ಮನೆಯಲ್ಲೇ ನೈಸರ್ಗಿಕ ಗೊಬ್ಬರ ತಯಾರಿಸುವ ವಿಧಾನ – ಸಂಪೂರ್ಣ ಮಾರ್ಗದರ್ಶಿ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ನೈಸರ್ಗಿಕವಾಗಿ ಗೊಬ್ಬರ ತಯಾರಿಸುವ ವಿಧಾನಗಳು
ಲೇಖಕಿ:ನಾಗಲಕ್ಷ್ಮಿ ಕೆ. ಎನ್. ದಿನಾಂಕ:೨೭.೦೪.೨೦೨೬.
ನೈಸರ್ಗಿಕ
ಗೊಬ್ಬರಗಳು – ಆರೋಗ್ಯಕರ ಬೆಳೆಗಳಿಗೂ ಮಣ್ಣಿನ ಸಂರಕ್ಷಣೆಗೂ ಸೂಕ್ತ ಮಾರ್ಗ.
ಕೃಷಿ ನಮ್ಮ ಜೀವನದ ಮೂಲಾಧಾರ. ಆದರೆ ಇತ್ತೀಚಿನ
ವರ್ಷಗಳಲ್ಲಿ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಫಲವತ್ತತೆಯನ್ನು ಕಡಿಮೆ ಮಾಡುತ್ತಿದೆ.
ಇದರ ಪರಿಣಾಮವಾಗಿ ಬೆಳೆ ಉತ್ಪಾದನೆ ತಾತ್ಕಾಲಿಕವಾಗಿ ಹೆಚ್ಚಾದರೂ, ದೀರ್ಘಾವಧಿಯಲ್ಲಿ ಮಣ್ಣಿನ ಆರೋಗ್ಯ
ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ “ಆರ್ಗಾನಿಕ್ ಗೊಬ್ಬರಗಳು” ಎಂಬ ವಿಷಯವು ಹೆಚ್ಚು ಪ್ರಾಮುಖ್ಯತೆ
ಪಡೆಯುತ್ತಿದೆ.ಈ ನೈಸರ್ಗಿಕ ಗೊಬ್ಬರಗಳು ಮಣ್ಣಿನ
ಗುಣಮಟ್ಟವನ್ನು ಸುಧಾರಿಸುವುದಲ್ಲದೆ, ಪರಿಸರ ಸ್ನೇಹಿಯಾಗಿಯೂ ಕಾರ್ಯನಿರ್ವಹಿಸುತ್ತವೆ.
ನೈಸರ್ಗಿಕ ಗೊಬ್ಬರಗಳು (ಆರ್ಗಾನಿಕ್ ಗೊಬ್ಬರ)
ಎಂದರೆ ಪ್ರಕೃತಿಯಲ್ಲಿ ಲಭ್ಯವಿರುವ ಸಸ್ಯ, ಪ್ರಾಣಿ ಮತ್ತು ಜೈವಿಕ ತ್ಯಾಜ್ಯಗಳಿಂದ ತಯಾರಿಸಲಾದ ಗೊಬ್ಬರ.
ಇದು ಮಣ್ಣಿನ ಆರೋಗ್ಯವನ್ನು ಕಾಪಾಡಿ, ಬೆಳೆಗಳಿಗೆ ಸಹಜವಾಗಿ ಪೋಷಕಾಂಶಗಳನ್ನು ಒದಗಿಸುತ್ತದೆ.
ನೈಸರ್ಗಿಕ
ಕೃಷಿಯ ಭವಿಷ್ಯ.
ಪ್ರಸಕ್ತ ಕಾಲದಲ್ಲಿನ ಜನರು ಆರೋಗ್ಯಕರ
ಆಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದರಿಂದ ಆರ್ಗಾನಿಕ್ ಉತ್ಪನ್ನಗಳ ಬೇಡಿಕೆಯು
ಹೆಚ್ಚುತ್ತಿದೆ. ಇದರಿಂದ ನೈಸರ್ಗಿಕ ಗೊಬ್ಬರಗಳ ಬಳಕೆಯಿಂದ ಕೃಷಿಯನ್ನು ಶಾಶ್ವತ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ.
ಮನೆಯಲ್ಲೇ
ನೈಸರ್ಗಿಕ ಗೊಬ್ಬರ ತಯಾರಿಸುವ ವಿಧಾನ.
ಅಡುಗೆ ತ್ಯಾಜ್ಯವನ್ನು ಸಂಗ್ರಹಿಸಿ, ಅದಕ್ಕೆ
ಒಣಗಿದ ಎಲೆಗಳನ್ನು ಸೇರಿಸಿ, ನಿಯಮಿತವಾಗಿ ತಿರುಗಿಸುತ್ತಿದ್ದರೆ, 30–45 ದಿನಗಳಲ್ಲಿ ನೈಸರ್ಗಿಕ ಗೊಬ್ಬರ
ಸಿದ್ಧವಾಗುತ್ತದೆ.
ನೈಸರ್ಗಿಕ
ಗೊಬ್ಬರಗಳ (ಆರ್ಗಾನಿಕ್ ಗೊಬ್ಬರಗಳ) ಮುಖ್ಯ ವಿಧಗಳು.
1.
ಗೋಮಯ ಗೊಬ್ಬರ (Cow
Dung Manure).
ಗೋವಿನ ಮೂತ್ರ ಮತ್ತು ಸಗಣಿಯಿಂದ ತಯಾರಿಸಲಾದ
ಗೊಬ್ಬರವು ಕೃಷಿಯಲ್ಲಿ ಅತ್ಯಂತ ಪುರಾತನ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಇದು ಮಣ್ಣಿಗೆ ಅಗತ್ಯವಾದ
ಪೋಷಕಾಂಶಗಳನ್ನು ಒದಗಿಸುತ್ತದೆ. ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಗೋಮಯವು ಮಣ್ಣಿನ
ಜೈವಿಕಾಂಶವನ್ನು ಹೆಚ್ಚಿಸಿ, ಮಣ್ಣಿನ ನೀರಿನ ಹಿಡಿತದ ಸಾಮರ್ಥ್ಯವನ್ನು ಸುಧಾರಿಸುತ್ತದೆ.
2.
ಕಾಂಪೋಸ್ಟ್ ಗೊಬ್ಬರ (Compost)
ಅಡುಗೆ ತ್ಯಾಜ್ಯ, ಎಲೆಗಳು, ಉಳಿದುಹೋದ ಹಣ್ಣು-ತರಕಾರಿಗಳಿಂದ
ತಯಾರಿಸಲಾದ ಕಾಂಪೋಸ್ಟ್ ಗೊಬ್ಬರವು ಅತ್ಯುತ್ತಮ ನೈಸರ್ಗಿಕ ಗೊಬ್ಬರವಾಗಿದೆ. ಇದನ್ನು ಮನೆಯಲ್ಲೇ ಸುಲಭವಾಗಿ
ತಯಾರಿಸಬಹುದು ಮತ್ತು ಟರೇಸ್ ಗಾರ್ಡನಿಂಗ್ ಮಾಡುವವರಿಗೆ ನೈಸರ್ಗಿಕವಾಗಿ ಗೊಬ್ಬರ ತಯಾರಿಸುವ ಒಂದು
ಉತ್ತಮ ವಿಧಾನವಾಗಿದೆ.
3.
ವರ್ಮಿ ಕಾಂಪೋಸ್ಟ್ (Vermicompost).
ಹುಳುಗಳ ಸಹಾಯದಿಂದ ತಯಾರಿಸಲಾದ ಈ ಗೊಬ್ಬರವು
ಮಣ್ಣಿನ ಆರೋಗ್ಯವನ್ನು ಹೆಚ್ಚು ಸುಧಾರಿಸುತ್ತದೆ. ಮತ್ತು ವೇಗವಾಗಿ ಫಲಿತಾಂಶ ನೀಡುತ್ತದೆ. ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
4.
ಹಸಿರು ಗೊಬ್ಬರ (Green
Manure.)
ಹಸಿರು ಸಸ್ಯಗಳನ್ನು ಅಂದರೆ, ಹೊಲದಲ್ಲೇ ಬೆಳೆದ
ಸಸ್ಯಗಳನ್ನು ಮಣ್ಣಿನಲ್ಲಿ ಬೆರೆಸಿ ಗೊಬ್ಬರವಾಗಿ ಬಳಸುವ ವಿಧಾನವನ್ನು ಹಸಿರು ಗೊಬ್ಬರ ಎಂದು ಕರೆಯುತ್ತಾರೆ.
ಉದಾಹರಣೆಗಳು:
- ಸನ್‌ಹೆಂಪ್.
- ಧೈಚಾ.
5.
ಬೇವಿನ ಗೊಬ್ಬರ(Neem
Cake).
ಬೇವಿನ ಬೀಜಗಳಿಂದ ತಯಾರಿಸಲಾದ ಈ ಗೊಬ್ಬರವು ಕೀಟ ನಿಯಂತ್ರಣಕ್ಕೂ ಸಹಕಾರಿ. ಇದು ಗೊಬ್ಬರ + ಕೀಟನಾಶಕ ಎರಡೂ ಆಗಿ ಕೆಲಸ ಮಾಡುತ್ತದೆ.
ನೈಸರ್ಗಿಕ
ಗೊಬ್ಬರಗಳ ಪ್ರಯೋಜನಗಳು.
ಮಣ್ಣಿನ
ಫಲವತ್ತತೆಯನ್ನು ದೀರ್ಘಾವಧಿಯವರೆಗೂ ಉಳಿಸುತ್ತದೆ.
ನೈಸರ್ಗಿಕ ಗೊಬ್ಬರವು ಯಾವುದೇ ಹಾನಿಕಾರಕ ರಾಸಾಯನಿಕಗಳಿಲ್ಲದೆ, ಪರಿಸರ ಸ್ನೇಹಿಯಾಗಿದೆ.
ಬೆಳೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಮಣ್ಣಿನ ಸೂಕ್ಷ್ಮಜೀವಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.
ಗೊಬ್ಬರ
ಬಳಸುವಾಗ ಗಮನಿಸಬೇಕಾದವು.
- ಮಣ್ಣಿನಲ್ಲಿ
ತೇವಾಂಶ ಸರಿಯಾಗಿ ಇರಬೇಕು.
- ಹೆಚ್ಚು
ಅಥವಾ ಕಡಿಮೆ ಪ್ರಮಾಣದಲ್ಲಿ ಬಳಸಬೇಡಿ.
- ನೇರ
ಸೂರ್ಯನ ಬೆಳಕಿನಿಂದ ದೂರ ಇಡಿ.
- ನಿಯಮಿತವಾಗಿ ಮಿಶ್ರಣವನ್ನು ತಿರುಗಿಸಬೇಕು.
ನೈಸರ್ಗಿಕ
ಗೊಬ್ಬರಗಳನ್ನು ಬಳಸುವ ವಿಧಾನ.
- ಮಣ್ಣಿನ
ಪರೀಕ್ಷೆ ಮಾಡಿ ಅಗತ್ಯ ಪೋಷಕಾಂಶಗಳನ್ನು ಗುರುತಿಸಿ ಬಳಸಬೇಕು.
- ಬೆಳೆ
ಪ್ರಕಾರಕ್ಕೆ ಅನುಗುಣವಾಗಿ ಗೊಬ್ಬರ ಆಯ್ಕೆ ಮಾಡಬೇಕು.
- ಸರಿಯಾದ
ಪ್ರಮಾಣದಲ್ಲಿ ಗೊಬ್ಬರವನ್ನು ಬಳಸಿ.
- ಗೊಬ್ಬರವನ್ನು
ಮಣ್ಣಿಗೆ ಕೊಟ್ಟ ಮೇಲೆ ನೀರಾವರಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು.
ರಾಸಾಯನಿಕ
ಗೊಬ್ಬರಗಳು v/s ನೈಸರ್ಗಿಕ ಗೊಬ್ಬರಗಳು
|
ಅಂಶ |
ನೈಸರ್ಗಿಕ
ಗೊಬ್ಬರಗಳು |
ರಾಸಾಯನಿಕ
ಗೊಬ್ಬರಗಳು |
|
ಪರಿಸರದ
ಮೇಲೆ ಪರಿಣಾಮ |
ಸುರಕ್ಷಿತ |
ಹಾನಿಕಾರಕ |
|
ಮಣ್ಣಿನ
ಆರೋಗ್ಯ |
ಸುಧಾರಿಸುತ್ತದೆ |
ಹಾಳು
ಮಾಡುತ್ತದೆ |
|
ದೀರ್ಘಾವಧಿ
ಫಲಿತಾಂಶ |
ಉತ್ತಮ |
ಕಡಿಮೆ |
1.
ಗೋಮಯ ಗೊಬ್ಬರ ತಯಾರಿಸುವ ವಿಧಾನ (Farmyard Manure).
ಬೇಕಾಗುವ
ಸಾಮಗ್ರಿಗಳು:
- ಗೋಮಯ
(ಹಸುವಿನ ಗಂಜಲ ಮತ್ತು ಸಗಣಿ).
- ಒಣ
ಹುಲ್ಲು / ಎಲೆಗಳು.
- ನೀರು.
ತಯಾರಿಸುವ
ಹಂತಗಳು:
- ಒಂದು
ಗುಂಡಿ (pit) ತೋಡಿ (ಸುಮಾರು 3x3 ಅಡಿ ಗಾತ್ರ).
- ಮೊದಲಿಗೆ
ಒಣ ಹುಲ್ಲು ಅಥವಾ ಎಲೆಗಳನ್ನು ಹಾಸಿ.
- ಅದರ
ಮೇಲೆ ಗೋಮಯವನ್ನು ಸಮವಾಗಿ ಹಚ್ಚಿ.
- ಸ್ವಲ್ಪ
ನೀರು ಸಿಂಪಡಿಸಿ (ತೇವಾಂಶ ಇರಬೇಕು, ತುಂಬಾ ನೆನೆಸಬಾರದು).
- ಇದೇ
ರೀತಿಯಾಗಿ ಪದರಗಳನ್ನು (layers) ಪುನರಾವರ್ತಿಸಿ ಹಾಕುತ್ತ ಹೋಗಿ.
- 30–45
ದಿನಗಳಿಗೊಮ್ಮೆ ಮಿಶ್ರಣವನ್ನು ತಿರುಗಿಸಿ.
- 2–3
ತಿಂಗಳಲ್ಲಿ ಗೊಬ್ಬರ ಸಿದ್ಧವಾಗುತ್ತದೆ.
👉 ಗೊಬ್ಬರದ ಬಣ್ಣ ಕಪ್ಪಾಗಿದ್ದು ಮತ್ತು ದುರ್ವಾಸನೆ ಇಲ್ಲದಿದ್ದರೆ ಅದು ಬಳಕೆಗೆ ಸಿದ್ಧವಾಗಿರುತ್ತದೆ.
2.
ಹಸಿರು ಗೊಬ್ಬರ ತಯಾರಿಸುವ ವಿಧಾನ (Green Manure).
ಹಸಿರು ಗೊಬ್ಬರ
ಬೇಕಾಗುವ
ಸಾಮಗ್ರಿಗಳು:
- ಸನ್‌ಹೆಂಪ್
ಅಥವಾ ಧೈಚಾ ಬೀಜಗಳು
- ನೀರು
ಹಂತಗಳು:
- ಹೊಲದಲ್ಲಿ
ಈ ಸಸ್ಯಗಳನ್ನು ಬಿತ್ತನೆ ಮಾಡಿ.
- 30–45
ದಿನಗಳಲ್ಲಿ ಸಸ್ಯಗಳು ಬೆಳೆಯುತ್ತವೆ.
- ಈ
ಹಸಿರು ಸಸ್ಯಗಳನ್ನು ಮಣ್ಣಿನಲ್ಲಿ ಉರುಳಿ (plough) ಬೆರೆಸಿ.
- 2–3
ವಾರಗಳಲ್ಲಿ ಅವು ಕುಸಿದು ಮಣ್ಣಿಗೆ ಪೋಷಕಾಂಶ ನೀಡುತ್ತವೆ.
👉 ಪ್ರಯೋಗಾತ್ಮಕ ಟಿಪ್: ಹೂ ಬಿಡುವ ಮೊದಲು ಮಣ್ಣಿನಲ್ಲಿ ಬೆರೆಸಿದರೆ ಉತ್ತಮ ಫಲಿತಾಂಶ.
3.
ನೀಮ್ ಕೇಕ್ ಗೊಬ್ಬರ ತಯಾರಿಸುವ ವಿಧಾನ (Neem Cake).
ಬೇವಿನ ಗೊಬ್ಬರ
ಬೇಕಾಗುವ
ಸಾಮಗ್ರಿಗಳು:
- ಬೇವಿನ ಬೀಜಗಳು.
- ಒಣಗಿಸುವ
ಜಾಗ.
- ಗ್ರೈಂಡರ್
/ ಒರಳುಕಲ್ಲು.
ಹಂತಗಳು:
- ನೀಮ್
ಬೀಜಗಳನ್ನು ಚೆನ್ನಾಗಿ ಒಣಗಿಸಿ.
- ಅವನ್ನು ಚೆನ್ನಾಗಿ ಪುಡಿಮಾಡಿ (powder form).
- ಈ
ಪುಡಿಯನ್ನು ಮಣ್ಣಿಗೆ ಬೆರೆಸಿ ಅಥವಾ ನೇರವಾಗಿ ಗಿಡದ ಬೇರುಗಳ ಬಳಿ ಹಾಕಿ.
👉 ಪ್ರಯೋಗಾತ್ಮಕ ಟಿಪ್: ಇದು ಕೀಟ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಮತ್ತು ಗಿಡದ ಪೋಷಣೆಗೂ ಸಹ ಹಾಗಾಗಿ ಡಬಲ್ ಲಾಭ!
ಪ್ರಮುಖ
ಸಾಮಾನ್ಯ ಸಲಹೆಗಳು.
ಗೊಬ್ಬರವನ್ನು ತಯಾರಿಸುವಾಗ ತೇವಾಂಶ (moisture) ಕಾಪಾಡಬೇಕು.
ನೇರ
ಸೂರ್ಯನ ಬೆಳಕಿನಿಂದ ದೂರ ಇಡಿ.
ನಿಯಮಿತವಾಗಿ
ಮಿಶ್ರಣವನ್ನು ತಿರುಗಿಸಿ.
ದುರ್ವಾಸನೆ
ಬಂದರೆ ಗಾಳಿ ಹರಿವನ್ನು ಹೆಚ್ಚಿಸಿ.
4.
ವರ್ಮಿ ಕಾಂಪೋಸ್ಟ್
ತಯಾರಿಸುವ ವಿಧಾನ.
ಪ್ರಾಕೃತಿಕ ಕೃಷಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಅತ್ಯುತ್ತಮ ವಿಧಾನವೆಂದರೆ ಅದು
ವರ್ಮಿ ಕಾಂಪೋಸ್ಟ್
(Vermicompost) ಗೊಬ್ಬರ.
ಇದು ಮಣ್ಣಿಗೆ ಪೋಷಕಾಂಶಗಳನ್ನು ಒದಗಿಸುವ ನೈಸರ್ಗಿಕ ಗೊಬ್ಬರವಾಗಿದ್ದು, ಗಿಡಗಳ ಬೆಳವಣಿಗೆಯನ್ನು ವೇಗವಾಗಿ ಮತ್ತು ಆರೋಗ್ಯಕರವಾಗಿ ಮಾಡುತ್ತದೆ.
ವರ್ಮಿ
ಕಾಂಪೋಸ್ಟ್ ಎಂದರೇನು?
ವರ್ಮಿ ಕಾಂಪೋಸ್ಟ್ ಎಂದರೆ ಎರೆ ಹುಳುಗಳ
(Earthworms)ನ್ನು
ಬಳಸಿಕೊಂಡು ಜೈವಿಕ ಕಸವನ್ನು (Organic Waste) ಪೋಷಕಾಂಶಯುಕ್ತ ಗೊಬ್ಬರವಾಗಿ ಪರಿವರ್ತಿಸುವ ಪ್ರಕ್ರಿಯೆ. ಇದನ್ನು “ಹುಳು ಗೊಬ್ಬರ” ಎಂದು
ಕೂಡ ಕರೆಯಲಾಗುತ್ತದೆ.
ವರ್ಮಿ
ಕಾಂಪೋಸ್ಟ್ನ ಪ್ರಯೋಜನಗಳು.
- ಮಣ್ಣಿನ
ಫಲವತ್ತತೆಯನ್ನು ಹೆಚ್ಚಿಸುತ್ತದೆ.
- ಗಿಡಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
- ಮನೆಯ ಜೈವಿಕ ಕಸವನ್ನು ಮರುಬಳಕೆ ಮಾಡಬಹುದು.
- ಮಣ್ಣಿನ ನೀರಿನ ಹಿಡಿತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ವರ್ಮಿ ಕಾಂಪೋಸ್ಟ್ ಪರಿಸರ ಸ್ನೇಹಿ ಗೊಬ್ಬರ.
ಬೇಕಾಗುವ
ಪದಾರ್ಥಗಳು.
ವರ್ಮಿ
ಕಾಂಪೋಸ್ಟ್ ತಯಾರಿಸಲು ಬೇಕಾಗುವ
ಪದಾರ್ಥಗಳು:
- ಮಣ್ಣು
ಅಥವಾ ಹಳೆಯ ಗೊಬ್ಬರ.
- ಒಣ
ಎಲೆಗಳು.
- ತರಕಾರಿ/ಹಣ್ಣುಗಳ ತ್ಯಾಜ್ಯ (Kitchen Waste).
- ಎರೆ
ಹುಳುಗಳು (Earthworms – Eisenia fetida ಅಥವಾ
ಸ್ಥಳೀಯ ಜಾತಿ).
- ಒಂದು
ಡಬ್ಬಿ/ಬಾಕ್ಸ್ (ಪ್ಲಾಸ್ಟಿಕ್ ಅಥವಾ ಮಣ್ಣು).
- ನೀರು.
ತಯಾರಿಸುವ
ವಿಧಾನ – ಹಂತ ಹಂತವಾಗಿ.
ಹಂತ 1: ಮೊದಲು ಒಂದು ಡಬ್ಬಿ ಅಥವಾ ಕಾಂಪೋಸ್ಟ್ ಬಿನ್ ತೆಗೆದುಕೊಳ್ಳಿ ಅದಕ್ಕಾಗಿ ಸರಿಯಾದ ಪಾತ್ರೆಯನ್ನು ಆಯ್ಕೆಮಾಡಿ. ಇದರಲ್ಲಿ ಸಣ್ಣ ರಂಧ್ರಗಳು ಇರಬೇಕು, ಇದರಿಂದಲೇ ಗಾಳಿ ಸಂಚಾರ ಸುಲಭವಾಗುತ್ತದೆ.
ಹಂತ
2: ಡಬ್ಬಿಯ ಕೆಳಭಾಗದಲ್ಲಿ ಒಣ ಎಲೆಗಳು ಅಥವಾ
ಕಾಗದದ ತುಂಡುಗಳನ್ನು ಹಾಕಿ ಬೇಸ್ ಲೇಯರ್ ತಯಾರಿಸಿ. ಇದು ಹುಳುಗಳಿಗೆ ಸೂಕ್ತವಾದ
ಪರಿಸರವನ್ನು ಒದಗಿಸುತ್ತದೆ.
ಹಂತ
3: ಎಲೆಗಳ ಮೇಲ್ಭಾಗದಲ್ಲಿ ಸ್ವಲ್ಪ ಮಣ್ಣು ಅಥವಾ ಹಳೆಯ ಗೊಬ್ಬರವನ್ನು
ಮಾತ್ರ ಹಾಕಿ.
ಹಂತ
4: ತರಕಾರಿ ಮತ್ತು ಹಣ್ಣುಗಳ ಉಳಿಕೆಯನ್ನು ಸಣ್ಣ ತುಂಡುಗಳಾಗಿ ಕಿಚನ್ ವೇಸ್ಟ್
ಅನ್ನು ಕತ್ತರಿಸಿ ಹಾಕಿ.
👉
ಮಾಂಸ, ಎಣ್ಣೆ ಪದಾರ್ಥಗಳು ಅಥವಾ ಹಾಲು ಉತ್ಪನ್ನಗಳನ್ನು ಹಾಕಬೇಡಿ.
ಹಂತ
5: ಈಗ ಎರೆ ಹುಳುಗಳನ್ನು ನಿಧಾನವಾಗಿ ಸೇರಿಸಿ. ಅವು ಕಸದ ಮೇಲೆ
ಕೆಲಸ ಮಾಡಲು ಪ್ರಾರಂಭಿಸುತ್ತವೆ.
ಹಂತ
6: ತೇವಾಂಶವನ್ನು ಕಾಪಾಡಿ.
ಸ್ವಲ್ಪ
ನೀರನ್ನು ಸಿಂಪಡಿಸಿ. ಮಣ್ಣು ತೇವವಾಗಿರಬೇಕು ಆದರೆ ತುಂಬಾ ಒದ್ದೆಯಾಗಿರಬಾರದು.
ಹಂತ
7: ಮುಚ್ಚಿ ಮತ್ತು ಸಂರಕ್ಷಿಸಿ.
ಡಬ್ಬಿಯನ್ನು
ಮುಚ್ಚಿ, ಆದರೆ ಗಾಳಿ ಒಳಹೋಗುವಂತೆ
ಇರಲಿ. ಇದನ್ನು ನೆರಳಿನ ಸ್ಥಳದಲ್ಲಿ ಇಡಿ.
ಕಾಂಪೋಸ್ಟ್ ತಯಾರಾಗಲು ಬೇಕಾಗುವ ಸಮಯ, ಸಾಮಾನ್ಯವಾಗಿ 30–45 ದಿನಗಳಲ್ಲಿ ವರ್ಮಿ ಕಾಂಪೋಸ್ಟ್ ಸಿದ್ಧವಾಗುತ್ತದೆ. ಇದು ಕಪ್ಪು ಬಣ್ಣದ,
ಮಣ್ಣಿನಂತಹ ವಾಸನೆಯುಳ್ಳ ಗೊಬ್ಬರವಾಗಿರುತ್ತದೆ.
ಬಳಸುವ
ವಿಧಾನ.
- ಗಿಡಗಳ
ಕಾಂಡದ ಸುತ್ತ ಈ ಗೊಬ್ಬರವನ್ನು ಹಾಕಿ,
- ವಾರಕ್ಕೆ
ಅಥವಾ ತಿಂಗಳಿಗೆ ಒಂದು ಬಾರಿ ಬಳಸಬಹುದು.
- ತೋಟ,
ಕುಂಡದಲ್ಲಿನ ಗಿಡಗಳು ಮತ್ತು ಕೃಷಿಗೆ ಉಪಯುಕ್ತವಾಗಿ ಬಳಕೆಯಾಗುತ್ತದೆ.
ಗಮನಿಸಬೇಕಾದ
ಅಂಶಗಳು.
- ವರ್ಮಿ
ಕಾಂಪೋಸ್ಟ್ ಗೊಬ್ಬರ ಅಥವಾ ಇನ್ಯಾವುದೇ ಗೊಬ್ಬರಕ್ಕೆ ಹೆಚ್ಚು ನೀರು ಹಾಕಬೇಡಿ.
- ನೇರ
ಸೂರ್ಯನ ಬೆಳಕಿನಲ್ಲಿ ಇಡಬೇಡಿ.
- ಹುಳುಗಳಿಗೆ
ಹಾನಿಕಾರಕ ಪದಾರ್ಥಗಳನ್ನು ಸೇರಿಸಬೇಡಿ.
- ನಿಯಮಿತವಾಗಿ
ಕಸವನ್ನು ಸೇರಿಸಿ.
ವರ್ಮಿ
ಕಾಂಪೋಸ್ಟ್ ನಿಮ್ಮ ತೋಟಕ್ಕೆ ಜೀವ ತುಂಬುವ ನೈಸರ್ಗಿಕ
ಗೊಬ್ಬರವಾಗಿದೆ. ಮನೆಯಲ್ಲಿಯೇ ಇದನ್ನು ತಯಾರಿಸುವ ಮೂಲಕ ಕಸದ ಸಮಸ್ಯೆಯನ್ನು
ಕಡಿಮೆ ಮಾಡಬಹುದು ಮತ್ತು ಪರಿಸರವನ್ನು ಕಾಪಾಡಬಹುದು.
5.
ಮನೆಯಲ್ಲೇ ಕಾಂಪೋಸ್ಟ್
ಗೊಬ್ಬರ ತಯಾರಿಸುವ ವಿಧಾನ.
ಕಾಂಪೋಸ್ಟ್ ಗೊಬ್ಬರ ತಯಾರಿಕೆ
ಬೇಕಾಗುವ
ಸಾಮಗ್ರಿಗಳು:
- ಅಡುಗೆ
ತ್ಯಾಜ್ಯ (ತರಕಾರಿ ಸಿಪ್ಪೆ, ಹಣ್ಣು ಉಳಿಕೆ).
- ಒಣ
ಎಲೆಗಳು / ಕಾಗದ ತುಂಡುಗಳು.
- ಮಣ್ಣು
(ಸ್ವಲ್ಪ).
- ನೀರು.
- ಡಬ್ಬಿ
/ ಬಕೆಟ್ (ಮುಚ್ಚಳ ಇರುವದು ಉತ್ತಮ).
ತಯಾರಿಸುವ
ವಿಧಾನ.
1️ಪ್ಲಾಸ್ಟಿಕ್ ಅಥವಾ ಮಣ್ಣಿನ ಡಬ್ಬಿಯನ್ನು
ತೆಗೆದುಕೊಳ್ಳಿ ಅದರ ಕೆಳಭಾಗದಲ್ಲಿ ಸಣ್ಣ ರಂಧ್ರಗಳ(holes)ನ್ನು
ಕೊರೆಯಿರಿ (ಗಾಳಿ ಹರಿವಿಗಾಗಿ).
2️ಮೊದಲ ಪದರ (Dry Layer)ವಾಗಿ, ಮೊದಲು ಒಣ ಎಲೆಗಳು ಅಥವಾ
ಕಾಗದ ತುಂಡುಗಳನ್ನು ಹಾಕಿ, ಇದು ತೇವಾಂಶದ ಸಮತೋಲನ ಕಾಪಾಡುತ್ತದೆ.
3️ಈಗ ಅಡುಗೆ ತ್ಯಾಜ್ಯ (vegetable peels,
fruit waste) ಹಾಕಿ.
4️ಸ್ವಲ್ಪ ಮಣ್ಣನ್ನು ಮೇಲಿನಿಂದ ಹಾಕಿ, ಇದು ಕೊಳೆಯುವಿಕೆಯ ಪ್ರಕ್ರಿಯೆಯನ್ನು
ವೇಗಗೊಳಿಸುತ್ತದೆ.
5️ನಂತರ ಸ್ವಲ್ಪ ನೀರು ಸಿಂಪಡಿಸಿ, ತೇವವಾಗಿರಲು, ತುಂಬಾ ನೀರು ಹಾಕಿ ನೆನೆಸಬೇಡಿ.
6️ಇದೇ ರೀತಿಯಾಗಿ Dry + Wet + Soil ಪದರಗಳನ್ನು ಹಾಕುತ್ತ ಹೋಗಿ, ಪದರಗಳನ್ನು ಪುನರಾವರ್ತನೆ ಮಾಡಿ.
7️ವಾರಕ್ಕೆ ಒಂದು ಬಾರಿ ಮಿಶ್ರಣವನ್ನು ತಿರುಗಿಸಿ (Mixing). ಆಗ ಎಲ್ಲಾ ಕಡೆ ಗಾಳಿ ಹೋಗಲು ಸಹಾಯವಾಗುತ್ತದೆ.
8️30–45 ದಿನಗಳಲ್ಲಿ ಕಪ್ಪು ಬಣ್ಣದ, ಮಣ್ಣಿನ ವಾಸನೆ ಇರುವ ಕಾಂಪೋಸ್ಟ್ ಗೊಬ್ಬರ
ಸಿದ್ಧವಾಗುತ್ತದೆ.
ವೇಗವಾಗಿ
ಫಲಿತಾಂಶ ಬರಲು ಟಿಪ್ಸ್.
·
ಡಬ್ಬಿಯನ್ನು
ನೆರಳಿನಲ್ಲಿ ಇಡಿ.
·
ದುರ್ವಾಸನೆ ಬಂದರೆ → ಒಣ ಎಲೆಗಳನ್ನು ಹೆಚ್ಚಿಸಿ.
·
ಹುಳುಗಳು ಕಾಣಿಸಿದರೆ → ಅದು ಉತ್ತಮ ಲಕ್ಷಣ.
·
ತುಂಬಾ
ಒದ್ದೆಯಾಗಿದ್ರೆ → ಒಣ ಪದಾರ್ಥ ಸೇರಿಸಿ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೆಬ್ಸೈಟ್ ಗೆ ಭೇಟಿ ನೀಡಿ.👇
👉 https://icar.org.in
👉 https://kvk.icar.gov.in
ಮನೆಯಲ್ಲೇ ತ್ಯಾಜ್ಯವನ್ನು ಗೊಬ್ಬರವಾಗಿ ಮಾರ್ಪಡಿಸುವುದು ನಮ್ಮ ಪರಿಸರದ ಮೇಲೆ
ದೊಡ್ಡ ಪರಿಣಾಮ ಬೀರುತ್ತದೆ. ಇದು ಕೇವಲ ಗೊಬ್ಬರ
ತಯಾರಿಕೆ ಅಲ್ಲ, ಪ್ರಕೃತಿಯೊಂದಿಗಿನ ಒಂದು ಉತ್ತಮ ಜೀವನಶೈಲಿ. ಸಣ್ಣ ಪ್ರಯತ್ನಗಳಿಂದ ದೊಡ್ಡ
ಬದಲಾವಣೆ ಸಾಧ್ಯ. ನಮ್ಮ ಕೈಗಳಿಂದ ತಯಾರಿಸಿದ
ಗೊಬ್ಬರವು ನಮ್ಮ ಗಿಡಗಳಿಗೆ ನೈಸರ್ಗಿಕ
ಶಕ್ತಿಯನ್ನು ನೀಡುತ್ತದೆ.
ನೈಸರ್ಗಿಕ ಗೊಬ್ಬರ ತಯಾರಿಕೆಯು ಒಂದು ಕಲೆ ಹಾಗು
ವಿಜ್ಞಾನ ಎರಡೂ ಆಗಿದೆ. ಸ್ವಲ್ಪ ಸಹನೆ ಮತ್ತು ಸರಿಯಾದ ವಿಧಾನ ಪಾಲಿಸಿದರೆ, ಮನೆಯಲ್ಲೇ ಉತ್ತಮ ಗುಣಮಟ್ಟದ
ಗೊಬ್ಬರವನ್ನು ತಯಾರಿಸಬಹುದು. ಇದು ಬೆಳೆಗಳ ಬೆಳವಣಿಗೆಯನ್ನು ಮಾತ್ರವಲ್ಲ, ಮಣ್ಣಿನ ಆರೋಗ್ಯವನ್ನೂ
ದೀರ್ಘಾವಧಿಗೆ ಉಳಿಸುತ್ತದೆ.
ಮಣ್ಣಿನ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು
ಉತ್ತಮ ಬೆಳೆ ಉತ್ಪಾದನೆಗಾಗಿ ನೈಸರ್ಗಿಕ ಗೊಬ್ಬರಗಳ ಬಳಕೆ ಅನಿವಾರ್ಯವಾಗಿದೆ. ರೈತರು ಮತ್ತು ಮನೆಯ
ತೋಟಗಾರಿಕೆಯಲ್ಲಿ ಈ ವಿಧಾನಗಳನ್ನು ಅನುಸರಿಸಿದರೆ, ಆರೋಗ್ಯಕರ ಮತ್ತು ಶಾಶ್ವತ ಕೃಷಿ ಸಾಧ್ಯವಾಗುತ್ತದೆ.
ಆರ್ಗಾನಿಕ್
ಗೊಬ್ಬರ ಬಳಕೆ ಇಂದಿನ ಕಾಲದಲ್ಲಿ ಕೇವಲ ಟ್ರೆಂಡ್ ಅಲ್ಲ..ಅದು ಅಗತ್ಯ. ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು,
ಆರೋಗ್ಯಕರ ಆಹಾರ ಪಡೆಯಲು ಇದು ಅತ್ಯುತ್ತಮ ಮಾರ್ಗವಾಗಿದೆ.
ಮುಕ್ತಾಯ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು