ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ನ್ಯೂರೋಡೈವರ್ಜೆಂಟ್ ದಿನಚರಿ: ADHD ಮತ್ತು Autism ಜೀವನದ 10 ನೈಜ ಸತ್ಯಗಳು.

 

                                                     ವಿಭಿನ್ನ ಮೆದುಳಿನ ವಿಭಿನ್ನ ಪಯಣ

ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ:೧೮.೦೪.೨೦೨೬

ನ್ಯೂರೋಡೈವರ್ಜೆಂಟ್ ದಿನಚರಿ ಹೇಗೆ ರೂಪುಗೊಳ್ಳುತ್ತದೆ? ADHD ಮತ್ತು Autism ಇರುವವರ ನೈಜ ಅನುಭವಗಳು, ಸವಾಲುಗಳು ಮತ್ತು ಉಪಾಯಗಳನ್ನು ಕನ್ನಡದಲ್ಲಿ ತಿಳಿದುಕೊಳ್ಳಿ.

ನ್ಯೂರೋಡೈವರ್ಜೆಂಟ್ ದಿನಚರಿ: ನೈಜ ಅನುಭವಗಳಿಂದ ಕಲಿಯುವ ಒಂದು ಪಯಣ!

ಇಂದುನ್ಯೂರೋಡೈವರ್ಜೆಂಟ್ ದಿನಚರಿ” (Neurodivergent Day Navigation) ಬಗ್ಗೆ ಅರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ADHD, Autism ಮುಂತಾದ ಸ್ಥಿತಿಗಳಿರುವವರು ತಮ್ಮ ದಿನವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಅರಿಯುವುದು, ಸಮಾಜದಲ್ಲಿ ಒಪ್ಪಿಗೆಯನ್ನು ಹೆಚ್ಚಿಸುತ್ತದೆ.

ನ್ಯೂರೋಡೈವರ್ಜೆಂಟ್ ದಿನಚರಿ (Neurodivergent Day Navigation) ಎಂದರೆ ಸಾಮಾನ್ಯ ಜನರ ದಿನಚರಿಗಿಂತ ಭಿನ್ನವಾದ ರೀತಿಯಲ್ಲಿ ಯೋಚಿಸುವ ಮತ್ತು ಕಾರ್ಯನಿರ್ವಹಿಸುವ ವ್ಯಕ್ತಿಗಳ ದೈನಂದಿನ ಜೀವನವನ್ನು ಸೂಚಿಸುತ್ತದೆ. ಅಂತೆಯೇ ಪ್ರತಿಯೊಬ್ಬರ ಮೆದುಳು ವಿಭಿನ್ನವಾಗಿ ಕೆಲಸ ಮಾಡುವುದನ್ನು ಒಪ್ಪಿಕೊಳ್ಳುವ ಪರಿಕಲ್ಪನೆ. ADHD, Autism ಮುಂತಾದ ಸ್ಥಿತಿಗಳಿರುವವರು ದಿನವನ್ನು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬುದು ಬಹಳ ವಿಶೇಷ.

ನ್ಯೂರೋಡೈವರ್ಜೆಂಟ್ ಎಂದರೇನು?

ಸಾಮಾನ್ಯವಾಗಿ ಎಲ್ಲರಲ್ಲಿಯೂ ಮೆದುಳಿನ ಕಾರ್ಯವಿಧಾನವು ಒಂದೇ ತೆರನಾಗಿರುವುದಿಲ್ಲ. ಈ ನ್ಯೂರೋಡೈವರ್ಜೆಂಟ್ ಅಂದರೆ, ಮೆದುಳಿನ ಕಾರ್ಯವಿಧಾನವು ಸಾಮಾನ್ಯ ಮಾದರಿಯಿಂದ ಭಿನ್ನವಾಗಿರುವುದು. ಇನ್ನೂ ಸರಳವಾಗಿ ಹೇಳುವುದಾದರೇ, ವಿಭಿನ್ನವಾಗಿ ಯೋಚಿಸುವವರು, ವಿಭಿನ್ನವಾಗಿ ವರ್ತಿಸುವವರು, ವಿಭಿನ್ನವಾಗಿ ಕಲಿಯುವವರು. ಇದು ಸಮಸ್ಯೆಯಲ್ಲ, ಆದರೆ ಒಂದು ವೈವಿಧ್ಯ ಪರಿಸ್ಥಿತಿ.

ನ್ಯೂರೋಡೈವರ್ಜೆಂಟ್ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾಣುವ ಕೆಲವು ಸ್ಥಿತಿಗಳು:

  • ADHD (Attention Deficit Hyperactivity Disorder): ಗಮನ ಕೊರತೆ ಮತ್ತು ಅತಿಸಕ್ರಿಯತೆ.
  • Autism (ಆಟಿಸಂ): ಸಾಮಾಜಿಕ ಸಂವಹನ ಮತ್ತು ಸಂವೇದನಾತ್ಮಕ ವ್ಯತ್ಯಾಸಗಳು.
  • Dyslexia (ಓದಿನಲ್ಲಿ ತೊಂದರೆ)
  • OCD (Obsessive Compulsive Disorder}.

ನ್ಯೂರೋಡೈವರ್ಜೆಂಟ್ ದಿನಚರಿಯು ವಿಶಿಷ್ಟ ರಚನೆ ಹೊಂದಿದ್ದು, ಸಾಮಾನ್ಯ ದಿನಚರಿಗಿಂತ ಹೆಚ್ಚು ನಮ್ಯತೆ (Flexibility) ಮತ್ತು ವೈಯಕ್ತಿಕತೆಯನ್ನು ಹೊಂದಿರುತ್ತದೆ.

ನ್ಯೂರೋಡೈವರ್ಜೆಂಟ್ ಅನ್ನು ಅನುಭವಿಸುತ್ತಿರುವ ಕೆಲವು ವ್ಯಕ್ತಿಗಳಿಗೆ ತಮ್ಮ ಮುಂಜಾನೆಯನ್ನು ಆರಂಭಿಸುವುದು ಕಷ್ಟವಾಗಬಹುದು, ಕಾರಣ ಮೋಟಿವೇಷನ್ ಕೊರತೆ, ಅಲಾರಂ ಮಿಸ್ ಮಾಡುವುದು, ಒಂದೇ ಸಮಯದಲ್ಲಿ ಬೇರೆ ಬೇರೆ ವಿಷಯಗಳ ಕುರಿತು ಆಲೋಚಿಸುತ್ತಾ, ಒತ್ತಡ ಅನುಭವಿಸುವುದು, ಏಳುವಾಗ ಕರ್ಕಶ ಶಬ್ಧ ಕಿವಿಗೆ ಬೀಳುವುದು, ಗಡಿಬಿಡಿಯಲ್ಲಿ ಏಳುವುದು, ಇನ್ನೂ ಅನೇಕ  ಕಾರಣಗಳಿಂದಾಗಿ ಮೆದುಳಿನ ಕಾರ್ಯವಿಧಾನದಲ್ಲಿ ಏರುಪೇರಾಗುತ್ತದೆ.

ಈ ರೀತಿಯ ಸಮಯಗಳನ್ನು ನಿರಾಯಾಸವಾಗಿಸಲು ಸರಳ ರೂಟೀನ್ ಅನ್ನು ಪಾಲಿಸುತ್ತಾ, ಆ ದಿನದ  ವೇಳಾಪಟ್ಟಿಯನ್ನು ಹಿಂದಿನ ದಿನದ ರಾತ್ರಿಯೇ ನೋಟ್‌ ಮಾಡುವುದು ಉತ್ತಮ

ಕೆಲವರು ಮಧ್ಯಾಹ್ನ ಹೆಚ್ಚು ಉತ್ಸುಕತೆಯನ್ನು ತೋರುತ್ತಾರೆ. ಹೈಪರ್ ಫೋಕಸ್ ನಿಂದಾಗಿ, ಕ್ರಿಯೇಟಿವಿಟಿ ಹೆಚ್ಚಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಕೆಲಸವನ್ನು ಸಣ್ಣ ಸಣ್ಣ ಭಾಗಗಳಲ್ಲಿ ವಿಭಜಿಸಿ ಮಾಡುವುದರಿಂದ ಸಾಮಾನ್ಯ ದಿನಚರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

                ಸಂಜೆ ಸಮಯದ, ದಣಿವು, ಮಾನಸಿಕ ಒತ್ತಡ, ಸಾಮಾಜಿಕ ಸಂಪರ್ಕದಿಂದಾದ ಒತ್ತಡ ಇವುಗಳನ್ನು ನೀಗಿಸಲು, ಆ ಸಮಯದಿ  ಶಾಂತ ಚಟುವಟಿಕೆ (reading, music) ಗಳ ಕಡೆಗೆ ಗಮನವೀಯುವುದು ಉತ್ತಮ.

ಉತ್ತಮ Life Hacks | Mental & Physical Health ಗೆ ಸ್ಮಾರ್ಟ್ ಉಪಾಯಗಳು!!👇  https://www.capturingdaysoflife.com/2026/01/life-hacks-mental-physical-health.html

ADHD ಇರುವವರ ದಿನಚರಿ.

ADHD ಇರುವವರ ದಿನಚರಿ ಸಾಮಾನ್ಯ ದಿನಚರಿಯಿಂದ ಸ್ವಲ್ಪ ವಿಭಿನ್ನವಾಗಿರಬಹುದು.
ಅವರ ಮೆದುಳು ವೇಗವಾಗಿ ಕೆಲಸ ಮಾಡುತ್ತದೆ, ಆದರೆ ಗಮನವನ್ನು ಒಂದೇ ವಿಷಯದ ಮೇಲೆ ಹಿಡಿದಿಡುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಇದು ಕೆಲವೊಮ್ಮೆ ದಿನಚರಿಯನ್ನು ಅಸ್ಥಿರವಾಗಿಸಿಬಿಡುತ್ತದೆ.

                                                    Alarm off ಮಾಡಿ ಮತ್ತೆ ಮಲಗುವ ವ್ಯಕ್ತಿ

ಸುಲಭವಾಗಿ ಗಮನ, ಒಂದು ಕೆಲಸದಿಂದ ಇನ್ನೊಂದಕ್ಕೆ ಹೋಗಿಬಿಡುತ್ತದೆ. ಇದನ್ನು ತಪ್ಪಿಸಲು ಸಮಯ ನಿರ್ವಹಣೆಯೊಂದಿಗೆ ಟಾಸ್ಕ್‌ ಲಿಸ್ಟ್‌ ಮಾಡುವುದನ್ನು ಅಭ್ಯಾಸ ಮಾಡುವುದರಿಂದ, ಮಾಡುವ ಕೆಲಸದ ಮೇಲೆ ಗಮನವಿರುತ್ತದೆ.

👉 ಉಪಯುಕ್ತ ಲಿಂಕ್:
https://todoist.com (Task management tool)

ಉತ್ತಮ ಬೆಳಗಿನ ಅಭ್ಯಾಸಕ್ಕೆ, ನಿತ್ಯವೂ ಅಲಾರಾಂ ಇಟ್ಟು  ಒಂದೇ ಸಮಯಕ್ಕೆ ಏಳುವ ಅಭ್ಯಾಸ ಮಾಡುವುದು, ಎದ್ದತಕ್ಷಣ  ಹಾಸಿಗೆ ಸರಿಮಾಡುವುದು, ಹಲ್ಲುಜ್ಜುವುದು, ಬೆಚ್ಚಗಿನ ನೀರನ್ನು ಕಡಿಯುವುದು ಈ ರೀತಿಯ ಅಭ್ಯಾಸಗಳು, ಮೆದುಳಿಗೆ ದಿನ ಪ್ರಾರಂಭವಾಗಿದೆ ಎಂಬ ಸಂದೇಶ ನೀಡುತ್ತವೆ.

ಮತ್ತು ಆ ದಿನದ ಕೆಲಗಳ ಟು ಡು ಲಿಸ್ಟ್‌ ತಯಾರಿಸಿ, ಒಂದೊಂದಾಗಿ ನಿಗದಿತ ಸಮಯದಲ್ಲಿ ಮುಗಿಸಿ. ಕೆಲಸದ ಮಧ್ಯೆ ಅರ್ಧಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳಿ. ಒಂದೇ ಸಮಯದಲ್ಲಿ ಹಲವು ಕೆಲಸ ಮಾಡುವುದನ್ನು ತಪ್ಪಿಸಿ.

ಮಧ್ಯಾಹ್ನದ ಸಮಯದಿ ಬಿಡುವು ತೆಗೆದುಕೊಂಡು, ಒಂದಷ್ಟು ಲಘು ವ್ಯಾಯಾಮ ಮಾಡಿದರೆ, ಗಮನವನ್ನು ಪುನಃ ಕೇಂದ್ರೀಕರಿಸಲು ಸಹಾಯವಾಗುತ್ತದೆ. ಸಮಯಕ್ಕೆ ಊಟ ಮಾಡುವುದು ಎನರ್ಜಿ ಸಸ್ಟೈನ್‌ ಮಾಡುತ್ತದೆ.

ಸಂಜೆಯ ವಿಶ್ರಾಂತಿಯ ಹೊತ್ತಿನಲ್ಲಿ, ಹಿತವಾದ ಸಂಗೀತ ಕೇಳುವುದು ಅಥವಾ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.

ದೈನಂದಿನ ಜೀವನವನ್ನು ಸುಲಭಗೊಳಿಸುವ ಅತ್ಯುತ್ತಮ Life Hacks. 👇https://www.capturingdaysoflife.com/2026/01/life-hacks-mental-physical-health.html

Autism ಹೊಂದಿರುವವರ ದಿನಚರಿ.

Autism ಇರುವವರಿಗೆ  ರೂಟೀನ್ ಬಹಳ ಮುಖ್ಯ. ಇವರು ಪ್ರತಿದಿನ ಒಂದೇ ರೀತಿಯ ಚಟುವಟಿಕೆಗಳನ್ನು ಮಾಡುತ್ತಾರೆ. ಅಚಾನಕ್ ಬದಲಾವಣೆಗಳನ್ನು ಇಷ್ಟಪಡುವುದಿಲ್ಲ

ಹೆಚ್ಚು ಶಬ್ದ, ತೀವ್ರ ಬೆಳಕು ಮತ್ತು  ವಾಸನೆಗಳಿಗೆ ಹೆಚ್ಚು ಸಂವೇದನಗೊಳ್ಳುತ್ತಾರೆ.  ಸಾಮಾಜಿಕ ಪರಿಸರದಲ್ಲಿ ತುಂಬಾ ಜನರಿರುವೆಡೆ ಅಸಹಜತೆಯನ್ನು ಅನುಭವಿಸುತ್ತಾರೆ.  ಆದ್ದರಿಂದ ಆಸ್ಟಿನ್‌ ಇರುವವರು ಯಾವಾಗಲೂ ಶಾಂತ ಸ್ಥಳದಲ್ಲಿರಲು ಬಯಸುತ್ತಾರೆ. ಮತ್ತು noise-cancelling ಹೆಡ್ಫೋನ್  ಅನ್ನು  ಬಳಸುತ್ತಾರೆ.

ಈ ರೀತಿಯ ನ್ಯೂರೋಡೈವರ್ಜೆಂಟ್ ವ್ಯಕ್ತಿಗಳಿಗೆ ಕೆಲವು ಸಾಮಾನ್ಯ ಸವಾಲುಗಳು ಇವೆ.

                                                      ಸಂವೇದನಾತ್ಮಕ ಒತ್ತಡ


ಗದ್ದಲದ ಮಾರುಕಟ್ಟೆ, ಜೋರಾದ ಸಂಗೀತ, ಫೋನ್, TV, ಜನ, ಕೆಲಸ + social media + calls ಎಲ್ಲವೂ  ಒಂದೇ ಸಮಯದಲ್ಲಿ ಸೇರಿ overstimulation ಉಂಟುಮಾಡುತ್ತವೆ.

ಇದರಿಂದ, ಕೋಪ / ಅಸಹನೆ, ತಲೆನೋವು, ಗೊಂದಲ,ಇಲ್ಲಿಂದ ಹೋಗಬೇಕು ಅನ್ನಿಸುವುದು, ಕಿವಿ/ಕಣ್ಣು ಮುಚ್ಚಿಕೊಳ್ಳುವುದು  ಆಗುತ್ತದೆ. ಸಾಮಾಜಿಕ ಸಂವಹನದಲ್ಲಿ ಅಡಚಣೆ ಮತ್ತು ಅರ್ಥಮಾಡಿಕೊಳ್ಳುವ ಸಮಸ್ಯೆ ಇಲ್ಲಿ ಮುಖ್ಯ ಕಾರಣವಾಗುತ್ತದೆ.

ಶಾಂತ ಸ್ಥಳದಲ್ಲಿದ್ದು, Screen time ಕಡಿಮೆ ಮಾಡಿ, Deep breathing ಮಾಡಿ ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.

ಇನ್ನೂ ಮುಂದುವರೆದು ಈ ಸಮಸ್ಯೆಗಳಿಂದ ಹೊರಬರಲು ಒಂದಷ್ಟು ಉಪಾಯಗಳು ಮತ್ತು ಕಾರ್ಯತಂತ್ರಗಳಿಗಾಗಿ, ಟೂಲ್ಗಳು ಮತ್ತು ಆಪ್ಗಳನ್ನು ಬಳಸಬಹುದು. ಉದಾಹರಣೆಗೆ:

  • Reminder apps .
  • Focus tools.
  • Habit trackers.

ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆಯೂ ನ್ಯೂರೋಡೈವರ್ಜೆಂಟ್ ವ್ಯಕ್ತಿಗಳಲ್ಲಿ ಕೆಲವು ವಿಶೇಷ ಸಾಮರ್ಥ್ಯಗಳಿವೆ:

  • ಕ್ರಿಯೇಟಿವಿಟಿ.
  • ಹೈಪರ್ ಫೋಕಸ್.
  • ಸೂಕ್ಷ್ಮ ವಿವರಗಳಿಗೂ ಹೆಚ್ಚಿನ ಗಮನ.

 

FAQ (Frequently Asked Questions)

1. ನ್ಯೂರೋಡೈವರ್ಜೆಂಟ್ ದಿನಚರಿ ಎಂದರೇನು?

ನ್ಯೂರೋಡೈವರ್ಜೆಂಟ್ ವ್ಯಕ್ತಿಗಳ ದೈನಂದಿನ ಜೀವನವು ವೈಶಿಷ್ಟ್ಯಪೂರ್ಣ ರಚನೆ.

2. ADHD ಇರುವವರು ದಿನವನ್ನು ಹೇಗೆ ನಿರ್ವಹಿಸಬಹುದು?

ಟೈಮರ್, ಟಾಸ್ಕ್ ಲಿಸ್ಟ್ ಮತ್ತು ಸಣ್ಣ ಗುರಿಗಳ ಮೂಲಕ.

3. Autism ಇರುವವರಿಗೆ ಯಾವುದು ಮುಖ್ಯ?

ಸ್ಥಿರ ರೂಟೀನ್ ಮತ್ತು ಶಾಂತ ಪರಿಸರ.

4. ನ್ಯೂರೋಡೈವರ್ಜೆಂಟ್ ಜನರಿಗೆ ಯಾವ ಸವಾಲುಗಳು?

ಒತ್ತಡ, ಗಮನ ಸಮಸ್ಯೆ ಮತ್ತು ಸಾಮಾಜಿಕ ಅಡಚಣೆಗಳು.

5. ಯಾವ ಟೂಲ್ಗಳು ಸಹಾಯ ಮಾಡುತ್ತವೆ?

Todo apps, reminders, focus tools.

6. ನ್ಯೂರೋಡೈವರ್ಜೆಂಟ್ ವ್ಯಕ್ತಿಗಳು ಯಾವಾಗ ಉತ್ತಮ?

ಕ್ರಿಯೇಟಿವಿಟಿ ಮತ್ತು ವಿಶಿಷ್ಟ ಯೋಚನೆಗಳಲ್ಲಿ.

ನೈಜ ಜೀವನದಲ್ಲಿ ನ್ಯೂರೋಡೈವರ್ಜೆಂಟ್ ದಿನಚರಿ.

ಬೆಳಗಿನ ಅನುಭವಗಳು (Real Story Insight).

ನಾನು ಅಲಾರಂ ಹಾಕುತ್ತೇನೆ, ಆದರೆ ಅದು ನಿಂತ ನಂತರ ಮತ್ತೆ ಮಲಗುತ್ತೇನೆ. ದಿನ ಶುರುವಾಗುವುದೇ ಸವಾಲು.” — ADHD ನ್ಯೂರೋಡೈವರ್ಜೆಂಟ್‌ ದಿನಚರಿ ಹೊಂದಿರುವ ವಿದ್ಯಾರ್ಥಿಯ ಅಳಲು.

ಮುಂಜಾನೆ ಏಳುವುದು, ಆರಂಭಿಸಲು ಕಷ್ಟ ಕಾರಣ ಪ್ರೇರಣೆ ಕಡಿಮೆ. ಸಣ್ಣ ಕೆಲಸವೂ ದೊಡ್ಡದಾಗಿ ಕಾಣುವುದು.

 ಉಪಾಯ: 5 ನಿಮಿಷ ನಿಯಮ (Just start small), “ಇದು ದೊಡ್ಡ ಕೆಲಸಎಂದು ಯೋಚಿಸದೆ, “5 ನಿಮಿಷ ಮಾತ್ರ ಮಾಡೋಣಎಂದು ಪ್ರಾರಂಭಿಸಿ ನೋಡಿ.

ಮಾಡುವ ಕೆಲಸಗಳ ದೃಶ್ಯ ವೇಳಾಪಟ್ಟಿ ತಯಾರಿಸಿ ನಿರ್ವಹಿಸುವುದು.

ಕೆಲಸ ಮತ್ತು ಅಧ್ಯಯನ ಸಮಯ.

                                                           Laptop ಮುಂದೆ deep work

ಒಬ್ಬ IT ಉದ್ಯೋಗಿಯ ಅನುಭವ: “ಕೆಲಸ ಆರಂಭಿಸಿದ ಮೇಲೆ ನಾನು 3 ಗಂಟೆ ಹೈಪರ್ ಫೋಕಸ್ನಲ್ಲಿ ಇರುತ್ತೇನೆ, ಆದರೆ ನಂತರ ಸಂಪೂರ್ಣ ದಣಿವಾಗುತ್ತದೆ.”

ಹೈಪರ್ ಫೋಕಸ್ ಅಂದರೆ ಅತಿಯಾದ ಶ್ರಮದಿಂದ ಸಂಪೂರ್ಣ ದಣಿವುಂಟಾಗುತ್ತದೆ.

ಇದಕ್ಕೆ ಉಪಾಯಗಳೆಂದರೆ, ಕೆಲಸಕ್ಕೆ break ಕೊಡಿ. ನಿಮ್ಮ ಮೇಲೆ ಹೆಚ್ಚು ಒತ್ತಡ ಹಾಕಿಕೊಳ್ಳಬೇಡಿ.
ನಿಮ್ಮ ಇಷ್ಟದ ಕೆಲಸ ಮಾಡಿ (hobbies).ಅಗತ್ಯವಿದ್ದರೆ ಸಹಾಯ ಕೇಳಿ. ಬ್ರೇಕ್ಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುವುದು.

ಸಂಜೆ ಮತ್ತು ವಿಶ್ರಾಂತಿ

ಸಂಜೆ ವೇಳೆಗೆ ನಾನು ಸಾಮಾಜಿಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ” — Autism ನ್ಯೂರೋಡೈವರ್ಜೆಂಟ್‌ ದಿನಚರಿ ಹೊಂದಿರುವ ವ್ಯಕ್ತಿ. ಇದಕ್ಕೆ ಕಾರಣ, ಸಾಮಾಜಿಕ ದಣಿವು , ಸಂವೇದನಾತ್ಮಕ ಒತ್ತಡ.

ಈ ಸಮಸ್ಯೆಗಳಿಂದ ಹೊರಬರಲು, ಶಾಂತ ಚಟುವಟಿಕೆಗಳ (music, journaling)ನ್ನು ಹವ್ಯಾಸವಾಗಿಸಿಸಕೊಳ್ಳುವುದು.

 

                                                            ಸಂಜೆಯ ಶಾಂತ ದಿನಚರಿ

ADHD ನ್ಯೂರೋಡೈವರ್ಜೆಂಟ್‌ ದಿನಚರಿ ಇರುವವರ ವೈಯಕ್ತಿಕ ಅನುಭವಗಳು.

 ಫೋಕಸ್ ಸಮಸ್ಯೆಗಳು.

ನಾನು ಓದಲು ಕುಳಿತುಕೊಂಡರೆ, ಗಮನ ಫೋನ್ ಕಡೆಗೆ ಹೋಗುತ್ತದೆ

ಇದರಿಂದ ಹೊರಬರಲು, distraction-free environment ನಲ್ಲಿ ಓದಲು ಕುಳಿತುಕೊಳ್ಳಿ.

ಒಬ್ಬ ವಿದ್ಯಾರ್ಥಿ ಹೇಳುತ್ತಾರೆ: “ನಾನು ಕೆಲಸಗಳನ್ನು ಕೊನೆಯ ಕ್ಷಣಕ್ಕೆ ಬಿಟ್ಟುಬಿಡುತ್ತೇನೆ

ಉಪಾಯಗಳು: ಟಾಸ್ಕ್ಗಳನ್ನು ಸಣ್ಣ ಭಾಗಗಳಾಗಿ ವಿಭಜನೆ ಮಾಡಿ, ಒಂದೊಂದಾಗಿ ಮುಗಿಸುತ್ತಾ ಬನ್ನಿ. reward system ನಲ್ಲಿ ಕೆಲಸ ಮಾಡಿ.

Autism ಇರುವವರ ನೈಜ ಅನುಭವಗಳು.

 ರೂಟೀನ್ ಮಹತ್ವ

ನನ್ನ ದಿನವು ನನ್ನವ ಪ್ಲಾನ್ ಪ್ರಕಾರವೇ ನಡೆಯಬೇಕು, ಯಾವುದೇ ಸಣ್ಣ ಬದಲಾವಣೆಯಾದರೂ ಆತಂಕ ಆಗುತ್ತದೆ.

ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ, ಅಥವಾ ಮನೆಯಲ್ಲಿಯೇ ಹೆಚ್ಚು ಶಬ್ದವಾಗುತ್ತಿದ್ದರೆ, ತಲೆನೋವು ಬರುತ್ತದೆ. ಮತ್ತು ಆ ಲೈಟಿಂಗ್‌ ನ ಹೆಚ್ಚು ಬೆಳಕು, ಅಸಹಜತೆಗೆ ಕಾರಣವಾಗುತ್ತದೆ.

ಇದಕ್ಕೆ  ಉಪಾಯವಾಗಿ, ಅಲ್ಲಿಯೇ ಇರುವ ಒಂದಷ್ಟು ಸೂಕ್ಷ್ಮತೆ ಹೊಂದಿದ ಹಾಗೂ ನಮ್ಮನ್ನು ಅರ್ಥಮಾಡಿಕೊಳ್ಳುವ ಸ್ನೇಹಿತರೊಂದಿಗೆ ಬೆರೆಯುವುದು ಉತ್ತಮ.

ನ್ಯೂರೋಡೈವರ್ಜೆಂಟ್‌ ದಿನಚರಿಯವರ ಮಾನಸಿಕ ಒತ್ತಡದ ವಿಚಾರಗಳು ಮತ್ತು ಸಾಮಾಜಿಕ ಅಡಚಣೆಗಳು?

  • ಅತಿಯಾಗಿ ಯೋಚಿಸುವುದು.
  • ಮೆದುಳು ಹೇಳುವ “ಇದು ನನಗೆ ಹೆಚ್ಚಾಗಿದೆ” ಎನ್ನುವ ಸಂದೇಶ.
  • ಭಾವನಾತ್ಮಕ ಒತ್ತಡ.
  • ಮಾತು ಆರಂಭಿಸಲು ಕಷ್ಟ.
  • misunderstood ಆಗುವುದು.

ಪ್ರಾಯೋಗಿಕ ಉಪಾಯಕ್ಕಾಗಿ, ಡಿಜಿಟಲ್ ಟೂಲ್ಗಳು.

  • Task apps.
  • Reminder tools.
  • Focus apps.

ಸಮಾಜದಲ್ಲಿ ಹೆಚ್ಚುತ್ತಿರುವ ಅರಿವು (Growing Awareness of Neurodiversity).

ಇತ್ತೀಚೆಗೆ ನ್ಯೂರೋಡೈವರ್ಸಿಟಿ ಬಗ್ಗೆ ಅರಿವು ಹೆಚ್ಚುತ್ತಿದೆ. ಇದು ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ:

1. Accessibility Consulting.

ಹಲವು ಸಂಸ್ಥೆಗಳು ತಮ್ಮ ಕೆಲಸದ ಪರಿಸರವನ್ನು neurodivergent-friendly ಆಗಿ ಮಾಡುತ್ತಿವೆ.

2. Neurodiversity Training Programs.

ಶಾಲೆಗಳು ಮತ್ತು ಕಂಪನಿಗಳು ಈ ನ್ಯೂರೋಡೈವರ್ಸಿಟಿ ವಿಷಯವಾಗಿ ತರಬೇತಿ ನೀಡುತ್ತಿವೆ. ಇದರಿಂದ  inclusivity ಹೆಚ್ಚುತ್ತಿದೆ.

3. Specialized Productivity Tools.

  • ADHD-friendly apps.
  • focus tools.

4. Healthcare Partnerships.

  • personalized mental health support.
  • personalized care.

ಈ ಮೇಲಿನ ವಿಚಾರಗಳು, neurodivergent ವ್ಯಕ್ತಿಗಳಿಗೆ ಉತ್ತಮ ಜೀವನವನ್ನು ಕೊಡುತ್ತದೆ.

ನ್ಯೂರೋಡೈವರ್ಸಿಟಿ ಬಗ್ಗೆ ಅರಿವು ಹೆಚ್ಚಿದಂತೆ ಹೊಸ ಅವಕಾಶಗಳು ಬರುತ್ತಿವೆ. ಇದು future ನಲ್ಲಿ ದೊಡ್ಡ ಕ್ಷೇತ್ರವಾಗಲಿದೆ.

ಸೋಷಿಯಲ್‌ ಮೀಡಿಯಾ ಯಶಸ್ಸು ಕನಸುಗಳನ್ನು ವೃತ್ತಿಯಾಗಿ ರೂಪಿಸುವ ಮಾರ್ಗ👇 https://www.capturingdaysoflife.com/2025/08/instagram-youtube-blogging.html

ನ್ಯೂರೋಡೈವರ್ಜೆಂಟ್ ದಿನಚರಿ: ನೈಜ ಕಥೆಗಳ ಮೂಲಕ ಅರ್ಥಮಾಡಿಕೊಳ್ಳೋಣ

ನ್ಯೂರೋಡೈವರ್ಜೆಂಟ್ ಎಂದರೆ, “ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವುದಿಲ್ಲಎಂಬ ಸ್ವೀಕಾರ.

ಪ್ರಾತಃಕಾಲ,ಕೆಲವರಿಗೆ ಆರಂಭವೇ  ಕಷ್ಟ. ಇನ್ನೂ ಕೆಲವರು hyper energy ಯಲ್ಲಿರುತ್ತಾರೆ.

ಕೆಲಸ / ಅಧ್ಯಯನ ವಿಚಾರದಲ್ಲಿ ಕೆಲವರಿಗೆ ಫೋಕಸ್ ಬದಲಾವಣೆಯಾಗುತ್ತದೆ. ಇನ್ನೂ ಕೆಲವರು ಹೈಪರ್ ಫೋಕಸ್ ಕ್ಷಣಗಳನ್ನು ಅನುಭವಿಸುತ್ತಾರೆ.

ಸಂಜೆ ಸಮಯ ದಣಿವು  ಇರುತ್ತದೆ. ಸಾಮಾಜಿಕವಾಗಿ ದೂರವಿರುವುದನ್ನು ಬಯಸುತ್ತಾರೆ.

ರಾಹುಲ್ ಎಂಬ ವಿದ್ಯಾರ್ಥಿಯು  ADHD ಹೊಂದಿದ್ದಾನೆ. ಅವನಿಗೆ ಓದುವುದೆಂದರೆ ಅಲರ್ಜಿ, ಪುಸ್ತಕ ಹಿಡಿದು ಕೂರಲೇ ಕಷ್ಟ. ಆದರೆ ಅವನ ಓದು ಏನಿದ್ದರೂ ಪರೀಕ್ಷೆಗೂ ಮುಂಚೆ ಮಾತ್ರ. ಅಕಸ್ಮಾತ್‌ ಓದಲು  ಪುಸ್ತಕ ತೆರೆದರೆ, 5 ನಿಮಿಷದೊಳಗೆ  ಮನಸ್ಸು ಬೇರೆ ಕಡೆ ಹೋಗುತ್ತದೆ.”

ಇದರ ಪರಿಣಾಮವಾಗಿ,ಕಡಿಮೆ ಅಂಕ ಬಂದು, ಆತ್ಮವಿಶ್ವಾಸ ಕುಸಿತವಾಗುತ್ತದೆ. ಆದ್ದರಿಂದ ಓದಲು Pomodoro (25 ನಿಮಿಷ ಓದು + 5 ನಿಮಿಷ ಬ್ರೇಕ್) ಟೆಕ್ನಿಕ್‌ ಬಳಸಿ. ಮೊಬೈಲ್‌ ಫೋನ್ನಿಂದ ದೂರವಿರಿ.

ಈ ಟೆಕ್ನಿಕ್‌ ಬಳಸುವುದರಿಂದ, 3 ತಿಂಗಳಲ್ಲಿ ಓದಿನಲ್ಲಿ ಫೋಕಸ್ ಉತ್ತಮವಾಗಿ ಅಂಕಗಳಲ್ಲಿ ಸುಧಾರಣೆಯಾಗುತ್ತದೆ.

 IT ಉದ್ಯೋಗಿ ಸ್ನೇಹಾಳ ನ್ಯೂರೋಡೈವರ್ಜೆಂಟ್‌ ದಿನಚರಿ.

ಇವರು ಕೆಲಸ ಆರಂಭಿಸಲು ವಿಳಂಬ ಮಾಡುತ್ತಾರೆ. ಇದರಿಂದ ಡೆಡ್‌ ಲೈನ್‌ ಮಿಸ್‌ ಆಗುತ್ತವೆ.
ಇವರು ಕೆಲಸ ಶುರು ಮಾಡೋದು ಕಷ್ಟ, ಆದರೆ ಒಂದು ಬಾರಿ ಪ್ರಾರಂಭಿಸಿದರೆ,ಕೆಲಸ ನಿಲ್ಲುವುದೇ ಇಲ್ಲ.

ಇದರ ಪರಿಣಾಮವಾಗಿ, ದೀರ್ಘಕಾಲದ ಒತ್ತಡ (stress) ಮತ್ತು ಹೆಚ್ಚು ಕೆಲಸದಿಂದ ಉಂಟಾಗುವ ತೀವ್ರ ದಣಿವು ಮತ್ತು ಆಸಕ್ತಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ.

ಇದಕ್ಕೆ ಪರಿಹಾರವಾಗಿ, ಕೆಲಸವನ್ನು  ವಿಭಜಿಸಿಕೊಂಡು, ಬೆಳಗಿನ ದಿನಚರಿಯನ್ನು ಸಮರ್ಥವಾಗಿ ನಿರ್ವಹಿಸುವುದರಿಂದ ಕೆಲಸದಲ್ಲಿ ಉತ್ಪನ್ನತೆ ಹೆಚ್ಚುತ್ತದೆ ಮತ್ತು stress ಕಡಿಮೆಯಾಗುತ್ತದೆ.

ಶಾಲಾ ವಿದ್ಯಾರ್ಥಿ ಅನಿಲ್ Autism ಹೊಂದಿದ್ದಾನೆ. ಅವನಿಗೆ ಕ್ಲಾಸ್ ಶಬ್ದದಿಂದ ಅಸಹಜತೆ  ಉಂಟಾಗುತ್ತದೆ. ಇದರಿಂದ ಪಠ್ಯದ ವಿಚಾರಗಳಲ್ಲಿ concentrate ಕಳೆದುಕೊಳ್ಳುತ್ತಾನೆ. ಮತ್ತು  ಬದಲಾವಣೆಗಳಿಗೆ ಅಂಜಿಕೊಳ್ಳುತ್ತಾನೆ.

 ಕಾರ್ತಿಕ್ ನ ನ್ಯೂರೋಡೈವರ್ಜೆಂಟ್‌ ದಿನಚರಿ.

ಕಾರ್ತಿಕ್ ಒಂದು ಆಫೀಸ್ ನಲ್ಲಿ ಕೆಲಸ ಮಾಡುತ್ತಾನೆ. ಅವನಿಗೆ ತನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡಲೇ ಕಷ್ಟ. ಕಾರಣ ಅವನು social anxiety ಗೆ ಒಳಗಾಗುತ್ತಾನೆ.

ಈ ಸಮಸ್ಯೆಗೆ ಪರಿಹಾರವಾಗಿ ಅವನು ತನ್ನ ಸಹೋದ್ಯೋಗಿಗಳೊಂದಿಗೆ, ಈ-ಮೇಲ್‌ ಮತ್ತು ಚಾಟ್‌ ಗಳ ಮೂಲಕ ಕಮ್ಯುನಿಕೇಷನ್‌ ಪ್ರಾರಂಭಿಸಿದ, ಸಲಹೆಗಳ ವಿನಿಮಯ ಮಾಡಿಕೊಂಡು, ತನ್ನ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡ. ಆಗ ಸಹೋದ್ಯೋಗಿಗಳೊಂದಿಗಿನ ಅವನ ಬಾಂಧವ್ಯ ಉತ್ತಮವಾಗಿ social anxiety ಯನ್ನು ದೂರಮಾಡಿಕೊಂಡ.

ಮಹಿಳೆಯರ ಅನುಭವ (Often Overlooked) ನ್ಯೂರೋಡೈವರ್ಜೆಂಟ್‌ ದಿನಚರಿಯಲ್ಲಿ.

ಬಹಳಷ್ಟು ಮಹಿಳೆಯರು late diagnosis ಹೊಂದಿರುತ್ತಾರೆ. ಹೆಣ್ಣು ಮಕ್ಕಳನ್ನು ಚಿಕ್ಕಂದಿನಿಂದಲೇ ಎಲ್ಲಕ್ಕೂ ಸುಮ್ಮನಿರಬೇಕು ಎಂದು ಹೇಳಿ ಹೇಳಿ, ಯಾವುದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೆ ಗೊಂದಲದಲ್ಲೇ ಇರುತ್ತಾರೆ.

emotional overload, multitasking stress ನಿಂದಾಗಿ, ಒತ್ತಡ, ಆರೋಗ್ಯ ಅಸಹಜತೆ, ಮತ್ತು ಖಿನ್ನತೆಯಿಂದ ಬಳಲುತ್ತಾರೆ. ಇದರಿಂದ ಹೊರಬರಲು ಒಂದಷ್ಟು ಥೆರಪಿಗಳನ್ನು ಮಾಡಿಸುವುದು ಉತ್ತಮ. ಹಾಗೂ ಮುಖ್ಯವಾಗಿ ಮಹಿಳೆಯರು ಸ್ವಆರೈಕೆಯ ಕಡೆಗೆ ಹೆಚ್ಚು ಗಮನ ನೀಡುವುದು ಉತ್ತಮ.

ಈ ಸಮಸ್ಯೆಗಳ ಕುರಿತು ಇತ್ತೀಚೆಗೆ ಜನರಲ್ಲಿ ಅರಿವು  ಹೆಚ್ಚಾಗಿ ವರ್ಕ್‌ ಲೈಫ್‌ ಬ್ಯಾಲೆನ್ಸ್‌ ಮಾಡುವುದರತ್ತ ಗಮನ ವಹಿಸುವುದು ವಿಶೇಷವಾಗಿ ಹೆಚ್ಚಾಗಿದೆ.

ಹೆಚ್ಚಿನ ಮಾಹಿತಿಗಾಗಿ👇

  • https://www.autismspeaks.org
  • https://chadd.org (ADHD resource)
  • ನ್ಯೂರೋಡೈವರ್ಜೆಂಟ್ ದಿನಚರಿ ವಿಭಿನ್ನವಾಗಿದ್ದರೂ, ಅದು ಸಮರ್ಥ ಮತ್ತು ಶಕ್ತಿಯುತವಾಗಿದೆ. ADHD ಮತ್ತು Autism ನ್ಯೂರೋಡೈವರ್ಜೆಂಟ್ ದಿನಚರಿ ಇರುವವರು ತಮ್ಮದೇ ಆದ ವಿಧಾನದಲ್ಲಿ ದಿನವನ್ನು ರೂಪಿಸಿಕೊಂಡು ಯಶಸ್ವಿಯಾಗಿ ಬದುಕುತ್ತಾರೆ.

    ನಾವು ವೈವಿಧ್ಯತೆಯನ್ನು ಅರ್ಥಮಾಡಿಕೊಂಡು, ಸಹಾನುಭೂತಿಯೊಂದಿಗೆ ನೋಡಿದರೆ, ಸಮಾಜ ಹೆಚ್ಚು ಒಳಗೊಂಡ ಮತ್ತು ಸಮಾನವಾಗುತ್ತದೆ.

    ಸಮಾಜವು ಅರಿವು ಮತ್ತು ಒಪ್ಪಿಗೆಯೊಂದಿಗೆ ಮುಂದೆ ಬಂದರೆ, ಪ್ರತಿಯೊಬ್ಬರೂ ಬೆಳೆಯಬಹುದು.

    Bottom of Form



    ಮುಕ್ತಾಯ.

    ಕಾಮೆಂಟ್‌ಗಳು

    thoghts of 20's

    ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

    💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

    🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

    ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

    🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

    💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

    ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

    "ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

    "ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

    ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????