“6 ಆರೋಗ್ಯಕರ ಭಾರತೀಯ ಸಿಹಿತಿನಿಸುಗಳು: Low-Sugar, No-Oil, Natural Sweetness Desserts for All Ages”
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ:ನಾಗಲಕ್ಷ್ಮಿ ಕೆ. ಎನ್ ದಿನಾಂಕ: ೦೩.೧೨.೨೦೨೫
ಆರೋಗ್ಯಕರ
ಭಾರತೀಯ ಡೆಸೆರ್ಟ್ಗಳ ಆಯ್ಕೆಗಳು:
ಭಾರತೀಯ
ಅಡುಗೆ ಮನೆಯ ಪಾಕಶಾಲೆ ಎಂದರೆ ರುಚಿ, ಪರಂಪರೆ ಮತ್ತು ಸಾಂಪ್ರದಾಯಿಕ ಸಿಹಿತಿನಿಸುಗಳ ಸುಗಂಧದಿಂದ ತುಂಬಿರುವ
ಸ್ಥಳ. ಆದರೆ ಇಂದಿನ ಆರೋಗ್ಯಜಾಗೃತಿ ಯುಗದಲ್ಲಿ, ಹೆಚ್ಚು ಸಕ್ಕರೆ, ಹೆಚ್ಚು ತುಪ್ಪ ಬಳಕೆಯ ಸಿಹಿತಿನಿಸುಗಳು
ಅನೇಕರಿಗೆ ಚಿಂತೆ ಉಂಟುಮಾಡುತ್ತಿವೆ. ಮಧುಮೇಹ, ಹೈ ಬಿಪಿ, ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿರುವವರು
ಸಿಹಿಗೆ ನೋ ಹೇಳಬೇಕಾದ ಪರಿಸ್ಥಿತಿ ನಿರಂತರವಾಗಿ ಎದುರಾಗುತ್ತಿದೆ. ಆದರೆ ಸಿಹಿತಿನ್ನುವುದು
ತಪ್ಪೇನಲ್ಲ — ಸರಿಯಾದ ಪರ್ಯಾಯಗಳನ್ನು ಆಯ್ಕೆ ಮಾಡಿದರೆ ಅದು ದೇಹಕ್ಕೂ, ಮನಸಿಗೂ ಒಳ್ಳೆಯದೇ!
ಈ
ಬ್ಲಾಗ್‌ನಲ್ಲಿ ನಾವು ಐದು ಆರೋಗ್ಯಕರ, Indian-style, low-sugar / no-sugar /
high-nutrient ಡೆಸೆರ್ಟ್‌ಗಳು ತಯಾರಿಸುವ ಸುಲಭ ವಿಧಾನಗಳನ್ನು ನೋಡೋಣ.
ರಾಗಿ, ಬಾದಾಮಿ, ವಾಲ್ನಟ್, ಖರ್ಜೂರ, ಬೆಲ್ಲ, ಎಳ್ಳು, ನೆಲಗಡಲೆ — ಇವೆಲ್ಲ ನಮ್ಮ ಮನೆಗಳಲ್ಲಿ ದೊರೆಯುವ
ನೈಸರ್ಗಿಕ ಪೋಷಕಾಂಶಗಳಿಂದ ಕೂಡಿದ ಸಾಮಗ್ರಿಗಳು.
ಈ ಸಿಹಿತಿನಿಸುಗಳು.
✔️
ಮಧುಮೇಹಿಗಳಿಗೆ ಸೇಫರ್
✔️ ಮಕ್ಕಳಿಗೂ,
ವಯೋವೃದ್ಧರಿಗೂ ಸೂಕ್ತ
✔️ ಇಮ್ಮ್ಯೂನಿಟಿ
& ಶಕ್ತಿ ಹೆಚ್ಚಿಸುವಂಥವು
✔️ ಚಳಿಗಾಲಕ್ಕೆ
ಪರ್ಫೆಕ್ಟ್
ಈಗ ರುಚಿಯನ್ನೂ,
ಆರೋಗ್ಯವನ್ನೂ ಒಂದೇ ಜೊತೆ ಸವಿಯಬಹುದಾದ ಡೆಸೆರ್ಟ್‌ಗಳ ಜಗತ್ತಿಗೆ ಸ್ವಾಗತ.
🍮 ರಾಗಿ ಹಾಲು ಕಸ್ಟರ್ಡ್ (Sugar-free Ragi Dessert)
ಬೇಕಾಗುವ
ಸಾಮಗ್ರಿಗಳು
ರಾಗಿ - ೧ ಲೋಟ
ತೆಂಗಿನಕಾಯಿ
– ೧ ಲೋಟ(ಸಣ್ಣದಾಗಿ ಹೆಚ್ಚಿದ್ದು)
ಬೆಲ್ಲ
- ೨ ಲೋಟ (ಪುಡಿ ಮಾಡಿದ್ದು)
ಏಲಕ್ಕಿ - ¼ ಟೀ
ಸ್ಪೂನ್
ಉಪ್ಪು
ತುಪ್ಪ
ಮಾಡುವ
ವಿಧಾನ
ಮೊದಲು
ರಾಗಿಯನ್ನು ಮೂರ್ನಾಲ್ಕು ಬಾರಿ ಚೆನ್ನಾಗಿ ತೊಳೆದು,
ಇಡೀ ರಾತ್ರಿ ಅಥವಾ ಎಂಟು ಗಂಟೆಗಳ ಕಾಲ ನೆನೆಯಲು ಬಿಡಿ, ನಂತರ ರಾಗಿಯನ್ನು ಮಿಕ್ಸಿ ಜಾರಿಗೆ ವರ್ಗಾಯಿಸಿಕೊಂಡು
ಎರಡು ಲೋಟ ನೀರನ್ನು ಸೇರಿಸಿ ನೈಸ್ ಆಗಿ ರುಬ್ಬಿಕೊಳ್ಳಿ.
ರುಬ್ಬಿದ ಹಾಲನ್ನು ಒಂದು ಜಾಲರಿ ಮೇಲೆ ತೆಳುವಾದ ಬಟ್ಟೆಯನ್ನು ಹಾಕಿ ಶೋಧಿಸಿಕೊಳ್ಳಿ. ಉಳಿದ ರಾಗಿ
ತರಿಯನ್ನು ಮತ್ತೊಮ್ಮೆ ಒಂದುವರೆ ಲೋಟದಷ್ಟು ನೀರು ಸೇರಿಸಿ ಮತ್ತೆ ರುಬ್ಬಿಕೊಳ್ಳಿ. ಮತ್ತೊಮ್ಮೆ ಅದೇ
ರೀತಿ ಜಾಲರಿ ಮೇಲೆ ಬಟ್ಟೆ ಹಾಕಿ ಶೋಧಿಸಿಕೊಳ್ಳಿ. ಈಗ ದೊರೆತ ಹಾಲನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
ನಂತರ
ರಾಗಿಯಷ್ಟೇ ಪ್ರಮಾಣದ ಸಣ್ಣದಾಗಿ ಹಚ್ಚಿದ ಹಸಿ ತೆಂಗಿನಕಾಯಿಯನ್ನು ಮಿಕ್ಸಿ ಜಾರಿಗೆ ಸೇರಿಸಿ ಮೂರ್ನಾಲ್ಕು ಬಾರಿ ತಿರುಗಿಸಿ, ತೆಂಗಿನಕಾಯಿ ತರಿತರಿ
ಇರುವಾಗ ಎರಡು ಲೋಟದಷ್ಟು ನೀರನ್ನು ಸೇರಿಸಿ ನೈಸಾಗಿ ರುಬ್ಬಿಕೊಂಡು ಅದರ ಹಾಲನ್ನು ಶೋಧಿಸಿಕೊಳ್ಳಿ.
ರಾಗಿಯನ್ನು ಎರಡು ಬಾರಿ ರುಬ್ಬಿ ಹಾಲು ಮಾಡಿದ ರೀತಿಯೇ ತೆಂಗಿನಕಾಯಿ ಹಾಲನ್ನು ತೆಗೆಯಬೇಕು.
ಒಂದು
ಲೋಟ ರಾಗಿ ಮತ್ತು ಒಂದು ಲೋಟ ತೆಂಗಿನಕಾಯಿಯಿಂದ ತೆಗೆದ ಹಾಲು ಎರಡೂ ಸೇರಿ ಐದರಿಂದ ಆರು ಲೋಟಗಳಷ್ಟು
ಹಾಲು ದೊರೆಯುತ್ತದೆ. ಈಗ ಇದಕ್ಕೆ ಕುಟ್ಟಿ ಪುಡಿ ಮಾಡಿದ ಎರಡು ಲೋಟದಷ್ಟು ಬೆಲ್ಲವನ್ನು ಸೇರಿಸಿ ಮಂದ ಹುರಿಯಲ್ಲಿ ಒಲೆಯ ಮೇಲಿಟ್ಟು ಕಾಯಲು ಬಿಡಿ. ಆಗಾಗ ಕಲಸುತ್ತಾ
ಇರಿ. ಒಂದು ಚಿಟಿಕೆ ಉಪ್ಪು ಮತ್ತು ಅರ್ಧ ಸ್ಪೂನ್ ಏಲಕ್ಕಿ ಪುಡಿ ಸೇರಿಸಿ. ಉಪ್ಪು ಸೇರಿಸುವುದರಿಂದ
ಸಿಹಿಯು ಹದವಾಗುತ್ತದೆ. ಮಂದ ಹುರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ, ಹಾಲಿನಲ್ಲಿ ಯಾವಾಗ
ಸಣ್ಣ ಸಣ್ಣ ಗಂಟುಗಳು ಮೂಡಲು ಪ್ರಾರಂಭವಾಗುತ್ತದೆಯೋ ಆಗು ಹುರಿಯನ್ನು ಮಧ್ಯಮದಲ್ಲಿಟ್ಟು ಹಾಲನ್ನು
ಕಾಯಿಸಿ. ಹಾಲು ಮಂದವಾಗುತ್ತಾ ಬರುತ್ತಲೇ ಒಂದಿಪ್ಪತ್ತು ನಿಮಿಷಗಳ ಕಾಲ ಸಣ್ಣ ಹುರಿಯಲ್ಲಿಟ್ಟು ಬೇಯಿಸಿ,
ನಂತರ ಒಂದು ಟೇಬಲ್ ಸ್ಪೂನ್ ತುಪ್ಪ ಸೇರಿಸಿ, ತುಪ್ಪವು
ರಾಗಿ ಹಾಲಿನಲ್ಲಿ ಚೆನ್ನಾಗಿ ಕರಗುತ್ತಲೇ ಮತ್ತೆ ಇನ್ನೊಂದು ಸ್ಪೂನ್ ತುಪ್ಪ ಸೇರಿಸಿ, ಇದೇ ರೀತಿ
ಒಂದು ಮೂರ್ನಾಲ್ಕು ಸ್ಪೂನ್ ತುಪ್ಪ ಸೇರಿಸುತ್ತಾ ಒಂದಿಪ್ಪತ್ತು ನಿಮಿಷಗಳ ಕಾಲ ಸಣ್ಣ ಹುರಿಯಲ್ಲಿ
ಬೇಯಿಸುತ್ತಾ ಇರಿ. ಹಾಲು ದಪ್ಪವಾಗಿ ಸೌಟಿನಿಂದ ತೆಗೆದು
ಕೆಳೆಗೆ ಬಿಟ್ಟಾಗ ಪದರ ಪದರವಾಗಿ ಬಿದ್ದರೆ, ರಾಗಿ
ಹಾಲು ಸಿಹಿ ಸಿದ್ದವಾದಂತೆ. ಹೀಗೆ ಪೂರ್ತಿ ರಾಗಿ ಹಾಲು
ಸಿಹಿ ಸಿದ್ದವಾಗಲು ಮೂವತ್ತರಿಂದ-ಮೂವತ್ತೈದು ನಿಮಿಷಗಳ
ಕಾಲ ಸಮಯ ಬೇಕಾಗಬಹುದು.
ಕೊನೆಯಲ್ಲಿ
ಒಂದು ಟ್ರೇ ಅಥವಾ ತಟ್ಟೆಗೆ ತುಪ್ಪ ಸವರಿ ಈ ರಾಗಿ ಹಾಲನ್ನು ಸುರಿದು ಹದವಾಗಿ ಹರಡಿ ಮೂವತ್ತು ನಿಮಿಷಗಳ
ಕಾಲ ಬಿಟ್ಟು ಬಿಡಿ. ನಂತರ ಬೇಕಾದ ಆಕಾರಕ್ಕೆ ಕೇಕ್ ನ ರೀತಿ ಕತ್ತಿರಿಸಿಕೊಳ್ಳಿ. ಈಗ ಸೂಪರ್ ಆಗಿ
ರುಚಿಯಾದ ರಾಗಿ ಹಾಲು ಸಿಹಿ ತಿನ್ನಲು ಸಿದ್ದ.
ಫ್ರೂಟ್ ಕಸ್ಟರ್ಡ್ ( Fruit Dessert)
ಬೇಕಾಗುವ
ಸಾಮಗ್ರಿಗಳು
ಕಸ್ಟರ್ಡ್ ಪುಡಿ – ½ ಕಪ್
ಹಾಲು – ಅರ್ಧ
ಲೀಟರ್
ಸಕ್ಕರೆ - ½ ಕಪ್
ಹಣ್ಣುಗಳು –
ದ್ರಾಕ್ಷಿ, ದಾಳಿಂಬೆ, ಸೇಬು, ಬಾಳೆಹಣ್ಣು, ಸೀಬೆಹಣ್ಣು, ಕಿವಿಹಣ್ಣು, ಕಿತ್ತಲೆಹಣ್ಣು.
ಏಲಕ್ಕಿ ಪುಡಿ
ಮಾಡುವ
ವಿಧಾನ
ತೆಗೆದುಕೊಂಡಿರುವ
ಕಸ್ಟರ್ಡ್ ಪುಡಿಯನ್ನು
ಹಾಲನ್ನು ಸೇರಿಸಿ ಮಂದವಾಗಿ ಕಲಸಿ
ನೆನೆಯಾಕಿರಿ.
ಹಾಲನ್ನು
ಸ್ಟೌ ಮೇಲಿಟ್ಟು ಕುದಿಸಿರಿ ನಂತರ ಸಿಹಿಗೆ ಅವಶ್ಯವಿರುವಷ್ಟು ಸಕ್ಕರೆ ಸೇರಿಸಿ ಕಾಯಿಸಿ. ನಂತರ ಬಿಸಿ
ಹಾಲಿಗೆ ನೆನೆಸಿದ ಕಸ್ಟರ್ಡ್ ಮಿಕ್ಸ್ ಅನ್ನು ಸೇರಿಸಿ
ಕ್ರೀಮಿ ಟೆಕ್ಸ್ಚರ್ ಬರುವಂತೆ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿಬಿಡಿ. ಹಾಲು ತಣ್ಣಗಾದ
ನಂತರ ಸಣ್ಣದಾಗಿ ಕತ್ತರಿಸಿದ ಹಣ್ಣುಗಳನ್ನು ಸೇರಿಸಿ. 1 ಗಂಟೆ ಫ್ರಿಡ್ಜ್ನಲ್ಲಿ ಇಟ್ಟು ಸರ್ವ್ ಮಾಡಿರಿ. ( ಹಣ್ಣುಗಳು ಸಿಹಿ ಇರುವುದರಿಂದ ಸಕ್ಕರೆ ಆದಷ್ಟು ಕಡಿಮೆ ಹಾಕಿಕೊಳ್ಳಿ)
🍮 ಬೆಸನ್
ಲಾಡು (Oil-free,
Sugar-free)
ಬೇಕಾಗುವ
ಸಾಮಗ್ರಿಗಳು
ಕಡಲೇಹಿಟ್ಟು
– 1 ಕಪ್
ತುಪ್ಪ
– ೧/೨
ಕಪ್
ಸಕ್ಕರೆ ಪೌಡರ್ - ೧/೨ ಕಪ್
ಪಿಸ್ತಾ – ಎರಡು
ಸ್ಪೂನ್ (ಸಣ್ಣದಾಗಿ ಹೆಚ್ಚಿದ್ದು)
ಏಲಕ್ಕಿ
ಮಾಡುವ
ವಿಧಾನ
ದಪ್ಪ
ತಳವಿರುವ ಒಂದು ಬಾಣಲೆಯನ್ನು ಸ್ಟೌ ಮೇಲಿಟ್ಟು ಅರ್ಧ
ಕಪ್ ತುಪ್ಪ ಹಾಕಿ ಕಾಯಿಸಿರಿ. ತುಪ್ಪ ಕಾಯ್ದ ನಂತರ ಒಂದು ಕಪ್ ಕಡಲೆಹಿಟ್ಟನ್ನು ಹಾಕಿ ಸಣ್ಣ ಹುರಿಯಲ್ಲಿ
ಹುರಿಯಿರಿ, ಸುಮಾರು ೮-೧೦ ನಿಮಿಷಗಳವರೆಗೆ ಹುರಿದ ನಂತರ
ಕಡಲೆಹಿಟ್ಟು ತುಪ್ಪದಲ್ಲಿ ಚೆನ್ನಾಗಿ ಬೆಂದು ಮೆತ್ತಗಾಗುತ್ತದೆ. ಮೆತ್ತಗಾದ ಕಡಲೆಹಿಟ್ಟು
ತುಪ್ಪ ಬಿಟ್ಟುಕೊಂಡು ಸಣ್ಣದಾಗಿ ಗುಳ್ಳೆಗಳು ಏಳುವವರೆಗೂ ಹುರಿಯಿರಿ, ನಂತರ ಮೊದಲೇ ಒಂದು ಸ್ಪೂನ್
ನೀರಲ್ಲಿ ನೆನೆಸಿದ ಫುಡ್ ಕಲರ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಸ್ವಲ್ಪ ತುಪ್ಪ
ಸೇರಿಸಿ ಒಂದು ನಿಮಿಷ ಬೇಯಿಸಿ. ಈ ಸಮಯದಲ್ಲಿ ಬಾಣಲೆಯನ್ನು ಕೆಳಗಿಳಿಸಿ
ಕಡಲೆಹಿಟ್ಟನ್ನು ಇನ್ನೊಂದು ಪಾತ್ರೆಗೆ ಸುರಿದುಕೊಳ್ಳಿ
ಮತ್ತು ತಣ್ಣಗಾಗುವರೆಗೂ ಬಿಟ್ಟು ಬಿಡಿ. ಉಗುರು ಬೆಚ್ಚಗಿನ ಬಿಸಿ ಇರುವಾಗಲೇ ಏಲಕ್ಕಿ ಪುಡಿ ಮತ್ತು
ಸಕ್ಕರೆ ಪೌಡರ್ ಸೇರಿಸಿ ಚೆನ್ನಾಗಿ ಕಲಸಿ ಮೆದ್ದಿಕೊಳ್ಳಿ, ತುಂಬಾ ಗಟ್ಟಿ ಇದೆ ಎನಿಸಿದರೆ ತುಪ್ಪ
ಸೇರಿಸಿ ಮಿಕ್ಸ್ ಮಾಡಬಹುದು. ಕಡಲೆ ಹಿಟ್ಟನ್ನು ದಪ್ಪ
ನಿಂಬೆಹಣ್ಣಿನ ಆಕಾರಕ್ಕೆ ಉಂಡೆಗಳನ್ನಾಗಿ ಮಾಡಿಕೊಳ್ಳಿ, ಉಂಡೆಗಳನ್ನು ಪುಡಿ ಮಾಡಿದ ಪಿಸ್ತಾದಿಂದ ಅಲಂಕರಿಸಿ. ಈಗ ರುಚಿಕರ ಸಿಹಿಯಾದ
ಬೇಸನ್ ಲಾಡು ತಿನ್ನಲು ಸಿದ್ದ.
🍮 ಬಾದಾಮಿ
ಪಾಯಸ ( High
Omega-3)
ಬೇಕಾಗುವ
ಸಾಮಗ್ರಿಗಳು
ಇಡೀ ರಾತ್ರಿ
ನೆನೆಸಿ ಸಿಪ್ಪೆ ತೆಗೆದ ೮-೧೦ ಬಾದಾಮಿ
ಹಾಲು
– ಅರ್ಧ
ಲೀಟರ್
ಏಲಕ್ಕಿ
– ಚಿಟಿಕೆ
ಕೇಸರಿ
– 2 ತಂತಿಗಳು (ಆಪ್ಷನಲ್)
ಬಾದಾಮಿ ಪೌಡರ್
ಸಕ್ಕರೆ - ೧
ಕಪ್
ಶಾವಿಗೆ – ೧/೪
ಕಪ್
ಸಣ್ಣದಾಗಿ ಕತ್ತರಿಸಿದ
ಬಾದಾಮಿ ಮತ್ತು ಪಿಸ್ತಾ
ತುಪ್ಪ
ಮಾಡುವ
ವಿಧಾನ
ಮೊದಲಿಗೆ
ನೆನೆಸಿದ ಬಾದಾಮಿ ಕಾಳುಗಳನ್ನು ಒಂದು ಕಪ್ ಹಾಲು ಸೇರಿಸಿ ರವೆ ರೀತಿ ರುಬ್ಬಿಕೊಳ್ಳಿ.
ಬಾಣಲೆಗೆ
ಎರಡರಿಂದ ಮೂರು ಸ್ಪೂನ್ ತುಪ್ಪ ಹಾಕಿ ಕಾಯಿಸಿ, ಅದಕ್ಕೆ
ಒಂದು ಕಪ್ ಶಾವಿಗೆ ಹಾಕಿ ಬಂಗಾರದ ಬಣ್ಣ ಬರುವವರೆಗೆ
ಹುರಿಯಿರಿ. ನಂತರ ಒಂದು ಕಪ್ ನೀರನ್ನು ಸೇರಿಸಿ ಮಧ್ಯಮ
ಹುರಿಯಲ್ಲಿ ಶಾವಿಗೆಯನ್ನು ಮುಕ್ಕಾಲು ಹದಕ್ಕೆ ನಿರಿನಲ್ಲಿಯೇ
ಬೇಯಿಸಿರಿ. ನಂತರ ರುಬ್ಬಿದ ಬಾದಾಮಿ ಹಾಲನ್ನು ಹಾಕಿ ನಂತರ ಉಳಿದ ಹಾಲನ್ನು ಸೇರಿಸಿ, ನಂತರ ಸಿಹಿಗೆ ಅಗತ್ಯವಿರುವಷ್ಟು ಸಕ್ಕರೆ ಹಾಕಿರಿ.ನಂತರ
ಹಾಲನ್ನು ಮುಚ್ಚಿ ಒಂದು ಕುದಿ ಬರುವವರೆಗೆ ಕುದಿಸಿರಿ. ನಂತರ ಏಲಕ್ಕಿ ಪುಡಿ, ಬಾದಾಮಿ ಪೌಡರ್ ಹಾಗೆಯೇ
ಉತ್ತಮ ಬಣ್ಣಕ್ಕೆ ಕೇಸರಿಯನ್ನು ಹಾಕಿ, ಪುಡಿ ಮಾಡಿದ ಬಾದಾಮಿ ಮತ್ತು ಪಿಸ್ತಾಗಳನ್ನು ಸೇರಿಸಿ
ಒಂದೆರಡು ನಿಮಿಷಗಳ ಕಾಲ ಬೇಯಿಸಿ. ಈಗ ಬಿಸಿ ಬಿಸಿ ಬಾದಾಮಿ ಪಾಯಸ ಸವಿಯಲು ಸಿದ್ದ.
ಖರ್ಜೂರ – ವಾಲ್ನಟ್ ಲಾಡು (No Sugar, No Oil)
Dates = natural sweetness + iron; diabetic-safe if eaten
in moderation
ಬೇಕಾಗುವ
ಸಾಮಗ್ರಿಗಳು
ಖರ್ಜೂರ
( seeds ತೆಗೆದ) – 1 ಕಪ್
ವಾಲ್ನಟ್,
ಗೋಡಂಬಿ, ಬಾದಾಮಿ ಸಣ್ಣದಾಗಿ ಹೆಚ್ಚಿದ್ದು
– ½ ಕಪ್
ಏಲಕ್ಕಿ
– ಚಿಟಿಕೆ
ಮಾಡುವ
ವಿಧಾನ
ಮೊದಲಿಗೆ
ವಾಲ್ನಟ್ಗಳನ್ನು ತವೆಯ ಮೇಲೆ ಲೈಟ್
ರೋಸ್ಟ್ ಮಾಡಿ ಪೌಡರ್ ಮಾಡಿ.
ಬೀಜದಿಂದ
ಬೇರ್ಪಡಿಸಿದ ಖರ್ಜೂರವನ್ನು 3–4 ನಿಮಿಷ
ಮಿಕ್ಸಿ
ಜಾರಿನಲ್ಲಿ ರುಬ್ಬಿಕೊಳ್ಳಿ ಅಥವಾ ನುಣ್ಣಗೆ ಮ್ಯಾಶ್
ಮಾಡಿರಿ.
ಒಂದು
ಬಾಣಲೆಗೆ ಒಂದು ಸ್ಪೂನ್ ತುಪ್ಪ ಹಾಕಿ, ಸಣ್ಣಗೆ ಹಚ್ಚಿದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು
ಕೊಬ್ಬರಿ ತುಂಡುಗಳನ್ನು ಸೇರಿಸಿ, ಸಣ್ಣ ಉರಿಯಲ್ಲಿ
ಐದು ನಿಮಿಷಗಳ ಕಾಲ ರೋಸ್ಟ್ ಮಾಡಿಕೊಳ್ಳಿ ನಂತರ ಒಂದು
ಟೇಬಲ್ ಸ್ಪೂನ್ ಗಸಗಸ ಸೇರಿಸಿ ಎರಡು ನಿಮಿಷಗಳ ಕಾಲ
ಹುರಿಯಿರಿ ನಂತರ ರುಬ್ಬಿದ ಖರ್ಜೂರವನ್ನು ಸೇರಿಸಿ ಹುರಿದ ಒಣ ಹಣ್ಣುಗಳೊಂದಿಗೆ ಚೆನ್ನಾಗಿ ಮಿಕ್ಸ್
ಆಗುವಂತೆ ಕಲಸಿರಿ. ನಂತರ ಐದು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಸಣ್ಣದಾದ ಉಂಡೆಗಳನ್ನಾಗಿ ಕಟ್ಟಿರಿ.
ಈಗ ಖರ್ಜೂರದ ಲಡ್ಡು ತಿನ್ನಲು ಸಿದ್ದ.
ಶೇಂಗಾ ಎಳ್ಳು
ಲಾಡು
ಬೇಕಾಗುವ ಸಾಮಗ್ರಿಗಳು
ಶೇಂಗಾ – ೧ ಕಪ್
ಬಿಳಿ ಎಳ್ಳು
– ೧ ಕಪ್
ಹುರಿಗಡಲೆ –
ಅರ್ಧ ಕಪ್
ಏಲಕ್ಕಿ
ಬೆಲ್ಲ
- ೨ ಕಪ್
ಮಾಡುವ ವಿಧಾನ
ಮೊದಲು
ಒಂದು ಬಾಣಲೆಗೆ ಮುಕ್ಕಾಲು ಕಪ್ ಆಗುವಷ್ಟು ನೆಲಗಡಲೆ
ಅಥವಾ ಶೇಂಗಾವನ್ನು ಹಾಕಿ ಡ್ರೈ ಆಗಿ ಹುರಿದುಕೊಂಡು
ಸಿಪ್ಪೆ ತೆಗೆದಿಟ್ಟುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ಒಂದು ಕಪ್ ಎಳ್ಳನ್ನು ಬಂಗಾರದ ಬಣ್ಣ ಬರುವವರೆಗೆ
ಹುರಿಯಿರಿ. ನಂತರ ಅರ್ಧ ಕಪ್ ಹುರಿಗಡಲೆಯನ್ನು ಅದೇ ಬಾಣಲೆಯಲ್ಲಿ ಚೂರು ಬಿಸಿಯಾಗುವಂತೆ ಹುರಿಯಿರಿ.
ಎಳ್ಳು
ಮತ್ತು ಶೇಂಗಾವನ್ನು ಅಳತೆ ಮಾಡಿದ್ದ ಅದೇ ಅಳತೆಯಲ್ಲಿ ಎರಡರಷ್ಟು ಬೆಲ್ಲವನ್ನು ತೆಗೆದುಕೊಳ್ಳಿ,ಅದಕ್ಕೆ
ಸ್ವಲ್ಪ ನೀರನ್ನು ಸೇರಿಸಿ ಸ್ಟೌ ಮೇಲಿಟ್ಟು ಬೆಲ್ಲ
ಕರಗಿಸಿ ಶೋಧಿಸಿಕೊಳ್ಳಿ. ನಂತರ ಬೆಲ್ಲ ಒಂದೆಳೆ ಪಾಕ ಬರುವಂತೆ ಪಾನಕ ಮಾಡಿಕೊಳ್ಳಿ ನಂತರ ಸ್ಟೌ ಆಫ್
ಮಾಡಿಬಿಡಿ.
ಹುರಿದ
ಎಳ್ಳು
ಮತ್ತು ಶೇಂಗಾವನ್ನು ಮಿಕ್ಸಿ ಜಾರಿನಲ್ಲಿ ಒಂದೆರಡು ಸುತ್ತು ತಿರುಗಿಸಿ, ಪಾನಕಕ್ಕೆ ಸೇರಿಸಿಕೊಳ್ಳಿ
ನಂತರ ಹುರಿಗಡಲೆ, ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ
ಚೆನ್ನಾಗಿ ಮಿಕ್ಸ್ ಮಾಡಿ. ಬಾಣಲೆ ಕೆಳಗಿಳಿಸಿ ಸ್ವಲ್ಪ ಬಿಸಿಯಿರುವಾಗಲೇ ಉಂಡೆ ಕಟ್ಟಿರಿ.
ಸಿಹಿ
ತಿನ್ನುವ ಆಸೆಯನ್ನು ನಿಗ್ರಹಿಸಿ ಬದುಕುವುದು ಸಾಧ್ಯವಿಲ್ಲ, ಆದರೆ ಆರೋಗ್ಯಕರ ಆಯ್ಕೆಗಳನ್ನು
ಮಾಡುವುದು ಖಂಡಿತವಾಗಿಯೂ ಸಾಧ್ಯ. ಇಲ್ಲಿ ತಿಳಿಸಿದ ರಾಗಿ ಹಾಲು ಕಸ್ಟರ್ಡ್, ಫ್ರೂಟ್ ಕಸ್ಟರ್ಡ್, ಬೇಸನ್ ಲಾಡು, ಬಾದಾಮಿ ಪಾಯಸ, ಖರ್ಜೂರ–ವಾಲ್ನಟ್ ಲಾಡು, ಮತ್ತು ಶೇಂಗಾ–ಎಳ್ಳು ಲಾಡುಗಳು, ಪರಂಪರೆ ಮತ್ತು
ಆರೋಗ್ಯವನ್ನು ಒಟ್ಟುಗೂಡಿಸುವ ಮನೆಯಲ್ಲೇ ತಯಾರಿಸಬಹುದಾದ ಅತ್ಯುತ್ತಮ ಡೆಸೆರ್ಟ್ಗಳು.
ಹೀಗಾಗಿ,
ಈ ವಾರದಲ್ಲೇ ಈ ರೆಸಿಪಿಗಳಿಂದ ಕನಿಷ್ಠ
ಒಂದು ಸಿಹಿ ತಯಾರಿಸಿ ನೋಡಿ…
ಮನೆಯವರ ಮುಖದಲ್ಲಿ ಮೂಡುವ ಆ ಸಂತೋಷವೇ ನಿಮ್ಮ
ಆರೋಗ್ಯಕರ ಪ್ರಯತ್ನಕ್ಕೆ ಅತ್ಯುತ್ತಮ ಪ್ರತಿಫಲ.
ಧನ್ಯವಾದಗಳು….....🌷🌷🌷🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು