ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

“ವ್ಯವಹಾರದಲ್ಲಿ ಯಶಸ್ಸು ಪಡೆಯಲು Amazon ಮತ್ತು IKEA ಕಲಿಸುವ 10 ಪಾಠಗಳು”

 

‌                                                          ಅಮೆಜಾನ್‌ ಸರ್ವಿಸಸ್

ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೦೧.೦೫.೨೦೨೬..

“Amazon vs IKEA: ಯಶಸ್ಸಿನ ರಹಸ್ಯಗಳು ನಿಮಗೆ ಗೊತ್ತೇ?”

ವ್ಯವಹಾರದಲ್ಲಿ ಯಶಸ್ಸಿನ ಮಂತ್ರ:

ವ್ಯವಹಾರದಲ್ಲಿ ಯಶಸ್ಸು ಸಾಧಿಸುವುದು ಕೇವಲ ಹಣ ಅಥವಾ ಅದೃಷ್ಟದಿಂದ ಸಾಧ್ಯವಿಲ್ಲ. ಸರಿಯಾದ ತಂತ್ರ, ಸಮಯೋಚಿತ ನಿರ್ಧಾರ ಮತ್ತು ಗ್ರಾಹಕರ ಮೇಲೆ ಕಾಳಜಿ (customer focus) ಅತ್ಯಂತ ಮುಖ್ಯ. ಇಂದಿನ ಬ್ಲಾಗ್ನಲ್ಲಿ ನಾವು ಮೂರು ವಿಭಿನ್ನ ಕಂಪನಿಗಳಾದ Amazon, IKEA ಮತ್ತು Nokiaಗಳ ಕಥೆಗಳ ಮೂಲಕ ವ್ಯವಹಾರದ ಆವಯವಗಳನ್ನು ತಿಳಿದುಕೊಳ್ಳೋಣ.

 

Amazon – Customer Obsession Strategy.

ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ  ಆನ್‌ಲೈನ್‌ ಸೇವೆಗಳು ಆವರಿಸಿಬಿಟ್ಟಿವೆ. ವಿಶೇಷವಾಗಿ ಅಮೇಜಾನ್ ಆಪ್‌ ಇದು ಇಂದು ಕೇವಲ ಶಾಪಿಂಗ್‌ ಮಾರ್ಗ ಮಾತ್ರವಾಗಿ ಉಳಿಯದೇ, ಒಂದು ಡಿಜಿಟಲ್ ಪರಿಸರ ವ್ಯವಸ್ಥೆಯೊಂದಿಗೆ ನಮ್ಮ ನಿತ್ಯ ಜೀವನವನ್ನು ಸುತ್ತುವರಿದಿವೆ. ಒಂದೇ ಕ್ಲಿಕ್‌ನಲ್ಲಿ ಬೇಕಾದ ವಸ್ತುಗಳೆಲ್ಲವೂ ಮನೆಬಾಗಿಲಿಗೆ ಬಂದು ಬೀಳುತ್ತವೆ. ಅಮೇಜಾನ್  ಇಂದು ಕೇವಲ   ಡೆಲಿವರಿ ಸೇವೆ ಒದಗಿಸುವುದು ಮಾತ್ರವಲ್ಲದೆ, ಮನರಂಜನೆ (Prime Video), ಸಂಗೀತ (Prime Music), ಕಡಿಮೆ ಸಮಯದಲ್ಲೇ ಸಿಗುವ ಡೆಲಿವರಿ, ಕ್ಲೌಡ್ ಸ್ಟೋರೇಜ್, ಆನ್ಲೈನ್ಶಾಪಿಂಗ್ಇತ್ಯಾದಿಗಳನ್ನು  ಒಂದೇ ಪ್ಲಾಟ್‌ ಫಾರ್ಮ್ ನಲ್ಲಿ ಕೊಡುತ್ತಿದ್ದು, ಜನರು ಈ ಅಮೇಜಾನ್‌ ಗೆ ಮಾರುಹೋಗಲು  ಮುಖ್ಯ ಕಾರಣವಾಗಿದೆ.

ಅಮೇಜಾನ್‌ ಪ್ರೈಮ್ same-day delivery  ಯಂತಹ ಸೇವೆಗಳು ನಮ್ಮೊಳಗೆ,  ನಾನು ಕೇಳಿದ ತಕ್ಷಣ ಸಿಗಬೇಕುಎಂಬ ಹೊಸ ಮಾನಸಿಕತೆಯನ್ನು ಹುಟ್ಟು ಹಾಕುತ್ತಿವೆ. ಇದು ಆಸೆಗಳ ನಿರ್ವಹಣೆಯಲ್ಲಿ ಅನುಕೂಲಕರವಾದರೂ, ನಮ್ಮ ಸಹನಾಶೀಲತೆ, ನಿರೀಕ್ಷೆಯ ಮೌಲ್ಯ ಹಾಗೂ ಖರೀದಿಮಾಡುವ ಸಮಯದಲ್ಲಿ ಬೇಡದಂತಹ  ನಿರ್ಧಾರಗಳಲ್ಲಿ ತುರ್ತುತನದ ಸಂಸ್ಕೃತಿಯನ್ನು ರೂಪಿಸುತ್ತಿದೆ.

ಅಮೇಜಾನ್‌ ನಲ್ಲಿನ  ವಿಶೇಷ ಆಫರ್ಗಳು, deals, ಗಳು ಆಗಾಗ ಟ್ರೆಂಡ್‌ ನಲ್ಲಿರುವುದರಿಂದ,  ಚೆಕ್ ಮಾಡಿದರೆ ಏನಾದರೂ ಹೊಸದು ಸಿಕ್ಕೀತುಎಂಬ ಮನೋವೃತ್ತಿ ಜನರ ಖರೀದಿ ಪದ್ಧತಿಯನ್ನು ಬದಲಿಸಿವೆ. ಅನೇಕ ಬಾರಿ ಅಗತ್ಯವಿಲ್ಲದ ವಸ್ತುಗಳನ್ನು “offer ಇದೆಎನ್ನುವ ಕಾರಣಕ್ಕೆ impulse purchase ಆಗಿ  ಖರೀದಿಸುವುದನ್ನು ಗಮನಿಸಬಹುದು.

Netflix, Hotstar… ಇವೆಲ್ಲದರ ಮಧ್ಯೆ ಅಮೇಜಾನ್‌  ತನ್ನದೇ ಆದ ಜಾಗವನ್ನು ಪಡೆದಿದೆ.
ಆದರೆ being-watching ಸಂಸ್ಕೃತಿಯಿಂದಾಗಿ,  ಅಮೇಜಾನ್‌ ನಂತಹ ಆಪ್ಗಳು ನಮಗೆ ಉತ್ತಮ ಅನುಭವ ಕೊಡಲು ನಮ್ಮ ಬಳಕೆ, ಆಸಕ್ತಿ, ಖರೀದಿ ಇತಿಹಾಸ, ಹುಡುಕಾಟ, ಲೊಕೇಷನ್ ಎಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಶೇಖರಿಸಿದ ಈ ಡೇಟಾವನ್ನು, ಜಾಹೀರಾತಿಗಾಗಿ, ಗ್ರಾಹಕರ ವರ್ತನೆ ವಿಶ್ಲೇಷಣೆಗಾಗಿ, ನಮ್ಮನ್ನು ಮತ್ತಷ್ಟು ಆಪ್ಗಳತ್ತ ಆಕರ್ಷಿಸಲು  ಬಳಸಲ್ಪಡುತ್ತವೆ.

                                                             ಗ್ರಾಹಕರ ವರ್ತನೆಯ ಸ್ಟ್ರಾಟಜಿ

ಅಮೇಜಾನ್ ಯಶಸ್ಸಿನ ರಹಸ್ಯ ಏನು?

1994ರಲ್ಲಿ Jeff Bezos ಸ್ಥಾಪಿಸಿದ Amazon ಪ್ರಾರಂಭದಲ್ಲಿ ಒಂದು ಆನ್ಲೈನ್ ಪುಸ್ತಕದ ಅಂಗಡಿಯಷ್ಟೇ ಆಗಿತ್ತು. ಆದರೆ ಇಂದು ಅದು ವಿಶ್ವದ ಅತಿ ದೊಡ್ಡ -ಕಾಮರ್ಸ್ ಕಂಪನಿಗಳಲ್ಲೊಂದು.

1994ರಲ್ಲಿ Jeff Bezos ಅವರು ಅಮೇಜಾನ್‌ ಅನ್ನು ಸ್ಥಾಪಿಸಿದ ಆರಂಭದಲ್ಲಿ ಪ್ರಪಂಚದಲ್ಲಿನ ಎಲ್ಲಾ ಗ್ರಾಹಕರನ್ನು ಒಂದೆಡೆ ಕೇಂದ್ರೀಕರಿಸುವ ಕಂಪನಿಯನ್ನು ನಿರ್ಮಿಸುವುದು ಮತ್ತು ಅದು ಎಲ್ಲಾ ದೊರೆಯುವ ಸ್ಟೋರ್‌ ಆಗಬೇಕು  ಎಂದಾಗಿತ್ತು.

ಆದರೆ ಇದು ಆಗ ಸಾಮಾನ್ಯ ವಿಶನ್ ಅಲ್ಲ, ಆದರೆ ಪ್ಲಾಟ್‌ ಫಾರ್ಮ್‌ ಥಿಂಕಿಂಗ್.

 2. ಅಮೇಜಾನ್‌ ಬೆಳೆದ ಹಾದಿ (Evolution).

 ಹಂತ 1: ಬುಕ್ಸ್-ಕಾಮರ್ಸ್ (1994–2005)ನಿಂದ ಪ್ರಾರಂಭವಾಗಿ, ಎಲೆಕ್ಟ್ರಾನಿಕ್ಸ್‌ ಪರಿಕರಗಳು, ಬಟ್ಟೆಗಳು, ನಿತ್ಯ ಉಪಯೋಗಿ ವಸ್ತುಗಳೊಂದಿಗೆ ಎಲ್ಲವನ್ನೂ ಈ ಮಾರುಕಟ್ಟೆಯಲ್ಲಿ ತರಲಾಯಿತು. ಇದರೊಂದಿಗೆ ಗ್ರಾಹಕರ ನಂಬಿಕೆಯನ್ನು ಬೆಳೆಸುವುದೇ ಕಂಪನಿಯ ಗುರಿಯಾಗಿತ್ತು.

ಹಂತ 2: ವೇದಿಕೆಯ ಮಾದರಿ (2005–2015) : ಮೂರನೇ ವ್ಯಕ್ತಿಗೆ ಮಾರಾಟ ಮಾಡಲು ಅವಕಾಶ ನೀಡಿ, ಅಮೆಜಾನ್‌ ಅನ್ನು ದೊಡ್ಡ ಮಾರ್ಕೆಟ್‌ ಪ್ಲೇಸ್‌ ಆಗಿ ಪರಿವರ್ತಿಸಿ, ಮಾರಾಟಸ್ನೇಹಿ ಪರಿಸರವ್ಯವಸ್ಥೆಯಾಗಿ ಬೆಳಸಲಾಯಿತು.

ಹಂತ 3: ಲಾಭ ಯಂತ್ರ (2015–present): ಇಲ್ಲಿ ಒಂದು ದೊಡ್ಡ ರಹಸ್ಯವಿದೆ. ಅಮೇಜಾನ್‌ ನ ಆದಾಯ ಮೂಲಗಳೆಂದರೆ, ಈ -ಕಾಮರ್ಸ್‌

1. E-commerce (ಕಡಿಮೆ ಲಾಭ – Low Margin).

Amazonನಲ್ಲಿ ನಾವು ನೀವು ನೋಡುವ ಮುಖ್ಯ business ವಸ್ತುಗಳ ಮಾರಾಟ. ಅಂದರೆ mobile, clothes, ಮನೆ ಉಪಕರಣಗಳು ಇತ್ಯಾದಿ. ಇಲ್ಲಿ ಮಾರಾಟಗಾರರ ಮೂಲಕ ಕಮಿಷನ್‌ ಮತ್ತು ಡಿಲಿವರಿ ಚಾರ್ಜಸ್ ಕಂಪನಿಗೆ ದೊರೆಯುತ್ತದೆ.

ಆದರೆ ಇಲ್ಲಿ ಒಂದು ಸತ್ಯ ಇದೆ, Amazon ಭಾಗದಲ್ಲಿ ಹೆಚ್ಚು ಲಾಭ ಮಾಡೋದಿಲ್ಲ, ಏಕೆಂದರೆ? discounts ಮತ್ತು offers, free delivery  logistics ಖರ್ಚು ಹೆಚ್ಚು. ಆದ್ದರಿಂದ, ಈ -ಕಾಮರ್ಸ್ = ಗ್ರಾಹಕರನ್ನು ಆಕರ್ಷಿಸುವ ಮಾರ್ಗ. ಅಂದರೆ, ಲಾಭಕ್ಕಿಂತ ನಂಬಿಕೆಯನ್ನು ಬೆಳೆಸುವ ಜಾಗ.

                                           ಭಾರತದ ಈ - ಕಾಮರ್ಸ್‌ ಮಾರುಕಟ್ಟೆ ಬೆಳವಣಿಗೆ

2. AWS – ಅಮೇಜಾನ್‌ ವೆಬ್‌ ಸರ್ವಿಸಸ್ (ಹೆಚ್ಚು ಲಾಭ – High Profit).

AWS ಅಂದ್ರೆ ವೆಬ್‌ ಆಧಾರಿತ ಸೇವೆಗಳು, ಕಂಪನಿಗಳು ತಮ್ಮ ಡೇಟಾ ಮತ್ತು ಆಪ್ ಅನ್ನು Amazon servers ಮೇಲೆ host ಮಾಡುತ್ತವೆ.‌ ಮತ್ತು monthly / usage ಆಧಾರಿತ ಹಣ ಪಾವತಿಸುತ್ತವೆ.

👉 ಉದಾಹರಣೆ:

  • Websites.
  • Apps.
  • banking systems.  

ಇಲ್ಲಿ ಇನ್ನೊಂದು ಮುಖ್ಯ ವಿಷಯ: ವ್ಯವಸ್ಥೆಗಳು/ಸೌಲಭ್ಯಗಳು ಒಮ್ಮೆ ನಂಬಿಕೆ ಹುಟ್ಟಿಸಿದರೆ, ಮತ್ತೆ ಮತ್ತೆ ಬಳಕೆಯಾಗುತ್ತವೆ. ಇಲ್ಲಿ ಹಣ ಕಡಿಮೆ ಬಳಕೆಯಾಗಿ, ಆದಾಯ ಹೆಚ್ಚಾಗುತ್ತದೆ.

ಆದ್ದರಿಂದ: AWS = Amazon ನಿಜವಾದ ಹಣದ ಯಂತ್ರ (profit engine).

 3. ಜಾಹಿರಾತು ವ್ಯವಹಾರ(Ads Business) ವೇಗವಾಗಿ ಬೆಳೆಯುತ್ತಿದೆ – Fast Growth.

ಅಮೇಜಾನ್‌ ನಲ್ಲಿ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಪ್ರಮೋಟ್‌ ಮಾಡಲು ಮಾಡಲು ಜಾಹಿರಾತುಗಳನ್ನು ರನ್‌  ಮಾಡುತ್ತಾರೆ.

  • ಪ್ರಾಯೋಜಿತ ಉತ್ಪನ್ನಗಳು (sponsored products).
  • ಹುಡುಕಾಟ ಜಾಹೀರಾತುಗಳು (search ads).
  • ಪ್ರದರ್ಶನ ಜಾಹೀರಾತುಗಳು (display ads).

 ಉದಾಹರಣೆಗೆ, ನಾವು “mobile” ಸರ್ಚ್ ಮಾಡಿದಾಗ ಮೇಲ್ಭಾಗದಲ್ಲಿ ಕಾಣುವ products → ads.

ಇದರಿಂದಲೇ ಲಾಭ ಏಕೆ ಹೆಚ್ಚು? ಕಾರಣ, ಅಮೇಜಾನ್‌ ಗೆ ಮೊದಲೇ traffic ಇದೆ ಮತ್ತು ads run ಮಾಡಲು ಖರ್ಚಾಗುವ ಹಣ ಕಡಿಮೆ.

👉 ಆದ್ದರಿಂದ: Ads = high margin + fast growing income

ಮುಖ್ಯವಾದ ನಿಜವಾದ ಸಂಗತಿ ಎಂದರೆ, ಅಮೇಜಾನ್‌ನ ಎಲ್ಲಾ revenue ಒಂದೇ ತರಹ ಇರುವುದಿಲ್ಲ.

  • E-commerce → ಕಡಿಮೆ ಲಾಭ.
  • AWS → ಹೆಚ್ಚು ಲಾಭ.
  • Ads → ವೇಗವಾಗಿ ಹೆಚ್ಚುತ್ತಿರುವ ಲಾಭ.

ಅಮೇಜಾನ್‌ ಗೆ ಮುಖ್ಯವಾಗಿ ಲಾಭ ಬರುತ್ತಿರುವುದು, ಉತ್ಪನ್ನಗಳ ಮಾರಾಟದಿಂದ ಅಲ್ಲ, ಬದಲಾಗಿ cloud services ಮತ್ತು advertising ಮೂಲಕ. ಬರುತ್ತದೆ.

  • ಅಂಗಡಿ (E-commerce) → ಜನರನ್ನು ಕರೆತರುವುದು.
  • service (AWS) → ಹಣ ಸಂಪಾದಿಸುವುದು.
  • ads → ಹೆಚ್ಚುವರಿ ಲಾಭ.

Amazon ಒಂದು ಸಾಮಾನ್ಯ ಆನ್ಲೈನ್‌ ಶಾಪಿಂಗ್‌ ಜಾಗ ಅಲ್ಲ, ಅದು ಬಹುವಿಧ ಆದಾಯ ಗಳಿಕೆಯ ವ್ಯವಹಾರ ಕ್ಷೇತ್ರ.

ಸ್ವಂತ ವ್ಯಾಪಾರವನ್ನು ಆರಂಭಿಸಲು ಬ್ಯುಸಿನೆಸ್‌ ಐಡಿಯಾಗಳನ್ನು ಹುಡುಕುತ್ತಿದ್ದೀರಾ??👇

https://www.capturingdaysoflife.com/2025/12/blog-post_17.html 

4. ಅಮೇಜಾನ್‌ ನ ವ್ಯವಹಾರ ಕ್ಷೇತ್ರ (Advanced).

Amazon ಒಂದೇ business ಅಲ್ಲ ಇದು 4 ಎಂಜಿನ್ಸ್‌  ಮೇಲೆ ನಡೆಯುತ್ತದೆ.

1. ಮಾರುಕಟ್ಟೆ ಜಾಗ.

  • ಮಾರಾಟಗಾರರು ಮಾರಾಟ ಮಾಡುತ್ತಾರೆ.
  • ಇವರಿಂದ ಅಮೇಜಾನ್‌ ಕಮಿಷನ್ ಪಡೆಯುತ್ತದೆ.

 

2.  AWS (Cloud).

👉 ವಿಶ್ವದ ದೊಡ್ಡ ಕ್ಲೌಡ್‌ ಸರ್ವಿಸಸ್‌ ನ ಹೈ ಮಾರ್ಜಿನ್‌ ಬ್ಯುಸಿನೆಸ್ ಈ ಅಮೇಜಾನ್. ಕಂಪನಿಗಳಿಗೆ ಸರ್ವರ್‌ ಅನ್ನು ಬಾಡಿಗೆಗೆ ನೀಡುತ್ತದೆ. AWS ಇಲ್ಲದೆ Amazon profitable ಆಗೋದಿಲ್ಲ… ಇದು ಅಮೇಜಾನ್‌ ನ ಮುಚ್ಚಿಟ್ಟ ಸತ್ಯ.

 

3. ಸಬ್ಸ್ಕ್ರಿಪ್ಶನ್ (Prime).

ಪ್ರೈಮ್‌ ಮೆಂಬರ್‌ ಶಿಪ್‌ (Prime membership). ವಿಡಿಯೋ, ಮ್ಯೂಸಿಕ್‌, ತಕ್ಷಣ ಡಿಲಿವರಿ.(Video, music, fast delivery) ಇವೆಲ್ಲವೂ ಗ್ರಾಹಕರನ್ನು ಸೆಳೆಯುವ ಸ್ಟ್ರಾಟಜಿಗಳು.

 

4. ಮಾರಾಟಗಾರರ ಜಾಹಿರಾತುಗಳನ್ನು ರನ್‌ ಮಾಡುವ ಮೂಲಕ ಅಮೆಜಾನ್‌ ಹಣವನ್ನು ಗಳಿಸುತ್ತದೆ. ಇದು ಈಗ fastest growing segment.

5. Amazon 🇮🇳 India – Deep Strategy.

ಅಮೇಜಾನ್‌ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು, domination strategy ಬಳಸುತ್ತಿದೆ.

 1. ಸಾರಿಗೆ ಜಾಲ.

  • ಭಾರತದಾದ್ಯಂತ ವೇರ್‌ ಹೌಸ್‌ ಗಳು.
  • ಡೆಲಿವರಿ ಪಾರ್ಟರ್ನರ್‌ ಗಳ ಜಾಲ.

ಭಾರತದಲ್ಲಿ logistics control ಮಾಡಿದವರೇ ಮಾರುಕಟ್ಟೆಯನ್ನು ಗೆಲ್ಲುತ್ತಾರೆ.

2. ಮಾರಾಟಗಾರನ ಆರ್ಥಿಕತೆ.

    ಬಾರತದಲ್ಲಿ ಲಕ್ಷಾಂತರ ಸಣ್ಣ ಸಣ್ಣ ಮಾರಾಟಗಾರರು ಅಮೇಜಾನ್‌ ನ ಪ್ಲಾಟ್‌ ಫಾರಂನಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ  inventory risk ಕಡಿಮೆ. ಮತ್ತು scalability ಹೆಚ್ಚು

3. ಭಾರತದಲ್ಲಿನ ಸ್ಟ್ರಾಟಜಿ.

ಅಮೇಜಾನ್‌ ಮೆಟ್ರೋ ಸಿಟಿಗಳಲ್ಲಿ ಮಾತ್ರವಲ್ಲದೇ, Tier 2, Tier 3 ಪಟ್ಟಣಗಳ ಕಡೆಗೂ ಮತ್ತು ಪ್ರಾದೇಶಿಕ ಭಾಷಾ ಪ್ರಾಂತ್ಯಗಳ ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ. ಅಲ್ಲದೇ ಭಾರತದ  cash/UPI ವರ್ಗಾವಣೆ ಒಂದು ವರದಾನವಾಗಿದೆ. ಮತ್ತು ಅಮೆಜಾನ್‌ ನ ನಿಜವಾದ ಬೆಳವಣಿಗೆಗೆ ಕಾರಣವಾಗಿದೆ.

4 . Amazon Profit Strategy (Deep Truth).

ಅಮೇಜಾನ್‌ ತಕ್ಷಣವೇ ಆದಾಯ ಗಳಿಸಬೇಕು ಎಂದು ಬಯಸುವ ಕಂಪನಿ ಅಲ್ಲವೇ ಅಲ್ಲ. ಬದಲಿಗೆ ಸ್ಟ್ರಾಟಜಿಗಳನ್ನು ಬಳಸಿ ತನ್ನ ಮಾರುಕಟ್ಟೆಯನ್ನು ವಿಸ್ತರಸಿ ನಿಧಾನವಾಗಿ ಸ್ಥಿರ ಆದಾಯವನ್ನು ಬಯಸುವ ಕಂಪನಿ.

5. ಭಾರತದಲ್ಲಿ ಅಮೇಜಾನ್‌ ಗೆ ಸವಾಲುಗಳು (Reality).

ಭಾರತದಲ್ಲಿ ಅಮೆಜಾನ್‌ ಗೆ profit ಕಡಿಮೆ. ಕಾರಣ, regulation issues ಮತ್ತು ಫ್ಲಿಪ್‌ ಕಾರ್ಟ್‌ ಮತ್ತು ಮೀಶೂ ಗಳಿಂದ ಹೆಚ್ಚಿನ ಕಾಂಪಿಟೇಶನ್.

👉 ಆದರೂ Amazon invest ಮಾಡ್ತಾ ಇದೆ ಭಾರತದಲ್ಲಿ…

ಅಮೇಜಾನ್‌  ತನ್ನ ಚಿಲ್ಲರೆ ವ್ಯಾಪಾರ (Retail) ವನ್ನು ಕೇವಲ ವಸ್ತುಗಳನ್ನು ಮಾರಲು ಮಾತ್ರ ಬಳಸುವುದಿಲ್ಲ. ಇದನ್ನು ಮಾರ್ಕೆಟಿಂಗ್ ಟೂಲ್ (Marketing Tool) ಆಗಿ ಬಳಸುತ್ತದೆ,

                Amazon ಕೇವಲ ಆನ್ಲೈನ್ನಲ್ಲಿ ವಸ್ತುಗಳನ್ನು ಮಾರುವ ಕಂಪನಿ ಮಾತ್ರವಲ್ಲ. ಅದು ದೊಡ್ಡ ಮಟ್ಟದಲ್ಲಿ ಮೂಲಸೌಕರ್ಯ (Infrastructure) ನಿರ್ಮಿಸಿ, ಅದನ್ನು ಇತರರಿಗೆ ಬಳಸಲು ಕೊಡುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ಅಮೇಜಾನ್‌, “ಈಗ ಹೂಡಿಕೆ ಮಾಡಿ, ನಂತರ ಗೆಲುವು ಸಾಧಿಸು”

ಎಂಬ ತಂತ್ರವನ್ನು ಬಳಸುತ್ತಿದೆ.

ಅಮೇಜಾನ್ನಿಂದ  ಕಲಿಯಬೇಕಾದ ಪಾಠಗಳು.

 business ಗೆ apply ಮಾಡಬಹುದು:

  • ಗ್ರಾಹಕ ಪ್ರಥಮ ಧೋರಣೆ(Customer first approach).
  • ಬಹು ಆದಾಯ ಮಾರ್ಗಗಳು Multiple income streams).
  • ದೀರ್ಘಕಾಲದ ಚಿಂತನೆ(Long-term thinking).
  • ದತ್ತಾಂಶ ಆಧಾರಿತ ನಿರ್ಧಾರಗಳು (Data-driven decisions).
  • ಪೂರ್ಣ ವ್ಯವಸ್ಥೆ (ಇಕೋಸಿಸ್ಟಮ್) ನಿರ್ಮಾಣ ಮಾಡುವುದು.

 

ಅಮೇಜಾನ್‌ ಯಶಸ್ಸಿನ ರಹಸ್ಯ.

ಅಮೇಜಾನ್‌ ಉತ್ಪಾದಕ ಕಂಪನಿ ಅಲ್ಲ. ಅದು ಒಂದು ವ್ಯವಸ್ಥಿತ, ಪೂರ್ಣವ್ಯವಸ್ಥೆಯ ಕಂಪನಿ. ಗ್ರಾಹಕರ ಸಂತೃಪ್ತಿ, ತಂತ್ರಗಳು, ತಾಳ್ಮೆ ಇವುಗಳ ಒಟ್ಟು ಮೊತ್ತವೆ, Amazon ಅನ್ನು ವಿಶ್ವದ ಶಕ್ತಿಶಾಲಿ ಕಂಪನಿಯನ್ನಾಗಿ ಮಾಡಿವೆ

Amazon ಪ್ರಮುಖ ತತ್ವವೇCustomer Obsession (ಗ್ರಾಹಕರಿಗೆ ಮೊದಲ ಆದ್ಯತೆ)

  • ಗ್ರಾಹಕರಿಗೆ ಕಡಿಮೆ ಬೆಲೆ.
  • ವೇಗವಾದ ಡೆಲಿವರಿ (Prime ಸೇವೆ.)
  • ಸುಲಭ ರಿಟರ್ನ್ ಪಾಲಿಸಿ.
  • personalized recommendations .

Amazon ಯಾವಾಗಲೂಗ್ರಾಹಕನು ಏನು ಬಯಸುತ್ತಾನೆ?” ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಬಂದಿದೆ. ಅದರ ಫಲಿತಾಂಶವೆ ಇಂದು ವಿಶ್ವದ ಕೋಟ್ಯಂತರ ಗ್ರಾಹಕರ ವಿಶ್ವಾಸ ಗಳಿಸಿದೆ. E-commerce ಕ್ಷೇತ್ರದಲ್ಲಿ ನಾಯಕತ್ವ ಗಳಿಸಿದೆ. ಮತ್ತು ಹೊಸ ಸೇವೆಗಳ (AWS, Prime Video) ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿದೆ.

ವ್ಯವಹಾರದಲ್ಲಿ ಗ್ರಾಹಕರನ್ನು ಕೇಂದ್ರದಲ್ಲಿಟ್ಟರೆ, ಯಶಸ್ಸು ಸ್ವಯಂ ಬರುತ್ತದೆ.

 IKEA – Innovation ಮತ್ತು Cost Efficiency.

IKEA ವಿಶ್ವದ ಅತ್ಯಂತ ಜನಪ್ರಿಯ ಫರ್ನಿಚರ್ ಬ್ರಾಂಡ್ಗಳಲ್ಲಿ ಒಂದು. ಇದನ್ನು Ingvar Kamprad, 1943ರಲ್ಲಿ ಸ್ಥಾಪಿಸಿದರು.

IKEA ಯಶಸ್ಸಿಗೆ ಮೂಲ ಕಾರಣaffordable + stylish furniture.

  • Flat-pack furniture (ಗ್ರಾಹಕರು ಸ್ವತಃ ಅಸೆಂಬಲ್ ಮಾಡಿಕೊಳ್ಳುವ ವಿಧಾನ)
  • ಕಡಿಮೆ ಉತ್ಪಾದನಾ ವೆಚ್ಚ.
  • ಸರಳ ಮತ್ತು ಕಡಿಮೆ ಅಂಶಗಳ ವಿನ್ಯಾಸ (minimalistic design).
  • ಸ್ವಯಂ ಸೇವೆ ಅಂಗಡಿ ಅನುಭವ (self-service store experience).

ಇವುಗಳಿಂದ IKEA ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಸಾಧ್ಯವಾಯಿತು. ಇದರ ಫಲಿತವಾಗಿ ಜಗತ್ತಿನಾದ್ಯಂತ ಶಾಖೆಗಳು ಸ್ಥಾಪಿಸಲ್ಪಟ್ಟವು. ಮತ್ತು ಮಧ್ಯಮ ವರ್ಗದ ಗ್ರಾಹಕರಲ್ಲಿ ಅಪಾರ ಜನಪ್ರಿಯತೆ ಗಳಿಸಿ, ಶಾಪಿಂಗ್‌ ನ ವಿಭಿನ್ನ ಅನುಭವವನ್ನು ನೀಡಿತು.

‌                                                ಐಕಿಯಾ ಸೆಲ್ಫ್‌ ಸರ್ವಿಸ್‌ ಸ್ಟೋರ್

👉  Innovation ಮತ್ತು cost control ಒಂದೇ ವೇಳೆ ಇದ್ದರೆ, ವ್ಯವಹಾರವು ವೇಗವಾಗಿ ಬೆಳೆಯುತ್ತದೆ.
IKEA ಒಂದು ಉತ್ಪನ್ನ ಮಾತ್ರವಲ್ಲ, ಅದು “experience business”

IKEA ಭಾರತದಲ್ಲಿ 2018ರಲ್ಲಿತನ್ನ ವ್ಯಾಪಾರ ಆರಂಭಿಸಿತು.

 IKEA ದ ಪ್ರಮುಖ ಅಂಕಿಅಂಶಗಳು.

  • ₹1,860 ಕೋಟಿ revenue (FY25).
  • 110 million customers.
  • Online sales growth: 34%.
  • 6500+ products Indiaನಲ್ಲಿ.
  • 50+ items under ₹1000.

 

ಐಕಿಯಾದ ಭಾರತೀಯ ವ್ಯವಹಾರ ಸ್ಟ್ರಾಟಜಿ– Deep Analysis.

1. ಕಡಿಮೆ ಬೆಲೆ + ಭಾರತೀಕರಣ (Affordability + Indianization).

ಜನರಿಗೆ ಸುಲಭವಾಗಿ ಖರೀದಿಸಲು ಸಾಧ್ಯವಾಗುವ ಬೆಲೆ (affordable pricing) ಯಲ್ಲಿ, ಉತ್ಪನ್ನಗಳು ಮತ್ತು ಸೇವೆಗಳು ಭಾರತೀಯ ಸಂಸ್ಕೃತಿ, ರುಚಿ, ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳುವಂತಹ ಉತ್ಪನ್ನಗಳೆಡೆಗೆ ಗಮನ.

  • ₹200 ಒಳಗೆ ಉತ್ಪನ್ನಗಳು.
  • ₹1000 ಒಳಗೆ ಪೀಠೋಪಕರಣಗಳ ಆಯ್ಕೆ.
    IKEA India “premium brand” → “mass brand” ಆಗಿ transform ಆಗುತ್ತಿದೆ

2. ಆಹಾರ ತಂತ್ರ  Food Strategy (Very Unique).

ಬಿಸಿನೆಸ್ನಲ್ಲಿ ಗ್ರಾಹಕರನ್ನು ಆಕರ್ಷಿಸಲು ವಿಶೇಷವಾದ ಆಹಾರ ಯೋಜನೆ ಅಥವಾ ಐಡಿಯಾ ಬಳಸುವುದು. ಕಡಿಮೆ ಬೆಲೆಯ ಟೇಸ್ಟಿ ಫುಡ್ ನೀಡಿ, ಗ್ರಾಹಕರನ್ನು ಮತ್ತೆ ಮತ್ತೆ ಕರೆತರುವುದು
Food = footfall generator.

3. ಅಂಗಡಿ + ಆನ್ಲೈನ್ ಮಿಶ್ರ ಮಾದರಿ (Store + Online Hybrid Model)

  • ದೊಡ್ಡ ಮಳಿಗೆಗಳು (ಹೈದರಾಬಾದ್, ಮುಂಬೈ, ಬೆಂಗಳೂರು)
  • ಸಿಟಿ ಸ್ಟೋರ್ + ಆನ್ಲೈನ್‌ ಪ್ಲಾಟ್‌ ಫಾರಂ.

    ಒಂದೇ ಸಮಯದಲ್ಲಿ, ಫಿಜಿಕಲ್ ಅಂಗಡಿ (store) ಮತ್ತು ಆನ್ಲೈನ್ ಸೇವೆ ಇವೆರಡನ್ನೂ ಸೇರಿಸಿ ಬಿಸಿನೆಸ್ ನಡೆಸುವುದು. ಭಾರತದಲ್ಲಿ ಐಕಿಯಾಗೆ  ದೊಡ್ಡ ಮಳಿಗೆಗಳು ಮಾತ್ರ work ಆಗೋದಿಲ್ಲ.  ಅದಕ್ಕಾಗಿ ಸಣ್ಣ ಗಾತ್ರದ  ಸ್ಟೋರ್‌ ಗಳನ್ನು ಆರಂಭ ಮಾಡುತ್ತಿದೆ.

4. ಸ್ಥಳೀಯ ಪೂರೈಕೆ ತಂತ್ರ (Local Sourcing Strategy)

  • ಭಾರತೀಯ ಪೂರೈಕೆಯಲ್ಲಿ ಹೆಚ್ಚಳ (30% → 50% target).

👉 ಕಾರಣ:

  • ಕಡಿಮೆ ವೆಚ್ಚ.
  • ಭಾರತೀಯ ಅಭಿರುಚಿಗೆ ತಕ್ಕಂತೆ ಹೊಂದಾಣಿಕೆ.
  • ರಫ್ತು ಅನುಕೂಲತೆ.

ಆನ್‌ಲೈನ್ ವ್ಯವಹಾರದಲ್ಲಿ ಲಾಭ ಗಳಿಸಲು ಅತ್ಯುತ್ತಮ eCommerce ತಂತ್ರಗಳು.!!👇

 https://www.capturingdaysoflife.com/2026/02/e-commerce-business-ideas.html 

ಮಾರುಕಟ್ಟೆಯ ಅವಕಾಶ.( Market Opportunity)

    ಭಾರತೀಯ ಮನೆಗಳ ಅಲಂಕಾರ ಮತ್ತು ಉಪಕರಣಗಳ ಮಾರುಕಟ್ಟೆ( India home furnishing market) → $48 billion by 2030. ಹಾಗಾಗಿ  IKEA ಧೀರ್ಘಾವಧಿಗೆ ಎದರು ನೋಡುತ್ತಿದೆ. ಕಡಿಮೆ ಅವಧಿಯಲ್ಲಿ ಆದಾಯ ಗಳಿಸಲು ನೋಡುತ್ತಿಲ್ಲ.

 

                                                        ಅಮೆಜಾನ್‌  vs   ಐಕಿಯಾ

 Amazon vs IKEA – ಭಾರತದಲ್ಲಿ ಮುಖ್ಯ ವ್ಯತ್ಯಾಸ

ಅಂಶ

Amazon

IKEA

Model

Platform (Marketplace)

Product + Experience

Focus

Customer obsession

Affordability + Design

Growth Driver

Logistics + sellers

Stores + localization

Revenue Scale

₹25,000+ Cr

₹1,860 Cr

Strategy

Scale first

Long-term investment

 ಮತ್ತಷ್ಟು ಮಾಹಿತಿಗಾಗಿ ಕೆಳಗಿನ ಅಫಿಷಿಯಲ್‌ ವೆಬ್‌ ಸೈಟ್‌ ಗೆ ಭೇಟಿ ನೀಡಿ.👇

  • Amazon official site
  • Amazon Web Services
  • IKEA India
  •     ವ್ಯವಹಾರದಲ್ಲಿ ಯಶಸ್ಸು ಒಂದು ದಿನದಲ್ಲಿ ಬರುವುದಿಲ್ಲ. ಅದು ಸರಿಯಾದ ತಂತ್ರ, ನಿರಂತರ ಕಲಿಕೆ ಮತ್ತು ಸಮಯಕ್ಕೆ ತಕ್ಕ ಬದಲಾವಣೆಗಳಿಂದ ಮಾತ್ರವೆ ಸಾಧ್ಯ.

        Amazon ನಮಗೆ ಗ್ರಾಹಕರ ಮಹತ್ವವನ್ನು ಕಲಿಸುತ್ತದೆ. IKEA ಹೊಸ ಆಲೋಚನೆಗಳು ಮತ್ತು ಕಡಿಮೆ ವೆಚ್ಚದ ತಂತ್ರವನ್ನು ತೋರಿಸುತ್ತದೆ.

    👉 ನೀವು ಬ್ಲಾಗರ್ ಆಗಿದ್ದರೆ ಅಥವಾ ವ್ಯವಹಾರ ಪ್ರಾರಂಭಿಸಲು ಯೋಚಿಸುತ್ತಿದ್ದರೆ,  ಕಥೆಗಳು ನಿಮಗೆ ದಿಕ್ಕು ತೋರಿಸುವ ಮಾರ್ಗದರ್ಶಿಯಾಗಬಹುದು.Bottom of Form

     

     

    ಮುಕ್ತಾಯ.


    ಕಾಮೆಂಟ್‌ಗಳು

    thoghts of 20's

    ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

    💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

    🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

    ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

    🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

    💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

    ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

    "ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

    "ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

    ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????