ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಜನವರಿ ೨೮ ರಂದು ಲಾಲ ಲಜಪತ್‌ ರಾಯ್‌ ಜಯಂತಿ - ೨೦೨೫.

 

                     

                                ಪೋಟೋ: ಗೂಗಲ್‌ ಕೃಪೆ

 

                                              ಲಾಲ ಲಜಪತ್‌ ರಾಯ್‌ ಜಯಂತಿ ೨೦೨೫.

ಲಾಲ ಲಜಪತ್‌ ರಾಯ್‌ ರವರ ೧೬೦ ನೇ ಜನ್ಮ ದಿನದ ಕಾರಣ ಈ ಲೇಖನವನ್ನು ನಾನು ಬರೆಯುತ್ತಿದ್ದೇನೆ.

ಕಾರಣ ಸ್ವತಂತ್ರ ಭಾರತದಲ್ಲಿ  ಜೀವಿಸುತ್ತಿರುವ  ಪ್ರತಿಯೊಬ್ಬರ ನಾಗರಿಕರ ಆದ್ಯ ಕರ್ತವ್ಯ ,  ಭಾರತಕ್ಕೆ ಸ್ವತಂತ್ರ  ತಂದುಕೊಡುವಲ್ಲಿ ಶ್ರಮಿಸಿದ ಮಹಾನ್‌ ನಾಯಕರನ್ನು ಸ್ಮರಿಸುವುದು.

ಸ್ವತಂತ್ರ ಪೂರ್ವದಲ್ಲಿ ಭಾರತಕ್ಕೆ ಸ್ವರಾಜ್ಯದ ಕಲ್ಪನೆಯನ್ನು ಕಂಡವರಲ್ಲಿ ಒಬ್ಬರು  ಪಂಜಾಬ್‌ ನ ಕೇಸರಿಯೆಂದೆನಿಸಿದ ಲಾಲ ಲಜಪತ್‌ ರಾಯ್‌ ರವರು.

೧೯ ನೇಶತಮಾನವನ್ನು  ಆಧುನಿಕ ಭಾರತದ ಇತಿಹಾಸದಲ್ಲಿ ಭಾರತೀಯ ಪುನರುಜ್ಜೀವನ ಅಥವಾ ನವೋದಯ ಕಾಲವೆಂದು ಕರೆಯಲಾಗಿದೆ.  ಬ್ರಿಟಿಷ್‌ ಆಡಳಿತದಿಂದ ಉಂಟಾದ ಶಾಂತಿ, ಸುವ್ಯವಸ್ಥೆ , ಇಂಗ್ಲೀಷ್‌ ವಿದ್ಯಾಭ್ಯಾಸದ ಮೂಲಕ ದೊರೆತ ಪಾಶ್ಚಿಮಾತ್ಯ ವೈಚಾರಿಕತೆ ಭಾರತದಲ್ಲಿದ್ದ ಮೂಢನಂಬಿಕೆಗಳನ್ನು ಪ್ರಶ್ನಿಸಲು ಸಹಾಯವಾಯಿತು.

ಇಂಗ್ಲೀಷ್‌ ಭಾಷೆ ಇಡೀ ದೇಶದ ಸಂಪರ್ಕ ಭಾಷೆಯಾಯಿತು, ಭಾಷಾ ಸಂವಹನ ಅನೇಕ ಸಮಾನ ಮನಸ್ಕ ಭಾರತೀಯರನ್ನು ಸೃಷ್ಟಿಸಿತು.

ಇಂಗ್ಲೀಷ್‌ ಶಿಕ್ಷಣ ಪದ್ದತಿ ಜಾರಿಗೆ ಬಂದ ನಂತರ ಭಾರತದಲ್ಲಿ ದೇಶೀಯ ಭಾಷೆಯಲ್ಲಿ ಹಾಗೂ ಇಂಗ್ಲೀಷ್‌ ನಲ್ಲಿ ವರ್ತಮಾನ ಪತ್ರಿಕೆಗಳು ಪ್ರಕಟವಾದವು.

ಭಾರತೀಯರಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳೆಸುವುದರ ಜೊತೆಗೆ ಜಾಗೃತಿ ಮೂಡಿಸಲು ವೃತ್ತ ಪತ್ರಿಕೆಗಳನ್ನು ಬಳಸಿಕೊಳ್ಳಲಾಯಿತು.

ಪಾಶ್ಚಿಮಾತ್ಯರ ಉದಾರವಾದದ ಮತ್ತು ಪೌರ್ವಾತ್ಯರ ಆಧ್ಯಾತ್ಮ ಸಂಸ್ಕೃತಿಯ ತಿಳುವಳುಕೆಯಿಂದ ಜನರು ಸ್ವಾತಂತ್ರ್ಯ ಪಡೆಯಲು ರಾಷ್ಟ್ರೀಯತೆಯನ್ನು ಬೆಳೆಸಿಕೊಂಡರು.

ಇದರ ಪರಿಣಾಮವಾಗಿ ಸಮಾನ ಮನಸ್ಕ ಭಾರತೀಯರ  ಸಹವಾಸದಿಂದ ೧೮೮೫ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪನೆಯಾಯಿತು.

೧೮೮೪ ರಲ್ಲಿ ಏ ಓ ಹ್ಯೂಮ್‌ ರವರಿಂದ ಸ್ಥಾಪಿತವಾದ ಭಾರತ ರಾಷ್ಟ್ರೀಯ ಯೂನಿಯನ್‌ ಮುಂದೆ ೧೮೮೫ ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಆಗಿ ಪರಿವರ್ತನೆಯಾಯಿತು, ಈ ಮೂಲಕ ಜಾತಿ , ಮತ, ಭಾಷೆ, ಹಾಗೂ ಪ್ರಾದೇಶಿಕ ವೈವಿದ್ಯತೆಯಲ್ಲಿ ಹಂಚಿಹೋಗಿದ್ದ ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಯತ್ನಿಸಿತು. ಜನಸಾಮಾನ್ಯರ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಅದರ ಪರಿಗಣನೆಗೆ ಅಹವಾಲು ಸಲ್ಲಿಸಲು ಯತ್ನಿಸಿತು.

ಭಾರತದ ರಾಜಕೀಯದಲ್ಲಿ ಸಂವಿಧಾನಾತ್ಮಕವಾಗಿ ಬದಲಾವಣೆ ತರಲು ಪ್ರಯತ್ನಿಸಿದ ಕಾಂಗ್ರೆಸ್‌ ನಾಯಕರನ್ನು ಮಂದಗಾಮಿಗಳು ಎನ್ನುತ್ತಿದ್ದರು.

೧೯೦೫ ರಲ್ಲಿ  ಗವರ್ನರ್‌ ಜನರಲ್‌ ಕರ್ಜನ್‌ ಬಂಗಾಳದ ವಿಭಜನೆ ಮಾಡಿದನು, ಅರಬಿಂದೊ ಘೋಷ್‌, ಬಿಪಿನ್‌ ಚಂದ್ರಪಾಲ್‌, ಲಾಲಾ ಲಜಪತ ರಾಯ್‌,  ಬಾಲಗಂಗಾದರ ತಿಲಕ್‌  ಈ ವಿಭಜನೆಯನ್ನು ವಿರೋಧಿಸಿದರು,  ಇದನ್ನು ವಿರೋಧಿಸುವ ಮೂಲಕ  ರಾಷ್ಟ್ರೀಯ ಕಾಂಗ್ರೆಸ್‌ ನಿಂದ ಹೊರಬಂದರು.  ಹೀಗೆ ಹೊರಬಂದವರನ್ನೆ ಕ್ರಾಂತಿಕಾರಿಗಳೆಂದು ಕರೆಯುತ್ತಾರೆ.

 ಈ ನಡುವೆ ಮುಸ್ಲಿಂ ಲೀಗ್‌ ಸ್ಥಾಪನೆಯಾಗಿ ಬಂಗಾಳದ ವಿಭಜನೆಯನ್ನು ಬೆಂಬಲಿಸಿತು.

ಬ್ರಿಟಿಷರನ್ನು ಭಾರತದಿಂದ ಹೊರದೂಡಲು ಕ್ರಾಂತಿಕಾರಿಗಳು ಹಿಂಸಾತ್ಮಕ ಮಾರ್ಗವನ್ನು ಅನುಸರಿಸಿದರು.

ಇಂತಹ ಕ್ರಾಂತಿಕಾರಿಗಳ ಗುಂಪಿನಲ್ಲಿ ಲಾಲಾ ಲಜಪತ್‌ ರಾಯ್‌ ಪ್ರಮುಖರು.

ಲಾಲಾ ಲಜಪತ್‌ ರಾಯ್‌  ರವರು ಜನವರಿ ೨೮ ರಂದು  ಪಂಜಾಬ್‌ ನ ದುಡಿಕೆಯಲ್ಲಿ ಹಿಂದೂ ಕುಟುಂಬದಲ್ಲಿ  ಜನಿಸಿದರು.

ತಂದೆ ಮುನ್ಷಿ ರಾಧಾ ಕ್ರಿಶನ್‌ ಅಗರ್‌ ವಾಲ್‌, ಉರ್ದು ಮತ್ತು ಪರ್ಷಿಯನ್‌ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು.  ತಾಯಿ  ಗುಲಾಬ್‌ ದೇವಿ ಅಗರ್‌ ವಾಲ್ ಧಾರ್ಮಿಕ ಪ್ರಜ್ಞೆಯುಳ್ಳವರು.

ಲಾಲಾ ಲಜಪತ್‌ ರಾಯ್‌ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು  ಪಂಜಾಬ್‌ ನ ರೆವಾರಿಯಲ್ಲಿ  ಮಾಡಿದರು.

೧೮೮೦ ರಲ್ಲಿ  ಲಾಹೋರ್‌ ನ ಸರ್ಕಾರಿ ಕಾಲೇಜಿಗೆ ಸೇರಿದರು , ಕಾನೂನಿನಲ್ಲಿ ಮೇಜರ್‌ ಆಗಿದ್ದವರು, ಅಲ್ಲಿ ಆರ್ಯ ಸಮಾಜ ಚಳುವಳಿಯಿಂದ ಪ್ರಭಾವಿತರಾದರು.

೧೮೮೬ ರಲ್ಲಿ ಹರಿಯಾಣದ  ಹಿಸ್ಸಾರ್‌ ಗೆ  ತೆರಳಿ ತಮ್ಮ ವಕೀಲಿ ವೃತ್ತಿಯ ಅಭ್ಯಾಸವನ್ನು  ಪ್ರಾರಂಬಿಸಿದರು.  ಬಾಬು ಚುರಮಣಿ ಅವರೊಡಗೂಡಿ, ಹಿಸಾರ್‌ ನಲ್ಲಿ ಬಾರ್‌ ಕೌನ್ಸಿಲ್‌ ಅನ್ನು ಸ್ಥಾಪಿಸಿ ಅದರ ಸದಸ್ಯರಾದರು.

ಜೊತೆಗೆ ಇಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್‌ ಮತ್ತು ಆರ್ಯ ಸಮಾಜದ ಸುದಾರಣಾವಾದಿ  ಜಿಲ್ಲಾ ಶಾಖೆಯನ್ನು  ಸ್ಥಾಪಿಸಿದರು.

ಸ್ವಾತಂತ್ರ ಪಡೆಯಲು ಭಾರತಕ್ಕೆ ರಾಜಕೀಯ ನೀತಿಯನ್ನು ರೂಪಿಸಲು, ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿದರು. ಜೊತೆಗೆ  ದಿ ಟ್ರಿಬ್ಯೂನ್‌ ಸೇರಿದಂತೆ  ಹಲವು ಪತ್ರಿಕೆಗಳಿಗೆ ನಿಯಮಿತವಾಗಿ ಕೊಡುಗೆಯನ್ನು ನೀಡುತ್ತಿದ್ದರು.

೧೮೮೬ ರಲ್ಲಿ  ಆಂಗ್ಲೋ -ವೇದಿಕ್‌ ಸ್ಕೂಲ್‌ ಲಾಹೋರ್‌ ಅನ್ನು ಸ್ಥಾಪಿಸಲು ಕೊಡುಗೆ ನೀಡಿದರು.

೧೯೧೪ ರಲ್ಲಿ ಭಾರತ ಸ್ವಾತಂತ್ರ್ಯ ಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳಲು  ಕಾನೂನು ಅಭ್ಯಾಸವನ್ನು ತೊರೆದರು.

 

ಭಾರತೀಯ ರಾಷ್ಟ್ರಿಯ ಚಳುವಳಿಗೆ ಲಾಲಾ ಲಜಪತ್‌ ರಾಯ್‌ ರ ಕೊಡುಗೆ:-

ಬಾಲ್‌ ಲಾಲ್‌ ಪಾಲ್‌ :-  ಬಾಲ ಗಂಗಾದರನಾಥ್‌ ತಿಲಕ್‌,  ಲಾಲಾ ಲಜಪತ್‌ ರಾಯ್‌ , ಬಿಪಿನ್‌ ಚಂದ್ರ ಪಾಲ್‌ , ಮೂವರನ್ನು ಒಳಗೊಂಡ  ಸ್ವದೇಶಿ ಮತ್ತು  ಗೃಹ ಆಡಳಿತದ ಚಳುವಳಿಗಳನ್ನು ಪ್ರತಿಪಾದಿಸುವ ಕ್ರಾಂತಿಕಾರಿ ಗುಂಪೊಂದು ರಚನೆಯಾಯಿತು. ಬಂಗಾಳ ವಿಭಜನೆಯ ವಿರುದ್ದ ಭಾರತೀಯರನ್ನು ಸಜ್ಜುಗೊಳಿಸುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದರು.

 ಕ್ರಾಂತಿಕಾರಿಗಳ ಮಿತಿಮೀರಿದ ರಾಜಕೀಯ ಆಂದೋಲನಕ್ಕಾಗಿ  ೧೯೦೭ ರಲ್ಲಿ ಲಾಲಾ ಲಜಪತ್‌ ರಾಯ್‌ ಅವರನ್ನು ಬರ್ಮಾಕ್ಕೆ ಗಡಿಪಾರು ಮಾಡಲಾಯಿತು.  ಸಾಕ್ಷ್ಯಾದಾರಗಳ ಕೊರತೆಯಿಂದ  ಕೆಲವು ತಿಂಗಳುಗಳ ನಂತರ ಹಿಂತಿರುಗಿದರು.

ರೌಲಟ್‌ ಕಾಯಿದೆ ಮತ್ತು ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ವಿರುದ್ದ ಪ್ರತಿಭಟಿಸಿದರು, ಬ್ರಿಟೀಷರ ದಬ್ಬಾಳಿಕೆಯ ನೀತಿಗಳನ್ನು ಸಕ್ರಿಯವಾಗಿ ವಿರೋಧಿಸಿದರು.

೧೯೨೦ ರಿಂದ ರಾಷ್ಟ್ರೀಯ ಕಾಂಗ್ರೆಸ್‌ ನ ಅಧ್ಯಕ್ಷರಾಗುವ ಮೂಲಕ ಅಸಹಕಾರ ಚಳುವಳಿಯಂತಹ ಹಲವು ಚಟುವಟಿಕೆಗಳಲ್ಲಿ ಮುನ್ನಡೆಸಿದ್ದರು.

೧೯೨೬ ರಲ್ಲಿ ಕಾಂಗ್ರೆಸ್‌ ನ ಉಪಾಧ್ಯಕ್ಷರಾಗಿದ್ದ ಕಾಲದಲ್ಲಿ ಕೇಂದ್ರ ಶಾಸಕಾಂಗದ  ವ್ಯವಹಾರಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

೧೯೨೮ ರಲ್ಲಿ ಭಾರತಕ್ಕೆ ಬೇಟಿ ನೀಡಿದ ಸೈಮನ್‌ ಆಯೋಗವನ್ನು ನಿರಾಕರಿಸಿದ್ದರು. ಕಾರಣ ಈ ಆಯೋಗದಲ್ಲಿ ಭಾರತೀಯ ಯಾವುದೇ ಸದಸ್ಯರಿಲ್ಲದ ಕಾರಣ ನೀಡಿ, ಸಹಕಾರ ನಿರಾಕರಣೆಯ  ನಿರ್ಣಯವನ್ನು ವಿಧಾನಸಬೆಯಲ್ಲಿ ಮಂಡಿಸಿದ್ದರು.

ಲಾಲಾ ಲಜಪತ್‌ ರಾಯ್‌ ರವರ ಭಾರತಕ್ಕೆ ಕೊಡುಗೆ ನೀಡಿದ ಸಂಸ್ಥೆಗಳು:-

v  ಕ್ಷಾಮ ಪೀಡಿತ ಜನರಿಗೆ ಸಹಾಯ ಮಾಡಲು ೧೮೯೭ ರಲ್ಲಿ ಹಿಂದೂ ರಿಲೀಫ್‌ ಆಂದೋಲನವನ್ನು ಪ್ರಾರಂಬಿಸಲಾಯಿತು, ಜನರು ಮಿಷನರಿಗಳಿಗೆ ಬಲಿಯಾಗುವುದನ್ನು ತಡೆಹಿಡಿಯಲು ಪ್ರಯತ್ನಿಸಿದರು.

v  ಲಾಹೋರ್‌ ನಲ್ಲಿ ದಯಾನಂದ ಆಂಗ್ಲೋ – ವೇದಿಕ್‌ ಶಾಲೆಯನ್ನು ಸ್ಥಾಪಿಸುವ ಮೂಲಕ ರಾಷ್ಟ್ರೀಯ ಶಿಕ್ಷಣವನ್ನು ಉತ್ತೇಜಿಸಿದರು.

v  ೧೮೯೪ ರಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನ್ನು ಸ್ಥಾಪಿಸುವ ಮೂಲಕ  ಭಾರತದ ಆರ್ಥಿಕ ವ್ಯವಸ್ಥೆಯ ಅಭಿವೃದ್ದಿಗೆ ಮಹತ್ತರ ಕೊಡುಗೆ ನೀಡಿದರು.

v  ೧೯೨೧ ರಲ್ಲಿ ಸ್ಥಾಪನೆಯಾದ ಸರ್ವೆಂಟ್ಸ್‌ ಆಫ್‌ ಪೀಪಲ್ಸ್‌  ಸೊಸೈಟಿ  ಎಂಬ ಸಮಾಜದ ಪ್ರತಿಷ್ಠಾಪನೆಯು ಸಮಾಜದ ಬಗೆಗೆ  ಅವರಿಗಿರುವ ಸಮರ್ಪಣೆಯನ್ನು ತೋರಿಸುತ್ತದೆ.

v  ಆರ್ಯ ಸಮಾಜ ಮತ್ತು ಹಿಂದೂ ಮಹಾ ಸಭಾ ಸಂಘಟನೆಗಳಲ್ಲಿ ಲಾಲಾ ಲಜಪತ್‌ ರಾಯ್‌ ರವರ ತೊಡುಗಿಸಿಕೊಳ್ಳುವಿಕೆಯು ಹಿಂದೂ ಸುದಾರಣೆಯು ಹಾಗೂ ರಾಷ್ಟ್ರೀಯ ರಾಜಕೀಯಕ್ಕೆ ಅವರ ಕಳಕಳಿಯನ್ನು ತೋರಿಸುತ್ತದೆ.

v  ೧೯೧೭ ರಲ್ಲಿ ಲಾಲಾ ಲಜಪತ್‌ ರಾಯ್‌ ಅವರು ಯುಎಸ್‌ ನಲ್ಲಿ ತಂಗಿದ್ದಾಗ  ಇಂಡಿಯನ್‌ ಹೋಮ್‌ ರೂಲ್‌  ಲೀಗ್‌ ಆಫ್‌ ಅಮೇರಿಕ ವನ್ನು ಸ್ಥಾಪಿಸಲಾಯಿತು. ಇದು ಭಾರತದಲ್ಲಿ ಸ್ವ ಆಡಳಿತದ ರೂಪಿಸುವಲ್ಲಿ ಮಹತ್ತರ ಕಾರ್ಯವನ್ನು ನಿರ್ವಹಿಸಿತು.

 

ಲಾಲ ಲಜಪತರ ರಾಯ್‌ ರವರ ಕಾರ್ಮಿಕ ಚಳುವಳಿಗಳು

೧೯೨೦ ರಲ್ಲಿ ಮೊದಲ ರಾಷ್ಟ್ರೀಯ ಕಾರ್ಮಿಕ ಸಂಘವಾದ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸುವುದರ ಮೂಲಕ, ಈ ಕಾರ್ಮಿಕ ಸಂಘದ ಫ್ರಥಮ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದರ ಮೂಲಕ ಕಾರ್ಮಿಕರ ಹಿತಾಸಕ್ತಿಯ ಬಗೆಗೆ ಕಾಳಜಿವಹಿಸಿದ್ದರು.

 

ಕೆಲಸದ ಪರಿಸ್ಥಿತಿಗಳಿಗನುಗುಣವಾಗಿ, ಕಾರ್ಮಿಕರ  ಕಾನೂನುಗಳು ಮತ್ತು ಕಾರ್ಮಿಕರ ದುರವಸ್ಥೆಯ ಬಗೆಗೆ ಆಳವಾದ ಕಾಳಜಿಯನ್ನು ಹೊಂದಿದ್ದರು. ಅಲ್ಲದೆ ಭಾರತೀಯ ಕಾರ್ಮಿಕರ ಚಳುವಳಿಗಳಿಗೆ ಗಣನೀಯ ಕೊಡುಗೆ ನೀಡಿದ್ದರು.

 

ಲಾಲಾ ಲಜಪತ್‌ ರಾಯ್‌ ಅವರು ಹೊರಡಿಸಿದ ಪತ್ರಿಕೆಗಳು ಮತ್ತು ಕೊಡುಗೆ ನೀಡಿದ ಸಾಹಿತ್ಯ ಕೃತಿಗಳು…

ಲಜಪತ್‌ ರಾಯ್‌ ಅವರು ಲಾಹೋರ್‌  ನಲ್ಲಿ ಆರ್ಯ ಗೆಜೆಟ್‌ ಅನ್ನು ಸ್ಥಾಪಿಸುವ ಮೂಲಕ ವಿವಿಧ ಪತ್ರಿಕೆಗಳಿಗೆ ಕೊಡುಗೆ ನೀಡುತ್ತಿದ್ದರು.

  ರಾಯ್‌ ಅವರು ಕೊಡುಗೆ ನೀಡುತ್ತಿದ್ದ ವಿವಿಧ ಪತ್ರಿಕೆಗಳು

·         ಭಾರತಕ್ಕೆ ಇಂಗ್ಲೇಂಡಿನ ಋಣ

·         ಯುವ ಭಾರತ 

·         ಜಪಾನ್‌ ವಿಕಾಸ

·         ಭಗವದ್ಗೀತೆಯ ಸಂದೇಶ

·         ಭಾರತದ ರಾಜಕೀಯ ಭವಿಷ್ಯ

·         ಪ್ರವಾಸ ಕಥನ “ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾ”

·         ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಸ್ಯೆ

·         ಸ್ವತಂತ್ರ್ಯಕ್ಕಾಗಿ ಭಾರತದ ಇಚ್ಛೆ

 

 

 

 

ಆರ್ಯ ಸಮಾಜದ ಪ್ರಭಾವವು ಲಾಲಾ ಲಜಪತ್‌ ರಾಯ್‌ ಅವರ ಅಭಿಪ್ರಾಯಗಳಲ್ಲಿ ಬಹಳಷ್ಟು ಬದಲಾವಣೆ ತಂದಿತ್ತು, ಹಿಂದೂ ಸಂಪ್ರದಾಯದಲ್ಲಿ ಸಾಮಾಜಿಕ ಸುಧಾರಣೆಗೆ ಒತ್ತು ನೀಡುವ ಆರ್ಯ ಸಮಾಜದ ಚಳುವಳಿಯ ಅಲೆಗಳು  ಇವರ ಅಭಿಪ್ರಾಯಗಳಲ್ಲಿ ಗಮನಾರ್ಹವಾಗಿ ರೂಪುಗೊಂಡವು.

ಲಾಲಾ ಲಜಪತ್‌ ರಾಯ್‌ ಅವರ ತತ್ವಶಾಸ್ತ್ರವು , ಹಿಂದೂ  ಸುಧಾರಣಾವಾದ,  ರಾಷ್ಟ್ರೀಯತೆ, ಮತ್ತು ನಾಗರಿಕ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆಗಾಗಿ ಪ್ರತಿಪಾದಿಸಿತು.

ನಿರ್ಭೀತಿಯುತ ನಾಯಕತ್ವ, ರಾಷ್ಟ್ರೀಯತೆಯಿಂದ ಕೂಡಿದ ಸಮೃದ್ಧ ಬರವಣಿಗೆ, ಅಖಂಡ ಭಾರತದ ಸ್ವರಾಜ್ಯಕ್ಕಾಗಿ ಅಚಲ ಸಮರ್ಪಣಾ ಮನೋಭಾವನೆಯಿಂದ  ಕೂಡಿದ ಲಾಲ ಲಜಪತ್‌ ರಾಯ್‌ ಅವರ ಜೀವನವು ಶಾಶ್ವತವಾದ ಪರಂಪರೆಯನ್ನು ನೆಲೆಸುವಂತೆ ಮಾಡಿದೆ.

ಅವರ ಈ ಜನ್ಮ ದಿನದ ವಾರ್ಷಿಕೋತ್ಸವದ ಸಂದರ್ಭದಲ್ಲಿ , ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ,  ಮತ್ತು ಸಮಾಜ ಸುಧಾರಕನಾಗಿ ಅವರ ಪಾತ್ರವನ್ನು  ನೆನಪಿಸುತ್ತದೆ.

ಅವರ ಈ ಸ್ವಯಂ ಯಜ್ಞದ ದೀಕ್ಷೆ ತೊಟ್ಟ ಜೀವನವು ಭಾರತದ ಬೆಳವಣಿಗೆಗಾಗಿ ಮತ್ತು ಸ್ವಯಂ – ಸಾಕ್ಷಾತ್ಕಾರದಲ್ಲಿ ನಡೆಯುತ್ತಿರುವ ಪ್ರಯಾಣದಲ್ಲಿ ಈ ಪೀಳಿಗೆಗೆ  ಸ್ಪೂರ್ತಿ ನೀಡುತ್ತದೆ.

            ಸೈಮನ್‌ ಕಮಿಷನ್‌ ವಿರುದ್ದದ  ಪ್ರತಿಭಟನೆಯ ಸಂದರ್ಭದಲ್ಲಿ  ಪೋಲಿಸ್‌ ಲಾಠಿ ಚಾರ್ಜ್‌ ನಲ್ಲಿ ತೀವ್ರವಾಗಿ ಗಾಯಗೊಂಡ ಲಾಲಾ ಲಜಪತ್‌ ರಾಯ್‌ ಅವರು  ೧೯೨೮ ರ ನವೆಂಬರ್‌ ೧೭ ರಂದು ನಿಧನರಾದರು.

“ ಇಂದು ನನ್ನ ಮೇಲೆ ಹೊಡೆದ ಪೆಟ್ಟುಗಳು ಭಾರತದಲ್ಲಿ ಬ್ರಿಟೀಷ್‌ ಆಳ್ವಿಕೆಯ ಶವ ಪೆಟ್ಟಿಗೆಗೆ  ಕೊನೆಯ ಮೊಳೆಗಳಾಗಿರುತ್ತವೆ.

ಲಾಲಾ ಲಜಪತ್‌ ರಾಯ್‌ ಅವರ ಈ ಕೊನೆಯ ಮಾತುಗಳು ಹೆಚ್ಚು ಪ್ರಸಿದ್ದಿ ಹೊಂದಿ ಭಾರತದಲ್ಲಿ ಸ್ವಾತಂತ್ರ್ಯದ ಕೂಗು ಹೆಚ್ಚಾಯಿತು.

“ಪಂಜಾಬ್‌ ಸಿಂಹ” ಲಾಲಾ ಲಜಪತ್‌ ರಾಯ್‌ ಅವರಿಗೆ ೧೬೦ ನೇ ಜನ್ಮ ದಿನದ ಶುಭಾಷಯಗಳು.



ಧನ್ಯವಾದಗಳು....🌷

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......