ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಮಾವಿನ ಡೆಲೀಷಿಯಸ್ ರೆಸಿಪಿಗಳು

 

                                                                  ಮಾವಿನ ರೆಸಿಪಿಗಳು

ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೧.೦೪.೨೦೨೬.

"ಬೇಸಿಗೆಯಲ್ಲಿ ತಂಪು ನೀಡುವ 10 ಮಾವಿನ ರೆಸಿಪಿಗಳು"

ಮಾವಿನ ಹಣ್ಣನ್ನು ಭಾರತದ "ಹಣ್ಣುಗಳ ರಾಜ" ಎಂದು ಕರೆಯಲಾಗುತ್ತದೆ. ಬೇಸಿಗೆ ಕಾಲ ಬಂದರೆ ಎಲ್ಲರಿಗೂ ಮೊದಲು ನೆನಪಾಗುವುದು ಮಾವಿನ ಹಣ್ಣು. ಸಮಯದಲ್ಲಿ ತಾಜಾ, ರಸಮಯ ಮತ್ತು ಸಿಹಿಯಾದ ಮಾವುಗಳು ಮಾರುಕಟ್ಟೆಯಲ್ಲಿ ತುಂಬಿರುತ್ತವೆ.

ಇಂತಿಪ್ಪ ಮಾವಿನಲ್ಲಿ ಹಲವು ಪೋಷಕಾಂಶಗಳಿವೆ, ವಿಟಮಿನ್ A ಮತ್ತು C, ಫೈಬರ್, ಆಂಟಿ-ಆಕ್ಸಿಡೆಂಟ್ಸ್, ಇಮ್ಯುನಿಟಿ ಹೆಚ್ಚಿಸುವ ಗುಣಗಳು ಇತ್ಯಾದಿ. ಬೇಸಿಗೆಯಲ್ಲಿ ಮಾವು ತಿನ್ನುವುದರಿಂದ, ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. ನೀರಿನ ಕೊರತೆ ತಪ್ಪುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ.

                ತರಹೇವಾರಿ ಮಾವಿನ ರೆಸಿಪಿಗಳನ್ನು ಪ್ರಯತ್ನಿಸಿ, ಹೊಸ ರುಚಿಗಳನ್ನು ಅನುಭವಿಸಿದಾಗ ಮನಸ್ಸು ಮತ್ತು ಹೊಟ್ಟೆ ಎರಡೂ  ತಣ್ಣಗಾಗುತ್ತದೆ. ಮಕ್ಕಳಿಗೂ ಇಷ್ಟವಾಗುತ್ತದೆ.  

ಈ ಮಾವಿನ ಸೀಸನ್‌ನಲ್ಲಿ ಕೆಲವೊಂದು ವಿಶೇಷ ರೆಸಿಪಿಗಳು ನಿಮಗಾಗಿ!

ಭಾರತೀಯ ಲಂಚ್‌ ರೆಸಿಪೀಸ್👇

http://www.capturingdaysoflife.com/2025/12/6.html 

ಮಾವಿನ ಹಣ್ಣಿನ ಜ್ಯೂಸ್‌, ಮಾವಿನ ಮಿಲ್ಕ್‌ ಶೇಕ್, ಮಾವಿನ ಲಸ್ಸಿ.

ಬೇಕಾಗುವ ಪದಾರ್ಥಗಳು:

  • ಮಾವಿನ ಹಣ್ಣು – 2 (ಮಧ್ಯಮ ಗಾತ್ರ)
  • ತಣ್ಣನೆಯ ಹಾಲು – 2 ಕಪ್ 
  • ಸಕ್ಕರೆ – 2 ಟೇಬಲ್ ಸ್ಪೂನ್ (ಸಿಹಿಯ ಅಗತ್ಯತೆ)
  • ಐಸ್ ಕ್ಯೂಬ್ಸ್ – 5–6 ತುಂಡುಗಳು
  • ಏಲಕ್ಕಿ ಪುಡಿಚಿಟಿಕೆ (ಐಚ್ಛಿಕ).
  • ಮೊಸರು – ಒಂದು ಕಪ್.‌
  • ವೆನಿಲ್ಲಾಐಸ್‌ ಕ್ರೀಂ – ಒಂದು ಕಪ್. 
                                                                     ಮಾವಿನ ಜ್ಯೂಸ್‌ ಗಳು

 ಮಾಡುವ ವಿಧಾನ.

ಮಾವಿನ ಹಣ್ಣನ್ನು ತೊಳೆದು ಅದರ ಸಿಪ್ಪೆ ತೆಗೆದು, ಅದರಲ್ಲಿರುವ ಪಲ್ಪ್‌ ಅನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಮಾಡಿ, ಮಿಕ್ಸರ್ ಜಾರಿನಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ ಸ್ಮೂತ್ ಆಗಿ ರುಬ್ಬಿಕೊಳ್ಳಿ.‌ ರುಬ್ಬಿದ ಪಲ್ಪ್‌ ನಲ್ಲಿ ಮುಕ್ಕಾಲು ಭಾಗವನ್ನು ಒಂದು ಕಪ್‌ ನಲ್ಲಿ ಸರ್ವ್‌ ಮಾಡಿಕೊಳ್ಳಿ.

ಮಿಕ್ಸ್ರರ್‌ ಜಾರಿನಲ್ಲಿ ಉಳಿದ ಪಲ್ಪ್‌ ಸ್ಮೂದಿಗೆ, ಮುಕ್ಕಾಲು ಲೋಟದಷ್ಟು ತಣ್ಣನೆಯ ನೀರು, ನಾಲ್ಕೈದು ತುಂಡುಗಳಷ್ಟು ಐಸ್‌ ಕ್ಯೂಬ್‌, ಸಿಹಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಚೆನ್ನಾಗಿ ಬ್ಲೆಂಡ್‌ ಮಾಡಿದರೆ ಮಾವಿನ ಹಣ್ಣಿನ ಜ್ಯೂಸ್‌ ಸಿದ್ಧವಾಗುತ್ತದೆ. ತಂಪಾದ ಸಿಹಿಯಾದ ಮಾವಿನ ಜ್ಯೂಸ್‌ ಗ್ಲಾಸ್‌ ಗೆ ಸುರಿದು ಕುಡಿದರೆ ಆಹಾ ಬೇಸಿಗೆಗೆ ಒಳ್ಳೆ ತಂಪು ನೀಡುತ್ತದೆ.

‌                                                                ಮಾವಿನ ಜ್ಯೂಸ್

ಮಾವಿನ ಮಿಲ್ಕ್‌ ಶೇಕ್‌ ಮಾಡಲು, ಕಪ್‌ ನಲ್ಲಿರುವ ರುಬ್ಬಿದ ಮಾವಿನ ಸ್ಮೂದಿಯಲ್ಲಿ ಅರ್ಧದಷ್ಟು ತೆಗೆದು ಜ್ಯೂಸ್‌ ಬ್ಲೆಂಡರ್‌ ಗೆ ಸೇರಿಸಿ, ಸಿಹಿಗೆ ತಕ್ಕಷ್ಟು ಸಕ್ಕರೆ, ಒಂದು ಕಪ್‌ ವೆನಿಲ್ಲಾ ಐಸ್‌ ಕ್ರೀಂ, ಅರ್ಧ ಗ್ಲಾಸ್‌ ನಷ್ಟು ತಣ್ಣನೆಯ ಹಾಲು ಸೇರಿಸಿ (ತೆಳುವಾಗಲು ಮತ್ತಷ್ಟು ಹಾಲು ಸೇರಿಸಬಹುದು), ಚೆನ್ನಾಗಿ ಬ್ಲೆಂಡ್‌ ಮಾಡಿದರೆ ಮಾವಿನ ಮಿಲ್ಕ್‌ ಶೇಕ್‌ ಸವಿಯಲು ಸಿದ್ದ. ಮಿಲ್ಕ್‌ ಶೇಕ್‌ ಸ್ವಲ್ಪ ದಪ್ಪವಿರುವಂತೆ ಸ್ಮೂದಿಯಾಗಿ ಮಾಡಿಕೊಂಡರೆ ಚೆನ್ನಾಗಿರುತ್ತದೆ. 

‌                                                           ಮಾವಿನ ಮಿಲ್ಕ್‌ ಶೇಕ್
 

ಒಂದು ಕಪ್‌ ಮೊಸರು, ರುಬ್ಬಿದ ಮಾವಿನ ಪಲ್ಪ್‌, ಕಾಲು ಚಮಚ ಏಲಕ್ಕಿ ಪುಡಿ, ಸಿಹಿಗೆ ತಕ್ಕಷ್ಟು ಸಕ್ಕರೆ, ಅರ್ಧ ಲೋಟ ತಣ್ಣನೆಯ ನೀರು, ಒಂದೆರಡು ತುಂಡು ಐಸ್‌ ಕ್ಯೂಬ್‌ ಸೇರಿಸಿ, ಮಿಕ್ಸರ್‌ ಜಾರಿನಲ್ಲಿ ರುಬ್ಬಿದರೆ, ಮ್ಯಾಂಗೋ ಲಸ್ಸಿ ಸವಿಯಲು ಸಿದ್ಧ.‌ 

                                                           ಮ್ಯಾಂಗೋ ಲಸ್ಸಿ

ತಂಪಾಗಿರುವಾಗಲೇ ಲಸ್ಸಿಯನ್ನು ಗ್ಲಾಸ್ನಲ್ಲಿ ಹಾಕಿ ಮೇಲೆ ಸ್ವಲ್ಪ ಏಲಕ್ಕಿ ಪುಡಿ ಅಥವಾ ಡ್ರೈಫ್ರೂಟ್ಸ್ ಹಾಕಿ ಸರ್ವ್ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ.

 ಮಾವಿನ ಐಸ್ ಕ್ರೀಂ

ಬೇಕಾಗುವ ಪದಾರ್ಥಗಳು

  • ಮಾವಿನ ಹಣ್ಣಿನ ಪಲ್ಪ್ – 2 ಕಪ್
  • ಫ್ರೆಶ್ ಕ್ರೀಮ್ – 1 ಕಪ್
  • ಕಂಡೆನ್ಸ್ಡ್ ಮಿಲ್ಕ್ – ½ ಕಪ್
  • ಪೌಡರ್‌ ಸಕ್ಕರೆ - 1 ಕಪ್
  • ಚೂರು ಮಾಡಿದ ಪಿಸ್ತಾ, ಬಾದಾಮಿ - ½ ಕಪ್
  • ಫುಡ್‌ ಕಲರ್

ತಯಾರಿಸುವ ವಿಧಾನ:

ಒಂದು ಅಗಲವಾದ ಬೌಲ್‌ ನಲ್ಲಿ, ಫ್ರೆಶ್ ಕ್ರೀಮ್‌ ಅನ್ನು ಐದು ನಿಮಿಷಗಳ ಕಾಲ‌, ಕ್ರೀಮ್‌ ನ ಹದಕ್ಕೆ ಚೆನ್ನಾಗಿ ಬೀಟ್ ಮಾಡಿ, ನಂತರ ಅದಕ್ಕೆ ಸಕ್ಕರೆ ಪೌಡರ್‌, ಮಾವಿನ ಹಣ್ಣಿನ ಪೇಸ್ಟ್‌, ಫುಡ್‌ ಕಲರ್‌ (ಅಗತ್ಯವಿದ್ದರೆ ವೆನಿಲಾ ಎಸೆನ್ಸ್‌) ಸೇರಿಸಿ ಮೂರು ನಿಮಿಷಗಳ ಕಾಲ ಚೆನ್ನಾಗಿ ಬೀಟ್ ಮಾಡಿ, ಒಂದು ಬೌಲ್‌ ಗೆ ವರ್ಗಾಯಿಸಿ. ನಂತರ ಮಿಶ್ರಣಕ್ಕೆ ಡ್ರೈಫ್ರೂಟ್ಸ್‌ ಸೇರಿಸಿ, ರಾತ್ರಿಯಿಡಿ ಫ್ರೀಜರ್‌ನಲ್ಲಿಟ್ಟರೆ ಬೆಳಗ್ಗೆ ಮಾವಿನ ಹಣ್ಣಿನ ಐಸ್‌ ಕ್ರೀಂ ಸವಿಯಲು ಸಿದ್ದ. ಸ್ಕೂಪ್ ಮಾಡಿ ಬಟ್ಟಲಿನಲ್ಲಿ ಹಾಕಿ ಮೇಲೆ ಚಾಕೊಲೇಟ್ ಸಿರಪ್ ಅಥವಾ ನಟ್ಸ್ ಹಾಕಿ ಸವಿಯಿರಿ.

                                                                ಮಾವಿನ ಐಸ್ ಕ್ರೀಂ

ಮಾವಿನ ಪಾಯಸ

ಬೇಕಾಗುವ ಪದಾರ್ಥಗಳು

  • ಮಾವಿನ ಪಲ್ಪ್ – 1 ಕಪ್
  • ಹಾಲು – 2 ಕಪ್
  • ಸಕ್ಕರೆ – ¼ ಕಪ್
  • ಏಲಕ್ಕಿ ಪುಡಿಚಿಟಿಕೆ
  • ಗೋಡಂಬಿ, ದ್ರಾಕ್ಷಿ,ಬಾದಾಮಿ – 2 ಟೇಬಲ್ ಸ್ಪೂನ್
  • ಶಾವಿಗೆ – ಕಾಲು ಕಪ್‌
  • ಮೀಡಿಯಂ ಸಾಬುದಾನ – ಕಾಲು ಕಪ್

ತಯಾರಿಸುವ ವಿಧಾನ

ಚೆನ್ನಾಗಿ ಹಣ್ಣಾದ ಎರಡು ಮಾವಿನ ಹಣ್ಣನ್ನು ತೆಗೆದುಕೊಂಡು, ಅದರ ಸಿಪ್ಪೆ ಮತ್ತು ವಾಟೆ ಹೊರತುಪಡಿಸಿ, ಪಲ್ಪ್‌ ಅನ್ನು ಹೊರ ತೆಗೆದು ಮಿಕ್ಸರ್‌ ಜಾರಿನಲ್ಲಿ ಪೇಸ್ಟ್‌ ಮಾಡಿಕೊಳ್ಳಬೇಕು. ನಂತರ ಒಂದು ಸ್ಟೀಲ್‌ ಪಾತ್ರೆಯಲ್ಲಿ ಒಂದು ಕಪ್‌ ನೀರನ್ನು ಕಾಯಲು ಇಟ್ಟು, ಅದಕ್ಕೆ ಮೂರು-ನಾಲ್ಕು ಗಂಟೆಗಳ ಕಾಲ ನೆನೆಸಿದ ಅರ್ಧ ಕಪ್‌ ಸಾಬುದಾನವನ್ನು ಸೇರಿಸಿ ಒಂದೈದು ನಿಮಿಷಗಳ ಕಾಲ ಕುದಿಸಿ, ಸಾಬುದಾನ ಟ್ರಾನ್ಸ್ಪರೆಂಟ್‌ ಆಗುವಾಗ ಒಲೆಯ ಮೇಲಿಂದ ಇಳಿಸಿ.

 ಈಗ ಪಾಯಸ ಮಾಡಲು ಒಂದು ಕಡಾಯಿಯನ್ನು ಕಾಯಲು ಇಟ್ಟು, ಒಗ್ಗರಣೆಗೆ ಎರಡು ಸ್ಪೂನ್‌ ತುಪ್ಪ ಹಾಕಿ ಅದಕ್ಕ ಮೀಡಿಯಂ ಸೈಜ್‌ನಲ್ಲಿ ಕತ್ತರಿಸಿದ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ ಬಣ್ಣ ಬದಲಾಗುವವರೆಗೂ ಹರಿಯಿರಿ. ನಂತರ ಒಣ ದ್ರಾಕ್ಷಿಯನ್ನು ಸೇರಿಸಿ ಹುರಿದು, ಒಂದು ಪ್ಲೇಟ್‌ ನಲ್ಲಿ ಎತ್ತಿಟ್ಟುಕೊಳ್ಳಿ. ಉಳಿದ ತುಪ್ಪಕ್ಕೆ ಕಾಲು ಕಪ್‌ ಶಾವಿಗೆ ಹಾಕಿ ಗೋಲ್ಡನ್‌ ಬಣ್ಣ ಬರುವವರೆಗೆ ಹುರಿಯಿರಿ. ಅದಕ್ಕೆ ಮುಕ್ಕಾಲು ಕಪ್‌ ನಷ್ಟು ಕುದಿಸಿದ ಹಾಲನ್ನು ಸೇರಿಸಿ. ನಂತರ ಬೇಯಿಸಿದ ಸಾಬುದಾನ ಸೇರಿಸಿ ಕುದಿಯಲು ಬಿಡಿ. ಈಗ ಸಿಹಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಕುದಿಯುವಾಗಲೇ ಹುರಿದ ಡ್ರೈಫ್ರೂಟ್ಸ್‌ ಗಳನ್ನು ಸೇರಿಸಿ ಸಾಬುದಾನ ಮತ್ತು ಶಾವಿಗೆ ಬೇಯುವವರೆಗೂ ಆಡಿಸುತ್ತಾ ಇರಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪಾಯಸವನ್ನು ಪೂರ್ತಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ರುಬ್ಬಿದ ಮಾವಿನ ಪಲ್ಪ್‌ ಅನ್ನು ಸೇರಿಸಿ.  ಈಗ ಮಾವಿನ ಹಣ್ಣಿನ ಪಾಯಸ ಸವಿಯಲು ಸಿದ್ದ.

                                                                ಮಾವಿನ ಪಾಯಸ

ತೂಕ ಇಳಿಕೆಗೆ ಭಾರತೀಯ ಅಡುಗೆಗಳು 👇

 http://www.capturingdaysoflife.com/2026/02/1-30.html 

ಮಾವಿನ ಚಟ್ನಿ

ಬೇಕಾಗುವ ಪದಾರ್ಥಗಳು

  • ಕಾಯಿ ಹುಳಿ ಮಾವಿನ ಕಾಯಿ– 1
  • ಹಸಿಮೆಣಸಿನಕಾಯಿ – 2
  • ಉಪ್ಪುರುಚಿಗೆ
  • ಬೆಲ್ಲ – 2 ಟೇಬಲ್ ಸ್ಪೂನ್
  • ಸಾಸಿವೆ – ½ ಟೀ ಸ್ಪೂನ್
  • ಕಡಲೇ ಬೇಳೆ – ಕಾಲು ಚಮಚ
  • ಉದ್ದಿನಬೇಳೆ – ಕಾಲು ಚಮಚ
  • ಮೆಂತ್ಯೆ – ಕಾಲು ಚಮಚ
  • ಬ್ಯಾಡಗಿ ಮೆಣಸಿನಕಾಯಿ – ಮೂರರಿಂದ ನಾಲ್ಕು
  • ಜೀರಿಗೆ - ಕಾಲು ಚಮಚ
  • ಬೆಳ್ಳುಳ್ಳಿ – ೬ ಎಸಳು.
  • ಎಣ್ಣೆ – ಒಗ್ಗರಣೆಗೆ 

 ಮಾಡುವ ವಿಧಾನ:

ಒಂದು ಪ್ಯಾನ್‌ ಗೆ ಎಣ್ಣೆ ಹಾಕಿ, ಕಡಲೇಬೇಳೆ, ಉದ್ದಿನಬೇಳೆ, ಮೆಂತ್ಯೆ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಮೀಡಿಯಂ ಫ್ಲೇಮ್‌ ನಲ್ಲಿ ಹುರಿಯಿರಿ, ಹುರಿದ ಮಿಶ್ರಣವನ್ನು ಮಿಕ್ಸರ್‌ ಜಾರಿಗೆ ವರ್ಗಾಯಿಸಿ, ಒಣಮೆಣಸು ಖಾರಕ್ಕೆ ತಕ್ಕಷ್ಟು, ಜೀರಿಗೆ, ತುಂಡು ಮಾಡಿದ ಹಸಿ ಮಾವಿನಕಾಯಿ ಚೂರುಗಳು, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ತರಿತರಿಯಾಗಿ ರುಬ್ಬಿಕೊಳ್ಳಿ.

ಒಂದು ಪ್ಯಾನ್‌ ಗೆ ಒಂದು ಸ್ಪೂನ್‌ ಎಣ್ಣೆ, ಸಾಸಿವೆ, ಕರಿಬೇವು, ಹಿಂಗು ಸೇರಿಸಿ ಒಗ್ಗರಣೆ ಹಾಕಿ, ಅದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಒಂದು ನಿಮಿಷದ ಕಾಲ ಫ್ರೈ ಮಾಡಿದರೆ ಸಾಕು, ಮಾವಿನಕಾಯಿ ಚಟ್ನಿ ಸಿದ್ದ. ಅನ್ನ, ದೋಸೆ ಅಥವಾ ಚಪಾತಿಯೊಂದಿಗೆ ಸವಿಯಲು ಉತ್ತಮ.

                                                             ಮಾವಿನಕಾಯಿ ಚಟ್ನಿ

ಮಾವಿನ ಸಲಾಡ್

ಬೇಕಾಗುವ ಪದಾರ್ಥಗಳು

  • ಸಣ್ಣದಾಗಿ ಕತ್ತರಿಸಿದ ಮಾವಿನ ತುಂಡುಗಳು – 1 ಕಪ್
  • ಸಣ್ಣದಾಗಿ ಕತ್ತರಿಸಿದ ಸೌತೆಕಾಯಿ – ½ ಕಪ್
  • ತುರಿದ ಕ್ಯಾರೆಟ್ – ½ ಕಪ್
  • ಲಿಂಬೆ ರಸ – 1 ಟೇಬಲ್ ಸ್ಪೂನ್
  • ಉಪ್ಪು, ಮೆಣಸುರುಚಿಗೆ

 ಮಾಡುವ ವಿಧಾನ

ಕತ್ತರಿಸಿದ ಮಾವಿನಕಾಯಿ, ಸೌತೆಕಾಯಿ, ಕ್ಯಾರೆಟ್‌ ಎಲ್ಲ ಪದಾರ್ಥಗಳನ್ನು ಒಂದು ಬೌಲ್ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ ಮತ್ತು ಅರ್ಧ ಹೋಳು ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿದರೆ ಮಾವಿನ ಸಲಾಡ್‌ ತಿನ್ನಲು ಸಿದ್ದ. ತಾಜಾವಾಗಿ ತಿನ್ನುವುದು ಉತ್ತಮ.

‌                                                                        ಮಾವಿನ ಸಲಾಡ್

 ಮಾವಿನ ಹೋಳಿಗೆ

ಬೇಕಾಗುವ ಪದಾರ್ಥಗಳು

  • ಮೈದಾ ಹಿಟ್ಟು – 1 ಕಪ್
  • ಮಾವಿನ ಪಲ್ಪ್ – 1 ಕಪ್
  • ಬೆಲ್ಲ/ಸಕ್ಕರೆ – ½ ಕಪ್
  • ತುಪ್ಪಅಗತ್ಯಕ್ಕೆ
  • ತುರಿದ ಹಸಿ ತೆಂಗಿನ ತುರಿ -   1 ಕಪ್
  • ಏಲಕ್ಕಿ ಪುಡಿ – ಕಾಲು ಚಮಚ
  • ಹುರಿದ ಸಣ್ಣ ರವೆ - 1 ಕಪ್

 ಮಾಡುವ ವಿಧಾನ:

ಒಂದು ಬಟ್ಟಲಿಗೆ ಮೈದಾ ತೆಗೆದುಕೊಂಡು ಅದಕ್ಕೆ ಚಿಟಿಕೆ ಅರಿಶಿನ ಸೇರಿಸಿ ಹಿಟ್ಟನ್ನು ಅರಿಶಿನ ಅದರಲ್ಲಿ ಬೆರೆಯುವಂತೆ ಮಿಶ್ರಣ ಮಾಡಿ. ಬಿಸಿ ನೀರು ತೆಗೆದುಕೊಂಡು ಹಂತ ಹಂತವಾಗಿ ಸೇರಿಸುತ್ತಾ ಹಿಟ್ಟನ್ನು ಮೃದುವಾಗಿ ಕಲಸಿ. ಕೊನೆಯಲ್ಲಿ ಅಡುಗೆ ಎಣ್ಣೆ ಸೇರಿಸಿ ಚೆನ್ನಾಗಿ ನಾದಿ, ಒಂಉ ಗಂಟೆಯ ಕಾಲು ನೆನಯಲು ಬಿಡಿ. ಪಾತ್ರೆಯನ್ನು ಮುಚ್ಚುವುದು ಮರೆಯಬೇಡಿ.

ಒಂದು ಪ್ಯಾನ್‌ ಗೆ ಒಂದು ಸ್ಪೂನ್‌ ತುಪ್ಪ ಹಾಕಿ, ಅದಕ್ಕೆ ಮಿಕ್ಸರ್‌ ಜಾರಿನಲ್ಲಿ ರುಬ್ಬಿದ ಹಸಿ ತೆಂಗಿನಕಾಯಿಯನ್ನು ಸೇರಿಸಿ ಬಣ್ಣ ಬದಲಾಗುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಸಿಹಿಗೆ ತಕ್ಕಷ್ಟು ಸಕ್ಕರೆ/ಬೆಲ್ಲ ಸೇರಿಸಿ, ಕರಗುವವರೆಗೂ ಹುರಿಯಿರಿ. ನಂತರ ಮಾವಿನ ಪಲ್ಪ್‌ ಅನ್ನು ಸೇರಿಸಿ ಚೆನ್ನಾಗಿ ಕಲಸಿ. ಒಂದು ಕಪ್‌ ರವೆ ಸೇರಿಸಿ ಸ್ವಲ್ಪ ಗಟ್ಟಿಯಾಗುವವರೆಗೂ ಚೆನ್ನಾಗಿ ಕಲಸುತ್ತಾ ಇರಿ.  ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ. ಸ್ವಲ್ಪ ಗಟ್ಟಿಯಾದ ಮೇಲೆ ಒಲೆ ಮೇಲಿಂದ ಇಳಿಸಿ, ತಣ್ಣಗಾಗಲು ಬಿಡಿ.  ಈಗ ಮಾವಿನ ಪಲ್ಪ್, ತೆಂಗಿನತುರಿ ಮತ್ತು ಬೆಲ್ಲ ಮಿಶ್ರಣ ಮಾಡಿದ ಹೂರಣ ತಯಾರಿ.

 ಈಗ ಮೆದುವಾಗಿಸಿದ ಮೈದಾ ಹಿಟ್ಟಿನಲ್ಲಿ ತಯಾರಾದ ಹೂರಣ ತುಂಬಿ, ಹೋಳಿಗೆಯ ಹದಕ್ಕೆ ತಟ್ಟಿ ತವಾದ ಮೇಲೆ ಬೇಯಿಸಿದರೆ ಸಿಹಿಯಾದ ಮಾವಿನ ಹಣ್ಣಿನ ಒಬ್ಬಟ್ಟು ಸಿದ್ದ. ತುಪ್ಪದೊಂದಿಗೆ ಬಿಸಿ ಬಿಸಿ ಹೋಳಿಗೆ ಸವಿಯಿರಿ.

                                                                 ಮಾವಿನ ಹೋಳಿಗೆ

ಮಾವಿನ ಉಪ್ಪಿನಕಾಯಿ

ಬೇಕಾಗುವ  ಪದಾರ್ಥಗಳು

  • ಕಾಯಿ ಮಾವು – 5
  • ಉಪ್ಪು – ½ ಕಪ್
  • ಮೆಣಸಿನ ಪುಡಿ – ¼ ಕಪ್
  • ಹಿಂಗು – ಕಾಲು ಚಮಚ
  • ಎಣ್ಣೆ – 1 ಕಪ್

 ಮಾಡುವ ವಿಧಾನ

            ಮಾವಿನ ಕಾಯಿಯನ್ನು ತುಂಡು ಮಾಡಿ, ಒಂದು ಪಾತ್ರೆಗೆ ಹಾಕಿ, ಅದಕ್ಕೆ ಉಪ್ಪು, ಮೆಣಸಿನಕಾಯಿ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಮುಚ್ಚಿ ರಾತ್ರಿಯಿಡಿ ನೆನೆಯಲು ಬಿಡಿ. ಬೆಳಗ್ಗೆ ಮಾವಿನಹೋಳುಗಳು ಚೆನ್ನಾಗಿ ಮಾಗಿ ರಸ ಬಿಟ್ಟಿರುತ್ತವೆ, ರಸದಿಂದ ಹೋಳುಗಳನ್ನು ಬೇರ್ಪಡಿಸಿ ಬಿಸಿಲಲ್ಲಿ ಒಣಗಲು ಇಟ್ಟು ಬಿಡಿ. ಮರುದಿನ ಉಳಿದ ರಸದೊಂದಿಗೆ ಮತ್ತೆ ಮಾವಿನಹೋಳುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ಒಂದು ನಾಲ್ಕಾರು ದಿನ ಚೆನ್ನಾಗಿ ಒಣಗಲು ಬಿಡಿ. ಒಣಗಿದ ಮಾವಿನ ಹೋಳುಗಳನ್ನು ಒಂದು ಬಾಟಲಿಗೆ ಹಾಕಿ ಸ್ವಲ್ಪ ಎಣ್ಣೆ ಸೇರಿಸಿ ಮುಚ್ಚಿಟ್ಟರೆ ಮಾವಿನುಪ್ಪಿನಕಾಯಿ ರೆಡಿ. ಬಹಳ ದಿನಗಳವರೆಗೆ ಉಪಯೋಗಿಸಬಹುದು. ಬಿಸಿ ಅನ್ನದೊಂದಿಗೆ, ರೊಟ್ಟಿಯ ಜೊತೆ ಈ ಒಣಗಿದ ಉಪ್ಪಿನಕಾಯಿ ತಿನ್ನಲು ಸೂಪರ್.

                                                   ಮಾವಿನ ಉಪ್ಪಿನಕಾಯಿ

1. ಮಾವಿನ ಚಿಲ್ಲಿ ಸ್ನ್ಯಾಕ್ (Spicy Mango Bites)

ಬೇಕಾಗುವ ಪದಾರ್ಥಗಳು

  • ಹುಳಿ ಮಾವಿನ ಕಾಯಿ ತುಂಡುಗಳು – 1 ಕಪ್
  • ಮೆಣಸಿನ ಪುಡಿ – ½ ಟೀ ಸ್ಪೂನ್
  • ಉಪ್ಪುಚಿಟಿಕೆ
  • ಲಿಂಬೆ ರಸ – 1 ಟೀ ಸ್ಪೂನ್

 ಮಾಡುವ ವಿಧಾನ

ಒಂದು ಬೌಲ್ನಲ್ಲಿ ಹುಳಿ ಮಾವಿನ ಕಾಯಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ತೆಗೆದುಕೊಳ್ಳಿ. ಖಾರಕ್ಕೆ ತಕ್ಕಂತೆ ಮೆಣಸಿನ ಪುಡಿ, ರುಚಿಗೆ ಉಪ್ಪು ಮತ್ತು ಅರ್ಧ ಹೋಳು ನಿಂಬೆ ರಸ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ತಕ್ಷಣ ಸವಿಯಿರಿ. ಸಿಹಿ ಮತ್ತು ಉಪ್ಪು, ಹುಳಿ-ಕಾರದ ಕಾಂಬಿನೇಶನ್ ಅದ್ಭುತವಾಗಿರುತ್ತದೆ!

‌                                                                ಮಾವಿನ ಚಿಲ್ಲಿ ಸ್ನ್ಯಾಕ್ಸ್

 ಮಾವಿನ ಕ್ಯಾಂಡಿ (Mango Popsicles)

ಬೇಕಾಗುವ  ಪದಾರ್ಥಗಳು

  • ಮಾವಿನ ಪಲ್ಪ್ – 1 ಕಪ್
  • ಹಾಲು ಅಥವಾ ತೆಂಗಿನ ಹಾಲು – ½ ಕಪ್
  • ಜೇನು ಅಥವಾ ಸಕ್ಕರೆ – 2 ಟೇಬಲ್ ಸ್ಪೂನ್

 ಮಾಡುವ ವಿಧಾನ

ಮಾವಿನ ಹಣ್ಣಿನ ತಿರುಳು, ತೆಂಗಿನಹಾಲು, ಸಕ್ಕರೆ, ಈ ಎಲ್ಲಾ ಪದಾರ್ಥಗಳನ್ನು ಮಿಕ್ಸರ್ನಲ್ಲಿ ಬ್ಲೆಂಡ್ ಮಾಡಿ. ಬ್ಲೆಂಡ್‌ ಮಾಡಿದ ಮಿಶ್ರಣವನ್ನು ಕ್ಯಾಂಡಿ ಮೌಲ್ಡ್ಗಳಲ್ಲಿ ಹಾಕಿ. 5–6 ಗಂಟೆಗಳ ಕಾಲ ಫ್ರೀಜರ್ನಲ್ಲಿ ಇಡಿ. ಈಗ ಮಾವಿನ ಕ್ಯಾಂಡಿ ಸವಿಯಲು ಸಿದ್ದ. ತಂಪಾದ ಪಾಪ್ಸಿಕಲ್ (ಕ್ಯಾಂಡಿ) ಮಕ್ಕಳಿಗೆ ಬಹಳ ಇಷ್ಟವಾಗುತ್ತದೆಬೇಸಿಗೆಗೆ ಸೂಪರ್!

ಮಾವಿನ ರೆಸಿಪಿಗಳನ್ನು ಪ್ರಯತ್ನಿಸುವಾಗ ಹಣ್ಣನ್ನು ಆಯ್ಕೆ ಮಾಡುವಾಗ ಕೆಲವೊಂದು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಯಾವಾಗಲೂ ಸುಗಂಧ ಇರುವ ತಾಜಾ ಮಾವು ಆಯ್ಕೆ ಮಾಡಬೇಕು. ಹಣ್ಣು ತುಂಬಾ ಕಠಿಣ ಅಥವಾ ಮೃದುವಾಗಿರಬಾರದು, ಮತ್ತು ಕಲೆಗಳು ಇಲ್ಲದಿರುವ ಹಣ್ಣನ್ನು ಆಯ್ಕೆ ಮಾಡುವುದು ಉತ್ತಮ.  ಹೆಚ್ಚು ಸಕ್ಕರೆ ಹಾಕಬೇಡಿ.

                                                                   ಮಾವಿನ ಕ್ಯಾಂಡಿ

Frequently Asked Questions (FAQs)

1. ಯಾವ ಮಾವು ರೆಸಿಪಿಗೆ ಉತ್ತಮ?

ಅಲ್ಫೋನ್ಸೋ ಮತ್ತು ನೀಲಂ ಉತ್ತಮ.

2. ಮಾವಿನ ಶೇಕ್ ದಿನವೂ ಕುಡಿಯಬಹುದೇ?

ಹೌದು, ಆದರೆ ಮಿತಿಯಲ್ಲಿ.

3. ಮಾವಿನ ಐಸ್ ಕ್ರೀಂ ಫ್ರೀಜ್ನಲ್ಲಿ ಎಷ್ಟು ದಿನ ಇಡಬಹುದು?

ಸುಮಾರು 1 ವಾರ.

4. ಮಾವು ತಿನ್ನುವುದರಿಂದ ತೂಕ ಹೆಚ್ಚುತ್ತದೆಯೇ?

ಹೆಚ್ಚಾಗಿ ತಿಂದರೆ ಸಾಧ್ಯ.

5. ಮಾವಿನ ಜ್ಯೂಸ್ ಯಾವಾಗ ಕುಡಿಯಬೇಕು?

ಬೇಸಿಗೆಯಲ್ಲಿ ಮಧ್ಯಾಹ್ನ ಸಮಯದಲ್ಲಿ.

6. ಮಕ್ಕಳಿಗೆ ಯಾವ ರೆಸಿಪಿ ಸೂಕ್ತ?

ಮಿಲ್ಕ್ ಶೇಕ್.

 

ಹೆಚ್ಚಿನ ರೆಸಿಪಿಗಳಿಗಾಗಿ ಭೇಟಿ ನೀಡಿ:
👉 https://www.vegrecipesofindia.com/


 ಮಕ್ಕಳಿಗೆ ಮಾವಿನ ರೆಸಿಪಿ ನೀಡುವಾಗ ಗಮನಿಸಬೇಕಾದ ವಿಷಯಗಳು

  • ಹೆಚ್ಚು ಸಕ್ಕರೆ ಹಾಕಬೇಡಿ.
  • ಸ್ವಚ್ಛತೆಯನ್ನು ಕಾಪಾಡಿ.
  • ಹೊಸದಾಗಿ ತಯಾರಿಸಿ ತಕ್ಷಣ ಕೊಡಿ.
  • ಅಲರ್ಜಿ ಇದ್ದರೆ ಪರಿಶೀಲಿಸಿ.

ಚಿಕ್ಕ ಮಕ್ಕಳಿಗೆ ಆರೋಗ್ಯಕರ ಆಹಾರ👇

http://www.capturingdaysoflife.com/2026/01/05-baby-toddler-recipes-cooking-tips.html 


 ಮಾವಿನ ರೆಸಿಪಿಗಳು ಮಕ್ಕಳಿಗೆ ಆರೋಗ್ಯಕರವಾಗಿದ್ದು, ರುಚಿಕರವಾಗಿವೆ. ಸಣ್ಣ ಸಣ್ಣ ಕ್ರಿಯೇಟಿವ್ ಐಡಿಯಾಗಳಿಂದ ನೀವು ಮಕ್ಕಳಿಗೆ ಮಾವಿನ ಹಣ್ಣನ್ನು ಇನ್ನಷ್ಟು ಆಸಕ್ತಿದಾಯಕವಾಗಿ ನೀಡಬಹುದು.

ಲೇಖನವು ನಿಮಗೆ ಮಾವಿನ ಹಣ್ಣಿನ ಸೀಸನ್ ಅನ್ನು ಸಂಪೂರ್ಣವಾಗಿ ಆನಂದಿಸಲು ಸಹಾಯ ಮಾಡುತ್ತದೆ. ಸರಳ ಮತ್ತು ರುಚಿಕರ ರೆಸಿಪಿಗಳ ಮೂಲಕ ನೀವು ನಿಮ್ಮ ಕುಟುಂಬದ ಜೊತೆ ಸಂತೋಷದಿಂದ ಬೇಸಿಗೆಯನ್ನು ಕಳೆಯಬಹುದು. ಹೊಸ ರುಚಿಗಳನ್ನು ಪ್ರಯತ್ನಿಸಿ ಮತ್ತು ಮಾವಿನ ಹಣ್ಣಿನ ಸಿಹಿಯನ್ನು ಅನುಭವಿಸಿ!



ಮುಕ್ತಾಯ.

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????