DIY Beauty Hacks: ನಿಮ್ಮ Kitchen ನಲ್ಲೇ ಇದೆ ನಿಮ್ಮ Glow Secret.!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
Kitchen ingredients
ಲೇಖಕಿ:ನಾಗಲಕ್ಷ್ಮಿ ಕೆ. ಎನ್. ದಿನಾಂಕ:೧೩.೦೪.೨೦೨೬
ಕಡಿಮೆ ಹಣದಲ್ಲಿ ಹೊಳೆಯುವ ಚರ್ಮ! Affordable Beauty DIY ರಹಸ್ಯಗಳು ನಿಮಗಾಗಿ.
Affordable beauty DIY ಎಂದರೇನು?
Affordable
beauty DIY ಎಂದರೆ ಕಡಿಮೆ ವೆಚ್ಚದಲ್ಲಿ ಮನೆಯಲ್ಲಿಯೇ ಲಭ್ಯವಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸೌಂದರ್ಯವನ್ನು ಹೆಚ್ಚಿಸುವ
ವಿಧಾನ. ಇದು ಕೇವಲ ಹಣ
ಉಳಿಸುವುದರೊಂದಿಗೆ,ಚರ್ಮ ಮತ್ತು ಕೂದಲಿನ ಆರೈಕೆಗೆ ಸುರಕ್ಷಿತವಾಗಿರುವ ಒಂದು ಉತ್ತಮ ಆಯ್ಕೆ
ಕೂಡ ಹೌದು.
DIY(ಮನೆಮದ್ದುಗಳ) ಸೌಂದರ್ಯದ ಮಹತ್ವ.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೌಂದರ್ಯ ಉತ್ಪನ್ನಗಳಲ್ಲಿ ಹಲವು ರಾಸಾಯನಿಕಗಳು ಇರುತ್ತವೆ.
ಆದರೆ DIY ವಿಧಾನಗಳು ನೈಸರ್ಗಿಕವಾಗಿರುವುದರಿಂದ ದೀರ್ಘಾವಧಿಯಲ್ಲಿ ಉತ್ತಮ ಪರಿಣಾಮ ನೀಡುತ್ತವೆ.
ಮನೆಮದ್ದುಗಳ
ಪ್ರಯೋಜನಗಳು.
ಮನೆಮದ್ದುಗಳು ಯಾವುದೇ ಹಾನಿಕಾರಕ ರಾಸಾಯನಿಕಗಳಿಲ್ಲದೆ
ಸ್ವರೈಕೆಗೆ ಸುರಕ್ಷಿತ
ಪದಾರ್ಥಗಳಾಗಿದ್ದು ಮನೆಯಲ್ಲಿಯೇ ಸುಲಭವಾಗಿ
ತಯಾರಿಸಬಹುದು . ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಫಲಿತಾಂಶ ನೀಡುತ್ತವೆ, ಹಾಗೂ ಮನೆಯಲ್ಲಿಯೇ ದೊರೆಯುವ ಇವುಗಳು
ಪರಿಸರ ಸ್ನೇಹಿಗಳಾಗಿವೆ.
ಕಡಿಮೆ ಹಣದಲ್ಲಿ ಮನೆಯಲ್ಲೇ ಲಭ್ಯವಿರುವ ಪದಾರ್ಥಗಳನ್ನು ಬಳಸಿ ಸೌಂದರ್ಯ ಆರೈಕೆ
ಮಾಡುವುದರಿಂದ ಅನೇಕ
ಲಾಭಗಳನ್ನು ಪಡೆಯಬಹುದು. ಮನೆಮದ್ದುಗಳು ಸಾಮಾನ್ಯವಾಗಿ ಅಡಿಗೆಮನೆಯಲ್ಲಿ
ಲಭ್ಯವಿರುವ ಪದಾರ್ಥಗಳಿಂದ ತಯಾರಾಗುತ್ತವೆ. ಇದರಿಂದ ದುಬಾರಿ
ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿರುವುದಿಲ್ಲ. ಹಾಲು, ಜೇನು, ಅರಿಶಿಣ, ನಿಂಬೆ ಹೀಗೆ ನೈಸರ್ಗಿಕ ದೊರೆಯುವ
ಪದಾರ್ಥಗಳು ಚರ್ಮಕ್ಕೆ
ಹಾನಿ ಮಾಡದೆ ಉತ್ತಮ ಆರೈಕೆ ನೀಡುತ್ತವೆ.
ಚರ್ಮದ ಆರೈಕೆಗೆ ಕಡಿಮೆ ಹಣದಲ್ಲಿ ಮನೆಯಲ್ಲೇ ಲಭ್ಯವಿರುವ ಪದಾರ್ಥಗಳನ್ನು ಬಳಸಿ ಸೌಂದರ್ಯ ಆರೈಕೆ
ಮಾಡುವುದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.
ಕಾಂತಿಯುತ ಚರ್ಮಕ್ಕಾಗಿ ಪರಿಣಾಮಕಾರಿ ಮನೆಮದ್ದುಗಳು👇
https://www.capturingdaysoflife.com/2026/01/blog-post.html
ಚರ್ಮದ
ಆರೈಕೆ (Skin
Care DIY).
ಚರ್ಮದ ಆರೈಕೆಗಾಗಿ ಮನೆಮದ್ದುಗಳು ಅತ್ಯಂತ ಪರಿಣಾಮಕಾರಿ. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಆಯ್ಕೆ ಮಾಡುವುದು ಮುಖ್ಯ.
ಒಣ ಚರ್ಮ (Dry Skin)ಕ್ಕಾಗಿ,
ಕ್ಲೀನ್ಸಿಂಗ್ ಮಾಡಲು ಹಾಲಿನಿಂದ
ಮುಖ ತೊಳೆಯಿರಿ. ನಂತರ ಜೇನು ಮತ್ತು
ಬಾದಾಮಿ ಎಣ್ಣೆ ,ಇವುಗಳನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ
15 ನಿಮಿಷಗಳ ನಂತರ ತೊಳೆಯಿರಿ. ಇದು
ಚರ್ಮಕ್ಕೆ ತೇವಾಂಶ ನೀಡುತ್ತದೆ. ಸನ್ ಪ್ರೋಟೆಕ್ಷನ್ಗಾಗಿ ಮನೆಯಿಂದ ಹೊರಗೆ ಹೋಗುವ
ಮೊದಲು ಅಲೋವೆರಾ ಜೆಲ್ ಹಚ್ಚಿ.
ಇದರಿಂದ ಚರ್ಮವು ತೇವಾಂಶದಿಂದ ತುಂಬಿರುತ್ತದೆ. ಹಾಲು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.
ರಾತ್ರಿಯ ಹೊತ್ತು ಚರ್ಮ ಆರೈಕೆಗಾಗಿ, ಬೆಚ್ಚಗಿನ
ನೀರಿನಿಂದ ಮುಖ ತೊಳೆಯಿರಿ. ಮೊಸರು
+ ಜೇನು ಮಿಶ್ರಣ ಹಚ್ಚಿ. 10 ನಿಮಿಷಗಳ ನಂತರ ತೊಳೆಯಿರಿ. ಚರ್ಮವು
ಮೃದುವಾಗುತ್ತದೆ
ಎಣ್ಣೆಯ ಚರ್ಮ (Oily Skin)ಕ್ಕಾಗಿ, ನಿಂಬೆ ರಸ ಮತ್ತು ಮುಲ್ತಾನಿ ಮಟ್ಟಿ
ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ
ಒಣಗಿದ ನಂತರ ತೊಳೆಯಿರಿ. ಇದು
ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸುತ್ತದೆ.
ಕ್ಲೀನ್ಸರ್ ಆಗಿ ನಿಂಬೆ ರಸ + ನೀರನ್ನು ಬಳಸಿ. ರಾತ್ರಿ
ಮುಖ ತೊಳೆಯಿರಿ. ಮತ್ತು ಅಲೋವೆರಾ ಜೆಲ್ ಹಚ್ಚಿ. ಪಿಂಪಲ್ಸ್
ಕಡಿಮೆಯಾಗುತ್ತದೆ.
ಗ್ಲೋಯಿಂಗ್
ಸ್ಕಿನ್ (Glowing
Skin)ಗಾಗಿ, ಅರಿಶಿಣ, ಹಾಲು, ಕಡಲೇಹಿಟ್ಟು ಈ
ಪದಾರ್ಥಗಳನ್ನು ಬಳಸಿದ ಫೇಸ್ ಪ್ಯಾಕ್ ಅನ್ನು ವಾರಕ್ಕೆ
2 ಬಾರಿ ಬಳಸಿದರೆ, ಮುಖಕ್ಕೆ ನೈಸರ್ಗಿಕ ಹೊಳಪು ಬರುತ್ತದೆ. ಅರಿಶಿನವು ಬ್ಯಾಕ್ಟೀರಿಯಾ ನಿವಾರಣೆ ಮಾಡುತ್ತದೆ.
ಮಿಶ್ರಿತ
ಚರ್ಮ
(Combination Skin Routine).
ಬೆಳಿಗ್ಗೆ,
ಸೌಮ್ಯವಾದ ಕ್ಲೆನ್ಸರ್
ಬಳಸಿ ಮುಖ
ತೊಳೆಯಿರಿ. ಟಿ-ಝೋನ್ಗೆ (ಮೂಗು, ನೆತ್ತಿ)
ನಿಂಬೆ ರಸ ಬಳಸಿ. ಮತ್ತು ಗಲ್ಲಗಳಿಗೆ ಜೇನು ಹಚ್ಚಿ
ರಾತ್ರಿಯ
ವೇಳೆ, ಅಲೋವೆರಾ ಜೆಲ್
+ ಮೊಸರು ಮಿಶ್ರಣವನ್ನು ಬಳಸುವುದರಿಂದ ಚರ್ಮವು ತನ್ನ
ಸಮತೋಲನ ಕಾಯ್ದುಕೊಳ್ಳುತ್ತದೆ.
ಕೂದಲು
ಆರೈಕೆ (Hair
Care DIY).
ಕೂದಲು
ಆರೋಗ್ಯವಾಗಿರಲು ನೈಸರ್ಗಿಕ ವಿಧಾನಗಳು ಬಹಳ ಸಹಾಯಕ. ಕೂದಲು
ಉದುರುವಿಕೆ (Hair Fall) ಕಡಿಮೆ ಮಾಡಲು, ತೆಂಗಿನ ಎಣ್ಣೆಯೊಂದಿಗೆ ಈರುಳ್ಳಿ ರಸ ಸೇರಿಸಿ ಕುದಿಸಿ, ವಾರಕ್ಕೆ
2 ಬಾರಿ ತಲೆ ಕೂದಲ ಬುಡಕ್ಕೆ ಹಚ್ಚಿದರೆ, ಇದು ಕೂದಲಿನ ಬೇರುಗಳನ್ನು
ಬಲಪಡಿಸುತ್ತದೆ.
🌱 ಕೂದಲು ಬೆಳವಣಿಗೆ (Hair Growth.)
ಆಮ್ಲಾ
ಪುಡಿ ಮತ್ತು
ತೆಂಗಿನ ಎಣ್ಣೆಯನ್ನು ಬೇಯಿಸಿ,
ನಿಯಮಿತವಾಗಿ ಬಳಸಿದರೆ ಕೂದಲು ದಪ್ಪವಾಗುತ್ತದೆ.
ಕೂದಲಿನ
ಡ್ಯಾಂಡ್ರಫ್ (Dandruff) ನಿವಾರಣೆಗಾಗಿ,
ಮೊಸರು ಮತ್ತು ನಿಂಬೆ ರಸವನ್ನು ತಲೆಯ ಚರ್ಮಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ.
ಮುಖದ
ಕ್ಲೆನ್ಸರ್ ಗಾಗಿ ಮನೆಯಲ್ಲೆ
ದೊರೆಯುವ ಪದಾರ್ಥಗಳು:
- ಹಾಲು
- ಜೇನು
ಬಳಕೆ
ಮಾಡುವ ವಿಧಾನ:
ಹಸಿ ಹಾಲನ್ನು ತೆಗೆದುಕೊಂಡು, ಒಂದು ಹತ್ತಿಯ
ಉಂಡೆಯನ್ನು ಅದರಲ್ಲಿ ಅದ್ದಿ, ಒಂದೆರಡು ನಿಮಿಷಗಳ
ಕಾಲ ಮುಖವನ್ನು ಮಸಾಜ್ ಮಾಡಿದರೆ, ಮುಖವು ತಾಜಾ ಆಗಿರುತ್ತದೆ.
ಜೇನು ಮತ್ತು ಕೊಬ್ಬರಿ ಎಣ್ಣೆ, ಈ
ಎರಡನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ
10 ನಿಮಿಷಗಳ ನಂತರ ತೊಳೆಯಿರಿ. ಇದು
ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಹಾಲು ಮತ್ತು ಹತ್ತಿ ಮುಖವನ್ನು ಕ್ಲೆನ್ಸಿಂಗ್ ಮಾಡಲು
ಫೇಸ್
ಸ್ಕ್ರಬ್ DIY.
ಮೊದಲಿಗೆ ಫೇಸ್ ಸ್ಕ್ರಬ್ ಆಗಿ ಟೊಮೆಟೋ ಜೊತೆ
ಸಕ್ಕರೆ ಬಳಸಿ, ಮುಖವನ್ನು ಸ್ಕ್ರಬ್ ಮಾಡಬಹುದು. ಎರಡನೆಯದು ಅದೇ ಟೊಮೆಟೊ ಸಕ್ಕರೆ ಜೊತೆ ಕಾಫಿ ಪುಡಿಯನ್ನು
ಸಹ ಬಳಸಿ ಫೇಸ್ ಸ್ಕ್ರಬ್ ಮಾಡಬಹುದು.
ಅಕ್ಕಿ ಹಿಟ್ಟು, ಅಲೋವೆರಾ ಜೆಲ್ ಮತ್ತು ರೋಸ್
ವಾಟರ್ ಬಳಸಿ ಮುಖವನ್ನು ಸ್ಕ್ರಬ್ ಮಾಡಿ, ಐದು ನಿಮಿಷಗಳ ನಂತರ ತೊಳೆಯಬಹುದು. ಆಲೋವೆರಾ ಚರ್ಮಕ್ಕೆ
ತಂಪು ನೀಡುತ್ತದೆ ಮತ್ತು ಜಿಡ್ಡನ್ನು ನಿಯಂತ್ರಣ ಮಾಡುತ್ತದೆ.
ಸಕ್ಕರೆ,
ಕಾಫಿಪುಡಿ ಮತ್ತು ಜೇನು ಅಥವಾ ತೆಂಗಿನೆಣ್ಣೆ ಬಳಸಿ ಫೇಸ್ ಸ್ಕ್ರಬ್ ತಯಾರಿಸಿ ಬಳಸಿದರೆ ಮುಖವು ಕಾಂತಿಯುತವಾಗುತ್ತದೆ.
ತಕ್ಷಣಕ್ಕೆ ಮುಖವನ್ನು ಕಾಂತಿಯುತಗೊಳಿಸಲು,
ಬ್ರೌನ್ ಶುಗರ್ ಜೊತೆಗೆ ತೆಂಗಿನೆಣ್ಣೆ, ಅಥವಾ ಬಾದಾಮಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಬಳಸಿ ಸ್ಕ್ರಬ್
ಅನ್ನು ತಯಾರಿಸಿ. ಅದನ್ನು ಮುಖಕ್ಕೆ ಹಚ್ಚಿ ಒಂದೆರಡು ನಿಮಿಷಗಳ ಕಾಲ ಬಿಟ್ಟು, ಮೇಲ್ಮುಖವಾಗಿ ಮತ್ತು
ಹೊರವರ್ತುಲವಾಗಿ ನಿಧಾನವಾಗಿ ಸ್ಕ್ರಬ್ ಮಾಡಿದರೆ ಹೊಳೆಯುವ ಚರ್ಮವು ನಿಮ್ಮದಾಗುತ್ತದೆ. ಇದು ಒಣಚರ್ಮ
ಮತ್ತು ಎಣ್ಣೆಯುಕ್ತ ಚರ್ಮ, ಎರಡಕ್ಕೂ ಉಪಯುಕ್ತವಾಗಿ ಕೆಲಸ ಮಾಡುತ್ತದೆ.
ಸಕ್ಕರೆ
+ ತೆಂಗಿನ ಎಣ್ಣೆ ಸಂಯುಕ್ತವು
ಚರ್ಮದಲ್ಲಿನ ಡೆಡ್ ಸೆಲ್ ತೆಗೆದುಹಾಕುತ್ತದೆ.
ಕಾಫಿ + ಜೇನು ಮಿಶ್ರಣವು
ಚರ್ಮಕ್ಕೆ
ಹೊಳಪು ನೀಡುತ್ತದೆ
ಮೊಡವೆ
(Acne)ನಿವಾರಣೆಗೆ ಮನೆಮದ್ದುಗಳು.
ದಿನನಿತ್ಯವು
ಮುಖವನ್ನು ದಿನಕ್ಕೆ 2 ಬಾರಿ ತೊಳೆಯಿರಿ. ಮೊಡವೆಗಳಿಗೆ
ಅಲೋವೆರಾ ಜೆಲ್
ಹಚ್ಚಿ . ಮತ್ತು ಟೀ ಟ್ರೀ ಆಯಿಲ್ (1-2 ಹನಿ
ಮಾತ್ರ) ಹಚ್ಚಿ. ಹೆಚ್ಚು ಎಣ್ಣೆಯ ಆಹಾರವನ್ನು
ತ್ಯಜಿಸಿ. ಮತ್ತು ಪದೇ ಪದೇ ಮುಖವನ್ನು ಕೈಯಿಂದ
ಮುಟ್ಟುವುದನ್ನು ತಪ್ಪಿಸಿ.
ಡಾರ್ಕ್ ಸ್ಪಾಟ್ಸ್ ಅನ್ನು ತಗ್ಗಿಸಲು ರಾತ್ರಿ ಹೊತ್ತು ನಿಂಬೆ ರಸ + ಜೇನು ಹಚ್ಚಿ
ಅಥವಾ ಅಲೋವೆರಾ ಜೆಲ್ ಬಳಸಿದಾಗ ಬಹುತೇಕ ಜನರಿಗೆ
2-3 ವಾರಗಳಲ್ಲಿ ಸುಧಾರಣೆ ಕಾಣಬಹುದು.
ಫೇಸ್
ಪ್ಯಾಕ್ ಗಾಗಿ ಮನೆಮದ್ದುಗಳು.
ಪದಾರ್ಥಗಳು:
- ಅರಿಶಿಣ
- ಮೊಸರು
- ಕಡಲೇ
ಹಿಟ್ಟು
- ಜೇನು
- ಅಕ್ಕಿ
ಹಿಟ್ಟು
- ಆಲೂಗಡ್ಡೆ
ರಸ
- ನಿಂಬೆ
ರಸ
- ತೆಂಗಿನ
ಎಣ್ಣೆ
- ಸಕ್ಕರೆ
ಬಳಕೆ:
ಕಡಲೇ
ಹಿಟ್ಟು, ಜೇನು, ಹಾಲು ಮಿಶ್ರಣ ಮಾಡಿ
ಮುಖಕ್ಕೆ ಹಚ್ಚಿ, ಹದಿನೈದು ನಿಮಿಷಗಳ ಕಾಲ ಬಿಟ್ಟು ನಂತರ
ತೊಳೆದರೆ, ಮುಖದ ಹೊಳಪನ್ನು ಹೆಚ್ಚಿಸುತ್ತದೆ.
ಒಂದು
ಟೇಬಲ್ ಸ್ಪೂನ್ ಸಕ್ಕರೆಗೆ ಎರಡು ಟೇಬಲ್ ಸ್ಪೂನ್ ನೀರನ್ನು ಸೇರಿಸಿ, ತೆಳು ಪಾಕ ಬಂದ ಮೇಲೆ,ಅದಕ್ಕೆ
ಒಂದು ಸ್ಪೂನ್ ಹಾಲು, ಅರ್ಧ ಸ್ಪೂನ್ ತೆಂಗಿನ ಎಣ್ಣೆ, ಅರ್ಧ ಸ್ಪೂನ್ ಅರಿಶಿನ, ಅರ್ಧ ಹೋಳು ನಿಂಬೆ
ರಸ, ಎರಡು ಟೇಬಲ್ ಸ್ಪೂನ್ ಕಡಲೇ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ದಪ್ಪ ಕ್ರೀಮ್
ಆಗಿ ಮಾಡಿಕೊಳ್ಳಿ.
ಫೇಸ್ ಪ್ಯಾಕ್ ಗಾಗಿ ಮನೆಮದ್ದುಗಳ ಮಿಶ್ರಣದಿಂದ ತಯಾರಾದ ಪೇಸ್ಟ್
ಫೇಸ್
ಪ್ಯಾಕ್ ಹಾಕುವ ಮೊದಲು ಹಾಲಿನಲ್ಲಿ ಕಾಟನ್ ಉಂಡೆಯನ್ನು ಅದ್ದಿ, ಮುಖವನ್ನು ಒಂದೆರಡು ನಿಮಿಷಗಳ ಕಾಲ
ಕ್ಲೆನ್ಸ್ ಮಾಡಿರಿ. ಹತ್ತಿಯನ್ನು ಹಾಲಿನಲ್ಲಿ ನೆನೆಸಿ ಒಂದೆರಡು ನಿಮಿಷಗಳ ಕಾಲ ಮುಖವನ್ನು ಮಸಾಜ್
ಮಾಡಿದರೆ ಕ್ಲೆನ್ಸಿಂಗ್ ಆಗುತ್ತದೆ.
ಕ್ಲೆನ್ಸಿಂಗ್
ಆದ ನಂತರ ಶದ್ಧವಾಗಿ ಮುಖ ತೊಳೆದು, ಒಂದು ಕಾಟನ್ ಬಟ್ಟೆಯಲ್ಲಿ ಮುಖವನ್ನು ನೀರಿನ ಪಸೆಯಿಲ್ಲದಂತೆ
ಒಣಗಿಸಿಕೊಳ್ಳಿ. ನಂತರ ಮೊದಲೇ ಸಿದ್ದ ಮಾಡಿದ ಮಿಶ್ರಣದ
ಕ್ರೀಮ್ ಅನ್ನು ಮುಖಕ್ಕೆ ಹಚ್ಚಿ ಒಂದೆರಡು ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ಕ್ರೀಮ್ ಮುಖದ
ಮೇಲೆಲ್ಲಾ ಸಮಪ್ರಮಾಣದಲ್ಲಿರುವಂತೆ ಫೇಸ್ ಪ್ಯಾಕ್ ಹಾಕಿ ಅರ್ಧ ಗಂಟೆಯ ಕಾಲ ಒಣಗಲು ಬಿಡಿ. ಒಂದು ಒದ್ದೆ ಬಟ್ಟೆಯಲ್ಲಿ ಬಿಗಿದ ಮುಖದ ಮೇಲೆ ಮೇಲ್ಮುಖವಾಗಿ
ಓರೆಸುತ್ತಾ ಬನ್ನಿ. ಬಟ್ಟೆಯೊಂದಿಗೆ ಮುಖದ ಮೇಲಿನ ಕೂದಲು ಕಿತ್ತು ಬರುತ್ತದೆ. ಈ ವಿದಾನವನ್ನು ವಾರಕ್ಕೆ ಒಂದು
ಬಾರಿ ಪ್ರಯತ್ನಿಸಿದರೆ, ಫೇಶಿಯಲ್ ಮಾಡಿಸುವ ಅಗತ್ಯವೇ ಇರುವುದಿಲ್ಲ. ನಂತರ ಒಂದು ತಣ್ಣನೆಯ ಮಾಯಿಶ್ಚರೈಸರ್
ಹಚ್ಚಿದರೆ ಮುಖವು ತಾಜಾ ಆಗಿ ಹೊಳೆಯುತ್ತದೆ
ಕಾಫಿ ಪೌಡರ್, ಅರಿಶಿನ, ಹಾಲನ್ನು ಸೇರಿಸಿ ಚೆನ್ನಾಗಿ
ಮಿಶ್ರಣ ಮಾಡಿ, ಮುಖ ಮತ್ತು ಕುತ್ತಿಗೆಗೆ ಹಚ್ಚಿ, ಇಪ್ಪತ್ತು ನಿಮಿಷದ ನಂತರ ತೊಳೆದು, ಮಾಯಿಶ್ಚರೈಸರ್
ಹಚ್ಚಿ. ಈ ವಿಧಾನವನ್ನು ಎಲ್ಲಿಗಾದರೂ ತಕ್ಷಣಕ್ಕೆ ಹೋಗುವಾಗ ಪಾರ್ಲರ್ ಗೆ ಹೋಗಲು ಸಮಯ ಇಲ್ಲದಾಗ,
ಈ ಫೇಸ್ ಪ್ಯಾಕ್ ಬಳಸಿದರೆ ಮೇಕ್ ಅಪ್ ಚೆನ್ನಾಗಿ ಹೊಂದುತ್ತದೆ.
ಎರಡು ಸ್ಪೂನ್ ಮೊಸರು, ಒಂದು ಸ್ಪೂನ್ ಕಾಫಿ
ಪುಡಿ ಸೇರಿಸಿ ಮಿಶ್ರಣ ಮಾಡಿ, ಫೇಸ್ ಪ್ಯಾಕ್ ಹಾಕಿ, ಐದು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿ, ಕಡಲೇಹಿಟ್ಟಿನಿಂದ
ಮುಖ ತೊಳೆದರೆ ಚರ್ಮಕ್ಕೆ ತಕ್ಷಣಕ್ಕೆ ಕಾಂತಿ ಸಿಗುತ್ತದೆ.
ಮೊಸರು ಲ್ಯಾಕ್ಟಿಕ್ ಆಸಿಡ್ ಅನ್ನು ಹೊಂದಿದ್ದು,
ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡಿ ತೇವಾಂಶಭರಿತವಾಗಿಸುತ್ತದೆ. ಕಾಫಿ ಪುಡಿಯು ನೈಸರ್ಗಿಕವಾಗಿ
ಎಕ್ಸ್ಫೋಲಿಯೇಟ್ ಆಗಿ ಕೆಲಸ ಮಾಡುತ್ತದೆ, ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ.
ಮುಲ್ತಾನಿಮಟ್ಟಿಯು ಎಲ್ಲಾ ತರಹದ ಚರ್ಮಗಳಿಗೆ
ಹೊಂದುತ್ತದೆ. ಇದು ಚರ್ಮದಲ್ಲಿನ ಸತ್ತ ಜೀವಕೊಶಗಳನ್ನು ತೆಗೆದುಹಾಕಿ, ಜಿಡ್ಡಿನಿಂದ ಮುಕ್ತ ಮಾಡುತ್ತದೆ.
ಹಾಗಾಗಿ ಮುಲ್ತಾನಿ ಮಟ್ಟಿಯನ್ನು ಕ್ಲೆನ್ಸರ್ ಮತ್ತು ಟೋನರ್ ಆಗಿಯೂ ಬಳಸಲಾಗುತ್ತದೆ. ಇದು ಹೆಚ್ಚುವರಿ
ಎಣ್ಣೆ ಅಂಶವನ್ನು ಚರ್ಮದಿಂದ ತೆಗೆದುಹಾಕಿ, ಗುಳ್ಳೆಗಳನ್ನು ನಾಶ ಮಾಡುತ್ತದೆ. ಮತ್ತು ಬ್ಲಾಕ್ಹೆಡ್ಸ್,
ವೈಟ್ಹೆಡ್ಸ್ ಅನ್ನು ತಡೆಯುತ್ತದೆ. ಮುಖದಲ್ಲಿ ವ್ಯವಸ್ಥಿತ ರಕ್ತಪರಿಚಲನೆಗೆ ಸಹಾಯ ಮಾಡುತ್ತದೆ. ಇದರಿಂದ
ಮುಖವು ಕಾಂತಿಯುತವಾಗುತ್ತದೆ.
ಫೇಶಿಯಲ್ ಗ್ಲೋ ಗಾಗಿ, ಒಂದು ಟೇಬಲ್ ಸ್ಪೂನ್
ಮುಲ್ತಾನಿ ಮಟ್ಟಿ, ಎರಡು ಟೇಬಲ್ ಸ್ಪೂನ್ ಚಂದನದ ಪೌಡರ್(ಶ್ರೀಗಂಧದ ಪುಡಿ), ಅರ್ಧ ಸ್ಪೂನ್ ನೀರು,
ಕಾಲು ಸ್ಪೂನ್ ರೋಸ್ ವಾಟರ್, ಕಾಲು ಸ್ಪೂನ್ ಹಾಲು ಸೇರಿಸಿ ಚೆನ್ನಾಗಿ ಕಲಸಿ ಮೃದುವಾದ ಮಿಶ್ರಣ
ತಯಾರಿಸಿ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿ. ಇಪ್ಪತ್ತು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
ತೆಂಗಿನೆಣ್ಣೆ ಬಳಸಿ ಮುಖವನ್ನು ಮೃದುವಾಗಿ ಮಸಾಜ್ ಮಾಡಿ. ಇದನ್ನು ವಾರಕ್ಕೆ ಒಂದು ಬಾರಿ ತಪ್ಪದೇ
ಪ್ರಯತ್ನಿಸಿ ಆಗ ಬದಲಾವಣೆ ನಿಮ್ಮ ಗಮನಕ್ಕೆ ಬರುತ್ತದೆ.
ಫೇಸ್ ಪ್ಯಾಕ್ ಎಣ್ಣೆಯುಕ್ತ ಚರ್ಮಕ್ಕಾಗಿ, ಒಂದು ಟೇಬಲ್ ಸ್ಪೂನ್ ಮುಲ್ತಾನಿಮಟ್ಟಿ,
ಒಂದು ಟೇಬಲ್ ಸ್ಪೂನ್ ಮೊಸರು, ಒಂದು ಸ್ಪೂನ್ ಅರಿಶಿನ, ಒಂದು ಸ್ಪೂನ್ ಜೇನು ತುಪ್ಪ, ಸ್ವಲ್ಪ
ನೀರು ಸೇರಿಸಿ ಮಂದವಾಗಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ಉಗುರುಬೆಚ್ಚಗಿನ
ನೀರಿನಲ್ಲಿ ತೊಳೆಯಿರಿ. ಈ ಫೇಸ್ ಪ್ಯಾಕ್ ವಿದಾನವನ್ನು
ವಾರಕ್ಕೆ ಎರಡು ಬಾರಿ ಬಳಸಿನೋಡಿ. ಜೇನು ಚರ್ಮವನ್ನು
ಮೃದುವಾಗಿಸುತ್ತದೆ.
ಡ್ರೈಸ್ಕಿನ್ ಗಾಗಿ, ಚೆನ್ನಾಗಿ ಹಣ್ಣಾಗಿರುವ,
ಮ್ಯಾಶ್ ಮಾಡಿದ ಅರ್ಧ ಕಪ್ ಪಪ್ಪಾಯ ಪಲ್ಪ್, ಅರ್ಧ
ಟೇಬಲ್ ಸ್ಪೂನ್ ಮುಲ್ತಾನಿಮಟ್ಟಿ, ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಬಳಸಿ ಒಂದು ದಪ್ಪವಾಗಿ ಪೇಸ್ಟ್
ತಯಾರಿಸಿ. ಮುಖ ಮತ್ತು ಕುತ್ತಿಗೆಗೆ ಸಮವಾಗಿ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಿರಿ. ಬಾದಾಮಿ ಎಣ್ಣೆಯಿಂದ
ಮುಖ ಮತ್ತು ಕುತ್ತಿಗೆಯನ್ನು ಮಾಯಿಶ್ಚರೈಸ್ ಮಾಡಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಒಂದು
ಬಾರಿ ಬಳಸಿ.
Step-by-step DIY process
ಸರಿಯಾದ
ಪದಾರ್ಥಗಳ ಆಯ್ಕೆ.
ಚರ್ಮದ
ಪೋಷಣೆಗಾಗಿ ಬಳಸುವ ಎಲ್ಲಾ ಪದಾರ್ಥಗಳು
ಶುದ್ಧವಾಗಿರಬೇಕು. ಮತ್ತು ಕಳಪೆ
ಗುಣಮಟ್ಟದ ಪದಾರ್ಥ ಬಳಸಬಾರದು. ಮನೆಮದ್ದನ್ನು ಬಳಸುವ ವಿಧಾನಗಳು
ನಿಧಾನವಾಗಿ ಪರಿಣಾಮ ಕೊಡುತ್ತವೆ. ಆದ್ದರಿಂದ ನಿಯಮಿತವಾಗಿ ಬಳಸುವುದು ಮುಖ್ಯ.
ಮನೆಮದ್ದುಗಳನ್ನು ಪ್ರಯತ್ನಿಸುವಾಗ, ಪದಾರ್ಥಗಳನ್ನು
ಹೆಚ್ಚಾಗಿ ಬಳಸುವುದರಿಂದ
ಚರ್ಮಕ್ಕೆ ಹಾನಿಯಾಗಬಹುದು. ಆದ್ದರಿಂದ ಅಳತೆ ಮುಖ್ಯ. ಹಾಗೂ ಹೊಸ
ಪದಾರ್ಥ ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಬಹಳ ಮುಖ್ಯ.
ಈ
routine ಅನ್ನು 3-4 ವಾರಗಳ ಕಾಲ ನಿಯಮಿತವಾಗಿ ಅನುಸರಿಸಿದರೆ: ಚರ್ಮ ಹೊಳೆಯುತ್ತದೆ. ಪಿಂಪಲ್ಸ್
ಕಡಿಮೆಯಾಗುತ್ತದೆ. ಡಾರ್ಕ್
ಸ್ಪಾಟ್ಸ್ ಕಡಿಮೆಯಾಗುತ್ತದೆ
❓ FAQs (ಅಡಿಗೊಳ್ಳುವ ಪ್ರಶ್ನೆಗಳು)
1. Affordable beauty DIY ಸುರಕ್ಷಿತವೇ?
ಹೌದು,
ನೈಸರ್ಗಿಕ ಪದಾರ್ಥಗಳನ್ನು ಬಳಸಿದರೆ ಇದು ಸುರಕ್ಷಿತ.
2. ಫಲಿತಾಂಶ ಎಷ್ಟು ದಿನಗಳಲ್ಲಿ ಕಾಣುತ್ತದೆ?
ಸಾಮಾನ್ಯವಾಗಿ
2-3 ವಾರಗಳಲ್ಲಿ ಪರಿಣಾಮ ಕಾಣಬಹುದು.
3. ಎಲ್ಲ ಚರ್ಮಕ್ಕೆ ಸೂಕ್ತವೇ?
ಹೌದು,
ಆದರೆ ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ.
4. ದಿನವೂ ಬಳಸಬಹುದೇ?
ಕೆಲವು
ವಿಧಾನಗಳನ್ನು ದಿನವೂ ಬಳಸಬಹುದು, ಆದರೆ ಕೆಲವು ವಾರಕ್ಕೆ
2-3 ಬಾರಿ ಸಾಕು.
5. ಇದು ದುಬಾರಿ ಉತ್ಪನ್ನಗಳಿಗೆ ಪರ್ಯಾಯವೇ?
ಹೌದು,
ಬಹುತೇಕ ಸಂದರ್ಭಗಳಲ್ಲಿ ಉತ್ತಮ ಪರ್ಯಾಯ.
6. ಮಕ್ಕಳಿಗೂ ಬಳಸಬಹುದೇ?
ನೈಸರ್ಗಿಕ
ಪದಾರ್ಥಗಳಾದ್ದರಿಂದ ಬಳಸಬಹುದು, ಆದರೆ ಎಚ್ಚರಿಕೆ ಅಗತ್ಯ.
ಹೆಚ್ಚಿನ
ನೈಸರ್ಗಿಕ ಸೌಂದರ್ಯ ವಿಧಾನಗಳನ್ನು ತಿಳಿಯಲು ಈ ವೆಬ್ಸೈಟ್
ನೋಡಿ:
👉
https://www.healthline.com/nutrition/beauty-diy
ಸೌಂದರ್ಯ
ಟಿಪ್ಸ್
ಐಸ್
ಕ್ಯೂಬ್ ತುಂಡಿನಿಂದ ಮುಖವನ್ನು ಮಸಾಜ್ ಮಾಡಿದರೆ, ಚರ್ಮದಲ್ಲಿನ ಸಣ್ಣ
ಸಣ್ಣ ರಂಧ್ರಗಳು ಕಡಿಮೆಯಾಗುತ್ತವೆ. ಸೌತೆಕಾಯಿ
ಹೋಳುಗಳನ್ನು ಹದಿನೈದು ನಿಮಿಷಗಳ ಕಾಲ ಕಣ್ಣಿನ ಮೇಲಿಟ್ಟು, ವಿಶ್ರಾಂತಿ ನೀಡಿದರೆ, ಕಣ್ಣುಗಳ
ಕೆಳಗಿನ ಕಪ್ಪು ವಲಯ ಕಡಿಮೆ ಆಗುತ್ತದೆ.
ಸಾಕಷ್ಟು ನಿದ್ರೆ ಇದ್ದರೆ ಚರ್ಮ ಹೊಳೆಯುತ್ತದೆ.
ಗಮನಿಸಬೇಕಾದ
ವಿಷಯಗಳು
- ಯಾವಾಗಲೂ
patch test ಮಾಡಿ, ಪ್ಯಾಕ್
ಗಳನ್ನು ಬಳಸಿ.
- ಅಗತ್ಯಕ್ಕಿಂತ
ಹೆಚ್ಚು ಬಳಕೆ
ಮಾಡಬೇಡಿ.
- ಶುದ್ಧ
ಪದಾರ್ಥಗಳನ್ನು ಮಾತ್ರ ಬಳಸಿ.
- ಯಾವುದೇ ಅಲರ್ಜಿ ಕಂಡುಬಂದರೆ ಬಳಕೆ ನಿಲ್ಲಿಸಿ.
- ದಿನಕ್ಕೆ 3-4 ಲೀಟರ್ ನೀರು ಕುಡಿಯಿರಿ.
- ಹೆಚ್ಚು ಕಾಸ್ಮೆಟಿಕ್ಸ್ ಬಳಸಬೇಡಿ.
ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ಚರ್ಮಕ್ಕೆ
ಯಾವುದೇ ಹಾನಿ ಆಗುವುದಿಲ್ಲ. ಸರಿಯಾದ
ರೂಟಿನ್ ಮತ್ತು ಆರೋಗ್ಯಕರ ಜೀವನಶೈಲಿ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. Top of FormAffordable beauty DIY ಸೌಂದರ್ಯವನ್ನು
ಹೆಚ್ಚಿಸಲು ಸುಲಭ ಮತ್ತು ಪರಿಣಾಮಕಾರಿ
ವಿಧಾನವಾಗಿದೆ. ಇದು ನಮ್ಮ ಹಣವನ್ನು
ಉಳಿಸುವುದಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ನೈಸರ್ಗಿಕ ಪದಾರ್ಥಗಳನ್ನು ಬಳಸಿ ನೀವು ಸುಂದರ
ಮತ್ತು ಆರೋಗ್ಯಕರ ಚರ್ಮ ಹಾಗೂ ಕೂದಲು
ಪಡೆಯಬಹುದು.
("ಈ ಮಾಹಿತಿ
ಶಿಕ್ಷಣ ಉದ್ದೇಶಕ್ಕಾಗಿ ಮಾತ್ರ. ಯಾವುದೇ ಚರ್ಮದ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ.")
Bottom of Form
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು