನು, ಬಣ್ಣ ಬಣ್ಣ ದ ರೈನ್‌ ಕೋಟ್‌ ಗಳನ್ನು ಧರಿಸಿ ಅದರಲ್ಲಿಯೇ ತಮ್ಮ ಬ್ಯಾಗುಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತ ಓಡಾಡುತ್ತಿದ್ದವರು ಅಲ್ಲಿ ಕಾಣುತ್ತಿದ್ದರು.

  ಭತ್ತದ  ಪೈರು ಎರಡು ಅಡಿಗಳಷ್ಟು ಬೆಳೆದು ಸುಂಕು ಮೇಯುವ ಕಾಲ , ಶೇಖರ್‌ ತಾನು ಬಹು ಆಸೆಯಿಂದ ಬೆಳೆದ ತನ್ನದೇ ಗದ್ದೆಯಲ್ಲಿ ಓಡಾಡುತ್ತಾ ಅಲ್ಲಲ್ಲಿ ಬೆಳೆದ ಕಳೆಯ ಗಿಡಗಳನ್ನು ಕಿತ್ತು ಹಾಕುತ್ತಿದ್ದಾನೆ, ಇನ್ನು ಬೆಳಗಿನ ೧೦ ಗಂಟೆ ಬಿಸಿಲು ಉರಿಯುತ್ತಿದ್ದರೆ, ಬನಿಯನ್‌ ಓಳಗಿನ ಬೆನ್ನು ಚುರುಗುಟ್ಟುತ್ತಿತ್ತು.  ಮುಂಗಾರು ಶುರುವಾಗಿ ಒಂದುವರೆ ತಿಂಗಳು ಕಳೆದಿತ್ತು, ಕಳೆದ ಒಂದೆರಡು ವರ್ಷಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ್ದರಿಂದ  ಬೋರ್‌ ವೆಲ್‌  ನೀರು ಕುಸಿತ ಕಂಡಿತ್ತು, ಆದರೂ  ಬೀಳುವ ಮಳೆ ನೀರಿನೊಂದಿಗೆ ಹೇಗೋ ಅನುಸರಿಸಿಕೊಂಡರೆ ಈ ವರ್ಷ ಓಂದಿಷ್ಟು ಭತ್ತ ಬೆಳೆಯಬಹುದು ಎಂದು ಯೋಚಿಸಿ  ತನ್ನಐದು ಎಕರೆ ಹೊಲಕ್ಕೆ ಭತ್ತದ ಪೈರು ನೆಟ್ಟಿದ್ದ,   ಫೈರು ಮಂಡಿಯ ತನಕ ಬೆಳೆದು ಹೊಲವೆಲ್ಲ ಹಸಿರು ಚೆಲ್ಲಿದಂತಿತ್ತು,   ಆದರೆ ಈ ಒಂದು ವಾರದಿಂದ ಮಳೆ ಮುಗಿಲು ಸೇರಿ  ನೆಲ ಬಿರಿಯುತ್ತಿತ್ತು. 

 

ಹೀಗೆ   ಮಳೆಯ ಪರಿಣಾಮ ಒಬ್ಬೋಬ್ಬರಿಗೆ ಒಂದೊಂದು ರೀತಿಯ ,  ಒಂದೊಂದು ಪ್ರದೇಶಕ್ಕೆ, ಒಂದೊಂದು ದೇಶಕ್ಕೆ ,  ಹಾಗೆ ಭೂಮಿ ಮೇಲಿನ ಪ್ರತಿಯೊಂದು ಜೀವ ರಾಶಿಗೆ  ಮಳೆಯು  ಪೂರಕವೂ ಹೌದು, ಅತಿಯಾದರೆ  ಮಾರಕವೂ ಹೌದು!!!!!!!

 

ಇಂತಹ ಮಳೆಯ ಹುಟ್ಟಿನ ಬಗ್ಗೆ ನಾವು ತಿಳಿಯುವುದು ತುಂಬಾ ಅವಶ್ಯಕ.  

ಭೂಮಿಯ ಮೇಲಿನ ನೀರು ಬಿಸಿಲಿನ ತಾಪಕ್ಕೆ ಆವಿಯಾಗಿ ಮೋಡವನ್ನು ಸೇರಿ  ಘನೀಕರಣಗೊಂಡು ಮತ್ತೆ ಮಳೆ ಹನಿಯ ರೂಪದಲ್ಲಿ ಭೂಮಿಗೆ ಬಂದು ತಲುಪುತ್ತದೆ. ಇದು ವೈಜ್ಞಾನಿಕವಾಗಿ ಮಳೆಯ ಜನ್ಮದ ಬಗ್ಗೆ ನಾವು ನೀವೆಲ್ಲರೂ ತಿಳಿದಿರುವ ಸಾರ್ವಕಾಲಿಕ ಸತ್ಯ.

ಭಾರತದಲ್ಲಿ ಸೌರಮಂಡಲದಲ್ಲಾಗುವ  ಬದಲಾವಣೆಗಳ ಆದಾರದ ಮೇಲೆ ಮೂರು ಕಾಲಗಳಾಗಿ ವಿಂಗಡಿಸಲಾಗಿದೆ. ಅವುಗಳನ್ನು ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ಮಳೆಗಾಲವು ಮಾರ್ಚ್‌  ಏಪ್ರಿಲ್‌ ನಿಂದ ಪ್ರಾರಂಭವಾಗಿ ನವೆಂಬರ್‌ ವರೆಗೂ ಮಳೆಗಾಲವಿರುತ್ತದೆ.  ನವೆಂಬರ್ ನಿಂದ ಫೆಬ್ರವರಿ ಮಾರ್ಚ್‌ ವರೆಗೂ ಚಳಿಗಾಲವಿರುತ್ತದೆ. ಮಾರ್ಚ್‌ ನಿಂದ ಮೇ ಜೂನ್‌ ವರೆಗು ಬೇಸಿಗೆಕಾಲವಿರುತ್ತದೆ.

ಭಾರತದಲ್ಲಿ ಮಾರ್ಚ ಮತ್ತು ಏಪ್ರಿಲ್‌ ತಿಂಗಳಿನ ಮಳೆಗಳು ಬೀಳುವುದಿಲ್ಲ. ಮೇ ಮಾಹೆಯಿಂದ  ಯಿಂದ ಸೆಪ್ಟಂಬರ್ ಮಾಹೆವರೆಗೆ ಬೀಳುವ ಮಳೆಯ ಆಧಾರದ ಮೇಲೆ ಭಾರತದಲ್ಲಿ ಮಳೆ ಸರಾಸರಿಯನ್ನು ಲೆಕ್ಕಹಾಕಲಾಗುತ್ತದೆ.

ಅಶ್ವಿನಿ, ಭರಣಿ, ಕೃತ್ತಿಕ, ರೋಹಿಣಿ, ಮೃಗಶಿರ,  ಆರಿದ್ರ, ಪುನರ್ವಸು, ಪುಷ್ಯ, ಆಶ್ಲೇಷ,  ಮಾಘಾ,  ಹುಬ್ಬ,  ಉತ್ತರ , ಹಸ್ತ,  ಚಿತ್ತ, ಸ್ವಾತಿ, ವಿಶಾಖ,

ಜೂನ್‌ ಒಂದರಿಂದ ಸೆಪ್ಟಂಬರ್‌ ಕೊನೆಯವರೆಗೂ ಸುರಿಯುವ ನೈಋತ್ಯ ಮುಂಗಾರು ಮಳೆಯ ಆಧಾರದ ಮೇಲೆ ಭಾರತದ ಕೃಷಿಯು  ನಿಂತಿದೆ. ಈ ಮಳೆಯ ಆದಾರದ ಮೇಲೆ ಮುಂದಿನ  ವರ್ಷದ ಬೆಳೆ  ಮತ್ತು ಬರ ಎಲ್ಲವನ್ನು ನಿರ್ಧರಿಸುತ್ತದೆ.

ಈ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿಚಟುವಟಿಕೆಗಳಿಗೆ ಸಹಾಯಕವಾಗಿ, ಜಲಾಶಯಗಳು ಭರ್ತಿಯಾಗಿ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗುವುದಿಲ್ಲ.

ಮಳೆ ನಕ್ಷತ್ರಗಳೊಂದಿಗೆ ಗಾದೆಗಳನ್ನು ಹೊಂದಿಸಿ ಹೇಳಲಾಗುತ್ತದೆ. ಉದಾಹರಣೆಗೆ,

ಅಶ್ವಿನಿ :- ಅಶ್ವಿನಿ ಮಳೆ ಬಿದ್ದರೆ ಅರಿಶಿನಕ್ಕೆ ಮೇಲು.

ಭರಣಿ:-  ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ.

ರೋಹಿಣಿ:- ರೋಹಿಣಿ ಮಳೆ ಈಣಿಯೆಲ್ಲಾ ಕೆಸರು.

ಆರಿದ್ರಾ:- ಆರಿದ್ರಾ ಹ ಹನಿ ಕಲ್ಲಿನ ಹಾಗೆ.

ನಿಮ್ಮ ಕಡೆ ಯಾವ ಮಳೆಗೆ ಯಾವ ಗಾದೆ ಹೊಂದಿಸುತ್ತಾರೆ, ಕಮೆಂಟ್‌ ನಲ್ಲಿ ತಿಳಿಸಿ.

 

ನಮ್ಮ ಬ್ರಹ್ಮಾಂಡ  ಅನಂತವಾದುದ್ದು , ಅಳತೆಗೆ ಸಿಗದು.  ಈ ಬ್ರಹ್ಮಾಂಡವನ್ನು ಅಷ್ಟದಿಕ್ಕುಗಳಿಂದ ಗುರುತಿಸಲಾಗುತ್ತದೆ.

ಈ ಬ್ರಹ್ಮಾಂಡವನ್ನು ಕಾಪಾಡುವವನೇ ಭಗವಂತ . ಅದಕ್ಕಾಗಿ ಭಗವಂತನು ಒಂದೊಂದು ದಿಕ್ಕಿಗೆ ಒಂದೊಂದು ಅದಿದೇವತೆಯನ್ನು ಹೆಸರಿಸಿದ್ದಾರೆ.

ಇವರನ್ನು ವಾಸ್ತುಪಾಲಕರು ಎಂದೂ ಸಹ ಕರೆಯಬಹುದಾಗಿದೆ.

ಇಂದ್ರ :- ಪೂರ್ವ.                                 ವರುಣ:- ಪಶ್ಚಿಮ

ಯಮ:-ದಕ್ಷಿಣ                                     ಕುಬೇರ:- ಉತ್ತರ.

ಈಶ್ವರ:- ಈಶಾನ್ಯ                                 ಅಗ್ನಿ:- ಆಗ್ನೇಯ

ವಾಯು:- ವಾಯುವ್ಯ                           ನಿರುಋತಿ(ರಾಕ್ಷಸ):- ನೈಋತ್ಯ

 

ಇಂದ್ರ :-  ಇಂದ್ರನು ದೇವಲೋಕದ ಅಧಿಪತಿ, ಸ್ವರ್ಗಾದಿಪತಿ. ಬ್ರಹ್ಮಾಂಡದ ನಾಯಕ ಎನ್ನುತ್ತಾರೆ. ವಜ್ರಾಯುಧ ಇವನ ಆಯುಧ. ಮಳೆ ಮಿಂಚುಗಳ ಅಧಿದೇವತೆ. ಐರಾವತ ಇವನ ವಾಹನ. ವೈದಿಕ ಯುಗದಲ್ಲಿ ಭಗವಾನ್‌ ಇಂದ್ರನನ್ನ ಮಳೆಯ ದೇವರು, ಮೋಡಗಳ ನಿಯಂತ್ರಕ, ಸಮುದ್ರದ ಸ್ನೇಹಿತ, ಭೂಮಿಯ ಅಧಿಪತಿ ಮತ್ತು ಪರಿಸರ ಸಂರಕ್ಷಕ ಎಂದು ಸಂಬೋಧಿಸಲಾಗಿದೆ.

ವರುಣ:- ವರುಣನ ಆಯುಧ ಪಾಶ. ಹಿಂದೂ ಪುರಾಣಗಳ ಪ್ರಕಾರ ನೀರಿನ ದೇವತೆ.

 

ಇದು ಮಳೆಯ ಬಗೆಗಿನ ಪುರಾಣದ ನಂಬಿಕೆ,  ಮನುಷ್ಯನ ಜೀವಕ್ಕೆ ಮೂಲಭೂತ ಅವಶ್ಯಕವಾದ ನೀರು ಪಂಚಭೂತಗಳಲ್ಲಿ ಕೂಡ  ಒಂದು ಮುಖ್ಯವಾದ  ವಸ್ತು.

ಭೂಮಿಗೆ ನೀರಿನ ನೇರವಾದ ಮೂಲ ಮಳೆ, ಆಕಾಶದಿಂದ ಬೀಳುವ ಈ ಮಳೆಗೆ ಮತ್ತೆ ನೀರಿನ ಮೂಲ ಭೂಮಿ ಮೇಲಿನ ಸಮುದ್ರ, ಸಾಗರ, ಕೆರೆಕಟ್ಟೆಗಳ ನೀರು.

ಗಾಳಿ, ನೀರು, ಮಣ್ಣು, ಅಗ್ನಿ, ಆಕಾಶ  ಪಂಚಭೂತಗಳೆಂದು ಕರೆಯುವ ಬ್ರಹ್ಮಾಂಡದ ಕಾಯಗಳು,  ಭೂಮಿ ಮೇಲಿನ ಮನುಷ್ಯನ ಮತ್ತು ಸಕಲ ಜೀವ ಚರಾಚರಗಳ ಅಸ್ತಿತ್ವದ ಮೂಲಘಟಕಗಳಾಗಿವೆ.

ಇವುಗಳು ಒಂದಕ್ಕೊಂದು ಪೂರಕವಾಗಿ  ಸೌರಮಂಡಲದ ರಚನೆಗೆ ಕಾರಣವಾಗಿವೆ. ಸಾವಿರಾರು ವರ್ಷಗಳ ಕಾಲಾಂತರದಲ್ಲಿ ನಡೆದ ಪಂಚಭೂತಗಳ ತಿಕ್ಕಾಟವು ಸೌರಮಂಡಲದ ಗ್ರಹರಚನೆಗೆ ಕಾರಣವಾಗಿವೆ.

ಮನುಷ್ಯನು ಭೂಮಿಯನ್ನು ಹೊರತುಪಡಿಸಿ ಬೇರೆಗ್ರಹಗಳ ಬಗ್ಗೆ ಸಂಶೋಧನೆ ನಡೆಸುವಾಗ ಮೊದಲು ನೀರು ಆ ಗ್ರಹದಲ್ಲಿ ಶೇಕಡ ಎಷ್ಟಿದೆ ಎಂಬುದರ ಕುರಿತು ಸಂಶೋಧನೆ ನಡೆಸುತ್ತಾರೆ.

ಮಾನವನ ದೇಹವು ಶೇಕಡ 60 ರಷ್ಟು ನೀರಿನಿಂದಲೇ ಮಾಡಲ್ಪಟ್ಟಿದೆ. ಅಂದರೆ ನೀರಿಲ್ಲದೆ ಮನುಷ್ಯ ಬದುಕುವುದು ಅಸಾಧ್ಯ, ಮಳೆಯ ಪ್ರಮಾಣ ಕಡಿಮೆಯಾದಾಗ ಮನುಷ್ಯ ತನ್ನ ಹೆಚ್ಚಿದ ಅಗತ್ಯಗಳ ಪೂರೈಕೆಗಾಗಿ ಅಂತರ್ಜಲದ ಮೊರೆಹೋಗುತ್ತಾನೆ.

ಬೋರ್ ವೆಲ್‌ ಗಳನ್ನು ಕೊರೆಸುವುದರ ಮೂಲಕ, ಮತ್ತು ಬಾವಿ ತೋಡುವುದರ ಮೂಲಕ ಭೂಮಿಯಾಳದಲ್ಲಿರುವ ನೀರನ್ನುಹೊರತೆಗೆಯುತ್ತಾನೆ.  ಇಷ್ಟಾದರೂ ಸಾಲದೆಂಬಂತೆ ವರ್ಷಾನುಗಟ್ಟಲೇ ಇದೇ ರೂಡಿಯನ್ನು ಮಾಡಿಕೊಂಡು ಸಾವಿರಾರು ಅಡಿಗಳಷ್ಟು ಆಳದವರೆಗು ಬೋರ್‌ ವೆಲ್‌ ಕೊರೆದು ಭೂಮಿಯ ಗರ್ಭವನ್ನೆ ಸೀಳಿಬಿಡುವ ದುಸ್ಸಾಹಸಕ್ಕೆ ಕೈಹಾಕಿದ್ದಾನೆ.

ಇಷ್ಟಾದರೂ ಅವನ ಸಾಹಸ ಮುಗಿಯದೆ ತನ್ನ ಐಷಾರಾಮಿ ಅಸ್ತಿತ್ವಕ್ಕಾಗಿ ಕಾಡನ್ನು ಕಡಿದು ಗ್ಲೋಬಲ್‌ ವಾರ್ಮಿಂಗ್‌ ಗೆ ಮೂಲ ಕಾರಣನಾಗಿದ್ದಾನೆ.

ಹೆಚ್ಚುತ್ತಿರುವ ಗ್ಲೋಬಲ್‌ ವಾರ್ಮಿಂಗ್‌, ಬತ್ತಿದ ಅಂತರ್ಜಲ ಮಳೆಗೆ ನೀರಿನ ಮೂಲವನ್ನು ಇಲ್ಲವಾಗಿಸಿದೆ. ಇದರ ಪರಿಣಾಮ  ಕಾಲಕಾಲಕ್ಕೆ ಸರಿಯಾಗಿ ಮಳೆ ಬೀಳದೆ, ಆಹಾರ ಬೆಳೆಯುವುದು ಕಷ್ಟಸಾಧ್ಯ.

ಹೊತ್ತಿಗೆ ಸರಿಯಾಗಿ ಮಳೆಯಾಗದೆ ಅತಿವೃಷ್ಟಿ ಅನಾವೃಷ್ಠಿ ಸೃಷ್ಟಿಯಾಗಿ ಮನುಷ್ಯ ಅಸ್ತಿತ್ವವನ್ನು ಅಲುಗಾಡಿಸುತ್ತಿದೆ. ಇಷ್ಟಾದರೂ ಬುದ್ಧಿ ಕಲಿಯದ ಮಾನವ ಟೌನ್‌ ಶಿಪ್ ರೆಸಾರ್ಟ್‌ ಗಳ ನಿರ್ಮಾಣವನ್ನು ತನ್ನ ಅವಸರಕ್ಕೆ  ಮಿಗಿಲಾಗಿ ನಿರ್ಮಿಸಿ, ಪ್ರಕೃತಿಯ ಕೋಪವನ್ನು ಹೆಚ್ಚಿಸಿದ್ದಾನೆ.

 

ಪ್ರಸ್ತುತ ಅಲ್ಲಲ್ಲಿ ಭೂಕಂಪ, ಪ್ರವಾಹ, ಕಾಡ್ಗಿಚ್ಚುಗಳು, ಗುಡ್ಡಕುಸಿತಗಳು ಉಂಟಾಗಿ ಮನುಷ್ಯನಿಗೆ ಎಚ್ಚರಿಕೆಯ ಘಂಟೆಯನ್ನು ನೀಡುತ್ತಿವೆ.

ಇದನ್ನು ಅರಿತು ಮನುಷ್ಯ ತನ್ನ ಬದುಕಿನ ರೀತಿ ನೀತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ  ಮಾಡಿಕೊಳ್ಳದೆ, ಪ್ರಕೃತಿಯ ಸಲಹೆ ಸೂಚನೆಗಳನ್ನು ಅರಿತು ಬದುಕಿದರೆ  ಭೂಮಿಯ ಮೇಲೆ ಮನುಷ್ಯ ಸ್ವಚ್ಛಂದ ಬದುಕನ್ನು ತನ್ನದಾಗಿಸಿಕೊಳ್ಳಬಹುದು.

 

ಧನ್ಯವಾದಗಳು……..🌷⛈

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

ವೈದ್ಯಕೀಯ ದಾಖಲೆಗಳನ್ನು ಸುರಕ್ಷಿತವಾಗಿ ಉಳಿಸುವ ABDM ತಂತ್ರಜ್ಞಾನ, ಭಾರತದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ!!

ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

Urban Foraging Daily Bangalore: sustainable ಜೀವನಶೈಲಿಗೆ ಕುಟುಂಬಗಳಿಗಾಗಿ ಒಂದು Beginner’s Guide.

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"