ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಯಶಸ್ಸಿನ ಸೂತ್ರಗಳು: ವಿದ್ಯಾರ್ಥಿಗಳಿಗಾಗಿ ಜೀವನವನ್ನು ರೂಪಿಸುವ ಸಂಪೂರ್ಣ ಮಾರ್ಗದರ್ಶಿ

 

ಜಯ ಸಾಧಿಸಿದ ವ್ಯಕ್ತಿ
                                                             

ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೪.೦೪.೨೦೨೬.

ಯಶಸ್ಸಿನ ಸೂತ್ರಗಳು:  ಜೀವನವನ್ನು ರೂಪಿಸುವ ಸರಳ, ಶಕ್ತಿಯುತ ಮಾರ್ಗಗಳು.

ಯಶಸ್ಸು.. ಒಂದು ಪದವೇ ಪ್ರತಿಯೊಬ್ಬರ ಹೃದಯದಲ್ಲೂ  ಒಂದೊಂದು ಕನಸನ್ನು ಬಿತ್ತುತ್ತಿದೆ. ಆದರೆ ಈ ಯಶಸ್ಸು ಎಂದರೆ ಏನು? ಸಾಕಷ್ಟು ಹಣ ಗಳಿಸುವುದೇ? ಪ್ರಪಂಚವೇ ಮೆಚ್ಚುವಂತಹ ಖ್ಯಾತಿಯೇ? ಅಥವಾ ಮನಃಶಾಂತಿಯೇ? ಪ್ರತಿಯೊಬ್ಬರಿಗೂ ಇದರ ಅರ್ಥ ವ್ಯಾಖ್ಯಾನ ಬೇರೆ ಬೇರೆಯೇ ಇರಬಹುದು. ಆದರೆ ಯಶಸ್ಸನ್ನು ಸಾಧಿಸುವ ಸೂತ್ರಗಳು ಮಾತ್ರ ಬಹುತೇಕ ಒಂದೇ ಆಗಿರುತ್ತವೆ.

ಲೇಖನದಲ್ಲಿ, ನಾವು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯಕವಾಗುವ ಕೆಲವು ಪ್ರಮುಖ ಸೂತ್ರಗಳನ್ನು ತಿಳಿದುಕೊಳ್ಳೋಣ.

ಯಶಸ್ಸು ಎಂದರೆ ಏನು?

ಯಶಸ್ಸು ಎಂದರೆ ಖಚಿತಗೊಂಡ ಗುರಿಯನ್ನು ಸಾಧಿಸುವುದು. ಅದು ದೊಡ್ಡದಾಗಿರಬಹುದು ಅಥವಾ ಸಣ್ಣದಾಗಿರಬಹುದು. ಆದರೆ ಮುಖ್ಯವಾದದ್ದು , ಹೃದಯದಲ್ಲಿ ಇರುವ ಕನಸು ನಿಜವಾಗುವುದು.

ಯಶಸ್ಸು ಕೊನೆಯಲ್ಲಿ ದೊರೆಯುವ ಫಲಿತಾಂಶವಲ್ಲ, ಅದು ಒಂದು ಪ್ರಯಾಣ. ಪ್ರಯಾಣದಲ್ಲಿ ನಾವು ಕಲಿಯುವ ಪಾಠಗಳೇ ನಮ್ಮನ್ನು ಶ್ರೇಷ್ಠರನ್ನಾಗಿಸುತ್ತವೆ.

ಸೆಲ್ಫ್‌ ಕೇರ್‌ ನಿಂದ ಒಬ್ಬ ವ್ಯಕ್ತಿಯು ಒಳ ಹೊರಗೆ ಹೇಗೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು. 👇

https://www.capturingdaysoflife.com/2025/11/blog-post_15.html 

1. ಸ್ಪಷ್ಟ ಗುರಿ (Clear Goal) ಇರಬೇಕು.

ಯಶಸ್ಸಿನ ಮೊದಲ ಸೂತ್ರವೇ ಸ್ಪಷ್ಟ ಗುರಿಯನ್ನು ಹೊಂದಿರುವುದು.

ಪ್ರಯಾಣವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಎಂಬುದು ಗೊತ್ತಿಲ್ಲದಿದ್ದರೆ, ತಲುಪುವುದಾದರೂ ಎಲ್ಲಿಗೆ?

👉 ಉದಾಹರಣೆ:

  • ನಾನು ಶ್ರೀಮಂತನಾಗಬೇಕುಎನ್ನುವುದು ಸ್ಪಷ್ಟ ಗುರಿಯಲ್ಲ.
  • ನಾನು 5 ವರ್ಷಗಳಲ್ಲಿ ನನ್ನ ಸ್ವಂತ ವ್ಯವಹಾರವನ್ನು ಆರಂಭಿಸಬೇಕು” — ಇದು ಸ್ಪಷ್ಟ ಗುರಿ.

ತಲುಪಬೇಕಾದ ಗುರಿಯನ್ನು ಬರೆಯಿರಿ. ಪ್ರತಿದಿನ ಅದನ್ನು ಮನನ ಮಾಡಿ.

2. ಶ್ರಮ ಮತ್ತು ನಿಷ್ಠೆ (Hard Work & Dedication).

ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಅದಕ್ಕೆ ಬೇಕಾಗಿರುವುದು ನಿರಂತರವಾದ ಶ್ರಮ ಮತ್ತು ನಿಷ್ಠೆ. ಒಂದು ದಿನ ಪ್ರಯತ್ನ ಮಾಡಿ, ಮುಂದಿನ ದಿನ ಬಿಡುವುದು, ಮತ್ತೆ ಪ್ರಯತ್ನ ಮಾಡುವುದು, ಮತ್ತೆ ಬಿಡುವುದು ಇದು ಯಶಸ್ಸಿನ ಮಾರ್ಗವಲ್ಲ.

👉 ನೆನಪಿಡಿ: “ನಾವು ಮಾಡುವ ಕೆಲಸವನ್ನು ನಾವು ಪ್ರೀತಿಸಿದರೆ, ಪ್ರತಿ ಶ್ರಮವೂ ಆನಂದವಾಗುತ್ತದೆ.”

3. ಸಮಯ ನಿರ್ವಹಣೆ (Time Management).

ಸಮಯವು ನಮ್ಮ ಜೀವನದ ಅತ್ಯಂತ ಅಮೂಲ್ಯ ಸಂಪತ್ತು. ದಿನದಲ್ಲಿನ 24 ಗಂಟೆಗಳು ಎಲ್ಲರಿಗೂ ಸಮಾನವಾಗಿ ಸಿಗುತ್ತದೆ, ಆದರೆ ಅದನ್ನು ಹೇಗೆ ಬಳಸುತ್ತೇವೆ ಎಂಬುದೇ ನಮ್ಮ ಯಶಸ್ಸನ್ನು ನಿರ್ಧರಿಸುತ್ತದೆ.

👉ಸಮಯ ನಿರ್ವಹಣೆಗೆ ಕೆಲವು ಸರಳ ಕ್ರಮಗಳು:

  • ಈ ದಿನದ ಯೋಜನೆಗಳನ್ನು ಪಟ್ಟಿ ಮಾಡಿ.
  • ಮುಖ್ಯ ಕೆಲಸಗಳನ್ನು ಮಾಡುವುದರೊಂದಿಗೆ ಯೋಜನೆಯನ್ನು ಪ್ರಾರಂಭಿಸಿ.
  • ಸಮಯ ವ್ಯರ್ಥ ಮಾಡುವ ಅಭ್ಯಾಸಗಳನ್ನು ಕಡಿಮೆ ಮಾಡಿ.

4. ಧನಾತ್ಮಕ ಮನೋಭಾವ (Positive Mindset).

ನಮ್ಮ ಮನಸ್ಸೇ  ನಮ್ಮ ಶಕ್ತಿಯ ಮೂಲ. ನಮ್ಮನ್ನು ಅಳಿಸುವುದು, ಕೆರಳಿಸುವುದು ಇದೇ ಶಕ್ತಿ.  ನಾನು ಮಾಡಬಹುದುಎಂಬ ನಂಬಿಕೆಯೇ ಯಶಸ್ಸಿನ ದಾರಿಯನ್ನು ತೆರೆದಿಡುತ್ತದೆ.  ನಾನು ಮಾಡಲಾರೆಎಂಬ ಭಯ ನಮ್ಮನ್ನು, ಯಶಸ್ಸಿನ ಹಾದಿಯಿಂದ ಹಿಂದೆ ತಳ್ಳುತ್ತದೆ.

👉 ನಮ್ಮನ್ನು ನಾವು ಪ್ರೋತ್ಸಾಹಿಸಿಕೊಂಡು, ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ, ಉತ್ತಮ ಸಂಗಡಿಗರನ್ನು ಆಯ್ದುಕೊಂಡು ಧನಾತ್ಮಕ ವರ್ತುಲದಲ್ಲಿ ಜೀವಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು.

                                                         ಧನಾತ್ಮಕ ಚಿಂತನೆ

5. ವೈಫಲ್ಯವನ್ನು ಸ್ವೀಕರಿಸಿ (Accept Failure).

ಯಶಸ್ಸಿನ ಮಾರ್ಗದಲ್ಲಿ ವೈಫಲ್ಯವು ಸಹಜ. ಪ್ರತಿ ವೈಫಲ್ಯವೂ ಒಂದೊಂದು ಪಾಠವನ್ನು ಕಲಿಸುತ್ತದೆ.

 ನೆನಪಿಡಿ: ವೈಫಲ್ಯ ಅಂತ್ಯವಲ್ಲ, ಅದು ಯಶಸ್ಸಿನತ್ತ ಸಾಗುವೆಡೆಗಿನ ಒಂದು ಹೆಜ್ಜೆ.

ಬಿದ್ದವನು ಎದ್ದಾಗಲೇ ಜಯ ಸಾಧಿಸುತ್ತಾನೆ.”

6. ನಿರಂತರ ಕಲಿಕೆ (Continuous Learning).

ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಅದಕ್ಕೆ ತಕ್ಕಂತೆ ನಾವು ಕೂಡ ಕಲಿಯಬೇಕು. ಹೊಸ ಹೊಸ ಕೌಶಲ್ಯಗಳನ್ನು ಕಲಿತು ರೂಢಿಸಿಕೊಳ್ಳಬೇಕು. ಪುಸ್ತಕಗಳನ್ನು ಓದಿ  ಜ್ಞಾನಾರ್ಜನೆ ಮಾಡಬೇಕು. ಮತ್ತು ಅನುಭವಗಳಿಂದ ಪಾಠಗಳನ್ನು ಕಲಿತುಕೊಳ್ಳಬೇಕು.

👉 ಯಶಸ್ವಿಗಳ ಒಂದು ಸಾಮಾನ್ಯ ಗುಣವೆಂದರೆ, ಅವರು ಎಂದಿಗೂ ಕಲಿಯುವುದನ್ನು ನಿಲ್ಲಿಸುವುದಿಲ್ಲ.

7. ಆತ್ಮವಿಶ್ವಾಸ (Self Confidence).

ಸ್ವತಃ ನಮ್ಮ ಮೇಲೆ ನಾವು ನಂಬಿಕೆ ಇಡುವುದು ಅತ್ಯಂತ ಮುಖ್ಯ.ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳಬೇಕು, ನಮ್ಮನ್ನು ನಾವು ಕಡಿಮೆ ಅಂದಾಜಿಸಿ ಗುರಿಯ ಮಟ್ಟವನ್ನು ತಗ್ಗಿಸುವುದು ಬೇಡ.

👉 ಆತ್ಮವಿಶ್ವಾಸ ಹೆಚ್ಚಿಸಲು:

  • ಸಣ್ಣ ಗುರಿಗಳನ್ನು ಸಾಧಿಸಿ.
  • ತಲುಪಿದ ಗುರಿ ಸಾಧನೆಗಳನ್ನು ನೆನಪಿಸಿಕೊಳ್ಳಿ. 

8. ನಿಯಮಿತ ಶಿಸ್ತಿನ ಜೀವನ (Discipline).

ಯಶಸ್ಸು ಕೇವಲ ಪ್ರೇರಣೆಯಿಂದ ಸಿಗುವುದಿಲ್ಲ, ಅದು ಶಿಸ್ತಿನಿಂದ ಬರುತ್ತದೆ.

  • ಪ್ರತಿದಿನ ಒಂದೇ ಸಮಯಕ್ಕೆ ಎದ್ದೇಳುವುದು.
  • ಕೆಲಸವನ್ನು ಯೋಜಿಸಿದ ಸಮಯಕ್ಕೆ ಪೂರ್ಣಗೊಳಿಸುವುದು.
  • ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು.

👉 ಶಿಸ್ತು ನಮ್ಮ ಜೀವನವನ್ನು ಧನಾತ್ಮಕ ನಿಟ್ಟಿನಲ್ಲಿ ಸುಧಾರಿಸುತ್ತದೆ.

 9. ಆರೋಗ್ಯದ ಮಹತ್ವ (Health Matters).

ಆರೋಗ್ಯವೇ ಮಹಾಭಾಗ್ಯಯಶಸ್ಸನ್ನು ಸಾಧಿಸಲು, ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿ ಇವು ಎರಡೂ ಅಗತ್ಯ.  ಗುರಿಯ ಹಾದಿಯಲ್ಲಿ ಸರಿಯಾದ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಸಮರ್ಪಕ ನಿದ್ರೆ  ಇವುಗಳೆಡೆಗೆ ಗಮನವಿರಲಿ.

10. ಉತ್ತಮ ಸಂಬಂಧಗಳು (Good Relationships).

ನಮ್ಮ ಸುತ್ತಲಿನ ಜನರು ನಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಕುಟುಂಬದ ಬೆಂಬಲ, ಸ್ನೇಹಿತರ ಪ್ರೋತ್ಸಾಹ, ಸಹೋದ್ಯೋಗಿಗಳ ಸಹಕಾರ ಇವರೊಂದಿಗಿನ ಒಳ್ಳೆಯ ಸಂಬಂಧಗಳು ನಮ್ಮ ಯಶಸ್ಸಿನ ಪ್ರಯಾಣವನ್ನು ಸುಲಭಗೊಳಿಸುತ್ತವೆ.

11. ಸ್ಮಾರ್ಟ್ ಕೆಲಸ (Smart Work).

ಕೇವಲ ಶ್ರಮವಷ್ಟೇ ಸಾಕಾಗುವುದಿಲ್ಲ, ಸ್ಮಾರ್ಟ್ ಕೆಲಸವೂ ಅಗತ್ಯ. ಯಶಸ್ಸನ್ನು ಸಾಧಿಸಲು ಸರಿಯಾದ ವಿಧಾನದಲ್ಲಿ ಕೆಲಸ ಮಾಡಿ. ತಂತ್ರಜ್ಞಾನವನ್ನು ಉಪಯೋಗಿಸಿ ಮತ್ತು ಸಮಯವನ್ನು ಉಳಿಸಿ.

12. ಧೈರ್ಯ ಮತ್ತು ಸಹನೆ (Patience & Courage).

ಯಶಸ್ಸು ತಕ್ಷಣಕ್ಕೆ ಸಿಗುವುದಿಲ್ಲ. ಧೈರ್ಯದಿಂದ ಮುಂದುವರೆಯಬೇಕು. ಮತ್ತು ಸಹನೆಯಿಂದ ಕಾಯಬೇಕು.

👉ಸಹನೆ ಇರುವಾಗ ಯಾವತ್ತೂ ಸೋಲುವುದಿಲ್ಲ

7 ದಿನಗಳ ಸಕಾರಾತ್ಮಕ ಚಿಂತನೆಯ ಅಭ್ಯಾಸದ ಮಾರ್ಗದರ್ಶನ"👇

https://www.capturingdaysoflife.com/2025/08/7.html 


ವಿದ್ಯಾರ್ಥಿಗಳಿಗಾಗಿ ಯಶಸ್ಸಿನ ಸೂತ್ರಗಳು: ಕನಸುಗಳಿಂದ ಸಾಧನೆಗೆ ನಿಮ್ಮ ಪಯಣ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಜೀವನ ಒಂದು ಸವಾಲಿನ ಪಯಣವಾಗಿದೆ. ಅಂಕಗಳು, ಪರೀಕ್ಷೆಗಳು, ಭವಿಷ್ಯದ ಚಿಂತನೆಇವುಗಳ ನಡುವೆ ಕೆಲವೊಮ್ಮೆ ನಾವು ಗೊಂದಲಕ್ಕೀಡಾಗುತ್ತೇವೆ. ಆದರೆ ಸರಿ ದಾರಿಯಲ್ಲಿ ನಡೆದರೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಕನಸುಗಳನ್ನು ನಿಜವಾಗಿಸಬಹುದು.

                                                    ವಿದ್ಯಾರ್ಥಿ ಏಕಾಗ್ರತೆಯಿಂದ ಓದುತ್ತಿರುವುದು

ಯಶಸ್ಸು ಒಂದು ಗಮ್ಯಸ್ಥಾನವಲ್ಲ, ಅದು ಒಂದು ಪಯಣ  ಮಾತು ವಿದ್ಯಾರ್ಥಿಗಳಿಗೆ ಇನ್ನಷ್ಟು ಸೂಕ್ತ. ಇಲ್ಲಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅನುಸರಿಸಬಹುದಾದ ಯಶಸ್ಸಿನ ಸೂತ್ರಗಳನ್ನು ಪ್ರೇರಣಾತ್ಮಕವಾಗಿಯೂ ಮತ್ತು ಪ್ರಯೋಗಾತ್ಮಕವಾಗಿಯೂ ತಿಳಿಯೋಣ.

ವಿದ್ಯಾರ್ಥಿ ದೆಸೆಯಲ್ಲಿ ಯಶಸ್ಸು ಎಂದರೆ ಏನು?

ವಿದ್ಯಾರ್ಥಿಯ ದೃಷ್ಟಿಯಲ್ಲಿ ಯಶಸ್ಸು ಎಂದರೆ ಕೇವಲ ಗಳಿಸುವ ಉತ್ತಮ ಅಂಕಗಳು ಮಾತ್ರವಲ್ಲ. ಬದಲಿಗೆ, ವಿಷಯವನ್ನು ಅರ್ಥಮಾಡಿಕೊಳ್ಳುವುದು, ಸ್ವತಂತ್ರವಾಗಿ ಚಿಂತಿಸುವುದು ಮತ್ತು ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ. ಅದರ ಜೊತೆಗೆ, ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸುವುದೂ ಯಶಸ್ಸಿನ ಭಾಗವೇ ಆಗಿದೆ.

1. ಸ್ಪಷ್ಟ ಗುರಿ  (Set Clear Goals) ಇಟ್ಟುಕೊಳ್ಳಿ.

ವಿದ್ಯಾರ್ಥಿಗಳಿಗೆ ಮೊದಲನೆಯ ಸೂತ್ರಗುರಿ ಸ್ಪಷ್ಟವಾಗಿರಬೇಕು.

👉 ಉದಾಹರಣೆ:

  • ನಾನು ಚೆನ್ನಾಗಿ ಓದಬೇಕು” — ಇದು ಸಾಮಾನ್ಯ ಗುರಿ.
  • ನಾನು ವರ್ಷ 90% ಅಂಕ ಪಡೆಯಬೇಕು” — ಇದು ಸ್ಪಷ್ಟ ಗುರಿ.

ಹೇಗೆ ಅನುಸರಿಸಬೇಕು?

  •  ಗುರಿಯನ್ನು ಒಂದು ಪುಸ್ತಕದಲ್ಲಿ ಬರೆಯಿರಿ.
  • ಅದನ್ನು ಪ್ರತಿದಿನ ಓದಿ.
  • ಪ್ರಗತಿಯನ್ನು ವಾರಕ್ಕೊಮ್ಮೆ ಪರಿಶೀಲಿಸಿ.

2. ದಿನಚರಿ ರೂಪಿಸಿ (Create a Daily Routine).

ಯಶಸ್ವಿ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸರಳ ದಿನಚರಿ ಅನುಸರಿಸುವ ಮೂಲಕ ಯೋಜಿತವಾಗಿ ಬಳಸುತ್ತಾರೆ. ಬೆಳಗ್ಗೆ ಬೇಗ ಏಳುವುದು, 2–3 ಮುಖ್ಯ ವಿಷಯಗಳಿಗೆ ಸಮಯ ಕೊಟ್ಟು ವಿಶ್ರಾಂತಿಗೆ ಸಮಯವನ್ನು ಮೀಸಲಿಡುವುದು ಸೇರಿರುತ್ತದೆ.

                                                 ಸಮಯ ನಿರ್ವಹಣೆಯ ದಿನಚರಿ

ಪ್ರಯೋಗಾತ್ಮಕ ಸಲಹೆ:

Pomodoro Technique ಪ್ರಯೋಗಿಸಿ, 25 ನಿಮಿಷ ಓದು ನಂತರ 5 ನಿಮಿಷ ಬ್ರೇಕ್, ಇದು ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸುತ್ತದೆ

3. ನಿರಂತರ ಅಭ್ಯಾಸ (Consistent Practice).

ಒಮ್ಮೆ ಓದುವುದರಿಂದ ಮಾತ್ರ ವಿಷಯ ಪೂರ್ತಿಯಾಗಿ ಅರ್ಥವಾಗುವುದಿಲ್ಲ. 👉 “Practice makes perfect” ಎಂಬ ಮಾತು ಇಲ್ಲಿ ತುಂಬಾ ಸೂಕ್ತ.

ಹೇಗೆ ಮಾಡಬೇಕು?

  • ದಿನವೂ ಸ್ವಲ್ಪ ಸ್ವಲ್ಪ ಓದಿ.
  • ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸಿ.
  • ಸ್ವಯಂ ಪರೀಕ್ಷೆ ಮಾಡಿಕೊಳ್ಳಿ. 

4. ಆತ್ಮವಿಶ್ವಾಸ ಬೆಳೆಸಿಕೊಳ್ಳಿ (Build Self-Confidence).

ಸ್ವತಃ ವಿಶ್ವಾಸವಿರಿಸಿ, ನಂಬಿಕೆ ಇಡುವುದು ಯಶಸ್ಸಿನ ಮೂಲ. “ನನ್ನಿಂದ ಆಗುತ್ತದೆಎಂಬ ನಂಬಿಕೆ ಇದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ.

ಆತ್ಮವಿಶ್ವಾಸದ ಪ್ರಯೋಗಾತ್ಮಕ ವಿಧಾನ:

  • ಸಣ್ಣ ಸಣ್ಣ ಗುರಿಗಳನ್ನು ಸಾಧಿಸುವುದು.
  • ಸ್ವ ಸಾಧನೆಗಳನ್ನು ಬರೆಯಿರಿ.
  • ಸ್ವ ಪ್ರಶಂಸೆ ಮಾಡಿಕೊಳ್ಳುವುದು. 

5. ವೈಫಲ್ಯದಿಂದ ಕಲಿಯಿರಿ (Learn from Failure).

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅದು ಅಂತ್ಯವಲ್ಲ. ಅದು ಒಂದು ಪಾಠ.

ಹೇಗೆ ಉಪಯೋಗಿಸಬೇಕು?

  • ಯಾವ ತಪ್ಪು ಮಾಡಿದ್ದೀರಿ ಎಂದು ವಿಶ್ಲೇಷಿಸಿ.
  • ಅದನ್ನು ಸರಿಪಡಿಸಲು ಯೋಜನೆ ಮಾಡಿ.
  • ಮತ್ತೆ ಪ್ರಯತ್ನಿಸಿ.

6. ಡಿಜಿಟಲ್ ಡಿಸ್ಟ್ರಾಕ್ಷನ್ ಕಡಿಮೆ ಮಾಡಿ (Avoid Distractions).

ಮೊಬೈಲ್, ಸೋಶಿಯಲ್ ಮೀಡಿಯಾ ವಿದ್ಯಾರ್ಥಿಗಳ ದೊಡ್ಡ ಶತ್ರು. ಓದುವಾಗ ಮೊಬೈಲ್ ಅನ್ನು ದೂರ ಇಡಿ. Social media ಬಳಸಲು ಸಮಯ ಮಿತಿ ಇಡಿ.  “Focus Mode” ಬಳಸಿರಿ.

7. ಆರೋಗ್ಯದ ಕಡೆ ಗಮನ ಕೊಡಿ (Take Care of Health).

ಉತ್ತಮ ಆರೋಗ್ಯ ಇಲ್ಲದೆ ಓದು ಸಾಧ್ಯವಿಲ್ಲ. ಪೌಷ್ಟಿಕ ಆಹಾರ ಸೇವನೆ, ದಿನವೂ 30 ನಿಮಿಷ ವ್ಯಾಯಾಮ, 7–8 ಗಂಟೆ ನಿದ್ರೆ ಇವುಗಳ ಕಡೆ ಗಮನವಿರಬೇಕು. 

8. ಉತ್ತಮ ಸ್ನೇಹಿತರನ್ನು ಆಯ್ಕೆಮಾಡಿ (Choose Good Friends).

ನಮ್ಮ ಸುತ್ತಲಿನ ಜನರು ಅದರಲ್ಲೂ ಸ್ನೇಹಿತರು ನಮ್ಮ ಜೀವನವನ್ನು ಪ್ರಭಾವಿಸುತ್ತಾರೆ. ಒಬ್ಬ ಒಳ್ಳೆಯ ಸ್ನೇಹಿತ ನಮ್ಮನ್ನು ಯಾವಾಗಲೂ  ಪ್ರೋತ್ಸಾಹಿಸುತ್ತಾನೆ ಮತ್ತು ಓದಿನಲ್ಲಿ ಸಹಾಯ ಮಾಡುತ್ತಾನೆ. ಅನಾವಶ್ಯಕವಾಗಿ ನಮ್ಮ ಸಮಯವನ್ನು ವ್ಯರ್ಥ ಮಾಡೋದಿಲ್ಲ. 

9. ಸ್ಮಾರ್ಟ್ ಸ್ಟಡಿ ತಂತ್ರಗಳು (Smart Study Techniques).

ಹೆಚ್ಚು ಸಮಯ ಓದುವುದಕ್ಕಿಂತ, ಸರಿಯಾದ ವಿಧಾನದಲ್ಲಿ ಓದುವುದು ಮುಖ್ಯ.

ಕೆಲವು ತಂತ್ರಗಳು:

  • Mind maps ಬಳಸಿ.
  • Important points highlight ಮಾಡಿ.
  • Teaching method:  ಓದಿದ ವಿಷಯವನ್ನು ಸ್ನೇಹಿತರೊಂದಿಗೆ ವಿಶ್ಲೇಷಿಸಿ..

 

10. ಸಮಯ ನಿರ್ವಹಣೆ ಕಲಿಯಿರಿ (Master Time Management).

ಪರೀಕ್ಷೆಯ ಸಮಯದಲ್ಲಿ ಸಮಯ ನಿರ್ವಹಣೆಯು ಅತ್ಯಂತ ಮುಖ್ಯವಾಗುತ್ತದೆ. ಹಾಗಾಗಿ ಓದಬೇಕಾಗಿರುವ ಪ್ರಮುಖ ವಿಷಯಗಳನ್ನು To-do list ರಚಿಸಿ. ಪ್ರಮುಖ ಕೆಲಸಗಳನ್ನು ಮೊದಲಿಗೆ ಮಾಡಿ. ಕೆಲಸದೊಂದಿಗೆ ಸಮಯವನ್ನು ಟ್ರ್ಯಾಕ್ ಮಾಡಿ.

11. ಪ್ರೇರಣೆಯನ್ನು ಉಳಿಸಿಕೊಳ್ಳಿ (Stay Motivated.)

ಕೆಲವೊಮ್ಮೆ ಓದಲು ಮನಸ್ಸೇ ಇರೋದಿಲ್ಲ. ಅದು ಸಹಜ. ಆ ಸಮಯದಲ್ಲಿ ಪ್ರೇರಣೆಗಾಗಿ, ಕನಸುಗಳನ್ನು ನೆನಪಿಸಿಕೊಳ್ಳಿ. ಯಶಸ್ವಿ ವ್ಯಕ್ತಿಗಳ ಕಥೆಗಳನ್ನು ಓದಿ. ಸಣ್ಣ ಬ್ರೇಕ್ ತೆಗೆದುಕೊಳ್ಳಿ.

12. ಶಿಕ್ಷಕರ ಮಾರ್ಗದರ್ಶನ ಪಡೆಯಿರಿ (Seek Guidance).

ಪಾಠದಲ್ಲಿ ಏನಾದರೂ ಅರ್ಥವಾಗದಿದ್ದರೆ, ಕೇಳುವುದಕ್ಕೆ ಹಿಂಜರಿಯಬೇಡಿ. ಶಿಕ್ಷಕರು ಉತ್ತಮ ಮಾರ್ಗದರ್ಶಕರು.

 

ದಿನನಿತ್ಯ ಅನುಸರಿಸಬಹುದಾದ ಸರಳ ಪ್ಲಾನ್.

👉 ಬೆಳಗ್ಗೆ:

  • 1 ಗಂಟೆ ಮುಖ್ಯ ವಿಷಯ ಓದು.

👉 ಮಧ್ಯಾಹ್ನ:

  • ಹಳೆಯ ಪಾಠಗಳ ಪುನರಾವಲೋಕನ.

👉 ಸಂಜೆ:

  • ಪ್ರಶ್ನೆಪತ್ರಿಕೆ ಅಭ್ಯಾಸ.

👉 ರಾತ್ರಿ:

  • ಆ ದಿನದ ರಿವಿಷನ್.


ಯಶಸ್ಸು ಎಂದರೇನು? ಹಂತ ಹಂತವಾಗಿ ಯಶಸ್ಸನ್ನು ಸಾಧಿಸುವ ಸಂಪೂರ್ಣ ಮಾರ್ಗದರ್ಶಿ

ಜೀವನದಲ್ಲಿ ಪ್ರತಿಯೊಬ್ಬರೂ ಯಶಸ್ಸನ್ನು ಬಯಸುತ್ತಾರೆ. ಆದರೆಯಶಸ್ಸುಎಂದರೆ ಏನು? ಅದನ್ನು ಹೇಗೆ ಸಾಧಿಸಬಹುದು? ಮತ್ತು ಅದು ಒಂದು ದಿನದಲ್ಲಿ ಸಿಗುತ್ತದೆಯೇ? ಪ್ರಶ್ನೆಗಳು ಹಲವರ ಮನಸ್ಸಿನಲ್ಲಿ ಮೂಡುತ್ತವೆ.

ಲೇಖನದಲ್ಲಿ, ನಾವು ಯಶಸ್ಸಿನ ನಿಜವಾದ ಅರ್ಥವನ್ನು ತಿಳಿದುಕೊಂಡು, ಹಂತ ಹಂತವಾಗಿ ಯಶಸ್ಸನ್ನು ಸಾಧಿಸುವ ಮಾರ್ಗವನ್ನು ಸುಲಭವಾಗಿ ಅರಿಯೋಣ.

ಯಶಸ್ಸು ಎಂದರೇನು?

ಯಶಸ್ಸು ಎಂದರೆ ಕೇವಲ ಹಣ, ಸ್ಥಾನಮಾನ ಅಥವಾ ಖ್ಯಾತಿ ಮಾತ್ರವಲ್ಲ. ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು, ಸಮರ್ಥ ಗುರಿಯನ್ನು ಸಾಧಿಸುವುದು,  ಜೀವನದಲ್ಲಿ ತೃಪ್ತಿ ಪಡೆಯುವುದು.

👉 ಸರಳವಾಗಿ ಹೇಳುವುದಾದರೆ: ನಿರ್ಧರಿಸಿದ ಗುರಿಯನ್ನು ಸಾಧಿಸಿದಾಗ ಅದು ಯಶಸ್ಸು.”

ಒಬ್ಬ ವಿದ್ಯಾರ್ಥಿಗೆ ಉತ್ತಮ ಅಂಕಗಳು ಯಶಸ್ಸಾಗಬಹುದು, ಒಬ್ಬ ಉದ್ಯಮಿಗೆ ತನ್ನ ವ್ಯವಹಾರ ಬೆಳವಣಿಗೆ ಯಶಸ್ಸಾಗಬಹುದು. ಆದ್ದರಿಂದ ಯಶಸ್ಸಿನ ಅರ್ಥ ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ.

ಯಶಸ್ಸಿನ ಹಂತಗಳು (Stages of Success)

ಯಶಸ್ಸು ಒಂದು ಕ್ಷಣದಲ್ಲಿ ಸಿಗುವುದಿಲ್ಲ. ಅದು ಹಲವಾರು ಹಂತಗಳಲ್ಲಿ ಸಾಗುವ ಒಂದು ಪ್ರಕ್ರಿಯೆ. ಈಗ ಪ್ರಮುಖ ಹಂತಗಳನ್ನು ನೋಡೋಣ:

1. ಕನಸು ಮತ್ತು ಗುರಿ (Dream & Goal Setting).

ಪ್ರತಿ ಯಶಸ್ಸಿನ ಆರಂಭವು ಒಂದು ಕನಸಿನಿಂದಲೇ ಆರಂಭವಾಗುತ್ತದೆ. “ನಾನು ಏನು ಆಗಬೇಕು?” ಎಂಬ ಪ್ರಶ್ನೆಗೆ ಉತ್ತರ ಹುಡುಕಿದಾಗ, ಗುರಿಯು ಸ್ಪಷ್ಟವಾಗಿ ಕಾಣುತ್ತದೆ. 

👉 ಉದಾಹರಣೆ: “ನಾನು ಡಾಕ್ಟರ್ ಆಗಬೇಕು”, “ನಾನು IAS ಆಗಬೇಕು”.

2. ಯೋಜನೆ (Planning).

ಗುರಿ ಹೊಂದಿದ್ದರೆ ಮಾತ್ರ ಸಾಕಾಗುವುದಿಲ್ಲ, ಅದನ್ನು ಸಾಧಿಸಲು ಯೋಜನೆ ಬೇಕು.

👉 ಹೇಗೆ?

  • ಗುರಿಯನ್ನು  ಹಂತಗಳಾಗಿ ವಿಭಜಿಸಿ.
  • ಸಮಯದ ಮಿತಿ ನಿಗದಿ ಮಾಡಿ.
  • ದಿನನಿತ್ಯದ ಕಾರ್ಯಗಳನ್ನು ಮುಂದೆ ನಿರ್ಧರಿಸಿ.

 3. ಕಾರ್ಯಾರಂಭ (Taking Action).

    ಯೋಜನೆ ಮಾಡಿದ ನಂತರ, ಅದನ್ನು ಸಮಯಕ್ಕೆ ಸರಿಯಾಗಿ ಕಾರ್ಯರೂಪಕ್ಕೆ ತರಬೇಕು👉 ಮುಖ್ಯ ವಿಚಾರ: “ಕೇವಲ ಯೋಚನೆ ಮಾಡುವುದರಿಂದ ಯಶಸ್ಸು ಸಿಗುವುದಿಲ್ಲ, ಕಾರ್ಯ ಮಾಡಬೇಕು.”

4. ನಿರಂತರ ಶ್ರಮ (Consistent Effort).

ಯಶಸ್ಸಿನ ಮಾರ್ಗದಲ್ಲಿ ನಿರಂತರತೆ ಬಹಳ ಮುಖ್ಯ. ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಕೆಲಸ ಮಾಡಿ. ಮಧ್ಯದಲ್ಲಿ ಬಿಡಬೇಡಿ.

👉 “Consistency is the key to success”

5. ಸವಾಲುಗಳು ಮತ್ತು ವೈಫಲ್ಯ (Challenges & Failures).

ಯಶಸ್ಸಿನ ಪ್ರಯಾಣದಲ್ಲಿ ಸವಾಲುಗಳು ಸಹಜ. ವಿಫಲತೆಗಳು ಬರುತ್ತವೆ  ಮತ್ತು ಕೆಲವೊಮ್ಮೆ ಮನಸ್ಸು ಕುಗ್ಗುತ್ತದೆ. ಆದರೆ ನೆನಪಿಡಿ, ವೈಫಲ್ಯವೇ ಯಶಸ್ಸಿನ ಶಿಕ್ಷಕ.

6. ಕಲಿಕೆ ಮತ್ತು ಸುಧಾರಣೆ (Learning & Improvement).

ಪ್ರತಿ ತಪ್ಪಿನಿಂದ ಪಾಠ ಕಲಿಯಿರಿ. ತಪ್ಪುಗಳನ್ನು ವಿಶ್ಲೇಷಿಸಬೇಕು. ಕಲಿಕೆಯಲ್ಲಿ ಹೊಸ ಹೊಸ ವಿಧಾನಗಳನ್ನು ಪ್ರಯೋಗಿಸಬೇಕು. ಆಗಾಗ್ಗೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ಸುಧಾರಿಸಬೇಕು.

7. ಸಾಧನೆ (Achievement).

ಮೇಲಿನ  ಹಂತಗಳನ್ನು ದಾಟಿ ಯಶಸ್ವಿಯಾಗಿ ಗುರಿಯನ್ನು ಸಾಧಿಸುತ್ತೀರಿ.  ಇದು  ಪರಿಶ್ರಮದ ಫಲ
ಇದು ಸತತ ಪ್ರಯತ್ನಕ್ಕೆ ದೊರೆಯುವ ಪ್ರತಿಫಲ. 

8. ಸ್ಥಿರತೆ ಮತ್ತು ಮುಂದಿನ ಗುರಿ (Sustain & Grow).

ಯಶಸ್ಸು ಸಾಧಿಸಿದ ನಂತರವೂ ಸಾಧನೆಯ ಪ್ರಯಾಣ ಮುಗಿಯುವುದಿಲ್ಲ. ಅದನ್ನು ಉಳಿಸಿಕೊಳ್ಳಬೇಕು ಮತ್ತು ಮುಂದಿನ ಗುರಿಗಳನ್ನು ನಿಗದಿ ಮಾಡಬೇಕು.

                                                 ಎದ್ದು ನಡೆದರೆ ಗೆಲುವು ನಿಶ್ಚಯ

ಹಂತ ಹಂತವಾಗಿ ಯಶಸ್ಸನ್ನು ಪಡೆಯುವುದು ಹೇಗೆ?

ಈಗ, ನಾವು ಪ್ರಾಯೋಗಿಕವಾಗಿ ದಿನನಿತ್ಯ ಜೀವನದಲ್ಲಿ ಅನುಸರಿಸಬಹುದಾದ ಕೆಲವು ಹಂತಗಳನ್ನು ನೋಡೋಣ:

ಹಂತ 1:ಒಂದು ಡೈರಿಯಲ್ಲಿ  ಗುರಿಯನ್ನು ಸ್ಪಷ್ಟವಾಗಿ ಬರೆಯಬೇಕು, ಅದು measurable ಆಗಿರಬೇಕು

ಹಂತ 2: ಪ್ರಮುಖ ಕೆಲಸಗಳನ್ನು ಗುರುತಿಸಿ, ದಿನನಿತ್ಯದ ಪ್ಲಾನ್ ರಚಿಸಿ.

ಹಂತ 3: ಗುರಿಯನ್ನು ವಿಭಾಗಿಸಿ, ಪ್ರತಿದಿನ ಒಂದೊಂದೆ ಹಂತವನ್ನು ಪೂರ್ಣಗೊಳಿಸಿ.

ಹಂತ 4: ಗುರಿಯ ಹಾದಿಯಲ್ಲಿ ಎಷ್ಟು ಮುನ್ನಡೆದಿದ್ದೀರಿ ಎಂಬುದನ್ನು ವಾರಕ್ಕೊಮ್ಮೆ self-review ಮಾಡಿ.

ಹಂತ 5: ತಪ್ಪು ಮಾಡಿದಾಗ ಹತಾಶಾರಗಾದೆ, ಅದನ್ನು ಒಂದು ಅವಕಾಶವಾಗಿ ನೋಡಿ.

ಹಂತ 6: ಸಣ್ಣ ಸಣ್ಣ ಸಾಧನೆಗಳನ್ನು ಆಚರಿಸಿ ಮತ್ತು ಕನಸುಗಳನ್ನು ನೆನಪಿಸಿಕೊಳ್ಳಿ .

ಹಂತ 7: ಸಮಯವನ್ನು ಸರಿಯಾಗಿ ಬಳಸಿ. 

ಹಂತ 8: ಶಿಕ್ಷಕರು, ಸ್ನೇಹಿತರು, ಮಾರ್ಗದರ್ಶಕರಿಂದ ಸಹಾಯ ಪಡೆಯಿರಿ.

ಯಶಸ್ಸಿನ ಸರಳ ಸೂತ್ರ  👉 ಕನಸು + ಯೋಜನೆ + ಶ್ರಮ + ತಾಳ್ಮೆ = ಯಶಸ್ಸು.

                                                 ಆರೋಗ್ಯಕರ ಜೀವನಶೈಲಿ

“Time management ಬಗ್ಗೆ ಇನ್ನಷ್ಟು ತಿಳಿಯಲು Mind Tools ವೆಬ್‌ಸೈಟ್ ನೋಡಿ.”

Wikipedia – Goal Setting ಬಗ್ಗೆ ತಿಳಿಯಲು ಭೇಟಿ ನೀಡಿ.

ಯಶಸ್ಸು ಒಂದು ಗಮ್ಯಸ್ಥಾನವಲ್ಲ, ಅದು ಒಂದು ನಿರಂತರ ಪ್ರಯಾಣ. ಪ್ರಯಾಣದಲ್ಲಿ ಪ್ರತಿಯೊಂದು ಹಂತವೂ ಮಹತ್ವದ್ದಾಗಿದೆ.

ವಿದ್ಯಾರ್ಥಿಗಳಾಗಿ ನೀವು ಇಂದು ಮಾಡುವ ಪ್ರಯತ್ನವೇ ನಿಮ್ಮ ನಾಳೆಯ ಯಶಸ್ಸನ್ನು ನಿರ್ಧರಿಸುತ್ತದೆ. ಯಶಸ್ಸು ಒಂದು ದಿನದಲ್ಲಿ ಬರುವುದಿಲ್ಲ, ಆದರೆ ಪ್ರತಿದಿನದ ಸಣ್ಣ ಸಣ್ಣ ಪ್ರಯತ್ನಗಳು ನಿಮ್ಮನ್ನು ದೊಡ್ಡ ಗುರಿಯತ್ತ ಕರೆದೊಯ್ಯುತ್ತವೆ.

👉 ನೆನಪಿಡಿ:

  •  ಕನಸುಗಳಿಗೆ ಮೌಲ್ಯವಿದೆ.
  •  ಪ್ರಯತ್ನಕ್ಕೆ ಶಕ್ತಿ ಇದೆ.
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ.

 

ಮುಕ್ತಾಯ.

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????