ಮಾತನಾಡುವ ಕಲೆ: ನಿಮ್ಮ ಜೀವನವನ್ನು ಬದಲಾಯಿಸುವ 10 ಶಕ್ತಿಶಾಲಿ ರಹಸ್ಯಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಮಾತಿನ ಶಕ್ತಿ
ಲೇಖಕಿ:ನಾಗಲಕ್ಷ್ಮಿ ಕೆ. ಎನ್ ದಿನಾಂಕ:೨೨.೦೪.೨೦೨೬
ಮಾತನಾಡುವ
ಕಲೆ:
ಮನುಷ್ಯನ
ಬದುಕನ್ನು
ರೂಪಿಸುವ ಒಂದು ಅತ್ಯದ್ಭುತ
ಶಕ್ತಿ.
ಮಾತು… ಇದು ಅಕ್ಷರಗಳನ್ನು ಜೋಡಿಸಿದ
ಶಬ್ದಗಳಲ್ಲ,
ಇದು
ಮನಸ್ಸಗಳನ್ನು
ಮುಟ್ಟುವ
ಸೇತುವೆ,
ಸಂಬಂಧಗಳನ್ನು
ಕಟ್ಟುವ
ಬಲ,
ಮತ್ತು
ಜೀವನವನ್ನು
ಬದಲಾಯಿಸುವ
ಶಕ್ತಿ.
ಒಬ್ಬ
ಮನುಷ್ಯನಿಗೆ
ಮಾತನಾಡುವ
ಕಲೆ
(Art of Speaking) ಎಷ್ಟು
ಮುಖ್ಯವೆಂದರೆ,
ಅದು
ಅವನ
ವ್ಯಕ್ತಿತ್ವ,
ಗೌರವ
ಮತ್ತು
ಯಶಸ್ಸಿನ
ದಾರಿಯನ್ನು
ನಿರ್ಧರಿಸುತ್ತದೆ.
ಮಾತನಾಡುವ
ಕಲೆ
ಯಾಕೆ
ಅವಶ್ಯಕ?
ಮಾತು ಸಂಬಂಧಗಳನ್ನು
ಕಟ್ಟುತ್ತದೆ. ಸಿಹಿ
ಮಾತುಗಳು
ಹೃದಯಗಳನ್ನು
ಹತ್ತಿರಕ್ಕೆ
ತರುತ್ತವೆ.
ಒಂದು
ಸರಿಯಾದ
ಮಾತು
ದ್ವೇಷವನ್ನೂಸಹ
ಸ್ನೇಹವಾಗಿ
ಬದಲಾಯಿಸಬಹುದು.
ಸ್ಪಷ್ಟವಾಗಿ,
ನಿರರ್ಗಳವಾಗಿ ಧೈರ್ಯದಿಂದ
ಮಾತನಾಡಲು
ಶುರು
ಮಾಡಿದಾಗ,
ಆತ್ಮವಿಶ್ವಾಸ
ಸ್ವಾಭಾವಿಕವಾಗಿ
ಹೆಚ್ಚುತ್ತದೆ.
ಸರಿಯಾದ
ಸಮಯದಲ್ಲಿ,
ಸರಿಯಾದ
ರೀತಿಯಲ್ಲಿ
ಮಾತನಾಡುವವರು
ಎಲ್ಲೆಡೆ
ಗೌರವವನ್ನು
ಪಡೆಯುತ್ತಾರೆ.
ಉದ್ಯೋಗ,
ವ್ಯವಹಾರ,
ನಾಯಕತ್ವ
ಎಲ್ಲೆಡೆ
ಮಾತನಾಡುವ
ಕಲೆ ಬಹಳ
ಮುಖ್ಯವಾಗುತ್ತದೆ.
ಹಾಗಾಗಿ
ಉತ್ತಮ
ಸಂವಹನವೇ
ಅವಕಾಶಗಳ
ಬಾಗಿಲನ್ನು
ತೆರೆಯುತ್ತದೆ.
ಮನಸ್ಸಿನ
ಭಾವನೆಗಳನ್ನು
ಸರಿಯಾಗಿ
ಹೇಳದಿದ್ದರೆ,
ತಪ್ಪು
ಅರ್ಥಗಳಾಗುತ್ತವೆ ಮತ್ತು ಅನರ್ಥಗಳು
ಸಂಭವಿಸುತ್ತವೆ. ಸರಿಯಾದ
ಮಾತುಗಳು ಮಾತ್ರವೇ
ಮನಸ್ಸಿಗೆ
ಶಾಂತಿ
ನೀಡುತ್ತವೆ.
ಮಾತನಾಡುವ
ಕಲೆ
ಅಂದರೆ, ಉತ್ತಮ ಸಂವಹನ ಕೌಶಲ್ಯಗಳು
ಯಾವಾಗಲೂ ಉತ್ತಮ ಸಂಬಂಧಗಳಿಗೆ
ಕಾರಣವಾಗುತ್ತವೆ. ಪ್ರೀತಿ, ಗೌರವ
ಮತ್ತು
ನಂಬಿಕೆಯನ್ನು
ಬೆಳೆಸುತ್ತದೆ.
ಮಾತನಾಡುವ ಕಲೆಯಿಂದ ಪ್ರಭಾವಶೀಲ
ವ್ಯಕ್ತಿತ್ವ ರೂಪುಗೊಳ್ಳುತ್ತದೆ.
ನಿಮ್ಮ
ಮಾತುಗಳಿಂದ
ಜನರು
ಪ್ರೇರಿತರಾಗುತ್ತಾರೆ.
ಮಾತನಾಡುವುದರಿಂದ ಎಷ್ಟೋ ಸಮಸ್ಯೆಗಳು
ಪರಿಹಾರವಾಗುತ್ತವೆ.
ಸರಿಯಾದ
ಮಾತುಗಳಿಂದ
ದೊಡ್ಡ
ಸಮಸ್ಯೆಗಳನ್ನೂ
ಸುಲಭವಾಗಿ
ಪರಿಹರಿಸಬಹುದು.
ಮಾತನಾಡುವ ಕಲೆಯು, ನಾಯಕತ್ವ
ಗುಣಗಳಲ್ಲೊಂದು.
ಒಳ್ಳೆಯ
ನಾಯಕ
ಎಂದರೆ,
ಜನರ
ಜೊತೆ
ಮಾತನಾಡಲು
ಬಲ್ಲವನು.
ಒಮ್ಮೊಮ್ಮೆ
ಮಾತನಾಡುವ ಕಲೆಯು ಅನೇಕ ಸಂಕಷ್ಟಗಳನ್ನು ತಂದೊಡ್ಡಬಲ್ಲದು.
(Disadvantages)
ಮಾತುಗಳನ್ನು
ಸರಿಯಾಗಿ
ಬಳಸದಿದ್ದರೆ,
ಅದೇ
ಸಮಸ್ಯೆಯಾಗಬಹುದು…ತಪ್ಪು ಅರ್ಥಗಳುಂಟಾಗಿ,
ಅಸ್ಪಷ್ಟ
ಮಾತುಗಳಿಂದ
ಗೊಂದಲ
ಉಂಟಾಗುತ್ತದೆ.
ಕೋಪದ ಕೈಗೆ ಬುದ್ಧಿ ಕೊಟ್ಟು
ಹೇಳಿದ
ಮಾತುಗಳು
ಮಧುರ
ಸಂಬಂಧಗಳನ್ನು ಹಾಳು ಮಾಡಿಬಿಡುತ್ತವೆ.
ಸುಳ್ಳು
ಅಥವಾ
ಕಠಿಣ
ಮಾತುಗಳು, ಸುತ್ತಲಿನವರೊಂದಿಗಿನ
ನಂಬಿಕೆ ಮತ್ತು ವಿಶ್ವಾಸವನ್ನು
ಕಳೆದು ಕೊಳ್ಳುವಂತೆ ಮಾಡುತ್ತವೆ.
ತಪ್ಪಾಗಿ ಮಾತನಾಡುವುದರಿಂದ, ಸುಳ್ಳು ಹೇಳುವುದರಿಂದ, ನಿಮ್ಮ ಮೇಲೆ ನಿಮಗೆ ಅನುಮಾನ ಬರಬಹುದು. ಇದರಿಂದ ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗುವುದು.
ಹೃದಯವನ್ನು ಹಗುರಗೊಳಿಸುವ ಕೃತಜ್ಞತೆಯ ಶಕ್ತಿ, ಧನ್ಯತೆಯ ಮನೋಬಾವ. 👇
https://www.capturingdaysoflife.com/2025/08/blog-post_6.html
ಮಾತನಾಡುವ
ಕಲೆ(ಸಂವಹನ ಕೌಶಲ್ಯ)
ಬೆಳೆಸಲು
ಸರಳ
ಮಾರ್ಗಗಳು.
- ಹೆಚ್ಚು
ಕೇಳಿ,
ಕಡಿಮೆ
ಮಾತನಾಡಿ.
- ಮಾತನಾಡುವ
ಮೊದಲು
ಯೋಚಿಸಿ.
- ಮೃದು
ಧ್ವನಿ
ಬಳಸಿ ಮಾತನಾಡಿ.
- ಹೊಸ
ಪದಗಳನ್ನು
ಕಲಿತು ಮಾತನಾಡಲು ಪ್ರಯತ್ನಿಸಿ.
- ಕೋಪದಲ್ಲಿರುವಾಗ,
ಮಾತನ್ನು ಬಿಟ್ಟು ಮೌನವನ್ನು ಆರಿಸಿಕೊಳ್ಳಿ.
ಒಂದು ಮಾತು ಜೀವನವನ್ನು ಉತ್ತಮ ಹಾದಿಗೆ
ಬದಲಾಯಿಸಬಹುದು.
ಹಾಗೆ ಒಂದು
ಮಾತು
ಯಾರಾದರೊಬ್ಬರ
ಹೃದಯವನ್ನು
ಗೆಲ್ಲಬಹುದು.
ಮಾತನಾಡುವ
ಕಲೆ
ಎಂದರೆ,
ಮಾತಿನ
ಹಿಂದೆ
ಇರುವ
ಮನಸ್ಸಿನ
ಸೌಂದರ್ಯ.
ಹೇಳುವ
ಪ್ರತಿಯೊಂದು
ಮಾತು
ಒಂದು
ಬೀಜದಂತೆ,
ಅದು
ಪ್ರೀತಿಯನ್ನೂ
ಬೆಳೆಸಬಹುದು…
ಅಥವಾ
ನೋವನ್ನೂ
ಕೂಡ.
ಒಳ್ಳೆಯ ಸಂಬಂಧಗಳು ನಮ್ಮ ಮಾತುಗಳಲ್ಲಿ, ನಡೆನುಡಿಯಲ್ಲಿ
ಮತ್ತು ಮನಸ್ಸಿನ ಭಾವನೆಗಳಲ್ಲಿ ಬೆಳೆದಿರುತ್ತವೆ. ದೊಡ್ಡ ಪದಗಳನ್ನು ಬಳಸುವುದು ಮುಖ್ಯವಲ್ಲ, ಸರಳವಾಗಿ, ಮನದಟ್ಟಾಗಿ ಮತ್ತು ಪ್ರೀತಿಯಿಂದ ಮಾತನಾಡುವುದು ಮುಖ್ಯ.
1. ಗಮನದಿಂದ ಕೇಳುವುದು (Active Listening).
ಕಿವಿಯಿಂದ ಮಾತ್ರ ಕೇಳುವುದಲ್ಲ, ಸಂಪೂರ್ಣ ಗಮನ ಕೊಟ್ಟು ಕೇಳುವುದು,
ಮಧ್ಯೆ ಅಡ್ಡಿ ಮಾಡದಿರುವುದು ಸಹ ಒಂದು ಸಂವಹನ. ಇಲ್ಲಿ ತಲೆ ಆಡಿಸುವುದು, ಕಣ್ಣಿನಲ್ಲಿ ನೋಡುವುದು ಮಾತನಾಡುತ್ತಿರುವವರ ಮೇಲೆ ಉಪಯುಕ್ತ
ಪರಿಣಾಮ ಬೀರುತ್ತದೆ.
2. ಸ್ಪಷ್ಟ ಮತ್ತು ಪ್ರಾಮಾಣಿಕ ಮಾತು.
ನಿಮ್ಮ ಭಾವನೆಗಳನ್ನು ನೇರವಾಗಿ ಮತ್ತು ಮೃದುವಾಗಿ ಹೇಳಿ. “ನನಗೆ ಹೀಗೆ ಅನಿಸುತ್ತದೆ…”
ಎಂದು ಹೇಳುವುದು ಉತ್ತಮ.
3. ಸಹಾನುಭೂತಿ (Empathy).
ಇತರರ ದೃಷ್ಟಿಯಿಂದ ಅವರ ಭಾವನೆಗಳನ್ನು ಮತ್ತು ವಿಚಾರವನ್ನು ಅರ್ಥಮಾಡಿಕೊಳ್ಳಿ.
“ನೀವು
ಹೀಗೆ ಯೋಚಿಸುವುದು ಸಹಜ” ಎಂದು ಹೇಳಿ
ಅವರ ಗಮನವನ್ನು ಸೆಳೆದುಕೊಳ್ಳಿ.
4. ಸಹನೆ (Patience).
ಪ್ರತಿ
ಮಾತಿನಲ್ಲೂ ಮುತುವರ್ಜಿ ಬೇಡ. ಎದುರಿರುವ ಇತರರಿಗೆ
ಮಾತನಾಡಲು ಸಮಯ ಕೊಡಿ.
5. ದೇಹಭಾಷೆ (Non-Verbal
Communication.)
ಮಾತನಾಡುವಾಗ ಬಾಯಿಯಿಂದ ಬರುವ ಧ್ವನಿಯೊಂದಿಗೆ, ಮುಖಭಾವಗಳು ಮತ್ತು ದೇಹಭಂಗಿಗಳು ಬಹಳ ಹೇಳುತ್ತವೆ. ಮೃದುವಾದ
ಧ್ವನಿ ಸಂಬಂಧವನ್ನು ಯಾವಾಗಲೂ ಸುಧಾರಿಸುತ್ತದೆ.
6. ಗೌರವಪೂರ್ಣ ಭಿನ್ನಾಭಿಪ್ರಾಯ.
ವಿವಾದಗಳು
ಸಹಜ. ಆದರೆ ವ್ಯಕ್ತಿಯ ಮೇಲೆ
ಅಲ್ಲ, ವಿಷಯದ ಮೇಲೆ ಗಮನ ಕೊಡಿ.
7. ಪ್ರಶ್ನೆ ಕೇಳುವುದು.
ಅನುಮಾನ ಮಾಡುವುದಕ್ಕಿಂತ, “ನೀವು ಹೇಳಿದ್ದು ಸ್ವಲ್ಪ
ವಿವರಿಸಿ” ಎಂದು ಕೇಳಿ ಪರಿಹರಿಸಿಕೊಳ್ಳಬಹುದು.
8. ಪ್ರಶಂಸೆ (Appreciation).
ಚಿಕ್ಕ ಪ್ರಶಂಸೆಯ ಮಾತುಗಳು ದೊಡ್ಡ ಪರಿಣಾಮ ಬೀರುತ್ತವೆ. “ಧನ್ಯವಾದ”,
“ನೀವು ಚೆನ್ನಾಗಿ ಮಾಡಿದಿರಿ” ಎಂದರೆ ಸಂಬಂಧ ಬಲವಾಗುತ್ತದೆ.
9. ಭಾವನೆಗಳ
ನಿಯಂತ್ರಣ.
ಕೋಪದಲ್ಲಿರುವಾಗ ಮಾತಾಡಬೇಡಿ. ಉಕ್ಕುತ್ತಿರುವ ಆವೇಶವನ್ನು ಹತ್ತಿಕ್ಕಿ
ಸ್ವಲ್ಪ ವಿರಾಮ ತೆಗೆದುಕೊಳ್ಳಿ.
10. ನಂಬಿಕೆ ಮತ್ತು ಸ್ಥಿರತೆ.
ನಿಮ್ಮ ಮಾತು-ನಡೆ ಒಂದೇ ಆಗಿರಲಿ. ಇದರಿಂದ ವಿಶ್ವಾಸ ಹೆಚ್ಚುತ್ತದೆ.
ಕೇಳುವ ಕಲೆ ದಿನನಿತ್ಯ
ಅಭ್ಯಾಸಗಳು
(Simple Daily Exercises).
೧.ಪ್ರತಿ
ದಿನ ಯಾರಾದರೂ ಒಬ್ಬರ ಮಾತು 5 ನಿಮಿಷ ಸಂಪೂರ್ಣ ಗಮನದಿಂದ ಕೇಳುವುದನ್ನು ಅಭ್ಯಾಸ ಮಾಡಿ.
೨.
ನೀನು ಹೇಳುತ್ತಿರುವುದು ತಪ್ಪು, ನಾನು ಭಾವಿಸಿರುವುದೇ ನಿಜ ಎಂದು ಬಲವಂತ ಮಾಡುವ
ಬದಲು,
“ನನಗೆ ಹೀಗೆ ಅನಿಸುತ್ತದೆ” ಎಂದು
ಸೌಮ್ಯವಾಗಿ ಹೇಳಿ ನೋಡಿ.
3. ದಿನಕ್ಕೆ ಒಂದು
ಬಾರಿ ಯಾರಾದರೂ ಒಬ್ಬರಿಗೆ, ಪ್ರಶಂಸೆಯ
ಮತ್ತು ಒಳ್ಳೆಯ ಮಾತುಗಳನ್ನು ಹೇಳಿ.
4. ಕೋಪ
ಬಂದಾಗ 10 ಸೆಕೆಂಡ್ ವಿರಾಮ ತೆಗೆದುಕೊಂಡು, ನಿಧಾನವಾಗಿ ಉಸಿರಾಟ ಮಾಡಿ ನಂತರ ಮಾತನಾಡಿ.
5. ಮಾತನಾಡುವಾಗ ಮೊಬೈಲ್
ನೋಡದೆ, ಅಥವಾ ಅತ್ತ ಇತ್ತ ನೋಡದೇ ಎದುರಿನವರನ್ನು ಕಣ್ಣಿನಲ್ಲಿ ನೋಡಿ ಮಾತನಾಡಿ.
6. ಪ್ರತಿ
ದಿನ ಕನಿಷ್ಠ ಒಂದು ಅರ್ಥಪೂರ್ಣ ಪ್ರಶ್ನೆ
ಕೇಳಿ.
7. ಇಂದು ನಾನು ಹೇಗೆ ಮಾತನಾಡಿದೆ? ಇನ್ನೂ ಉತ್ತಮವಾಗಿ ಹೇಗೆ ಮಾತನಾಡಬಹುದು? ಎಂಬುದಾಗಿ ದಿನದ ಕೊನೆಯಲ್ಲಿ ವಿಮರ್ಶೆ ಮಾಡಿ.
ಕುಟುಂಬದಲ್ಲಿ
ಸಂವಹನ ಕೌಶಲ್ಯಗಳು — ಉದಾಹರಣೆಗಳೊಂದಿಗೆ
ಮನೆಯಲ್ಲಿ ಮಾತಿನ ವರಸೆ ಸ್ವಲ್ಪ ಬದಲಾಗಿದೆ ಎಂದರೆ, ವಾತಾವರಣವೇ ಬದಲಾಗುತ್ತದೆ. ಇಲ್ಲಿ ಪ್ರತಿ ಕೌಶಲ್ಯವನ್ನು ಕುಟುಂಬದ ಸರಳ ಸಂದರ್ಭಗಳಲ್ಲಿ ಹೇಗೆ ಬಳಸಬಹುದು ನೋಡಿ:
1. ಆಲಿಸುವುದು
(Active Listening).
ಉದಾಹರಣೆ:
ಮಗ/ಮಗಳು ಶಾಲೆಯಲ್ಲಿ ನಡೆದ
ವಿಷಯ ಹೇಳುತ್ತಿರುವಾಗ, ಫೋನ್ ನೋಡುತ್ತಾ ಕೇಳಬೇಡಿ.
👉
“ಹೌದಾ? ನಂತರ ಏನಾಯಿತು?” ಎಂದು
ಆಸಕ್ತಿಯಿಂದ ಕೇಳಿ. ಇದರಿಂದ ಮಕ್ಕಳಿಗೆ “ನನ್ನ ಮಾತು ಮುಖ್ಯ”
ಅನ್ನಿಸುತ್ತದೆ ಎಂದು ಭಾವಿಸಿ ಮತ್ತಷ್ಟು
ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.
2. ಸ್ಪಷ್ಟ ಮತ್ತು ಪ್ರಾಮಾಣಿಕ ಮಾತು.
ಉದಾಹರಣೆ:
ಪತಿ ಕೆಲಸ ಮುಗಿಸಿ ತಡವಾಗಿ ಮನೆಗೆ ಬಂದಾಗ, ಪತ್ನಿಯು “ನೀನು ಯಾವಾಗಲೂ ಹೀಗೇ” ಎಂದು ಹೇಳುವ ಬದಲು, “ನೀವು ತಡವಾಗಿ ಬಂದಾಗ
ನನಗೆ ಚಿಂತೆ ಆಗುತ್ತದೆ” ಎಂದಾಗ ಜಗಳ ಕಡಿಮೆಯಾಗುತ್ತದೆ, ಕಾಳಜಿಯನ್ನು
ಅರ್ಥಮಾಡಿಕೊಳ್ಳುವಿಕೆಯಿಂದ ಬಾಂಧವ್ಯ
ಗಟ್ಟಿಯಾಗುತ್ತದೆ.
3. ಸಹಾನುಭೂತಿ
(Empathy)
ಉದಾಹರಣೆ:
ಮಗ/ಮಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಾಗ, “ನಿನಗೆ ಓದಲಾಗುವುದಿಲ್ಲ” ಎಂದು ನಿರಾಶೆ ಹೆಚ್ಚಿಸುವ ಬದಲಾಗಿ,
“ನಿನಗೆ ಕಷ್ಟವಾಗಿರಬಹುದು, ಮುಂದೇನು ಮಾಡಬೇಕೆಂದು ನೋಡೋಣ” ಎಂದಾಗ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ.
4. ಸಹನೆ (Patience.)
ಉದಾಹರಣೆ:
ವೃದ್ಧರು (ಅಜ್ಜ/ಅಜ್ಜಿ) ಅಥವಾ
ಮನೆಯ ಹಿರಿಯ ಸದಸ್ಯರು ಒಂದೇ
ಮಾತನ್ನು ಪುನಃ ಪುನಃ ಹೇಳಿದರೂ, ಅವರಿಗೆ ಶಾಂತವಾಗಿ ಉತ್ತರಿಸಿ ಮತ್ತು ಅವರ ಮಾತುಗಳನ್ನು ಆಲಿಸಿ.
ಇದರಿಂದ ಅವರಿಗೆ ಗೌರವದ ಭಾವನೆ ಬರುತ್ತದೆ.
5. ದೇಹಭಾಷೆ (Non-Verbal
Communication).
ಉದಾಹರಣೆ:
ಮನೆಯವರ ಜೊತೆ ಮಾತನಾಡುವಾಗ ಕೋಪದ
ಮುಖಭಾವ ತೋರಿಸಿ ಮಾತನಾಡಿದರೆ ಮಾತು ತಪ್ಪಾಗಿ ಅರ್ಥವಾಗುತ್ತದೆ.
ಕಲಹ ಉಂಟಾಗಿ ಸಂಬಂಧಗಳು ಕಲುಷಿತವಾಗಬಹುದು.
ಆದ್ದರಿಂದ ಸ್ಮಿತ
(smile)ವದನದೊಂದಿಗೆ ಮೃದು ಧ್ವನಿ ಬಳಸಿ
ಮಾತನಾಡಿ.
ಮನೆಯಲ್ಲಿ ಶಾಂತಿ ಹೆಚ್ಚುತ್ತದೆ.
6. ಗೌರವಪೂರ್ಣ ಭಿನ್ನಾಭಿಪ್ರಾಯ.
ಉದಾಹರಣೆ:ಮನೆಯಲ್ಲಿ ಪತಿ ಪತ್ನಿಯರಲ್ಲಿ ಖರ್ಚಿನ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದಾಗ,
“ನಾವು ಇಬ್ಬರೂ ಒಪ್ಪುವ ಪರಿಹಾರ ಕಂಡುಹಿಡಿಯೋಣ” ಎಂದುಕೊಂಡಾಗ ಜಗಳ ಬದಲು ಸಹಕಾರ ಮೂಡುತ್ತದೆ.
7. ಪ್ರಶ್ನೆ ಕೇಳುವುದು.
ಉದಾಹರಣೆ:
ಮಗ/ಮಗಳು ಮೌನವಾಗಿದ್ದರೆ, “ನಿನಗೆ
ಏನಾದರೂ ಬೇಸರ ಇದೆಯಾ? ಅಥವಾ
ತಪ್ಪಾಗಿದೆಯಾ” ಎಂದು
ಕೇಳಿ. ಅವರು ತಮ್ಮ ಮನಸ್ಸು
ತೆರೆಯುತ್ತಾರೆ.
8. ಪ್ರಶಂಸೆ (Appreciation).
ಉದಾಹರಣೆ:
ಮನೆಯಲ್ಲಿ ತಾಯಿ ಅಡುಗೆ ಚೆನ್ನಾಗಿ ಮಾಡಿದಾಗ,
“ಇಂದು ಊಟ ಬಹಳ ರುಚಿಯಾಗಿದೆ”
ಎಂದು ಹೇಳಿ. ಪ್ರೀತಿ ಮತ್ತು ಸಂತೋಷ ಹೆಚ್ಚುತ್ತದೆ.
9. ಭಾವನೆಗಳ
ನಿಯಂತ್ರಣ.
ಉದಾಹರಣೆ:
ಕೋಪ ಬಂದಾಗ ತಕ್ಷಣಕ್ಕೆ ಉತ್ತರ ಕೊಡಬೇಡಿ.
👉
“ನಂತರ ಮಾತಾಡೋಣ” ಎಂದು ಹೇಳಿ ಸ್ವಲ್ಪ
ಸಮಯ ತೆಗೆದುಕೊಳ್ಳಿ ಅಥವಾ ಆ ಸಮಯಕ್ಕೆ ಮೌನವಾಗಿದ್ದುಬಿಡಿ.
ದೊಡ್ಡ
ಜಗಳ ತಪ್ಪುತ್ತದೆ.
10. ನಂಬಿಕೆ ಮತ್ತು ಸ್ಥಿರತೆ.
ಉದಾಹರಣೆ: ಮಕ್ಕಳಿಗೆ ಮಾತು ಕೊಟ್ಟರೆ, ಅದನ್ನು ನಿಭಾಯಿಸಿ. “ನಾಳೆ ಹೊರಗೆ ಕರೆದುಕೊಂಡು ಹೋಗುತ್ತೇನೆ” ಎಂದರೆ ನಿಜವಾಗಿಯೂ ಮಾಡಿ.ಆಗ ಅವರು ನಿಮ್ಮ ಮೇಲೆ ವಿಶ್ವಾಸ ನಂಬಿಕೆ ಇಡುತ್ತಾರೆ.
ಸಂವಹನ
ಕೌಶಲ್ಯಗಳು: ಉತ್ತಮ ಸಂಬಂಧಗಳ ರಹಸ್ಯ.
ಇಂದಿನ ವೇಗದ ಜೀವನದಲ್ಲಿ, ಸಂವಹನ
ಕೌಶಲ್ಯಗಳು
(Communication Skills) ಅತ್ಯಂತ
ಮುಖ್ಯವಾದ ಜೀವನ ಕೌಶಲ್ಯಗಳಾಗಿವೆ. ಕುಟುಂಬ,
ಸ್ನೇಹಿತರು, ಮತ್ತು ಸಮಾಜದಲ್ಲಿ ಉತ್ತಮ ಸಂಬಂಧಗಳನ್ನು ಕಟ್ಟಿಕೊಳ್ಳಲು ಸರಿಯಾದ ರೀತಿಯಲ್ಲಿ ಮಾತನಾಡುವುದು ಮತ್ತು ಕೇಳುವುದು ಬಹಳ ಅಗತ್ಯ.
ಸಂವಹನ
ಕೌಶಲ್ಯಗಳು ಎಂದರೇನು?
ಸಂವಹನ
ಕೌಶಲ್ಯಗಳು ಅಂದರೆ, ನಮ್ಮ ಭಾವನೆಗಳು, ಆಲೋಚನೆಗಳು
ಮತ್ತು ಮಾಹಿತಿಯನ್ನು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಹಂಚಿಕೊಳ್ಳುವ ಸಾಮರ್ಥ್ಯ.
ಸಂವಹನವು
ಎರಡು ಭಾಗಗಳನ್ನೊಳಗೊಂಡಿದೆ:
- ಮಾತಾಡುವುದು
(Speaking).
- ಕೇಳುವುದು
(Listening).
ಸಂವಹನ
ಕೌಶಲ್ಯಗಳ ಮಹತ್ವ.
ಉತ್ತಮ
ಸಂವಹನ ಕೌಶಲ್ಯಗಳು ಜೀವನವನ್ನು
ಹಲವಾರು ರೀತಿಯಲ್ಲಿ ಸುಧಾರಿಸುತ್ತವೆ:
- ಉತ್ತಮ ಕುಟುಂಬ ಸಂಬಂಧಗಳನ್ನು ನಿರ್ವಹಿಸುತ್ತವೆ.
- ಕಡಿಮೆ
ಜಗಳ ಮತ್ತು ಗೊಂದಲವನ್ನು ನಿವಾರಿಸುತ್ತವೆ.
- ಹೆಚ್ಚು
ಆತ್ಮವಿಶ್ವಾಸವನ್ನು ವ್ಯಕ್ತಿತ್ವಕ್ಕೆ
ಜೋಡಿಸುತ್ತವೆ.
- ಉತ್ತಮ
ಸಾಮಾಜಿಕ ಸಂಪರ್ಕವನ್ನು ರಚಿಸುತ್ತವೆ.
- ಸಂತೋಷಕರ ಜೀವನಕ್ಕೆ ಕಾರಣವಾಗುತ್ತವೆ.
ಹಾಗಾದರೆ
ಸಂವಹನ ಕೌಶಲ್ಯಗಳು
ಯಾವುವು?
1. ಗಮನದಿಂದ ಕೇಳುವುದು (Active Listening).
2. ಸ್ಪಷ್ಟವಾಗಿ ಮಾತನಾಡುವುದು.
3. ಸಹಾನುಭೂತಿ (Empathy).
4. ದೇಹಭಾಷೆ (Body Language).
5. ಭಾವನೆಗಳ ನಿಯಂತ್ರಣ.
ಕುಟುಂಬದಲ್ಲಿ
ಸಂವಹನ ಕೌಶಲ್ಯಗಳ ಬಳಕೆ.
ಕುಟುಂಬದಲ್ಲಿ
ಸಂವಹನ ಸರಿಯಾಗಿದ್ದರೆ ಮನೆ ಸಂತೋಷದಿಂದ ತುಂಬಿರುತ್ತದೆ.
👉 ಉದಾಹರಣೆ:
- ಮಕ್ಕಳ
ಜೊತೆ ಪ್ರತಿದಿನ ಮಾತನಾಡುವುದು.
- ಭೋಜನ
ಸಮಯದಲ್ಲಿ ಒಟ್ಟಿಗೆ ಕುಳಿತು ಮಾತನಾಡುತ್ತಾ ಭೋಜನ ಸವಿಯುವುದು.
- “ಧನ್ಯವಾದ” ಮತ್ತು “ಕ್ಷಮಿಸಿ” ಎಂಬ ಪದಗಳನ್ನು ಬಳಸುವುದು.
ದಿನನಿತ್ಯ
ಅಭ್ಯಾಸಗಳು.
- ದಿನಕ್ಕೆ
10 ನಿಮಿಷ ಕುಟುಂಬದ ಜೊತೆ ಮಾತನಾಡಿ.
- ಎದುರಿರುವವರ
ಮಾತನ್ನು ಸಂಪೂರ್ಣ ಕೇಳಿ.
- ಪ್ರತಿದಿನ
ಒಳ್ಳೆಯ ಮಾತು ಹೇಳಿ.
- ಕೋಪ
ಬಂದಾಗ ತಾಳ್ಮೆಯಿಂದ ಪ್ರತಿಕ್ರಿಯಿಸಿ.
ವ್ಯವಹಾರದಲ್ಲಿ
ಸಂವಹನ ಕೌಶಲ್ಯಗಳು: ಯಶಸ್ಸಿಗೆ ದಾರಿ ತೋರಿಸುವ ಗುಟ್ಟು.
ಇಂದಿನ ಸ್ಪರ್ಧಾತ್ಮಕ ವ್ಯವಹಾರ ಜಗತ್ತಿನಲ್ಲಿ, ಸಂವಹನ ಕೌಶಲ್ಯಗಳು (Communication
Skills in Business) ಅತ್ಯಂತ
ಪ್ರಮುಖ ಪಾತ್ರ ವಹಿಸುತ್ತವೆ. ಉತ್ತಮ ಸಂವಹನವು ಗ್ರಾಹಕರ ವಿಶ್ವಾಸ, ತಂಡದ ಸಹಕಾರ ಮತ್ತು
ವ್ಯವಹಾರದ ಬೆಳವಣಿಗೆಗೆ ಆಧಾರವಾಗಿರುತ್ತದೆ.
ವ್ಯವಹಾರದಲ್ಲಿ
ಸಂವಹನ ಕೌಶಲ್ಯಗಳು ಎಂದರೇನು?
ವ್ಯವಹಾರದಲ್ಲಿ ಸಂವಹನ ಕೌಶಲ್ಯಗಳು ಅಂದರೆ, ಗ್ರಾಹಕರು,
ಉದ್ಯೋಗಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಮಾತಾಡುವ ಸಾಮರ್ಥ್ಯ.
ವ್ಯವಹಾರದಲ್ಲಿ
ಸಂವಹನದ ಮಹತ್ವ.
- ಉತ್ತಮ
ಸಂವಹನ ಗ್ರಾಹಕರ ವಿಶ್ವಾಸ
ಹೆಚ್ಚಿಸುತ್ತದೆ.
- ತಂಡದಲ್ಲಿ
ಸಹಕಾರವನ್ನು ಬೆಳೆಸುತ್ತದೆ.
- ವ್ಯವಹಾರದ
ಬೆಳವಣಿಗೆಗೆ ಸಹಾಯ ಮಾಡುತ್ತದೆ.
- ಸಮಸ್ಯೆಗಳನ್ನು
ಬೇಗ ಪರಿಹರಿಸಲು ನೆರವಾಗುತ್ತದೆ.
- ಉತ್ತಮ
ನಾಯಕತ್ವವನ್ನು ರೂಪಿಸುತ್ತದೆ.
ವ್ಯವಹಾರದಲ್ಲಿ
ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ವಿಧಾನಗಳು.
1. ಸ್ಪಷ್ಟ ಮತ್ತು ಸರಳ ಮಾತು ಬಳಸಿ.
ವ್ಯವಹಾರದಲ್ಲಿ ಅತಿಯಾದ ಕಠಿಣ ಪದಗಳನ್ನು ಬಳಸುವುದನ್ನು
ತಪ್ಪಿಸಿ. ಮತ್ತು ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾತನಾಡಿ.
2. ಗಮನದಿಂದ ಕೇಳುವ ಅಭ್ಯಾಸ (Active Listening).
ಗ್ರಾಹಕರು ಅಥವಾ ಉದ್ಯೋಗಿಗಳು ಏನು
ಹೇಳುತ್ತಿದ್ದಾರೆ ಎಂಬುದನ್ನು ಗಮನದಿಂದ ಕೇಳಿ. ಇದು ಉತ್ತಮ ನಿರ್ಧಾರ
ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
3. ಆತ್ಮವಿಶ್ವಾಸದಿಂದ ಮಾತನಾಡಿ.
ಗ್ರಾಹಕರೊಂದಿಗೆ ವ್ಯವಹರಿಸುವಾಗ ನಿಮ್ಮ
ಮಾತಿನಲ್ಲಿ ನಂಬಿಕೆ ಇರಲಿ. ಸ್ಪಷ್ಟ
ಧ್ವನಿ ಮತ್ತು ದೃಢ ಮನೋಭಾವ ಗ್ರಾಹಕರಿಗೆ
ವಿಶ್ವಾಸ ಮೂಡಿಸುತ್ತದೆ.
4. ದೇಹಭಾಷೆ ಸುಧಾರಿಸಿ (Body Language).
ನಿಮ್ಮ ಮುಖಭಾವ ಮತ್ತು ಧ್ವನಿ ನಿಮ್ಮ ಸಂದೇಶವನ್ನು ಬಲಪಡಿಸುತ್ತದೆ. ಸ್ಮಿತ ವದನ ಮತ್ತು ಕಣ್ಣಿನ ಸಂಪರ್ಕ ಮುಖ್ಯ.
5. ಸರಿಯಾದ ಪ್ರಶ್ನೆಗಳನ್ನು ಕೇಳಿ.
“ನಿಮಗೆ ಏನು ಬೇಕು?” “ನಾವು
ಹೇಗೆ ಸಹಾಯ ಮಾಡಬಹುದು?” ಎಂದು
ಕೇಳುವುದರಿಂದ, ಗ್ರಾಹಕರ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
6. ಫೀಡ್ಬ್ಯಾಕ್ ಸ್ವೀಕರಿಸಿ.
ಗ್ರಾಹಕರ
ಅಥವಾ ಉದ್ಯೋಗಿಗಳ ಅಭಿಪ್ರಾಯಗಳನ್ನು ಸ್ವೀಕರಿಸಿ. ಇದು ಸೇವೆಯನ್ನು ಸುಧಾರಿಸುತ್ತದೆ.
7. ಭಾವನೆ ನಿಯಂತ್ರಣ.
ಕೋಪ
ಅಥವಾ ಒತ್ತಡದ ಸಮಯದಲ್ಲೂ ಶಾಂತವಾಗಿ ಮಾತನಾಡಿ. ಇದು ವ್ಯವಹಾರದ ಚಿತ್ರಣವನ್ನು
ಕಾಪಾಡುತ್ತದೆ.
8. ಬರವಣಿಗೆ ಸಂವಹನ (Written
Communication.)
ಇಮೇಲ್,
ಸಂದೇಶಗಳು ಸ್ಪಷ್ಟವಾಗಿರಲಿ. ಇವುಗಳು ಚಿಕ್ಕದು, ಸರಳ ಮತ್ತು ಅರ್ಥಪೂರ್ಣವಾಗಿರಲಿ.
ನೈಜ
ಉದಾಹರಣೆಗಳು
(Real-Life Business Examples.)
ಗ್ರಾಹಕ ಸೇವೆ: ಗ್ರಾಹಕರಲ್ಲಿ,ಸೇವೆ ಸರಕುಗಳ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದಾಗ, “ಇದು ನಮ್ಮ ತಪ್ಪಲ್ಲ” ಎಂದು ಉಡಾಫೆಯ ಉತ್ತರ ನೀಡುವ ಬದಲು, “ಕ್ಷಮಿಸಿ, ನಿಮ್ಮ ಸಮಸ್ಯೆಯನ್ನು ನಾವು ಸರಿಪಡಿಸುತ್ತೇವೆ” ಎಂದು ಮಾತನಾಡಿ.
ತಂಡ
ನಿರ್ವಹಣೆ: ಸಹ ಉದ್ಯೋಗಿಗೆ ಕೆಲಸ ಹೇಳುವಾಗ, “ಇದು ಮಾಡಿ” ಎಂದು
ಆಜ್ಞೆ ನೀಡುವ ಬದಲು, “ಈ
ಕೆಲಸವನ್ನು ಈ ಸಮಯಕ್ಕೆ ಮುಗಿಸಬಹುದೇ?”
ಎಂದು ಹೇಳಿದರೆ ತಂಡದೊಂದಿಗೆ ಉತ್ತಮ
ಬಾಂಧವ್ಯವಿರುತ್ತದೆ.
ಮಾರಾಟ
(Sales): ಗ್ರಾಹಕ ಖರೀದಿಸಲು ಹಿಂಜರಿದಾಗ, “ನಿಮಗೆ
ಯಾವ ವಿಷಯದಲ್ಲಿ ಸಂದೇಹ ಇದೆ?” ಎಂದು ಕೇಳಿ ಅರಿತು, ಅವರ ಅನುಮಾನ ಬಗೆಹರಿಸಿ,
ಸರಕು ಸೇವೆಯನ್ನು ಖರೀದಿಸುವಂತೆ ಮಾಡಬಹುದು.
ದಿನನಿತ್ಯ
ಅಭ್ಯಾಸಗಳು
(Daily Practice).
- ಪ್ರತಿದಿನ
10 ನಿಮಿಷ ಸಂವಹನ ಅಭ್ಯಾಸ ಮಾಡಿ.
- ಗ್ರಾಹಕರ
ಪ್ರಶ್ನೆಯನ್ನು ಗಮನದಿಂದ
ಕೇಳಿ.
- ದಿನಕ್ಕೆ
ಒಂದು ಹೊಸ ಪ್ರಶ್ನೆ ಕೇಳಿ.
- ನಿಮ್ಮ
ಮಾತಿನ ಶೈಲಿಯನ್ನು ಆಗಾಗ್ಗೆ ಪರಿಶೀಲಿಸಿ.
- ಗ್ರಾಹಕರಿಂದ ಫೀಡ್ಬ್ಯಾಕ್ ಕೇಳಿ ಮತ್ತು ಅದರಂತೆ ಸುಧಾರಿಸಿಕೊಳ್ಳಿ.
https://www.mindtools.com/pages/article/newCS_99.htm
ವ್ಯವಹಾರದಲ್ಲಿ
ಯಶಸ್ಸು ಕೇವಲ ಉತ್ಪನ್ನ ಅಥವಾ
ಸೇವೆಯ ಮೇಲೆ ಮಾತ್ರ ಅವಲಂಬಿತವಾಗಿರುವುಲ್ಲ.
ಉತ್ತಮ ಸಂವಹನವೇ ನಿಮ್ಮ ವ್ಯವಹಾರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಶಕ್ತಿ.
ಸಂವಹನ ಕೌಶಲ್ಯಗಳು ಜೀವನದಲ್ಲಿ ಯಶಸ್ಸು ಮತ್ತು ಸಂತೋಷಕ್ಕೆ ಪ್ರಮುಖವಾದ ಸಾಧನ. ಸಣ್ಣ ಬದಲಾವಣೆಗಳಿಂದಲೇ ನೀವು
ನಿಮ್ಮ ಸಂಬಂಧಗಳನ್ನು ಹೆಚ್ಚು ಬಲಪಡಿಸಬಹುದು.
ಕುಟುಂಬದಲ್ಲಿ
ಪ್ರೀತಿ ಇರುವುದೇ ಮುಖ್ಯ, ಆದರೆ ಅದನ್ನು ಸರಿಯಾದ
ರೀತಿಯಲ್ಲಿ ಹೇಳುವುದು ಇನ್ನೂ ಮುಖ್ಯ. ಸಣ್ಣ ಮಾತುಗಳು, ಸಣ್ಣ
ಬದಲಾವಣೆಗಳು—ಇವೇ ದೊಡ್ಡ ಸಂತೋಷಕ್ಕೆ
ಸಹ
ಕಾರಣವಾಗುತ್ತವೆ ❤️
ಹೃದಯಕ್ಕೆ ತಲುಪುವ ಮಾತು
“ನಾವು
ಮಾತನಾಡುವ
ಮಾತುಗಳು
ನಮ್ಮ
ವ್ಯಕ್ತಿತ್ವದ
ಪ್ರತಿಬಿಂಬ.”
ಇಂದು
ಇಂದಿನಿಂದ,
👉 ಪ್ರೀತಿಯಿಂದ
ಮಾತನಾಡಿ.
👉 ಯೋಚಿಸಿ
ಮಾತನಾಡಿ.
👉 ಮನಸ್ಸು
ಗೆಲ್ಲುವಂತೆ
ಮಾತನಾಡಿ.
Bottom of Form
ನೀವು ಇಂದು ನಿಮ್ಮ ವ್ಯವಹಾರದಲ್ಲಿ ಯಾವ ಸಂವಹನ ಕೌಶಲ್ಯವನ್ನು ಸುಧಾರಿಸಲು ಪ್ರಾರಂಭಿಸುತ್ತೀರಿ? ಮತ್ತು ನಿತ್ಯದಲ್ಲಿ ಯಾವ ಸಂವಹನ ಅಭ್ಯಾಸವನ್ನು ಪ್ರಾರಂಭಿಸುತ್ತೀರಿ?
ಮುಕ್ತಾಯ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು