ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

“ಬ್ರೆಡ್‌ನಿಂದ ಬ್ರಿಲಿಯಂಟ್! ಮಕ್ಕಳಿಗೆ ಸೂಪರ್‌ ಹಿಟ್‌ 6 ಭಾರತೀಯ ಲಂಚ್‌ ಐಡಿಯಾಸ್‌”

 



ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೦೨.೧೨.೨೦೨೫

ಮಕ್ಕಳಿಗಾಗಿ ವಿಶೇಷ ಬ್ರೆಡ್ಲಂಚ್ರೆಸಿಪಿಗಳು

ಇಂದಿನ ಒತ್ತಡದ  ಜೀವನದಲ್ಲಿ ಮಕ್ಕಳಿಗೆ ಪೌಷ್ಟಿಕ, ರುಚಿಕರ ಮತ್ತು ಒಮ್ಮೆಗೆ  ತಿನ್ನಬಹುದಾದ ಲಂಚ್ಪ್ಯಾಕ್ತಯಾರಿಸುವುದು ಪೋಷಕರಿಗೆ ಕೆಲವೊಮ್ಮೆ ಸವಾಲಾಗಬಹುದು. ಆದರೆ ನಮ್ಮದೇ ದೇಶೀಯ  ಅಡುಗೆಮನೆಯಲ್ಲಿ ಇರುವ ಸರಳ ಪದಾರ್ಥಗಳಿಂದ  ಮನೆಯ ಲಾಲಿತ್ಯದ ಮೃದುವಾದ ಪ್ರೀತಿ ಬೆರೆಸಿ ಮಾಡಿದ, ಸಾಮಾನ್ಯ ಬ್ರೆಡ್ಸ್ಲೈಸ್ಕೂಡಾ ಮಕ್ಕಳಿಗೆ ಇಷ್ಟವಾಗುವ ವಿಶೇಷ ಖಾದ್ಯವಾಗುತ್ತದೆ.
ಇಲ್ಲಿ ನಾವು,  ಮಕ್ಕಳಿಗೆ ಆರೋಗ್ಯಕರವಾಗಿದ್ದು, ತಿನ್ನಲು ಸುಲಭವಾಗಿರುವ ಮತ್ತು ಪಕ್ಕಾ ಅಮ್ಮನ ಕೈ ರುಚಿಯ ಸುವಾಸನೆ ಹೊಂದಿರುವ  ಬ್ರೆಡ್ಆಧಾರಿತ ಲಂಚ್ರೆಸಿಪಿಗಳನ್ನು ಪರಿಚಯಿಸಿದ್ದೇವೆ. ಜೀರಿಗೆಕೊತ್ತಂಬರಿ ಪುಡಿ, ತುಪ್ಪ, ಪನೀರ್‌, ತರಕಾರಿಗಳು, ಮೆಕ್ಕೆಜೋಳ ಮೊದಲಾದವು  ನಮ್ಮದೇ  ಮನೆಯ ಪದಾರ್ಥಗಳು ಸ್ಯಾಂಡ್ವಿಚ್ಗಳಿಗೆ ಭಾರತೀಯ ಜೀವನಪದ್ಧತಿಯ ಉಟದ ನೋಟವನ್ನು ನೀಡುತ್ತವೆ. ಬ್ಯುಸಿಯ ದಿನಗಳಲ್ಲಿಯೂ ಪ್ರೀತಿ ತುಂಬಿದ ಮನೆಯ ರುಚಿಯನ್ನು ಟೀಫಿನ್ಬಾಕ್ಸ್ಗೆ ತುಂಬುವಂತಿರುವ ಆಯ್ಕೆಗಳು ಮಕ್ಕಳ ಆರೋಗ್ಯ ಮತ್ತು ರುಚಿ ಎರಡನ್ನೂ ಸಮಪ್ರಮಾಣದಲ್ಲಿ  ಕಾಪಾಡುತ್ತವೆ. 🥪

 

  ಮಸಾಲಾ ವೆಜ್ಸ್ಯಾಂಡ್ವಿಚ್‌ (Mild)

ಜೀರಿಗೆ, ಹಿಂಗು, ಕೊತ್ತಂಬರಿ ಪುಡಿ ಮೊದಲಾದ ಹಿತವಾದ ಸುವಾಸನೆಭರಿತ ಭಾರತೀಯ ಮಸಾಲೆಗಳನ್ನು ಸೇರಿಸಿದ ಮಸಾಲಾ ಸ್ಯಾಂಡ್ವಿಚ್‌  ಮಾಡುವುದು ಹೇಗೆಂದು ಇಲ್ಲಿ ತಿಳಿಯೋಣ.

ಬೇಕಾಗುವ ಪದಾರ್ಥಗಳು

  • ಹೋಲ್ವಿಟ್ಬ್ರೆಡ್‌ – 2 ಸ್ಲೈಸ್
  • ಬೇಯಿಸಿದ ಆಲೂಗಡ್ಡೆ – ½ ಕಪ್
  • ಕ್ಯಾರೆಟ್ತುರಿ – 2 tbsp
  • ಬೇಯಿಸಿದ ಮೆಕ್ಕೆಜೋಳ – 2 tbsp
  • ಕೊತ್ತಂಬರಿ ಸೊಪ್ಪು – 1 tbsp
  • ಜೀರಿಗೆ ಪುಡಿ – ¼ tsp
  • ಕೊತ್ತಂಬರಿ ಪುಡಿ – ¼ tsp
  • ಉಪ್ಪು
  • ಬೆಣ್ಣೆ / ಗೀಸ್ವಲ್ಪ

ಮಾಡುವ ವಿಧಾನ

ಬೇಯಿಸಿದ ಆಲೂಗಡ್ಡೆಯನ್ನು ನುಣ್ಣಗೆ ಸ್ಮಾಷ್‌ ಮಾಡಿಕೊಂಡು, ಅದಕ್ಕೆ ಕ್ಯಾರೆಟ್‌ ತುರಿ, ಬೇಯಿಸಿದ ಮೆಕ್ಕೆಜೋಳ ಎಲ್ಲಾ ತರಕಾರಿಗಳನ್ನು ಒಂದು ಬಟ್ಟಲಿನಲ್ಲಿ ಜೀರಿಗೆ ಪುಡಿ ಮತ್ತು ಕೊತ್ತಂಬರಿ ಪುಡಿ ಮಸಾಲೆಗಳ ಜೊತೆ ಮಿಕ್ಸ್ಮಾಡಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

ಬ್ರೆಡ್ಸ್ಲೈಸ್‌ ಒಂದನ್ನು ತೆಗೆದುಕೊಂಡು ಅದರ  ಮೇಲೆ ಬೆಣ್ಣೆ ಹಚ್ಚಿ. ನಂತರ ಅದರ ಮೇಲೆ ಮಸಾಲಾ ಮಿಶ್ರಣವನ್ನು ಹಚ್ಚಿ, ಕತ್ತರಿಸಿದ  ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ ಅದರ  ಮೇಲೆ ಮತ್ತೊಂದು ಸ್ಲೈಸ್ಇಡಿ.

ಇದನ್ನು ಸ್ಯಾಂಡ್ವಿಚ್ಟೋಸ್ಟರ್ನಲ್ಲಿ ಅಥವಾ ತವಾ ಮೇಲೆ  ಸ್ವಲ್ಪ ಎಣ್ಣೆ ಅಥವಾ  ಗೀ ಬಳಸಿ ಬೇಯಿಸಿ. ಈಗ ಬಿಸಿಬಿಸಿ ಮಸಾಲಾ ವೆಜ್‌ ಸ್ಯಾಂಡ್ವಿಚ್‌ ರೆಡಿ.

ಇದನ್ನು ಮಕ್ಕಳು ಸವಿಯಲು  ಸೂಕ್ತವಾಗುವಂತೆ ಸಣ್ಣ  ಸಣ್ಣ ಚೌಕಗಳಾಗಿ ಕತ್ತರಿಸಿ, ಬಾಕ್ಸ್‌ ನಲ್ಲಿಟ್ಟುಬಿಡಿ.

 


 ಪನೀರ್ಭುರ್ಜೀ ಸ್ಯಾಂಡ್ವಿಚ್‌.

ಮೊದಲು ಪನೀರ್‌ ಭುರ್ಜಿ ತಯಾರಿಸೋಣ.

ಮೊದಲು ಒಂದು ಪಾತ್ರೆಯನ್ನು ಗ್ಯಾಸ್‌ ಮೇಲಿಟ್ಟು, ಒಂದು ಟೇಬಲ್‌  ಸ್ಪೂನ್‌ ಎಣ್ಣೆ ಹಾಕಿ ನಂತರ ಅರ್ಧ ಸ್ಪೂನ್‌ ಬೆಣ್ಣೆ ಹಾಕಿ ಕಾಯಿಸಿ,  ಅರ್ಧ ಟೀ ಸ್ಪೂನ್‌ ಜೀರಿಗೆ ಹಾಕಿ, ನಂತರ ಒಂದು ದಪ್ಪ ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಹಾಕಿ ಬೇಯಿಸಿ. ನಂತರ ಸಣ್ಣದಾಗಿ ಕತ್ತರಿಸಿದ ಎರಡು ಹಸಿಮೆಣಸಿನಕಾಯಿ ಜೊತೆಗೆ ಪುದಿನಾ ಎಲೆಗಳನ್ನು  ಸೇರಿಸಿ ನಂತರ ಒಂದು ಟೇಬಲ್‌ ಸ್ಪೂನ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ, ಚಮಚದಲ್ಲಿ ತಿರುಗಿಸುತ್ತ ಚೆನ್ನಾಗಿ ಬೇಯಿಸಿ. ಈರುಳ್ಳಿ ಚೆನ್ನಾಗಿ ಬೆಂದ ನಂತರ ಒಂದು ಟೇಬಲ್‌ ಸ್ಪೂನ್‌ ಖಾರದ ಪುಡಿ, ದನಿಯಾ ಪುಡಿ, ಗರಮ್‌ ಮಸಾಲಾ ಪುಡಿ, ಪಾವ್‌ ಬಾಜಿ ಮಸಾಲಾ ಪುಡಿ, ಮತ್ತೆ ಒಂದು ಚಿಟಿಕೆ ಅರಿಶಿನ ಸೇರಿಸಿ ಮತ್ತು ರುಚಿಗೆ ಉಪ್ಪು ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಸಣ್ಣದಾಗಿ ಹಚ್ಚಿದ ಒಂದು ಕಪ್‌ ಟೊಮೆಟೋ  ಸೇರಿಸಿ ಮೆತ್ತಗಾಗುವವರೆಗೂ  ಬಾಡಿಸಿ, ನಂತರ ಅರ್ಧ ಕಪ್‌ ನೀರು ಸೇರಿಸಿ ಐದು ನಿಮಿಷಗಳ ಕಾಲ ಸಣ್ಣ ಹುರಿಯಲ್ಲಿ ಬೇಯಿಸಿ. ನಂತರ  ೨೦೦ ಗ್ರಾಮ್‌ ನಷ್ಟು ತುರಿದ ಪನೀರ್‌ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಕತ್ತರಿಸಿದ ಕೊತ್ತಂಬರಿಸೊಪ್ಪು ಮತ್ತು ಕಸ್ತೂರಿ ಮೇಥಿ ಸೇರಿಸಿ ಮಿಶ್ರಣ ಮಾಡಿದರೆ ಪನೀರ್‌ ಭುರ್ಜಿ ತಯಾರು.

ಸ್ಯಾಂಡ್ವಿಚ್‌ ಮಾಡಲು ಬೇಕಾಗುವ ಪದಾರ್ಥಗಳು

ಹೋಲ್ಗ್ರೇನ್ಬ್ರೆಡ್‌ – 2 ಸ್ಲೈಸ್

ಪನೀರ್ಭುರ್ಜೀ – ½ ಕಪ್

ಟೊಮ್ಯಾಟೊ ಕೆಚಪ್‌ – 1 tsp

ಬೆಣ್ಣೆ

ತಯಾರಿಸುವ ವಿಧಾನ.

ಮೇಲೆ ಹೇಳಿರುವ ರೀತಿ ತಯಾರಾಗಿರುವ ಭುರ್ಜಿಯನ್ನು ತೆಗೆದುಕೊಳ್ಳಿ.

ಒಂದು ಸ್ಲೈಡ್‌  ಬ್ರೆಡ್ತೆಗೆದುಕೊಂಡು ಅದರ  ಮೇಲೆ ಕೆಚಪ್ಮತ್ತು ಭುರ್ಜೀಯನ್ನು  ಹಚ್ಚಿ.

ಇದನ್ನು ತವಾ ಮೇಲಿಟ್ಟು  ಬಿಸಿ ಮಾಡಿ  ನೀಡಬಹುದಾದಂತಹ ಪರ್ಫೆಕ್ಟ್ಲಂಚ್ರೆಡಿ.

 


🧄 ಬ್ರೆಡ್ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳು

ಬ್ರೆಡ್ ಸ್ಲೈಸ್ಗಳು

ಕತ್ತರಿಸಿದ ಈರುಳ್ಳಿ

ಟೊಮೆಟೊ,

ಹಸಿಮೆಣಸಿನಕಾಯಿ

ಸಾಸಿವೆ,ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಕರಿಬೇವು, ಜೀರಿಗೆ, ಅರೀಶಿನ, ಕೊತ್ತಂಬರಿಸೊಪ್ಪು, ಎಣ್ಣೆ, ನಿಂಬೆರಸಉಪ್ಪು.

ತಯಾರಿಸುವ ವಿಧಾನ:

ಬ್ರೆಡ್ನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿಇಚ್ಛೆಯಿದ್ದರೆ ನಾನಾ ಬಗೆಯ ಬ್ರೆಡ್ (ಬ್ರೌನ್ಹೋಲ್ವೀಟ್ಗಳ ಮಿಶ್ರಣವನ್ನೂ  ಬಳಸಬಹುದು.

ಬಾಣಲೆಗೆ ಎಣ್ಣೆ ಹಾಕಿ ಬೆಚ್ಚಗಾದ ನಂತರ ಸಾಸಿವೆಜೀರಿಗೆಕರಿಬೇವು ಹಾಕಿನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸುಗಂಧ ಬರುವವರೆಗೆ ಹುರಿದುಕೊಳ್ಳಿಈರುಳ್ಳಿಹಸಿಮೆಣಸಿನಕಾಯಿ  ಸೇರಿಸಿ ಬಾಡಿಸಿಕೊಳ್ಳಿ ನಂತರ ಕತ್ತರಿಸಿದ ಟೊಮೇಟೋಅರಿಶಿಣಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ.

 ಮಿಶ್ರಣಕ್ಕೆ ಕತ್ತರಿಸಿದ ಬ್ರೆಡ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಸ್ಪೂನ್ ಅನ್ನು ಬಳಸಿ   ಬ್ರೆಡ್ ತುಂಡುಗಳನ್ನು  ಮೆಲ್ಲಗೆ  ಮಿಕ್ಸ್ ಮಾಡಬೇಕು. ನಂತರ ಹದಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸಿ.ಕೊನೆಗೆ ಕೊತ್ತಂಬರಿ ಸೊಪ್ಪುನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ.

ಬಾಣಲೆಗೆ ಮುಚ್ಚಳ ಹಾಕಿ 2 ನಿಮಿಷದವರೆಗೆ ಇಟ್ಟುಬಿಡಿಆಮೇಲೆ ಸ್ಟೌ  ಆಫ್ ಮಾಡಬಹುದು.

ಟೊಮೇಟೋ ಕೆಚಪ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಸರ್ವ್ ಮಾಡುವುದರಿಂದ  ಮಕ್ಕಳ ಲಂಚ್ಬಾಕ್ಸ್ಗೆ ಸೂಪರ್‌ ಕಾಂಬಿನೇಷನ್.

ಈ ರೆಸಿಪಿಗಾಗಿ ಬ್ರೌನ್ ಬ್ರೆಡ್ ಅಥವಾ ಮಿಲೆಟ್ ಬ್ರೆಡ್ ಬಳಸಿದರೆ ಹೆಚ್ಚು ಪೌಷ್ಟಿಕವಾಗಿರುತ್ತದೆ.

ಲಂಚ್ ಬಾಕ್ಸ್ನಲ್ಲಿ ತಣ್ಣಗಾದರೂ ಟೇಸ್ಟಿ ಇರಬೇಕೆಂಬದು ಮುಖ್ಯ.ಹಾಗಾಗಿ ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಲಂಚ್ ಬಾಕ್ಸ್‌ ಬಳಸಿದರೆ ಆಹಾರ ಬಾಳಿಕೆ ಹೆಚ್ಚು ಕಾಲವಿರುತ್ತದೆ.

 


🍳 ಬ್ರೆಡ್ ಎಗ್ ರೋಲ್ (Egg Bread Roll)

ಬೇಕಾಗುವ ಪದಾರ್ಥಗಳು

ಬ್ರೆಡ್ಮೊಟ್ಟೆಹಸಿಮೆಣಸುಈರುಳ್ಳಿ, ತುಪ್ಪ ಅಥವಾ ಎಣ್ಣೆ,  ಉಪ್ಪುಚೀಸ್‌, ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ:-

ಮೊದಲಿಗೆ ಮೊಟ್ಟೆ ಮಿಶ್ರಣ ತಯಾರಿಸಿ:

ಒಂದು ಬೌಲ್ನಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ, ಅದಕ್ಕೆ ಕತ್ತರಿಸಿದ ಹಸಿಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

ಬ್ರೆಡ್ ಮೂಲೆಗಳನ್ನು (edges/crust) ಕತ್ತರಿಸಿ ಹಾಕಿ. ಬ್ರೆಡ್ ಅನ್ನು  ಒದ್ದೆಯಿಲ್ಲದಂತೆ, ಲೈಟ್ಆಗಿ ಒಂದು ಕಡೆ ಬೇಯಿಸಿಕೊಳ್ಳಿ ಸಾಫ್ರೋಲ್ಮಾಡಲು ಅನುಕೂಲವಾಗುವಂತೆ.

 ರೋಲ್ ತಯಾರಿ  ಮಾಡುವ ವಿಧಾನ:

ಒಂದು ಬ್ರೆಡ್ ತುಂಡಿನ ಮೇಲೆ ಮೊಟ್ಟೆ ಮಿಶ್ರಣವನ್ನು ಸಣ್ಣ ಪ್ರಮಾಣದಲ್ಲಿ ಹಚ್ಚಿ. ನಂತರ ಅದರ ಮೇಲೆ ಚಹಾದ ಚಮಚದಷ್ಟು ಚೀಸ್ ಹಾಕಬಹುದು.

ನಂತರ ಮಿಶ್ರಣ ಹಚ್ಚಿದ ಬ್ರೆಡ್ನ್ನು ಚಿಕ್ಕದಾಗಿ ರೋಲ್ ಮಾಡಿ, ಕೊನೆ ತುದಿಯನ್ನು ಸಣ್ಣ ಸ್ಟಿಕ್ನಿಂದ ಮುಚ್ಚಿ, ತವವನ್ನು ಮೀಡಿಯಮ್ಉರಿಯಲ್ಲಿಟ್ಟು, ತುಪ್ಪ ಅಥವಾ ಎಣ್ಣೆ ಹಚ್ಚಿಕೊಂಡು  ರೋಲ್ಗಳನ್ನು ತವದ ಮೇಲೆ ಇಟ್ಟು,  ಚಿನ್ನದ ಬಣ್ಣ ಬರುವ ಹಾಗೆ ಬಾಡಿಸಿದರೆ ಬ್ರೆಡ್‌ ಎಗ್‌ ರೋಲ್‌ ಸಿದ್ದ.



 🍞 ಬನಾನಾ ಬ್ರೆಡ್ ಫಿಂಗರ್ಸ್ (Sweet)

ಬೇಕಾಗುವ ಪದಾರ್ಥಗಳು

ಬಾಳೆಹಣ್ಣು ,  ಬ್ರೆಡ್ ತುಂಡುಗಳುದಾಲ್ಚಿನ್ನಿ ಪೌಡರ್‌,  ನಿಂಬೆರಸಬೆಲ್ಲಕಡಲೆಹಿಟ್ಟು, ಉಪ್ಪು, ಟೂತ್ಪಿಕ್‌,  ಏಲಕ್ಕಿ ಪುಡಿ

ತಯಾರಿಸುವ ವಿಧಾನ:

ಬ್ರೆಡ್ ತುಂಡುಗಳನ್ನು ಸಣ್ಣ ಫಿಂಗರ್‌ ಶೈಲಿಯಲ್ಲಿ ಸ್ಟ್ರಿಪ್ಆಗಿ  ಕತ್ತರಿಸಿಟ್ಟುಕೊಳ್ಳಿ.

 ಚೆನ್ನಾಗಿ ಕಳಿತ ಎರಡು  ಬಾಳೆಹಣ್ಣುಗಳನ್ನು  ಚೆನ್ನಾಗಿ ಮ್ಯಾಷ್ಮಾಡಿ, ಅದಕ್ಕೆ ಬೆಲ್ಲ/ಬ್ರೌನ್ಶುಗರ್‌  ದಾಲ್ಚಿನ್ನಿ ಪುಡಿಚಿಟಿಕೆ ಉಪ್ಪು ಸೇರಿಸಿ ಮಿಕ್ಸ್ಮಾಡಿ. ಬೇಕಾದರೆ ಒಂದು ಸ್ಪೂನ್ಕಡಲೆಹಿಟ್ಟು ಸೇರಿಸಬಹುದು ಚೆನ್ನಾಗಿ ಮಿಕ್ಸ್ಆಗಲು.

ಒಂದು ಬ್ರೆಡ್ ಸ್ಟ್ರಿಪ್ ಮೇಲೆ ಬಾಳೆಹಣ್ಣು ಮಿಶ್ರಣ ಸ್ವಲ್ಪ ಮಾತ್ರ ಹಚ್ಚಿ, ಸ್ಟ್ರಿಪ್ಅನ್ನು ರೋಲ್ಮಾಡಿಟ್ಟುಕೊಳ್ಳಿ. ಈ ಬ್ರೆಡ್‌ ರೋಲ್ಗಳನ್ನು  ತವದಲ್ಲಿ ತುಪ್ಪ ಹಾಕಿ ಎರಡೂ ಬದಿಗೆ ಬಂಗಾರ ಬಣ್ಣ ಬರುವವರೆಗೆ  ಸಣ್ಣಗೆ ಬಾಡಿಸಿಚಾಕೊಲೇಟ್ ಸಾಸ್/ಹನಿ ಹಾಕಿ ಸರ್ವ್ ಮಾಡಬಹುದು. ಇದು ಊಟ ಆದ ನಂತರ ಸಿಹಿ ಸವಿಯಲು ಸೂಕ್ತ ತಿಂಡಿ.

🍌 ಸಿಹಿಯಾದರೂ ಹೆಲ್ದಿ ಆಯ್ಕೆ!

 


 🍞 ಬ್ರೆಡ್ ಬೋಂಡಾ

ಬೇಕಾಗುವ  ಪದಾರ್ಥಗಳು:

ಬ್ರೆಡ್ ತುಂಡುಗಳು.

ಬೇಯಿಸಿದ ಆಲೂಗಡ್ಡೆ.

ಹಸಿಮೆಣಸುಕೊತ್ತಂಬರಿ ಸೊಪ್ಪು, ಶುಂಠಿಬೆಳ್ಳುಳ್ಳಿ ಪೇಸ್ಟ್.

ಜೀರಿಗೆಗರಂ ಮಸಾಲಾ, ನಿಂಬೆಹಣ್ಣಿನ ರಸ.

ತಯಾರಿಸುವ ವಿಧಾನ:

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಹಸಿಮೆಣಸಿನಕಾಯಿಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿನಂತರ ಬೇಯಿಸಿ ಮ್ಯಾಷ್ಮಾಡಿದ ಆಲೂಗಡ್ಡೆಜೀರಿಗೆ ಪುಡಿಗರಂ ಮಸಾಲೆಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊತ್ತಂಬರಿ ಸೊಪ್ಪುನಿಂಬೆ ರಸ ಸೇರಿಸಿ ಸ್ವಲ್ಪ ತಂಪಾಗಲು ಬಿಡಿ. ನಂತರ  ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ತಯಾರಿಸಿಕೊಳ್ಳಿ.

2. ಬ್ರೆಡ್ ಸಿದ್ಧಪಡಿಸು:

ಬ್ರೆಡ್ ಸ್ಲೈಸನ್ನು  ನೀರಿನಲ್ಲಿ ಡಿಪ್‌  ಮಾಡಿ ತಕ್ಷಣ ಕೈಗಳಿಂದ ಒತ್ತಿ ನೀರನ್ನು ತೆಗೆಯಬೇಕು (ಹದಗೆಡಬಾರದು). ನೆನೆಸಿದ ಬ್ರೆಡ್ ಮೇಲೆ ಒಂದು ಆಲೂ ಉಂಡೆ ಇಟ್ಟು ಎಡ-ಬಲದಿಂದ ಮುಚ್ಚಿ ಬ್ರೆಡ್ನಿಂದ ಪೂರ್ತಿಯಾಗಿ  ಮುಚ್ಚಿಕೊಳ್ಳಿ. ಎಲ್ಲ ಉಂಡೆಗಳನ್ನೂ  ರೀತಿಯಲ್ಲಿ ತಯಾರಿಸಿಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.ಬ್ರೆಡ್ ಉಂಡೆಗಳನ್ನು ಎಣ್ಣೆಗೆ ಹಾಕಿ  ಬಣ್ಣ ಬರುತ್ತಿರುವವರೆಗೆ ಕರಿಯಿರಿ. Tissue paper ಮೇಲೆ ಬೋಂಡಾ ತೆಗೆದು ಹಾಕಿ ಎಣ್ಣೆ ಇಳಿಸಿಕೊಳ್ಳಿ.



ಟೊಮೇಟೋ ಸಾಸ್, ಅಥವಾ ಹಸಿರು ಚಟ್ನಿ  ಜೊತೆ ಸರ್ವ್ ಮಾಡಬಹುದು.

ಮಕ್ಕಳಿಗೆ ಕಾಫಿ ಅಥವಾ ಹಾಟ್ ಮಿಲ್ಕ್‌ ಜೊತೆ ಕೊಟ್ಟರೆ ಸಂಪೂರ್ಣ ಸ್ನ್ಯಾಕ್ ಆಗುತ್ತದೆ.

 ಮಕ್ಕಳಿಗೆ ತಿನ್ನಲು ಹಿತವಾಗಿದ್ದರೆ ಮಾತ್ರವೇ ಅವರು ಆಹಾರವನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಆದ್ದರಿಂದ, ಸ್ಯಾಂಡ್ವಿಚ್ಗಳಂತಹ ಸರಳ ಬ್ರೆಡ್ಖಾದ್ಯಗಳಿಗೆ ಭಾರತೀಯ ಮನೆಮನೆಯ ಸ್ವಸ್ಥ ಅಡುಗೆ ಶೈಲಿಯನ್ನು ಸೇರಿಸುವುದರಿಂದ ಅವು ಕೇವಲ ರುಚಿಕರವಷ್ಟೇ ಅಲ್ಲ, ಪೌಷ್ಟಿಕವೂ ಆಗುತ್ತವೆ. ಪನೀರ್‌, ತರಕಾರಿ, ತುಪ್ಪ, ಮುಂತಾದ  ಮಸಾಲೆಗಳ ಮೃದುವಾದ ಸ್ಪರ್ಶ  ಇವೆಲ್ಲವೂ ಮಕ್ಕಳ ದೈನಂದಿನ ಲಂಚ್ ಅನ್ನು ಇನ್ನಷ್ಟು ಆಸಕ್ತಿದಾಯಕ ಮತ್ತು ಆರೋಗ್ಯಕರವಾಗಿಸುತ್ತದೆ.

ಪ್ರೀತಿ, ಪೌಷ್ಟಿಕತೆ ಮತ್ತು ಭಾರತೀಯ ಪರಂಪರೆ   ಮೂರು ಗುಣಗಳ ಸಂಯೋಜನೆಯೊಂದಿಗೆ ತಯಾರಾದ ಸ್ಯಾಂಡ್ವಿಚ್ಗಳು ಮಕ್ಕಳ ದಿನವನ್ನೇ ಹಗುರವಾಗಿ ಮತ್ತು ಶಕ್ತಿಯುತವಾಗಿಸಿ ಬೆಳಗಿಸುತ್ತವೆ. ಪ್ರತಿದಿನವೂ ಹೊಸ ರುಚಿ, ಹೊಸ ಸೃಜನಶೀಲತೆ ಇದು ಮನೆಯ ಮಡಿಲಿನ ಸವಿ!

 

 

 

ಧನ್ಯವಾದಗಳು………..🌷🌷🌷🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......