ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ವೃತ್ತಿ – ಕುಟುಂಬ – ವೈಯಕ್ತಿಕ ಮೌಲ್ಯಗಳು ಇವುಗಳೊಂದಿಗೆ ಜೀವನದಲ್ಲಿ ಸಮತೋಲನ ಸಾಧಿಸುವ 6 ತಂತ್ರಗಳು

 




ಲೇಖಕಿ:ನಾಗಲಕ್ಷ್ಮಿ. ಕೆ.ಎನ್.‌ ದಿನಾಂಕ:೦೩.೦೯.೨೦೨೫.

ವೃತ್ತಿ – ಕುಟುಂಬ – ವೈಯಕ್ತಿಕ ಮೌಲ್ಯಗಳು ಇವುಗಳೊಂದಿಗೆ ಜೀವನದಲ್ಲಿ ಸಮತೋಲನ ಸಾಧಿಸುವ 6 ತಂತ್ರಗಳು

"ವೃತ್ತಿ, ಕುಟುಂಬ ಮತ್ತು ವೈಯಕ್ತಿಕ ಮೌಲ್ಯಗಳ ನಡುವೆ ಸಮತೋಲನ ಸಾಧಿಸುವುದು ಹೇಗೆ? ಸಮಯ ನಿರ್ವಹಣೆ, ಆದ್ಯತೆ ಹಾಗೂ ಆರೋಗ್ಯಕರ ಜೀವನಶೈಲಿಯಿಂದ Work-Life Balance ಸಾಧಿಸಲು ನಿಮಗಾಗಿ  ಉಪಯುಕ್ತ ಸಲಹೆಗಳು."

 

ವೃತ್ತಿ – ಕುಟುಂಬ – ವೈಯಕ್ತಿಕ ಮೌಲ್ಯಗಳು : ಸಮತೋಲನ ಹೇಗೆ ಸಾಧಿಸಬೇಕು?

ಮಾನವನ ಜೀವನದಲ್ಲಿ ಮೂರು ಮುಖ್ಯ ಅಂಶಗಳು ನಿರಂತರವಾಗಿ ಪರಸ್ಪರ ಪೈಪೋಟಿ ಮಾಡುತ್ತವೆ: ವೃತ್ತಿ (Career), ಕುಟುಂಬ (Family) ಮತ್ತು ವೈಯಕ್ತಿಕ ಮೌಲ್ಯಗಳು (Personal Values). ಇವುಗಳನ್ನು ಸಮತೋಲನದಲ್ಲಿ ಇಡದೇ ಹೋದರೆ ಒತ್ತಡ, ಅಸಮಾಧಾನ ಮತ್ತು ಸಂಬಂಧಗಳಲ್ಲಿ ದೋಷಗಳು ಉಂಟಾಗುತ್ತವೆ.

ವೃತ್ತಿ, ಕುಟುಂಬ ಮತ್ತು ವೈಯಕ್ತಿಕ ಮೌಲ್ಯಗಳು – ಇವು ಮೂರು ಚಕ್ರಗಳ  ಬಂಡಿಯನ್ನು   ಹೋಲುತ್ತವೆ. ಯಾವುದೇ  ಒಂದರ ಮೇಲೆ ಹೆಚ್ಚು ಒತ್ತಡ ಬಿದ್ದರೂ  ಸಮತೋಲನ ತಪ್ಪುತ್ತದೆ. ಈ ಮೂರೂ ವಿಷಯಗಳು  ವಿಭಿನ್ನವಾಗಿದ್ದರೂ ಪರಸ್ಪರ ಅವಲಂಬಿತವಾಗಿವೆ. ಇವುಗಳ ಸಮತೋಲನವೇ ಜೀವನದ ಸಾರ್ಥಕತೆ. ಒಂದನ್ನು ಮತ್ತೊಂದರ ಹಿತಕ್ಕೆ ಬಲಿಯಾಗಿಸುವುದರಿಂದ ಆಂತರಿಕ ಶಾಂತಿ ಕಳೆದುಹೋಗುತ್ತದೆ. ಆದ್ದರಿಂದ ಇವುಗಳ ಸಮನ್ವಯ ಮಾಡಿಕೊಳ್ಳುವುದು ಇಂದಿನ ಸಮಾಜದಲ್ಲಿ ಅತ್ಯಂತ ಅಗತ್ಯ.

ಯಾವುದೇ  ಒಂದು ಕಡೆ ಸಮತೋಲನ ತಪ್ಪಿದರೆ, ಮತ್ತೊಂದು ಕಡೆ ನಷ್ಟ ಅನಿವಾರ್ಯವಾಗುತ್ತದೆ. ಆದ್ದರಿಂದ ಈ ಮೂರು ವಿಷಯಗಳಲ್ಲಿ  ಸಮತೋಲನ ಸಾಧಿಸಿದಾಗ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಯಶಸ್ಸು ಎರಡೂ ಸಿಗುತ್ತವೆ.

ವೃತ್ತಿಯ ಮಹತ್ವ

ಇಂದಿನ ವೇಗದ ಜಗತ್ತಿನಲ್ಲಿ ವೃತ್ತಿ ಎಂಬುದು ಕೇವಲ ಉದ್ಯೋಗವಲ್ಲ; ಅದು ವ್ಯಕ್ತಿಯ ಗುರುತಿನ ಸಂಕೇತ. ವ್ಯಕ್ತಿಯ ಜೀವನೋಪಾಯಕ್ಕಾಗಿ ಮಾಡುವ ಉದ್ಯೋಗವು  ನಮಗೆ ಆರ್ಥಿಕ ಭದ್ರತೆ, ಆತ್ಮವಿಶ್ವಾಸ ಮತ್ತು ಸಮಾಜದಲ್ಲಿ ಸ್ಥಾನಮಾನ ಮತ್ತು ಸ್ವಯಂ ತೃಪ್ತಿ ನೀಡುತ್ತದೆ.

 ವೃತ್ತಿಯ ಮೂಲಕವೇ ಕುಟುಂಬಕ್ಕೆ ಆರ್ಥಿಕ ಸ್ಥಿರತೆ ಬರುತ್ತದೆ.  ಒಬ್ಬ ವ್ಯಕ್ತಿಯ ವೃತ್ತಿಯು ಅವನ ಸಾಮಾಜಿಕ ಸ್ಥಾನವನ್ನು ರೂಪಿಸುತ್ತದೆ. ಮತ್ತು ಆತನಿಗೆ  ಆಸಕ್ತಿಯಿರುವ  ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಆತ್ಮಸಂತೃಪ್ತಿ ದೊರಕುತ್ತದೆ.

ಆದರೆ ವೃತ್ತಿಯ ಹೆಸರಿನಲ್ಲಿ ಕುಟುಂಬವನ್ನು ನಿರ್ಲಕ್ಷಿಸುವುದೂ, ವೈಯಕ್ತಿಕ ಮೌಲ್ಯಗಳನ್ನು ಕುಂಠಿತಗೊಳಿಸುವುದೂ ಅಸಮತೋಲನವನ್ನು ಉಂಟುಮಾಡುತ್ತದೆ. ಕೇವಲ ವೃತ್ತಿಯ ಮೇಲೆಯೇ ಗಮನ ಹರಿಸಿದರೆ, ಕುಟುಂಬ ಹಾಗೂ ವೈಯಕ್ತಿಕ ಮೌಲ್ಯಗಳು ಹಿಂಬಾಗಿಲಲ್ಲಿ ಉಳಿದುಹೋಗುತ್ತವೆ.

👉 ಉದಾಹರಣೆ: ಹೆಚ್ಚುವರಿ ಸಂಬಳ ಅಥವಾ ಉತ್ತಮ ವೇತನದ ಕೆಲಸಕ್ಕಾಗಿ ಪ್ರತಿದಿನ ರಾತ್ರಿಯ ಹೊತ್ತು  ಕೆಲಸ ಮಾಡುತ್ತಾ ಉಳಿದರೂ, ಕುಟುಂಬದೊಂದಿಗೆ ಕಳೆಯಬೇಕಾದ ಸಮಯ ಕಡಿಮೆಯಾಗುತ್ತದೆ. ಈ ರೀತಿ ಉದ್ಯೋಗದ ಕಡೆಗೆ ಹೆಚ್ಚು ಒತ್ತು ನೀಡಿದರೆ ಕುಟುಂಬವನ್ನು ಕಡೆಗಣಿಸಿದಂತಾಗುತ್ತದೆ.

ಕುಟುಂಬದ ಪಾತ್ರ

ಕುಟುಂಬವೆಂಬುದು ವ್ಯಕ್ತಿಯ ಜೀವನದಲ್ಲಿ ಭದ್ರತೆ, ಪ್ರೀತಿ, ಹಿತಚಿಂತನೆ, ಮಾನಸಿಕ ಶಾಂತಿ, ಭಾವನಾತ್ಮಕ ಶಕ್ತಿ ನೀಡುವ ಮೂಲ. ಆದ್ದರಿಂದ ಕುಟುಂಬದೊಂದಿಗೆ ಕಳೆಯುವ ಸಮಯವೇ ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.

 ಪತ್ನಿ, ಪತಿ, ಮಕ್ಕಳೊಂದಿಗೆ ಕಳೆದ ಕ್ಷಣಗಳು ಮನಸ್ಸಿಗೆ ಸಮಾಧಾನ ನೀಡುತ್ತವೆ. ಹಿತ-ಅಹಿತದಲ್ಲಿ ಬೆಂಬಲವಾಗಿ, ಕುಟುಂಬವಷ್ಟೇ  ವ್ಯಕ್ತಿಯನ್ನು ಉಳಿಸುತ್ತದೆ.  ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವ ಪ್ರಥಮ ಪಾಠಶಾಲೆ ಕುಟುಂಬವೇ ಆಗಿದೆ.

ಕುಟುಂಬವು ನಮ್ಮ ಜೀವನದ  ಭದ್ರತೆಯ ಕೋಟೆ. ಇಲ್ಲಿ ಪ್ರೀತಿ, ಭಾವನಾತ್ಮಕ ಬೆಂಬಲ  ದೊರೆಯುತ್ತದೆ. 👉 ಉದಾಹರಣೆ: ಮಗುವಿನ ಶಾಲಾ ಕಾರ್ಯಕ್ರಮಕ್ಕೆ ಹಾಜರಾಗುವುದು ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಆದರೆ ಅದೇ ಸಮಯದಲ್ಲಿ ಆಫೀಸ್ ನ ಸಭೆ ಇದ್ದರೆ  ಗೊಂದಲವಾಗುತ್ತದೆ. ಇನ್ನೂ ಮುಂದುವರೆದು ಕುಟುಂಬದ ಹೊಣೆಗಾರಿಕೆಗಳನ್ನು ಅತಿಯಾಗಿ ಹೆಗಲೇರಿಸಿಕೊಂಡರೆ  ವೈಯಕ್ತಿಕ ಕನಸುಗಳನ್ನು ತ್ಯಜಿಸುವ ಪರಿಸ್ಥಿತಿ ಬಂದರೂ ಬರಬಹುದು.

👉 ಉದಾಹರಣೆಗೆ ಕುಟುಂಬದ ಜವಾಬ್ದಾರಿಯಿಂದ ವೃತ್ತಿಯಲ್ಲಿನ ಬೆಳವಣಿಗೆಯ ಅವಕಾಶಗಳನ್ನು ತಪ್ಪಿಸಿಕೊಂಡವರೂ ಉಂಟು.  ಪ್ರಮೋಷನ್‌ ನಂತರ ಬೇರೇಲ್ಲೋ ದೂರದ ಸ್ಥಳದಲ್ಲಿ ಕೆಲಸ ಮಾಡಬೇಕಾಗಿ ಬಂದಾಗ, ಕುಟುಂಬವನ್ನು ತೊರೆದು ಹೋಗಲಾರದ ಪರಿಸ್ಥಿತಿಯಿಂದ ಪ್ರಮೋಷನ್‌ ಅನ್ನು ಕೈಬಿಡಬೇಕಾಗಿ ಬರಬಹುದು. ಇಂತಹ ಸಮಯದಲ್ಲಿ  ಕುಟುಂಬಕ್ಕಾಗಿ ವೃತ್ತಿಯನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ವ್ಯಕ್ತಿಗೆ ತನ್ನ ಕನಸುಗಳನ್ನು ಸಾಧಿಸುವ ಅವಕಾಶ ಕಳೆದುಹೋಗುತ್ತದೆ.




ವೈಯಕ್ತಿಕ ಮೌಲ್ಯಗಳ ಪ್ರಾಮುಖ್ಯತೆ – ಬದುಕಿನ ದಿಕ್ಕು.

ವೈಯಕ್ತಿಕ ಮೌಲ್ಯಗಳು ಎಂದರೆ ವ್ಯಕ್ತಿಯ ಅಂತರಂಗವನ್ನು ರೂಪಿಸುವ ಆಚಾರ-ವಿಚಾರ, ಧರ್ಮ, ಸಂಸ್ಕೃತಿ, ನೀತಿ-ನಿಷ್ಠೆ. ವ್ಯಕ್ತಿಯ ನೈತಿಕತೆ, ತತ್ವಗಳು, ನಂಬಿಕೆಗಳು, ಪ್ರಾಮಾಣಿಕತೆ, ಶಿಸ್ತು, ಗೌರವ, ಆರೋಗ್ಯ ಮತ್ತು ಆತ್ಮಾಭಿವೃದ್ಧಿ,   ತಾನು ಯಾರು ಎಂಬ ಅರಿವು, ನಿರ್ಧಾರಗಳಲ್ಲಿ ದೃಢತೆ ಇವುಗಳು ವ್ಯಕ್ತಿಯ  ವೈಯಕ್ತಿಕ ಮೌಲ್ಯಗಳ ಮೂಲ.

ಸತ್ಯ ಮತ್ತು ಪ್ರಾಮಾಣಿಕತೆ ಎಲ್ಲ ಸಂಬಂಧಗಳ ನೆಲೆ. ಗೌರವ ಮತ್ತು ದಯೆ ಇತರರೊಂದಿಗೆ ಬಾಳುವ ಕಲೆ. ಆಧ್ಯಾತ್ಮಿಕತೆ ಮತ್ತು ಶಾಂತಿ ಮನಸ್ಸಿಗೆ ಸಮತೋಲನ ನೀಡುವ ಶಕ್ತಿ.

👉 ಉದಾಹರಣೆ: ದಿನವೂ 20 ನಿಮಿಷ ಧ್ಯಾನ ಅಥವಾ ವ್ಯಾಯಾಮ ಮಾಡಿದರೆ ಮನಸ್ಸಿಗೆ ಶಾಂತಿ ಮತ್ತು ದೇಹಕ್ಕೆ ಶಕ್ತಿ ಬರುತ್ತದೆ. ಇದರ ಪ್ರಭಾವವು ವೃತ್ತಿ ಹಾಗೂ ಕುಟುಂಬ ಎರಡರ ಮೇಲೂ ಒಳ್ಳೆಯದು.

ವೃತ್ತಿ ಮತ್ತು ಕುಟುಂಬದ ಒತ್ತಡದಲ್ಲಿ ವ್ಯಕ್ತಿ ತನ್ನ ಮೌಲ್ಯಗಳನ್ನು ಕಳೆದುಕೊಂಡರೆ ಆತ್ಮಸಂತೃಪ್ತಿಯ ಕೊರತೆ ಉಂಟಾಗುತ್ತದೆ.

ಮೌಲ್ಯಗಳನ್ನು ತ್ಯಜಿಸಿ ಬದುಕಿದರೆ ಬದುಕಿನಲ್ಲಿ ಒಂಟಿತನ,  ಖಾಲಿತನ ಮತ್ತು ಮಂದೆ   ಪಶ್ಚಾತ್ತಾಪ ಪಡುವ ಸಮಯ ಬರುತ್ತದೆ. ಮತ್ತು ವೈಯಕ್ತಿಕ ಮೌಲ್ಯಗಳನ್ನು  ಕಡೆಗಣಿಸಿದರೆ, ವೃತ್ತಿ ಮತ್ತು ಕುಟುಂಬದ ಸಮತೋಲನಕ್ಕೂ ಧಕ್ಕೆ ಉಂಟಾಗುತ್ತದೆ.

ಉದಾಹರಣೆಗೆ ಜೀವನದಲ್ಲಿ ಪ್ರಾಮಾಣಿಕತೆಯಿಂದ ಬದುಕುತ್ತಿರುವ ವ್ಯಕ್ತಿಯು, ತನ್ನ ವೃತ್ತಿ ಜೀವನದಲ್ಲಿಅಕ್ರಮದ ದಾರಿ ಹಿಡಿದರೆ ಮನದಲ್ಲಿ ಅಸಮಾಧಾನದ ಹೊಗೆಯಾಡುತ್ತದೆ.

 :ಈ ಮೂರು ಅಂಶಗಳ ಪರಸ್ಪರ ಸಂಬಂಧ:

ವೃತ್ತಿ ಕುಟುಂಬ,  ಹಣ ಗಳಿಕೆಯು ಕುಟುಂಬದ ಭದ್ರತೆಗಾಗಿ, ಆದ್ದರಿಂದ ಕುಟುಂಬವೇ ವೃತ್ತಿಗೆ ಸ್ಫೂರ್ತಿ.

ಕುಟುಂಬ ಮೌಲ್ಯಗಳು, ಮೌಲ್ಯಗಳು ಕುಟುಂಬವನ್ನು ಬಲಪಡಿಸುತ್ತವೆ; ಕುಟುಂಬವೇ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸಾರುತ್ತದೆ.

ವೃತ್ತಿ ಮೌಲ್ಯಗಳು: ವೃತ್ತಿ ಬೆಳವಣಿಗೆಯನ್ನು ಹರಸಿ ಮೌಲ್ಯಗಳಿಗೆ ವಿರುದ್ಧವಾಗಿ ಹೋದರೆ ಅಸಮಾಧಾನ; ಮೌಲ್ಯಾಧಾರಿತ ವೃತ್ತಿ ದೀರ್ಘಕಾಲದಲ್ಲಿ ಯಶಸ್ಸು ತರುತ್ತದೆ.

 

ವೃತ್ತಿ, ಕುಟುಂಬ, ಮೌಲ್ಯಗಳಲ್ಲಿ ಸಮತೋಲನ ಸಾಧಿಸುವ 6 ತಂತ್ರಗಳು.

1. ಸಮಯ ನಿರ್ವಹಣೆ (Time Management).

ಕೆಲಸಕ್ಕೆ ಒಂದು ನಿಗದಿತ ಸಮಯ, ಕುಟುಂಬಕ್ಕೆ ಒಂದು ಸಮಯ, ಸ್ವಂತ ಅಭ್ಯಾಸಗಳಿಗೆ ಒಂದು ಸಮಯ ನಿಗದಿ ಮಾಡಿ. ವೃತ್ತಿ ಮತ್ತು ಕುಟುಂಬಕ್ಕೆ ಸಮಪ್ರಮಾಣದ ಸಮಯ ನೀಡಿ.

ಕೆಲಸವನ್ನು ಮನೆಯೊಳಗೆ ತರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

2. ಆದ್ಯತೆಗಳ ಅರಿವು (Setting Priorities).

ಪ್ರತಿದಿನ ಯಾವುದು ಮುಖ್ಯ ಎಂದು ನಿರ್ಧರಿಸಿ.  ಯಾವ ಹಂತದಲ್ಲಿ ಯಾವುದು ಮುಖ್ಯವೋ ಅದಕ್ಕೆ ಆದ್ಯತೆ ನೀಡಿ.

ಕೆಲವೊಮ್ಮೆ ವೃತ್ತಿ ಪ್ರಮುಖವಾಗಬಹುದು, ಕೆಲವೊಮ್ಮೆ ಕುಟುಂಬ ಅಥವಾ ವೈಯಕ್ತಿಕ ವಿಚಾರಗಳು. ಉದಾ: ಮಗುವಿನ ಶಾಲಾ ಕಾರ್ಯಕ್ರಮಕ್ಕೆ ಹಾಜರಾಗುವುದು, ಕೆಲಸವನ್ನು ಸರಿಯಾಗಿ ಯೋಜಿಸುವುದು.

3. ಸಮಾಲೋಚನೆ ಮತ್ತು ಸಂವಹನ (Communication)

ಕುಟುಂಬದೊಂದಿಗೆ ನಿರಂತರ ಮಾತುಕತೆ ಇಟ್ಟುಕೊಳ್ಳಿ, ಮನಸ್ಸಿನಿಂದ ಪ್ರೀತಿ ಹಂಚಿ ಮತ್ತು. ಕುಟುಂಬದವರೊಂದಿಗೆ ಕೆಲಸದ ಒತ್ತಡ ಹಂಚಿಕೊಳ್ಳಿ.

ಆಫೀಸ್‌ನಲ್ಲಿ ನಿಮ್ಮ ಮಿತಿಗಳನ್ನು ಸ್ಪಷ್ಟಪಡಿಸಿ.

4. 'ಇಲ್ಲ' ಹೇಳುವ ಕಲೆ (Learning to Say No) ರೂಢಿಸಿಕೊಳ್ಳಿ.

ಅನಗತ್ಯ ಸಭೆಗಳು ಮತ್ತು  ಹೆಚ್ಚುವರಿ ಜವಾಬ್ದಾರಿಗಳನ್ನು  ಸ್ವೀಕರಿಸಬೇಡಿ. ನಿಮ್ಮ ಮೌಲ್ಯಗಳಿಗೆ ವಿರುದ್ಧವಾದ ಕೆಲಸಗಳನ್ನು ನಿರಾಕರಿಸಲು ಕಲಿಯಿರಿ.

5. ಸ್ವಂತ ಸಮಯ (Me Time).

ಓದು, ಸಂಗೀತ, ಯೋಗ, ಪ್ರವಾಸ ಇವು  ಮನಸ್ಸನ್ನು ಪುನಃಶಕ್ತಗೊಳಿಸುವ ಕ್ರಿಯೆಗಳು.

ಆರೋಗ್ಯಕರ ಜೀವನಶೈಲಿಗೆ ಪೋಷಕಾಂಶಯುಕ್ತ ಆಹಾರ, ವ್ಯಾಯಾಮ, ನಿದ್ರೆ ಕಡ್ಡಾಯ. ಹಾಗಾಗಿ ಸ್ವಂತಕ್ಕೆ ಸಮಯವನ್ನು ನಿಗದಿಪಡಿಸಿಕೊಳ್ಳಿ.

6. ನೈಜ ಜೀವನದ ನನ್ನ ಕಥೆ (Real-Life Story).

ನಾನು ಒಬ್ಬ ಉದ್ಯೋಗಿಯಾಗಿ ಮತ್ತು ಗೃಹಿಣಿಯೂ ಆಗಿ   ಬೆಳಿಗ್ಗೆ 9 ರಿಂದ ಸಂಜೆ ೬ರವರೆಗೆ ಕೆಲಸ ಮಾಡುತ್ತಿದ್ದೆಆಗ ನನಗೆ  ಬೇಕಾದಷ್ಟು  ಆರ್ಥಿಕ ಸ್ವಾಂತಂತ್ರ್ಯ  ಸಿಕ್ಕರೂ, ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರಿಂದ, ನನಗೆ ಈ ಎರಡರ ಮಧ್ಯೆ ಸಮತೋಲನ ತರುವಲ್ಲಿ ಬಹಳವೇ ಒತ್ತಡವಾಯಿತು ಮತ್ತು ಆರೋಗ್ಯದಲ್ಲಿ ಏರುಪೇರಾಯಿತು.  ನನಗೆ ಅಂದಿಗೂ ಇಂದಿಗೂ ಎಂದಿಗೂ ನನ್ನ  ಕುಟುಂಬ ಮತ್ತು ಆರೋಗ್ಯ ತುಂಬಾ  ಮುಖ್ಯ.   ನಂತರ ಈ ಪರಿಸ್ಥಿತಿಯ   ಅರಿತುಕೊಂಡು ಮನೆಯಿಂದಲೇ ಕೆಲಸ ಮಾಡುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು  ಸಮಯ ನಿರ್ವಹಣೆ ಮಾಡಲು ಪ್ರಾರಂಭಿಸಿದೆ .

ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯಲು ಮತ್ತು ಹೊರಗೆ ಸುತ್ತಾಡಲು ಪ್ರಾರಂಭಿಸಿದೆ. ಸ್ವ ಆರೋಗ್ಯಕ್ಕಾಗಿ ಬೆಳಿಗ್ಗೆ ವ್ಯಾಯಾಮಕ್ಕೂ ಸಮಯ ಕೊಟ್ಟೆ. ಹೀಗೆ ಜೀವನ ಸಮತೋಲನಕ್ಕೆ ಮರಳಿತು.

ವೃತ್ತಿ, ಕುಟುಂಬ ಮತ್ತು ವೈಯಕ್ತಿಕ ಮೌಲ್ಯಗಳು – ಇವುಗಳಲ್ಲಿ ಯಾವುದು ತ್ಯಜಿಸುವಂತದ್ದು ಅಲ್ಲ. ಆದರೆ ಅವುಗಳ ನಡುವಿನ ಸಮತೋಲನವೇ ಜೀವನದ ನಿಜವಾದ ಯಶಸ್ಸು.

ಯಶಸ್ಸು ಎಂದರೆ ಕೇವಲ ಹೆಚ್ಚು ಸಂಬಳ ಅಥವಾ ದೊಡ್ಡ ಹುದ್ದೆ ಅಲ್ಲ; ಅದು ಸಂತೋಷಕರ ಕುಟುಂಬ, ಆರೋಗ್ಯಕರ ದೇಹ-ಮನಸ್ಸು ಮತ್ತು ಮೌಲ್ಯಾಧಾರಿತ ಬದುಕು.

 

ಐಟಿ ವಲಯದ ನೌಕರರು ಪ್ರತಿನಿತ್ಯ  ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡುತ್ತಾರೆ ಇದರಿಂದ ಅವರು  ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಮಕ್ಕಳಲ್ಲಿ ಒಂಟಿತನ ಮೂಡುತ್ತದೆ. ಪೋಷಕರ ದೇಹ ಮತ್ತು ಮಾನಸಿಕ ಸ್ಥಿತಿ ದುರ್ಬಲವಾಗುತ್ತದೆ.

ಕೆಲವರು ಗೃಹಿಣಿಯರು  ಕುಟುಂಬದ ಜವಾಬ್ದಾರಿಯಲ್ಲೇ ಸಿಲುಕಿಕೊಂಡು ತಮ್ಮ ವೃತ್ತಿ ಕನಸುಗಳನ್ನು ತ್ಯಜಿಸುತ್ತಾರೆ. ಇದರಿಂದ ಅವರಿಗೆ  ತೃಪ್ತಿ ಸಿಗದೆ ಅಸಮಾಧಾನ ಉಂಟಾಗುತ್ತದೆ.

ಇಂದಿನ ಆಧುನಿಕ ವೇಗದ ಜೀವನಶೈಲಿಯಿಂದ ಗೌರವ, ಸಹಾನುಭೂತಿ, ದಯೆಇವು ಕುಗ್ಗುತ್ತಿರುವುದು ಸ್ಪಷ್ಟವಾಗುತ್ತಿದೆ.ಹಾಗಾಗಿ ವೈಯಕ್ತಿಕ ಮೌಲ್ಯಗಳಲ್ಲಿ ತೊಂದರೆ ಉಂಟಾಗುತ್ತದೆ.

ಇಂತಹ ಸಂದರ್ಭಗಳಲ್ಲಿ  ವೃತ್ತಿ, ಕುಟುಂಬ, ವೈಯಕ್ತಿಕ ಮೌಲ್ಯಗಳ ಸಮತೋಲನವೇ ಪರಿಹಾರ.

 

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾ ಮೂರ್ತಿ  ಅವರು ವೃತ್ತಿಯಲ್ಲಿ ಯಶಸ್ವಿಯಾಗಿದ್ದರೂ ಕುಟುಂಬ ಹಾಗೂ ಮೌಲ್ಯಗಳನ್ನು ಸಮಾನವಾಗಿ ಕಾಯ್ದುಕೊಂಡಿದ್ದಾರೆ. ಸಮಾಜಮುಖಿ ಸೇವೆಯ ಮೂಲಕ ವೈಯಕ್ತಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ.

ಅವರ ಜೀವನವು ನಮಗೆ ಬೋಧಿಸುವುದೇನೆಂದರೆ ವೃತ್ತಿಯಲ್ಲಿನ  ಯಶಸ್ಸು ಮಾತ್ರ ಸಾಕಾಗುವುದಿಲ್ಲ. ಕುಟುಂಬದ ಪ್ರೀತಿ ಮತ್ತು ವೈಯಕ್ತಿಕ ಮೌಲ್ಯಗಳೇ ಶಾಶ್ವತ ತೃಪ್ತಿಯನ್ನು ನೀಡುತ್ತವೆ.

ವೃತ್ತಿ = ಆರ್ಥಿಕ ಭದ್ರತೆ

ಕುಟುಂಬ = ಪ್ರೀತಿ ಮತ್ತು ಬೆಂಬಲ

ವೈಯಕ್ತಿಕ ಮೌಲ್ಯಗಳು = ಆತ್ಮಸಂತೃಪ್ತಿ

ಇವತ್ತಿನ ಕಾಲದಲ್ಲಿ, ಈ ಮೂರನ್ನು ಸಮತೋಲನಗೊಳಿಸುವ ಕಲೆ ಕಲಿತವನೇ ನಿಜವಾದ ಸಂತೃಪ್ತ ಜೀವನವನ್ನು ನಡೆಸಬಲ್ಲನು.

ಜೀವನವೆಂಬುದು ತೂಕದ ತಟ್ಟೆಯಂತಿದೆ. ಒಂದು ಬದಿಯಲ್ಲಿ ವೃತ್ತಿ, ಇನ್ನೊಂದು ಬದಿಯಲ್ಲಿ ಕುಟುಂಬ ಮತ್ತು ಮೌಲ್ಯಗಳು. ತಟ್ಟೆ ಸಮತೋಲನದಲ್ಲಿದ್ದಾಗ ಮಾತ್ರ ಜೀವನ ಸುಂದರವಾಗಿ ಸಾಗುತ್ತದೆ.

👉 ವೃತ್ತಿ ಬೆಳೆಸಿ, ಕುಟುಂಬವನ್ನು ಕಾಪಾಡಿ, ಮೌಲ್ಯಗಳನ್ನು ಪಾಲಿಸಿಇದುವೇ ಸಮೃದ್ಧ ಜೀವನದ ಮಂತ್ರ. 🌸

 ಜೀವನ ಮೌಲ್ಯಗಳು  ಕುರಿತು ಇನ್ನಷ್ಟು ವಿಚಾರಗಳಿಗಾಗಿ ನನ್ನ ಈ ಬ್ಲಾಗ್‌ ಓದಿ [https://capturingdaysoflife.blogspot.com/2025/09/blog-post.html] 

"ನೀವು ನಿಮ್ಮ ವೃತ್ತಿ ಮತ್ತು ಕುಟುಂಬದ ನಡುವೆ ಹೇಗೆ ಸಮತೋಲನ ಸಾಧಿಸುತ್ತೀರಿ? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ! “





ಧನ್ಯವಾದಗಳು........🌷🌷🌷🌷🌷🌷🌷

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......