ಸೆಲ್ಫ್ ಕೇರ್‌ನಿಂದ ಒಬ್ಬ ವ್ಯಕ್ತಿಯು ಒಳಗೆ–ಹೊರಗೆ ಹೇಗೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು!!?????
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ:ನಾಗಲಕ್ಷ್ಮಿ ಕೆ.ಎನ್ ದಿನಾಂಕ: ೧೫.೧೧.೨೦೨೫.
🌿 ಸೆಲ್ಫ್ ಕೇರ್
ಪಂಚಭೂತಗಳಿಂದಾದ
ಈ ದೇಹ ಮತ್ತು ಮನಸ್ಸಿಗೆ ಆರೈಕೆಯೆಂಬುದು ಒಂದು ಮೂಲಭೂತ ಹಕ್ಕು,
ಇದು ಇತ್ತೀಚಿನ ದಿನಗಳಲ್ಲಿ ಸೆಲ್ಫ ಕೇರ್ ಎಂಬ ಶೋಕಿ
ಮತ್ತು ಐಷಾರಾಮಿಯ ಪ್ರತಿಬಿಂಬದಂತೆ ಟ್ರೆಂಡ್ ಆಗುತ್ತಿದೆ.
ಆದರೆ ಇಲ್ಲಿ
“ನಮ್ಮನ್ನು ನಾವು ಪ್ರೀತಿಸುವಷ್ಟು ಬೇರೆ ಯಾರೂ ಪ್ರೀತಿಸಲಾರರು” ಎಂಬ ಸತ್ಯವನ್ನು ಮರೆತಂತೆ ಕಾಣುತ್ತದೆ.
ಯಶಸ್ಸಿನ
ಬೆನ್ನಟ್ಟಿ ಓಡುತ್ತಿರುವ ಜೀವನದಲ್ಲಿ
ನಾವು ಬೇರೆ ಎಲ್ಲದರ ಬಗ್ಗೆ
ಯೋಚಿಸುತ್ತಾ , ಕೆಲಸ, ಮನೆ, ಕುಟುಂಬ, ಗುರಿಗಳನ್ನು ನಿಭಾಯಿಸುವ ಭರದಲ್ಲಿ ನಮ್ಮನ್ನೇ ನಾವು
ಮರೆತು ಮುಂದುವರೆದು ಬಿಡುತ್ತೇವೆ, ಆಗ
ನಮ್ಮ ದೇಹ, ಮನಸ್ಸು, ಮತ್ತು ಭಾವನೆಗಳು ತಂತಾನೆ
ಹಿಂದಿನ ಸ್ಥಾನಕ್ಕೆ ಸರಿದು ಬಿಡುತ್ತವೆ.
ಆದರೆ ನೆನಪಿಡಿ, ಸೆಲ್ಫ್ ಕೇರ್ ಎನ್ನುವುದು ಸ್ವಾರ್ಥವಲ್ಲ; ಅದು ಸಮತೋಲನವಾದ, ಸಂತೋಷ
ತುಂಬಿದ, ಆರೋಗ್ಯಕರ
ಜೀವನ ನಡೆಸಲು ಅತ್ಯವಶ್ಯಕವಾದ ಮೂಲಧ್ರುವ.
🧘♀️ಸೆಲ್ಫ್ ಕೇರ್ ಎಂದರೆ, ದೇಹ,
ಮನಸ್ಸು ಮತ್ತು ಆತ್ಮಕ್ಕೆ ಅಗತ್ಯವಾದ ಕಾಳಜಿಯನ್ನು ವಹಿಸುವುದು.
ಇದು
ಯಾವುದೇ ಐಷಾರಾಮಿ ಸ್ಪಾ,
ಅತಿಹೆಚ್ಚು ಖರ್ಚು ಬೇಡುವ ದೊಡ್ಡ
ಬದಲಾವಣೆಯ ಹಾದಿಯಲ್ಲ. ಪ್ರತಿದಿನ ನಮಗೆ ನಮ್ಮಿಂದಲೇ ಸಿಗುವ
ಸಣ್ಣ ಸಂತೋಷಗಳ
ಒಟ್ಟುಗೂಡುವಿಕೆ.
💚 ಸೆಲ್ಫ್ ಕೇರ್ ನ ಅನಿವಾರ್ಯತೆ
ಮಾನಸಿಕ
ಕುಶಲೋಪರಿಯ ಮೇಲೆ ಗಮನ ವಹಿಸುವುದರಿಂದ, ಹೊರಗಿನಿಂದ ಬರುವ ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು.
ಈ ನಿರಂತರ ಪ್ರಕ್ರಿಯೆಯಿಂದ ಭಾವನೆಗಳ ಮೇಲಿನ ಹಿಡಿತವು ಬಲವಾಗುತ್ತದೆ.
ದೇಹ
ಮತ್ತು ಮನಸ್ಸುಗಳು ನಿರಂತರ ದುಡಿಮೆ ಮತ್ತು ಒತ್ತಡಗಳಿಂದ ಬಳಲಿದಾಗ, ದೇಹ ವಿಶ್ರಾಂತಿ ಬಯಸುತ್ತದೆ. ಆ ಸಮಯದಲ್ಲಿ ಸೆಲ್ಫ್ ಕೇರ್ ನ ಭಾಗವಾದ ಉತ್ತಮ ನಿದ್ರೆಯಿಂದ ದೇಹ ವಿಶ್ರಾಂತಿ ಪಡೆದಾಗ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಸಂಬಂಧಗಳು ಸುಧಾರಣೆಯಾಗಲು, ಒಳಗಿನಿಂದ ಶಾಂತಿಯನ್ನು ಹೊಂದಿದ್ದರೆ, ಹೊರಗಿನ ಸಂಬಂಧಗಳೊಂದಿಗೆ ಸಾಮರಸ್ಯವನ್ನು ಸುಧಾರಿಸಬಹುದು. ಒಳಗಿನ ಶಾಂತತೆಯನ್ನು ತುಂಬುವುದು ಈ ಸೆಲ್ಫ್ ಕೇರ್.
ಆಂತರಿಕ
ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಸೆಲ್ಫ್
ಕೇರ್ ‘Self-worth’ ಅನ್ನು
ಜಾಗೃತಗೊಳಿಸುತ್ತದೆ.
🌼 ಸೆಲ್ಫ್ ಕೇರ್‌ನ ಆಯಾಮಗಳು
ದೇಹದ
ಕಾಳಜಿ (Physical
Self-Care)
- ಸಾಕಷ್ಟು
ನಿದ್ದೆ.
- ಪೌಷ್ಠಿಕ
ಆಹಾರ.
- ನಿತ್ಯ
20–30 ನಿಮಿಷ ವಾಕ್.
- ಸಾಕಷ್ಟು
ನೀರು ಕುಡಿಯುವುದು.
- ದೇಹಕ್ಕೆ
ಅಗತ್ಯವಾದ ವಿಶ್ರಾಂತಿಯನ್ನು ಕೊಡುವುದು.
ಮನಸ್ಸಿನ
ಕಾಳಜಿ (Mental
Self-Care)
ದಿನಕ್ಕೆ 10 ನಿಮಿಷ ಧ್ಯಾನ, ಒತ್ತಡವನ್ನು ಕಡಿಮೆ ಮಾಡುವ ಹವ್ಯಾಸಗಳು. ಅಗತ್ಯವಿಲ್ಲದ್ದಕ್ಕೆ ‘No’ ಎನ್ನುವ ಅಭ್ಯಾಸ, ಸಾಮಾಜಿಕ ಮಾಧ್ಯಮದ ಡಿಟಾಕ್ಸ್, ಹೊಸ ಕಲಿಕೆಯಲ್ಲಿ ಆಸಕ್ತಿ. ಇವೆಲ್ಲವೂ ಮಾನಸಿಕ ಆರೋಗ್ಯಕ್ಕೆ ಬಹು ಉಪಯೋಗಿಗಳು.
ಭಾವನಾತ್ಮಕ
ಕಾಳಜಿ
(Emotional Self-Care)
ಭಾವನೆಗಳನ್ನು ಮೂಲೆಗುಂಪಾಗಿಸದೆ, ಅವನ್ನು ಗುರುತಿಸುವುದು ಮತ್ತು ಅವುಗಳನ್ನು ಹಂಚಿಕೊಳ್ಳಲು, ಮತ್ತು ಅಭಿಪ್ರಾಯ ಸಂಗ್ರಹಿಸಲು ನಂಬಿಕೆಯ ವ್ಯಕ್ತಿಯ ಸಂಗ ಮಾಡುವುದು. ಮತ್ತು ದಿನದಲ್ಲಿ 3 ವಿಷಯಕ್ಕೆ ಧನ್ಯವಾದಗಳನ್ನು ಬರೆಯುವುದು ಮತ್ತು ಅಪರಾಧಿ ಭಾವನೆಗಳಿಂದ ಹೊರಬರುವುದು ಭಾವನೆಗಳ ಕಾಳಜಿಯನ್ನು ವಹಿಸುತ್ತವೆ.
ಸಾಮಾಜಿಕ
ಕಾಳಜಿ (Social
Self-Care)
ನಿಜವಾದ ಸಂಬಂಧಗಳನ್ನು ಮರ್ಯಾದೆಯಿಂದ ಗೌರವಿಸುವುದು. ನಮ್ಮನ್ನು ದುರ್ಬಲಗೊಳಿಸುವ ಜನರಿಂದ ದೂರವಿರುವುದು. ಉತ್ತಮ ಗುಣವುಳ್ಳ ಸ್ನೇಹಿತರ ಸಂಗಕ್ಕೆ ಆದ್ಯತೆ ಇವು ಪ್ರತಿಯೊಬ್ಬರಿಗೂ ಇರಬೇಕಾದ ಸಾಮಾಜಿಕ ಕಾಳಜಿಯ ಅಂಶಗಳು.
ಆತ್ಮಶಕ್ತಿಯ
ಕಾಳಜಿ (Spiritual Self-Care)
ನಿತ್ಯ ಮತ್ತು ನಿರಂತರ ಯೋಗ ಮತ್ತು ಧ್ಯಾನದ ಅಭ್ಯಾಸ. ಪ್ರಕೃತಿಯೊಂದಿಗೆ ಏಕಾಂತದಲ್ಲಿ ಕಳೆಯುವುದು ಮತ್ತು ಒಳಗಿನ ಶಾಂತಿಯನ್ನು ಆಲಿಸುವುದು.
🌅 ಬೆಳಿಗ್ಗೆ 5 ನಿಮಿಷ
ಆಳವಾದ ಉಸಿರಾಟಾಭ್ಯಾಸ.
📒
ಒಂದು ಪುಟ ‘ಜರ್ನಲಿಂಗ್’ ಮಾಡುವುದು.
🥗
ಪೌಷ್ಠಿಕಯುಕ್ತ ಬ್ರೇಕ್ಫಾಸ್ಟ್ ಸೇವನೆ.
🚶♂️
20 ನಿಮಿಷ ಬಿರುಸು ನಡಿಗೆಯ ಅಭ್ಯಾಸ.
📵
1 ಗಂಟೆ ಮೊಬೈಲ್ ಡಿಟಾಕ್ಸ್.
😴
ರಾತ್ರಿ 7–8 ಗಂಟೆ ಆಳವಾದ ನಿದ್ದೆ.
🌙
ನಮ್ಮೊಳಗಿನ ನಮಗೆ ಒಂದು ಸಣ್ಣ ಪ್ರೋತ್ಸಾಹದ
ಮಾತು.
🌿 ಸೆಲ್ಫ್ ಕೇರ್ ಉತ್ತಮ
ವ್ಯಕ್ತಿಯಾಗಿ ರೂಪುಗೊಳ್ಳುವ ಆಂತರಿಕ ಯಾತ್ರೆ
ಜೀವನದಲ್ಲಿ
ದೊಡ್ಡ ದೊಡ್ಡ ಬದಲಾವಣೆಗಳು ಹೊರಗಿನಿಂದ ದತ್ತು ಪಡೆಯುವಂತಹ ವಿಷಯಗಳಲ್ಲ, ಅವು ಮೊದಲಿಗೆ
ನಮ್ಮ ಅಂತರಾಳದಲ್ಲಿಯೇ ಶುರುವಾಗುತ್ತವೆ.
ಆರೋಗ್ಯ,
ಆಲೋಚನೆಗಳು, ಭಾವನೆಗಳು, ನಡವಳಿಕೆಗಳು ಮತ್ತು
ಬದುಕಿನೆಡೆಗೆ ತೋರುವ ದೃಷ್ಟಿಕೋನ, ಈ ಎಲ್ಲವನ್ನು ಉತ್ತಮಗೊಳಿಸಲು ಒಂದು ಶಕ್ತಿಯುತ
ಮೂಲಭೂತ ಕೌಶಲ್ಯ ಸಹಾಯ ಮಾಡುತ್ತದೆ: ಅದೇ
ಸ್ವಯಂ
ಕಾಳಜಿ[ ಸೆಲ್ಫ್ ಕೇರ್
(Self-Care)].
ಸೆಲ್ಫ್
ಕೇರ್ ಎಂದರೆ ತಮ್ಮನ್ನು
ತಾವೇ ಪ್ರತಿದಿನ
ಮತ್ತೆ ಮತ್ತೆ ಉತ್ತಮಗೊಳಿಸಿಕೊಳ್ಳುವ ಜೀವನಶೈಲಿ.
ಧನಾತ್ಮಕ
ಆಲೋಚನೆಗಳನ್ನು ತುಂಬುತ್ತಾ, ದೇಹವನ್ನು ಬಲವಾಗಿ ಮತ್ತು ಶಿಸ್ತಿನಡಿಯಲ್ಲಿ ಹುರಿಗೊಳಿಸುತ್ತಾ,
ವ್ಯಕ್ತಿತ್ವವನ್ನು_self
reflection_ ಮೂಲಕ ಪರಿಪಕ್ವಗೊಳಿಸುವ ನಿರಂತರ ಅಭ್ಯಾಸ.
🌟 ಧನಾತ್ಮಕತೆ ಎಂದರೆ ಯಾವಾಗಲೂ ಖುಷಿಯಾಗಿರುವುದಲ್ಲ.ಬದಲಾಗಿ ಪ್ರತಿಕೂಲ
ಪರಿಸ್ಥಿತಿಯಲ್ಲೂ ಮನಸ್ಸನ್ನು ಸಮತೋಲನದಲ್ಲಿ ಹಿಡಿದಿಟ್ಟುಕೊಳ್ಳುವ ಬಲ..
ಪ್ರತಿದಿನ
ಬೆಳಗ್ಗೆ
ಏಳುವಾಗ 2–3 ನಿಮಿಷಗಳ ಕಾಲ, ಈ ದಿನವು ನನಗೆ ಶುಭಕರವಾಗಿರಲಿ,
ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಮನದಲ್ಲಿ ಜಪಿಸುವುದರಿಂದ, ಮಸ್ತಿಷ್ಕದಲ್ಲಿರುವ ನಕಾರಾತ್ಮಕ ಆಲೋಚನಾ ಮಾದರಿಗಳು ನಿಧಾನವಾಗಿ ಕತ್ತರಿಸಲ್ಪಡುತ್ತವೆ.
ಯಾವುದಾದರೂ
ಪ್ರತಿಕೂಲ ಪರಿಸ್ಥಿತಿಯಲ್ಲಿರುವಾಗ, ನಕಾರಾತ್ಮಕ
ಆಲೋಚನೆ ಬಂದರೆ, ಅದರಿಂದ ಹೊರತಾಗಿ ಸ್ವಯಂ ಪ್ರಶ್ನಿಸಿಕೊಳ್ಳಬೇಕು…
ಇಂದು ನಿಜವಾಗಿಯೂ ಅಷ್ಟು ಕೆಟ್ಟದ್ದಾಗಿದೆಯಾ??
ಈ ಪ್ರಶ್ನೆ ನಕಾರಾತ್ಮಕ ಅಲೆಗಳನ್ನು
ಅಲ್ಲಿಯೇ ತಡೆದುಬಿಡುತ್ತದೆ.
ರಾತ್ರಿ
ಮಲಗುವ ಮುನ್ನ ಅಂದು ಒಳ್ಳೆಯ ಪರಿಣಾಮ ಬೀರಿದ ಮೂರು
ಸಣ್ಣ ಸಂಗತಿಗಳನ್ನು ಬರೆದು ಅಥವಾ ಮನಸಾರೆ ಸ್ಮರಿಸುತ್ತಾ, ಕೃತಜ್ಞತೆಯನ್ನು
ತಿಳಿಸಿದರೆ, ಮನಸ್ಸು ನಿರಂತರ ಧನಾತ್ಮಕ ದಿಕ್ಕಿನಲ್ಲಿ ಕಾರ್ಯಗತವಾಗುತ್ತದೆ.
🌿 ದೇಹವು ಬಲವಾಗಿದ್ದಾಗ,
ಮನಸ್ಸು ಕೂಡ ಬಲವಾಗಿರುತ್ತದೆ. ಸಮಸ್ಯೆಗಳನ್ನು
ಎಡೆಮುರಿಕಟ್ಟಲು, ದೇಹ ಉಕ್ಕಿನಂತೆ
ಕಠಿಣವಾಗಿರಬೇಕು. ಮತ್ತು ಬದಲಾವಣೆಗಳಿಗೆ ಒಳಪಡುವ ಸಾಮರ್ಥ್ಯವಿರಬೇಕು.
ಇದಕ್ಕಾಗಿ ದೇಹಕ್ಕೆ ಸಾಕಷ್ಟು ವಿಶ್ರಾಂತಿಯ ಅವಶ್ಯಕತೆಯಿರುತ್ತದೆ.
ಹಾಗಾಗಿ
ಉಕ್ಕಿನಂತ ದೇಹಕ್ಕೆ ಪ್ರತಿ ದಿನ
7–8 ಗಂಟೆ ಗುಣಮಟ್ಟದ ನಿದ್ದೆ ಅತ್ಯವಶ್ಯಕ. ಈ ಸಮರ್ಪಕ ನಿದ್ದೆಯಿಂದ,, 🧠
ಮೂಳೆಗಳಿಗೆ ವಿಶ್ರಾಂತಿ,
💪
ದೇಹಕ್ಕೆ ಪುನಶ್ಚೇತನ, 😌
ಭಾವನೆಗಳ ಸಮತೋಲನ ಒದಗುತ್ತದೆ.
Walking, Yoga, Stretching, ಇತ್ಯಾದಿಗಳು ಯಾವುದಾದರೂ ಆಗಿರಲಿ ಪ್ರತಿ ದಿನ 20–30 ನಿಮಿಷಗಳವರೆಗೆ ಅಭ್ಯಾಸ ಮಾಡುವುದು,
ದೇಹಕ್ಕೆ
“ನಾನು ಯಾವುದೇ ಅಡೆತಡೆಯ
ಎದುರಿಗೆ ನಿಲ್ಲಬಹುದಾದವನು” ಎಂಬ ಒಳನಂಬಿಕೆಯನ್ನು ಕೊಡುತ್ತದೆ.
ಶರೀರಕ್ಕೆ
ಶಕ್ತಿ ಕೊಡದ junk food ನ್ನು ಹೊರತುಪಡಿಸಿ, ತಾಜಾ ಆಹಾರವನ್ನು ತೃಪ್ತಿಯಾಗುವಷ್ಟು ಸೇವಿಸಬೇಕು,
ದೇಹಕ್ಕೆ ಶಕ್ತಿಯುತ
ಇಂಧನ ನೀಡುವುದು Self-careನ ಮೂಲ ಸಿದ್ಧಾಂತಗಳಲ್ಲಿ
ಒಂದಾಗಿದೆ.
ಉಸಿರಾಟದ
ವ್ಯಾಯಾಮವು,
ಒತ್ತಡದ ಮಧ್ಯೆಯೂ, ದೇಹ ಮತ್ತು ಮನಸ್ಸು ಎರಡನ್ನೂ ಹತೋಟಿಯಲ್ಲಿಡಲು,
ದೇಹ ಮತ್ತು ಮಸ್ತಿಷ್ಕಕ್ಕೆ ಶಿಸ್ತನ್ನು
ಕಲಿಸುತ್ತದೆ.
🌼 Self-Reflection Ability, ಸ್ವವಿಮರ್ಶೆ
ಎಂದರೆ ತಪ್ಪು
ಹುಡುಕುವುದು ಎಂದಲ್ಲ, ತನ್ನನ್ನು
ತಾನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಪ್ರಕ್ರಿಯೆ.
ದಿನಕ್ಕೆ
5 ನಿಮಿಷವಾದರೂ, ಜರ್ನಲಿಂಗ್
ಮೂಲಕ, ಭಾವನೆಗಳು, ಪ್ರತಿಕ್ರಿಯೆಗಳು,
ದಿನದ
ವರ್ತನೆ
ಎಲ್ಲವನ್ನೂ ಮನನ ಮಾಡಿಕೊಳ್ಳಿ. ಇದು
ವ್ಯಕ್ತಿತ್ವದ ಬೆಳವಣಿಗೆಗೆ ಅತ್ಯಂತ ಪರಿಣಾಮಕಾರಿ.
ಯಾವುದೇ
ಸಂದರ್ಭದಲ್ಲಿ ತಪ್ಪಾಗಿ ನಡೆದುಕೊಂಡಿದ್ದರೆ, “ನಾನು
ಯಾಕೆ ಆ ರೀತಿ ಪ್ರತಿಕ್ರಿಯಿಸಿದೆ?”
ಎಂದು ಪ್ರಶ್ನಿಸಿಕೊಳ್ಳುವುದು,
navel-gazing ಅಲ್ಲ… ಇದು
ಒಳ್ಳೆಯ ಬೆಳವಣಿಗೆ.
ವಿಮರ್ಶೆ
ಮಾಡುವಾಗ ಯಾವುದೇ ಒತ್ತಡವಿರಬಾರದು. ಇಲ್ಲಿ ಸ್ವ-ವಿಮರ್ಶೆ ಎಂದರೆ
ಬೆಳವಣಿಗೆ.
ಆದರೆ ಸ್ವಗತವಾಗಿ ತಪ್ಪುಹುಡುಕುವುದು
ಕುಗ್ಗುವಿಕೆಗೆ
ದಾರಿಯಾಗುತ್ತದೆ. ಈ ವಿಚಾರವನ್ನು ಅರಿತುಕೊಳ್ಳುವುದು
ಬಹಳ ಮುಖ್ಯ.
ತಿಂಗಳಿಗೆ
ಒಮ್ಮೆ, …..
🔹
ನನ್ನ ದೃಷ್ಟಿಕೋನ ಸುಧಾರಿಸಿದೆಯೇ?
🔹
ನನ್ನ ಸ್ವಭಾವದಲ್ಲಿ ಏನಾದರೂ ಅಸ್ಥಿರತೆ
ಕಾಡುತ್ತಿದೆಯೇ?
🔹
ನಾನು ಸಮತೋಲನದ
ವ್ಯಕ್ತಿಯಾಗುತ್ತಿದ್ದೇನೇಯೇ?
ಎಂಬ ಪ್ರಶ್ನೆಗಳ ಮೇಲೆ ಗಮನ ಹರಿಸಿ ನೋಡಿದಾಗ ಸೆಲ್ಫ್ ಕೇರ್ ಹೇಗೆ ಕೆಲಸ ಮಾಡುತ್ತಿದೆ ಎಂಬುದರ
ಅಂದಾಜು ಸಿಗುತ್ತದೆ.
✨ ಸೆಲ್ಫ್ ಕೇರ್
ನ ಮೂಲಕ ನಮ್ಮೊಳಗೆ ಒಂದು ಹೊಸ ಶಕ್ತಿ
ಬೆಳೆಯುತ್ತದೆ: ಅದೇ ಸ್ವಬುದ್ಧಿ ಸಾಮರ್ಥ್ಯದಿಂದ ಸ್ವತಃ
ಮುಂದುವರಿಯುವ ಶಕ್ತಿ.
ಈ
ಶಕ್ತಿಯು, ನಮ್ಮನ್ನು ಗುರಿಗಳತ್ತ ಸ್ವಲ್ಪ
ಸ್ವಲ್ಪವೇ ನೂಕುತ್ತದೆ. ಸೋಲುಗಳ ಎದುರು ಗಟ್ಟಿಯಾಗಿ ಬಲವಾಗಿ ನಿಲ್ಲುವಂತೆ ಮಾಡುತ್ತದೆ. ಮತ್ತು ಆತ್ಮಗೌರವವನ್ನು
ಹೆಚ್ಚಿಸುತ್ತದೆ.
ಸೆಲ್ಫ
ಕೇರ್ ಕಡೆಗೆ ಸ್ವತಃ ಮುಂದುವರಿಯಲು ಪ್ರಾರಂಭಿಕ ಸಲಹೆಗಳು.
ನಿಮ್ಮ
ದಿನವನ್ನು 1–2 ಸಣ್ಣ ಗುರಿಗಳಿಂದ ಮೊದಲಾಗಿ ಆರಂಭಿಸು.
ಮತ್ತು ಅವುಗಳನ್ನು ಯಶಸ್ವಿಯಾಗಿ ಪೂರೈಸಿದ ಮೇಲೆ, ನಿಮ್ಮನ್ನು ನೀವು ಅಭಿನಂದಿಸಿಕೊಳ್ಳುವುದನ್ನು ಮರೆಯಬೇಡಿ.
ಮತ್ತೆ ಅದೇ ಕಾರ್ಯದಲ್ಲಿ ವಿಫಲರಾದಾಗ
ನಿಮ್ಮನ್ನು ನೀವು ನಿಂದಿಸಿಕೊಳ್ಳಬೇಡಿ. ನಿರಂತರವಾಗಿ
ಪ್ರಯತ್ನಿಸುತ್ತಲೇ ಇರಿ. ಮತ್ತು ಇದರಿಂದ ಸ್ವಪ್ರೇರಣೆಯನ್ನು
ಸಾಧಿಸಿಕೊಳ್ಳಿ.
🌟 ಸೆಲ್ಫ್ ಕೇರಿಂಗ್ ವಿಧಾನಗಳನ್ನು 30–60 ದಿನಗಳ
ವರೆಗೆ ನಿರಂತರವಾಗಿ ಅನುಸರಿಸಿದರೆ,
ಕಾಣಲ್ಪಡುವ
ಅಗಾಧ ಬದಲಾವಣೆಗಳು:
✔️ ಧನಾತ್ಮಕತೆ ಆಲೋಚನೆಗಳು.
✔️ ಒತ್ತಡದ
ನಡುವೆಯೂ ಮನಶಾಂತಿ ಸ್ಥಾಪನೆ.
✔️ ದೇಹದಲ್ಲಿ
ಬಲ, ಶಕ್ತಿ, ಚೈತನ್ಯ ವೃದ್ಧಿ.
✔️ ತುರ್ತು
ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯ.
✔️ ಸ್ವಭಾವದಲ್ಲಿ
ಸಮತೋಲನ ಸಾಧನೆ.
✔️ ಸ್ವ-ವಿಮರ್ಶೆಯಲ್ಲಿ ಜಾಗೃತಿ.
✔️ ಜಾಣ್ಮೆಯಲ್ಲಿ
ಹೆಚ್ಚಳ
✔️ ಆತ್ಮವಿಶ್ವಾಸದ
ಮೂಲಬಲ ಹೆಚ್ಚಳ.
✔️ ಜೀವನದ
ದೃಷ್ಟಿಕೋನ ಬೆಳಕಿನತ್ತ ಸಾಗುವುದು.
ಇವೆಲ್ಲವು
Self-Care ಎಂಬ ಮಹಾಶಕ್ತಿಯಿಂದ ರೂಪುಗೊಳ್ಳುವ ಅದ್ಭುತ ಬದಲಾವಣೆಗಳು.
🌷 ಸೆಲ್ಫ್ ಕೇರ್ ಎನ್ನುವುದು
ವ್ಯಕ್ತಿಯಿಂದಲೇ ವ್ಯಕ್ತಿತ್ವವನ್ನು ಮರು ನಿರ್ಮಿಸುವ ಕಲಾತ್ಮಕ
ಕುಸುರಿ**
ನಮ್ನನ್ನು
ನಾವು ನೋಡಿಕೊಳ್ಳುವುದು ಸ್ವಾರ್ಥವಲ್ಲ.
ಅದು ಜೀವನದ
ಕರ್ತವ್ಯ.
ಸೆಲ್ಫ್
ಕೇರ್ ರೂಢಿಸಿಕೊಂಡ ವ್ಯಕ್ತಿಯು, ಬದುಕಿನಲ್ಲಿ ಧೈರ್ಯಶಾಲಿಯಾಗಿ, ಯೋಚನಾ ಲಹರಿಯಲ್ಲಿ ಧನಾತ್ಮಕವಾಗಿ, ದೃಢ ಮನೋಬಲದ ಮತ್ತು ಶಾಂತವಾಗಿ
ಸಮಸ್ಯೆಗಳನ್ನು ಬಗೆಹರಿಸಿ ಮುಂದೆ ಸಾಗುವ ಒಬ್ಬ
ಪರಿಪಕ್ವ ಮತ್ತು ಆಕರ್ಷಕ ವ್ಯಕ್ತಿ ಆಗಿ ರೂಪುಗೊಳ್ಳುತ್ತಾನೆ.
ಸೆಲ್ಫ್
ಕೇರ್ ಎನ್ನುವುದು ಕೇವಲ
ಚಟುವಟಿಕೆಯಲ್ಲ,
ಇದು ನಮ್ಮ ಮೇಲೆ ನಮಗಿರುವ
ಪ್ರೀತಿಯ ಪ್ರತೀಕ. ನಮ್ಮನ್ನು ನಾವು ನೋಡಿಕೊಳ್ಳುವುದರಿಂದ, ಸ್ವತಃ
ಉತ್ತಮ
ವ್ಯಕ್ತಿಯಾಗಿ, ಉತ್ತಮ ಸಂಗಾತಿಯಾಗಿ, ಉತ್ತಮ ಪೋಷಕರಾಗಿ, ಉತ್ತಮ ವೃತ್ತಿಜೀವನದ ಆಟಗಾರರಾಗಿ,
ಎಲ್ಲವನ್ನೂ ಸುಲಭವಾಗಿ ನಿಭಾಯಿಸಬಲ್ಲ ವ್ಯಕ್ತಿಯಾಗಿ ರೂಪಾಂತರಗೊಳ್ಳುತ್ತೇವೆ.
Top of Form
ಧನ್ಯವಾದಗಳು……....🌷🌷🌷🌷
Bottom of Form
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು