ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಸುಳ್ಳು ಸುದ್ದಿಗೆ ಹೆಣವಾದವರು?............ಈ ಸಾವು ನ್ಯಾಯವೇ????????????

ಮಹಾರಾಷ್ಟ್ರದ ಜಲಗಾಂವ್‌ ನಲ್ಲಿ  ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಬೆಂಕಿ ಬಿದ್ದಿದೆ ಎಂಬ ಸುಳ್ಳು ಸುದ್ದಿ ನಂಬಿ ಆತುರಾತುರವಾಗಿ ರೈಲಿನಿಂದ ಇಳಿದು ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಇಲ್ಲಿವರೆಗೂ ಇಪ್ಪತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ

 

                

                                                                                                                                                            ಗೂಗಲ್‌ ಕೃಪೆ

ಇತ್ತೀಚೆಗೆ ದಿನದ ಬೆಳಗ್ಗೆಯಿಂದ ಸಂಜೆವರೆಗೂ ಎಲ್ಲಿ ಯಾವ ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮವನ್ನು ನೋಡಿದರೂ ಒಂದಲ್ಲ ಒಂದು ರೀತಿಯ  ಅಥವಾ ಬಹುಪಾಲು ಸಾವುಗಳು ಆಕ್ಸಿಡೆಂಟ್‌ ನಿಂದಲೇ ಸಂಭವಿಸಿರುತ್ತವೆ.

ರಸ್ತೆಯಲ್ಲಿ ಜಾಗರೂಕರಾಗಿ ವಾಹನ ಚಾಲನೆ ಮಾಡುತ್ತಿದ್ದರೂ ಕೂಡ ಪಕ್ಕದಲ್ಲಿ ವಾಹನ ಚಾಲನೆ ಮಾಡುತ್ತಿರುವವರಿಂದ ಸಹ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆಗಳಿವೆ.

ಹಿಂದಿನವರನ್ನೊ, ಮುಂದಿನವರನ್ನೋ, ರಸ್ತೆಯಲ್ಲಿ ಓಡಾಡುತ್ತಿರುವ ಮನುಷ್ಯರನ್ನೋ, ಪ್ರಾಣಿಗಳನ್ನೊ ಉಳಿಸಲಿಕ್ಕೆ ಹೋಗಿ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟ ಎಷ್ಟೋ ಮಂದಿ ತಮ್ಮ ಕುಟುಂಬದವರನ್ನು ಅಗಲಿದ ಪರಿಸ್ಥಿತಿಗಳಿವೆ.

ಈ ಎಲ್ಲಾ ಮರಣ ಮೃದಂಗಗಳ ಸದ್ದು ನಮಗೆ ಒಂದೊಂದು ಬಾರಿ, ಬಹುಷ ಯಮಧರ್ಮ ನಿಗೆ ತನ್ನ ಲೋಕದಲ್ಲಿ ಬೋರ್‌ ಹೊಡೆದು  ಭೂಲೋಕಕ್ಕೆ ಬಂದು ರಸ್ತೆಗಳಲ್ಲಿ ತನ್ನ ಪಾಶ ಕಪ್ಪು ಹಗ್ಗದೊಂದಿಗೆ ಮಹಿಷನೊಂದಿಗೆ ಸವಾರಿ ಮಾಡುವುದಕ್ಕಾಗಿ ಬಂದಿರಬೇಕು,  ಹೀಗೆ ಜಾಲಿ ರೈಡ್ ಮಾಡುವಾಗ ತನಗೆ  ಅಡ್ಡ ಬಂದವರಿಗೆ ಸುಮ್ಮನೆ ಪಾಶವನ್ನು ತಗುಲಿಸಿ ಕರೆದೊಯ್ಯುತ್ತಿರಬಹುದೇನೊ ಎನಿಸುತ್ತಿದೆ.

        ಸ್ನೇಹಿತರೆ ಈ ರೈಲು ದುರಂತ ಹೇಗಿದೆ ಎಂದರೆ, ಸಾಮಾನ್ಯವಾಗಿ ಇದುವರೆಗೆ  ನಾವು ನೋಡಿರುವ ರೈಲು ದುರಂತಗಳೆಂದರೆ, ಹಳಿ ತಪ್ಪಿರುವುದು, ಹಳಿಗೆ ಅಡ್ಡಲಾಗಿ ಮರ ಬಿದ್ದಿರುವುದು,  ಹಳಿಯ ಮೇಲೆ ಕಲ್ಲುಗಳನ್ನು ಹಾಕಿರುವುದು,‌ ರೈಲಿನಲ್ಲಿ ಬೆಂಕಿ ಅಥವಾ ರೈಲುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿರುವುದು ………. ಹೀಗೆ ಹತ್ತಾರು ರೀತಿಯ ದುರಂತಗಳನ್ನು ನೋಡಿರುವ ನಮಗೆ,  ಇತ್ತೀಚೆಗೆ ನಡೆದ ಜಲಗಾಂವ್‌ ರೈಲು ದುರಂತ ಊಹೆಗೆ ನಿಲುಕದ್ದಾಗಿದೆ. 

ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ  ಪಚೋರ ಜಂಕ್ಷನ್‌ ನಲ್ಲಿ ಪುಷ್ಪಕ್ ಎಕ್ಸ್‌ ಪ್ರೆಸ್‌  ರೈಲಿನಲ್ಲಿ  ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿಯನ್ನು ನಂಬಿ ರೈಲಿನ ಚೈನನ್ನು ಎಳೆಯಲಾಗಿದೆ. ರೈಲು ನಿಂತ ಮೇಲೆ ಕೆಲವು ಮಂದಿ ಹಿಂದೆ ಮುಂದೆ ನೋಡದೆ ನಿಲ್ಲಿಸಿರುವ ರೈಲಿನಿಂದ ಜಿಗಿದಿದ್ದಾರೆ, 

ಬೆಂಗಳೂರಿನಿಂದ ದೆಹಲಿಯೆಡೆಗೆ ಪ್ರಯಾಣಿಸುತ್ತಿದ್ದ ಕರ್ನಾಟಕ ಎಕ್ಸ್‌ ಪ್ರೆಸ್‌  ರೈಲು ಅದೇ ಸಮಯದಲ್ಲಿ  ಪಕ್ಕದಲ್ಲಿದ್ದ ಹಳಿಯ ಮೇಲೆ ಚಲಿಸುವಾಗ ಜನರಿಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು ಹನ್ನೊಂದು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂದಷ್ಟು ಮಂದಿ ಕೈ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಜನರ ಆ ಅರಚಾಟ , ಕಿರುಚಾಟ ಆ ಸಾವು ನೋವು ನೋಡುವವರ ಎದೆಯನ್ನು ತಲ್ಲಣಿಸಿಬಿಡುತ್ತದೆ. 

ರೈಲು ಚಲಿಸುತ್ತಿರುವಾಗ ಬೆಂಕಿಯ ಹೊಗೆ ರೀತಿಯ ದಟ್ಟ ಗಾಳಿಯ ರೀತಿಯ ಹೊಗೆ ಗಾಲಿಗಳಲ್ಲಿ ಕಾಣಿಸಿಕೊಂಡಿದೆ, ಅದು ಕಿಟಕಿಗಳ ಮೂಲಕ ರೈಲಿನ ಒಳಗೂ ಸಹ ಹೋಗಿದೆ, ಸಾಮಾನ್ಯವಾಗಿ ಚಲಿಸುತ್ತಿರುವ ರೈಲಿನಲ್ಲಿ ಕಾಣಸಿಗುವ ಸರ್ವೇ ಸಾಮಾನ್ಯ ಘಟನೆ ಎಂದೇ ಹೇಳಬಹುದಾಗಿರುವಂತದ್ದು.

ಇದನ್ನೆ ಕಾರಣ ಮಾಡಿ ಕೆಲವು ಕಿಡಿಗೇಡಿಗಳು ಬೆಂಕಿ ಎಂದು ಕೂಗಾಡಿ ಸುದ್ದಿಯನ್ನು ಹಬ್ಬಿಸಿ, ಪ್ರಯಾಣಿಕರಲ್ಲಿ ಭಯವನ್ನು ಹುಟ್ಟಿಸಿದ್ದಾರೆ.

ನಿಜವಾಗಿಯೂ ಬೆಂಕಿ ಹತ್ತಿರಬಹುದು ಎಂದು ಭಾವಿಸಿದ ಕೆಲವು ಪ್ರಯಾಣಿಕರು , ಬೆಂಕಿ ಹೆಚ್ಚಾಗಿ ಬರುವ ಸಾವು ನೋವಿನಿಂದ ಪಾರಾಗುವುದು ಹೇಗೆ ಎಂದು ತತ್ಕ್ಷಣಕ್ಕೆ ಯೋಚಿಸಿ , ರೈಲಿನಲ್ಲಿರುವ ಎಮರ್ಜೆನ್ಸಿ ಚೈನ್‌ ಅನ್ನು ಎಳೆದು  ಚಲನೆಯಲ್ಲಿರುವ ರೈಲ್‌ ಅನ್ನು ನಿಲ್ಲಿಸಿದ್ದಾರೆ.

ಏನಾಯಿತು ಎಂದು ರೈಲಿನ ಸಿಬ್ಬಂದಿ ಇಳಿದು ನೋಡುವಷ್ಟರಲ್ಲಿ, ಭಯಭಿತರಾಗಿದ್ದ ಜನ ಬೆಂಕಿಯಿಂದ ರಕ್ಷಿಸಿಕೊಳ್ಳಲು ಓಡುತ್ತಿರುವೆವೆಂದು ಭಾವಿಸಿ, ಪಕ್ಕದಲ್ಲಿ ಚಲಿಸುತ್ತಿದ್ದ ಕರ್ನಾಟಕ ಎಕ್ಸ್‌ ಪ್ರೆಸ್‌ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.

ಇದು ಇದುವರೆಗೂ ಕಂಡು ಕೆಳರಿಯದಂತಹ ಮಹಾ ದುರಂತವಾಗಿ ಹೋಗಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೋಗಿ ಸೀದ ಮಸಣಕ್ಕೆ ಹೋದಂತಾಗಿದೆ.

ಎಲ್ಲೋ ದೂರದಲ್ಲಿ ಕುಳಿತು  ಭಾರತದ ಮುಗ್ಧಜನಗಳ ಮಾರಣಹೋಮ ಕುಂಭಮೇಳದ ಈ ಸಮಯದಲ್ಲಿ ಪೈಶಾಚಿಕ ಮನಸುಗಳಿಗೆ ಶಾಂತಿ ನೀಡಿರಬಹುದು.

ಯಾರೋ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಅಮಾಯಕರು ವಿನಾಕಾರಣ ಬಲಿಯಾಗಿ, ದುಷ್ಕ್ರುತ್ಯ ನಡೆದು ಹೋಗಿದೆ. ಈ ವಿಷಯವಾಗಿ ಒಂದಷ್ಟು ತನಿಖೆ ಅತ್ಯಗತ್ಯ.

ಭಾರತದ ಅತಿದೊಡ್ಡ ಸಾರಿಗೆ ಜಾಲವೆಂದರೆ ಅದು ರೈಲ್ವೆ. ದಿನದಲ್ಲಿ ಲಕ್ಷಾಂತರ ಮಂದಿ ಇದರಲ್ಲಿ ಪ್ರಯಾಣಿಸುತ್ತಾರೆ,  ಈ ಪ್ರಯಾಣಿಕರು  ಈ ರೈಲು ಗಳನ್ನು  ನಂಬಿ ಸಾವಿರಾರು ಮಂದಿ ವ್ಯಾಪಾರಿಗಳು, ದಿನಗೂಲಿಗಳು ಬದುಕು  ನಡೆಸಲು  ಸಹಾಯಕವಾಗಿವೆ.

ವಿಧಿ ಅಥವಾ ಹಣೆಬರಹ ಎನೆನ್ನುತ್ತೆವೋ ಅದು ಜನನಕ್ಕೂ ಮರಣಕ್ಕೂ ತನ್ನದೇ ಆದ ವೇಳಾಪಟ್ಟಿಯನ್ನು ಯಾವಾಗಲೋ ಸಿದ್ದಪಡಿಸಿರುತ್ತದೆ ಎನ್ನುವುದಕ್ಕೆ ಈ ರೈಲು ದುರಂತವೇ ಸಾಕ್ಷಿ.

ಲಕ್ನೋ ದಿಂದ ಮುಂಬೈ ಗೆ  ಪುಷ್ಪಕ್‌ ಎಕ್ಸ್‌ ಪ್ರೆಸ್‌,    ಬೆಂಗಳೂರಿನಿಂದ ದೆಹಲಿ ಕಡೆಗೆ ಕರ್ನಾಟಕ ಎಕ್ಸ್‌ ಪ್ರೆಸ್‌,  ಈ ಎರಡು ರೈಲುಗಳ ನಡುವೆ ನಡೆದ ದುರಂತ ಅಕಾರಣವಾಗಿ ನೋಡು ನೋಡುತ್ತಿದ್ದಂತೆ  ಜನರ ಪ್ರಾಣವನ್ನು ಕಸಿದುಕೊಂಡಿದೆ.

ಕರ್ನಾಟಕದಲ್ಲಿ ಎರಡು ಅಪಘಾತ ೧೪ ಮಂದಿ ಬಲಿ.

 

ಉತ್ತರಕರ್ನಾಟಕ ಭಾಗದಲ್ಲೊಂದು ಭೀಕರ ಅಪಘಾತಕ್ಕೆ ೧೦ ಮಂದಿ ಬಲಿಯಾಗಿದ್ದಾರೆ.

ಹಾವೇರಿಯ ಸವಣೂರು  ಗುಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಅರೆಬೈಲ್‌ ಘಟ್ಟದ ಪೆಟ್ರೋಲ್‌ ಬಂಕ್‌ ಬಳಿ, ಉತ್ತರಕನ್ನಡ ಜಿಲ್ಲೆಯ ಕುಮಟಾ ಭಾಗಕ್ಕೆ ತೆರಳುತ್ತಿದ್ದ ಲಾರಿಯೊಂದು ಕಂಟ್ರೋಲ್‌ ತಪ್ಪಿ ಅಪಘಾತಕ್ಕೀಡಾಗಿ ಒಂಭತ್ತು ಮಂದಿ  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ.

ಕುಮಟಾಗೆ ಸಂತೆಗೆ ವ್ಯಾಪಾರಕ್ಕಾಗಿ  ಹಾವೇರಿ ಕಡೆಯಿಂದ ಹಣ್ಣು ಮತ್ತು ತರಕಾರಿ ಗಳನ್ನು ತೆಗೆದುಕೊಂಡು ಮೂವತ್ತು ಮಂದಿ ರಾತ್ರಿ ಸಮಯದಲ್ಲಿ ಅಪಘಾತಕ್ಕೀಡಾದಂತಹ ಈ ಮಿನಿ ಲಾರಿಯಲ್ಲಿ ಪ್ರಯಾಣ ಬೆಳಸಿದ್ದಾರೆ,

ಮುಂಜಾನೆ ಹೊತ್ತಿನಲ್ಲಿ ದಟ್ಟವಾಗಿ ಮಂಜು ಬೀಳುತ್ತಿದ್ದು,  ಈ ಸಮಯದಲ್ಲಿ  ಡ್ರೈವರ್‌ ವೇಗವಾಗಿ ಲಾರಿ ಚಲಾಯಿಸಿದ ಕಾರಣ, ನಿರೀಕ್ಷಿಸದೆ ವಿದ್ಯುತ್‌ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಮೃತರಾಗಿರುವ ಎಲ್ಲರೂ ಸುಮಾರು ಇಪ್ಪತ್ತರಿಂದ ಮೂವತ್ತು ವಯಸ್ಸಿನವರಾಗಿದ್ದು, ಕುಟುಂಬದ ಪರಿಸ್ಥಿತಿ ಹೇಳತೀರದ್ದಾಗಿದೆ.

ಇದರಲ್ಲಿ ಎಷ್ಟೋ ಮಂದಿ ಕುಟುಂಬದ ಆಸರೆಯಾಗಿದ್ದವರು, ಮದುವೆ ವಯಸ್ಸಿಗೆ ಬಂದವರು, ಹಸುಗೂಸನ್ನು ಹೊಂದಿರುವವರು, ಮನೆಗೆ ಒಬ್ಬನೇ ಮಗನಿರುವಂತಹ ಪರಿಸ್ಥಿತಿ,…….

ಅಬ್ಬಬ್ಬಾ?! ದೇವರೆ ಯಾವ ಶತ್ರುವಿಗೂ ಬೇಡ ತಂದೆ ಇಂತಹ ಪರಿಸ್ಥಿತಿ. ಬದುಕಿರುವ ಕುಟುಂಬಗಳಿಗೆ ಸಾಯುವವರೆಗೂ ನರಕದ ಬದುಕು.

 

ಇನ್ನೊಂದು ರಾಯಚೂರಿನಲ್ಲಿ ನಡೆದ ಅಪಘಾತ, ಸ್ಕೂಲ್‌ ವ್ಯಾನ್‌ ಡಿಕ್ಕಿಯಾಗಿ ವಿದ್ಯಾರ್ಥಿಗಳ ಜೊತೆ ಡ್ರೈವರ್‌ ಸಹ ಸೇರಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.

ಮೂವರು ವಿದ್ಯಾರ್ಥಿಗಳು ಮಂತ್ರಾಲಯದ ಸಂಸ್ಕ್ರತ ಪಾಠ ಶಾಲೆಯ ವಿದ್ಯಾರ್ಥಿಗಳು, ಹಂಪಿಯ ನರಹರಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದ ಸಮಯದಲ್ಲಿ  ಈ ನಾಲ್ಕು ಜನರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.  ಗಾಯಗೊಂಡಿರುವ ಹತ್ತು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

 

ಇದಿಷ್ಟೂ ಘಟನೆಗಳು ಒಂದೇ ದಿನ ಬೇರೆ ಬೇರೆ ಸ್ಥಳಗಳಲ್ಲಿ ನಡೆದು ಸಾವಿಗೀಡಾದವರ ಚರಮಕತೆಗಳು. ಇಲ್ಲಿ ಯಾರ ಸಾವಿಗೆ ಯಾರು ಹೊಣೆ….? ಯಾರು ಜವಾಬ್ದಾರರು………  ವಾಹನ ನಡೆಸುವ ಚಾಲಕರು ಇಲ್ಲಿ ನೆಪಮಾತ್ರರು.

ಭೂಮಿ ಮೆಲೆ ಜನಿಸಿದ ಪ್ರತಿಯೊಬ್ಬರು ಸಾವಿಗೆ ಎದುರು ನೋಡುತ್ತಾ ಜೀವಿಸುವವರೆ ಆಗಿರುತ್ತಾರೆ.  ಇಲ್ಲಿ ನಡೆದದ್ದು ವಿಧಿ ಬರಹ ಅಥವಾ ಆಯಸ್ಸು ಅಷ್ಟೇ ಎಂದು ಸಮಾಧಾನಿಸಿಕೊಳ್ಳಬೇಕು.

ಸಾವು ಬಂದಮೇಲೆ ನಾವು ನೀವು ಎಷ್ಟು ಮಾತನಾಡಿದರೂ ಅಷ್ಟೆ…… ಸತ್ತವರನ್ನು ಬದುಕಿಸಲಾಗುವುದಿಲ್ಲ.  ಹಾಗೆ ಮಾಡಿದರೆ ಬದುಕಬಹುದಿತ್ತು, ಹೀಗೆ ಮಾಡಿದರೆ ಬದುಕಬಹುದಿತ್ತು ಎಂದು ನಾವುಗಳು ಬರಿ ಬಾಯಿ ಮಾತಿಗೆ ಅಂದುಕೊಳ್ಳಬಹುದು ಅಷ್ಟೆ.

 

ನೋಡಿ ಮೈಖೆಲ್‌ ಜಾಕ್ಸನ್‌ ತಾನು ಸಾವನ್ನು ಗೆಲ್ಲಲೇಬೇಕು, ಸಾವು ನನಗೆ ಬರಬಾರದು ಎಂದು ಏನೆಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದ, ತನ್ನ ಬೆಡ್‌ ರೂಮನ್ನು ಆಸ್ಪತ್ರೆಯ ರೀತಿ ಬದಲಾಯಿಸಿ, ವಿಶ್ವದ ನುರಿತ ವೈದ್ಯರನ್ನು ತನ್ನ ಸೇವೆಗೆ ನೇಮಿಸಿಕೊಂಡಿದ್ದ ಆದರೆ ವಿಧಿ ……….. ಅವನಿಗೆ ಅರವತ್ತು ವರ್ಷ ಮುಟ್ಟುವುದಕ್ಕೂ ಬಿಡಲಿಲ್ಲ……….

ಇದು ನಾವು ಪ್ರಾಣವನ್ನು ಎಲ್ಲಿ ಮುಚ್ಚಿಟ್ಟರೂ ವಿಧಿ ತನ್ನ ಸಮಯಕ್ಕೆ ಸರಿಯಾಗಿ ಕಸಿಯದೇ ಬಿಡದು.

 

ಜಾಗರೂಕರಾಗಿರಿ, ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಿ……

 

ಧನ್ಯವಾದಗಳು. 

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......