೭೬ ನೇ ಗಣರಾಜ್ಯೋತ್ಸವ ದಿನದ ವಿಶೇಷತೆಯ ಮುಂದುವರಿದ ಭಾಗ………..
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ದಿನದ ಪ್ರಾರಂಭದಲ್ಲಿ , ನ್ಯಾಷನಲ್ ವಾರ್ ಮೆಮೋರಿಯಂ ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವರ
ಭೇಟಿ, ೨೦೧೯ ರಿಂದ ದೆಹಲಿಯಲ್ಲಿರುವ ಅಮರ್ ಜವಾನ್ ಜ್ಯೋತಿ ಯಲ್ಲಿ ಭಾರತಕ್ಕೆ ದೇಶಕ್ಕೆ ಸೇವೆ ಸಲ್ಲಿಸಿ ಮಡಿದ ವೀರ ಯೋದರಿಗೆ ನಮನ.
ಈ ರೂಢೀ ಹಿಂದಿನಿಂದಲೂ ನಡೆದು, ಸ್ವಾತಂತ್ರೊತ್ಸವ ಸಂದರ್ಭ ಮತ್ತು ಗಣರಾಜ್ಯೋತ್ಸ ಸಂದರ್ಭಗಳಲ್ಲಿ ಹುತಾತ್ಮ ಸೈನಿಕರಿಗೆ ಮೌನ ನಮನ ಸಲ್ಲಿಸಿ ಮುಂದಿನ ಕಾರ್ಯಕ್ರಮಕ್ಕೆ ಕೆಂಪುಕೋಟೆಗೆ ತೆರಳಲಾಗುತ್ತದೆ.
ರಾಷ್ಟ್ರಪತಿಯನ್ನು ಸ್ವಾಗತಿಸುವ ಮೂಲಕ ಗಣರಾಜ್ಯೋತ್ಸವದ ಆಚರಣೆಯನ್ನು ಕರ್ತವ್ಯಪಥದಲ್ಲಿ ಪ್ರಾರಂಭಿಸಲಾಗುತ್ತದೆ. ಜೊತೆಗೆ
ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷರಾದ ಸುಬಿಯಾಂತೊ ಅವರು ಭಾಗವಹಿಸಿದ್ದರು.
ಭಾರತದ ರಾಷ್ಟ್ರಪತಿಗಳ ಅಂಗರಕ್ಷಕ ರೆಜಿಮೆಂಟ್ ಗೆ ೨೫೧ ವರ್ಷಗಳ ಇತಿಹಾಸವಿದೆ. ೧೭೭೩ ರಲ್ಲಿ ಬ್ರಿಟೀಷರು ಹುಟ್ಟುಹಾಕಿದ ಈ ಅಂಗರಕ್ಷಕದಳದ ಸದಸ್ಯರು ಪ್ರತಿಷ್ಟಿತ ಯೋಧರು ಕೆಲವು ಆಯ್ಕೆ ಮಾಡಿದ ಸ್ಥಳಗಳಿಂದ ಮಾತ್ರ ಇವರನ್ನು ಆಯ್ಕೆ ಮಾಡಲಾಗುತ್ತದೆ.
ರಕ್ಷಣಾ ಸಚಿವರು ಪ್ರಧಾನಿ ಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ, ಪ್ರಧಾನಿ ಮಂತ್ರಿಗಳು ರಾಷ್ಟ್ರಪತಿಯನ್ನು ಆಹ್ವಾನಿಸುತ್ತಾರೆ.
ರಾಷ್ಟ್ರಪತಿಗಳು ದ್ವಜದ ಅನಾವರಣೆ ಯನ್ನು ಮಾಡುತ್ತಾರೆ. ವಿಶೇಷ ವಿಮಾನಗಳ ಮೂಲಕ ಪುಷ್ಪವೃಷ್ಠಿ.
ವಿಜಯ್ ಚೌಕ್ ನಿಂದ ಆರಂಭವಾಗಿ ಕರ್ತವ್ಯಪಥದಿಂದ ಕೆಂಪುಕೋಟೆಯವರೆಗೂ ಆರ್ಮಿಯ
ಪರೇಡ್ ನಡೆಸಲಾಗುತ್ತದೆ.
ವಿವಿಧ ರಾಜ್ಯಗಳ
ಮತ್ತು ಆಡಳಿತ ಇಲಾಖೆಗಳ ಸ್ತಬ್ದ ಚಿತ್ರ ಪ್ರದರ್ಶನ.
ಬೀಟಿಂಗ್ ರಿಟ್ರೀಟ್
: ಹಿಮ್ಮೆಟ್ಟುವಿಕೆಯನ್ನು ಸೋಲಿಸುವುದು. ಗಣರಾಜ್ಯೋತ್ಸವದ ಅಂತ್ಯವನ್ನು ಅಧಿಕೃತವಾಗಿ
ಸೂಚಿಸಿದ ನಂತರ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು
ನಡೆಸಲಾಗುತ್ತದೆ. ಇದನ್ನು ಮಿಲಿಟರಿ ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆ ಮೂರು ತಂಡಗಳು ನಿರ್ವಹಿಸುತ್ತವೆ.
ಅಟ್ಟಾರಿ -ವಾಘಾ ಗಡಿಯಲ್ಲಿ ಭಾರತ ಪಾಕಿಸ್ತಾನ ಯೋಧರ ಶಕ್ತಿಪ್ರದರ್ಶನ, ನೋಡುಗರ ಹೃದಯದಲ್ಲಿ ದೇಶಭಕ್ತಿಯ ಸಂಚಲನ, ಮೈನವಿರೇಳಿಸುವ ಯೋಧರ ಶಕ್ತಿಭರಿತ ವಂದೇ ಭಾರತಂ ಘೋಷಣೆಗಳು.
ಗಣರಾಜ್ಯೋತ್ಸವದ
ಮುನ್ನವೇ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳೆಂದು ಕರೆಯಲ್ಪಡುವ ಪದ್ಮ ಪ್ರಶಸ್ತಿಗಳನ್ನು ಘೋಷಿಸುತ್ತಾರೆ. ಗಣತಂತ್ರದ ದಿನದಂದು ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಭಾರತದ
ರಾಷ್ಟ್ರಪತಿಗಳು ವಿತರಿಸುತ್ತಾರೆ. ಪ್ರಶಸ್ತಿಯು ರಾಷ್ಟ್ರಪತಿಗಳ ಹಸ್ತಾಕ್ಷರ ಹೊಂದಿದ ಪ್ರಮಾಣ ಪತ್ರ
ಮತ್ತು ಮೆಡಲ್ ಅನ್ನು ಹೊಂದಿರುತ್ತದೆ.
೨೦೨೫
ನೇ ಅಂದರೆ ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು
ಕೇಂದ್ರ ಸರ್ಕಾರ ಪ್ರಕಟಿಸಿದೆ, ಕರ್ನಾಟಕದ ಒಬ್ಬರಿಗೆ
ಪದ್ಮವಿಭೂಷಣ, ಇಬ್ಬರಿಗೆ ಪದ್ಮಭೂಷಣ, ಮತ್ತು ೬ ಜನರಿಗೆ ಪದ್ಮಶ್ರೀ ಗೌರವ ದಕ್ಕಿದೆ.
ಈ
ಸಾಲಿನಲ್ಲಿ ಒಟ್ಟಾರೆ ೭ ಪದ್ಮವಿಭೂಷಣ, ೧೯ ಪದ್ಮಭೂಷಣ, ೧೧೩ ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು
ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕರ್ನಾಟಕ
ರಾಜ್ಯದ ಪದ್ಮಪ್ರಶಸ್ತಿ ಪುರಸ್ಕೃತರು:-
೧.ಲಕ್ಷ್ಮಿನಾರಾಯಣ
ಸುಬ್ರಹ್ಮಣ್ಯಂ ಅವರಿಗೆ ಕಲಾವಿಭಾಗದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದೆ.
೨.ಸೂರ್ಯ
ಪ್ರಕಾಶ ರವರಿಗೆ ಸಾಹಿತ್ಯ ಮತ್ತು ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತ ದಕ್ಕಿದೆ.
೩.ಅನಂತನಾಗ್
ರವರಿಗೆ ಕಲಾ ಕ್ಷೇತ್ರದಲ್ಲಿ ಪದ್ಮಭೂಷಣ ಪ್ರಶಸ್ತಿ
ಪ್ರಕಟವಾಗಿದೆ.
ಪದ್ಮಶ್ರೀ
ಪ್ರಶಸ್ತಿಗಳ ಪೈಕಿ ಕರ್ನಾಟಕದ ೬ ಮಂದಿ ಈ ಗೌರವಕ್ಕೆ ಭಾಜನರಾಗಿದ್ದಾರೆ.
೪.
ವೆಂಕಪ್ಪ ಅಂಬಾಜಿ ಸುಗಟ್ಕೇರ್
೫.
ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೆಕ್ಯಾತರ್ - ಗೊಂಬೆಯಾಟ (ತಗಲುಗೊಂಬೆ)
೬.
ಡಾ. ವಿಜಯಲಕ್ಷ್ಮಿ ದೇಶಮಾನೆ - ವೈದ್ಯಕೀಯ ವಿಭಾಗ
೭.
ರಿಕಿ ಕೇಜ್ – ಕಲಾ ಕ್ಷೇತ್ರ
೮.
ಪ್ರಶಾಂತ್ ಪ್ರಕಾಶ್ - ವಾಣಿಜ್ಯ ಮತ್ತು ಉದ್ಯಮ
ವಿಭಾಗ
೯.
ಹಾಸನ್ ರಘು - ಕಲೆ ,
ಮೇಲಿನವು
ಕರ್ನಾಟಕದ ಪದ್ಮ ಪ್ರಶಸ್ತಿ ಪಡೆದ ಸಾಧಕರ ಪಟ್ಟಿಯಾದರೇ, ಇನ್ನುಳಿದ ದೇಶದ ಸಾಧಕರ ಪಟ್ಟಿಯನ್ನು ಮುಂದೆ
ನೋಡೋಣ……..
ಪದ್ಮವಿಭೂಷಣ
:-
ಎಂಟಿವಿ
ವಾಸುದೇವನ್ ನಾಯರ್(ಮರಣೋತ್ತರ)(ಸಾಹಿತ್ಯ ,ಶಿಕ್ಷಣ) – ಕೇರಳ
ಶಾರದ
ಸಿನ್ಹಾ (ಕಲೆ)- ಬಿಹಾರ
ದುವ್ವೂರಿ
ನಾಗೇಶ್ವರ ರೆಡ್ಡಿ( ಔಷದಿ) – ತೆಲಂಗಾಣ
ಕುಮುದಿನಿ
ರಜನಿಕಾಂತ್ ಲಖಿಯಾ(ಕಲೆ) – ಗುಜರಾತ್
ನ್ಯಾಯಮೂರ್ತಿ
ಜಗದೀಶ್ ಖೇಹರ್(ನಿವೃತ್ತ) (ಸಾರ್ವಜನಿಕ ಕ್ಷೇತ್ರ)
- ಚಂಡೀಗಢ.
ಒಸಾಮು
ಸುಜುಕಿ (ಮರಣೋತ್ತರ) (ವಾಣಿಜ್ಯ ಕೈಗಾರಿಕೆಗಳು) – ಜಪಾನ್
ಲಕ್ಷ್ಮಿ ನಾರಾಯಣ ಸುಬ್ರಹ್ಮಣ್ಯಂ (ಕಲೆ) – ಕರ್ನಾಟಕ
ಪದ್ಮಭೂಷಣ:-
ಎಸ್
ಅಜಿತ್ ಕುಮಾರ್ (ಕಲೆ) – ತಮಿಳುನಾಡು
ಶೋಭನಾ
ಚಂದ್ರಕುಮಾರ್(ಕಲೆ) – ತಮಿಳುನಾಡು
ನಂದಮೂರಿ
ಬಾಲಕೃಷ್ಣ(ಕಲೆ) – ಆಂಧ್ರಪ್ರದೇಶ
ಜತಿನ್
ಗೋಸ್ವಾಮಿ (ಕಲೆ) – ಅಸ್ಸಾಂ
ಶೇಖರ್
ಕಪೂರ್ (ಕಲೆ) - ಮಹಾರಾಷ್ಟ್ರ
ಪಂಕಜ್
ಉದಾಸ್ (ಮರಣೋತ್ತರ) (ಕಲೆ) - ಮಹಾರಾಷ್ಟ್ರ
ಸುಶೀಲ್
ಕುಮಾರ್ ಮೋದಿ (ಮರಣೋತ್ತರ) ( ಸಾರ್ವಜನಿಕ ವ್ಯವಹಾರಗಳು) – ಬಿಹಾರ
ಬಿಬೇಕ್
ದೆಬ್ರಾಯ್ (ಮರಣೋತ್ತರ) (ಸಾಹಿತ್ಯ, ಶಿಕ್ಷಣ) – ಎನ್ ಸಿಟಿ ದೆಹಲಿ
ಮನೋಹರ್
ಜೋಷಿ( ಮರಣೋತ್ತರ) ( ಸಾರ್ವಜನಿಕ ವ್ಯವಹಾರಗಳು) – ಮಹಾರಾಷ್ಟ್ರ
ವಿನೋದ್
ಧಾಮ್ (ವಿಜ್ಞಾನ ಮತ್ತು ಇಂಜಿನಿಯರಿಂಗ್) - ಯುಎಸ್‌ಎ
ಸಾಧ್ವಿ
ಋತಂಭರ( ಸಮಾಜ ಸೇವೆ) -ಉತ್ತರ ಪ್ರದೇಶ
ರಾಮ್
ಬಹದ್ದೂರ್ ರಾಯ್ (ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ)- ಉತ್ತರ ಪ್ರದೇಶ
ಪಂಕಜ್
ಪಟೇಲ್ (ವಾಣಿಜ್ಯ ಕೈಗಾರಿಕೆಗಳು)
ಪಿಆರ್
ಶ್ರೀಜೇಶ್ (ಕ್ರೀಡೆ) – ಕೇರಳ
ನಲಿ
ಕುಪ್ಪುಸ್ವಾಮಿ ಚೆಟ್ಟಿ (ವಾಣಿಜ್ಯ ಕೈಗಾರಿಕೆ) -
ತಮಿಳುನಾಡು
ಕೈಲಾಶ್
ನಾಥ್ ದೀಕ್ಷಿತ್ (ಇತರ ಪುರಾತತ್ವ) – ಎನ್ ಸಿಟಿ ದೆಹಲಿ
ಜೋಸ್
ಚಾಕೊ ಪೆರಿಯಪ್ಪುರಂ( ಔಷಧ ) – ಕೇರಳ
೨.
ಎ. ಸೂರ್ಯ ಪ್ರಕಾಶ್ (ಸಾಹಿತ್ಯ, ಶಿಕ್ಷಣ, ಪತ್ರಿಕೊದ್ಯಮ ) – ಕರ್ನಾಟಕ
೩.
ಅನಂತನಾಗ್ (ನಟನಾ) – ಕರ್ನಾಟಕ
ಪದ್ಮಶ್ರೀ
ಪಡೆದ ಸಾಧಕರು:-
ನರೇನ್
ಗುರುಂಗ್ (ಜಾನಪದ ಗಾಯಕ) - ನೇಪಾಳ,
ಜೋನಾಸ್
ಮಾಸೆಟ್ಟಿ ( ವೇದಾಂತ ಗುರು) - ಬ್ರೆಜಿಲ್,
ಶೇಖಾ
ಎ.ಜೆ ಅಲ್ ಸಬಾಹ್ (ಯೋಗ) – ಕುವೈತ್,
ಹರಿಮನ್
ಶರ್ಮಾ (ಸೇಬು ಬೆಳೆಗಾರ) – ಹಿಮಾಚಲ ಪ್ರದೇಶ,
ವಿಲಾಸ್
ಡಾಂಗ್ರೆ (ಹೋಮಿಯೋಪತಿ ವೈದ್ಯ)- ಮಹಾರಾಷ್ಟ್ರ,
ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಸಾಮಾಜಿಕ ಕಾರ್ಯಕರ್ತ)
– ಅರುಣಾಚಲ ಪ್ರದೇಶ,
ಹರ್ವಿಂದರ್
ಸಿಂಗ್(ಪ್ಯಾರಾಲಿಂಪಿಯನ್ ಚಿನ್ನದ ಪದಕ ವಿಜೇತ) ಹರಿಯಾಣ,
ಪಿ.
ದಕ್ಷಿಣ ಮೂರ್ತಿ (ಡೋಲು ಕಲಾವಿದ) ಪುದುಚೇರಿ,
ಭೀಮ್
ಸಿಂಗ್ ಭಾವೇಶ್ (ಸಮಾಜ ಕೆಲಸ) ಬಿಹಾರ ,
ಬೇರು
ಸಿಂಗ್ ಚೌಹಾಣ್ (ಜಾನಪದ ಗಾಯಕ) – ಮಧ್ಯ ಪ್ರದೇಶ,
ಎಲ್
ಹ್ಯಾಂಗ್ಥಿಂಗ್ (ಕೃಷಿ ಹಣ್ಣುಗಳು) ನಾಗಾಲ್ಯಾಂಡ್.
೪.
ವೆಂಕಪ್ಪ ಅಂಬಾಜಿ ಸುಗುತೇಕರ್ (ಜಾನಪದ ಗಾಯಕ) – ಕರ್ನಾಟಕ
ನಿರ್ಮಲಾ
ದೇವಿ (ಕರಕುಶಲ) – ಬಿಹಾರ
ಜ್ನೋಯ್ನಾಚರಣ್
ಬತಾರಿ (ತಿಮ್ಸ ಕಲಾವಿದ) - ಅಸ್ಸಾಂ
ಸುರೇಶ್
ಸೋನಿ (ಸಮಾಜ ಕೆಲಸ – ಬಡವರ ವೈದ್ಯ )- ಗುಜರಾತ್
ರಾಧಾ
ಬಹಿನ್ ಭಟ್ (ಸಾಮಾಜಿಕ ಕಾರ್ಯಕರ್ತೆ ) – ಉತ್ತರಾಖಂಡ್
ಪಾಂಡಿ
ರಾಮ್ ಮಾಂಡವಿ (ಕಲಾವಿದ) – ಛತ್ತಿಸ್ ಗಢ
ಲಿಬಿಯಾ
ಲೋಬೋ ಸರ್ದೇಸಾಯಿ (ಸ್ವಾತಂತ್ಯ್ರ ಹೋರಾಟಗಾರ) – ಗೋವಾ
ಗೋಕುಲ್
ಚಂದ್ರ ದಾಸ್ (ಕಲೆ) – ಪಶ್ಚಿಮ ಬಂಗಾಳ
ಸಾಲಿ
ಹೋಳ್ಕರ್ (ನೇಕಾರ) - ಮಧ್ಯ ಪ್ರದೇಶ
ಮಾರುತಿ
ಭುಜಂಗರಾವ್ ಚಿಟಂಪಲ್ಲಿ (ಸಂಸ್ಕೃತಿ, ಶಿಕ್ಷಣ ) – ಮಹಾರಾಷ್ಟ್ರ
ಬತುಲ್
ಬೇಗಂ ( ಜಾನಪದ ಕಲಾವಿದೆ) - ರಾಜಸ್ಥಾನ
ವೇಲು
ಅಸನ್ (ಡ್ರಮ್ಮರ್ ) – ತಮಿಳುನಾಡು
೫.
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ (ಗೊಂಬೆಯಾಟ) – ಕರ್ನಾಟಕ
ಪರ್ಮಾರ್
ಲವ್ಜಿಬಾಯಿ ನಾಗ್ಜಿಬಾಯ್ (ನೇಕಾರ ) – ಗುಜರಾತ
೬.
ವಿಜಯಲಕ್ಷ್ಮಿ ದೇಶಮಾನೆ ( ವೈದ್ಯಕೀಯ) – ಕರ್ನಾಟಕ
ಚೈತ್ರಂ
ದೇವಚಂದ್ ಪವಾರ್ (ಪರಿಸರ ಸಂರಕ್ಷಣೆ) – ಮಹಾರಾಷ್ಟ್ರ
ಜಗದೀಶ್
ಜೋಶಿಲಾ (ಸಾಹಿತ್ಯ) – ಮಧ್ಯಪ್ರದೇಶ
ನೀರ್ಜಾ
ಭಟ್ಲಾ (ಸ್ತ್ರೀರೋಗ ಶಾಸ್ತ್ರ) – ದೆಹಲಿ
ಹಗ್
, ಕೊಲೀನ್ ಗ್ಯಾಂಟ್ಜರ್ (ಸಾಹಿತ್ಯ, ಶಿಕ್ಷಣ – ಪ್ರಯಾಣ) – ಉತ್ತರಖಂಡ
೭.ರಿಕಿ
ಕೇಜ್ (ಕಲೆ) – ಕರ್ನಾಟಕ
೮.
ಪ್ರಶಾಂತ್ ಪ್ರಕಾಶ್ ( ವಾಣಿಜ್ಯ ಉದ್ಯಮ) – ಕರ್ನಾಟಕ
೯.
ಹಾಸನ್ ರಘು (ಕಲೆ) – ಕರ್ನಾಟಕ.
ಇನ್ನು
೨೦೨೫ ರ ಗಣರಾಜ್ಯೋತ್ಸವ ದಿನದ ಪ್ರಯುಕ್ತ ರಾಷ್ಟ್ರಪತಿ
ಪದಕ ಘೋಷಣೆ ಮಾಡಲಾಗಿದ್ದು, ಕರ್ನಾಟಕದ ೨೧ ಪೋಲಿಸ್ ಅಧಿಕಾರಿಗಳು ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಬಿ.ಎಂ
ಪ್ರಸಾದ್ - ಕೊಪ್ಪಳದ ಮುನಿರಾಬಾದ್ ನ ಐಆರ್ ಐ ಕಮಾಂಡೆಂಟ್
ವೀರೇಂದ್ರ
ನಾಯಕ್ - ಕೆಎಸ್ ಆರ್ ಪಿ ಹಾಸನ ಡೆಪ್ಯೂಟಿ ಕಮಾಂಡೆಂಟ್
ಗೋಪಾಲ
ಡಿ ಜೋಗಿನ – ಬೆಂಗಳೂರು ಸಿಸಿಬಿ
ಗೋಪಾಲಕೃಷ್ಣ
ಬಿ ಗೌಡರ್ - ಚಿಕ್ಕೋಡಿ ಉಪವಿಭಾಗದ ಡಿವೈಎಸ್ ಪಿ
ಹೆಚ್
ಗುರುಬಸವರಾಜು – ಚಿತ್ರದುರ್ಗದ ಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್
ಹೆಚ್
ಜಯರಾಜ್ - ಬೆಂಗಳೂರಿನ ಪೋಲಿಸ್ ಇನ್ಸ ಪೆಕ್ಟರ್
ಪ್ರದೀಪ್
- ಹಾಸನದ ಸರ್ಕಲ್ ಇನ್ಸ ಪೆಕ್ಟರ್
ಮೊಹಮ್ಮದ್
ಮುಕರಮ್ ಬೆಂಗಳೂರು ನಗರದ ಸಿಸಿಪಿ ಪೋಲೀಸ್ ಇನ್ಸ ಪೆಕ್ಟರ್
ಎಂ
ಎ ವಸಂತ್ ಕುಮಾರ್ - ಬ್ಯೂರೋ ಆಫ್ ಇಮಿಗ್ರೇಷನ್
ಪೋಲಿಸ್ ಇನ್ಸ ಪೆಕ್ಟರ್
ಮಂಜುನಾಥ
– ಸಿ ಐಡಿ ಎಎಸ್ ಐ
ಬೆಂಗಳೂರಿನ
ಡಿಸಿಆರ್ ಐ ಡಿಐಜಿಪಿ ರೇಣುಕಾ ಕೆ ಸುಕುಮಾರ, ಪೋಲಿಸ್ ಪ್ರಧಾನ ಕಛೇರಿಯ ಎ ಐಜಿಪಿ ಸಂಜೀವ ಎಂ ಪಾಟೀಲ್
ಅವರ ಗಮನಾರ್ಹ ಸೇವೆ ಗುರುತಿಸಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.
ವಿಶಿಷ್ಟ
ಸೇವೆಗಾಗಿ ಕೆಎಸ್ ಆರ್ ಪಿ ಡಿಐಜಿಪಿ ಬಸವರಾಜ್
ಶರಣಪ್ಪ ಜಿಳ್ಳೆ ಮತ್ತು ಕೆಎಸ್ ಆರ್ ಪಿ ತುಮಕೂರಿನ ಕಮಾಂಡೆಂಟ್ ಹಂಜಾ ಹುಸೇನ್ ಅವರಿಗೆ ರಾಷ್ಟ್ರಪತಿ
ಪದಕ ಘೋಷಣೆಯಾಗಿದೆ.
ಧನ್ಯವಾದಗಳು…🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು