ವಾಸವಿ ಅಗ್ನಿಪ್ರವೇಶ ದಿನ (ಪುರಾಣ ಪುಣ್ಯಕಥೆ)
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹಿಂದೂಗಳು
ಪೂಜಿಸುವ ಆದಿಶಕ್ತಿ ಯ ಕಲಿಯುಗದ ಅವತಾರವೆಂದೇ ನಂಬಿದ , ವೈಶ್ಯ ರ ದೇವತೆ ವಾಸವಿ ಕನ್ಯಕಾಪರಮೇಶ್ವರಿ
ದೇವಿಯು ಅಗ್ನಿ ಪ್ರವೇಶ ಮಾಡಿದ ದಿನ.
ಕನ್ಯಕಾಪರಮೇಶ್ವರಿಯು
ಆರ್ಯವೈಶ್ಯ ಪಂಥದ ಕುಲದೇವತೆಯಾಗಿ ಪೂಜಿಸಲ್ಪಡುತ್ತಾಳೆ,
ಇಂದಿಗೂ ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಗಳಲ್ಲಿ ಈ ಪಂಥದವರು ವಾಸಿಸುತ್ತಿದ್ದಾರೆ.
ಆಂಧ್ರಪ್ರದೇಶದ
ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡದಲ್ಲಿ ವಾಸವಿ
ಕನ್ಯಕಾ ಪರಮೇಶ್ವರಿಯ ಅತಿ ದೊಡ್ಡ ದೇವಾಲಯವಿದೆ. ಏಳು
ಅಂತಸ್ತುಗಳುಳ್ಳ ಗಾಲಿ ಗೋಪುರವು ಅದ್ಭುತ ಶಿಲ್ಪಕಲಾಕೃತಿಗಳಿಂದಲೂ ಮನಮೋಹಕವಾದ ಬಣ್ಣಗಳಿಂದ ಸಿಂಗರಿಸಿದ ಅದ್ಬುತ ದೇವಾಲಯವೆನಿಸಿದೆ.
ಇದು ವೈಶ್ಯರ ಪವಿತ್ರ ಸ್ಥಳವಾಗಿದೆ. ವೈಶ್ಯ ಪಂಥದ
ಹೆಚ್ಚು ಜನರು ಇಲ್ಲಿಯೇ ವಾಸಿಸುತ್ತಿದ್ದಾರೆ.
೧೦
, ೧೧ ನೇ ಶತಮಾನದಲ್ಲಿ ವೆಂಗಿಯ ದೇಶವನ್ನು ಆಳುತ್ತಿದ್ದ ಒಬ್ಬ ಅತ್ಯುತ್ತಮ ವೈಶ್ಯ ರಾಜ ಕುಸುಮಾಂಬ
ಶ್ರೇಷ್ಠಿ, ಅವನ ಪತ್ನಿ ಕುಸುಮಾ ಇಬ್ಬರೂ ಆದರ್ಶ ದಂಪತಿಗಳಾಗಿ ರಾಜ್ಯಬಾರ ಮಾಡುತ್ತಿದ್ದರು. ಪೆನೊಗೊಂಡವನ್ನು ರಾಜಧಾನಿಯಾಗಿ ಮಾಡಿಕೊಂಡು ೧೮ ಪರಗಣಗಳನ್ನು
ಆಳ್ವಿಕೆ ಮಾಡುತ್ತಿದ್ದರು.
ಈ ಪ್ರದೇಶ ಎಲ್ಲವೂ
ವಿಮಲಾದಿತ್ಯ (ವಿಷ್ಣುವರ್ಧನ) ನ ನಿಯಂತ್ರಣದಲ್ಲಿತ್ತು.
ಕುಸುಮಾ ಶ್ರೇಷ್ಠಿಯು
ಶಾಂತಿಯುತವಾಗಿ ರಾಜ್ಯಬಾರ ಮಾಡುತ್ತಿರುವಾಗ, ದೇವರ ದೇವ ಮಹಾದೇವರ ಆರಾಧನೆಯನ್ನು ನಿತ್ಯ ಜೀವನದ ಒಂದು
ಭಾಗವಾಗಿಸಿ, ಪ್ರಜೆಗಳನ್ನು ಪಾಲನೆ ಪೋಷಣೆ ಮಾಡುತ್ತಿದ್ದರು. ಹೀಗಿರುವಾಗ ಹಲವು ವರ್ಷಗಳು ಕಳೆಯುತ್ತಿರಲು, ದಂಪತಿಗೆ ಸಂತಾನ
ಪ್ರಾಪ್ತಿಯಾಗುವುದಿಲ್ಲ.
ದಂಪತಿಗಳು ತಮ್ಮ
ಸಾಮ್ರಾಜ್ಯದ ಉತ್ತರಾಧಿಕಾರಿಯ ಕುರಿತು ಚಿಂತಿತರಾಗಲು, ಹಲವು ಪೂಜೆ ಪ್ರಾರ್ಥನೆ, ದಾನ ಧರ್ಮ, ಇತ್ಯಾದಿಗಳನ್ನು
ಮಾಡಿದರೂ ಕುಸುಮಾಂಬರ ವಂಶ ಚಿಗುರುವುದರ ಯಾವುದೇ ಸೂಚನೆ ಕಾಣುವುದಿಲ್ಲ.
ಹೀಗಿರುವಾಗ ಸಂತಾನ
ಪ್ರಾಪ್ತಿಗಾಗಿ ಏನು ಮಾಡಿದರೆ ಒಳಿತಾಗುತ್ತದೆ ಎಂದು ತಿಳಿಯಲು, ತಮ್ಮ ಕುಲಪುರೋಹಿತ ರಾಜ ಗುರುಗಳಾದ
ಭಾಸ್ಕರಾಚಾರ್ಯರನ್ನು ಭೇಟಿ ಮಾಡುತ್ತಾರೆ.
ಗುರುಗಳಾದ ಭಾಸ್ಕರಾಚಾರ್ಯರು,
ಕುಸುಮಾಂಬ ದಂಪತಿಗಳಿಗೆ , ತ್ರೇತಾಯುಗದಲ್ಲಿ ಪುತ್ರಸಂತಾನಕ್ಕಾಗಿ ದಶರಥ ಮಹಾರಾಜರು ನಡೆಸಿದ ಪುತ್ರಕಾಮೇಷ್ಠಿ
ಯಾಗವನ್ನು ಮಾಡಲು ಸೂಚಿಸುತ್ತಾರೆ, ಈ ಮೂಲಕ ವಂಶೋದ್ದಾರದ
ವಿಚಾರದಲ್ಲಿ ಚಿಂತಿತರಾಗಿದ್ದ ಕುಸುಮಾಂಬ ದಂಪತಿಗಳಿಗೆ ಹೊಸದೊಂದು ಆಶಾ ಕಿರಣವೊಂದು ಕಂಡಂತಾಗುತ್ತದೆ.
ಕುಸುಮಾಂಬಶೆಟ್ಟಿಯು
ಪತ್ನಿ ಸಮೇತ ಪುಣ್ಯ ಕಾಲದಲ್ಲಿ ಯಾಗವನ್ನು ನೆರವೇರಿಸಿದರು, ಅಗ್ನಿದೇವರು ಫಲದ ರೂಪದಲ್ಲಿ ಯಾಗದ ಪುಣ್ಯವನ್ನಿತ್ತು
ಆಶೀರ್ವದಿಸಿದರು. ಕೆಲವು ದಿನಗಳಲ್ಲಿ ಕುಸುಮಾಂಬಳಲ್ಲಿ ಗರ್ಭಿಣಿಯ ಲಕ್ಷಣಗಳು ಕಂಡುಬಂದವು. ಈ ಸಮಯದಲ್ಲಿ ಆಕೆ ಅಸಮಾನ್ಯ ಆಸೆಗಳನ್ನು ವ್ಯಕ್ತಪಡಿಸುತ್ತಿದ್ದಳು.
ಇದು ಭವಿಷ್ಯದಲ್ಲಿ ಉತ್ತಮ ಮಕ್ಕಳ ಜನನವಾಗುವುದರ ಸಂಕೇತವಾಗಿದ್ದವು.
ಅದು ವಸಂತ ಋತುವಿನ
ವೈಶಾಖ ಶುದ್ದ ದಶಮಿ , ಉತ್ತರ ನಕ್ಷತ್ರ ಕನ್ಯಾ ರಾಶಿಯಲ್ಲಿ ಅವಳಿ ಮಕ್ಕಳಿಗೆ ಕುಸುಮಂಬೆಯು ಜನ್ಮ ನೀಡಿದಳು.
ಮಗನಿಗೆ ವಿರುಪಾಕ್ಷ
ಎಂದು ಮಗಳಿಗೆ ವಾಸವಾಂಬ ಎಂದು ಹೆಸರಿಟ್ಟರು. ಬಾಲ್ಯದಿಂದಲೇ ವಿರೂಪಾಕ್ಷನು ಭವಿಷ್ಯದ ರಾಜನಿಗಿರಬೇಕಾದ ಎಲ್ಲಾ ಅರ್ಹತೆಗಳನ್ನು
ಪ್ರದರ್ಶಿಸಿದನು. ಮತ್ತು ಯುದ್ದಕಲೆ, ಕುದುರೆಸವಾರಿ, ಬಿಲ್ಲುಗಾರಿಕೆ, ಕತ್ತಿವರಸೆ ಎಲ್ಲವನ್ನೂ ಕಲಿತನು.
ವಾಸವಿಯು ಕಲೆ
ಸಂಗೀತ ತರ್ಕಶಾಸ್ತ್ರ ಎಲ್ಲವನ್ನು ಕಲಿತು ಬುದ್ದಿವಂತ ಹುಡುಗಿ ಎನಿಸಿದಳು.
ವಿರುಪಾಕ್ಷನು
ಪ್ರಾಯಕ್ಕೆ ಬಂದಮೇಲೆ ಆಲೇರುವಿನ ಆರಿಧಿಯ ಶ್ರೇಷ್ಠಿ ಯ ಮಗಳು ರತ್ನಾವತಿಯೊಂದಿಗೆ ವಿವಾಹ ಮಾಡಿದರು.
ಚಾಲುಕ್ಯರ ವಿಷ್ಣುವರ್ಧನನು
ತನ್ನ ದಿಗ್ವಿಜಯ ಯಾತ್ರೆಯಲ್ಲಿರುವ ಸಮಯದಲ್ಲಿ ಪೆನುಗೊಂಡಕ್ಕೆ ಬೇಟಿ ನೀಡಿದನು, ಆಗ ಜನಾರ್ಧನನ ಸೇವೆಗೆ
ಹೋಗುತ್ತಿದ್ದ ವಾಸವಾಂಬಳು ಅವನ ಕಣ್ಣಿಗೆ ಬಿದ್ದಳು.
ಅವಳ ರೂಪ ಅವನನ್ನು ಸೆಳೆಯಿತು, ನೋಡಿದಾಗಲೇ ವಾಸವಾಂಬಳ ಮೋಹದಲ್ಲಿ ಬಿದ್ದನು, ಅವಳನ್ನು ಬಿಟ್ಟು
ಇರಲಾರೆನು ಎಂಬಂತೆ ಪ್ರೀತಿಸಿದನು. ತಕ್ಷಣವೇ ಅವಳೊಂದಿಗೆ ವಿವಾಹ ನಿಶ್ಚಯಕ್ಕಾಗಿ ತನ್ನ ಮಂತ್ರಿಗಳನ್ನು
ಕಳುಹಿಸಿದನು.
ಕುಸುಮಾಂಬಶ್ರೇಷ್ಠಿಯು
ವಿವಾಹದ ಈ ಪ್ರಸ್ತಾಪವನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಆಗದಂತಹ ಸಂದಿಗ್ದ ತೆಗೆ ಸಿಲುಕಿದನು. ವಯಸ್ಸಿನ ಅಂತರ ಮತ್ತು ಜಾತಿ ವ್ಯವಸ್ಥಯು ಕಾರಣವಾಗಿ ವಿವಾಹ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ. ಒಂದು ವೇಳೇ
ವಿವಾಹ ತಿರಸ್ಕರಿಸಿದರೆ ವಿಷ್ಣುವರ್ಧನನು ಯುದ್ದಮಾಡಲು ಮುಂದಾಗುತ್ತಾನೆ. ಹೀಗಿರುವಾಗ
ವಾಸವಾಂಬಳು ತಾನು ಶ್ರೀಹರಿಯನ್ನು ಮಾತ್ರವೇ ವರಿಸುವುದಾಗಿ
ಅವರ ಕೋರಿಕೆಯನ್ನು ನಿರಾಕರಿಸಿದಳು.
ವಿವಾಹ ಮುಹೂರ್ತಕ್ಕೆ ಇದು ಸುಸಮಯವಲ್ಲವೆಂದು ತಿಳಿಸಿ ವಿಷ್ಣುವರ್ಧನನ್ನು ಹಿಂತಿರುಗಿಸಿ
ಕಳುಹಿಸಿದ್ದರು.
ಕುಸುಮಾಂಬಶ್ರೇಷ್ಠಿಯು
ಈ ಸಮಸ್ಯೆಯಿಂದ ಪಾರಾಗಲು ತನ್ನ ಭಾಸ್ಕರಾಚಾರ್ಯರ ನೇತೃತ್ವದಲ್ಲಿ
ಮಂತ್ರಿಮಂಡಲದೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಮುಂದಾದನು. ೧೮ ಪರಗಣಗಳ
೭೧೪ ಗೋತ್ರಗಳ ಮುಖಂಡರೊಂದಿಗೆ ತುರ್ತು ಸಭೆಯನ್ನು ಘೋಷಿಸಿದರು.
ಕುಸುಮಾಂಬ ಶ್ರೇಷ್ಠಿಯವರೊಡಗೂಡಿ
೧೦೨ ಗೋತ್ರದ ಕುಟುಂಬದವರೊಂದಿಗೆ ವಿಷ್ಣವರ್ಧನನ ವಿವಾಹ ಸಾಧ್ಯವಿಲ್ಲ. ಉಳಿದ ೬೧೨ ಗೋತ್ರಗಳು ವಿಷ್ಣುವರ್ಧನನೊಂದಿಗೆ
ವಿವಾಹ ಯೋಗ್ಯವಾಗಿದ್ದವು. ಇದರಿಂದ ವೈಶ್ಯರ ಒಗ್ಗಟ್ಟು
ಹಾಳಾಯಿತು.
ಭಾಸ್ಕರಾಚಾರ್ಯರು
ವಾಸವಾಂಬಳ ವಿವಾಹವನ್ನು ವಿಷ್ಣುವರ್ಧನನೊಂದಿಗೆ ಮಾಡಿ ತಮ್ಮ ಕುಲಗೌರವಕ್ಕೆ ಮಸಿಬಳಿಯಲು ಸಿದ್ದರಿರಲಿಲ್ಲ.
ತಮ್ಮ ಕಡೆ ಕಡಿಮೆ ಜನರಿದ್ದರೂ ಯುದ್ದಕ್ಕೆ
ಸಿದ್ದರಾಗಿ ವಿವಾಹವನ್ನು ನಿರಾಕರಿಸಿ ಹೇಳಿಕಳುಹಿಸಿದರು.
ಇದರಿಂದ ಕುಪಿತಗೊಂಡ
ವಿಷ್ಣುವರ್ಧನನು ಸೈನ್ಯವನ್ನು ಸಿದ್ದಮಾಡಿ ಯುದ್ದಕ್ಕೆ ಹೊರಟು ಬಂದನು.
ಸಬೆಗೆ ಬಂದ ವಾಸವಾಂಬಳು
ಯುದ್ದವನ್ನು ನಾವು ಮಾಡುವುದರಿಂದ ರಕ್ತಪಾತ ವಾಗುತ್ತದೆ, ಇದರಿಂದ ಸೈನಿಕರ ಸಾವಾಗುತ್ತದೆ. ನಾವು ಈ
ಯುದ್ದವನ್ನು ಅಹಿಂಸಾತ್ಮಕವಾಗಿ ತ್ಯಾಗ ಮಾಡೋಣ, ಯಾವುದೇ ರಕ್ತಪಾತ ಬೇಡ ಎಂದಳು. ಆಗ ೧೦೨ ಗೋತ್ರದ ಪೋಷಕರು ಅವಳ ಮಾತನ್ನು ಅನುಸರಿಸಿದರು.
ವಾಸವಿಯ ಸೂಚನೆಯಂತೆ
ರಾಜಭಟರು ಗೋದಾವರಿಯ ನದಿ ದಡದಲ್ಲಿರುವ ಬ್ರಹ್ಮಕುಂಡದಲ್ಲಿ
೧೦೩ ಅಗ್ನಿಕುಂಡಗಳನ್ನು ಸ್ಥಾಪಿಸಿದರು. ವಾಸವಿ
ದಂಪತಿಗಳನ್ನು ಉದ್ದೇಶಿಸಿ ನನ್ನೊಂದಿಗೆ ಬೆಂಕಿಗೆ ಹಾರಲು ಸಿದ್ದರಿದ್ದಿರಾ ಎನ್ನಲು ಅವರೆಲ್ಲರೂ ತಮ್ಮ
ಸಿದ್ದತೆಯನ್ನು ವ್ಯಕ್ತಪಡಿಸಿದರು. ದಂಪತಿಗಳು ವಾಸವಿಯೆಡೆಗೆ ಅನುಮಾನ ವ್ಯಕ್ತಪಡಿಸಿ, ತನ್ನ ನಿಜರೂಪ
ತೋರಲು ಬೇಡಿದರು.
ಅವರ ಈ ಬೇಡಿಕೆಗೆ
ಮುಗುಳ್ನಕ್ಕು ತನ್ನ ನಿಜರೂಪವನ್ನು ಪ್ರಜ್ವಲಿಸುವ ಬೆಳಕಿನೊಂದಿಗೆ ತೋರಿಸುವ ಮೂಲಕ ತಾನು ಆದಿಶಕ್ತಿ
ಮಹಾದೇವಿಯ ಅವತಾರ ತಾನು ಕಲಿಯುಗದಲ್ಲಿ ಹುಟ್ಟುದ್ದು ಧರ್ಮವನ್ನು ಎತ್ತಿಹಿಡಿಯಲು ಹೆಣ್ಣಿನ ಘನತೆ ಕಾಪಾಡಲು ವಿಷ್ಣುವರ್ಧನನ್ನ ಅಂತ್ಯಗೊಳಿಸಲು ವೈಶ್ಯಧರ್ಮದ ಔದಾರ್ಯ ಎತ್ತಿಹಿಡಿಯಲು ಎಂದು ಹೇಳಿದಳು. ಸತಿದೇವಿಯಂತೆ ಅಗ್ನಿಕುಂಡಕ್ಕೆ ಹಾರಿ ಪ್ರಾಣ ತ್ಯಾಗ ಮಾಡಿ
ಪುಣ್ಯಲೋಕಕ್ಕೆ ತಲುಪುತ್ತೇನೆ ಅದರಿಂದ ನಿಮ್ಮೆಲ್ಲರನ್ನು ಈ ತ್ಯಾಗಕ್ಕೆ ಆಹ್ವಾನಿಸಿದ್ದೇನೆ. ಆಕೆಯ
ಮಾತು ಮುಗಿಯುತ್ತಿದ್ದಂತೆ ವಾಸವಿಯು ಮಾನವ ರೂಪ ತಾಳಿದಳು.
ಎಲ್ಲರೂ ತಮ್ಮ ಇಷ್ಟದೇವರನ್ನು ಪ್ರಾರ್ಥಿಸಿ ಅಗ್ನಿಕುಂಡಕ್ಕೆ ಹಾರಿದರು.
ವಿಷ್ಣುವರ್ಧನನು
ಪೆನುಗೊಂಡದ ಹೊರವಲಯಕ್ಕೆ ಬಂದಾಗ ದೂತನು ನಡೆದ ವಿಷಯವನ್ನು ಅರುಹಿದನು. ಈ ಸತ್ಯ ಅರಿತ ವಿಷ್ಣುವರ್ಧನನ
ಹೃದಯ ಛಿದ್ರವಾಗಿ ರಕ್ತಕಾರಿ ಸ್ಥಳದಲ್ಲೆ ಸಾವನ್ನಪ್ಪಿದನು.
ವಿಷ್ಣುವರ್ಧನನ
ಸಾವು, ವಾಸವಿಯ ಆತ್ಮಾಹುತಿ ಊರಲ್ಲೆಲ್ಲಾ ಹರಡಿತು. ವಿಷಯ ತಿಳಿದ ವಿಷ್ಣುವರ್ಧನನ ಮಗ ರಾಜ ನರೇಂದ್ರನು
ಪೆನುಗೊಂಡಕ್ಕೆ ಆಗಮಿಸಿದನು. ವಿರೂಪಾಕ್ಷನು ಅವನಿಗೆ ಸಾಂತ್ವನ ಮಾಡಿ, “ ಹಿಂದಿನ ಅನುಭವಗಳಿಂದ ಬುದ್ದಿ
ಕಲಿತು ಮುಂದಿನ ಭವಿಷ್ಯವನ್ನು ರೂಪಿಸೋಣ, ವಾಸವಿ ನಮ್ಮೆಲ್ಲರನ್ನು ದೊಡ್ಡ ರಕ್ತಪಾತದಿಂದ ರಕ್ಷಿಸಿದರು,
ಅಹಿಂಸಾ ತ್ಯಾಗದ ಮೂಲಕ ಉತ್ತಮ ಫಲಿತಾಂಶ ನೀಡಿತು” ಎಂದನು.
ಭಾಸ್ಕರಾಚಾರ್ಯರ
ಆದೇಶದ ಮೆರೆಗೆ ವಿರೂಪಾಕ್ಷನು ಕಾಶಿ, ಗಯಾ ಮುಂತಾದ ಅನೇಕ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದನು.
ಪೆನುಗೊಂಡವನ್ನು ಪವಿತ್ರ ಸ್ಥಳವಾಗಿ ಮಾಡಲು ೧೦೧ ಗೋತ್ರಗಳ
ಸಂಕೇತವಾಗಿ ಶಿವಲಿಂಗಗಳನ್ನು ಸಾಪಿಸಿದನು. ವಾಸವಿಯ ಗೌರವ ಮೂರ್ತಿಯನ್ನು ಸ್ಥಾಪಿಸಿ ವಾಸವಿ ಕನ್ಯಕಾ
ಪರಮೇಶ್ವರಿ ಯನ್ನು ವೈಶ್ಯ ಜಾತಿಯ ದೇವತೆಯಾಗಿ ಪೂಜಿಸಲು ಪ್ರಾರಂಬಿಸಿದರು.
ವಾಸವಿಯ ಪೂರ್ವ
ಜನ್ಮವೃತ್ತಾಂತ
ಹಿಂದೆ
ಪಾಂಡ್ಯ ದೇಶದಲ್ಲಿ ವಿಷ್ಣು ಚಿತ್ತನೆಂಬ ಬ್ರಾಹ್ಮಣನಿದ್ದನು. ಸದಾ ವಿಷ್ಣುವಿನ ಚಿಂತೆಯಲ್ಲಿದ್ದುದರಿಂದ
ಅವನಿಗೆ ವಿಷ್ಣು ಚಿತ್ತನೆಂಬ ಹೆಸರು. ಬ್ರಾಹ್ಮಣನು
ಪ್ರತಿದಿನವೂ ವಿಷ್ಣುವಿನ ಧ್ಯಾನದಲ್ಲಿ ಹೂವಿನ ತೋಟವೊಂದನ್ನು ಮಾಡಿಕೊಂಡು ಹೂ ಮಾಲೆಯನ್ನು ಮಾಡಿ ಪ್ರತಿದಿನವೂ
ರಂಗನಾಥನಿಗೆ ಅರ್ಪಿಸುತ್ತಾ ತುಳಸಿ ವನದಲ್ಲಿ ವಾಸ ಮಾಡುತ್ತಿದ್ದನು.
ಹೀಗಿರುವಾಗ ದೈವಕೃಪೆಯಿಂದ
ವಿಷ್ಣುಚಿತ್ತನಿಗೆ ಮಹಾಲಕ್ಷ್ಮಿಯು ರೂಪದಲ್ಲಿ ಗೋದಾ
ಎಂಬ ಮಗಳು ಜನಿಸಿದಳು. ಗೋದಾಳು ಬೆಳೆಯುತ್ತಾ ತಂದೆಯೊಂದಿಗೆ
ರಂಗನಾಥ ದೇವಸ್ಥಾನಕ್ಕೆ ಹೋಗಿಬರುತ್ತಾ, ಪುಷ್ಪಾರ್ಚನೆಗಳನ್ನು ಮಾಡುತ್ತಿದ್ದಳು.
ಗೋಪಿಯರು ಆಚರಿಸಿದ
ಮಾರ್ಗಶೀರ್ಷ ವೃತವನ್ನಾಚರಿಸಿ ರಂಗನಾಥನ್ನೇ ತನ್ನ ಪತಿಯೆಂದು ಭಾವಿಸಿ, ಸಖಿಯರೊಂದಿಗೆ ಹಾಡುತ್ತಾ ಕುಣಿಯುತ್ತಾ ದ್ರಾವಿಡ ಭಾಷೆಯಲ್ಲಿ ತಾನು ರಚಿಸಿದ
ಹಾಡುಗಳನ್ನು ಹೇಳಿಕೊಡುತ್ತಿದ್ದಳು.
ಗೋದಾಳಿಗೆ ವಿವಾಹದ
ವಯಸ್ಸು ಸನ್ನಿಹಿತವಾಗಲು, ವಿಷ್ಣುಚಿತ್ತನು ಸೂಕ್ತ ವರನಿಗಾಗಿ ಹುಡುಕಾಟ ಆರಂಭಿಸಿದನು. ಇದನ್ನರಿತ
ಗೋದಾಳು ತನ್ನ ತಂದೆಗೆ, “ನಾನು ರಂಗನಾಥನನ್ನೆ ನನ್ನ ಪತಿಯಾಗಿ ಸ್ವೀಕರಿಸಿದ್ದೇನೆ, ಅವನನ್ನು ಬಿಟ್ಟು
ಬೇರೊಬ್ಬ ಪುರುಷನನ್ನ ನಾನು ಮುಟ್ಟುವುದಿಲ್ಲ, ಮಾತಾಡುವುದಿಲ್ಲ, ನನ್ನ ಪಾದಗಳನ್ನು ಸಹ ಬೇರೊಬ್ಬರು
ಸೋಕಲು ಬಿಡುವುದಿಲ್ಲ. ನನ್ನ ಸ್ವರೂಪ, ನನ್ನ ಗತಿ, ನನ್ನ ಯೌವ್ವನ, ನನ್ನ ಪ್ರಾಣ ಎಲ್ಲವೂ ಶ್ರೀಮನ್ನನಾರಾಯಣನಿಗೆ
ಸಮರ್ಪಿತ. ನನಗೆ ವರಾನ್ವೇಷಣೆ ಮಾಡಿ ಪಾಪ ಮಾಡಬೇಡ ಎಂದು ಹೇಳಿದಳು.”
ಇದನ್ನು ಕೇಳಿದ
ವಿಷ್ಣುಚಿತ್ತನಿಗೆ ಮಗಳ ಮಾತುಗಳಿಗೆ ಆಶ್ಚರ್ಯ ಗೊಂಡನು.
ವಿಷ್ಣುಚಿತ್ತನು
ಹೂವಿನ ಮಾಲೆಗಳನ್ನು ಸಿದ್ದಪಡಿಸಿ, ಪೆಟ್ಟಿಗೆಯಲ್ಲಿಟ್ಟು, ಸ್ನಾನಕ್ಕಾಗಿ ಸರೋವರಕ್ಕೆ ಹೋಗಿದ್ದನು,
ಆಗ ಗೋದಾಳು ದೇವರಿಗೆ ಅರೆಪಿಸಬೇಕಾದ ಹೂವಿನ ಮಾಲೆಗಳನ್ನು ತೆಗೆದುಕೊಂಡು ತಾನೇ ಅಲಂಕರಿಸಿಕೊಂಡು ,
ಕನ್ನಡಿಯ ಮುಂದೆ ನಿಂತು , ತಾನು ರಂಗನಾಥನಿಗೆ ಅರ್ಹಳು ಎಂದು ಬಾವಿಸಿ ಆನಂದ ಪಡುತ್ತಿದ್ದಳು. ಮತ್ತೆ
ಮಾಲೆಯನ್ನು ತೆಗೆದು ಪೆಟ್ಟಿಗೆಯಲ್ಲಿ ಇಡುತ್ತಿದ್ದಳು. ಪ್ರತಿದಿನವೂ ಹೀಗೆಯೇ ಆಗುತ್ತಿರಲು,
ಒಂದು ದಿನ ವಿಷ್ಣುಚಿತ್ತನು ಸಮಯಕ್ಕೆ ಮುಂದೆ ಬರಲು, ಕನ್ನಡಿಯ
ಮುಂದೆ ಮಾಲೆ ಧರಿಸಿ ನಿಂತು ಆನಂದದಲ್ಲಿ ಮೈಮರೆತಿದ್ದ ಮಗಳನ್ನು ಕಂಡು ಕೋಪಗೊಂಡು ಮಾಲೆಗಳು ಅಪವಿತ್ರವಾದವೆಂದು
ಭಾವಿಸಿ, ಮತ್ತೆ ಬೇರೆ ಮಾಲೆಗಳನ್ನು ಸಿದ್ದಪಡಿಸಿ ಮಗಳಿಗೆ ಈ ರೀತಿ ಮಾಡಬಾರದೆಂದು ಹೇಳಿಹೋದನು. ಆ
ದಿನ ರಂಗನಾಥನಿಗೆ ಅರ್ಪಿಸಿದ ಮಾಲೆಗಳು ಒಂದು ಕೂಡ ದೇವರ ಮೂರ್ತಿಯ ಮೇಲೆ ನಿಲ್ಲಲಿಲ್ಲ. ಆ ದಿನ ರಾತ್ರಿ
ವಿಷ್ಣು ಚಿತ್ತನ ಕನಸಿನಲ್ಲಿ ರಂಗನಾಥನು ವರನ ರೂಪದಲ್ಲಿ ಪ್ರತ್ಯಕ್ಷನಾಗಿ, ಬ್ರಾಹ್ಮಣನೇ ನಾನು ನಿನ್ನ
ಬಳಿಗೆ ಕನ್ಯಾಬಿಕ್ಷೆ ಬೇಡಲು ಬಂದಿದ್ದೇನೆ, ನಾಳೆಯಿಂದ ಗೋದಾಳು ಧರಿಸಿದ ಮಾಲೆಯನ್ನೇ ನನಗೆ ಸಮರ್ಪಿಸಬೇಕು
ಎಂದು ಹೇಳಿ ಅದೃಶ್ಯನಾದನು.
ವಿಷ್ಣುಚಿತ್ತನು
ರಂಗನಾಥನ ಬಳಿ ಕ್ಷಮೆ ಬೇಡಿ, ತನ್ನ ಮಗಳು ಗೋದಾಳನ್ನು ರಂಗನಾಥನಿಗೆ ಮದುವೆ ಮಾಡಿದನು. ಅಂದಿನಿಂದ ಗೋದಾಳು
ರಂಗನಾಥನ ಮಂಟಪದಲ್ಲಿಯೇ ವಾಸ ಮಾಡುತ್ತಿದ್ದಳು.
ಗೋದಾಳೊಂದಿಗೆ
ಮಂಟಪದಲ್ಲಿ ಆಡಿಕೊಳ್ಳುತ್ತಿದ್ದ ಬಾಲೆಯಾದ ಅವಳ ವೈಶ್ಯ ಗೆಳತಿ, ಯುವತಿಯಾಗಿ, ಗರ್ಭಿಣಿಯಾಗಿ ತೀರಿಕೊಂಡಳು.
ಮಗಳ ಸಾವಿನಿಂದ ಅವಳ ತಂದೆ ತಾಯಿಯರು ಬಹಳ ದುಃಖಿತರಾದರು, ಮತ್ತು ಮಗಳು ಗೋದಾಳಂತೆ ಸುಂದರಿಯಾಗಿದ್ದುದು
ಮತ್ತು ಅವಳ ಜೊತೆಯೇ ಯಾವಗಲೂ ಇರುತ್ತಿದ್ದರಿಂದ ಆ
ವೃದ್ದ ದಂಪತಿಗಳು ಗೋದಳೊಡನೇ ಮಂಟಪದಲ್ಲಿಯೇ ವಾಸಮಾಡಿದರು.
ಗೋದಾಳಿಂದ ಪರಮಾತ್ಮನ
ಪುಣ್ಯ ಕಥಗಳನ್ನು ಕೇಳಿ ಮಹಾ ಭಕ್ತರಾದರು. ಅವರ ಭಕ್ತಿ ಕಾರುಣ್ಯಗಳಿಗೆ ಮೆಚ್ಚಿ ದೇವಿಯು , ಮುಂದಿನ
ಜನ್ಮದಲ್ಲಿ ನಾನು ನಿಮಗೆ ಮಗಳಾಗಿ ಜನಿಸುತ್ತೇನೆ, ಆಗ ನೀವು ನನ್ನನ್ನು ಶ್ರೀ ಹರಿಗೆ ಕೊಟ್ಟು ವಿವಾಹ
ಮಾಡಿ, ನಿಮಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ವರವಿತ್ತಳು.
ಆ ದಂಪತಿಗಳೆ ಮುಂದೆ
ಕುಸುಮಾಂಬ ಶೆಟ್ಟಿ ಮತ್ತು ಕುಸುಮಾಂಬರಾಗಿ ಜನಿಸಿದರು, ಅವರ ಪುತ್ರಿಯಾಗಿ ವಾಸವಿಯು ಜನಿಸಿದಳು.
ಅಹಿಂಸೆಯನ್ನು ನಂಬಿ ಧಾರ್ಮಿಕ ನಂಬಿಕೆಯನ್ನು
ಎತ್ತಿಹಿಡಿದು ಹೆಣ್ಣಿನ ಸ್ವಾಭಿಮಾನವನ್ನು ಎತ್ತಿಹಿಡಿದ ವಾಸವಿಯ ಜೀವನ ಚರಿತ್ರೆ ಇತಿಹಾಸದಲ್ಲಿ ಅಜರಾಮರವಾಗಿದೆ.
ಇಂದಿಗೂ ವೈಶ್ಯರ
ಮನಸ್ಸಿನಲ್ಲಿ ಶಾಂತಿಯ ಸಂಕೇತವಾಗಿ ವಿಜೇತಳಾಗಿ ಉಳಿದಿದ್ದಾಳೆ.
ಧನ್ಯವಾದಗಳು..🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು