ಪರೀಕ್ಷೆ ಸಮಯದಲ್ಲಿ ಆತಂಕ, ಭಯ, ಗೊಂದಲ ಎದುರಿಸುತ್ತೀರಾ? ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳನ್ನು ಗೆಲ್ಲುವ ವಿಧಾನಗಳು.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ವಿದ್ಯಾರ್ಥಿ ಜೀವನ ಮತ್ತು ಪರೀಕ್ಷಾ ಒತ್ತಡ
ಲೇಖಕಿ:ನಾಗಲಕ್ಷ್ಮಿ ಕೆ. ಎನ್. ದಿನಾಂಕ:೨೦.೦೨.೨೦೨೬
ಪರೀಕ್ಷೆಯ ಭಯ ಮತ್ತು ಗೊಂದಲ ನಿವಾರಣೆಗಾಗಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಸ್ಟಡಿ ಟಿಪ್ಸ್.
ವಿದ್ಯಾರ್ಥಿ
ಜೀವನವು ಪ್ರತಿಯೊಬ್ಬ ಮನುಷ್ಯನ ಪಾಲಿನ ಅತ್ಯಂತ ಮುಖ್ಯ ಹಂತ. ಬಾಲ್ಯದಿಂದ ಹಿಡಿದು ಯೌವನಕ್ಕೆ ತಿರುಗುವ ಒಂದು ಸುಂದರ ಸಮಯದ ಕುತೂಹಲದ ಕಣಜ. ಬಣ್ಣದ ಭವಿಷ್ಯಕ್ಕೆ ಅಡಿಪಾಯ ಹಾಕಿ ಕಟ್ಟಡ ನಿರ್ಮಾಣ ಮಾಡುವ ಪ್ರಮುಖ ಹಂತ.
ಈ ಅವಧಿಯಲ್ಲಿ ಹೊಸತನದ ಕಲಿಕೆಗಳು, ಕನಸುಗಳು, ಹೊಸ ಹೊಸ ಮುಖದ ವ್ಯಕ್ತಿತ್ವಗಳ ಪರಿಚಯ ಇವೆಲ್ಲವೂ
ರೂಪುಗೊಳ್ಳುತ್ತವೆ. ಅಂಕಗಳು, ಪರೀಕ್ಷೆಗಳು, ಒತ್ತಡಗಳು ಇದರ ಹೊರತಾಗಿಯೂ ಈ ಸಮಯವು ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಶಕ್ತಿಯುತ ಹಂತವಾಗಿದೆ.
ವಿದ್ಯಾರ್ಥಿ ದೆಸೆಯಲ್ಲಿನ ಕಲಿಕೆಯು ಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಿಸ್ತು, ಜವಾಬ್ದಾರಿಯ ಕಲಿಕೆ, ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸಗಳಂತಹ ಬದುಕಿನ ಪಾಠಗಳನ್ನು ಕಲಿಯುವ ಸುಸಮಯ. ಗಳಿಸಿದ ಅಂಕಗಳನ್ನು ಮರೆಯಬಹುದು, ಆದರೆ ಕಲಿತ ಮೌಲ್ಯಗಳು ಬದುಕಿನುದ್ದಕ್ಕೂ ಜೊತೆ ಉಳಿಯುತ್ತವೆ.
ಪರೀಕ್ಷೆಯಲ್ಲಿ
ಗೊಂದಲ ಮತ್ತು
ಪರೀಕ್ಷೆಯ ಒತ್ತಡ ಇವು
ಸಹಜ ಅನುಭವಗಳು.
“ಪರೀಕ್ಷೆ”
ಎಂಬ ಶಬ್ದ ಕೇಳುತ್ತಿದ್ದಂತೆಯೇ ಮನಸ್ಸಿನಲ್ಲಿ
ಚಿಂತೆ ಹೆಚ್ಚುವುದು ಸಾಮಾನ್ಯ. “ಓದಿದ್ದೆಲ್ಲಾ ನೆನಪಾಗುತ್ತದೆಯೇ?”,
“ಪ್ರಶ್ನೆಗಳು ಕಷ್ಟವಾಗಬಹುದೇ?”, ನಾನು ಓದಿರುವ ಪ್ರಶ್ನೆಗಳನ್ನೇ ಕೇಳಬಹುದೇ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಪರೀಕ್ಷೆಯ
ಗೊಂದಲಕ್ಕೆ ಕಾರಣವಾಗುತ್ತವೆ. ಇದು ಎಲ್ಲಾ ವಿದ್ಯಾರ್ಥಿಗಳಿಗೂ ಕಾಡುವ ಸಾಮಾನ್ಯ ಸಮಸ್ಯೆಗಳು.
ಹಾಗಾಗಿ ಪರೀಕ್ಷೆ ಎನ್ನುವ ಒತ್ತಡ ಬಹುತೇಕ ಎಲ್ಲಾ ವಿದ್ಯಾರ್ಥಿಗಳಿಗೂ ಇದ್ದೇ ಇರುತ್ತದೆ. ಈ
ಒತ್ತಡವು, ಅಶಾಂತಿ,
ಆತಂಕ, ಏಕಾಗ್ರತೆಯ ಕೊರತೆ, ಆತ್ಮವಿಶ್ವಾಸದ ಕುಸಿತ ಇತ್ಯಾದಿಗಳನ್ನು ಒಳಗೊಂಡಿದೆ. ಆದರೆ ಸರಿಯಾದ ದೃಷ್ಟಿಕೋನದಿಂದ
ನೋಡಿದರೆ, ಈ ಒತ್ತಡವೇ ಓದುವಾಗ ಮನಶ್ಶಕ್ತಿಯನ್ನು ಬಲಪಡಿಸುವ ವಿಶೇಷ ತರಬೇತಿಯಾಗಿದೆ.
ಪರೀಕ್ಷಾ ಒತ್ತಡಕ್ಕೆ ಸ್ಮಾರ್ಟ್ ಆಗಿ ಓದುವ ವಿಧಾನ!
ಪರೀಕ್ಷಾ
ಒತ್ತಡದ ಸಾಮಾನ್ಯ ಲಕ್ಷಣಗಳು.!
ಪರೀಕ್ಷೆ ಸಮಯದಲ್ಲಿ ಒತ್ತಡವು ಸಹಜ. ಆದರೆ ಅದನ್ನು ಗುರುತಿಸುವುದು ಬಹಳ ಮುಖ್ಯ. ಈ ಸಮಯದಲ್ಲಿ ಏಕಾಗ್ರತೆಯ ಕೊರತೆ, ಅಶಾಂತಿ ಅಥವಾ ಆತಂಕ ಮತ್ತು “ಓದಿದ್ದು ನೆನಪಾಗುವುದಿಲ್ಲ” ಎನ್ನುವ ಭಯ, ನಿದ್ರೆಯ ಅಸ್ಥಿರತೆ ಮತ್ತು ಆತ್ಮವಿಶ್ವಾಸದ ಕುಸಿತ…. ಈ ರೀತಿಯ ಲಕ್ಷಣಗಳು ಈ ಸಮಯದಲ್ಲಿ ಸ್ವಾಭಾವಿಕ. ಕಾರಣ ಈ ಲಕ್ಷಣಗಳು ಮೆದುಳು ಒತ್ತಡಕ್ಕೆ ಪ್ರತಿಕ್ರಿಯಿಸುತ್ತಿರುವ ಒಂದು ಕ್ರಿಯೆ ಮಾತ್ರ.
ಆದರೆ
ಇಂತಹ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು
ತಿಳಿಯದೆಯೇ ಕೆಲವು
ತಪ್ಪುಗಳನ್ನು ಮಾಡಿ ಬಿಡುತ್ತಾರೆ:
1. ಕೊನೆಯ ಕ್ಷಣದ
ಓದು ಎಂದುಕೊಂಡು, ಒಮ್ಮೆಲೆ ಹೆಚ್ಚಿನ ವಿಷಯಗಳನ್ನು ಓದಲು ಪ್ರಯತ್ನಿಸುವುದರಿಂದ ವಿಷಯದಲ್ಲಿ ಗೊಂದಲ
ಹೆಚ್ಚಾಗುತ್ತದೆ.
2. ಸಹಪಾಠಿಗಳ ಓದು ಮತ್ತು ಅವರು ಗಳಿಸಿದ ಅಂಕಗಳ ಬಗ್ಗೆ ಚಿಂತಿಸಿ, ಹೋಲಿಕೆ ಮಾಡುತ್ತಾ ಕೂರುವುದು
ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ.
3. ವಿರಾಮ
ತೆಗೆದುಕೊಳ್ಳದೇ, ನಿರಂತರ
ಓದುವುದರಿಂದ ಮೆದುಳು ದಣಿಯುತ್ತದೆ. ನೆನಪಿಟ್ಟುಕೊಳ್ಳುವುದರಲ್ಲಿ ಪರಿಣಾಮಕಾರಿತ್ವ
ಕಡಿಮೆಯಾಗುತ್ತದೆ.
4. ಆಗಾಗ
ಪುನರಾವಲೋಕನವನ್ನು ಮಾಡದೇ ಇದ್ದರೆ, ಓದಿದ ವಿಷಯ ದೀರ್ಘಕಾಲದವರೆಗೆ
ನೆನಪಿರುವುದಿಲ್ಲ.
ವಿದ್ಯಾರ್ಥಿಗಳಿಗೆ ಕೆರಿಯರ್ ಸಿದ್ಧತೆ.👇
https://capturingdaysoflife.blogspot.com/2026/02/college-to-career-complete-guide.html
ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳನ್ನು ಗೆಲ್ಲುವ ವಿಧಾನಗಳು.
ಇಚ್ಛಾಶಕ್ತಿಯ ಪರಿಧಿಯಲ್ಲೇ ಪರೀಕ್ಷೆಯ ಯಶಸ್ಸು ಅಡಗಿದೆ.
1. ಮೆದುಳಿನ ಕಾರ್ಯಕಲಾಪದ ವಿಧಾನ ಅರಿಯುವುದು ಅತಿ ಅವಶ್ಯಕ. ಮೆದುಳು ಕಡಿಮೆ ಅವಧಿಯ ಓದನ್ನು
ಹೆಚ್ಚು ಪರಿಣಾಮಕಾರಿಯಾಗಿ ಸಂಗ್ರಹಿಸುತ್ತದೆ. ಆದ್ದರಿಂದ ಸಣ್ಣ ಸಣ್ಣ ಸೆಷನ್ಗಳಲ್ಲಿ ಓದುವುದರಿಂದ ಹೆಚ್ಚಿನ ವಿಷಯವು ಮೆದುಳಿನಲ್ಲಿ
ಸಂಗ್ರಹಿಸಲ್ಪಡುತ್ತದೆ .
2. ಸ್ವಗತ ನಕಾರಾತ್ಮಕತೆಯನ್ನು ತ್ಯಜಿಸಿರಿ,
ನನ್ನಿಂದ ಆಗುವುದಿಲ್ಲ
ಎಂಬ ಯೋಚನೆಗಳು ಒತ್ತಡವನ್ನು ಹೆಚ್ಚಿಸುತ್ತವೆ.
ಆದ್ದರಿಂದ “ನಾನು ಪ್ರಯತ್ನಿಸುತ್ತಿದ್ದೇನೆ” ಎಂಬ ಮನಸ್ಥಿತಿಯನ್ನು
ಪ್ರೋತ್ಸಾಹಿಸಿಕೊಳ್ಳಿ.
3. ಸ್ವಲ್ಪ ಒತ್ತಡವು
ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅದನ್ನೇ ಪ್ರೇರಣೆಯಾಗಿ
ಬಳಸಿ ನೋಡಿ.
4. ಉಸಿರಾಟದ ವ್ಯಾಯಾಮ ಮಾಡಿ. 2–3 ನಿಮಿಷಗಳ ಕಾಲ ನಿಧಾನವಾಗಿ
ಉಸಿರಾಟ ನಿಯಂತ್ರಿಸಿದರೆ ಆತಂಕ ಕಡಿಮೆಯಾಗುತ್ತದೆ.
ಪರೀಕ್ಷಾರ್ಥಿಗಳಿಗೆ ಪರಿಣಾಮಕಾರಿಯಾಗಿ
ಓದುವ ವಿಧಾನಗಳು.
1. ವಿಷಯಗಳನ್ನು ಪ್ಲಾನ್ ಮಾಡಿ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಈ ನಿಟ್ಟಿನಲ್ಲಿ ದಿನನಿತ್ಯ ಸಣ್ಣ ಸಣ್ಣ ಗುರಿಗಳನ್ನು ಹೊಂದುವ ಮೂಲಕ ಕನಿಷ್ಠ ಮೂರು ವಿಷಯಗಳಲ್ಲಿ ಒಂದೊಂದು “ಚಾಪ್ಟರ್ ಪೂರ್ತಿ” ಮಾಡಿ. 25 ನಿಮಿಷಗಳ ಪೂರ್ಣ ಏಕಾಗ್ರತೆಯಿಂದ ಓದಿ. ನಂತರ ಐದು ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳಿ. ಇದು ಏಕಾಗ್ರತೆಯನ್ನು ಸ್ಥಿರಗೊಳಿಸುತ್ತದೆ.
3. ಸೃಜನಾತ್ಮಕ ಓದನ್ನು ಅಭ್ಯಾಸ ಮಾಡಿ. ಓದಿದ್ದು ಬರೆಯಿರಿ. ಬರೆದು ನಂತರ ಓದಿ, ಸ್ವತಃ ಪ್ರಶ್ನೆಗಳನ್ನು ಕೇಳಿಕೊಳ್ಳಿ, ಪಾಠವನ್ನು ನಿಮಗೆ ನೀವೆ ವಿವರಿಸಿ. ಒಂದು ವಿಷಯವನ್ನು 24 ಗಂಟೆಗಳೊಳಗೆ ಪುನಃ ಪುನಃ ಓದಿದರೆ ನೆನಪು ಹೆಚ್ಚುತ್ತದೆ.
5. ಮಿಶ್ರವಾಗಿ ಓದುವ ವಿಧಾನ ಹೆಚ್ಚು ಪರಿಣಾಮಕಾರಿಯಾಗಿದೆ. ಒಂದೇ ವಿಷಯದಲ್ಲಿ ಹೆಚ್ಚು ಸಮಯ ಕಳೆಯುವುದಕ್ಕಿಂತ ವಿಷಯಗಳನ್ನು ಪರ್ಯಾಯವಾಗಿ ಓದುವುದು ಉತ್ತಮ.
ಪರೀಕ್ಷೆಗಳು
ಮಹತ್ವದ ಹಂತಗಳು, ಆದರೆ ಬದುಕಿನ ಅಂತಿಮ
ತೀರ್ಪುಗಳಲ್ಲ. ಗೊಂದಲ, ಒತ್ತಡಗಳು ಎಲ್ಲ ವಿದ್ಯಾರ್ಥಿಗಳಿಗೂ ಸಾಮಾನ್ಯ. ಆದರೆ ಇಲ್ಲಿ ಅತಿ ಮುಖ್ಯವಾದುದು ನಿಮ್ಮ ಪರಿಶ್ರಮ ಹಾಗೂ ಮನೋಸ್ಥೈರ್ಯ. ಪರೀಕ್ಷೆಯಲ್ಲಿ ಗೊಂದಲವೆಂದರೆ ಅದು ಜವಾಬ್ದಾರಿಯ
ಸಂಕೇತ ಹಾಗೂ ಬೆಳವಣಿಗೆಯ
ಒಂದು ಭಾಗ.
ಪರೀಕ್ಷೆಯ
ಫಲಿತಾಂಶಗಳು
ಬದಲಾಗಬಹುದು,
ಆದರೆ ಪ್ರಯತ್ನದ ಮೌಲ್ಯ ಎಂದಿಗೂ ಕಡಿಮೆಯಾಗುವುದಿಲ್ಲ.
ವಿದ್ಯಾರ್ಥಿ
ಜೀವನದ ವಿವಿಧ ಪರೀಕ್ಷೆಗಳು… ಅಂಕಗಳಿಗಿಂತ ದೊಡ್ಡ ಪಾಠಗಳು.
ವಿದ್ಯಾರ್ಥಿ ಜೀವನವೆಂದರೆ ಪಠ್ಯಪುಸ್ತಕಗಳು ಮತ್ತು ಅಕಾಡೆಮಿಕ್ ಪರೀಕ್ಷೆಗಳ ಸರಮಾಲೆಯಲ್ಲ. ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಯ ಜ್ಞಾನ, ಮನಶ್ಶಕ್ತಿ, ಸಮಯ ನಿರ್ವಹಣೆ, ಸಹನೆ ಮತ್ತು ಮೌಲ್ಯಗಳನ್ನು ಪರೀಕ್ಷಿಸುವ ಅನೇಕ ಸಂದರ್ಭಗಳು ಎದುರಾಗುತ್ತವೆ. ವರ್ಷಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಬರುವ ಈ ಸಂದರ್ಭಗಳೇ ಪರೀಕ್ಷೆಗಳು. ಬದುಕಿನ ಅಡಿಪಾಯ ನಿರ್ಮಾಣಕ್ಕೆ ಕಾರಣವಾಗುವ ಪರಿಸ್ಥಿತಿಗಳು.
ಹೊಸ ಭಾಷೆ ಕಲಿಯುವುದರಿಂದ ಬದುಕಿನಲ್ಲಿ ಆಗುವ ಅದ್ಭುತ ಬದಲಾವಣೆಗಳು 👇
https://capturingdaysoflife.blogspot.com/2026/02/language-learning-revolution.html
ಪ್ರತಿ ವಿದ್ಯಾರ್ಥಿಗೂ ಒಂದೇ ಸಮಯ ಅದೇ 24 ಗಂಟೆಗಳು. ಆದರಲ್ಲಿಯೇ ಫಲಿತಾಂಶ ನಿರ್ಧಾರವಾಗುವುದು, ಈ ನಿರ್ದಾರಕ್ಕೆ ಕಾರಣವಾಗುವ ಅಂಶಗಳೆಂದರೆ, ಆದ್ಯತೆಗಳನ್ನು ಸರಿಯಾಗಿ ಪಾಲಿಸುವುದು, ವಿನಾಕಾರಣ ವಿಳಂಬವನ್ನು ತಪ್ಪಿಸುವುದು, ಓದು ಮತ್ತು ವಿಶ್ರಾಂತಿಯನ್ನು ಸಮತೋಲನದಿಂದ ಅಭ್ಯಾಸ ಮಾಡುವುದು. ಸಮಯ ನಿಯಂತ್ರಿಸುವುದನ್ನು ಕಲಿತಾಗ, ಬದುಕನ್ನು ನಿಯಂತ್ರಿಸುವುದು ಸುಲಭ ಸಾಧ್ಯವಾಗುತ್ತದೆ.
ವಿದ್ಯಾರ್ಥಿ
ಜೀವನದಲ್ಲಿ ಮಾನವೀಯತೆ ಅತ್ಯಂತ ಮಹತ್ವದ್ದು. ಸ್ನೇಹಿತರ ಜೊತೆ ಹೊಂದಿಕೊಳ್ಳುವುದು, ಶಿಕ್ಷಕರಿಗೆ
ಗೌರವ ನೀಡುವುದು, ತಪ್ಪುಗಳನ್ನು ಒಪ್ಪಿಕೊಳ್ಳುವುದು, ಇವುಗಳೂ ಒಂದು ರೀತಿಯ ಪ್ರಮುಖ ಪರೀಕ್ಷೆಗಳೇ, ಇಲ್ಲಿ ಅಂಕಗಳಿಲ್ಲ, ಆದರೆ ವ್ಯಕ್ತಿತ್ವದ ನಿರ್ಮಾಣವಿದೆ.
ಆತ್ಮಪರೀಕ್ಷೆ ಮಾಡಿಕೊಳ್ಳುವುದನ್ನು ಕಲಿತಾಗಲೇ .. ನಿಜವಾದ ಬೆಳವಣಿಗೆಯ ಆರಂಭ. ಇಲ್ಲಿ ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವುದು ಅತ್ಯಂತ ಮುಖ್ಯ. “ನನ್ನ ಗುರಿ ಯಾವುದು?” ಗುರಿ ಸಾಧನೆಯ ಹಾದಿಯಲ್ಲಿ “ನನ್ನ ದುರ್ಬಲತೆ ಏನು?” ಮತ್ತು “ನಾನು ಸರಿಯಾದ ದಾರಿಯಲ್ಲಿಯೇ ಸಾಗುತ್ತಿದ್ದೇನಾ?”…. ಈ ರೀತಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳುವ, ಈ ಆತ್ಮಪರೀಕ್ಷೆಯೇ ನಿಜವಾದ ಯಶಸ್ಸಿನ ಮೂಲ.
Wikipedia – Pomodoro Technique👇
https://en.wikipedia.org/wiki/Pomodoro_Technique
ಪರೀಕ್ಷಾ ಒತ್ತಡ ನಿರ್ವಹಿಸಲು👇
https://www.who.int/news-room/questions-and-answers/item/stress
ವಿದ್ಯಾರ್ಥಿ ದೆಸೆಯಲ್ಲಿಯೇ ಪರೀಕ್ಷೆಗಳನ್ನು ಎದುರಿಸಲು ಕ್ರಿಯೇಟಿವ್ ವಿಧಾನಗಳು.
ಪರೀಕ್ಷಾ ಸಮಯದ ಒತ್ತಡ,
ಗೊಂದಲ ಮತ್ತು ಆತಂಕಗಳನ್ನು ನಿವಾರಿಸಲು, ಸರಿಯಾದ ಕ್ರಿಯೇಟಿವ್ ವಿಧಾನಗಳನ್ನು ಬಳಸಿದರೆ ಓದುವುದು ಹೆಚ್ಚು ಆಸಕ್ತಿದಾಯಕವಾಗಿಯೂ ಮತ್ತು ಪರಿಣಾಮಕಾರಿಯೂ ಆಗಬಹುದು. ಕೇವಲ ಹೆಚ್ಚು ಹೊತ್ತು
ಓದುವುದಕ್ಕಿಂತ ಸ್ಮಾರ್ಟ್ ಆಗಿಯೂ ಮತ್ತು ಸೃಜನಾತ್ಮಕವಾಗಿಯೂ ಓದುವುದು ಮುಖ್ಯ.
ಉದಾಹರಣೆಗೆ ಇತಿಹಾಸದ ಪಾಠವನ್ನು ಕಥೆ + ಟೈಮ್ಲೈನ್ ಚಿತ್ರವಾಗಿ ರಚಿಸಿ ಓದುವುದು.
2. ಎಲ್ಲವನ್ನೂ ಓದಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ Audio Revision Technique ಬಳಸಿ ನೋಡಿ. ಓದಬೇಕಾಗಿರುವುದನ್ನು ನಿಮ್ಮದೇ ಧ್ವನಿಯಲ್ಲಿ ಟಿಪ್ಪಣಿಗಳನ್ನಾಗಿ ರೆಕಾರ್ಡ್ ಮಾಡಿ, ನಡೆದುಕೊಂಡು ಅಥವಾ ವಿಶ್ರಾಂತಿ ಸಮಯದಲ್ಲಿ ಕೇಳಿ. ಮತ್ತು ಕಷ್ಟವಾದ ವಿಷಯಗಳನ್ನು ಪದೇ ಪದೇ ಕೇಳುವುದು ನೆನಪನ್ನು ಬಲಪಡಿಸುವ ಉತ್ತಮ ವಿಧಾನವಾಗಿದೆ.
3. ಅತ್ಯಂತ ಪರಿಣಾಮಕಾರಿ ಕ್ರಿಯೇಟಿವ್ ಟ್ರಿಕ್ ಎಂದರೆ, Role Play & Teaching Method. ನೀವು ಶಿಕ್ಷಕರಂತೆಯೇ ಕಲ್ಪಿಸಿ ಪಾಠವನ್ನು ವಿವರಿಸುತ್ತಾ, ಸ್ನೇಹಿತರಿಗೆ ಬೋಧಿಸಿ ಮತ್ತು ಕನ್ನಡಿಯಲ್ಲಿ ನಿಮಗೆ ಪಾಠವನ್ನು ಓದಿಸಿ. ಬೋಧಿಸುವಾಗ ಮೆದುಳು ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತದೆ.
4. ಓದನ್ನು ಆಟದಂತೆ ಆಡಿ. ಓದನ್ನು ಗೇಮ್ ತರಹ ರೂಪಿಸಬಹುದು. ಟೈಮರ್ ಇಟ್ಟು ಒಂದು ಚಾಪ್ಟರ್ ಅನ್ನು ಪೂರ್ಣಗೊಳಿಸುವ ಚಾಲೆಂಜ್. ಸ್ವತಃ ಪ್ರಶ್ನೋತ್ತರ ಆಟ ಆಡಿ, ಸರಿಯಾದ ಉತ್ತರಕ್ಕೆ ಸಣ್ಣ ಬಹುಮಾನ ನೀಡುವುದು, ಬೇಸರ ಕಡಿಮೆ ಮಾಡಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
5. ಕಷ್ಟವಾದ ವಿಷಯಗಳನ್ನು
ನೆನಪಿನಲ್ಲಿಡಲು
ಟ್ರಿಕ್ಗಳನ್ನು ಉಪಯೋಗಿಸಿ ನೋಡಿ. ಸಂಕ್ಷಿಪ್ತ
ಪದ (Acronyms) ಗಳನ್ನು, ರಿದಮ್
/ ರಾಗದಲ್ಲಿ ಓದಲು ಸಾಧ್ಯವಾಗುವಂತೆ, ವಿಚಿತ್ರ ಕಥೆಗಳನ್ನು ಜೋಡಿಸಿ ಹಾಡಿ. ಉದಾಹರಣೆಗೆ ವಿಜ್ಞಾನ
ಪದಗಳನ್ನು ಹಾಡಿನ ಶೈಲಿಯಲ್ಲಿ ನೆನಪಿಸಿಕೊಳ್ಳಿ.
6. ಪರೀಕ್ಷಾ
ಭಯವನ್ನು ಕಡಿಮೆ ಮಾಡಲು Positive
Psychology Technique ಬಳಸಿ.
“ನನ್ನಿಂದ ಆಗುತ್ತದೆ” ಎಂದು ಯಾವಾಗಲೂ ಭಾವಿಸಿ. ವೈಫಲ್ಯದ
ಭಯವನ್ನು ಬಿಟ್ಟುಬಿಡಿ. ಒತ್ತಡವನ್ನು ಸ್ಫೂರ್ತಿಯಾಗಿ ನೋಡಿ. ಏಕೆಂದರೆ, ಮನಸ್ಸಿನ ಸ್ಥಿತಿ ಓದಿನ ಗುಣಮಟ್ಟವನ್ನು ನೇರವಾಗಿ
ಪ್ರಭಾವಿಸುತ್ತದೆ.
ಡಿಜಿಟಲ್ ಯುಗದಲ್ಲಿ ಶಿಕ್ಷಣದ ಹೊಸ ಮುಖಗಳು👇
https://capturingdaysoflife.blogspot.com/2026/02/language-learning-revolution.html
ಸಾಮಾನ್ಯವಾಗಿ
ಪಾಠವನ್ನು ಅಭ್ಯಾಸ ಮಾಡಿದ ನಂತರ ಪ್ರಶ್ನೋತ್ತರಗಳನ್ನು ಓದುತ್ತೇವೆ. ಆದರೆ, ಇಲ್ಲಿ ಪ್ರಶ್ನೋತ್ತರಗಳ ಮೂಲಕ ಪಾಠವನ್ನು ಅಭ್ಯಾಸ
ಮಾಡುವುದು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ.
ಹಳೆಯ
ಪ್ರಶ್ನೆಪತ್ರಿಕೆಗಳನ್ನು ನೋಡಿ,
ಯಾವ ವಿಷಯಗಳು ಮುಖ್ಯ ಎಂದು ಗುರುತು ಮಾಡಿದ
ನಂತರ ಆ ಭಾಗಗಳನ್ನು ಮೊದಲು ಓದಿ. ಇದು ಪರೀಕ್ಷೆಯ
ಗೊಂದಲವನ್ನು ಕಡಿಮೆ
ಮಾಡುತ್ತದೆ.
“Exam Stress Management – ಕನ್ನಡ ಮಾರ್ಗದರ್ಶನ”
ವಿದ್ಯಾರ್ಥಿ ಜೀವನದಲ್ಲಿನ ಪರೀಕ್ಷೆಗಳು ಕೇವಲ ಅಂಕಗಳಿಗಾಗಿ ಅಲ್ಲ; ಬದುಕಿನ ಸಿದ್ಧತೆಗೆ. ವಿದ್ಯಾರ್ಥಿ ಜೀವನವೆಂದರೆ ಸವಾಲುಗಳ ನಡುವೆ ಆತ್ಮವಿಶ್ವಾಸವನ್ನು ಬೆಳೆಸುವ ಪಯಣ. ಇಂದು ಎದುರಾಗುವ ಪರೀಕ್ಷಾ ಒತ್ತಡವೇ ನಾಳೆಯ ಯಶಸ್ಸಿಗೆ ಬಲ.
Bottom of Form
ಮುಕ್ತಾಯ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು