ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಕಡಿಮೆ ಖರ್ಚಿನಲ್ಲಿ ಮನೆ ಅಲಂಕಾರ – Best Out of Waste ಸಂಪೂರ್ಣ ಗೈಡ್.

 

                                                                Best Out of Waste

ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ:೨೯.೦೪.೨೦೨೬

Best Out of Waste Ideas Kannada: ಮನೆ ಅಲಂಕಾರ ಮತ್ತು ಶಾಲಾ ಪ್ರಾಜೆಕ್ಟ್ಗಳಿಗೆ ಕಸದ ವಸ್ತುಗಳಿಂದ ಸುಂದರ DIY ಐಡಿಯಾಗಳು.Bottom of Form

ಇಂದಿನ ವೇಗದ ಜೀವನಶೈಲಿಯಲ್ಲಿ ನಮ್ಮ ದಿನನಿತ್ಯದ ಚಟುವಟಿಕೆಗಳಿಂದ ಅದೆಷ್ಟೋ ಕಸದ ವಸ್ತುಗಳನ್ನು ತಯಾರಿಸುತ್ತೇವೆ. ಆದರೆ ಕಸಎಂದರೆ ನಿಜವಾಗಿಯೂ ಕಸವೇನಾ? ಅಥವಾ! ಸರಿಯಾದ ಕಲ್ಪನೆ ಮತ್ತು ಸೃಜನಶೀಲತೆಯನ್ನು ಬಳಸಿ, ಅದನ್ನು ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸಬಹುದು ಎಂದು ಆಲೋಚಿಸಿ ಆ ಕಸಕ್ಕೊಂದು ಸುಂದರ ವಿಸ್ತೃತ ರೂಪ ಕೊಡುವ ಪ್ರಕ್ರಿಯೆಯನ್ನೇ “Best Out of Waste” ಎಂದು ಕರೆಯಲಾಗುತ್ತದೆ.

ಅದೇ ವಸ್ತುಗಳು ನಮ್ಮ ಮನೆ ಅಲಂಕಾರಕ್ಕೆ ಮತ್ತು ಮಕ್ಕಳ ಶಾಲಾ ಪ್ರಾಜೆಕ್ಟ್ಗಳಿಗೆ ಅಮೂಲ್ಯ ಸಂಪತ್ತಾಗಬಹುದು.

“Best Out of Waste” ಎಂಬುದು ಕೇವಲ ಒಂದು ಹವ್ಯಾಸವಲ್ಲ.. ಇದು ಪರಿಸರ ಸ್ನೇಹಿ ಜೀವನದ ಒಂದು ಸುಂದರ ಭಾಗ. ಲೇಖನದಲ್ಲಿ, ನಾವು ಸುಲಭವಾಗಿ ಮಾಡಬಹುದಾದ ಮತ್ತು ಎಲ್ಲರಿಗೂ ಅನುಕೂಲವಾಗುವ ಹಲವು ಉಪಾಯಗಳನ್ನು ತಿಳಿಯಬಹುದು.

 Best Out of Waste ಎಂದರೇನು?

ಬಳಸಿದ(ತ್ಯಜಿಸಿದ) ಅಥವಾ ಅನಾವಶ್ಯಕ ವಸ್ತುಗಳನ್ನು ಮರುಬಳಕೆ ಮಾಡಿ ಹೊಸದಾಗಿ ಉಪಯುಕ್ತ ವಸ್ತುಗಳಾಗಿ ಪರಿವರ್ತಿಸುವ ಸೃಜನಶೀಲ ಪ್ರಕ್ರಿಯೆಯನ್ನು “Best Out of Waste” ಎಂದು ಕರೆಯುತ್ತಾರೆ.

ಇದು ಮಕ್ಕಳಿಗೆ ಕಲಿಕೆಯ ಸಾಧನವಾಗಿ, ಗೃಹಿಣಿಯರಿಗೆ ಉಪಯುಕ್ತ ಚಟುವಟಿಕೆಯಾಗಿ ಮತ್ತು ಎಲ್ಲರಿಗೂ ಪರಿಸರ ರಕ್ಷಣೆ ಮಾಡುವ ಒಂದು ಅತ್ಯುನ್ನತ ಮಾರ್ಗವಾಗಿದೆ.

Best Out of Waste ಯಾಕೆ ಮುಖ್ಯ?

·         ಪರಿಸರ ರಕ್ಷಣೆ:-ಕಸದ ಪ್ರಮಾಣವನ್ನು ಕಡಿಮೆ ಮಾಡಿ ಪರಿಸರವನ್ನು ಮಾಲಿನ್ಯಮುಕ್ತವಾಗಿಸಿ, ಶುದ್ಧವಾಗಿಡಲು ಸಹಾಯ ಮಾಡುತ್ತದೆ.

·         ಹೊಸ ವಸ್ತುಗಳನ್ನು ಖರೀದಿಸುವ ಅಗತ್ಯ ಕಡಿಮೆಯಾಗಿ, ಹಣದ ಉಳಿತಾಯ ಮಾಡುತ್ತದೆ.

·         ಮಕ್ಕಳು ಮತ್ತು ವಿದ್ಯಾರ್ಥಿಗಳಲ್ಲಿ ಕಲ್ಪನೆ ಮತ್ತು ಕೈಚಳಕ ಹೆಚ್ಚಳವಾಗಿ ಸೃಜನಶೀಲತೆ ಅಭಿವೃದ್ಧಿಯಾಗುತ್ತದೆ.

·         ಕುಟುಂಬದೊಂದಿಗೆ ಒಟ್ಟುಗೂಡಿ,ಕೆಲಸ ಮಾಡುವುದು ಸಂತೋಷವನ್ನು ಹೆಚ್ಚಿಸುತ್ತದೆ.

·         Best Out of Waste ಇದು ಒಂದು ಉತ್ತಮ ಹವ್ಯಾಸ ಮತ್ತು ಶಿಕ್ಷಣದ ಸಾಧನವಾಗಿದ್ದು, ಮಕ್ಕಳಲ್ಲಿ ಕಲಿಕೆಯ ಮನೋಭಾವಕ್ಕೆ ನೀರೆರೆಯುತ್ತದೆ.

ಸಂವಹನ ಕೌಶಲ್ಯಗಳು.👇 

https://www.capturingdaysoflife.com/2026/04/10_01954370162.html  

 Best Out of Waste Ideas (ಪ್ರಯೋಗಾತ್ಮಕ ಐಡಿಯಾಗಳು).

ಮನೆ ಅಲಂಕಾರಕ್ಕಾಗಿ Best Out of Waste Ideas.

1) ಪ್ಲಾಸ್ಟಿಕ್ ಬಾಟಲ್ನಿಂದ ಗಿಡದ ಕುಂಡ ತಯಾರಿಸುವುದು.

ಬಳಸಿದ ಹಳೆಯ ಪ್ಲಾಸ್ಟಿಕ್ ಬಾಟಲ್ಗಳನ್ನು ಕತ್ತರಿಸಿ, ಬಣ್ಣ ಹಚ್ಚಿ, ಮಣ್ಣು ಹಾಕಿ ಅದರಲ್ಲಿ ಸಣ್ಣ ಗಿಡಗಳನ್ನು ನೆಡಬಹುದು.
👉 ಇದು ಬಾಲ್ಕನಿ ಅಥವಾ ಕಿಟಕಿಯ ಅಲಂಕಾರಕ್ಕೆ ಸೂಕ್ತವಿರುತ್ತದೆ. ಮತ್ತು ಮನೆಯಲ್ಲಿ ಪರಿಸರ ಸ್ನೇಹಿ ವಾತಾವರಣವಿರುತ್ತದೆ.

2) ಗ್ಲಾಸ್ ಜಾರ್ನಿಂದ ಲ್ಯಾಂಪ್.

ಹಳೆಯ ಗ್ಲಾಸ್ ಅಥವಾ ಬಳಸಿದ ಜಾರ್ಗೆ ಬಣ್ಣ, ಗ್ಲಿಟ್ಟರ್ ಹಾಕಿ ಅದರಲ್ಲಿ ಲೈಟ್ಅಥವಾ ಮೆಣದಬತ್ತಿಯನ್ನು ಬೆಳಗಿಸಿದರೆ, ಸುಂದರ ಲ್ಯಾಂಪ್ ಆಗುತ್ತದೆ.
👉 ಹಬ್ಬಗಳಲ್ಲಿ, ಮನೆಯಲ್ಲಿ ವಿಶೇಷವಾದ ಸಂದರ್ಭಗಳಲ್ಲಿ ಬಳಸಬಹುದು.

3) ಹಳೆಯ CDಗಳಿಂದ ವಾಲ್ ಡೆಕೋರ್.

ಹಳೆಯ CDಗಳಿಗೆ ವಿವಿಧ ಬಣ್ಣಗಳನ್ನು ಹಚ್ಚಿ ಅಥವಾ ಅಲಂಕರಿಸಿ ಗೋಡೆಗೆ ಹಾಕಬಹುದು.
👉 ಲಿವಿಂಗ್ ರೂಮ್ಗೆ ಸ್ಟೈಲಿಷ್ ಲುಕ್ ಕೊಡುತ್ತದೆ.

4) ಹಳೆಯ ಬಟ್ಟೆಯಿಂದ ಕುಶನ್ ಕವರ್.

ಬಳಸದ ಸೀರೆ ಅಥವಾ ಡ್ರೆಸ್ಗಳಿಂದ ಕುಶನ್ ಕವರ್ ತಯಾರಿಸಬಹುದು, ಇದು ಮನೆಗೆ ಹೊಸ ಲುಕ್ ಕೊಡುತ್ತದೆ. ಹಳೆಯ ಟಿ-ಶರ್ಟ್ಅಥವಾ ಸೀರೆಗಳಿಂದ ಸುಂದರ ಬ್ಯಾಗ್ಗಳನ್ನು  ಸಹ ತಯಾರಿಸಬಹುದು.

5) ಕಾರ್ಡ್ಬೋರ್ಡ್ನಿಂದ ಸ್ಟೋರೇಜ್ ಬಾಕ್ಸ್.

ಹಳೆಯ ಪೆಟ್ಟಿಗೆಗಳನ್ನು ಕಾಗದ ಅಥವಾ ಬಟ್ಟೆಯಿಂದ ಅಲಂಕರಿಸಿ ಸ್ಟೋರೇಜ್ ಬಾಕ್ಸ್ಆಗಿ ಬಳಸಬಹುದು.

ಶಾಲಾ ಪ್ರಾಜೆಕ್ಟ್ಗಳಿಗೆ ಸೂಕ್ತವಾದ ಐಡಿಯಾಗಳು.

  • ಪೆನ್ ಸ್ಟ್ಯಾಂಡ್ (ಪ್ಲಾಸ್ಟಿಕ್ ಬಾಟಲ್ ಉಪಯೋಗಿಸಿ)
  • ಫೋಟೋ ಫ್ರೇಮ್ (ಕಾರ್ಡ್ಬೋರ್ಡ್ ಬಳಸಿ)
  • ವಾಲ್ಹ್ಯಾಂಗಿಂಗ್‌ (ಪೇಪರ್ನಿಂದ ತಯಾರಿಸಿ)
  • ಗಾರ್ಡನ್ಡೆಕೋರ್‌ (ಬಾಟಲ್ಗಳಿಂದ ಅಲಂಕರಿಸಿ)

 1) ಪೆನ್ ಸ್ಟ್ಯಾಂಡ್ (ಬಾಟಲ್ ಅಥವಾ ಟಿನ್)

ಬಳಸಿದ ಟಿನ್ ಅಥವಾ ಬಾಟಲ್ಗಳನ್ನು ಕತ್ತರಿಸಿಬಣ್ಣ ಹಚ್ಚಿ ಪೆನ್ ಸ್ಟ್ಯಾಂಡ್ ಆಗಿ ಮಾಡಬಹುದು.

2) ಮಿನಿ ಹೌಸ್ ಮಾದರಿ (ಕಾರ್ಡ್ಬೋರ್ಡ್)

ಹಳೆಯ ಕಾರ್ಡ್‌ ಬೋರ್ಡ್‌ ಪೆಟ್ಟಿಗೆಗಳನ್ನು ಬಳಸಿ ಮನೆ ಮಾದರಿಯನ್ನು ತಯಾರಿಸಿ ಬಣ್ಣ ಬಳಿದರೆ ಸುಂದರ ಆಕೃತಿಯಾಗುತ್ತದೆಇದು ಶಾಲಾ ಎಕ್ಸಿಬಿಷನ್ಗಳಿಗೆ ಸೂಕ್ತ.

3) ಎಕೋ ಸಿಸ್ಟಂ ಮಾದರಿ.

ಪೇಪರ್ಬಾಟಲ್ಮಣ್ಣು ಬಳಸಿ ಪರಿಸರ ವ್ಯವಸ್ಥೆಯ ಮಾದರಿಯನ್ನು ತಯಾರಿಸಬಹುದು.

4) ಫೋಟೋ ಫ್ರೇಮ್ (ಕಾರ್ಡ್ಬೋರ್ಡ್).

ಹಳೆಯ ಕಾರ್ಡ್ಬೋರ್ಡ್ ಬಳಸಿ ಸುಂದರ ಫೋಟೋ ಫ್ರೇಮ್ ಮಾಡಬಹುದು.

5) ಪೇಪರ್ ಮಾಸ್ಕ್‌.

ಪತ್ರಿಕೆ ಅಥವಾ ಕಾರ್ಡ್ಬೋರ್ಡ್ ಬಳಸಿ ವಿವಿಧ ಮುಖವಾಡಗಳನ್ನು ತಯಾರಿಸಬಹುದು.

ಆಕೃತಿಗಳನ್ನು ಮಾಡಲು ಯಾವ ವಸ್ತುಗಳನ್ನು ಬಳಸಬಹುದು ಎಂದು ಮೊದಲು ಯೋಚಿಸಿ.
ಸುರಕ್ಷತೆಯನ್ನು ಗಮನದಲ್ಲಿಡಿ. (ಕತ್ತರಿ, ಗ್ಲೂ)
ಸರಳವಾದ ಐಡಿಯಾಗಳಿಂದ ಪ್ರಾರಂಭಿಸಿ.
ಕುಟುಂಬದೊಂದಿಗೆ ಸೇರಿ ಮಾಡಿ.

 

ಪರಿಸರ ಸ್ನೇಹಿ ಜೀವನಕ್ಕೆ ಹೆಜ್ಜೆ.

Best Out of Waste ಕೇವಲ ಹವ್ಯಾಸವಲ್ಲಇದು ನಮ್ಮ ಭವಿಷ್ಯವನ್ನು ರಕ್ಷಿಸುವ ಒಂದು ಚಳುವಳಿ. ನಾವು ಇಂದು ಸಣ್ಣ ಪ್ರಯತ್ನ ಮಾಡಿದರೆ, ನಾಳೆ ದೊಡ್ಡ ಬದಲಾವಣೆಯನ್ನು ಕಾಣಬಹುದು.

 Best Out of Waste ಮಾಡಲು ಟಿಪ್ಸ್!

ಸರಳ ವಸ್ತುಗಳು ಮತ್ತು ಸಣ್ಣದಾದ ಆಕೃತಿಗಳನ್ನು ಮಾಡುವುದರಿಂದ ಮೊದಲು ಪ್ರಾರಂಭಿಸಿ.
ಮಕ್ಕಳಿಗೆ ಮಾರ್ಗದರ್ಶನ ನೀಡಿ ಮತ್ತು ಅವರ ಸುರಕ್ಷತೆಯ ಕಡೆಗೆ ಆದ್ಯತೆ ನೀಡಿ.
ಬಣ್ಣ ಮತ್ತು ಅಲಂಕಾರದಲ್ಲಿ ಕ್ರಿಯೇಟಿವ್ ಆಗಿರಿ.
ಬಳಸುವ ವಸ್ತುಗಳನ್ನು ಸ್ವಚ್ಛವಾಗಿರಿಸಿ.

 ಗೃಹಿಣಿಯರಿಗಾಗಿ ವಿಶೇಷ ಸಲಹೆಗಳು.

  • ಹಳೆಯ ಬಾಟಲ್ಗಳಿಂದ kitchen storage ಮಾಡಬಹುದು.
  • ಹಳೆಯ ಬಟ್ಟೆಗಳಿಂದ reusable bags ಮಾಡಬಹುದು.
  • ಮನೆ ಅಲಂಕಾರವನ್ನು ಕಡಿಮೆ ಖರ್ಚಿನಲ್ಲಿ ಸುಂದರಗೊಳಿಸಬಹುದು.

 

ವಿದ್ಯಾರ್ಥಿಗಳಿಗಾಗಿ ಪ್ರಯೋಜನಗಳು.

  • ಸೈನ್ಸ್ ಮತ್ತು ಆರ್ಟ್ ಪ್ರಾಜೆಕ್ಟ್ಗಳಿಗೆ ಈ Best Out of Waste ಸಹಾಯ ಮಾಡುತ್ತದೆ.
  • ಕ್ರಿಯೇಟಿವಿಟಿ ಮತ್ತು ಲಾಜಿಕ್ ಅಭಿವೃದ್ಧಿಯಾಗುತ್ತದೆ.
  • ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯಕ.

 

ಪರಿಸರ ಸ್ನೇಹಿ ಜೀವನದ ದಾರಿ.

Best Out of Waste ಒಂದು ಸಣ್ಣ ಅಭ್ಯಾಸವಾಗಿದ್ದರೂ, ಇದು ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಮತ್ತು ಪ್ರತಿ ಮನೆಯಲ್ಲೂ ಚಟುವಟಿಕೆ ಶುರುವಾದರೆ, ನಮ್ಮ ಪರಿಸರ ಹೆಚ್ಚು ಸ್ವಚ್ಛವಾಗುತ್ತದೆ.

ಮನೆಯಲ್ಲೇ ಆರ್ಗಾನಿಕ್‌ ಕೃಷಿ👇

 https://www.capturingdaysoflife.com/2026/04/blog-post_20.htm

Best Out of Waste – ಹಂತ ಹಂತದ ಮಾರ್ಗದರ್ಶಿ.

1. ಪ್ಲಾಸ್ಟಿಕ್ ಬಾಟಲ್ನಿಂದ ಪ್ಲಾಂಟರ್ (ಗಿಡದ ಕುಂಡ) ತಯಾರಿಸುವುದು ತುಂಬಾ ಸುಲಭ, ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ವಿಧಾನ.

‌                                                                 ಪ್ಲಾಸ್ಟಿಕ್‌ ಬಾಟಲ್‌ ನ ಪ್ಲಾಂಟರ್

 1. ಅಗತ್ಯವಿರುವ ಸಾಮಗ್ರಿಗಳು.

  • ಖಾಲಿ ಪ್ಲಾಸ್ಟಿಕ್ ಬಾಟಲ್ (1 ಅಥವಾ 2 ಲೀಟರ್ನದ್ದು).
  • ಕತ್ತರಿ ಅಥವಾ ಚಾಕು.
  • ಮಣ್ಣು (ಪಾಟಿಂಗ್ ಮಿಕ್ಸ್).
  • ಸಣ್ಣ ಗಿಡ ಅಥವಾ ಬೀಜಗಳು.
  • ಪೇಂಟ್ / ಅಲಂಕಾರ ಸಾಮಗ್ರಿಗಳು (ಐಚ್ಛಿಕ).
  • ದಾರ ಅಥವಾ ಹಗ್ಗ (ಹ್ಯಾಂಗಿಂಗ್ ಪ್ಲಾಂಟರ್ಗೆ).

2. ಬಾಟಲ್ ಕತ್ತರಿಸುವುದು.

ಬಾಟಲ್ ಅನ್ನು ಮಧ್ಯದಲ್ಲಿ ಅಥವಾ ಬೇಕಾದ ಆಕಾರದಲ್ಲಿ ಕತ್ತರಿಸಿ. Horizontal (ಅಡ್ಡವಾಗಿ) ಅಥವಾ Vertical (ನೆಟ್ಟಗೆ) ಕತ್ತರಿಸಬಹುದು. ನಿಮ್ಮ ಡಿಸೈನ್ಗೆ ಅನುಗುಣವಾಗಿ ಆಕಾರ ಕೊಡಬಹುದು.

3. ನೀರು ಹರಿಯಲು ರಂಧ್ರ ಮಾಡುವುದು.

ಬಾಟಲ್ ಕೆಳಭಾಗದಲ್ಲಿ 2-3 ಸಣ್ಣ ರಂಧ್ರಗಳನ್ನು ಮಾಡಿರಿ. ಇದು ಹೆಚ್ಚುವರಿ ನೀರು ಹೊರಹೋಗಲು ಸಹಾಯ ಮಾಡುತ್ತದೆ. ಮತ್ತು ಗಿಡದ ಬೇರು ಕೊಳೆಯುವುದನ್ನು ತಡೆಯುತ್ತದೆ.

4. ಅಲಂಕಾರ ಮಾಡುವುದು (ಐಚ್ಛಿಕ).

ಬಾಟಲ್ ಮೇಲೆ ಪೇಂಟ್ ಹಚ್ಚಿ,ಕಾರ್ಟೂನ್, ಫ್ಲವರ್ ಡಿಸೈನ್ ಅಥವಾ ಕ್ರಿಯೇಟಿವ್ ಆರ್ಟ್  ಅನ್ನು ಮಾಡಬಹುದು. ಇದು ನಿಮ್ಮ ಮನೆಗೆ ಸುಂದರ ಲುಕ್ ಕೊಡುತ್ತದೆ.

5. ಮಣ್ಣು ತುಂಬಿ ಗಿಡ ನೆಡುವುದು.

ಮೊದಲು ಸ್ವಲ್ಪ ಕಲ್ಲು (drainage) ಹಾಕಿ ನಂತರ ಮಣ್ಣು ತುಂಬಿ, ಗಿಡವನ್ನು ನೆಟ್ಟು ನಿಧಾನವಾಗಿ ಒತ್ತಿರಿ,  ಸ್ವಲ್ಪ ನೀರು ಹಾಕಿ.

6. ಹ್ಯಾಂಗಿಂಗ್ ಮಾಡುವುದು ಅಥವಾ ನೆಲದಲ್ಲಿ ಇಡುವುದು.

ಹಗ್ಗ ಬಳಸಿ ಹ್ಯಾಂಗ್ ಮಾಡಬಹುದು. ಅಥವಾ ಟೇಬಲ್/ಬಾಲ್ಕನಿ ಮೇಲೆ ಇಡಬಹುದು. ಗೋಡೆಯ ಮೇಲೆ ಕೂಡ ಫಿಕ್ಸ್ ಮಾಡಬಹುದು.

ಉಪಯುಕ್ತ ಸಲಹೆಗಳು:

ಮಿಂಟ್, ಕೊತ್ತಂಬರಿ, ತುಳಸಿ, ಮನಿ ಪ್ಲಾಂಟ್ ನಂತಹ ಸಣ್ಣ ಗಿಡಗಳಿಗೆ ಈ ಪ್ರಯೋಗ ಸೂಕ್ತ.  ಹೆಚ್ಚು ಸೂರ್ಯಪ್ರಕಾಶ ಇರುವ ಸ್ಥಳದಲ್ಲಿ ಇಡಿ. ದಿನವೂ ಹೆಚ್ಚು ನೀರು ಹಾಕಬೇಡಿ.

ಸರಳವಾಗಿ ಹೇಳುವುದಾದರೆ, ತ್ಯಜಿಸಿ ಪ್ಲಾಸ್ಟಿಕ್ ಬಾಟಲ್ಗಳನ್ನು ಹೀಗೆ ಬಳಸುವುದರಿಂದ ಪರಿಸರವನ್ನು ಕಾಪಾಡಬಹುದು ಮತ್ತು ಮನೆಗೆ ಸುಂದರವಾದ ಗಾರ್ಡನ್ ಸೃಷ್ಟಿಸಬಹುದು.

2) ಟಿನ್ ಕ್ಯಾನ್ ಪೆನ್ ಸ್ಟ್ಯಾಂಡ್. (Pen Stand)

‌                                                                           ಟಿನ್‌ ಕ್ಯಾನ್‌ ಪೆನ್‌ ಸ್ಟಾಂಡ್

ಬೇಕಾಗುವ ವಸ್ತುಗಳು:

  • ಟಿನ್ ಅಥವಾ ಪ್ಲಾಸ್ಟಿಕ್ ಡಬ್ಬಿ
  • ಬಣ್ಣದ ಕಾಗದ/ ಪೇಂಟ್
  • ಗ್ಲೂ

ಮಾಡುವ ವಿಧಾನ:

  1. ಟಿನ್ ಕ್ಯಾನ್ ಡಬ್ಬಿಯನ್ನು ಚೆನ್ನಾಗಿ ತೊಳೆದು, ಸ್ವಚ್ಛಗೊಳಿಸಿ.
  2. ಮೇಲ್ಭಾಗದ ತುದಿ sharp ಇದ್ದರೆ tape ಅಂಟಿಸಿ.
  3. ಹೊರಭಾಗಕ್ಕೆ ಕಾಗದ ಸುತ್ತಿ ಅಂಟಿಸಿ ಅಥವಾ ಬಣ್ಣ ಹಚ್ಚಿ.
  4. ಸ್ಟಿಕರ್ಗಳಿಂದ ಅಲಂಕರಿಸಿ.
  5. ಪೆನ್, ಪೆನ್ಸಿಲ್ ಇಟ್ಟುಕೊಳ್ಳಲು ಬಳಸಿ.

👉 : ಮಕ್ಕಳಿಗೆ safe ಆಗಿರಲು edges ಮೃದುವಾಗಿರಲಿ ಇದು ಮಕ್ಕಳಿಗೆ ತುಂಬಾ ಉಪಯುಕ್ತ.

 

 3) ಗ್ಲಾಸ್ ಜಾರ್ ಲ್ಯಾಂಪ್. (Jar Lamp).

‌                                                                   ‌         ಗ್ಲಾಸ್‌ ಜಾರ್‌ ಲ್ಯಾಂಪ್

ಬೇಕಾಗುವ ವಸ್ತುಗಳು:

  • ಹಳೆಯ ಗ್ಲಾಸ್ ಜಾರ್ .
  • ಫೇರಿ ಲೈಟ್ಸ್ ಅಥವಾ ಮೆಣಬತ್ತಿ.
  • ಬಣ್ಣ / ಗ್ಲಿಟ್ಟರ್.

ಮಾಡುವ ವಿಧಾನ:

  1. ಜಾರ್ ಅನ್ನು ಸ್ವಚ್ಛಗೊಳಿಸಿ ಒಣಗಿಸಿ
  2. ಒಳಗೆ ಅಥವಾ ಹೊರಗೆ ಬಣ್ಣ/ಗ್ಲಿಟ್ಟರ್ ಹಚ್ಚಿ
  3. ಒಳಗೆ ಫೇರಿ ಲೈಟ್ ಹಾಕಿ
  4. ರಾತ್ರಿ ಹೊತ್ತಿನಲ್ಲಿ ಬೆಳಗಿಸಿ

👉  ಹಬ್ಬಗಳಲ್ಲಿ ವಿಶೇಷ ಅಲಂಕಾರಕ್ಕೆ ಬಳಸಬಹುದು.


 4) ಪತ್ರಿಕೆಗಳಿಂದ ಬಾಸ್ಕೆಟ್ (Newspaper Basket).

                                                                   Newspaper Basket

 1. ಅಗತ್ಯವಿರುವ ಸಾಮಗ್ರಿಗಳು.

  • ಹಳೆಯ ಪತ್ರಿಕೆಗಳು.
  • ಗ್ಲೂ (ಅಂಟು.)
  • ಕತ್ತರಿ.
  • ಸ್ಕೇಲ್ / ಸ್ಟಿಕ್ (ರೋಲ್ ಮಾಡಲು).
  • ಕ್ಲಿಪ್‌ಗಳು (ಐಚ್ಛಿಕ).
  • ಪೇಂಟ್ / ವರ್ನಿಶ್ (ಐಚ್ಛಿಕ).

 2. ಪತ್ರಿಕೆಯನ್ನು ಕತ್ತರಿಸಿ ಸ್ಟ್ರಿಪ್ ಮಾಡುವುದು.

ಪತ್ರಿಕೆಯನ್ನು ಉದ್ದವಾಗಿ ಸಮಾನ ಗಾತ್ರದ ಸ್ಟ್ರಿಪ್‌ಗಳಾಗಿ ಕತ್ತರಿಸಿ. ಸುಮಾರು 2–3 ಇಂಚು ಅಗಲ ಸಾಕು.

3. ಸ್ಟ್ರಿಪ್‌ಗಳನ್ನು ರೋಲ್ ಮಾಡುವುದು.

ಪ್ರತಿಯೊಂದು ಸ್ಟ್ರಿಪ್ ಅನ್ನು ಸ್ಟಿಕ್/ಪೆನ್ಸಿಲ್ ಬಳಸಿ ಬಿಗಿಯಾಗಿ ರೋಲ್ ಮಾಡಿ. ಕೊನೆಯಲ್ಲಿ ಗ್ಲೂ ಬಳಸಿ ಫಿಕ್ಸ್ ಮಾಡಿ. ಹೀಗೆ ಸಾಕಷ್ಟು ರೋಲ್‌ಗಳು ತಯಾರಿಸಿಕೊಳ್ಳಿ.

4. ಬೇಸ್ (ಅಡಿಪಾಯ) ಮಾಡುವುದು.

ಕೆಲವು ರೋಲ್‌ಗಳನ್ನು ಅಡ್ಡ-ಸರಳರೇಖೆಯಲ್ಲಿ ಇಟ್ಟು ಗ್ರಿಡ್ ಆಕಾರದಲ್ಲಿ ಜೋಡಿಸಿ. ಗ್ಲೂ ಬಳಸಿ ಬಲವಾಗಿ ಅಂಟಿಸಿ. ಇದು ಬಾಸ್ಕೆಟ್‌ನ ಅಡಿಪಾಯವಾಗುತ್ತದೆ.

5. ಬಾಸ್ಕೆಟ್ ಗೋಡೆಗಳನ್ನು ನೇಯುವುದು.

ಬೇಸ್‌ನಿಂದ ಮೇಲಕ್ಕೆ ರೋಲ್‌ಗಳನ್ನು ಎತ್ತಿ. ಮತ್ತೊಂದು ರೋಲ್ ತೆಗೆದುಕೊಂಡು ಒಳಗೆ-ಹೊರಗೆ ನೇಯುವಂತೆ ಹಾಕಿ. ಹೀಗೆ ಸುತ್ತುತ್ತಾ ಮೇಲಕ್ಕೆ ಬಾಸ್ಕೆಟ್ ಆಕಾರ ಕೊಡಿ.

6. ಫಿನಿಶಿಂಗ್ ಮತ್ತು ಅಲಂಕಾರ.

ಮೇಲಿನ ಭಾಗವನ್ನು ಸರಿಯಾಗಿ ಮುಚ್ಚಿ. ಪೇಂಟ್ ಅಥವಾ ವರ್ನಿಶ್ ಹಚ್ಚಿ. ಹ್ಯಾಂಡಲ್ ಸೇರಿಸಬಹುದು.

ಉಪಯುಕ್ತ ಸಲಹೆಗಳು:

  • ಬಿಗಿಯಾಗಿ ರೋಲ್ ಮಾಡಿದರೆ ಬಾಸ್ಕೆಟ್ ಹೆಚ್ಚು ಬಲವಾಗಿರುತ್ತದೆ.
  • ಗ್ಲೂ ಒಣಗಲು ಸಮಯ ನೀಡಿ.
  • ಬಣ್ಣ ಹಾಕಿದರೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಹಳೆಯ ಪತ್ರಿಕೆಗಳನ್ನು ಹೀಗೆ ಬಳಸುವುದರಿಂದ ನೀವು ಸುಂದರವಾದ, ಉಪಯೋಗಕಾರಿ ಮತ್ತು ಪರಿಸರ ಸ್ನೇಹಿ ಬಾಸ್ಕೆಟ್ ತಯಾರಿಸಬಹುದು. ಇದು ಮನೆಯ ಅಲಂಕಾರಕ್ಕೂ, ಮತ್ತು ವಸ್ತುಗಳನ್ನು ಇಡಲು ಕೂಡ ಉಪಯುಕ್ತ.

 5) ಕಾರ್ಡ್ಬೋರ್ಡ್ ಫೋಟೋ ಫ್ರೇಮ್.

‌                                                            ಕಾರ್ಡ್‌ ಬೋರ್ಡ್‌ ಫೋಟೋ ಫ್ರೇಮ್

ಬೇಕಾಗುವ ವಸ್ತುಗಳು:

  • ಕಾರ್ಡ್ಬೋರ್ಡ್
  • ಫೋಟೋ
  • ಗ್ಲೂ, ಅಲಂಕಾರ ವಸ್ತುಗಳು

ಮಾಡುವ ವಿಧಾನ:

  1. ಕಾರ್ಡ್ಬೋರ್ಡ್ ಅನ್ನು ಚೌಕ/ಆಯತ ಆಕಾರದಲ್ಲಿ ಕತ್ತರಿಸಿ.
  2. ಮಧ್ಯದಲ್ಲಿ ಫೋಟೋಗೆ ಜಾಗ ಬಿಡಿ.
  3. ಫೋಟೋ ಅಂಟಿಸಿ.
  4. ಸ್ಟೋನ್ಸ್, ಪೇಪರ್ ಫ್ಲವರ್ಗಳಿಂದ ಅಂಚನ್ನು ಅಲಂಕರಿಸಿ .

👉  ಶಾಲಾ ಪ್ರಾಜೆಕ್ಟ್ಗೆ ಸೂಕ್ತ.


6) ಪ್ಲಾಸ್ಟಿಕ್ ಸ್ಪೂನ್ ಫ್ಲವರ್ ಡೆಕೋರ್.

ಬೇಕಾಗುವ ವಸ್ತುಗಳು:

  • ಪ್ಲಾಸ್ಟಿಕ್ ಚಮಚಗಳು.
  • ಗ್ಲೂ.
  • ಬಣ್ಣ.

ಮಾಡುವ ವಿಧಾನ:

  1. ಚಮಚಗಳ ಹ್ಯಾಂಡಲ್ ಭಾಗವನ್ನು ಕತ್ತರಿಸಿ.
  2. ವೃತ್ತಾಕಾರದಲ್ಲಿ ಹೂವಿನಂತೆ ಜೋಡಿಸಿ.
  3. ಮಧ್ಯದಲ್ಲಿ ಸಣ್ಣ ವೃತ್ತ ಅಂಟಿಸಿ.
  4. ಬಣ್ಣ ಹಚ್ಚಿ.

👉 ವಾಲ್ ಡೆಕೋರ್ಗೆ ತುಂಬಾ ಸುಂದರವಾಗಿ ಕಾಣುತ್ತದೆ.

 

 7) ಟಾಯ್ಲೆಟ್ ರೋಲ್ ವಾಲ್ ಆರ್ಟ್.

ಬೇಕಾಗುವ ವಸ್ತುಗಳು:

  • ಖಾಲಿ ಪೇಪರ್ ರೋಲ್.
  • ಬಣ್ಣ.
  • ಗ್ಲೂ.

ಮಾಡುವ ವಿಧಾನ:

  1. ರೋಲ್ ಅನ್ನು ಸಮಾನ ಗಾತ್ರದ ತುಂಡುಗಳಾಗಿ ಕತ್ತರಿಸಿ
  2. ಅವನ್ನು ಹೂ/ಡಿಸೈನ್ ಆಕಾರದಲ್ಲಿ ಜೋಡಿಸಿ
  3. ಬಣ್ಣ ಹಚ್ಚಿ ಗೋಡೆಗೆ ಅಂಟಿಸಿ

 

8)  ಬಲ್ಬ್ ವಾಸ್

ಮಾಡುವ ವಿಧಾನ:

  1. ಹಳೆಯ bulb ಒಳಗಿನ ಭಾಗವನ್ನು ಜಾಗ್ರತೆಯಿಂದ ತೆಗೆದುಹಾಕಿ.
  2. ಒಳಗೆ ನೀರು ತುಂಬಿ.
  3. ಸಣ್ಣ ಹೂವನ್ನು ಇಡಿ.

👉 ಎಚ್ಚರಿಕೆ: ಇದನ್ನು ದೊಡ್ಡವರ ಸಹಾಯದಿಂದ ಮಾತ್ರ ಮಾಡಿ.

 

9) ಹಳೆಯ ಟಿ-ಶರ್ಟ್ ಬ್ಯಾಗ್ (T-shirt Bag).

                                                           ಟಿ-ಶರ್ಟ್ ಬ್ಯಾಗ್

ಬೇಕಾಗುವ ವಸ್ತುಗಳು:

  • ಹಳೆಯ ಟಿ-ಶರ್ಟ್
  • ಕತ್ತರಿ

ಮಾಡುವ ವಿಧಾನ:

  1. ಟಿ-ಶರ್ಟ್ ಕೈ ಭಾಗವನ್ನು ಕತ್ತರಿಸಿ.
  2. ಕೆಳಭಾಗವನ್ನು ಹೊಲಿಗೆ ಮಾಡಿ ಅಥವಾ ಗಟ್ಟಿ ಕಟ್ಟಿರಿ.
  3. ಹ್ಯಾಂಡಲ್ ರೂಪಕ್ಕೆ ಮೇಲೆ ಕತ್ತರಿಸಿ.

👉 ಶಾಪಿಂಗ್ಗೆ ಬಳಸಬಹುದು (eco-friendly).


  10) ಮೊಟ್ಟೆ ಟ್ರೇಯಿಂದ ಹೂಗಳು (Egg Tray Flowers)

ಬೇಕಾಗುವ ವಸ್ತುಗಳು:

  • ಮೊಟ್ಟೆ ಟ್ರೇ ಪೇಪರ್.
  • ಬಣ್ಣ .
  • ಗ್ಲೂ.

ಮಾಡುವ ವಿಧಾನ:

  1. ಟ್ರೇಯನ್ನು ಹೂ ಆಕಾರದಲ್ಲಿ ಕತ್ತರಿಸಿ.
  2. ಬಣ್ಣ ಹಚ್ಚಿ.
  3. ಕಡ್ಡಿ ಅಥವಾ ತಂತಿ‌ ಸಹಾಯದಿಂದ ಹೂ ಆಕಾರವನ್ನು ಜೋಡಿಸಿ.

👉 ಮನೆ ಅಲಂಕಾರಕ್ಕೆ ಸುಂದರವಾಗಿರುತ್ತದೆ.

ಮತ್ತಷ್ಟು ಮಾಹಿತಿಗೆ ಈ ಕೆಳಗಿನ ವೆಬ್ಸೈಟ್‌ ಗೆ ಭೇಟಿ ನೀಡಿ.👇

  • https://www.unep.org (Environment awareness)
  • https://www.epa.gov/recycle (Recycling basics)
  •  ಸಾಮಾನ್ಯ ಸಲಹೆಗಳು.

    ✔️ ಸುರಕ್ಷತೆ ಮುಖ್ಯ — sharp ವಸ್ತುಗಳನ್ನು ಜಾಗ್ರತೆಯಿಂದ ಬಳಸಿ.
    ✔️ ಮಕ್ಕಳಿಗೆ ಸಹಾಯ ಮಾಡಿ.
    ✔️ ಸ್ವಚ್ಛ ವಸ್ತುಗಳನ್ನು ಮಾತ್ರ ಬಳಸಿ.
    ✔️ ಸರಳ ಪ್ರಯೋಗಗಳಿಂದ ಪ್ರಾರಂಭಿಸಿ, ನಂತರ advanced ಮಾಡಿ.

    Best Out of Waste ಎಂದರೆ ಕೇವಲ ಕಲೆ ಅಲ್ಲಅದು ಒಂದು ಚಿಂತನೆ.
    ನಾವು ಬಳಸದ ವಸ್ತುಗಳನ್ನು ಉಪಯುಕ್ತವಾಗಿಸಿದರೆ, ಹಣ ಉಳಿಯುತ್ತದೆ, ಪರಿಸರ ಉಳಿಯುತ್ತದೆ ಮತ್ತು ನಮ್ಮ ಸೃಜನಶೀಲತೆ ಕೂಡ ಹೆಚ್ಚುತ್ತದೆ.

    ಕಸ ಎಂದು ಕಾಣುವ ಪ್ರತಿಯೊಂದು ವಸ್ತುವಿನಲ್ಲೂ ಒಂದು ಹೊಸ ಅವಕಾಶ ಅಡಗಿದೆ. ಸ್ವಲ್ಪ ಕಲ್ಪನೆ ಮತ್ತು ಪ್ರಯತ್ನದಿಂದ, ನೀವು ಅದನ್ನು ಉಪಯುಕ್ತ ಮತ್ತು ಸುಂದರ ವಸ್ತುವಾಗಿ ಪರಿವರ್ತಿಸಬಹುದು.

    Best Out of Waste ಕೇವಲ ಒಂದು ಕ್ರಾಫ್ಟ್ ಅಲ್ಲ... ಅದು ಜೀವನಶೈಲಿ.



    ಮುಕ್ತಾಯ.

    ಕಾಮೆಂಟ್‌ಗಳು

    thoghts of 20's

    ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

    💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

    🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

    ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

    🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

    💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

    ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

    "ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

    "ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

    ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????