ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......

 


ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ:೧೩.೧೧.೨೦೨೫.

💚 ಮನಸ್ಸಿಗೆ, ಹೃದಯಕ್ಕೆ ಆನಂದ ಕೊಡುವ ಮೈಕ್ರೋ ಅಡ್ವೆಂಚರ್‌ಗಳು 🌿

ಜೀವನವೆಂಬುದು ಕೇವಲ ಕೆಲಸ, ಹಣ ಮತ್ತು ಜವಾಬ್ದಾರಿಗಳ ಒಟ್ಟು  ಸಂಗ್ರಹವಲ್ಲ. ಪರಮೋಚ್ಛ ಆನಂದದೆಡೆಗೆ ಸಾಗುವ  ಅನುಭವಗಳ ನದಿ. ಆ ನದಿಯಲ್ಲಿ ಏರ್ಪಡುವ ಒಂದು ಸಣ್ಣ ಅಲೆಯೂ ಕೂಡ  ಮನಸ್ಸಿಗೆ, ಹೆಚ್ಚಿನ ಹುಮ್ಮಸ್ಸನ್ನು ಹೊಸ ಉತ್ಸಾಹವನ್ನೂ  ಕೊಡಬಲ್ಲದು. ಸಾಗರದ ಅಲೆಯ ಪುಷ್ಪವೊಂದು     ಪರಿಧಿಯಾಚೆಗೆ ತನ್ನ  ಪರಿಮಳ ಚೆಲ್ಲಲು ಕಳುಹಿಸಿದಂತ ಈ ಸುಮಧುರ ಅಲೆಗಳೇ  ಮೈಕ್ರೋ ಅಡ್ವೆಂಚರ್‌ಗಳು. ತಮ್ಮ  ಸಣ್ಣ ಆಕಾರದಿಂದಲೇ,  ಹೃದಯದಲ್ಲಿ ದೊಡ್ಡ ಅಚ್ಚುಮೆಚ್ಚಿನ ಗುರುತು ಬಿಡುವಂತಹವು.

 

ಮೈಕ್ರೋ ಅಡ್ವೆಂಚರ್ಗಳುಕಡಿಮೆ ಸಮಯದಲ್ಲಿ ಭರ್ಜರಿ ಅನುಭವ.....

ಪ್ರಸ್ತುತದ ದಿನಗಳಲ್ಲಿ ಅವಿರತ  ದುಡಿಮೆಯಲ್ಲಿ ಮುಳುಗಿರುವ ಹೆಚ್ಚು ಜನ, ತಮ್ಮ ಗೊಂದಲದ ಜೀವನದಲ್ಲಿಯೇ  ಮುಳಗಿ ಹೋಗಿದ್ದಾರೆ. ಒತ್ತಡಸಹಿತ ವಿಶ್ರಾಂತಿಯಿಲ್ಲದ  ಕೆಲಸದುಡಿಯಲು ದೂರದೂರಿಗೆ ಪ್ರಯಾಣಸಮಯದ ಅಭಾವ  ಇವೆಲ್ಲ ಕಾರಣಗಳಿಂದಾಗಿಬಹುಮಂದಿಗೆ ವಿಶ್ರಾಂತಿ ಪಡೆಯಲು  ಅಥವಾ ದೂರದ ಪ್ರದೇಶಗಳಿಗೆ  ಪ್ರವಾಸಕ್ಕೆ  ಹೋಗುವುದು ಸಾಧ್ಯವಾಗಿರುವುದಿಲ್ಲಇದಕ್ಕೆಲ್ಲ   ಸುಲಭ ಪರಿಹಾರಗಳೆಂದರೆ  ಈ  ಮೈಕ್ರೋ ಅಡ್ವೆಂಚರ್ಗಳು.

 ಇಳಿಜಾರಿನಲ್ಲಿ ಬೆಟ್ಟ ಏರುವುದು,ಎಡ್ಜ್‌ ಆಫ್ ಟೌನ್ನಲ್ಲಿನ ನದಿದಂಡೆಯಲ್ಲಿ, ಏಕಾಂತವಾಗಿ ಅಥವಾ ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯುವುದು, ಮುಂಜಾನೆ ಸೂರ್ಯೋದಯ ವೀಕ್ಷಣೆ ಎಲ್ಲವೂ ಚಿಕ್ಕದಾದವು ಎನಿಸಿದರೂಕಡಿಮೆ ಖರ್ಚಿನಲ್ಲಿ  ಮನಸ್ಸಿಗೆ ಮುದ  ನೀಡುವ ಕೃತ್ಯಗಳು!

 ಮೈಕ್ರೋ ಅಡ್ವೆಂಚರ್ ಎಂದರೇನು?

ಮೈಕ್ರೋ ಅಡ್ವೆಂಚರ್ಗಳು ಎಂದರೆ, ಒಂದು ದಿನ ಅಥವಾ ಒಂದು ರಾತ್ರಿಗೆ ಮೀರದಂತೆ  ಮುಕ್ತ ಪ್ರಕೃತಿಯಲ್ಲಿ ನಡೆಸಬಹುದಾದಂತಹ ಸಣ್ಣ ಸಣ್ಣ ಸಾಹಸಯಾತ್ರೆಗಳು, ಹೆಚ್ಚು ಯೋಜನೆಯ ಅಗತ್ಯವಿಲ್ಲದೆಯೇ, ಕಡಿಮೆ ವೆಚ್ಚದಲ್ಲಿ ಸಾಧ್ಯವಾಗುತ್ತವೆ. ಕೆಲಸದ ದಿನಗಳ ನಡುವೆಯೂ (work week) ಒಂದು ರಾತ್ರಿಮಟ್ಟಿಗಿನ  ಮೈಕ್ರೋ ಅಡ್ವೆಂಚರ್ ರೂಪಿಸಬಹುದು.

  ಮೈಕ್ರೋ ಅಡ್ವೆಂಚರ್ಗಳನ್ನು ಆಯ್ಕೆ ಮಾಡಲು ಉಚಿತವಾದ ಕಾರಣಗಳು….

 ಸಮಯದ ಉಳಿತಾಯ
 ಹಣದ ಖರ್ಚು ಕಡಿಮೆ
 ವಿಶ್ರಾಂತಿಯ ಅನುಭವ
 ಹೊಸ ದೃಷ್ಟಿಕೋನ
 ಸಹಜವಾಗಿ ಆರೋಗ್ಯಕ್ಕೆ ಒಳ್ಳೆಯದು

                                                     

🌄 ಪ್ರಕೃತಿಯ ಮಡಿಲಿನಲ್ಲಿ ಒಂದು  ಸಣ್ಣ ಪ್ರಯಾಣದ ಮೂಲಕ ನಿಮ್ಮ ಅಡ್ವೆಂಚರ್‌ ಅನ್ನು ಪ್ರಾರಂಭಿಸಿ. ವಾಸಿಸುವ ಸ್ಥಳದಿಂದ ಹತ್ತಿರವಿರುವ  ಹಸಿರು ವನಗಳು,  ಗುಡ್ಡಗಾಡುಗಳು, ಜನಸಂದಣಿ ಕಡಿಮೆಯಿರುವ ದೇವಸ್ಥಾನಗಳು, ಕೆರೆ ಹಳ್ಳಗಳು ಇನ್ನೂ ಮುಂತಾದವು ನಿಮ್ಮ ಮುಂಜಾನೆಯ ಕ್ಷಣಗಳನ್ನು ವಿಶೇಷವಾಗಿಸುತ್ತವೆ.

ಎಂದಾದರೂ ಒಮ್ಮೆ, ಸೂರ್ಯನ ಬೆಳಗು, ಭೂಮಿಯನ್ನು ಸಂಧಿಸಲು ಸಿದ್ಧತೆ ನಡೆಸುವ   ನಿಶ್ಶಬ್ದತೆಯ ಏಕಾಂತದಲ್ಲಿ  ಬೆಟ್ಟವನ್ನು ಹತ್ತಲು ಪ್ರಯತ್ನಿಸಿ……
ತುತ್ತ ತುದಿಯನ್ನು  ತಲುಪಿದಾಗ,  ಸೂರ್ಯನ ಹೊನ್ನಿನ ಬಿಳಿಯ ಕಿರಣಗಳು  ಆಕಾಶಕ್ಕೆ ರಂಗನ್ನು  ಬಳಿದು ಭೂಮಿಗೆ  ಮಾರಲು ತವಕಿಸುತ್ತಿರುತ್ತವೆ. ☀️
ಅಲ್ಲಿ ನಿಂತು ದೀರ್ಘವಾಗಿ  ಉಸಿರೆಳೆದಾಗ, ಬೆವರ ಹನಿಗಳನ್ನು ಹೀರಿದ ಕಿರಣ ತನ್ನ ಮೆರುಗು ಸವರಿ, ಆತ್ಮಕ್ಕೆ ನವಚೇತನ ನೀಡುತ್ತದೆ.

ಆಗ  ಇದು ಕೇವಲ ಒಂದು ಟ್ರೆಕ್ ಆಗಿರುವುದಿಲ್ಲ, ಪ್ರಕೃತಿಯೊಂದಿಗೆ ಒಂದು ದೀರ್ಘ ಸಂವಹನ ನಡೆಸಿದಂತಿರುತ್ತದೆ.



🌿 ಹತ್ತಿರದಲ್ಲೇ ಹರಿಯುವ  ನದಿಯ ಬಳಿ ಕುಳಿತು, ನೀರಿನ ಹರಿವಿನ ಶಬ್ದವನ್ನು ಕೇಳಿ, ಅದು ಮುಂಜಾನೆಯ ವೇಳೆ, ವಿಶಾಲ ಬಯಲಿನ ಮೌನದಲ್ಲಿನ ಶಬ್ದವೇ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಎಲ್ಲಿ ಹೋದರೂ, ಅನುಭವ ನಿಮ್ಮೊಳಗೆ ಉಳಿಯುತ್ತದೆ.

ಹರಿಯುತ್ತಿರುವ ನದಿ ನೀರಲ್ಲಿ ಕಾಲನ್ನು ಇಳಿಬಿಟ್ಟು ನೋಡಿ, ಅತಿತಣ್ಣನೆಯ ಆ ಸ್ಪರ್ಷ, ನರನಾಡಿಗಳಲ್ಲಿ ಸಣ್ಣದಾಗಿ ವಿದ್ಯುತ್‌ ಹರಿಯ ಬಿಡುತ್ತದೆ. ಕೈ ಬೊಗಸೆ ಮಾಡಿ ನೀರನ್ನು ತುಂಬಿದಾಗ ಕಾಣುವ  ಪ್ರತಿಬಿಂಬ ಮತ್ತೆ ಬಾಲ್ಯವನ್ನು ನೆನಪಿಸಿಬಿಡುತ್ತದೆ. ಮತ್ತೆ ಮತ್ತೆ ಬೊಗಸೆಯಲ್ಲಿ ನೀರು ತುಂಬಿ ಕುಡಿಯುತ್ತಾ ಆಡುತ್ತಲೇ ಇರಬೇಕು ಅನ್ನಿಸದೇ ಇರದು…!!!.. ಜೊತೆಗೆ ಯಾರಾದರೂ ಸ್ನೇಹಿತರಿದ್ದರೆ, ಒಬ್ಬರಿಗೊಬ್ಬರು ನೀರೆರಚಿಕೊಂಡು ಬಟ್ಟೆ ಒದ್ದೆಯಾಗಿಸಿಕೊಳ್ಳುವುದಕ್ಕಿಂತ ಮಜ ಇನ್ನೊಂದಿಲ್ಲ ಎನಿಸುತ್ತದೆ. ಹರಿಯುವ ನೀರಿನಿಂದ ಕಾಲ್ತೆಗೆಯಲೇ ಮನಸ್ಸು ಬರುವುದಿಲ್ಲ. ಹರಿಯುವ ನೀರು ತಾನು ತಿರುಗುವ ಹಾದಿಯನ್ನು ಸ್ವಚ್ಛವಾಗಿಸುತ್ತಾ ಹರಿಯುವಂತೆ, ಮನಸ್ಸನ್ನು ಹೀಗೆ ಅಡ್ವೆಂಚರ್‌ ಗಳ ಹಾದಿಯಲ್ಲಿ ತಿರುಗಿಸಿ, ಮರುಗಿಸಿ ಸ್ವಚ್ಛವಾಗಿಸುತ್ತಾ ಬದುಕಿನ ಹಾದಿಯನ್ನು ಆನಂದದಿಂದ ಅನುಭವಿಸಬೇಕು.

ನೀರಿನಂತೆಯೇ, ಮನಸ್ಸು ಸಹ ಹರಿಯಬೇಕು, ನಿಲ್ಲಬಾರದು.

 

🌌 ಕಡು ಕಪ್ಪು ಬಣ್ಣದಿ ಎರಕ ಹೊಯ್ದ  ಈ ರಾತ್ರಿಗಳು,  ಸೂರ್ಯನ ಸುಂದರ ದಿನಗಳ ಹಿನ್ನೆಲೆಗಳು. ಈ ಹಿನ್ನೆಲೆಗಳೂ ಕೆಲವು  ಬಾರಿ  ಹೊಳೆಯಲು ಕಾರಣಗಳೇ ಈ ನಕ್ಷತ್ರಗಳು…

ರಾತ್ರಿಯಲ್ಲಿ ಕೃತಕ ಬೆಳಕಿನಿಂದ ದೂರವಿರುವ  ಜಾಗಕ್ಕೆ ಹೋಗಿ, ನೆಲದ  ಮೇಲೆ ಚಾದರ ಹಾಸಿಕೊಂಡು ಕುಳಿತು  ಆಕಾಶವನ್ನೇ ದಿಟ್ಟಿಸಿ ನೋಡಿ. ಪ್ರತಿ ನಕ್ಷತ್ರವೂ ತನ್ನದೇ  ಒಂದೊಂದು ಕಥೆ  ಹೇಳುತ್ತದೆ. ಬೆಳಕಿನ ಪರಿಧಿ  ಆಗಸದ ವ್ಯಾಪ್ತಿಗಿಂತ  ಕಡಿಮೆಯೇ ಇರಬಹುದು, ಆದರೆ ಅಮಾವಾಸ್ಯೆಯ ಕತ್ತಲಿಗೆ ಇದೇ ಪ್ರೇರಣೆ.
ಸಣ್ಣ ಚುಕ್ಕಿಯೇ ಭೌತಿಕ   ಪ್ರಪಂಚದ ಬದುಕಿಗೆ ಪ್ರೇರಣೆ.” 🌠

 

ನಿಶ್ಶಬ್ದದ ಚಹಾ ಕ್ಷಣ

ಸೈಕಲ್ನಲ್ಲಿ ಸೋಲೋ ಟ್ರಿಪ್‌ ಮಾಡುವುದು, ಮನಸ್ಸಿಗೂ ದೇಹಕ್ಕೂ ಇನ್ಸ್ಟಂಟ್‌ ಟಾನಿಕ್‌ ನಂತೆ. ಒಂದಷ್ಟು ದೂರದವರೆಗೆ, ಬೀಸುವ ತಂಗಾಳಿಗೆ ಎದೆಯೊಡ್ಡಿ ಮುಂದೆ ಮುಂದೆ ಹೋಗಿ, ಹಾದಿಯಲ್ಲಿ ಸಿಗುವ ಸಣ್ಣ ಪೆಟ್ಟಿ ಅಂಗಡಿಯಲ್ಲಿ ಕುಳಿತು ಒಂದು ಬಿಸಿ ಬಿಸಿ ಚಹಾ ಕುಡಿಯಿರಿ….. ಹಳ್ಳಿಯ ಆ ಶಾಂತ ವಾತಾವರಣ, ಬಸ್ಸು ಕಾರುಗಳ ಓಡಾಟವಿಲ್ಲದ ಖಾಲಿ ರೋಡು, ಸರಳವಾಗಿ ಕುಳಿತು, ಹರಟುತ್ತಾ  ಬೀಡಿ ಸೇದುತ್ತಿರುವ ಜನರು, ದೊಡ್ಡವೂ ಮತ್ತು  ಸಣ್ಣದಾಗಿಯೂ ಕಟ್ಟಲ್ಪಟ್ಟಿರುವ ಬಣ್ಣ ಬಣ್ಣದ  ಮನೆಗಳು,  ಹತ್ತಿರದ ಹೊಲಗಳಲ್ಲಿ ಕೆಲಸ ಮಾಡುತ್ತಿರುವ ಹೆಂಗಸರು,  ಬೀದಿ ಬದಿಗಳಲ್ಲಿ ತಮ್ಮದೇ ಸಂಭಾಷಣೆಯೊಂದಿಗೆ ಆಡುತ್ತಿರುವ ಮಕ್ಕಳು, ಹಳ್ಳಿಯ ಚುರುಕುತನ  ಕಾಣುವಂತಹ  ಅಂಗಡಿಯ ಬದಿಯಲ್ಲಿ ನಿಂತು  ಸೇವಿಸುವ  ಚಹಾ..... ಬೇರೆಲ್ಲಾ ಆಲೋಚನೆಗಳನ್ನು ಮರೆಸುತ್ತದೆ ಮತ್ತು ಅಲ್ಲಿ ಇರುವ ಮುಗ್ಧ  ಜನರ ನಗು ನಿಮ್ಮ ಹೃದಯವನ್ನು ತುಂಬುತ್ತದೆ.
ಇದು ಪ್ರಪಂಚಕ್ಕೆ  ಅತಿಸಣ್ಣ ಅಡ್ವೆಂಚರ್ ಎಂದೇ ತೋರಬಹುದು, ಆದರೆ ಮನಸ್ಸಿಗೆ ಅದೇ ದೊಡ್ಡ ಅನುಭವ.

 


🌈 ಈ ಮೈಕ್ರೋ ಅಡ್ವೆಂಚರ್ ವಿಶೇಷತೆ ಏನೆಂದರೆ,  ಇದು ಸಮಯವನ್ನು  ಗುರಿಯಾಗಿಸಿ  ಅಳೆಯುವುದಲ್ಲದೊರೆಯುವ  ಅನುಭವದ ಆಳವು ಇದರ ಸೌಂದರ್ಯವನ್ನು   ಅಳೆಯುತ್ತದೆ. 💫

ಹೃದಯವನ್ನು  ಸಂತೋಷಗೊಳಿಸುವ , ಕ್ಷಣವೇ ಈ  ಯಾನನಿಮ್ಮ ಆತ್ಮವನ್ನು  ಉದ್ದೀಪನಗೊಳಿಸುತ್ತದೆ, ಮತ್ತೆ  ಜೀವನವನ್ನು  ಬಣ್ಣಗಳಿಂದ ತುಂಬಿಸುತ್ತದೆ.

 

 ದೂರ ದೂರಕ್ಕೆ  ಹೋಗಬೇಕೆಂಬ ಆಸೆ ಇರಲಿ, ಆದರೆ ಹೃದಯಕ್ಕೆ  ಹತ್ತಿರದಲ್ಲೇ ಅನೇಕ ಸ್ವರ್ಗಗಳು ಇವೆ.”

ಮೈಕ್ರೋ ಅಡ್ವೆಂಚರ್ ಎಂದರೆ, ಹೊಸ ಸ್ಥಳಕ್ಕಿಂತಲೂ ಹೊಸ ಮನಸ್ಥಿತಿಗೆ ಪ್ರಯಾಣ.
ಮನಸ್ಸು ಮುಕ್ತವಾಗುವ ಕ್ಷಣವೇ ನಿಜವಾದ ಯಾನ. 🌿💚

 ಮನರಂಜನೆಯೊಂದಿಗೆಆತ್ಮಸಂತೋಷವನ್ನು ಹೆಚ್ಚಿಸುವ ಮೈಕ್ರೋ ಅಡ್ವೆಂಚರ್ಗೆ ಸೂಕ್ತ ಸ್ಥಳಗಳು.

ಬೆಳಗಿನ ಸೂರ್ಯೋದಯದ ಟ್ರೆಕಿಂಗ್ ಗಾಗಿ  ನಂದಿ ಬೆಟ್ಟ (ಚಿಕ್ಕಬಳ್ಳಾಪುರ) ಸೂಕ್ತವಾದ ಸ್ಥಳ.

ಬೆಳಗಿನ ಜಾವ ಐದರ ಹೊತ್ತಿಗೆ  ಹೊರಟುಸೂರ್ಯನ ಕಿರಣಗಳು ಬೆಟ್ಟದ ತುದಿಯಯನ್ನು ಹಾಯ್ದು ಹೋಗುವ ಹಾದಿಯಲ್ಲಿ,  ಕಲ್ಲು ಬಂಡೆ, ಗಿಡ ಮರಗಳೊಂದಿಗಿನ ನೆರಳು ಬೆಳಕಿನ ಆಟದ ಈ  ದೃಶ್ಯವು  ಪ್ರಕೃತಿಯ  ಲಯ ಬದ್ಧ ಸಂಯೋಜನೆಯೊಂದಿಗೆ ಭರಪೂರ ಮನರಂಜನೆಯನ್ನು ಒದಗಿಸುತ್ತದೆ.

 ರಾತ್ರಿ ನಕ್ಷತ್ರ ವೀಕ್ಷಣೆಗಾಗಿ ಹಳ್ಳಿಯ  ಹೊರವಲಯದಲ್ಲಿರುವ, ಹಸಿರು ಗಿಡಗಳಿಂದ ತುಂಬಿರುವ ವಿಶಾಲ ಸ್ಥಳದಲ್ಲಿ, ಪಿಕ್ನಿಕ್ ಮ್ಯಾಟ್ ಹಾಕಿತಾರೆಗಳಿಂದ ತುಂಬಿದ ಕಡು ನೀಲಿ ಆಗಸ  ನೋಡುತ್ತಾ ಸಮಯ ಕಳೆಯುವುದು ಒಂದು ಶಾಂತಿಯುತ ಅನುಭವ.

ಮಬ್ಬಾಗಿ ತನ್ನ ಬೆಳಕು ಚೆಲ್ಲಲು ಮೋಡಗಳೊಂದಿಗೆ ಆಟಕ್ಕಿಳಿದ ಚಂದ್ರ, ಒಂಧು ಕಡೆ ಹಲವು ಚುಕ್ಕಿಗಳು ಗುಂಪಾಗಿ, ಇನ್ನೂ ಕೆಲವು ಅಲ್ಲಲ್ಲಿ ಒಂಟಿಯಾಗಿಯೇ ಉಳಿದು ಮಿನುಗುತ್ತಿರುವ ತಾರಾ ಪುಂಜಗಳು… ಇದು ನಿಜಕ್ಕೂ ನಶೆಯ ರಾತ್ರಿ….

 

ಮೈಕ್ರೋ ಅಡ್ವೆಂಚರ್‌ ಅನ್ನು ಹೇಗೆ ಯೋಜಿಸಬೇಕು….???

ಮುಖ್ಯ ಕೆಲಸಗಳನ್ನು ಮುಗಿಸಿಕೊಂಡು, ಆತುರವಿಲ್ಲದ  ಬಿಡುವಿನ ದಿನ ಆಯ್ಕೆಮಾಡಿಕೊಳ್ಳಿ. ಅದಕ್ಕಾಗಿಯೇ ವಾರಾಂತ್ಯ ಅಥವಾ ತಕ್ಷಣಕ್ಕೆ ಚಾರ್ಜ್‌ ಮಾಡಿಕೊಳ್ಳಲು ಬಯಸುವ ಒಂದು ಸಂಜೆಯಾದರೆ ಬಲು ಸೂಕ್ತ.
🎒 ಬೇಸಿಕ್ ಸಿದ್ಧತೆಯ ಭಾಗವಾಗಿ,  ಟಾರ್ಚ್ಲೈಟ್ನೀರುಸ್ನ್ಯಾಕ್ಸ್ಕ್ಯಾಮೆರಾ, ಪವರ್‌ ಬ್ಯಾಂಕ್‌, ಒಂದು ಜೊತೆ ಬಟ್ಟೆ, ಒಂದಷ್ಟು ಕೈಖರ್ಚಿಗೆ ಹಣದ ವ್ಯವಸ್ಥೆ ಉತ್ತಮವಾದ್ದು.
📍 ಸ್ಥಳ ಆಯ್ಕೆ ಹೇಗಿರಬೇಕೆಂದರೆ,  ನಿಮ್ಮ ಊರಿನ ಸುತ್ತ ಮುತ್ತಲಿನ  30-50 ಕಿಮೀ ಒಳಗಿನ ಸ್ಥಳವನ್ನು  ಆಯ್ಕೆಮಾಡಿ. ಸುರಕ್ಷಿತವಾಗಿ ಮನೆಗೆ ಮರಳುವ ಸಾರಿಗೆ ಸಂಪರ್ಕದ ಕುರಿತು ತಳಮಟ್ಟದ ಮಾಹಿತಿ ಇರಲಿ.
👥 ಸ್ನೇಹಿತರೊಂದಿಗೆ ಅಥವಾ ಒಂಟಿಯಾಗಿಯೂ ಸಹ  ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ಮೈಕ್ರೋ ಅಡ್ವೆಂಚರ್‌ ಗಳನ್ನು ಆಯ್ಕೆ ಮಾಡಬಹುದು.

ಪ್ರತಿಯೊಬ್ಬರ ಜೀವನದಲ್ಲೂ , ಎಂದಾದರೂ ಅಥವಾ ಕೆಲವು ಹೆಕ್ಟಿಕ್‌ ಸಮಯಗಳಲ್ಲಿ, ನಿರಂತರ ಗದ್ದಲದಿಂದ ಒಂದು  "ಬ್ರೇಕ್ಬೇಕಾಗುತ್ತದೆದೂರದ ಹಿಮಾಲಯ ಅಥವಾ ವಿದೇಶ ಯಾತ್ರೆಗಳ ನಿರೀಕ್ಷೆಯಲ್ಲಿ ಕಾಲ ಕಳೆಯದೆನಮ್ಮ ಸುತ್ತಲೂ ಇರುವ ಪ್ರಕೃತಿಯೊಳಗೆ ವಿಹರಿಸೋಣಮೈಕ್ರೋ ಅಡ್ವೆಂಚರ್ಗಳು ಎಂದರೆ ಬದುಕಿನಲ್ಲಿನ ಸಣ್ಣ ಸಂಭ್ರಮದ ಕ್ಷಣಗಳುಅವು ನಿಮ್ಮ ದೈನಂದಿನ ಜೀವನವನ್ನು ಹೆಚ್ಚು ಜೀವಂತಗೊಳಿಸುತ್ತವೆಒಂದು ಚಿಕ್ಕ ಸಮಯದಲ್ಲಿಕಡಿಮೆ ವೆಚ್ಚದಲ್ಲಿನಿಸರ್ಗದ ಮಡಿಲಲ್ಲೇ  ಆಗಬಹುದಾದ ಸ್ಫೂರ್ತಿದಾಯಕ ಅನುಭವಗಳು

🎒 ಮೈಕ್ರೋ ಅಡ್ವೆಂಚರ್ ಪ್ಲಾನ್ ಗಾಗಿ ಒಂದಷ್ಟು ಸೂಕ್ತ ಸ್ಥಳಗಳು…..

📍 ಸವಣದೂರು ದುರ್ಗ ಅಥವಾ ಮಾಕಳಿ ಬೆಟ್ಟ (ಬೆಂಗಳೂರು ಸುತ್ತಲಿನ 1–2 ಗಂಟೆ ದೂರದ ಬೆಟ್ಟಗಳು)

ನಂದಿ ಬೆಟ್ಟ

ಬನ್ನೇರುಘಟ್ಟ ರಾಷ್ಟ್ರೀಯ ಅಭಯಾರಣ್ಯ

ದೇವರಾಯನದುರ್ಗ

ಮಂಚನಬೆಲೆ ಡ್ಯಾಮ್‌

ಈಶ ಫೌಂಡೇಶನ್‌

ಮೇಕೇದಾಟು

ದೊಡ್ಡ ಆಲದಮರ

 

💡 ಪಾಲಿಸಲೇಬೇಕಾದ ಟಿಪ್ಪಣಿಗಳು:

ಹತ್ತಿರದ ಗೆಳೆಯನಿಗೆ ನಿಮ್ಮ ಪ್ಲಾನ್ ಬಗ್ಗೆ ತಿಳಿಸಿಸುರಕ್ಷತೆಗೆ ಮೊದಲ ಆದ್ಯತೆ ನೀಡಿ.

ಹೋದ ಕಡೆಯ ಪ್ರಾಕೃತಿಕ ಪರಿಸರವನ್ನು ಹಾನಿಗೊಳಿಸಬೇಡಿಎಲ್ಲವೂ ಹೊತ್ತೊಯ್ದಂತೆ ಮತ್ತೆ ಮರಳಿ ತನ್ನಿ.

ನೆಟ್ ವರ್ಕ್ ಇಲ್ಲದ ಪ್ರದೇಶಗಳಿಗೆ ಬೇಟಿ ನೀಡಬಹುದು ಆದ್ದರಿಂದ GPS ಅಥವಾ ಸ್ಥಳೀಯ ಮ್ಯಾಪ್ ಅನ್ನು ಡೌನ್ಲೋಡ್ ಮಾಡಿ .

ಆತ್ಮಪರಿಚಯಕ್ಕಾಗಿ ಒಂದು ಪೆನ್ ಮತ್ತು ಡೈರಿ ಇಟ್ಟುಕೊಳ್ಳಿ

 ಪ್ಲಾನ್ ನೀವು ಮೊದಲ ಬಾರಿಗೆ ಸಿಂಗಲ್  ಆಗಿ ಮೈಕ್ರೋ ಅಡ್ವೆಂಚರ್ ಮಾಡುವಾಗ ತುಂಬ ಉಪಯುಕ್ತವಾಗುತ್ತದೆ.

 



ಧನ್ಯವಾದಗಳು.......🌷🌷🌷🌷

ಕಾಮೆಂಟ್‌ಗಳು