ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಪುರಂದರ ದಾಸರ ಜಯಂತಿ ಜನವರಿ ೨೯, ೨೦೨೫

 


ಕರ್ನಾಟಕದ ಹರಿದಾಸರಲ್ಲಿ ಅತ್ಯಂತ ಪ್ರಸಿದ್ದರಾಗಿದ್ದ ಮತ್ತು ಕರ್ನಾಟಕದ ಸಂಗೀತ ಪಿತಾಮಹರೆನಿಸಿದವರು ಪುರಂದರದಾಸರು. ದಕ್ಷಿಣ ಭಾರತದಲ್ಲಿ ಭಕ್ತಿ ಚಳುವಳಿಯ ಪ್ರಚಾರಕರಲ್ಲಿ ಅತ್ಯಂತ ಪ್ರಮುಖರು.

 ಪುರಂದರ ದಾಸರ ಮೊದಲ ಹೆಸರು  ಶ್ರೀನಿವಾಸ ನಾಯಕ, ತಂದೆ ವರದಪ್ಪ ನಾಯಕ , ಶ್ರೀಮಂತ ವ್ಯಾಪಾರಿಗಳು. ತಾಯಿ ರುಕ್ಮಿಣಿ.  ವರದಪ್ಪನವರು ಲೇವಾದೇವಿ ವೃತ್ತಿಯಲ್ಲಿದ್ದವರು , ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು ನಾಯಕ ಜನಾಂಗದವರಾದ್ದರಿಂದ ಮಗನಿಗೆ ಶ್ರೀನಿವಾಸ ನಾಯಕ ಎಂಬ ಹೆಸರಿಟ್ಟಿದ್ದಾರೆ ಎಂದು ನಂಬಲಾಗುತ್ತದೆ.

ಕುಟುಂಬ ಸಂಪ್ರದಾಯಗಳಿಗೆ ಅನುಗುಣವಾಗಿ  ಉತ್ತಮ ಶಿಕ್ಷಣವನ್ನು ಪಡೆದರು,  ಕನ್ನಡ, ಸಂಸ್ಕೃತ, ಪವಿತ್ರ ಜ್ಞಾನ, ಮತ್ತು ಸಂಗೀತದಲ್ಲಿ ಪಾಂಡಿತ್ಯವನ್ನು ಪಡೆದರು.

ಶ್ರೀನಿವಾಸ ನಾಯಕ ಹದಿನಾರು ವಯಸ್ಸಿನಲ್ಲಿರುವಾಗ, ಮಹಾನ್‌ ದೈವಭಕ್ತೆಯಾಗಿದ್ದ ಸರಸ್ವತಿ ಬಾಯಿ ಯೊಂದಿಗೆ ವಿವಾಹವಾದರು,  ಇಪ್ಪತ್ತನೇ  ವಯಸ್ಸಿನಲ್ಲಿರುವಾಗ  ತಂದೆ ತಾಯಿಯರ ವಿಯೋಗವುಂಟಾಯಿತು.

 

            ಮೊದಲು ಮಹಾರಾಷ್ಟ್ರದಲ್ಲಿರುವ ಪುರಂದರಗಢ ಶ್ರೀನಿವಾಸ ನಾಯಕರ ಜನ್ಮಸ್ಥಳವೆಂದು ನಂಬಲಾಗಿತ್ತು, ಆದರೆ ಕರ್ನಾಟಕ ಸರ್ಕಾರವು ಹಿರಿಯ ಸಂಗೀತಗಾರ  ಆರ್.‌ ಕೆ. ಪದ್ಮನಾಭ,  ಹಿರಿಯ ವಿದ್ವಾಂಸರಾದ  ಎ.ವಿ ನಾವಡ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿ ಲೀಲಾವತಿ  ಆರ್‌ ಪ್ರಸಾದ್‌  , ವೀರಣ್ಣ  ರಾಜೂರು,  ಅರಳು ಮಲ್ಲಿಗೆ ಪಾರ್ಥ ಸಾರಥಿ ಅವರನ್ನು ಒಳಗೊಂಡ ಒಂದು ತಂಡವನ್ನು  ರಚಿಸಿ , ಪುರಂದರ ದಾಸರ ಜನ್ಮ ಸ್ಥಳದ ಬಗೆಗೆ ಒಂದು ವರದಿಯನ್ನು ನೀಡುವಂತೆ ಕೋರಲಾಗಿತ್ತು.

            ತಜ್ಞರ ವರದಿಯ ಪ್ರಕಾರ ಪುರಂದರಗಢ ಊರಿನ ಹೆಸರು ಬರಿ ಒಂದು ಊರಿನ ಹೆಸರು ಮಾತ್ರವಾಗಿದ್ದು, ಪುರಂದರ ದಾಸರ ಹೆಸರಿಗೂ ಈ ಊರಿಗೆ ಯಾವುದೇ  ಐತಿಹಾಸಿಕ – ಸಾಂಸ್ಕ್ರತಿಕ ದಾಖಲೆ  ಹೊಂದಿಲ್ಲ ಎಂಬುದನ್ನು ದಾಖಲೆಗಳಲ್ಲಿ ಒದಗಿಸಿದರು, ಮಾತ್ರವಲ್ಲದೆ  ತೀರ್ಥಹಳ್ಳಿ ತಾಲ್ಲೂಕಿನ ಆರಗ ಊರು ಪುರಂದರ ದಾಸರಿಗೆ ಸಂಬಂಧಿಸಿದ  ಹಲವು ಐತಿಹಾಸಿಕ ಸಾಕ್ಷ್ಯಗಳನ್ನು ಹೊಂದಿದ್ದು , ಆರಗವೇ ಪುರಂದರರ ಜನ್ಮಸ್ಥಳವೆಂದು ೨೦೧೮ ರಲ್ಲಿ ಕರ್ನಾಟಕ ಸರ್ಕಾರಕ್ಕೆ  ವರದಿ ಸಲ್ಲಿಸಿತು.

ಶ್ರೀನಿವಾಸ ನಾಯಕ ಬೆಳೆದ ನಂತರ ಅನುವಂಶಿಕವಾಗಿ ಬಂದ ತಂದೆಯ ವೃತ್ತಿಯನ್ನೇ ಅನುಸರಿಸಿ  ಅದನ್ನು ವೇಗವಾಗಿ ವಿಸ್ತರಿಸಿದರು. ಮತ್ತು ಅಪಾರ ಸಂಪತ್ತನ್ನು ಸಂಗ್ರಹಿಸುವ ಮೂಲಕ “ ನವಕೋಟಿ ನಾರಾಯಣ” ಎಂದು ಪ್ರಸಿದ್ದಿ ಪಡೆದರು.  ಇಷ್ಟಾದರೂ  ಶ್ರೀನಿವಾಸ ನಾಯಕರು ಮಹಾ ಜಿಪುಣನಾಗಿದ್ದು ತನ್ನ  ತಂದೆಯವರು ಅಸ್ವಸ್ಥರಾಗಿದ್ದರೂ ಹಣ ಖರ್ಚು ಮಾಡಲು ತಡೆದಿದ್ದರಂತೆ.

ಶ್ರೀನಿವಾಸರ ಪತ್ನಿ ಸರಸ್ವತಿಯವರು ದಾನ ಶೀಲೆಯಾಗಿದ್ದು, ಖರ್ಚಿನ ವಿಷಯ ಬಂದಾಗ ಗಂಡನಿಂದ ಕೋಪವನ್ನು ಅನುಭವಿಸುತ್ತಿದ್ದರು ಎಂದು ಹೇಳುತ್ತಾರೆ. ಇವರ ಸಂಸಾರ ಮೂಲತಃ ಪಂಡರಾಪುರದಲ್ಲಿದ್ದು ನಂತರದಲ್ಲಿ ಶ್ರೀನಿವಾಸರು ಹಂಪೆಗೆ ಬಂದರೆಂದು ತೋರುತ್ತದೆ.

 

ಶ್ರೀನಿವಾಸ ನಾಯಕರಿಂದ ಪುರಂದರದಾಸರೆಂದು ಬದಲಾದ ಐತಿಹ್ಯ.

ಶ್ರೀನಿವಾಸ ನಾಯಕರು ಅಂತಿಮ ಲಾಭದ ಆಧ್ಯಾತ್ಮಿಕತೆಯ ಕಡೆಗೆ ಒಲವು ತೋರುವ ಯಾವುದೇ ಲಕ್ಷಣಗಳು ಕಾಣದಿದ್ದಾಗ,  ಒಂದು ಐತಿಹ್ಯದ ಪ್ರಕಾರ ಭಗವಾನ್‌ ಶ್ರೀಹರಿಯ , ಶ್ರೀನಿವಾಸ ನಾಯಕನು ತನ್ನ ಹಣದ ಮೋಹವನ್ನು ತ್ಯಜಿಸಿ ಸಂತರ ಸಾಲಿಗೆ  ಸೇರಿಸಿ ಪಾತ್ರ ನಿರ್ವಹಣೆ ಮಾಡಿಸಬೇಕೆಂದು ಬಯಸಿದ್ದಂತೆ ಕಾಣುತ್ತದೆ……ಅದರ ಸಲುವಾಗಿ ಒಂದು ದಿನ……

ಶ್ರೀ ಹರಿಯು ಬಡ ಬ್ರಾಹ್ಮಣ ನ ವೇಷವನ್ನು ಧರಿಸಿ, ತನ್ನ ಮಗನ ಆಚಮನ ಕಾರ್ಯಕ್ಕಾಗಿ ಶ್ರೀನಿವಾಸನ ಬಳಿ ಹಣವನ್ನು  ಬೇಡಲು ಬಂದಿದ್ದನು, ಆದರೆ ಶ್ರೀನಿವಾಸನು ಅವನ ಯಾವ ಮಾತುಗಳನ್ನು ಕೇಳಿಸದಂತೆ ನಡೆದುಕೊಂಡಿದ್ದನು,  ದಿನಗಳು ಉರುಳಿದರೂ ಶ್ರೀನಿವಾಸನು ಆ ಬಡ ಬ್ರಾಹ್ಮಣನಿಗೆ ಏನನ್ನು ಕೊಡಲಿಲ್ಲ. ಆದರೆ ಬ್ರಾಹ್ಮಣನು ಸುಮ್ಮನಿರದೆ  ಹಲವು ಬಾರಿ ಶ್ರೀನಿವಾಸನ ಬಳಿಗೆ ಹಣವನ್ನು ಬೇಡಲು ಬಂದಿದ್ದನು. ಆದರೆ ಶ್ರೀನಿವಾಸನಿಂದ ಮೊದಲಿನ ವರ್ತನೆಯೇ ಉತ್ತರವಾಗಿತ್ತು. ಹೀಗೆಯೇ ಸುಮಾರು ಆರು ತಿಂಗಳುಗಳ ಕಾಲ ಇದೇ ಪುನರಾವರ್ತನೆ ಆಗಲು, ಶ್ರೀನಿವಾಸನು ಹೇಗಾದರೂ ಮಾಡಿ  ಆ ಬಡ ಬ್ರಾಹ್ಮಣನಿಂದ ತಪ್ಪಿಸಿಕೊಳ್ಳಲು, ತನ್ನಲಿದ್ದ ಹಳೆಯ ಸವಕಲು ನಾಣ್ಯಗಳನ್ನು ಅವನ ಮುಂದೆ ಸುರಿದು ಅದರಲ್ಲಿ ಒಂದನ್ನು ಆಯ್ದುಕೊಳ್ಳಲು ಹೇಳಿ ಮತ್ತೆಂದೂ ತಿರುಗಿ ನೋಡಬೇಡ ಎಂದು ಹೇಳಿದನು.

ಬ್ರಾಹ್ಮಣನು ತೋರಿಕೆಯಲ್ಲಿ ಕುಸಿದವನಂತೆ ತೋರಿಸಿಕೊಳ್ಳುತ್ತಾ, ಹೊರಟುಹೋಗಿದ್ದನು.

ನಾಯಕನ ಪತ್ನಿಯಾದ ಸರಸ್ವತಿಯು  ಸಹೃದಯದವಳಾಗಿದ್ದು ತನ್ನ ಗಂಡನನ್ನು ತಿದ್ದಲು ಪ್ರಯತ್ನಿಸಿ ಸೋತಿದ್ದಳು.  ಇದನ್ನು ತಿಳಿದಿದ್ದ ಬ್ರಾಹ್ಮಣನು ಶ್ರೀನಿವಾಸ ನಾಯಕನ ಅಂಗಡಿಯಿಂದ ನೇರವಾಗಿ ಅವನ ಮನೆಗೆ ಹೋಗಿದ್ದನು.  ಶ್ರೀನಿವಾಸ ನಾಯಕನ ಅಂಗಡಿಯಲ್ಲಿ ನಡೆದದ್ದನ್ನು ಮತ್ತು ಅವಳ ಪತಿ ಏನನ್ನೂ ನೀಡದೇ ಕಳುಹಿಸಿದ್ದು ಎಲ್ಲವನ್ನು ವಿವರಿಸಿ, ಶ್ರೀನಿವಾಸ ನಾಯಕರ ಪತ್ನಿ ಯಲ್ಲಿ ಸಹಾಯ ಬೇಡಿದ್ದನು.

ಪತಿಯ ವರ್ತನೆಯಿಂದ ಗಾಬರಿಯಾದ ಸರಸ್ವತಿಯು, , ಬಡ ಬ್ರಾಹ್ಮಣನಿಗೆ ಸಹಾಯ ಮಾಡಲು ಬಯಸಿದಳು, ಆದರೆ ಪತಿಯ ಅನುಮತಿಯಿಲ್ಲದೆ  ಅವಳು ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲದಿರುವ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಳು.  ಅವಳ ಈ ಅಸಹಾಯಕತೆಯನ್ನು ಅರಿತ ಬ್ರಾಹ್ಮಣನು ತವರಿನವರು ನೀಡಿರುವ ಯಾವುದಾದರೂ ನಡೆಯುತ್ತದೆ ಎಂದು ಹೇಳಿದಾಗ,  ಸರಸ್ವತಿಯು ಒಪ್ಪಿ ತನ್ನ ತಂದೆ ತಾಯಿಯು ನೀಡಿದ್ದ ವಜ್ರದ ಮೂಗುತಿಯನ್ನು  ಅವನಿಗೆ ಕೊಟ್ಟಳು.

ವಜ್ರದ ಮೂಗುತಿಯನ್ನು ತೆಗೆದುಕೊಂಡ ಬ್ರಾಹ್ಮಣ ನೇರ ಶ್ರೀನಿವಾಸ ನಾಯಕನ ಅಂಗಡಿಗೆ ಮಾರಲು ಹೋದನು.  ಮೂಗುತಿಯನ್ನು ಕಂಡ ಶ್ರೀನಿವಾಸ ನಾಯಕನಿಗೆ  ಅದು ತನ್ನ ಪತ್ನಿ ಸರಸ್ವತಿ ಯದು ಎಂದು ಅನುಮಾನ ಬಂದು ಯಾರದು ಎಂದು ಪ್ರಶ್ನಿಸಲು ಒಬ್ಬ ದಾನ ಶೂರನಿಂದ ಪಡೆದೆನೆಂದು ಉತ್ತರಿಸಿದ ಬ್ರಾಹ್ಮಣ.

ಮನೆಗೆ ಬಂದ ಶ್ರೀನಿವಾಸನು  ಪತ್ನಿಯನ್ನು ಕೇಳಲಾಗಿ, ಗಂಡನಿಂದ ನಿಜ ಪರಿಸ್ಥಿತಿಯನ್ನು ಮುಚ್ಚಿಡಲಾಗದ ಸಾದ್ವಿ  ಅಡಗೆ ಮನೆಗೆ ಹೋಗಿ ವಿಷ ಕುಡಿಯಲು ಮುಂದಾಗುತ್ತಾಳೆ, ಆಗ ವಿಷದ ಬಟ್ಟಲಿನಿಂದ ಹೊಳೆಯುವ ಮೂಗುತಿಯು ಕಂಡಿತು. ಸರಸ್ವತಿಗೆ ಹೋದ ಜೀವ ಮತ್ತೆ ಬಂದಂತಾಯಿತು, ಮೂಗುತಿಯನ್ನು ತಂದು ತನ್ನ ಗಂಡನಿಗೆ ತೋರಿಸಿದಳು.

ಮೂಗುತಿಯನ್ನು ಕಂಡ ಶ್ರೀನಿವಾಸನಿಗೆ ಆಶ್ಚರ್ಯ ಉಂಟಾಗಿ ಮತ್ತೆ ಅಂಗಡಿಗೆ ಹೋಗಿ ಪೆಟ್ಟಿಗೆಯನ್ನು ತೆರೆದು ನೋಡಲು ಮೂಗುತಿ ಅಲ್ಲಿರಲಿಲ್ಲ. ಇದರಿಂದ ಆಶ್ಚರ್ಯ ಭರಿತರಾಗಿ, ಮುಜುಗರಕ್ಕೊಳಗಾಗಿ ತನ್ನಲ್ಲೇ ಕುಂಗಿ ಹೋಗಿ ಇದೆಲ್ಲವೂ ಹರಿಯ ಮಾಯೆಯೆ ಇರುವುದು ಎಂದು ಅರಿತರು. ತನ್ನ ಧರ್ಮನಿಷ್ಠ ಹೆಂಡತಿಯನ್ನು ಉಳಿಸಿದ ಶ್ರೀ ಹರಿಯ ಅಸ್ಪಷ್ಟ ಮಾರ್ಗವನ್ನು ಅರಿತು, ನಾನು ಮತ್ತು ನನ್ನದು ಎನ್ನುವ ನಿರಂತರ ಮುಸುಕನ್ನು ನನ್ನ ಮನಸ್ಸಿನಿಂದ ಸರಿಸಿದ ಶ್ರೀ ವಿಷ್ಣುವಿನ ಭಕ್ತನಾದನು.

ನಂತರದ ದಿನಗಳಲ್ಲಿ ಈ ಘಟನೆಯ ಕುರಿತು ಒಂದು ಹಾಡನ್ನು ರಚಿಸುತ್ತಾರೆ, ಭಕ್ತಿಯ ಪಥದಲ್ಲಿ ನಡೆಯಲು ಅವರ ಹೆಂಡತಿಯು ಮಾರ್ಗದರ್ಶನ ನೀಡಿದಕ್ಕಾಗಿ ಆ ರಚನೆಯನ್ನು ಅವರಿಗೆ ಅರ್ಪಿಸುತ್ತಾರೆ.

೩೦ ನೇ ವಯಸ್ಸಿನಲ್ಲಿ ತಮ್ಮ ಅಪಾರ ಸಂಪತ್ತನ್ನು ದಾನ ಧರ್ಮ ಮಾಡಿ, ಕುಟುಂಬ ಸಮೇತರಾಗಿ ವಾಸಸ್ಥಾನವನ್ನು ತೊರೆದು ಧರ್ಮದರ್ಶಿಗಳಾಗಿ ಜೀವನ ನಡೆಸಿದರು. ಭಿಕ್ಷೆಯಿಂದ ಬದುಕುವುದನ್ನು ಪ್ರಾರಂಭಿಸಿ, ವಿಷ್ಣುವಿನ ಮಹಿಮೆಗಳನ್ನು ಹಾಡುತ್ತಾ ಭೋಗ ಜೀವನವು ವ್ಯರ್ಥವೆಂದು ಹರಿನಾಮ ಸ್ಮರಣೆಯು ಮೇಲೆಂದು ಭಾವಿಸಿ  ದಾಸ ಸಾಹಿತ್ಯದಲ್ಲಿ ತೊಡಗುತ್ತಾರೆ.

ಅವರ ಈ ಅಲೆದಾಟದ ಸಮಯದಲ್ಲಿ  ವಿಜಯನಗರದ ಸಾಮ್ರಾಟ ಶ್ರೀ ಕೃಸ್ಣದೇವರಾಯನ  ರಾಜಗುರುವಾದ ಋಷಿ ವ್ಯಾಸತೀರ್ಥರನ್ನು ಭೇಟಿಯಾದರು, ಶ್ರೀನಿವಾಸ ನಾಯಕರು ಸುಮಾರು ೪೦ ವರ್ಷ ವಯಸ್ಸಿನವರಾಗಿದ್ದಾಗ ಅಂದರೆ ೧೫೨೫ ರಲ್ಲಿ ವ್ಯಾಸತೀರ್ಥರಿಂದ ತಮ್ಮ ಔಪಚಾರಿಕ ದೀಕ್ಷೆಯನ್ನು ಪಡೆದರು. ಆಗ ಇವರಿಗೆ ಪುರಂದರದಾಸ ಎಂಬ ಹೆಸರನ್ನು ನೀಡಲಾಯಿತು.

ಪುರಂದರದಾಸರು ವಿಜಯನಗರದಲ್ಲಿ ಮತ್ತು ಪಂಡರಾಪುರದ ಉದ್ದ ಅಗಲಕ್ಕೂ ಸಂಚರಿಸಿ, ದೇವರ ಸ್ತುತಿಯನ್ನು ಮನಕಲಕುವ ಹಾಡುಗಳಲ್ಲಿ ರಚಿಸಿ ಸ್ತುತಿಸಿದ್ದಾರೆ. ಪುರಂದರದಾಸರು ತಮ್ಮ ಕೊನೆಯ ದಿನಗಳನ್ನು ಹಂಪಿಯಲ್ಲಿ ಕಳೆದರು ಮತ್ತು ಕೃಷ್ಣದೇವರಾಯನ ಆಸ್ಥಾನದಲ್ಲಿ ಹಾಡುಗಳನ್ನು ಹಾಡಿದರು. ಹಂಪಿಯಲ್ಲಿ ಅವರು ತಂಗಿದ್ದ ಮಂಟಪವನ್ನು ಪುರಂದರ ದಾಸರ ಮಂಟಪ ಎಂದೇ ಕರೆಯಲ್ಪಡುತ್ತದೆ.

ಪುರಂದರ ದಾಸರು ತಮ್ಮ ೯೫ ನೇ ವಯಸ್ಸಿನಲ್ಲಿ ಅಂದರೆ ಕ್ರಿ.ಶ. ೧೫೬೪ ರಲ್ಲಿ ನಿಧನರಾದರು. ನಿಧನ ವರ್ಷ ಅವರ ಮಗ ಮಧ್ವಪತಿ ನೀಡಿದ್ದು ಎಂದು ದಾಖಲಿಸಲಾಗಿದೆ.

ವೈವಿಧ್ಯಮಯವಾದ ದಕ್ಷಿಣ ಭಾರತೀಯ ಸಂಪ್ರದಾಯಗಳ ಮತ್ತುವೇದಗಳಲ್ಲಿ ವಿವರಿಸಿರುವ ಸಂಗೀತದ ವಿಜ್ಞಾನ ಸಂಶ್ಲೇ಼ಷಣೆ ಮಾಡಿ, ಸಂಗೀತ ವ್ಯವಸ್ಥೆಯನ್ನು ಔಪಚಾರಿಕಗೊಳಿಸಿದರು, ಮತ್ತು ಕರ್ನಾಟಕ ಸಂಗೀತವನ್ನು ಕಲಿಯುವುದು ಹೇಗೆ ಎಂದು ಪಾಠಗಳನ್ನು ಶ್ರೇಣೀಕರಿಸುವ ವ್ಯವಸ್ಥೆಯನ್ನು ಅವರು ಸೂಚಿಸಿದರು, ಒಟ್ಟಾರೆ ಈ ಎಲ್ಲಾ ಕಾರಣಗಳಿಗಾಗಿ ಇವರು ಕರ್ನಾಟಕ ಸಂಗೀತ ಪಿತಾಮಹರೆನಿಸಿದರು.   ಇವರು ಪರಿಚಯಿಸಿದ ಸಂಗೀತ ಕಲಿಸುವ ವಿಧಾನವನ್ನು ಇಂದಿಗೂ ಅನುಸರಿಸಲಾಗುತ್ತಿದೆ.  ಮಾಯಾಮಾಳವಗೋಲ ರಾಗವನ್ನು  ಸಂಗೀತ ಶಿಕ್ಷಣಕ್ಕೆ ಮಾಪಕವಾಗಿ ಗುರುತಿಸಿದರು. ಜಂಟಿ ಸ್ವರಗಳು, ಅಲಂಕಾರಗಳು, ಲಕ್ಷಣ ಗೀತೆಗಳು, ಉಗಾಭೋಗಗಳು, ದಾಟುವರಸೆ ಮುಂತಾದ ಸುಮಾರು ೮೪  ರಾಗಗಳನ್ನು ಪುರಂದರ ದಾಸರು ಗುರುತಿಸಿದ್ದಾರೆ.

ಇವರ ಮತ್ತೊಂದು ವಿಶೇಷವೆಂದರೆ, ಸಂಗೀತ ಸಂಯೊಜನೆಗಳಲ್ಲಿ  ಭಾವ, ರಾಗ ಮತ್ತು ಲಯಗಳ ಸಂಮಿಲನ. ಜಾನಪದ ರಾಗಗಳನ್ನು ಮುಖ್ಯವಾಹಿನಿಗೆ ತರುವ ಮೂಲಕ ಸಾಹಿತ್ಯದಲ್ಲಿ ಸಾಮಾನ್ಯ ದೈನಂದಿನ ಜೀವನ ಮತ್ತು ಆಡುಮಾತಿನ ಅಂಶಗಳಿಗೆ ಹೆಚ್ಚಿನ ಒತ್ತನ್ನು ಕೊಟ್ಟರು. ಇದರಿಂದ ಸಾಮಾನ್ಯ ಜನರು ಸಹ ದಿನನಿತ್ಯದ ರಾಗಗಳಿಗೆ ಹೊಂದಿಸಿ  ಹಾಡಬಹುದು ಮತ್ತು ಕಲಿಯಬಹುದು ಎಂಬುದು ಅವರ ನಿಷ್ಠೆ.

ದಂತಕತೆಯ ಪ್ರಕಾರ ಪುರಂದರ ದಾಸರು ಸುಮಾರು ೪೭೫೦೦೦ ಹಾಡುಗಳನ್ನು ಕನ್ನಡ ಮತ್ತು ಸಂಸ್ಜೃತದಲ್ಲಿ ಬರೆದಿದ್ದಾರೆಂದು ನಂಬಲಾಗಿದೆ, ಆದರೆ ಪ್ರಸ್ತುತ ನಮಗೆ ಲಭ್ಯವಿರುವುದು ೧೦೦೦ ಹಾಡುಗಳು ಮಾತ್ರ.

ಪುರಂದರದಾಸರ ಗೀತೆಗಳು, ವಿಶೇಷವಾಗಿ ಭಗವಾನ್‌ ಶ್ರೀ ವಿಷ್ಣುವಿನ, ಹಾಗೂ ಪ್ರಮುಖವಾಗಿ ಶ್ರೀ ಕೃಷ್ಣನ ಭಕ್ತಿಯ ಕುರಿತೇ ರಚಿತವಾಗಿವೆ. ಶ್ರೀ ಕೃಷ್ಣನ ಜೀವನ ಅನುಭವದ ಹಾಡುಗಳನ್ನು ಹಾಡುತ್ತಾರೆ. ಇದರ ಹಲವು ಹಾಡುಗಳಲ್ಲಿ ಸಮಾಜದಲ್ಲಿ  ಪ್ರಚಲಿತವಿರುವ ಆಡಂಬರ ಮತ್ತು ದುರ್ಗುಣಗಳನ್ನು ವಿಡಂಭಿಸಲು ಬಳಸಿದ್ದಾರೆ.

ನಿಜವಾದ ದಯೆ ಮತ್ತು ಸಮರ್ಪಣೆ ಭಾವ ಕೊರತೆಯಿರುವ, ಮೆಲುನೋಟಕ್ಕೆ ಭಕ್ತಿಯ ಗುಣಲಕ್ಷಣಗಳನ್ನು ಪ್ರದರ್ಶಿಸುವ ನಕಲಿ ಭಕ್ತರನ್ನು ಅಪಹಾಸ್ಯ ಮಾಡುತ್ತಾರೆ.

ಪುರಂದರದಾಸರು ತಮ್ಮ ಹಾಡುಗಳ ಮೂಲಕ ಜಾತಿಯತೆಯ ಅನಿಷ್ಟಗಳ ವಿರುದ್ದ ಹೋರಾಡಿದರು,

ಆವಕುಲಾವಾದರೇನು ಅವನಾದರೇನೂ ಆತ್ಮ ಭಾವವರಿಯದ ಮೇಲೆ?  ಮಾನವತಾವಾದದ ಮನೋಭಾವನೆಯನ್ನು ಆರ್ಥ ಮಾಡಿಕೊಳ್ಳದೆ ಯಾವುದೇ ಜಾತಿಗೆ ಸ್ಥಾನಮಾನ ನೀಡಿದರೇನು ಪ್ರಯೋಜನ? ಎಂದು ಅವರು ಆಶ್ಚರ್ಯಪಡುತ್ತಾರೆ.

ಬಾಗಿದ ಕಬ್ಬಿನ ಮಾಧರ್ಯವು ವಕ್ರವಾಗಿದೆಯೇ? ಅನೇಕ ಬಣ್ಣದ ಹಸುಗಳ ಹಾಲಿನ ಬಣ್ಣವೂ ಅನೇಕ ಬಣ್ಣವಾಗಿರುತ್ತದೆಯೇ ಎಂದು ಅವರು ಪ್ರಶ್ನಿಸುತ್ತಾರೆ.

ಅಸ್ತಿತ್ವದಲ್ಲಿರುವ ಸಾಮಾಜಿಕ ಪರಿಸ್ಥಿತಿಗಳಲ್ಲಿ ಸುಧಾರಣೆ ತರಲು ಪ್ರಯತ್ನಿಸಿದರು, ಸ್ತಳೀಯ ಕನ್ನಡ ಭಾಷೆಯ ಮೂಲಕ ಭಕ್ತಿಗೀತೆಗಳನ್ನು ಭೋದಿಸಿದರು.

ಪುರಂದರದಾಸರ ತತ್ವಶಾಸ್ತ್ರವು  ಹಿಂದೂ ಧರ್ಮದ  ಭಕ್ತಿಯ ಪರಿಕಲ್ಪನೆಯೊಂದಿಗೆ ಸಾಮರಸ್ಯ ಹೊಂದಿದೆ, ಮತ್ತು ನಾರದ ಭಕ್ತಿ ಸೂತ್ರಗಳನ್ನು ಆಧರಿಸುವ ಮೂಲಕ ಪ್ಯಾನ್‌ -ಇಂಡಿಯಾ ಭಕ್ತಿ ಚಳುವಳಿಯೊಂದಿಗೆ ಸಮಕಾಲೀನವಾಗಿದೆ.

ಪ್ರಪಂಚದ ಕ್ಷಣಿಕ ಸುಖಗಳು ಮತ್ತು ಆಸ್ತಿಗಳಿಂದ ಮನಸ್ಸನ್ನು ದೂರವಿಡಬೇಕು. ಬದಲಾಗಿ ಮನಸ್ಸನ್ನು ವಿಷ್ಣುವಿನ ಕಡೆಗೆ ತಿರುಗಿಸಿ ಶುದ್ಧವಾದ ಅಚಲವಾದ ಆನಂದವನ್ನು ಹೊಂದುವಲ್ಲಿ ಮನಸ್ಸನ್ನು ದೂಡಬೇಕು.  ಇದು ಪುರಂದರರ ಜೀವನದ ಉದ್ದೇಶವೂ ಕೂಡ ಆಗಿತ್ತು.

 

ಧನ್ಯವಾದಗಳು..🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......