ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಸಣ್ಣ ಪ್ಲಾನ್ = ದೊಡ್ಡ ಫಲಿತಾಂಶ! | ಪ್ರತಿದಿನ 1% ಸುಧಾರಣೆಯ ಶಕ್ತಿ.

 

ಸಣ್ಣ ಪ್ಲಾನ್ ಮಾಡುವ ಮುಂಜಾನೆ ದೃಶ್ಯ

ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ:೦೫.೧೨.೨೦೨೫

ಸಣ್ಣ ಪ್ಲಾನ್ = ದೊಡ್ಡ ಫಲಿತಾಂಶ! 

ಪ್ರತಿದಿನ ಮುಂಜಾನೆ  ಎಚ್ಚರವಾದ ಕ್ಷಣದಿಂದಲೇ ನಮ್ಮ ಜೀವನದ ಯಶಸ್ಸಿನ ದಿಕ್ಕು ರೂಪುಗೊಳ್ಳಲು ಶುರುವಾಗುತ್ತದೆ. ದೊಡ್ಡ ದೊಡ್ಡ  ಗುರಿಗಳನ್ನು ಸಾಧಿಸಲು   ದೊಡ್ಡ ದೊಡ್ಡ  ಹೆಜ್ಜೆಗಳನ್ನೇ ಇಡಬೇಕು ಎಂದು ಹಲವರು ಭ್ರಮೆ ಪಡುತ್ತಾರೆ. ಆದರೆ ನಿಜ ಏನು ಗೊತ್ತಾ? ಸಣ್ಣ ಪ್ಲಾನ್ಗಳನ್ನು ಒಳಗೊಂಡ, ಸಣ್ಣ ಕ್ರಮಗಳು, ಮತ್ತು ಸಣ್ಣ ನಿರ್ಧಾರಗಳು,  ದೊಡ್ಡ ಯಶಸ್ಸಿನ ಮೂಲ ಬೇರುಗಳಾಗಿವೆ.

ಈ ಕ್ರಮಗಳು, ನಿರ್ಧಾರಗಳು ಮತ್ತು ಪ್ಲಾನ್‌ ಗಳಲ್ಲಿ ಒಂದೊಂದು ದಿನವು 1% ಸುಧಾರಣೆ ಮಾಡಿದರೆ ಸಾಕು, ತಿಂಗಳ ಕೊನೆಯಲ್ಲಿ ಅದು  ಜೀವನವನ್ನು ನಿತ್ಯದ ದಿನಚರಿಯಲ್ಲಿ ಬೇರೆ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಹೀಗಾಗಿ ಪ್ರತಿದಿನ 5–10 ನಿಮಿಷ ತೆಗೆದುಕೊಂಡು ರಚಿಸುವ ಸಣ್ಣ ಪ್ಲಾನ್, ನಿಮ್ಮ ಸಮಯ, ಶಕ್ತಿ ಮತ್ತು ಗುರಿಗಳನ್ನು ಸರಿಯಾದ ದಿಕ್ಕಿನಲ್ಲಿ ಒಯ್ಯುವ ಶಕ್ತಿ ಹೊಂದಿದೆ. ಲೇಖನದಲ್ಲಿ, ಈ ರೀತಿಯ ಸರಳವಾದ ಸಣ್ಣ ಪ್ಲಾನ್  ಹೇಗೆ ನಿಮ್ಮ ಜೀವನದಲ್ಲಿ ಅಚ್ಚರಿ ಮೂಡಿಸುವಷ್ಟು  ದೊಡ್ಡ ಬದಲಾವಣೆ ತರುತ್ತದೆ ಎಂಬುದನ್ನು ತಿಳಿಯೋಣ.
"ಪ್ರತಿ ದಿನ 1% ಸುಧಾರಣೆ" ಯು ತುಂಬಾ ಜನಪ್ರಿಯವಾಗಿದೆ ಇದು ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ.

ಯುವಕರ ಆದಾಯಕ್ಕೆ ಅವಕಾಶಗಳು.👇

https://capturingdaysoflife.blogspot.com/2025/09/2025-top-10-side-hustles.html 

 ಸಣ್ಣ ದಿನನಿತ್ಯದ ಯೋಜನೆಅತಿ ದೊಡ್ಡ ಶಕ್ತಿಯಾಗಿದೆ,

ನಾವು ಯಶಸ್ಸಿನ ಬಗ್ಗೆ  ಯೋಚಿಸಿದಾಗ,  ದೊಡ್ಡ ಗುರಿಗಳು, ದೊಡ್ಡ ಕನಸುಗಳು, ಮಹತ್ತರ ಸಾಧನೆಗಳು ಧುತ್ತೆಂದು ಏದುರು ಪ್ರತ್ಯಕ್ಷವಾಗುತ್ತವೆ. ಆಗ ಆಕಾಶವೆ ತಲೆ ಮೆಲೆ ಬಿದ್ದಂತಾಗುತ್ತದೆ. ಆಗ ಯಶಸ್ಸಿನ ಹಾದಿಯು ಕಠಿಣವೆನಿಸದೇ ಇರದು.  ಒಂದುವೇಳೆ  ಯಶಸ್ಸು ತರುವ ಹಾದಿಯು  ಅತಿ ಸುಲಭ ಎನಿಸಿದರೆ????!!!!!

ಹೌದು ಜೀವನಕ್ಕೆ ಅಗತ್ಯವಾದ ಅಗಾಧ ಯಶಸ್ಸಿಗೆ ಹಾದಿಯು ಸುಲಭವಾಗುವುದು ಮತ್ತು  ನಿಜವಾದ ಬದಲಾವಣೆಗಳನ್ನು  ತರುವ ಶಕ್ತಿ ಇರುವುದು ಸಣ್ಣ, ನಿರಂತರ, ಮತ್ತು  ಸುಲಭವಾದ ಯೋಜನೆಗಳಲ್ಲಿ. ಭಾರಿ ಗುರಿಗಳನ್ನು ಹಿಡಿದು ಮುಂದುವರಿಯುವುದು ನಮ್ಮ ಮನಸ್ಸಿಗೆ ಕೆಲ ವೇಳೆ ಭಾರವಾಗಬಹುದು. ಆದರೆ ದಿನಕ್ಕೆ ಕೇವಲ 10 ನಿಮಿಷದ ಯೋಜನೆ, ಕೆಲಸದ ಮೇಲಿನ  ಗಮನ, ಶಕ್ತಿ ಮತ್ತು ಫಲಿತಾಂಶಗಳನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲದು.
ನಿರಂತರ ಸಣ್ಣ ಸುಧಾರಣೆ (1% improvement every day) → 365 ದಿನಗಳಲ್ಲಿ 37x ಬೆಳವಣಿಗೆ!
ಅಂದರೆ, ದೊಡ್ಡ ಬದಲಾವಣೆ ಬೇಕೆಂದರೆ ದೊಡ್ಡ ಕ್ರಮ ಬೇಕಿಲ್ಲ.ಸಣ್ಣ ಕ್ರಮ, ನಿರಂತರ ಕ್ರಮ ಸಾಕು ಎಂದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ.

ಸಣ್ಣ ಸಣ್ಣ ಪ್ಲಾನ್ಗಳನ್ನು ಮಾಡುತ್ತಾ, ಗುರಿಯೆಡೆಗೆ ಸೇರುವ ದಾರಿಯನ್ನು ಸುಲಭಗೊಳಿಸುವುದರಿಂದ, ಮನಸ್ಸು ಗಾಬರಿಯಾಗುವುದಿಲ್ಲ, ಮಾಡುವ ಕೆಲಸಗಳು ಸ್ಪಷ್ಟವಾಗಿರುತ್ತವೆ. ದಿನದಲ್ಲಿ ದೊರೆಯುವ ಸಣ್ಣ ಗೆಲುವುಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಇದರಿಂದ ಯಶಸ್ಸಿನಂತಹ  ದೊಡ್ಡ ಬೆಟ್ಟವನ್ನು  ಹಂತಹಂತವಾಗಿ ಹತ್ತಲು ಸುಲಭವಾಗುತ್ತದೆ

Consistency > Intensity
ನಿಮ್ಮ ದೊಡ್ಡ ಗುರಿಗಿಂತ ದಿನನಿತ್ಯ ಅನುಸರಿಸುವ ಕ್ರಮ ಹೆಚ್ಚು ಮುಖ್ಯ

ಇಂದೇ ಬ್ಲಾಗಿಂಗ್‌ ಪ್ರಾರಂಭಿಸಿ.👇

 https://capturingdaysoflife.blogspot.com/2025/05/blog-post_26.html  

 ದಿನಕ್ಕೆ ಸೂಕ್ತವಾದಮೈಕ್ರೋಪ್ಲಾನ್ಅನ್ನು ಹೇಗೆ ಮಾಡಬೇಕು?

ದಿನದಲ್ಲಿ ಸಣ್ಣ ಪ್ಲಾನ್ ಮಾಡಲು ಕೇವಲ  3 ಹಂತಗಳು  ಸಾಕಾಗುತ್ತವೆ:

ಮೊದಲನೇ ಹಂತವಾಗಿ  3 MITs (Most Important Tasks) ಆಯ್ಕೆಮಾಡಿ

ದಿನದಲ್ಲಿ ಅತಿ ಮುಖ್ಯ 3 ಕೆಲಸಗಳನ್ನು ಮಾತ್ರ ಆಯ್ಕೆಮಾಡಿ ಮತ್ತು ಉಳಿದವು "optional" ಆಗಿರಲಿ.

ಉದಾಹರಣೆಗೆ ನಿತ್ಯದ ವ್ಯಾಯಾಮ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಮುಖ್ಯ. ಹಾಗಾಗಿ ನಿತ್ಯವು  30 ನಿಮಿಷಗಳನ್ನು  ವ್ಯಾಯಾಮಕ್ಕೆ ಕಡ್ಡಾಯವಾಗಿ ಮೀಸಲಿಡಿ.

ಮತ್ತೆ ವೃತ್ತಿಪರ ಕೆಲಸವಾದ ಒಂದು ಪ್ರಮುಖ ಕೆಲಸ (Project / Study / Business Task)ಕ್ಕಾಗಿ, ಇಂತಿಷ್ಟು ಸಮಯ ಎಂದು ಮೀಸಲಿಡಿ.

ಕುಟುಂಬದೊಂದಿಗೆ ಸಮಯ ಮತ್ತು ಸ್ವಯಂ ಕಾಳಜಿಗಾಗಿ 20 ನಿಮಿಷಗಳ  ಗುಣಮಟ್ಟದ ಸಮಯ ಮೀಸಲಿಡುವುದು…. ಈ ರೀತಿಯ ಪ್ಲಾನ್‌ ಗಳನ್ನು ಮಾಡಿದಾಗ ಆ ದಿನವನ್ನು ನೆಮ್ಮದಿಯಾಗಿ ಗೆದ್ದಂತೆಯೇ!

 

ಎರಡನೆಯದಾಗಿ  60–20–10 ನಿಯಮವನ್ನು ಅನುಸರಿಸಿ

ನಿಮ್ಮ ದಿನವನ್ನು ಅನುಪಾತದಲ್ಲಿ ಹಂಚಿರಿ, 60% → ಮುಖ್ಯ ಕೆಲಸಗಳಿಗೆ, 20% → ರೂಟೀನ್ ಕೆಲಸಗಳಿಗೆ, 10% → ತುರ್ತು/ಅನಿರೀಕ್ಷಿತ ಕೆಲಸಗಳಿಗೆ ವಿನಿಯೋಗಿಸುವುದರಿಂದ

ದಿನಚರಿಯಲ್ಲಿ ಅವ್ಯವಸ್ಥೆ ಕಡಿಮೆಯಾಗುತ್ತದೆ.

 

10 ನಿಮಿಷದ ದಿನದ ಪ್ಲಾನಿಂಗ್

ಪ್ರತಿದಿನದ  ಬೆಳಗ್ಗೆ ಅಥವಾ ರಾತ್ರಿ:  ಏನು ಮಾಡಬೇಕು? ಯಾವುದನ್ನು ಮಾಡಲೇಬೇಕು?

ಏನು ಮಾಡಿದರೆ  ದಿನ ಹೆಚ್ಚು ಅರ್ಥಪೂರ್ಣವಾಗುತ್ತದೆ? ಎಂಬುದನ್ನು ಪ್ಲಾನ್‌ ಮಾಡಿ.

10 ನಿಮಿಷವೇ ಪೂರ್ಣ ದಿನವನ್ನು ವ್ಯವಸ್ಥಿತವಾಗಿ ನಿಯಂತ್ರಣದಲ್ಲಿ ಇಡುತ್ತದೆ.

 

ಸಣ್ಣ ಸುಧಾರಣೆ ದೊಡ್ಡ ಫಲಿತಾಂಶ

3. “ಸಣ್ಣ ಪ್ಲಾನ್ದೊಡ್ಡ ಫಲಿತಾಂಶಆಗುವ ವೈಜ್ಞಾನಿಕ ಕಾರಣ

ಸ್ಪಷ್ಟ ಗುರಿಗಳು ಯಾವಾಗಲೂ  ಕಡಿಮೆ ಸ್ಟ್ರೆಸ್ ನೀಡುತ್ತವೆ.

ಸಣ್ಣ ಕಾರ್ಯಗಳನ್ನು ಮುಗಿಸಿದಾಗ ದೊರೆಯುವ ನೆಮ್ಮದಿಯಿಂದ  ಮೆದುಳಿನಲ್ಲಿ ಡೋಪಮೈನ್‌  ಬಿಡುಗಡೆ  ಆಗುತ್ತದೆ. ಇದರಿಂದ  Motivation ಹೆಚ್ಚಳವಾಗಿ ಸಣ್ಣ ಸಣ್ಣ ಪ್ಲಾನ್‌ ಗಳನ್ನು ಗೆಲ್ಲುವಲ್ಲಿ ಉತ್ಸಾಹ ಹೆಚ್ಚುತ್ತದೆ.

ಈ ದಿನನಿತ್ಯದ ಗೆಲುವುಗಳು ದೊಡ್ಡ ಗುರಿಯಲ್ಲಿ ಸಿಗುವ ಯಶಸ್ಸನ್ನು ಪ್ರೆಡಿಕ್ಟ್‌ ಮಾಡಿಬಿಡುತ್ತವೆ.( Mind rewires itself to succeed)

ಮತ್ತು ಪ್ಲಾನಿಂಗ್‌ ನ  ನಿತ್ಯದ  ಅಭ್ಯಾಸಗಳನ್ನು ಸ್ಥಿರಗೊಳಿಸುತ್ತದೆ.
Cue → Routine → Reward → Repeat.

ಪ್ರತಿಯೊಂದು ಸಣ್ಣ ಬದಲಾವಣೆಯೂ ದೇಹದ ಭವಿಷ್ಯವನ್ನು ರೂಪಿಸುತ್ತದೆ. 👇

https://capturingdaysoflife.blogspot.com/2025/04/blog-post_25.html 

ದಿನದ ಇಪ್ಪತ್ನಾಲ್ಕು ಗಂಟೆಗಳನ್ನು  ಹೇಗೆ ಬಳಸಬೇಕು ಎಂದು ತಿಳಿದಿರುವುದು ಯೋಜನೆ ಮಾಡುವಷ್ಟೆ ಮುಖ್ಯ. ಇದು ಕೆಲಸ ಮಾಡುವ ಮುನ್ನವೇ ಅರ್ಧ ಗೆಲುವು ದೊರಕ್ಕಿದ್ದಕ್ಕೆ ಸಮ.
ಯಾವ ಕೆಲಸ ಮೊದಲಿಗೆ? ಯಾವುದಕ್ಕೆ ಹೆಚ್ಚು ಆದ್ಯತೆ? ಯಾವುದು ಸಮಯ ವ್ಯಯ ಮಾಡುವ ವಿಷಯ?  ಗಳಿಗೆ ಸಂಬಂಧಿಸಿದ ಸಣ್ಣ ಪ್ಲಾನ್ ಇವೆಲ್ಲವನ್ನು ಸ್ಪಷ್ಟಗೊಳಿಸುತ್ತದೆ.

ಇಂದು ಏನು ಮಾಡಬೇಕು?” ಎಂದು ತಿಳಿಯದ ಗೊಂದಲವೇ  ಒತ್ತಡದ ಮೂಲ. ಹಾಗಾಗಿ ಯಾವುದು ಮಾಡಬೇಕು ಎಂದು  ಪ್ಲಾನ್ ಮಾಡುತ್ತಿದ್ದಂತೆಯೇ   ಭಾರ ಅರ್ಧಕ್ಕೆ ಇಳಿಯುತ್ತದೆ.

ಒಮ್ಮೆ ದಿನವು ಪ್ಲಾನ್‌ ಪ್ರಕಾರ ಸರಿಯಾಗಿ ಆರಂಭವಾದರೆ ಉಳಿದ ದಿನವೂ ಪರಿಣಾಮಕಾರಿಯಾಗಿ ಸಾಗುತ್ತದೆ. 1 ಸಣ್ಣ ಕೆಲಸ ಯಶಸ್ವಿಯಾಗಿ  ಮುಗಿದರೆ 2ನೇ ಕೆಲಸವೂ ಸ್ವಯಂ ಪ್ರೇರಣೆಯಿಂದ ಆಗುತ್ತದೆ.

ದೊಡ್ಡ ಗುರಿಗಳೆಡೆಗೆ  ಲಕ್ಷ್ಯವಿಟ್ಟು ಮುನ್ನಡೆಯುವಾಗ, ಪ್ರಾರಂಭದಲ್ಲಿರುವ ಉತ್ಸಾಹ ಎನರ್ಜಿ ಬರುಬರುತ್ತಾ ಕಡಿಮೆಯಾಗಿ, ನಮ್ಮನ್ನು ಕೆಲವೇ ದಿನಗಳಲ್ಲಿ ಬೋರ್ ಮಾಡಬಹುದು.
ಆದರೆ ಪ್ಲಾನಿಂಗ್‌ ನೊಂದಿಗೆ ಪ್ರಾರಂಭಿಸುವ ಸಣ್ಣ ಸಣ್ಣ  ಹೆಜ್ಜೆಗಳು ನಮಗೆ ದಿನಕ್ಕೆ ಸಾಕಾಗುವಷ್ಟು ಚೈತನ್ಯ  ನೀಡಿ, ನಿರಂತರ ಶಿಸ್ತನ್ನು ಚಲಾಯಿಸುತ್ತವೆ.

ದಿನನಿತ್ಯದ ಯೋಜನೆಯಿಂದ ಯಶಸ್ಸು

ಈ ರೀತಿಯ  ಪ್ರತಿದಿನದ ಯೋಜನೆ ಸಹಿತ ಜೀವನಾಭ್ಯಸದಿಂದ:

ಮಾಡಬೇಕಾದ  ಕೆಲಸಗಳಲ್ಲಿ ನಿಯಂತ್ರಣವಿರುತ್ತದೆ.
ಈ ರೀತಿಯ ಪ್ಲಾನ್ಗಳು ಸಮಯ ಸದುಪಯೋಗವಾಗುವಲ್ಲಿ ಸಹಕಾರಿಯಾಗುತ್ತವೆ.
ಸಣ್ಣ ಪ್ಲಾನ್‌ ಗಳಿಂದಾಗುವ ಉತ್ತಮ ಅಭ್ಯಾಸಗಳಲ್ಲಿ  ನೇರ ಏರಿಕೆ  ಆಗುತ್ತದೆ.
ಸಂಬಂಧಗಳು, ಆರೋಗ್ಯ, ಹಣಕಾಸು ಎಲ್ಲಾ ಕ್ಷೇತ್ರಗಳು ತಂತಾನೆ ಉತ್ತಮವಾಗುತ್ತವೆ.
ಮುಖ್ಯವಾಗಿ ಸಣ್ಣ ಸಣ್ಣ ಪ್ಲಾನ್‌ ಗಳಿಂದ ದೊರೆಯುವ ಗೆಲುವುಗಳಿಂದ ಆತ್ಮವಿಶ್ವಾಸ & ಮನಶಾಂತಿ ಹೆಚ್ಚಳವಾಗುತ್ತವೆ.

ದಿನಕ್ಕೆ ಸಣ್ಣ ಪ್ಲಾನ್ = ಮನಸ್ಸಿಗೆ ದೊಡ್ಡ ನೆಮ್ಮದಿ.

ಆರೋಗ್ಯಕರ ಜೀವನ ಶೈಲಿ👇

https://capturingdaysoflife.blogspot.com/2025/08/blog-post_24.html 

🔹 ಸಣ್ಣ ಸಣ್ಣ  ಪ್ಲಾನ್ ಗಳನ್ನು  ಹೇಗೆ ರಚಿಸುವುದು (The 5-Minute Formula)

ಒತ್ತಡದಿಂದ, ಸಮಯ ಲೆಕ್ಕಿಸದೇ  ಪೆನ್‌ , ಪುಸ್ತಕ, ಡೈರಿ, ನೋಟ್‌ ಬುಕ್‌ ಗಳಲ್ಲಿ ಗುರುತು ಹಾಕಿ ಪದೆ ಪದೆ ನೋಡವಂತಹ, ಮನನ ಮಾಡುವಂತಹದ್ದನ್ನು  ಪ್ಲಾನ್‌  ಮಾಡುವುದು ಎನ್ನುವುದಿಲ್ಲ.
ಕೇವಲ 5 ನಿಮಿಷ ಸಾಕು ದಿನಕ್ಕೆ ಬೇಕಾದ ಪ್ಲಾನ್‌ ಮಾಡಲು. ಡೈರಿಯಲ್ಲಿ ಸರಳವಾಗಿ  ಗುರುತು ಹಾಕಿ ಅದನ್ನು ಆ ಪ್ರಕಾರ ಕಾರ್ಯಗತಗೊಳಿಸಿದರೆ ಸಾಕು ಯಶಸ್ಸು ಪಡೆಯಲು.

ಮೊದಲು  3 ಮುಖ್ಯ ಕೆಲಸಗಳು (Top Priorities) ಯಾವುವೆಂದು ಪಟ್ಟಿ ಮಾಡಬೇಕು. ಆ ದಿನದ ಕೆಲಸಗಳನ್ನು ಹೊರತುಪಡಿಸಿ, ಗುರಿಯೆಡೆಗೆ  ಸಾಗುವ ಆಯ್ಕೆಗಳು ಆಗಿರಬೇಕು.

  • ಇಂದು ಮುಖ್ಯವಾಗಿ ಮಾಡಲೇಬೇಕಾದದ್ದು,
  • ಬಾಕಿ ಇಟ್ಟಿರುವುದು,
  • ಮತ್ತು ಗುರಿಯ ಕಡೆಗೆ ಅವಶ್ಯವಿರುವ ಕೆಲಸ.

② 1 ವೈಯಕ್ತಿಕ ಗುರಿ (Personal Growth)

ವೃತ್ತಿಯಲ್ಲಿ ಗಳಿಸುವ ಯಶಸ್ಸಿನಷ್ಟೇ ಮುಖ್ಯ,  ವೈಯಕ್ತಿಕ ಬದುಕಿನ ಯಶಸ್ಸು.  ಒಂದು ವೇಳೆ ವೃತ್ತಿ ಬದುಕಿನಲ್ಲಿ ಸೋತರೆ ಮತ್ತೆ ಪ್ರಯತ್ನಿಸಿ ಗೆಲ್ಲಬಹುದು. ಆದರೆ ವ್ಯಕ್ತಿಗತವಾಗಿ ಉತ್ತಮ ಚಾರಿತ್ರ್ಯವನ್ನು ಗಳಿಸುವಲ್ಲಿ ಸೋತರೆ, ಬದುಕಿಗೆ, ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗಬೇಕಾದಿತು, ಮತ್ತೆ ಎದ್ದು ನಿಲ್ಲಲು ಸಹ ಕಷ್ಟವಾಗಬಹುದು. ಆದ್ದರಿಂದ ಪ್ಲಾನ್‌ ಮಾಡುವ ಸಮಯದಲ್ಲಿ ವೈಯಕ್ತಿಕ ಗುರಿಗಳು ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೂ ಸ್ಪಷ್ಟವಾಗಿ ಪ್ಲಾನ್‌ ಮಾಡುವುದು ತಿಳಿದಿರಲಿ. ಇದರಲ್ಲಿ ಉತ್ತಮ ವ್ಯಕ್ತಿಗಳು ಬರೆದಿರುವ ಪುಸ್ತಕಗಳು ಅಥವಾ ಜ್ಞಾನಾರ್ಜನೆಗೆ ಸಂಬಂಧಿಸಿದ ಪುಸ್ತಕಗಳ ಓದು, ವ್ಯಾಯಾಮ, ಧ್ಯಾನ, ಹೊಸ ಕೌಶಲ್ಯ ಕಲಿಕೆಗಳ ಕಡೆಗೆ ದಿನಕ್ಕೆ  ಇಂತಿಷ್ಟು  ನಿಮಿಷಗಳ ಸಮಯ ಎಂದು ಪ್ಲಾನ್‌ ಮಾಡಿದಾಗ ವೈಯಕ್ತಿಕ ಗುರಿಗಳು ಸರಾಗವಾಗಿ  ಏರಿಕೆಯಾಗುತ್ತವೆ

③ 10-10-10 ವಿಧಾನ

  • 10 ನಿಮಿಷಕಲಿಕೆ
  • 10 ನಿಮಿಷಆರೋಗ್ಯ
  • 10 ನಿಮಿಷಮನಸ್ಸಿನ ನೆಮ್ಮದಿ

“Ready for the day?” ಪ್ರಶ್ನೆಯನ್ನು ಬೆಳಗ್ಗೆ ಎದ್ದಾಗ  ನಿಮ್ಮನ್ನು ನೀವು ಕೇಳಿಕೊಳ್ಳಿ:

  • ಇಂದು ನಾನು ಏನು ಸಾಧಿಸಬಹುದು?
  • ಇಂದು ಮಾಡುವ ಯಾವ ಕೆಲಸ ನನಗೆ ಸಂತೋಷ ನೀಡುತ್ತದೆ? ಮತ್ತು ಉತ್ಸಾಹವನ್ನು ಹೆಚ್ಚಿಸಿ, ಪ್ರೇರಣೆ ನೀಡುತ್ತದೆ?

ಮತ್ತು ಯಾವುದು ಆ  ಒಂದು ಸಣ್ಣ ಗೆಲುವು? ನೀಡುತ್ತದೆ ಎಂದು ವಿಶ್ಲೇಷಿಸಿ….

ಪ್ಲಾನಿಂಗ್‌ನಿಂದ ಮನಶಾಂತಿ

ಮಾದರಿಯಾಗಿ ಬಳಸಬಹುದಾದ ಸರಳ “Daily Planner Template”

📝 ಬೆಳಗ್ಗೆ (Morning Focus).

ಇಂದು ಮಾಡಬೇಕಾದ  3 ಪ್ರಮುಖ ಕೆಲಸಗಳನ್ನು ಗುರುತು ಮಾಡಿಕೊಳ್ಳಿ.

📝 ಮಧ್ಯಾಹ್ನ (Progress Check)

ಆಗಬೇಕಾದ ಕೆಲಸದಲ್ಲಿ 60% ಕೆಲಸ ಮುಗಿದಿದೆಯೆ? ಎಂದು ಕ್ರಾಸ್‌ ಚೆಕ್‌ ಮಾಡಿಕೊಳ್ಳಿ. ಮತ್ತು ಅದರಲ್ಲಿ ಯಾವುದಾದರೂ ತಪ್ಪಾಗಿದೆಯೇ?.....ಏನು ತಿದ್ದುಪಡಿಯನ್ನು ಮಾಡಬಹುದು? ಗುರುತು ಹಾಕಿ.

📝 ಸಂಜೆ (Reflection)

ಇಂದು  ಸಿಕ್ಕ 1 ಸಣ್ಣ ಗೆಲುವು..…. ಮತ್ತು ಅಂದಿನ ಯೋಜನೆಯು ಯಶಸ್ವಿಯಾಗಿ ಮುಗಿಸಿದ  ಬಗ್ಗೆ ಕೃತಜ್ಞತೆ ಹೊಂದಿರಿ. ಮತ್ತು ಬಾಕಿ ಇರುವ ಕೆಲಸದಲ್ಲಿ ನಾಳೆಗೆ ಏನು  ಸುಧಾರಣೆ ಮಾಡಬಹುದು ಎಂಬುದನ್ನು ಆಲೋಚಿಸಿಕೊಳ್ಳಿ. ಇಲ್ಲವೇ ಗುರುತು ಮಾಡಿರಿ.

ಮೂರು ಹಂತಗಳು ನಿಮ್ಮ ದಿನವನ್ನುಯಶಸ್ವಿ ಜೀವನಕ್ಕೆಪರಿವರ್ತಿಸುತ್ತವೆ. 

 ಉಪಯುಕ್ತ ಸಲಹೆಗಳಿಗಾಗಿ ಇವುಗಳನ್ನೂ ಓದಿ.

  1. Atomic Habits – James Clear (1% Improvement Concept)
    👉 https://jamesclear.com/atomic-habits

  2. Psychology of Daily Planning – Psychology Today
    👉 https://www.psychologytoday.com/us/basics/time-management

  3. Dopamine & Motivation (Scientific Insight)
    👉 https://www.healthline.com/health/dopamine

🌱 ಸಣ್ಣ ಪ್ಲಾನ್‌ ಗಳಿಂದ ದೊಡ್ಡ ಗುರಿಯನ್ನು 100 ಸಣ್ಣ ಸಣ್ಣ ಭಾಗಗಳಾಗಿ ಒಡೆದರೆ, ಗುರಿಸೇರಲು ಸುಲಭವಾದ ಕ್ರಮಗಳು ದೊರೆಯುತ್ತವೆ.

 ಈ ರೀತಿಯ ಸಣ್ಣ ಸಣ್ಣ ಪ್ಲಾನ್‌ ಗಳಿಂದ ದೊರೆಯುವ ಸಣ್ಣ ಸಣ್ಣ ಗೆಲುವುಗಳು, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.
ಕಾಲಮಿತಿಯಲ್ಲಿ ಕೆಲಸವನ್ನು ಮುಗಿಸಿದಾಗ, ಮಾಡಬೇಕಾದ ಕೆಲಸಗಳ ಚೆಕ್ಲಿಸ್ಟ್ ಟಿಕ್ ಮಾಡಿದಾಗ,
ದಿನವನ್ನು ನಿಯಂತ್ರಣದಲ್ಲಿಟ್ಟಾ, ಗುರಿಯೆಡೆಗೆ ನಡೆಯುವ ಹಾದಿಯಲ್ಲಿ ಮನಸ್ಸಿಗೆ ಶಕ್ತಿ ತುಂಬುತ್ತವೆ.

🌱 ನಮ್ಮ ಜೀವನದಲ್ಲಿ ಬದಲಾವಣೆ ತರುವುದು ಶಿಸ್ತು. ಯೋಜಿಸಿದ ಸಣ್ಣ ಪ್ಲಾನ್ ಶಿಸ್ತನ್ನು ಸ್ವಾಭಾವಿಕವಾಗಿ ರೂಢಿಸುತ್ತದೆ. ಇದರಿಂದ ದಿನದ ಹೊಂದಾಣಿಕೆಯ ಶಿಸ್ತು ಪ್ರತಿದಿನ ಹಂತ ಹಂತವಾಗಿ ಬೆಳವಣಿಗೆ ಕಾಣಲು ಸಹಾಯವಾಗುತ್ತದೆ.

🌱 ಯೋಜಿಸಲು ಪ್ರಾರಂಭಿಸಿದ ಕೆಲವೇ ವಾರಗಳಲ್ಲಿ ಕೆಲಸದಲ್ಲಿನ  ವೇಗ

ಮನಸ್ಸಿನ ಸ್ಪಷ್ಟತೆ, ಆತ್ಮವಿಶ್ವಾಸ, ಕಡಿಮೆ ಒತ್ತಡ, ಉತ್ಪಾದಕತೆ ಹೆಚ್ಚಾಗುವುದನ್ನು ನೀವು ಕಾಣುತ್ತೀರಿ.

ನ್ಯಾಯ ಮೂರ್ತಿಗಳಿಗೆ ಮಾನಸಿಕ ಆರೋಗ್ಯ👇

 https://capturingdaysoflife.blogspot.com/2025/07/25.html 

 

ಒಮ್ಮೆಲೇ ದೊಡ್ಡ ಕೆಲಸ ಮಾಡಿದಾಗಯಶಸ್ಸು ಬರೋದಿಲ್ಲ. ಅದು ಪ್ರತಿದಿನ ಮಾಡುವ ಸಣ್ಣ ಕೆಲಸಗಳ ಒಟ್ಟು ಫಲ. ಹಾಗಾಗಿ  ನೀವು ಇಂದು ಆರಂಭಿಸಬೇಕಾದದ್ದು ಒಂದೇ ಒಂದು:
👉 ನಿಮ್ಮ ದಿನದ ಸಣ್ಣ ಯೋಜನೆ. ಯಶಸ್ಸಿಗೆ ಇದೇ ದೊಡ್ಡ ರಹಸ್ಯ.
Top of Formಪ್ರತಿಯೊಂದು ದಿನವು ಹೊಸ ಅವಕಾಶ. 10 ನಿಮಿಷ  ಕುಳಿತು, ನಿಮ್ಮ ಗುರಿ, ಕೆಲಸ, ಆದ್ಯತೆಗಳನ್ನು ಸಮವಾಗಿ ಹೊಂದಿಸಿ. ಇದು ನಿಮ್ಮ ಮನಸ್ಸಿಗೆ ಶಾಂತಿ, ಕೆಲಸಕ್ಕೆ ಸ್ಪಷ್ಟತೆ, ಮತ್ತು ಜೀವನಕ್ಕೆ ದಿಕ್ಕು ನೀಡುತ್ತದೆ.

ಇನ್ನು ಮುಂದೆ ದೊಡ್ಡ ಗುರಿಗಳೆಡೆಗೆ ಭಯಪಡುವ ಅಗತ್ಯವಿಲ್ಲ. ಅದು ಸಣ್ಣ ಪ್ಲಾನ್ಗಳ ಸರಣಿ ಮಾತ್ರ.

ಸಣ್ಣದಾಗಿ ಆರಂಭಿಸಿ. ನಿಯಮಿತವಾಗಿ ಮುಂದುವರಿಸಿ. ದೊಡ್ಡ ಫಲಿತಾಂಶಗಳನ್ನು ಹೆಮ್ಮೆಯಿಂದ ಅನುಭವಿಸಿ!

Bottom of Form

 


ಧನ್ಯವಾದಗಳು……..🌷🌷🌷🌷

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......