ಪೋಸ್ಟ್‌ಗಳು

ನವೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಕಾರ್ತಿಕ ಮಾಸದಲ್ಲಿ ರಾತ್ರಿಗಳು ದೀರ್ಘವಾಗಿರುತ್ತವೆ....!!!!!!🌙

ಇಮೇಜ್
 ಕಾರ್ತಿಕ ಮಾಸವು ಆಂತರ್ಯದ ಬೆಳಕನ್ನು ಬೆಳಗಿಸುವ ಅತ್ಯಂತ ದಿವ್ಯ, ಪರಿಶುದ್ಧ ಯುಗ!!!!!! ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೯.೧೦.೨೦೨೫. ಕಾರ್ತಿಕ ಮಾಸವನ್ನು ಹಿಂದೂ ಪಂಚಾಂಗದಲ್ಲಿ ಅತ್ಯಂತ ಪವಿತ್ರವಾದ , ದೈವೀ ಶಕ್ತಿ ಪ್ರವಹಿಸುವಿಕೆಯು ಅತಿರಥವಾಗಿರುವ   ಮತ್ತು ತಪಸ್ಸಿಗೆ ಯೋಗ್ಯವಾದ ಮಹಾದೈವಿಕ ಮಾಸವೆಂದು ಪರಿಗಣಿಸಲಾಗಿದೆ .   ವಿಶೇಷವಾಗಿ ಶರದೃತುವಿನ ಅಂತ್ಯದೊಂದಿಗೆ ಶಿಶಿರ ಋತುವಿನ ಆರಂಭದ ಕಾಲವೇ ಈ ಕಾರ್ತಿಕ ಮಾಸ . ಈ ಸಮಯದಲ್ಲಿ ಪ್ರಕೃತಿಯಲ್ಲಿಯೂ , ಮಾನವನ ಮನಸ್ಸಿನಲ್ಲಿಯೂ ಮತ್ತು ದೈವಿಕತೆಯ ಚಕ್ರದಲ್ಲಿಯೂ ಅನೇಕ ಬದಲಾವಣೆಗಳು ಸಂಭವಿಸುತ್ತವೆ . ಈ   ಮಹಾಮಾಸದಲ್ಲಿನ ರಾತ್ರಿಗಳು ದೀರ್ಘವಾಗಿರುವುದರಿಂದ, ಧ್ಯಾನ ತಪಸ್ಸಿಗೆ ಸೂಕ್ತವಾದ ಕಾಲ ಎಂದೇ ಹೇಳಬಹುದು. 🌙 ಈ   ಕಾರ್ತಿಕ ಮಾಸವು   ದೇವರ ಜಾಗೃತಿ , ಭಕ್ತರ ಶ್ರದ್ಧೆ ಮತ್ತು   ಮಂದಿರಪುರಾಣಗಳ ಆಳದಿಂದ ಹೊರಹೊಮ್ಮಿದ ಪವಿತ್ರ ಯುಗ. ಕಾರ್ತಿಕ ಮಾಸವನ್ನು ವಿಷ್ಣುವಿನ ಅತ್ಯಂತ ಪ್ರೀತಿಯ ಮಾಸ ಎಂದೇ ಹೇಳಲಾಗುತ್ತದೆ. ಈ ಸಮಯದಲ್ಲಿ ನದಿ ಸ್ನಾನ, ದೀಪ ಬೆಳಗಿಸುವುದು ಮತ್ತು   ತುಳಸಿ ಸೇವನೆಯಿಂದ ದೊರೆಯುವ ಫಲವು ಕೋಟಿ ಯಜ್ಞಗಳನ್ನ ನೇರವೇರಿಸಿದ ಫಲಕ್ಕೆ ಸಮಾನ ಮತ್ತು ಮಾಡಿದ ಅಷ್ಟೂ ಪಾಪಗಳು ನಿರ್ಮೂಲವಾಗುತ್ತವೆ ಎಂದು ನಂಬಲಾಗಿದೆ.           ...

ಸೆಲ್ಫ್‌ ಕೇರ್‌ನಿಂದ ಒಬ್ಬ ವ್ಯಕ್ತಿಯು ಒಳಗೆ–ಹೊರಗೆ ಹೇಗೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬಹುದು!!?????

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ.ಎನ್‌ ದಿನಾಂಕ: ೧೫.೧೧.೨೦೨೫. 🌿 ಸೆಲ್ಫ್ ‌ ಕೇರ್   ಪಂಚಭೂತಗಳಿಂದಾದ ಈ ದೇಹ ಮತ್ತು ಮನಸ್ಸಿಗೆ ಆರೈಕೆಯೆಂಬುದು ಒಂದು ಮೂಲಭೂತ ಹಕ್ಕು,   ಇದು ಇತ್ತೀಚಿನ ದಿನಗಳಲ್ಲಿ ಸೆಲ್ಫ ಕೇರ್‌ ಎಂಬ ಶೋಕಿ ಮತ್ತು ಐಷಾರಾಮಿಯ ಪ್ರತಿಬಿಂಬದಂತೆ ಟ್ರೆಂಡ್‌ ಆಗುತ್ತಿದೆ.   ಆದರೆ   ಇಲ್ಲಿ   “ನಮ್ಮನ್ನು ನಾವು   ಪ್ರೀತಿಸುವಷ್ಟು ಬೇರೆ ಯಾರೂ ಪ್ರೀತಿಸಲಾರರು” ಎಂಬ ಸತ್ಯವನ್ನು ಮರೆತಂತೆ ಕಾಣುತ್ತದೆ. ಯಶಸ್ಸಿನ ಬೆನ್ನಟ್ಟಿ ಓಡುತ್ತಿರುವ ಜೀವನದಲ್ಲಿ ನಾವು   ಬೇರೆ ಎಲ್ಲದರ   ಬಗ್ಗೆ ಯೋಚಿಸುತ್ತಾ , ಕೆಲಸ , ಮನೆ , ಕುಟುಂಬ , ಗುರಿಗಳನ್ನು    ನಿಭಾಯಿಸುವ ಭರದಲ್ಲಿ ನಮ್ಮನ್ನೇ ನಾವು ಮರೆತು ಮುಂದುವರೆದು ಬಿಡುತ್ತೇವೆ , ಆಗ ನಮ್ಮ ದೇಹ , ಮನಸ್ಸು , ಮತ್ತು   ಭಾವನೆಗಳು ತಂತಾನೆ  ಹಿಂದಿನ ಸ್ಥಾನಕ್ಕೆ ಸರಿದು ಬಿಡುತ್ತವೆ . ಆದರೆ ನೆನಪಿಡಿ,    ಸೆಲ್ಫ್ ‌ ಕೇರ್ ಎನ್ನುವುದು ಸ್ವಾರ್ಥವಲ್ಲ ; ಅದು ಸಮತೋಲನವಾದ , ಸಂತೋಷ ತುಂಬಿದ , ಆರೋಗ್ಯಕರ ಜೀವನ ನಡೆಸಲು ಅತ್ಯವಶ್ಯಕವಾದ ಮೂಲಧ್ರುವ . 🧘‍♀️ ಸೆಲ್ಫ್ ‌ ಕೇರ್ ಎಂದರೆ , ದೇಹ , ಮನಸ್ಸು ಮತ್ತು ಆತ್ಮಕ್ಕೆ ಅಗತ್ಯವಾದ ಕಾಳಜಿಯನ್ನು ವಹಿಸುವುದು . ಇದು ಯಾವುದೇ   ಐಷಾರಾಮಿ ಸ್ಪಾ , ಅತಿಹೆಚ್ಚು ಖರ್ಚು ಬೇಡುವ   ದೊಡ್ಡ ಬದ...

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......

ಇಮೇಜ್
  ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ:೧೩.೧೧.೨೦೨೫. 💚 ಮನಸ್ಸಿಗೆ, ಹೃದಯಕ್ಕೆ ಆನಂದ ಕೊಡುವ ಮೈಕ್ರೋ ಅಡ್ವೆಂಚರ್‌ಗಳು 🌿 ಜೀವನವೆಂಬುದು ಕೇವಲ ಕೆಲಸ, ಹಣ ಮತ್ತು ಜವಾಬ್ದಾರಿಗಳ ಒಟ್ಟು   ಸಂಗ್ರಹವಲ್ಲ. ಪರಮೋಚ್ಛ ಆನಂದದೆಡೆಗೆ ಸಾಗುವ   ಅನುಭವಗಳ ನದಿ . ಆ ನದಿಯಲ್ಲಿ ಏರ್ಪಡುವ ಒಂದು ಸಣ್ಣ ಅಲೆಯೂ ಕೂಡ   ಮನಸ್ಸಿಗೆ, ಹೆಚ್ಚಿನ ಹುಮ್ಮಸ್ಸನ್ನು ಹೊಸ ಉತ್ಸಾಹವನ್ನೂ   ಕೊಡಬಲ್ಲದು. ಸಾಗರದ ಅಲೆಯ ಪುಷ್ಪವೊಂದು         ಪರಿಧಿಯಾಚೆಗೆ ತನ್ನ    ಪರಿಮಳ ಚೆಲ್ಲಲು ಕಳುಹಿಸಿದಂತ ಈ ಸುಮಧುರ ಅಲೆಗಳೇ   ಮೈಕ್ರೋ ಅಡ್ವೆಂಚರ್‌ಗಳು. ತಮ್ಮ    ಸಣ್ಣ ಆಕಾರದಿಂದಲೇ,   ಹೃದಯದಲ್ಲಿ ದೊಡ್ಡ ಅಚ್ಚುಮೆಚ್ಚಿನ ಗುರುತು ಬಿಡುವಂತಹವು.   ಮೈಕ್ರೋ   ಅಡ್ವೆಂಚರ್ ‌ ಗಳು :  ಕಡಿಮೆ   ಸಮಯದಲ್ಲಿ   ಭರ್ಜರಿ   ಅನುಭವ ..... ಪ್ರಸ್ತುತದ   ದಿನಗಳಲ್ಲಿ ಅವಿರತ   ದುಡಿಮೆಯಲ್ಲಿ ಮುಳುಗಿರುವ   ಹೆಚ್ಚು   ಜನ, ತಮ್ಮ   ಗೊಂದಲದ   ಜೀವನದಲ್ಲಿಯೇ   ಮುಳಗಿ ಹೋಗಿದ್ದಾರೆ . ಒತ್ತಡಸಹಿತ ವಿಶ್ರಾಂತಿಯಿಲ್ಲದ    ಕೆಲಸ ,  ದುಡಿಯಲು ದೂರದೂರಿಗೆ ಪ್ರಯಾಣ ,  ಸಮಯದ   ಅಭಾವ    ಇವೆಲ್ಲ   ಕಾರಣಗಳಿಂದಾಗಿ ,  ಬಹುಮಂದಿಗೆ ...