ವರ್ಷಪೂರ್ತಿ ಹಸಿರಾಗಿರುವ ರೆಸೊಲ್ಯೂಷನ್ 💚💚 💚 ......ನೀವೂ ಕೂಡ ಪ್ರಯತ್ನಿಸಿ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಸಿರೇ ಉಸಿರು
ಹೊಸ ವರ್ಷದ ರೆಸೊಲ್ಯೂಷನ್
(ಮುಲಾಜುಗಳು)ಗಳು ಡೈರಿಗೆ ಮಾತ್ರ ಸೀಮಿತವೇ?!!...........
ಈ ಹೊಸ ವರ್ಷದಲ್ಲಿ
ಇಂತಿಷ್ಟು ಕೆಲಸಗಳನ್ನು ಮಾಡಿಯೇ ತೀರುತ್ತೇನೆಂದು ಅಂದುಕೊಳ್ಳುವ ಒಂದಷ್ಟು ಖಾಸಗಿ ಒಡಂಬಡಿಕೆಗಳನ್ನು
ಮುಲಾಜುಗಳು ಎಂದು ಕರೆಯುವುದಾದರೆ ಅವುಗಳಲ್ಲಿ ಕೆಲವೊಂದು ಜೀವನವನ್ನೆ ರೇಜಿಗೆ ಹುಟ್ಟಿಸುವಂತಹವುಗಳಾದರೆ,
ಇನ್ನು ಕೆಲವು ನಮ್ಮ ನಿತ್ಯ ಜೀವನವನ್ನು ನವನವೀನವಾಗಿಸಿ ಬದುಕನ್ನು ಸಂಭ್ರಮಿಸುವಂತೆ ಮಾಡುತ್ತವೆ.
ಇವನೊಬ್ಬ ಬೆಳಗಾಗೊದನ್ನೆ
ಕಾಯ್ತಿರ್ತನೆ, ರಿಂಗಣಿಸಿದ ಫೋನ್ ಪರದೆಯನ್ನು ನೋಡುತ್ತಾ
ಮಲಗಿದ್ದಲ್ಲೆ ಗೊಣಗಿಕೊಂಡಿದ್ದನು ಸೂರ್ಯ.
ಅಂದು ಹೊಸ ವರ್ಷದ ಹಿಂದಿನ ದಿನ .
ಸೂರ್ಯ ಬೆಳಗ್ಗೆ
ರೆಡಿಯಾಗಿ ಬಂದವನೆ ತನ್ನ ಬೈಕ್ ನ್ನು ಸ್ಟಾರ್ಟ್
ಮಾಡಲು ನೋಡಿದ್ದನು, ಆದರೆ ಪೆಟ್ರೋಲ್ ಖಾಲಿಯಾಗಿ ಬರಿ ಗುರು ಗುರು ಎಂದಷ್ಟೆ ಸೌಂಡು ಮಾಡಲು ಶಕ್ಯ್ತವಾಗಿತ್ತು
ಅವನ ಟು ವೀಲರ್ ಬೈಕ್…... ಬರಿದಾದ ಜೇಬನ್ನು ನೋಡಿಕೊಂಡವನು, ಯೋಚಿಸಿ ತಕ್ಷಣ ಅರುಣನಿಗೆ ಕರೆ ಮಾಡಿ,
ಅವನಿಂದ ಒಂದಷ್ಟು ಉಗಿಸಿಕೊಂಡು ಪೆಟ್ರೋಲ್ ಹಣವನ್ನು ಫೋನ್ ಪೆ ಮಾಡಿಸಿಕೊಂಡಿದ್ದನು.
ಸೂರ್ಯ “ ಇವನಜ್ಜಿ
ನನ್ನ ಹತ್ರ ದುಡ್ಡು ಇದ್ದಾಗೆಲ್ಲ ಅದು ಇದು ತಿಂದು ತೇಗ್ತರೆ, ಪೆಟ್ರೋಲ್ ಗೆ ಇವರತ್ರ ದುಡ್ಡು ಕೇಳುದ್ರೆ ಎಷ್ಟು ಮಾತಾಡ್ತರೆ… ಇರಲಿ ಈ
ನನ್ ಮಕ್ಕಳಿಗೆ ಮಾಡ್ತಿನಿ” ಎಂದು ಬೈದುಕೊಳ್ಳತ್ತಲೆ ತನ್ನ ಬೈಕನ್ನು ಮುನ್ನಡೆಸಿದ್ದನು.
ಈ ವರ್ಷದಲ್ಲಿ
ಯಾರ ಹತ್ತಿರನೂ ಸಾಲ ಮಾಡಬಾರದು, ಅಕಸ್ಮಾತ್ ಮಾಡಿದ್ರೂ ನಿನ್ ಹತ್ರ ಮಾತ್ರ ಮಾಡಲ್ಲ ನ್ಯೂ ಹಿಯರ್
ಪಾರ್ಟಿ ಗೆ ಕಾಯುತ್ತಾ ಡಿಸೆಂಬರ್ ೩೧ ರ ರಾತ್ರಿ ಸ್ನೇಹಿತರೆಲ್ಲರೂ ಸೇರಿಕೊಂಡು ಎಲ್ಲರೂ ಅವರವರ ಈ
ಬರುವ ಹೊಸವರ್ಷದ ತಮ್ಮ ತಮ್ಮ ರೆಸೊಲ್ಯೂಷನ್ ಗಳ ಬಗ್ಗೆ ಮಾತನಾಡುತ್ತಿದ್ದರು. ಸೂರ್ಯ ಬೆಳಗ್ಗೆಯೆ ತನಗೆ ಕಾಲ್ ಮಾಡಿದ್ದ ಅರುಣನಿಗೆ ಹೇಳುತ್ತಿದ್ದವನು,
ನಾನಂತು ಇನ್ಮೇಲೆ ಅರುಣನತ್ರ ಮಾತ್ರ ಅಲ್ಲ ಇನ್ನ ಯಾರ ಅತ್ರನು ಸಾಲ ಮಾಡೋದಿಲ್ಲ ಇದು ನನ್ನ ಈ ವರ್ಷದ
ಹೊಸ ಮುಲಾಜು, ಈಗ ನೀವು ಹೇಳಿ ನಿಮ್ಮ ನಿಮ್ಮ ಮುಲಾಜುಗಳ ಬಗ್ಗೆ………………
ಹೀಗೆ ಪ್ರತಿಯೊಬ್ಬರು ಅಥವಾ ಕೆಲವರಂತೂ ಹೊಸ ವರ್ಷದಲ್ಲಿ ಹಲವು
ಮುಲಾಜುಗಳನ್ನು ಪಾಲಿಸಲೇಬೇಕೆಂದು ಹಠತೊಟ್ಟು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ ಅವುಗಳನ್ನು
ಪ್ರಾರಂಭಿಕ ದಿನಗಳಲ್ಲಿ ಹೊಸ ಹುರುಪಿನಿಂದ ಪ್ರಾರಂಭಿಸುತ್ತಾರೆ ಮತ್ತು ಬರುಬರು ಬರುತ್ತಾ ಒಂದೊಂದೆ
ಸಡಿಲವಾಗಿ ಕೆಲವು ದಿನಗಳಲ್ಲೆ ಮುಲಾಜುಗಳನ್ನು ಮುಲಾಜಿಲ್ಲದೆ ಮರೆತುಬಿಡುತ್ತಾರೆ. ಅಂತಹ ಒಂದೊಂಷ್ಟು ಕ್ರೇಝಿ ಮುಲಾಜುಗಳನ್ನು
ಈಗ ನೋಡೋಣ……………..
ಬೆಳಗ್ಗೆ ಬೇಗ ಏಳುವುದು, ಪ್ರತಿ ಶನಿವಾರ
ದೇವಸ್ಥಾನಕ್ಕೆ ಭೇಟಿ ನೀಡುವುದು. ತಪ್ಪದೆ ಯೋಗ ಮಾಡುವುದು. ಪುಸ್ತಕ ಓದುವುದು. ಯಾರ ಹತ್ತಿರ ಜಗಳ ಮಾಡುವುದಿಲ್ಲ, ಅನವಷ್ಯಕ ಕೋಪ ಮಾಡುವುದಿಲ್ಲ, ಅಮ್ಮ ಹೇಳಿದ ಎಲ್ಲ ಮಾತನ್ನು
ಕೇಳುತ್ತೇನೆಂದು, ಕೆರಿಯರ್ ಗ್ರಾಫ್ ಈ ವರ್ಷದಲ್ಲಿ ರೈಸ್ ಆಗಬೇಕು, ಎಕ್ಸ್ಟ್ರಾ ಕೆರಿಕ್ಯುಲರ್ ಆಕ್ಟಿವಿಟಿ ಯಾವುದಾದರೂ ಒಂದು ಈ ವರ್ಷದಲ್ಲಿ ಆಡ್ ಅಪ್ ಮಾಡ್ಬೇಕು. ಜಿಮ್ ಗೆ
ಪ್ರತಿದಿನ ಹೋಗಬೇಕು. ಒಂದಷ್ಟು ಸಸಿ ನೆಡಬೇಕು. ಪ್ರಾಪರ್ಟಿ ತಗೋಬೆಕು. ಒಳ್ಳೆ ಕೆಲಸಗಳನ್ನು ಮಾಡಬೇಕು. ಗರ್ಲ್ ಫ್ರೆಂಡ್ ಪಟಾಯಿಸಬೇಕು. ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು. ಆರೋಗ್ಯದ ಕಡೆ ಗಮನಕೊಡಬೇಕು. ಡ್ರೈವಿಂಗ್ ನಲ್ಲಿ ಎಕ್ಸ್
ಪರ್ಟ್ ಆಗಬೇಕು. ಮೊಬೈಲ್ ಸ್ಕ್ರೀನ್ ಕಡಿಮೆ ಮಾಡಬೇಕು. ಹೊಸ ಮೊಬೈಲ್ ತಗೊಬೇಕು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಪಾಸಿಟೀವ್
ಆಗಿ ಥಿಂಕ್ ಮಾಡಬೇಕು. ಎಲ್ಲರ ಹತ್ತಿರನೂ ಕರುಣೆಯಿಂದ
ನಡೆದುಕೊಳ್ಳಬೇಕು. ಹೊಸ ಹೊಸ ಸ್ಥಳಗಳಿಗೆ ಬೇಟಿ ನೀಡಬೇಕು. ಭಯಮುಕ್ತನಾಗಿ ಬದುಕಬೇಕು. ಹೊಸ ರೀತಿಯ ಚಾಲೇಂಜ್ ಗಳನ್ನು ಎದುರಿಸುವುದು. ಇಂತಿಷ್ಟು ಹಣವನ್ನು ಉಳಿಸಬೇಕು.
ಇನ್ನು ಯುವಜನತೆ,
ಮದುವೆಗೆ ತಯಾರಾಗುತ್ತಿದ್ದರೆ, ಈ ವರ್ಷ ಯೋಗ್ಯ ಸಂಗಾತಿಯನ್ನು ಹುಡುಕಿ ಮದುವೆ ಆಗಬೇಕು, ಈಗಿನ ಒಂದು
ಟ್ರೆಂಡ್ ಮಕ್ಕಳನ್ನು ಮಾಡಿಕೊಳ್ಳಬೇಕು, (ಅದರಲ್ಲೂ ಕೆಲವರು ಇಂತಹ ತಾರೀಖಿನಲ್ಲೆ ಪ್ರತ್ಯೆಕ ಮುಹೋರ್ತದಲ್ಲೆ
ಮಕ್ಕಳು ಹುಟ್ಟಬೇಕೆಂಬುದು) . ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಬೇಕು. ಮನಸ್ಸನ್ನು ಆಧ್ಯಾತ್ಮದೆಡೆಗೆ
ಕೊಂಡೊಯ್ಯಬೇಕು.
ಹೀಗೆ ಹತ್ತು ಹಲವು
ಮುಲಾಜುಗಳು, ಆದರೆ ದಿನಕಳೆದಂತೆ ಈ ಮುಲಾಜುಗಳು ನಮ್ಮ ಮುಲಾಜಿಲ್ಲದೆ ಮೆದುಳಿನಿಂದ ಹಾರಿ ಹೋಗಿ ಹತ್ತು
ಹಲವು ದಿನಗಳಲ್ಲೆ ಮತ್ತೆ ನಾವು ನಮ್ಮ ಹೊಸ ವರ್ಷದ ಮುಲಾಜುಗಳು ಏನೆಂದು ಡೈರಿಯಲ್ಲಿ ಹುಡುಕಬೇಕಾಗುತ್ತದೆ. ಇನ್ನು ಕೆಲವರು
ಮುಂದೆ ಹೋಗಿ ಕೆಲವು ತಿಂಗಳುಗಳ ಕಾಲ ತಾವು ಮಾಡಿಕೊಂಡಿರುವ ರೆಸೊಲ್ಯೂಷನ್ಗಳನ್ನು ಅನುಸರಿಸುತ್ತಾರೆ.
ಹೀಗೆ ಪ್ರತಿಯೊಬ್ಬರು
ತಮ್ಮ ಬದುಕಿನ ಏಳಿಗೆಗೆ ಸಂಬಂಧಿಸಿದಂತೆ ನೂರಾರು ನಿಯಮಗಳನ್ನು ಮಾಡಿಕೊಂಡು ಅದನ್ನು ಅನುಸರಿಸಿ ತಮ್ಮನ್ನು
ತಾವು ಪೋಷಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಹೀಗೆ ಸಫಲತೆಯನ್ನು ಕಂಡೊಕೊಳ್ಳುವ ಹಾದಿಯಲ್ಲಿ ಸದಾಕಾಲ ತಮ್ಮೋಂದಿಗಿದ್ದು
ನಾವು ಬೇಡಿಕೊಳ್ಳದೆಯೇ ನಮಗೆ ಈ ಭೂಮಿ ಮೇಲೆ ಬದುಕಿ ಉಸಿರಾಡಲು ಅವಕಾಶ ನೀಡಿರುವ ಪ್ರಕೃತಿಯ ಬಗೆಗೆ
ಕಿಂಚಿತ್ತೂ ಆಲೋಚಿಸದೆ ಅದರ ವಿರೋಧಿಗಳಾಗಿ ಸದಾ ಪ್ರಕೃತಿಯನ್ನು
ದ್ವಂಸ ಮಾಡುವುದರಲ್ಲಿಯೇ ನಿರತರಾಗಿರುವ ನಾವು…… ಏಕೆ ಆಲೋಚಿಸುವುದಿಲ್ಲ, ಏಕೆ ನಿಯಮಗಳನ್ನು ಮಾಡಿಕೊಳ್ಳುವುದಿಲ್ಲ……….
ಈ ವರ್ಷ ಹೆಚ್ಚು ಕಾಡನ್ನು ಬೆಳೆಸುತ್ತೇನೆಂದು, ಪ್ರಕೃತಿಗೆ ಹಾನಿ ಮಾಡದೆ ಬದುಕುತ್ತೇನೆಂದು. ತನ್ನಂತೆ ಭೂಮಿಯ ಮೇಲಿನ ಇತರ ಜೀವಿಗಳಿಗೂ ಬದುಕಲು ಅವಕಾಶ
ಕಲ್ಪಸಿ ಸಹಜೀವನ ನಡೆಸುತ್ತೇನೆಂದು…………..
ಭೂಮಿಯ ಮೇಲಿನ
ಬದುಕು ಮನುಷ್ಯ ಜೀವಿಗೆ ಪ್ರಕೃತಿ ನೀಡಿರುವ ಉಡುಗೊರೆ. ಸಕಲ ಜೀವ ಸಂಕುಲವನ್ನು ಪೋಷಿಸುವ ಹೊಣೆ ಹೊತ್ತಿರುವ
ನಮ್ಮ ಈ ಪ್ರಕೃತಿ ಮನುಷ್ಯನ ಅರಿವಿನಿಂದ ಇನ್ನಷ್ಟು ಬೆಳಗಬೇಕಾದವಳು ಅವರಿಂದಲೇ ನಿತ್ಯ ನರಳುವಂತಾಗಿದೆ.
ನಾಗರೀಕತೆಯ ಸೋಗಿನಲ್ಲಿ,
ಮನುಷ್ಯ ತನ್ನ ಸ್ವಾರ್ಥಕ್ಕೆ , ತನ್ನ ನಿತ್ಯದ ಐಷಾರಾಮಿ ಜೀವನಕ್ಕೆ ಪ್ರಕೃತಿಯ ಭಾಗವಾಗಿರುವ ಅವಳ ಎಷ್ಟೋ
ಸ್ವತ್ತುಗಳನ್ನು ನುಂಗಿ ನೀರು ಕುಡಿದಿದ್ದಾನೆ.
ಇದಕ್ಕೆಲ್ಲ ಒಂದು
ತಾಜಾ ಉದಾಹರಣೆ ಪ್ರತಿವರ್ಷ ಬರುವ ಈ ಹೊಸವರ್ಷಾಚರಣೆ. ನಗರ ಪ್ರದೇಶಗಳಲ್ಲಿ ಈ ಸಮಯದಲ್ಲಿ ಜನರು ತಮ್ಮ ಮೋಜು ಮಸ್ತಿಗಳಿಗಾಗಿ ಪಟಾಕಿ ಸಿಡಿಸುತ್ತ
ಸುತ್ತಲಿರುವ ಪ್ರಾಣಿ ಪಕ್ಷಿಗಳಿಗೆ ಹಿಂಸಿಸುತ್ತಾರೆ, ಸಾಲದೆಂಬಂತೆ ಅಂದು ವಿಶೇಷ ಖಾದ್ಯಗಳನ್ನು ತಯಾರಿಸಲು
ಮಾಂಸ ಭಕ್ಷಣೆಗಾಗಿ ಪ್ರಕೃತಿಯ ಒಡಲ ಭಾಗವಾಗಿರುವ ಪ್ರಾಣಿ ಪಕ್ಷಿಗಳನ್ನು ಉಂಡು ತೇಗುತ್ತಾರೆ. ಊಟದ ನಂತರ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಗಳು, ಗಾಜುಗಳು,
ಘನ ತ್ಯಾಜ್ಯಗಳು, ದ್ರವ ತ್ಯಾಜ್ಯಗಳು, ಭೂಮಿಯ ಪದರವನ್ನು
ಸೇರುತ್ತವೆ.
ಮನುಷ್ಯ ಈ ಒಂದು
ದಿನದ ಆಚರಣೆಗಾಗಿ ಪ್ರಕೃತಿ ಮೇಲೆ ಅದೆಷ್ಟೋ ಅಡಚಣೆಗಳನ್ನು ಎಸಗುತ್ತಾನೆ.
ಹೊಸ ವರ್ಷದ ದಿನ
ಹುಟ್ಟುವ ಮನುಷ್ಯರ ಈ ರೆಸೊಲ್ಯೂಶನ್ ಗಳು ವರ್ಷಪೂರ್ತಿ
ಇರುತ್ತವೆಯೋ ಇಲ್ಲವೋ ಆದರೆ ಇವರಿಂದ ಈ ಒಂದು ದಿನದ ಮಟ್ಟಿಗಿನ ಪ್ರಕೃತಿಯ ಮೇಲಿನ ಅರಾಜಕತೆ ಸರಿದೂಗಿಸಲು
ಅದೆಷ್ಟೂ ಕಾಲಗಳು ಬೇಕಾಗುವುದೋ…………
ಹುಟ್ಟುವಾಗಲೇ
ಆಯುಷ್ಯ ರೇಖೆಯನ್ನು ಎಳೆಸಿಕೊಂಡು ಭೂಮಿಯ ಮೇಲಿನ ತನ್ನ ಅಂತ್ಯವು ಖಚಿತವೆಂದು ತಿಳಿದಿರುವ ಮನುಷ್ಯನ
ಲಾಲಸೆಗೆ ಎಣೆಯಿಲ್ಲದೆ, ಇನ್ನೂ ಸಾವಿರಾರು, ಲಕ್ಷ ವರ್ಷಗಳ ತನಕ ಜೀವ ಸಂಕುಲವನ್ನು ಸಾಕಿ ಸಲಹುವ ಜವಾಬ್ದಾರಿಯನ್ನು
ಹೊತ್ತ ಈ ಪ್ರಕೃತಿಯನ್ನು ಮುಂದಿನ ಜನತೆಗೆ ಅದನ್ನು ಉಳಿಸಿ ಬೆಳಸುವ ಔದಾರ್ಯ ತೋರದೆ, ಮತಿ ಹೀನನಂತೆ
ವರ್ತಿಸಿ ವಿನಾಶದತ್ತ ಕೊಂಡೊಯ್ಯುವ ಬದಲು,……..
ಹೊಸವರ್ಷದಲ್ಲಿ
ಭೂಮಿಯ ಮೇಲೆ ಹುಟ್ಟಿರುವ ಪ್ರತಿ ಜೀವಿಗು ತನ್ನಂತೆ ಬದುಕುವ ಹಕ್ಕಿದೆ ಎಂಬುದನ್ನು ಅರಿತು , ವರ್ಷದ
ರೆಸೊಲ್ಯೂಷನ್ ಆಗಿ ಪ್ರಕೃತಿಯನ್ನು ಕಾಪಾಡುತ್ತೇನೆಂದು, ಹಾಗೂ ತನ್ನಿಂದ ಪ್ರಕೃತಿಗೆ ಯಾವುದೇ ರೀತಿಯ
ಹಾನಿ ಆಗದಂತೆ ಬದುಕಿ ತೋರಿಸುತ್ತೇನೆ ಎಂದು ಪ್ರತಿಜ್ಞೆ ಮಾಡುವುದರ ಮೂಲಕ ಹೊಸ ವರ್ಷಾಚರಣೆಯನ್ನು ಆಚರಿಸಬಹುದು.
ಈ ರೆಸೊಲೈಷನ್
ಮಿಕ್ಕೆಲ್ಲ ವರ್ಷದ ರೆಸೊಲ್ಯೂಷನ್ ಗಳಂತೆ ಒಂದಷ್ಟು ದಿನಗಳಲ್ಲಿ ಬೋರ್ ಹೊಡೆದು ನಿಲ್ಲಿಸದೆ, ಬೆಳಗ್ಗೆ
ಎದ್ದಾಗಿನಿಂದ ನಮ್ಮ ನಿತ್ಯದ ಬದುಕಿನ ಭಾಗವಾಗಿ, ತನ್ನ ಇರುವಿಕೆಯನ್ನು ತೋರಿಸಿ ಬದುಕನ್ನು ಮತ್ತಷ್ಟು
ಸುಂದರವಾಗಿಸಿ, ಅಂದುಕೊಂಡು ಕೆಲಸವನ್ನು ಸಾಧಿಸಿದ ತೃಪ್ತಿಯನ್ನು ನೀಡುತ್ತದೆ.
ಆದಾಗ್ಯೂ ಜನವರಿ
ಒಂದನೇ ತಾರೀಖು ಭಾರತೀಯರ ಹೊಸ ವರುಷದ ಮೊದಲ ದಿನವಲ್ಲ, ಇದು ಪಾಶ್ಚಾತ್ಯರ ಸಂಸ್ಕ್ರತಿ , ಇದು ನಮ್ಮ
ಮೂಲ ಸಂಪ್ರದಾಯವಲ್ಲ, ಆಚರಣೆಯೂ ಅಲ್ಲ. ಬದಲಿಗೆ ನಮ್ಮ
ಅರೆ ತಿಳಿದ ಮೂರ್ಖರು ವಿದೇಶಿಗರ ಸಂಸ್ಕ್ರತಿಯನ್ನು ಅವರಂತೆಯೇ ಆಚರಿಸಿ ನಮ್ಮತನವನ್ನು ಮರೆತು ಗುಲಾಮರಂತೆ ವರ್ತಿಸುತ್ತಿರುವುದು
ನಿಜಕ್ಕೂ ಖೆದಕರ ಹಾಗೂ ದುಃಖಕರ ಸಂಗತಿಯಾಗಿದೆ.
ನಮ್ಮ ಹಿಂದೂ ಸಂಸ್ಕ್ರುತಿಯ
ಪ್ರಕಾರ ಪ್ರಕೃತಿಯ ಹಣ್ಣೆಲೆಗಳನ್ನು ಕಳಚಿ, ಹೊಸ ಚಿಗುನ್ನು ಮೇಳೈಸಿಕೊಳ್ಳುವ ನವ ವಸಂತ ಕಾಲದ
ಚೈತ್ರ ಮಾಸದ ಚಾಂದ್ರಮಾನ ಯುಗಾದಿಯಂದು ನಮ್ಮ
ಹೊಸ ವರ್ಷ. ಅಂದಿನ ದಿನಕ್ಕಾಗಿ ಕಾಯೋಣ, ಪ್ರಕೃತಿ
ಉಳಿಸುವ ರೆಸೊಲ್ಯೂಷನ್ ಮಾಡೋಣ.
ಧನ್ಯವಾದಗಳು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು