ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

"ಆಡ್‌ ಸೆನ್ಸ್ ಅಪ್ರೂವಲ್‌ ಪಡೆಯಲು ನಿಮ್ಮ ಬ್ಲಾಗ್ ಪೋಸ್ಟ್ನ ನ ಪ್ರಾಥಮಿಕ ತಯಾರಿಗೆ ಸಲಹೆಗಳು" ಹಾಗೂ ಕನ್ನಡ ಬ್ಲಾಗಿಂಗ್‌ ಮಾಡುವವರಿಗೆ ಸರ್ಚ್ ಎಂಜಿನ್‌ ಆಪ್ಟಿಮೈಸೇಶನ್ (SEO)‌ ನ ಅಗತ್ಯ

 

ಲೇಖಕಿ: ನಾಗಲಕ್ಷ್ಮಿ ಕೆ ಎನ್ | ದಿನಾಂಕ: 04 ಆಗಸ್ಟ್ 2025.

 "ಆಡ್‌ ಸೆನ್ಸ್ ಅಪ್ರೂವಲ್‌ ಪಡೆಯಲು ನಿಮ್ಮ ಬ್ಲಾಗ್ ಪೋಸ್ಟ್  ತಯಾರಿ ಹೇಗಿರಬೇಕು?"

ಕನ್ನಡದಲ್ಲಿ ಬ್ಲಾಗ್‌ ಪೋಸ್ಟ್‌ ಮಾಡಲು ನಿಮ್ಮ ತಯಾರಿ ಹೇಗಿರಬೇಕು, ಮತ್ತು ಯಾವ ಯಾವ ವಿಚಾರಗಳನ್ನು ತಿಳಿದಿರಬೇಕು, ಆಡ್‌ ಸೆನ್ಸ್‌ ಅಪ್ರೂವಲ್‌ ಪಡೆಯಲು ಪಾಲಿಸಲೇಬೇಕಿರುವ ಒಂದಷ್ಟು ಸೆಟ್‌ ಆಫ್‌ ರೂಲ್ಸ್‌ ಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.‌ ಹಾಗಾಗಿ ಕನ್ನಡದಲ್ಲಿ ಬ್ಲಾಗಿಂಗ್‌ ಪ್ರಾರಂಭಿಸಲು ಸಹಾಯವಾಗುವಂತಹ ವಿಷಯಗಳನ್ನು ಇಲ್ಲಿ ಸವಿವರವಾಗಿ ನೀಡಲಾಗಿದೆ.

 ಬ್ಲಾಗ್ ಪೋಸ್ಟ್ ಸಂಪೂರ್ಣ ಪ್ರಾಯೋಗಿಕ ಮತ್ತು SEO-ಫ್ರೆಂಡ್ಲಿ ವಿಧಾನಗಳನ್ನು ನೀಡಲಾಗಿದೆ. ಇದನ್ನು ಅನುಸರಿಸಿ ನೀವು  ನಿಮ್ಮ ಬ್ಲಾಗಿಂಗ್‌ ಜರ್ನಿಯನ್ನು ಪ್ರಾರಂಭಿಸಬಹುದು ಅದೂ ಸಹ ಕನ್ನಡದಲ್ಲಿ.

🎉 ನೀವು ಈಗಾಗಲೇ ಬ್ಲಾಗಿಂಗ್‌ ಮಾಡಲು ಆರಂಭಿಸಿದ್ದೀರಾ? ಆದರೆ ಅದರಿಂದ ಆದಾಯ ಹೇಗೆ ಗಳಿಸಬಹುದು ಎಂಬುದರ ಬಗ್ಗೆ ಗೊಂದಲದಲ್ಲಿದ್ದೀರಾ!? ಈ ಲೇಖನದಲ್ಲಿ ನಿಮ್ಮ ಬ್ಲಾಗ್ ಅನ್ನು Google AdSense ಗೆ ಸಿದ್ಧಪಡಿಸುವ ಪ್ರಾಥಮಿಕ  ಹಂತಗಳನ್ನು  ವಿವರಿಸಲಾಗಿದೆ.

 ಮೊದಲಿಗೆ Blogger.com ಅಥವಾ WordPress.com ನಲ್ಲಿ  ನಿಮ್ಮ ಡೊಮೈನ್‌ ಅನ್ನು ಕ್ರಿಯೇಟ್‌ ಮಾಡಿಕೊಳ್ಳಿ.

https://www.blogger.com   https://www.wordpress.com  ಗೆ ಹೋಗಿ , Google account (Gmail ID)  ಅಥವಾ  WordPress account (email/password) ಮೂಲಕ ಲಾಗಿನ್  ಮಾಡಿಕೊಳ್ಳಿ.  ಬ್ಲಾಗರ್‌  ರಚನೆಯಿಂದ ಹಿಡಿದು ಬ್ಲಾಗ್‌  ಪೋಸ್ಟ್‌ ಮಾಡುವವರೆಗೆ ಸಂಪೂರ್ಣ ಮಾಹಿತಿಯನ್ನು ಗೂಗಲ್‌ ಅಥವಾ ಯೂಟ್ಯೂಬ್‌ ವಿಡಿಯೋಗಳಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. How to blogging in kannada or How to became a blogger in kannada!   ಎಂದು ಸರ್ಚ್‌ ಮಾಡಿದರೆ ನಿಮಗೆ ಚಿತ್ರ ವಿವರಣೆಯ ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ ದೊರೆಯುತ್ತದೆ.

ಈಗ ಗೂಗಲ್‌ ಆಡ್‌ ಸೆನ್ಸ್‌ ಅಪ್ರೂವಲ್‌ ಪಡೆಯಬೇಕೆಂದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ!!!!

Google AdSense ಗೆ ಅರ್ಜಿ ಹಾಕುವ ಮೊದಲು ಕನಿಷ್ಠ 10 ಗುಣಮಟ್ಟದ ಬ್ಲಾಗ್ಪೋಸ್ಟ್ಗಳು  ನಿಮ್ಮ ಬ್ಲಾಗರ್‌ .ಕಾಮ್‌ ನಲ್ಲಿ ಪೋಸ್ಟ್‌  ಆಗಿರಬೇಕು. ಪ್ರತಿಯೊಂದು ಪೋಸ್ಟ್‌  600-1000 ಪದಗಳಲ್ಲಿ ರಚನೆಯಾದ  ವಿಷಯವನ್ನು ಹೊಂದಿದ್ದು, ಸ್ವಂತ ರಚನೆಯಾಗಿರಬೇಕು. ಮತ್ತು ನಕಲಿ ಅಲ್ಲದಂತಿರಬೇಕು.

👉 ಉದಾಹರಣೆಗಾಗಿ:

  • "ಒಂಟಿಯಾಗಿ  ಬದುಕಿ ಬೆಳಕು ಕಂಡ ಕಥೆಗಳು"
  • "ನಾನು ಒಬ್ಬನೆ  Bengaluru to Chikmagalur ಟ್ರಿಪ್ನಲ್ಲಿ ಆದ ಅನುಭವಗಳ ಕುರಿತು"
  • "ಮಕ್ಕಳಿಗಾಗಿ ವಿಶೇಷ  ಬ್ರೆಡ್ ರೆಸಿಪಿಗಳು"
  • "ಕನ್ನಡ ಪುಸ್ತಕಗಳು ನನ್ನ ಬದುಕು ಬದಲಿಸಿದ ಕಥೆಗಳು"

🔹 2. SEO ಗೆ ತಕ್ಕಂತೆ ಶೀರ್ಷಿಕೆ ಮತ್ತು ವಿಷಯ ಮಂಡನೆ.

ಹೆಚ್ಚು ಓದುಗರನ್ನು ತಲುಪಲು ಸರ್ಚ್ ಎಂಜಿನ್ಆಪ್ಟಿಮೈಸೇಶನ್ (SEO)‌ ಅಗತ್ಯವಿದೆ.

ಸರ್ಚ್ ಎಂಜಿನ್ಆಪ್ಟಿಮೈಸೇಶನ್ ಎಂದರೆ:- ನೀವು ಆಯ್ದುಕೊಂಡಿರುವ ವಿಷಯವನ್ನು  ಟೈಟಲ್ನಲ್ಲಿ ಮುಖ್ಯ ಕೀವರ್ಡ್ ಬಳಸಿಪ್ರತಿ ಪ್ಯಾರಾಗ್ರಾಫ್ನಲ್ಲಿಯೂ  ನೈಸರ್ಗಿಕವಾಗಿ ಕೀವರ್ಡ್ ಬಳಕೆಯಾಗುವಂತೆ  ನೋಡಿಕೊಳ್ಳಿ.

  • ಉದಾಹರಣೆಗೆ:
    ಟೈಟಲ್"ಆಡ್‌ ಸೆನ್ಸ್‌  ಎಂದರೇನು? ಕನ್ನಡದಲ್ಲಿ ಸಂಪೂರ್ಣ ಮಾರ್ಗದರ್ಶನ"
    ಪ್ಯಾರಾಗ್ರಾಫ್ – “ಆಡ್‌ ಸೆನ್ಸ್‌ (AdSense) ಎಂಬುದು Google ಕಂಪನಿಯ ಒಂದು ಸೇವೆ…”

ಈ ರೀತಿ ಪ್ರತಿ ಪ್ಯಾರಾದಲ್ಲೂ  ಆಡ್‌ ಸೆನ್ಸ್‌  ಪದ ಬಳಕೆಯನ್ನು ಗುರುತಿಸುದು. ಇದನ್ನೇ  SEO ಎಂದು ಹೇಳಲಾಗುತ್ತದೆ.

 

🔹 3. ಚಿತ್ರಗಳು ಮತ್ತು ವಿನ್ಯಾಸ!!

ಪ್ರತಿಯೊಂದು ಪೋಸ್ಟ್ಗೆ ಕನಿಷ್ಠ ಒಂದು ಪರವಾನಗಿ ಉಳ್ಳ ಚಿತ್ರ (royalty-free) ಅಥವಾ ನಿಮ್ಮದೇ ಫೋಟೋವನ್ನು  ಬಳಸಿ.  ನೀವು ಬಯಸಿದಲ್ಲಿ Canva.com ಅಥವಾ Unsplash.com ಬಳಸಬಹುದು. ಬಳಸುವ ಮುಂಚೆ royalty-free ಇದೆಯೇ ಎಂದು ಚೆಕ್‌ ಮಾಡಿಕೊಳ್ಳಿ.

ಬ್ಲಾಗ್ ನ ವಿನ್ಯಾಸ ಸರಳವಾಗಿ, ಓದಲು ಸುಲಭವಾಗಿರಲಿ.

 

🔹 4. ಮುಖ್ಯ ಪುಟಗಳನ್ನು ಸಿದ್ಧಪಡಿಸಿ

Google AdSense ಗೆ  ಅರ್ಜಿ ಸಲ್ಲಿಸುವ  ಮೊದಲು ಮೂರು ಪುಟಗಳನ್ನು ನಿಮ್ಮ ಬ್ಲಾಗ್ನಲ್ಲಿ ಸೇರಿಸಬೇಕು:

About Pageನಿಮ್ಮ ಬಗ್ಗೆ ವಿವರವಾಗಿ ಮಾಹಿತಿ ಹೊಂದಿರುವ  ಅಂದರೆ ಪರ್ಸನಲ್‌ ಬಯೋಡೆಟಾ ದ ರೀತಿಯಲ್ಲಿರುವಂತೆ ಪೇಜ್‌ ಒಂದನ್ನು ಸೇರಿಸಿರಿ.
Privacy Policy Pageಯೂಸರ್ ಡೇಟಾ ಹೇಗೆ ಬಳಸಲಾಗುತ್ತದೆ ಎಂಬ ಮಾಹಿತಿಯನ್ನು ಹೋಂದಿರುವ ಪೇಜ್‌ ಕ್ರಿಯೇಟ್‌ ಮಾಡಿ.
Contact Pageನಿಮ್ಮ ಸಂಪರ್ಕ ದ ವಿವರಗಳನ್ನು ಒದಗಿಸಿದ ಪೇಜನ್ನು ಕ್ರಿಯೇಟ್‌ ಮಾಡಿ.

Disclaimer Page - (ನಿರಾಕರಣಾ ಪುಟ) ಎಂಬುದು, ನಿಮ್ಮ ಬ್ಲಾಗ್ನಲ್ಲಿ ನೀಡಿರುವ ಮಾಹಿತಿಯ ಬಗ್ಗೆ ನಿಮಗೆ ಯಾವುದೇ  ಪೂರ್ಣ ಉತ್ತರದಾಯಿತ್ವವಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಒಂದು ಅಧಿಕೃತ ಸೂಚನೆಯನ್ನು ಒದಗಿಸಿರುವ ಪೇಜ್‌ ಅನ್ನು ಕ್ರಿಯೇಟ್‌ ಮಾಡಿ.

 

🔹 5. Google Analytics ಮತ್ತು Search Console ಸೆಟ್ಟಿಂಗ್ಸ್!!!

  • ನಿಮ್ಮ ಬ್ಲಾಗ್ಗೆ Google Analytics ID ಅನ್ನು ಜೋಡಿಸಿರಿ.
  • Search Console ಮೂಲಕ ನಿಮ್ಮ ಸೈಟ್ ಅನ್ನು Google ಗೆ ಲಿಂಕ್ ಮಾಡಿ. ಇದರಿಂದ ನಿಮ್ಮ ಪೋಸ್ಟ್ಗಳು ಶೀಘ್ರವಾಗಿ ಇಂಡೆಕ್ಸ್ ಆಗುತ್ತವೆ.

🔹 6. ಸ್ಪಾಮ್, ನಕಲಿ ಅಥವಾ ಹಿಂಸಾತ್ಮಕ ವಿಷಯಗಳನ್ನು ಬ್ಲಾಗ್‌ ಪೋಸ್ಟ್ನಲ್ಲಿ ತಪ್ಪಿಸಿ!?

AdSense ಪಾಲಿಸಿಯು ತುಂಬಾ ಕಠಿಣವಾಗಿದೆ.  ಮತ್ತು ಯಾವುದೆ ಅಶ್ಲೀಲ, ಹಿಂಸಾತ್ಮಕ ಅಥವಾ ನಕಲಿ ವಿಷಯ ಬರೆದರೆ ನಿರಾಕರಣೆಗೆ ಕಾರಣವಾಗಬಹುದು.

Google AdSense ಪಾಲಿಸಿ ಪ್ರಕಾರ, ನಿಮ್ಮ ಬ್ಲಾಗ್ಪೋಸ್ಟ್ನಲ್ಲಿ ಸ್ಪಾಮ್, ನಕಲಿ ಅಥವಾ ಹಿಂಸಾತ್ಮಕ ವಿಷಯಗಳೆಂದರೆ ಕೆಳಕಂಡವುಗಳಾಗಿವೆ. ಇವುಗಳನ್ನೊಳಗೊಂಡ ಬ್ಲಾಗ್ಗಳನ್ನು Google ನಿರಾಕರಿಸಬಹುದು ಅಥವಾ ನಿಷೇಧಿಸಬಹುದು:

 

1. ಸ್ಪಾಮ್ ವಿಷಯಗಳು (Spam Content).

  • ಅನಗತ್ಯ ಕೀವರ್ಡ್ಗಳ ಅತಿಯಾದ ಪುನರಾವರ್ತನೆ (keyword stuffing).
  • ಕ್ಲಿಕ್ ಮಾಡಲು ಪ್ರೇರೇಪಿಸುವ  ಶೀರ್ಷಿಕೆಗಳು (“Click here to win”, “Don’t miss this trick” ಇತ್ಯಾದಿ).
  • ಕೃತಕ ಟ್ರಾಫಿಕ್ (traffic bots) ಅಥವಾ ಮಧ್ಯವರ್ತಿಗಳಿಂದ ನಕಲಿ ಲಿಂಕುಗಳ ಬಳಕೆ.
  • “Copy-paste” ಮಾಡಿದ ಇತರೆ ವೆಬ್ಸೈಟ್ ವಿಷಯಗಳು.

 

2. ನಕಲಿ ವಿಷಯಗಳು (Misleading or Fake Content).

  • ಭ್ರಾಂತಿಕರ ಮಾಹಿತಿ: ತಪ್ಪು ವೈದ್ಯಕೀಯ ಸಲಹೆಗಳು, ನಕಲಿ ಆರೋಗ್ಯ ಪರಿಹಾರಗಳು.
  • ಹೂಡಿಕೆ ಡೋಂಗಿಗಳು: Get-rich-quick ಸ್ಕೀಮ್ಗಳು, ಅಕ್ರಮ ಹಣಗಳಿಕೆಯ ಲೇಖನಗಳು.
  • ತಪ್ಪು ಸರ್ಟಿಫಿಕೇಟುಗಳು ಅಥವಾ ಡಿಗ್ರಿಗಳ ಬಗ್ಗೆ ಬರೆಯುವುದು.
  • ನಕಲಿ ಉದ್ಯೋಗ ಅವಕಾಶಗಳು ಅಥವಾ government job  ವಂಚನೆಯ ಬಗ್ಗೆ ಪೋಸ್ಟ್ಗಳು.

 

3. ಹಿಂಸೆ ಅಥವಾ ಅಶ್ಲೀಲ ವಿಷಯಗಳು (Violent or Adult Content).

  • ಯಾವುದೇ ರೀತಿಯ ಅಶ್ಲೀಲ ಚಿತ್ರಗಳು ಅಥವಾ ವಿವರಣೆಗಳು.
  • ಮಕ್ಕಳಿಗೆ ಅನರ್ಹ ವಿಷಯಗಳು (18+ ಅರ್ಥವಿರುವ ಪೋಸ್ಟ್ಗಳು).
  • ಹಿಂಸೆ, ಆಕ್ರಮಣ, ಆತ್ಮಹತ್ಯೆ ಪ್ರಚಾರ, ಭಯೋತ್ಪಾದನೆ ಸಂಬಂಧಿತ ಲೇಖನಗಳು.
  • ಇತರೆ ಜನರ ವಿರುದ್ಧ ಘೋಷಣೆಯ ಭಾಷೆ ಅಥವಾ ಧರ್ಮ, ಜಾತಿ, ಲಿಂಗ ಆಧಾರಿತ ದ್ವೇಷಭರಿತ ಬರವಣಿಗೆ.

 

ನಿಮ್ಮ ಬ್ಲಾಗ್ಸೈಟ್‌  AdSense ಗೆ ಸ್ವೀಕೃತವಾಗಬೇಕಾದರೆ ನಿಮ್ಮ ಪೋಸ್ಟ್‌ ಈ ರೀತಿ ಇರಬೇಕು.!

  • ವಿಶ್ವಾಸಾರ್ಹ, ನೈಜ, ಆಸಕ್ತಿದಾಯಕ ವಿಷಯಗಳನ್ನೇ ಬ್ಲಾಗ್‌ ಪೋಸ್ಟ್‌ ನಲ್ಲಿ ಬರೆಯಿರಿ.
  • ಪಠ್ಯ ಶುದ್ಧತೆ, ಚಿತ್ರ ಪರವಾನಗಿ, ಮತ್ತು ಬಳಕೆದಾರ ಸ್ನೇಹಿ ವಿನ್ಯಾಸ ಹೊಂದಿರಲಿ
  • ಪ್ರತಿಯೊಂದು ಪೋಸ್ಟ್ಗೂ clear title, subheadings, and logical flow ಇರಲಿ.

AdSense ಒಪ್ಪಿಗೆ ಪಡೆಯಲು ವಿಶ್ವಾಸಾರ್ಹ (credible), ನೈಜ (original), ಆಸಕ್ತಿದಾಯಕ (engaging) ವಿಷಯಗಳನ್ನು ನಿಮ್ಮ ಬ್ಲಾಗ್ನಲ್ಲಿ ಬಳಸಿ ಬರೆಯುವುದು ಅತ್ಯಂತ ಮುಖ್ಯ.  ಅದರಲ್ಲಿ ಕೆಲವು ಮುಖ್ಯವಾದ  ವಿಷಯಗಳ ಮಾಹಿತಿಯನ್ನು ನಿಮಗಾಗಿ ಒದಗಿಸಲಾಗಿದೆ. ನೀವು ನೇರವಾಗಿ ನಿಮ್ಮ ಬ್ಲಾಗ್ಪೋಸ್ಟ್ಗಾಗಿ  ಈ ವಿಷಯಗಳನ್ನು ಉಪಯೋಗಿಸಬಹುದು.


ವಿಶ್ವಾಸಾರ್ಹ, ನೈಜ ಮತ್ತು ಆಸಕ್ತಿದಾಯಕ  ಶ್ರೇಣಿಯ ವಿಷಯಗಳು.

1. 🎒 ವೈಯಕ್ತಿಕ ಅನುಭವಗಳು / ಜೀವನ ಕಥೆಗಳು!!

ಇವು ನೈಜವಾಗಿರುತ್ತವೆ ಮತ್ತು ಓದುಗರು ತಮಗೆ ತಕ್ಕಂತೆ ಸಂಬಂಧಿಸಿಕೊಳ್ಳಬಹುದು.

ಉದಾಹರಣೆಗಳು:

  • "ನಾನು ಒಬ್ಬಳೆ  ಚಿಕ್ಕಮಗಳೂರಿಗೆ ಮಾಡಿದ ಸೋಲೋ ಟ್ರಿಪ್ಡೈರಿಯ ವಿಚಾರಗಳು"
  • "ಪರೀಕ್ಷಾ ಒತ್ತಡದ ನಡುವೆಯೂ ನಾನು ಉತ್ಸಾಹವನ್ನು ಕಾಪಾಡಿದ ರೀತಿಗಳು"
  • "ಕನಸಿನ ಉದ್ಯೋಗವನ್ನು ಪಡೆಯುವವರೆಗೆ ನನ್ನ ಹೋರಾಟದ ಹಾದಿ"

 

2. 🌱 ಆರೋಗ್ಯ ಮತ್ತು ಜೀವನಶೈಲಿ ಸಲಹೆಗಳು.

ವೈದ್ಯಕೀಯ ಮಾರ್ಗದರ್ಶನವಿಲ್ಲದ, ಆದರೆ ನೈಜ ಜೀವನಶೈಲಿಗೆ ತಕ್ಕ ಸಲಹೆಗಳು.

ಉದಾಹರಣೆಗಳು:

  • "ಋತುಮಾನದ ಆಹಾರ: ಮಳೆಯ ಕಾಲದ ಆರೋಗ್ಯಕರ ತಿಂಡಿಗಳು"
  • "ಮನಸ್ಸನ್ನು ಶಾಂತಗೊಳಿಸುವ 5 ನೈಜ ವಿಧಾನಗಳು"
  • "ಪ್ರತಿಯೊಂದು ಮಹಿಳೆ ಹಂಚಿಕೊಳ್ಳಬಹುದಾದ ದಿನಚರಿ ಪ್ಲ್ಯಾನರ್"

 

3. 🧳 ಪ್ರಯಾಣ ಕಥನಗಳು!!!

ನೀವು ಭೇಟಿ ಮಾಡಿದ ಸ್ಥಳಗಳು, ಅಲ್ಲಿ ದೊರೆಯುವ ಆತ್ಮೀಯ ಅನುಭವಗಳು ಮತ್ತು ಅದರ ಕುರಿತು ಕಥೆ ಹೇಳುವ ಫೋಟೋಗಳೊಂದಿಗೆ ರಚಿತ ಪೋಸ್ಟ್‌ ಗಳು.

ಉದಾಹರಣೆಗಳು:

  • "ಮಂಗಳೂರು ಕಡಲ ತೀರದಲ್ಲಿ ಕಳೆದ ಒಂದು ದಿನ"
  • "ಶೃಂಗೇರಿನಂಬಿಕೆಯ ಪಥದೊಂದಿಗೆ ಒಂದು ಪಯಣ"
  • "ದೇವರಾಯನದುರ್ಗ ಬೆಟ್ಟಕ್ಕೆ  ದ್ವಿಚಕ್ರ ವಾಹನದಲ್ಲಿ ಸಾಹಸ"

 

4. 📚 ಕನ್ನಡ ಸಾಹಿತ್ಯ, ಸಿನಿಮಾ ಮತ್ತು ಸಾಂಸ್ಕೃತಿಕ ವಿಮರ್ಶೆಗಳು!!

ಕನ್ನಡ ಬ್ಲಾಗಿಂಗ್‌ ಮಾಡುವವರಿಗೆ ಇದು ತುಂಬಾ ಪ್ಲಸ್ಪಾಯಿಂಟ್.

ಉದಾಹರಣೆಗಳು:

  • "ಭೈರಪ್ಪನಆವರಣ’ – ಓದುಗರ ಮನಸ್ಸಿಗೆ ಬಿತ್ತಿದ ಪ್ರಶ್ನೆಗಳು"
  • "ಕಾಂತಾರ ಸಿನೆಮಾ: ಆಧ್ಯಾತ್ಮ, ಭಕ್ತಿ ಮತ್ತು ತಂತ್ರವಿದೆಯೋ?"
  • "ಉಗಾದಿ ಹಬ್ಬದ ಹಿಂದಿನ ಕಥೆಗಳು ಮತ್ತು ಸಂಪ್ರದಾಯಗಳು"

 

5. 💼 ಉದ್ಯೋಗ, ಫ್ರೀಲಾನ್ಸ್ ಮತ್ತು ಆನ್ಲೈನ್ ಆದಾಯ ಮಾರ್ಗಗಳು.

ವಿಶ್ವಾಸಾರ್ಹ ಹಾಗೂ ನೈಜ ಅನುಭವದೊಂದಿಗೆ.

ಉದಾಹರಣೆಗಳು:

  • "ನಾನು ಹೇಗೆ Content Writing ನಿಂದ ಪ್ರಾರಂಭಿಸಿ ಆದಾಯ ಗಳಿಸುತ್ತಿದ್ದೇನೆ"
  • " ಆಡ್‌ ಸೆನ್ಸ್‌ ಗೆ  ಅರ್ಜಿ ಹಾಕಿದ ನಂತರ ನಾನು ಅನುಭವಿಸಿದವಿಷಯಗಳು"
  • "ಫ್ರೀಲಾನ್ಸ್ ಕೆಲಸಗಳು ಹುಡುಕಲು Top Kannada-Friendly ವೆಬ್ಸೈಟ್ಗಳು"

 

6. 🍲 ಅಡುಗೆ ಮತ್ತು ಮನೆಯೊಳಗಿನ ಕ್ರಿಯಾಶೀಲತೆ.

ನಿಮ್ಮದೇ ರೆಸಿಪಿಗಳು, ಯುಕ್ತಿಗಳು, ತಾಯಂದಿರ ಉಪಾಯಗಳು.

ಉದಾಹರಣೆಗಳು:

  • "ನಾನು ಕಲಿತ ನನ್ನ ಅಜ್ಜಿಯ  ಸ್ಪೆಷಲ್  ಬೆಂಡೆಕಾಯಿ ಪಲ್ಯ"
  • "ಕನ್ನಡ ಶೈಲಿಯ ಪಾಕವಿಧಾನಶ್ರಾವಣ ಮಾಸದ ಸಸ್ಯಹಾರಿ ತಿಂಡಿಗಳು"
  • "ಸೊಂಪಾದ ಮನೆಗೆ 5 ಸುಲಭವಾದ ಡಿ..ವೈ ಚಲನಚಿತ್ರ ಪ್ರಭಾವ"

ಎಲ್ಲಾ ವಿಷಯಗಳು  ನೈಜವಾಗಿರಬೇಕು (ಕಾಪಿ ಮಾಡದೆ), ಓದುಗರ ಸಮಸ್ಯೆಗಳಿಗೆ ನಿರ್ದಿಷ್ಟ ವಿಷಯಕ್ಕೆ  ಪರಿಹಾರ ನೀಡುವ ರೀತಿಯಾಗಿರಬೇಕು.

ನಿಮ್ಮ ಬ್ಲಾಗ್ನಲ್ಲಿ ಕನ್ನಡದಲ್ಲಿ ಸೃಜನಾತ್ಮಕ ಬರವಣಿಗೆ, ನೈಜ ಅನುಭವ, ಪ್ರಯಾಣ ಕಥನ, ಆಹಾರ ರೆಸಿಪಿ, ತಾತ್ವಿಕ ಚಿಂತನೆಗಳು—all are welcome. ಆದಾಯ ಎಲ್ಲರಿಗೂ ಸಾಧ್ಯ, ಆದರೆ ಮೊದಲಿಗೆ ಗುಣಮಟ್ಟದ ಬರವಣಿಗೆ ಬೇಕು.

📌 ಇವತ್ತಿನಿಂದಲೇ ಪ್ರಾರಂಭಿಸಿ:
👉 ಕನಿಷ್ಠ 10 ಬ್ಲಾಗ್ ಪೋಸ್ಟ್ಗಳು
👉 About + Contact + Privacy Policy
👉 SEO + ಚಿತ್ರಗಳು + Analytics ಸೆಟ್ಅಪ್

 

📢 ನೀವು ಈಗಾಗಲೇ ಹಂತಗಳನ್ನು ಪೂರೈಸಿದ್ದೀರಾ?
ಹಾಗಾದರೆ ನೇರವಾಗಿ Google AdSense ಗೆ ಅರ್ಜಿ ಹಾಕಬಹುದು!



ಧನ್ಯವಾದಗಳು......🌷🌷

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......