Homeschooling ಭಾರತದಲ್ಲಿ ಕಾನೂನುಬದ್ಧವೇ? NIOS ಮೂಲಕ 10ನೇ 12ನೇ ಪರೀಕ್ಷೆ ಬರೆಯಬಹುದೇ?
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
Homeschooling in India
ಲೇಖಕಿ:ನಾಗಲಕ್ಷ್ಮಿ ಕೆ. ಎನ್ ದಿನಾಂಕ:೨೭.೦೨.೨೦೨೬.
Homeschooling in India: 7 ಪ್ರಮುಖ ಸತ್ಯಗಳು, NIOS ನೋಂದಣಿ ಮತ್ತು Career ಅವಕಾಶಗಳ ಸಂಪೂರ್ಣ ಮಾರ್ಗದರ್ಶಿ.
ಶಿಕ್ಷಣವೆಂದರೆ,
ಪದವಿ ಹೊಂದುವ ಅಥವಾ ಉದ್ಯೋಗ ಪಡೆಯುವ
ಸಾಧನ ಅಲ್ಲವೇ ಅಲ್ಲ; ಅದು ವ್ಯಕ್ತಿಯ ಜೀವನದ
ದಿಕ್ಕನ್ನು ನಿರ್ಧರಿಸುವ ಮೂಲಭೂತ ಶಕ್ತಿ. ಮನುಷ್ಯನಿಗೆ ಚಿಂತನೆ, ವರ್ತನೆ, ನಿರ್ಧಾರ ಸಾಮರ್ಥ್ಯ ಮತ್ತು ಸಮಾಜದಲ್ಲಿ ಅವನ ಪಾತ್ರವನ್ನು ರೂಪಿಸುವ
ಪ್ರಮುಖ ಸಾಧನವೇ ಶಿಕ್ಷಣ.
ಇಂದಿನ
ಶಿಕ್ಷಣ ಪದ್ಧತಿಯಲ್ಲಿ, ಒಂದೇ ರೀತಿಯ ಪಾಠ ಪದ್ಧತಿ, ಪರೀಕ್ಷಾ ಒತ್ತಡ ಮತ್ತು ತೀರದ ಸ್ಪರ್ಧೆಗಳು ಪೋಷಕರಲ್ಲಿ
ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತಿದೆ. ಮಕ್ಕಳಿಗೆ
ಕಲಿಕೆ ಎಂದರೇ ಕೇವಲ ಅಂಕಗಳೇನಾ??...ಎಲ್ಲಾ ಮಕ್ಕಳಿಗೂ ಒಂದೇ ರೀತಿಯಲ್ಲಿ ಭೋದಿಸುವ ವಿಧಾನ ಸೂಕ್ತವೇ?..
ಇಂತಹ ಪ್ರಶ್ನೆಗಳ ನಡುವೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ತಂದೆ ತಾಯಿಯರ ಗಮನವನ್ನು ಸೆಳೆಯುತ್ತಿರುವ
ಪರ್ಯಾಯ ಶಿಕ್ಷಣ ಮಾದರಿಯೇ ಈ ಮನೆಶಿಕ್ಷಣ.(
Homeschooling)
ಇತ್ತೀಚಿನ
ವರ್ಷಗಳಲ್ಲಿ ಭಾರತದಲ್ಲಿಯೂ ಈ Homeschooling ನ
ಬಗ್ಗೆ ಅರಿವು ಹೆಚ್ಚುತ್ತಿದೆ. ಕರೋನಾ ಕಾರಣದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಆದ ಅಗಾಧ ಬದಲಾವಣೆಯೆಂದರೆ,
ಈ ಆನ್ ಲೈನ್ ಕ್ಲಾಸ್ ಗಳು. ಇದರ ಜೊತೆಗೆ ಭಾರತದ
ಹಲವಾರು ಪ್ರಾಚೀನ ಕಾಲದ ಸಂಪ್ರದಾಯಬದ್ದಆಚರಣೆಗಳು ಈ ಸಮಯದಲ್ಲಿ ಮುನ್ನಲೆಗೆ ಬಂದವು. ಅದರಲ್ಲಿ ಒಂದಾದ
ಗುರುಕುಲ ಪದ್ಧತಿಯ ಪ್ರಾಮುಖ್ಯತೆಯ ವಿಚಾರಗಳು ಈ ಆನ್ಲೈನ್ ಮುಖಾಂತರವೇ ವಿನಿಮಯವಾದವು. ಇದನ್ನು ಆಧರಿಸಿ ಮತ್ತೆ ಮುನ್ನಲೆಗೆ ಬಂದಿರುವುದೆ, ಈ ಮನೆಶಿಕ್ಷಣ ಪದ್ಧತಿ.
ಆಧುನಿಕ ಶಿಕ್ಷಣ ಪದ್ದತಿಗೆ ಸವಾಲೆಸೆಯುವಂತೆ ಪ್ರಸ್ತುತ ದಿನಮಾನಗಳಲ್ಲಿ ಇದರ ಕುರಿತೇ ಚರ್ಚೆಯಾಗುತ್ತಿದೆ.
ಹಾಗಾದರೆ,
ಬನ್ನಿ ಈಗ ಭಾರತದಲ್ಲಿ ಈ Homeschooling(ಮನೆಶಿಕ್ಷಣ)
ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ, ಅದರ ಲಾಭಗಳು ಮತ್ತು ಸವಾಲುಗಳು, NIOS ಮೂಲಕ ಶಿಕ್ಷಣದ ಮಾರ್ಗ,
studyhacks, college ಸಿದ್ಧತೆ, ಮತ್ತು career ಅವಕಾಶಗಳ ಬಗ್ಗೆ ತಿಳಿಯೋಣ.
ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕೆರಿಯರ್ ಸಿದ್ದತೆ.👇
https://capturingdaysoflife.blogspot.com/2026/02/college-to-career-complete-guide.html
Homeschooling(ಮನೆಶಿಕ್ಷಣ) ಎಂದರೇನು?
Homeschooling ಎಂದರೆ ಮಕ್ಕಳು ಶಾಲೆಗೆ ಹೋಗದೆಯೇ ಮನೆಯಲ್ಲೇ ಪೋಷಕರು ಅಥವಾ ಟ್ಯೂಟರ್ ಮಾರ್ಗದರ್ಶನದಲ್ಲಿ
ಶಿಕ್ಷಣ
ಪಡೆಯುವ ವಿಧಾನವನ್ನೇ ಮನೆಶಿಕ್ಷಣ ಅಥವಾ Homeschooling
ಎನ್ನಲಾಗುತ್ತದೆ. ಇದು ಪರಂಪರಾಗತ ಶಾಲಾ
ವ್ಯವಸ್ಥೆಗೆ ಪರ್ಯಾಯ ಮಾರ್ಗವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿಯು ವಿಶ್ವದಾದ್ಯಂತ
ಜನಪ್ರಿಯವಾಗಿದೆ. ಇಲ್ಲಿ
ಕಲಿಯುವಿಕೆಗೆ ಯಾವುದೇ ಕಟ್ಟುನಿಟ್ಟಿನ ಪಠ್ಯಕ್ರಮವಿರದೇ ಮಕ್ಕಳಿಗೆ ಅವರ ಆಸಕ್ತಿ,
ಸಾಮರ್ಥ್ಯ ಮತ್ತು ಕಲಿಯುವ
ವೇಗಕ್ಕೆ ಅನುಗುಣವಾಗಿ ಪಾಠಗಳನ್ನು
ರೂಪಿಸಲಾಗುತ್ತದೆ.
Homeschooling ಎಂದರೆ ಶಾಲೆಗೆ
ಹೋಗದೇ ಮನೆಯಲ್ಲಿ ಓದುವುದು ಎಂದರ್ಥವಲ್ಲ. ವೈಯಕ್ತಿಕ ಕಲಿಕೆಯೆಡೆಗೆ ಗಮನವಿಟ್ಟು, ಸ್ವತಂತ್ರ ವೇಗದಿಂದ, ಗುರಿ-ಆಧಾರಿತ ಶಿಕ್ಷಣದಡೆಗೆ
ಕೊಂಡೊಯ್ಯುವುದು.
Homeschooling ಹೇಗೆ ಕೆಲಸ ಮಾಡುತ್ತದೆ?
“ಮನೆಯೆ
ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು” ಈ ಸತ್ಯದ ಸಾಕಾರತೆಗೆ ಮನೆಶಿಕ್ಷಣವೇ ವೇದಿಕೆ. ಹಾಗಾಗಿ
ಇಲ್ಲಿ ಪೋಷಕರು ಮುಖ್ಯ
ಪಾತ್ರವನ್ನು ವಹಿಸುತ್ತಾರೆ. ತಮ್ಮ ಮಕ್ಕಳಿಗಾಗಿ, ಪಠ್ಯಕ್ರಮ (syllabus)ವನ್ನು ಆಯ್ಕೆ ಮಾಡುವ ಮೂಲಕ, ವಿಶೇಷ ದಿನಚರಿಯನ್ನು ರೂಪಿಸುತ್ತಾರೆ. ಮಕ್ಕಳಿಗೆ studyhacks ಮೂಲಕ ಪರೀಕ್ಷೆಗಳಿಗೆ ಹೇಗೆ
ತಯಾರಿ
ಮಾಡಬೇಕೆಂದು ಕಲಿಸುತ್ತಾರೆ.
ಈಗ ಒಬ್ಬ ವಿದ್ಯಾರ್ಥಿಗೆ ಗಣಿತ ವಿಷಯ ಕಷ್ಟವಾಗುತ್ತದೆ ಎಂದುಕೊಳ್ಳೋಣ. ಸಾಮಾನ್ಯವಾಗಿ ಶಾಲೆಯಲ್ಲಿ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿಯಾಗಿ ಪಾಠ ಹೇಳುತ್ತಾರೆ. ಆದರೆ Homeschooling ನಲ್ಲಿ ಅದೇ ವಿದ್ಯಾರ್ಥಿಗೆ, ಆ ವಿಷಯವನ್ನು ಪೋಷಕರು ಹೆಚ್ಚಿನ ಒತ್ತು ನೀಡಿ ಹೇಳಿಕೊಡುತ್ತಾರೆ. Online videos ಮೂಲಕ ಲೆಕ್ಕಗಳನ್ನು ವಿವರಿಸುತ್ತಾರೆ, ಹೆಚ್ಚು ಗಮನಕೊಟ್ಟು ಪ್ರತಿದಿನ ಸ್ವಲ್ಪ ಸ್ವಲ್ಪವೇ ಅಭ್ಯಾಸ ಮಾಡಿಸಬಹುದು ಇದರಿಂದ ಮಗುವಿಗೆ ವಿಷಯ ಸುಲಭವಾಗಿ ಅರ್ಥವಾಗುತ್ತದೆ.
ಮಕ್ಕಳನ್ನು
ಹೋಮ್ ಸ್ಕೂಲಿಂಗ್‌ಗೆ ಸೇರಿಸುವ ಮೊದಲು ಯೋಚಿಸಬೇಕಾದ ಪ್ರಮುಖ ವಿಷಯಗಳು.
Homeschooling ಈಗಿನ ಟ್ರೆಂಡ್ ಎಂದೋ ಅಥವಾ ಶಾಲೆಯಲ್ಲಿ ಚೆನ್ನಾಗಿ ಕಲಿಯುತ್ತಿಲ್ಲ ಎಂದುಕೊಂಡು ಸೇರಿಸಬೇಡಿ. ನಿಮ್ಮ ಕುಟುಂಬದ ಜೀವನಶೈಲಿ, ಮಗುವಿನ ಮನೋಭಾವ, ಮತ್ತು ಭವಿಷ್ಯದ ಶಿಕ್ಷಣ ಗುರಿಯನ್ನು ಹೊಂದುವ ನಿರ್ಧಾರವಾಗಬೇಕು. ಮತ್ತು ಈ ಸಮಯದಲ್ಲಿ ನಿಮ್ಮ ಮಗುವಿಗೆ, “Homeschooling ಉತ್ತಮವೇ?” ಎಂಬುದಕ್ಕೆ ಉತ್ತರ ಕಂಡುಕೊಳ್ಳಿ. ಹಾಗೂ ನಿಮ್ಮ ಮಗು ಹಾಗೂ ನಿಮ್ಮ ಕುಟುಂಬಕ್ಕೆ ಈ ಶಿಕ್ಷಣದ ಹಾದಿ ಸರಿಯಾಗಿದೆಯೇ ಎಂದು ಆಲೋಚಿಸಿ.
ಪ್ರತಿ
ಮಗುವಿನ ಕಲಿಕೆಯು ವಿಭಿನ್ನವಾಗಿರುತ್ತದೆ. ಕೆಲವು ಮಕ್ಕಳು ಸ್ವತಂತ್ರವಾಗಿ ಕಲಿಯಲು ಇಷ್ಟಪಡುತ್ತಾರೆ.
ಕೆಲವರು ಪ್ರತಿ ವಾಕ್ಯಕ್ಕೂ ಪ್ರಶ್ನೆಗಳನ್ನು ಕೇಳುತ್ತಾರೆ. ಇನ್ನೂ ಕೆಲವರು ಒತ್ತಡವಿಲ್ಲದೆ ಹೇಳಿಕೊಟ್ಟದ್ದನ್ನು
ಮಾತ್ರ ಕಲಿಯುತ್ತಾರೆ. ಕೆಲವರು ಗುಂಪಿನಲ್ಲಿ ಕಲಿಯಲು
ಇಷ್ಟಪಡುತ್ತಾರೆ. ಕೆಲವರು ಸಹಪಾಠಿಯೊಂದಿಗಿನ ಸ್ಫರ್ಧೆಯಿಂದ
ಪ್ರೇರಿತರಾಗಿ ಕಲಿಯುತ್ತಾರೆ. ಇನ್ನೂ ಕೆಲವು ಮಕ್ಕಳು ಕಟ್ಟುನಿಟ್ಟಾದ ಶಿಸ್ತಿನಿಂದ ಹೇಳಿಕೊಟ್ಟರೂ
ಕಲಿಯಲು ಮೊಂಡು ಬೀಳುತ್ತಾರೆ.
ಮಗುವು ಸ್ವತಃ ಕಲಿಯಲು ಆಸಕ್ತಿ ವಹಿಸುತ್ತಿದೆಯೇ? ಅಥವಾ
ಅಥವಾ ಕಲಿಯಲು ಹೊರಗಿನಿಂದ ಸಲಕರಣೆಗಳನ್ನು ಅಂದರೆ
ಪ್ರಕೃತಿಯೊಂದಿಗಿನ ಒಡನಾಟವನ್ನು ಬಯಸುತ್ತಿದೆಯೇ? ಎಂಬುದನ್ನು ಪೋಷಕರು ಸ್ವತಃ ಪರೀಕ್ಷಿಸುವುದು ಉತ್ತಮ.
Homeschooling
in India: ಪೋಷಕರ ಪಾತ್ರ.
ಮನೆಶಿಕ್ಷಣವು
ನಿಜವಾಗಿಯೂ ಪೋಷಕರ ಸಮಯ ಮತ್ತು ತಾಳ್ಮೆಯನ್ನು ಪರೀಕ್ಷಿಸುತ್ತದೆ. ಏಕಕಾಲದಲ್ಲಿ ಪೋಷಕರಾಗಿಯೂ ಮತ್ತು
ಶಿಕ್ಷಕರಾಗಿಯೂ ಇಲ್ಲಿ ಪಾತ್ರವಹಿಸಬೇಕಾಗುತ್ತದೆ. ಆದ್ದರಿಂದ ಮಗುವಿನ ಮೇಲೆ ನಿರಂತರ ಗಮನ ಅವಶ್ಯಕವಾಗಿರುತ್ತದೆ.
ಈ ಗಮನಿಕೆಯ ಕಾರಣವೇ ಪೋಷಕರಿಗೆ ತಾಳ್ಮೆ ಅತ್ಯಂತ ಅಗತ್ಯವಾಗುತ್ತದೆ.
ಈ
ತಾಳ್ಮೆಗಾಗಿ ದಿನಕ್ಕೆ ಎಷ್ಟು ಸಮಯ ಕೊಡಬಹುದು? ಮತ್ತು ಯಾವಾಗಲೂ ಹೀಗೆ ತಾಳ್ಮೆಯಿಂದಿರಲು ಸಾಧ್ಯವೆ
ಮತ್ತು ಕೆಲಸದ ಒತ್ತಡವನ್ನು ಸಹಿಸಿಕೊಂಡು ನಮ್ಮ ಮಗುವಿಗೆ ಈ ಮನೆಶಿಕ್ಷಣವನ್ನು ಕೊಡಿಸಲು ಸಾಧ್ಯವೇ ? ಎಂಬುದನ್ನು ವಿಶ್ಲೇಷಿಸಿ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ನಂತರವೂ,
ಕೊನೆಯಲ್ಲಿ ಏಳುವ ಮತ್ತೊಂದು ಪ್ರಶ್ನೆಯೆಂದರೆ, ಶಿಕ್ಷಣ ಆರಂಭಿಸಿದಾಗ ಇರುವ ಉತ್ಸಾಹ ಕೊನೆವರೆಗೂ ಇರುತ್ತದೆಯೇ???
ಎಂದು.
ಶಾಲಾಶಿಕ್ಷಣಕ್ಕೆ
ವಿರುದ್ಧವಾಗಿ ಮನೆಶಿಕ್ಷಣದ ಪದ್ಧತಿಯನ್ನು ಆಯ್ಕೆ ಮಾಡಿದಾಗ ಅದಕ್ಕೆ ಪೂರಕವಾಗುವಂತೆ ಮನೆಯಲ್ಲಿ ಕಲಿಕೆಯ
ವಾತಾವರಣ ಇರುವುದು ಸಹ ಅಷ್ಟೇ ಮುಖ್ಯವಾಗುತ್ತದೆ.
ಟಿ.ವಿ,
ಲ್ಯಾಪ್ಟಾಪ್, ಮೊಬೈಲ್ ಗಳಂತಹ ಮನೆಯ Distractions ಗಳ ನಿಯಂತ್ರಣ ಸಾಧ್ಯವೇ? ಎಂಬುದನ್ನು ನಿರ್ಧರಿಸಿ.
ಮಗು ಗಮನವಿಟ್ಟು ಕಲಿಯಲು ಶಾಂತ ಜಾಗ ಇದೆಯೇ? ಮತ್ತು
ನಿತ್ಯದ ಕಲಿಕೆಯಲ್ಲಿ ಸಮಯ ನಿರ್ವಹಣೆ ಸ್ಥಿರವಾಗಿರಬಹುದೇ? ಇವುಗಳನ್ನು ಸಾಧ್ಯವಾಗಿಸುವ ಹೊಣೆ ಪೋಷಕರದೇ
ಆಗಿರುತ್ತದೆ.
ಮನೆ
=ಕಲಿಯಲು ಆರಾಮವಾಗಿರುವ ಸ್ಥಳ → ಕಲಿಕೆಯಲ್ಲಿ ಶಿಸ್ತನ್ನು ನಿರ್ಮಿಸುತ್ತದೆ.
ಅತ್ಯಂತ
ತಪ್ಪಾಗಿ ಅರ್ಥವಾಗುವ ವಿಷಯವೆಂದರೆ, ಸಾಮಾಜಿಕ ಜೀವನ. ಮಕ್ಕಳಿಗೆ ಬಾಲ್ಯದಲ್ಲಿ ಬೆಳೆಯುವ ವಯಸ್ಸಿನಲ್ಲಿ
ಸ್ನೇಹಿತರ ಒಡನಾಟ ಬಲುಹಿತವಾಗಿರುತ್ತದೆ. ಸಹಜವಾಗಿ ತನ್ನ ಓರಗೆಯವರೊಂದಿಗಿನ ಮಾತು ಆಟ, ಒಡನಾಟ, ಜೊತೆಯಲ್ಲಿ ಕಲಿಯುವ
ಉತ್ಸಾಹ, ಸಹಕಾರ ಮನೋಭಾವಗಳು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕಾರಣವಾಗುತ್ತವೆ.
ಹಾಗಾಗಿ
ಮನೆಶಿಕ್ಷಣದಲ್ಲಿ ಸಾಮಾಜಿಕ ವಾತಾವರಣದ ವ್ಯವಸ್ಥೆ ಮಾಡಬಹುದೇ? ಈ ಪ್ರಶ್ನೆಗೆ ನೀವುಗಳು ಉತ್ತರವನ್ನು
ಆರಿಸಿಯೇ ಇರಬೇಕು. ಹೊರಗಿನ ಕ್ಲಬ್ ಗಳು, ಸ್ಪೋರ್ಟ್ಸ್
ಅಕಾಡೆಮಿಗಳಲ್ಲಿ, ಹಾಗೂ ಇದೇ ರೀತಿ ಕಲಿಯುವ ಮನೆಶಿಕ್ಷಣದ
ಮಕ್ಕಳೊಂದಿಗೆ ಬೆರೆಯಲು ಬಿಟ್ಟರೆ ಸ್ನೇಹ ಸಂಬಂಧಗಳು ಮಗುವಿಗೆ ಅರಿವಾಗುತ್ತವೆ. Homeschooling ನಲ್ಲಿ
social life ಸ್ವಯಂಚಾಲಿತವಾಗಿ ಸಿಗುವುದಿಲ್ಲ, ಹೊರಗಿನಿಂದ ಪೂರೈಕೆ ಅಗತ್ಯವಾಗುತ್ತದೆ.
homeschooling-social-exposure-activities
Studyhacks
for homeschool students.
ಮಗುವಿಗೆ Curriculum & Academic Path ಅನ್ನು ಮೊದಲು ಸ್ಪಷ್ಟವಾಗಿಟ್ಟುಕೊಳ್ಳಿ. ಶಾಲೆ ಮುಗಿದ ನಂತರ ಯೋಚಿಸೋಣ ಎಂಬುದು ಅಪಾಯಕಾರಿ. ಮುಖ್ಯವಾಗಿ, ಯಾವ syllabus? Board exams ಹೇಗೆ? College admission ಮಾರ್ಗ? ಇವುಗಳಿಗೆ ಸಂಬಂಧಿಸಿದ ಗೊಂದಲ ಬಗೆಹರಿಸಿಕೊಳ್ಳಿ. ಮನೆಶಿಕ್ಷಣದಲ್ಲಿ ಆಯ್ಕೆ ಮಾಡಬಹುದಾದ ಪಠ್ಯಕ್ರಮಗಳೆಂದರೆ, State Board syllabus, CBSE pattern, International curriculum, NIOS. ಇವುಗಳಲ್ಲಿ ಮಕ್ಕಳ college ಮತ್ತು carrer ಗೆ ಹೊಂದುವ ಗುರಿಯನ್ನು ಆರಿಸಬಹುದು.
ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಸ್ಟಡಿ ಟಿಪ್ಸ್ 👇
https://capturingdaysoflife.blogspot.com/2026/02/college-to-career-complete-guide.html
ನಿಮ್ಮ ಮಗುವಿಗೆ Homeschooling ಯಾಕೆ ಬೇಕು? ಇದು ಅತ್ಯಂತ ಮುಖ್ಯ ಪ್ರಶ್ನೆ.
ಕೇವಲ ಶಾಲೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ಹಾದಿಯ ಆಯ್ಕೆ ತಪ್ಪಾಗುತ್ತದೆ. ಸಾಮಾನ್ಯವಾಗಿ, school bullying ಅನುಭವಿಸುವ ಮಕ್ಕಳು, ದೈಹಿಕ ಸಮಸ್ಯೆ ಇರುವವರು, ದೀರ್ಘಕಾಲಿಕವಾಗಿ ಅನಾರೋಗ್ಯದ ಕಾರಣ, ವಿಶೇಷ ಕಲಿಕಾ ಅಗತ್ಯಗಳಿರುವವರು, ವಿಶೇಷಚೇತನರು, Sports / Arts ಗುರಿಗಳನ್ನು ಹೊಂದಿರುವವರು, ಕಲಿಯುವಿಕೆಗೆ Flexibility ಇರಬೇಕು ಎನ್ನುವವರು ಈ ಶಿಕ್ಷಣ ಪದ್ಧತಿಯನ್ನು ಆಯ್ಕೆ ಮಾಡುವುದು ಉತ್ತಮ.
ಯಾರೋ ಪಕ್ಕದವರು, ಬಂಧುಗಳು ಮನೆಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಅನುಸರಿಸುವುದು ಬೇಡ. ಏನೋ ಒಂದು ತಾತ್ಕಾಲಿಕವಾಗಿ ಸಮಸ್ಯೆಯಾಯ್ತು ಎನ್ನುವುದಕ್ಕೆ, ಶಾಶ್ವತ ಪರಿಹಾರ ಆಯ್ಕೆ ಮಾಡುವುದು ಬೇಡ. Homeschooling = stress-free ಎಂಬ ಭ್ರಮೆ ಬೇಡ. ವಾಸ್ತವದಲ್ಲಿ Homeschooling ವಿಭಿನ್ನ ರೀತಿಯ ಸವಾಲುಗಳನ್ನು ಹೊಂದಿದೆ.
ಮನೆಶಿಕ್ಷಣ ಆಯ್ಕೆ ಮಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಒಮ್ಮೆಲೆ ನಿರ್ಧರಿಸುವುದು ಬೇಡ. ಇಲ್ಲಿ ಶಿಕ್ಷಣ ಪಡೆಯುವ ವಿಧಾನ ಮಾತ್ರವಲ್ಲ, ಕುಟುಂಬದ ಹೊಂದಾಣಿಕೆಯು ಪರಿಣಾಮ ಬೀರುತ್ತದೆ. ಆದ್ದರಿಂದ ಸರಿಯಾದ ಆಯ್ಕೆಯೆಂದರೆ, ಮಗುವಿನ ಬೆಳವಣಿಗೆಗೆ ಸೂಕ್ತ ಪರಿಸರ ಒದಗಿಸುವುದು ಇದೇ ನೈಜ ಸತ್ಯ.
Homeschooling ಎನ್ನುವುದು ಅತ್ಯುತ್ತಮ ಅಥವಾ ಕೆಟ್ಟದು ಎಂದಲ್ಲ. ಇಲ್ಲಿ ಸೂಕ್ತ / ಅಸೂಕ್ತ ಮಾತ್ರ. ಭಾವನೆಗಳಿಗೆ ಒಳಗಾಗದೇ ವಾಸ್ತವ ವಿಶ್ಲೇಷಣೆಯಿಂದ ನಿರ್ಧಾರ ಮಾಡುವುದು ಸರಿಯಾಗುತ್ತದೆ.
Homeschooling ಭಾರತದಲ್ಲಿ ಹೇಗೆ ಪ್ರಾರಂಭಿಸಬೇಕು?
Homeschooling ಅನ್ನು ಭಾರತದಲ್ಲಿ ಪ್ರಾರಂಭಿಸುವುದು ಕಷ್ಟಕರವೆಂದು ಅನಿಸುತ್ತದೆ. ಆದರೆ ಸರಿಯಾದ ಯೋಜನೆ ಮತ್ತು ಮಾಹಿತಿ ಇದ್ದರೆ ಇದು ಸುಲಭ. ಭಾರತದಲ್ಲಿ Homeschooling ಅನ್ನು ನೇರವಾಗಿ ನಿಷೇಧಿಸಿಲ್ಲ. Right to Education (RTE) ಕಾಯ್ದೆಯ ಅಡಿಯಲ್ಲಿ, 6 ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲು ಸಂವಿಧಾನವು ಆದೇಶಿಸಿದೆ. ಆದರೆ ಮನೆಯಲ್ಲೇ education ನೀಡುವುದು ಸಹ ಕಾನೂನುಬದ್ಧವಾಗಿದೆ.
ಬಹಳಷ್ಟು ಪೋಷಕರು Open Schooling ಪದ್ಧತಿಯನ್ನು ಅನುಸರಿಸುತ್ತಾರೆ ಉದಾಹರಣೆಗೆ NIOS. NIOS (National Institute of Open Schooling) ಭಾರತ ಸರ್ಕಾರದ ಮಾನ್ಯತೆ ಪಡೆದ open schooling board. ಈ ಸಂಸ್ಥೆಯು ಶಾಲೆಗೆ ಹೋಗದೆಯೇ ಶಿಕ್ಷಣ ಪಡೆಯಲು ಅವಕಾಶ ನೀಡುತ್ತದೆ.
NIOS homeschooling student preparing for examsNIOS 10ನೇ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುತ್ತದೆ. Flexible subject ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ವರ್ಷಪೂರ್ತಿ ದಾಖಲಾತಿ ಲಭ್ಯವಿರುತ್ತದೆ. ಮತ್ತು ದೂರಶಿಕ್ಷಣ ಸ್ವಯಂ ಕಲಿಕಾ ಸಾಮಗ್ರಿಗಳು ಲಭ್ಯವಿರುತ್ತವೆ, NIOS ಮೂಲಕ Homeschooling ವಿದ್ಯಾರ್ಥಿಗಳು ಸರಕಾರಿ ಮಾನ್ಯತೆ ಹೊಂದಿದ ಪ್ರಮಾಣಪತ್ರ ಪಡೆಯಬಹುದು.
NIOS ನಲ್ಲಿ ನೋಂದಣಿ ಪ್ರಕ್ರಿಯೆ
- ಅಧಿಕೃತ
ವೆಬ್ಸೈಟ್ನಲ್ಲಿ ನೋಂದಣಿ ಮಾಡುವುದು.
👉 NIOS Official Website:
https://www.nios.ac.in/
- ಅಗತ್ಯ
ದಾಖಲೆಗಳನ್ನು ಸಲ್ಲಿಸುವುದು.
- Subject ಆಯ್ಕೆ.
- Study materials ಪಡೆಯುವುದು.
- ಪರೀಕ್ಷೆಗೆ
ಹಾಜರಾಗುವುದು.
ಉದಾಹರಣೆಗೆ,
Homeschooling + NIOS.
ಒಬ್ಬ
ವಿದ್ಯಾರ್ಥಿಯು regular school ಬಿಟ್ಟು
Homeschooling ಅನ್ನು ಆಯ್ಕೆ ಮಾಡುತ್ತಾನೆ. NIOS syllabus ಅನುಸರಿಸಿ, ದಿನಕ್ಕೆ 4 ಗಂಟೆ ಓದುತ್ತಾನೆ. ಮತ್ತು Entrance exam preparation ಮಾಡಿಕೊಳ್ಳುತ್ತಾನೆ. 12ನೇ ತರಗತಿಯ ನಂತರ
ಅವನು Engineering
college ಗೆ ಸೇರುತ್ತಾನೆ.ಇದು Homeschooling ಮತ್ತು NIOS ಮೂಲಕ ಸಾಧ್ಯವಾಗುತ್ತದೆ.
Career opportunities after NIOS and homeschooling
Frequently Asked Questions (FAQ.)
Homeschooling
in India ಕಾನೂನುಬದ್ಧವೇ?
ಹೌದು. ಭಾರತದಲ್ಲಿ Homeschooling ನೇರವಾಗಿ ನಿಷೇಧಿಸಲ್ಪಟ್ಟಿಲ್ಲ. ಪೋಷಕರು ಮಕ್ಕಳಿಗೆ ಮನೆಯಲ್ಲೇ ಶಿಕ್ಷಣ ನೀಡಬಹುದು. ಹೆಚ್ಚಿನವರು NIOS ಮೂಲಕ ಮಾನ್ಯತೆ ಪಡೆಯುತ್ತಾರೆ.
NIOS ಮೂಲಕ 10ನೇ ಮತ್ತು 12ನೇ ಪರೀಕ್ಷೆ ಬರೆಯಬಹುದೇ?
ಹೌದು. NIOS (National Institute of Open Schooling) 10ನೇ ಮತ್ತು 12ನೇ ತರಗತಿಯ ಸರಕಾರಿ ಮಾನ್ಯತೆ ಪಡೆದ ಪರೀಕ್ಷೆಗಳನ್ನು ನಡೆಸುತ್ತದೆ.
Homeschooling
ವಿದ್ಯಾರ್ಥಿಗಳು ಕಾಲೇಜಿಗೆ ಸೇರಬಹುದೇ?
ಖಂಡಿತವಾಗಿ.
NIOS ಪ್ರಮಾಣಪತ್ರ ಹೊಂದಿದ್ದರೆ Engineering, Medical, Arts, Commerce ಎಲ್ಲ ಕ್ಷೇತ್ರಗಳಿಗೂ
ಅರ್ಜಿ ಹಾಕಬಹುದು.
Homeschooling ನಲ್ಲಿ social exposure ಹೇಗೆ ಸಿಗುತ್ತದೆ?
Sports clubs, music classes, community groups, volunteering activities ಮೂಲಕ ಮಕ್ಕಳಿಗೆ ಸಾಮಾಜಿಕ ಸಂಪರ್ಕ ಸಿಗುತ್ತದೆ.
Homeschooling ಎಲ್ಲ ಮಕ್ಕಳಿಗೂ ಸೂಕ್ತವೇ?
ಇಲ್ಲ. ಸ್ವತಂತ್ರ ಕಲಿಕೆ ಇಷ್ಟಪಡುವ, flexibility ಬೇಕು ಎನ್ನುವ ಮಕ್ಕಳಿಗೆ ಹೆಚ್ಚು ಸೂಕ್ತ.
Homeschooling
ವೆಚ್ಚ ಹೆಚ್ಚು ಆಗುತ್ತದೆಯೇ?
ಇದು
ಪೋಷಕರು ಆರಿಸುವ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರುತ್ತದೆ. NIOS ಮೂಲಕ ಕಡಿಮೆ
ವೆಚ್ಚದಲ್ಲಿ ಶಿಕ್ಷಣ ಸಾಧ್ಯ.
Homeschooling ಭಾರತದಲ್ಲಿ ಸಂಪೂರ್ಣ ಸಾಧ್ಯ. ಸರಿಯಾದ planning, ಪೋಷಕರ ಬೆಂಬಲ ಮತ್ತು NIOS ಮಾರ್ಗದರ್ಶನ ಇದ್ದರೆ ಮಕ್ಕಳು ಉತ್ತಮ education ಪಡೆದು college ಮತ್ತು carrer ನಲ್ಲಿ ಯಶಸ್ಸು ಸಾಧಿಸಬಹುದು.
Homeschooling ಇಂದಿನ education ವ್ಯವಸ್ಥೆಯಲ್ಲಿ ಒಂದು ಕ್ರಾಂತಿಕಾರಿ ಪರ್ಯಾಯವಾಗಿದೆ.
ಇದು ಮಕ್ಕಳಿಗೆ ವೈಯಕ್ತಿಕ ಗಮನ, ಲಕ್ಷ್ಯ ಮತ್ತು ಉತ್ತಮ carrer ಅವಕಾಶಗಳನ್ನು ಒದಗಿಸುತ್ತದೆ. ಸರಿಯಾದ ಯೋಜನೆ, studyhacks ಮತ್ತು ಪೋಷಕರ ಬೆಂಬಲ ಇದ್ದರೆ Homeschooling ಒಂದು ಉತ್ತಮ ಆಯ್ಕೆಯಾಗಿದೆ.
ಮುಕ್ತಾಯ.
Bottom of Form
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು