ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

“Discipline Vs Motivation: ದೀರ್ಘಾವಧಿಯ ಯಶಸ್ಸಿಗೆ ಯಾವುದು ಮುಖ್ಯ?”

 



ಶಿಸ್ತು Vs. ಪ್ರೇರಣೆಯಾವುದು ದೀರ್ಘಕಾಲದ ಯಶಸ್ಸನ್ನು ನೀಡುತ್ತದೆ?

ಮಾನವನ ಜೀವನದಲ್ಲಿ ಯಶಸ್ಸು ಎಂಬ ಪದವು ಸದಾ ಆಕರ್ಷಕ. ಆದರೆ ಯಶಸ್ಸನ್ನು ಪಡೆಯಲು ಯಾವುದು ಮುಖ್ಯ? – ಶಿಸ್ತು (Discipline) ಅಥವಾ ಪ್ರೇರಣೆ (Motivation)? ಪ್ರಶ್ನೆ ನಮ್ಮಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಯಾವಾಗಲಾದರೂ ಮೂಡಿರುತ್ತದೆ. ಕೆಲವರಿಗೆ ಪ್ರೇರಣೆ ಬಂದಾಗ ಮಾತ್ರ ಕೆಲಸ ಮಾಡಲು ಇಷ್ಟವಾಗುತ್ತದೆ. ಮತ್ತೊಬ್ಬರಿಗೆ ಶಿಸ್ತು ಮುಖ್ಯ; ದಿನವೂ ಒಂದೇ ರೀತಿಯಲ್ಲಿ ಕ್ರಮಬದ್ಧವಾಗಿ ನಡೆದುಕೊಂಡು ಗುರಿಯನ್ನು ತಲುಪುತ್ತಾರೆ. ಹೀಗಾಗಿ, ಶಿಸ್ತು ಮತ್ತು ಪ್ರೇರಣೆ ಎರಡರ ನಡುವೆ ಯಾವುದು ದೀರ್ಘಕಾಲಿಕ ಯಶಸ್ಸಿಗೆ ಹಾದಿ ಮಾಡುತ್ತದೆ ಎಂಬುದನ್ನು ಇಂದು ನೋಡೋಣ.

 

. ಪ್ರೇರಣೆ  ಎಂಬುದು  ಕ್ಷಣಿಕ ಚೈತನ್ಯದ ಶಕ್ತಿ

ಪ್ರೇರಣೆ ಎಂದರೆ ಒಂದು ಅಂತರಂಗದ ಚೈತನ್ಯ ಅಥವಾ ಹೊರಗಿನ ಪ್ರೇರಕ ಕಾರಣದಿಂದ ಬಂದ ಉತ್ಸಾಹ. ಉದಾಹರಣೆಗೆಯಶಸ್ವಿಯಾದ ವ್ಯಕ್ತಿಯ ಕಥೆ ಓದಿದಾಗ, ಪ್ರೇರಣಾದಾಯಕ ವೀಡಿಯೊ ನೋಡಿದಾಗ, ಗುರುಗಳಿಂದ ಶ್ಲಾಘನೆ ಸಿಕ್ಕ ಸಮಯದಲ್ಲಿ ಮಾತ್ರ ನಮ್ಮೊಳಗೆ ಪ್ರೇರಣೆ ಉಕ್ಕುತ್ತದೆ.

ಈ ರೀತಿ ಆ ಸಮಯಕ್ಕೆ ಸಿಕ್ಕ ಪ್ರೇರಣೆಯಿಂದ ಏನಾದರೊಂದು ಹೊಸದನ್ನು  ಪ್ರಾರಂಭಿಸಲು ಬೇಕಾದ ಚೈತನ್ಯವನ್ನು ಕೊಡುತ್ತದೆ. ಮನಸ್ಸಿಗೆ ಉತ್ಸಾಹ ಮತ್ತು ಹೊಸತನವನ್ನು ತರುತ್ತದೆ ಮತ್ತು ಭವಿಷ್ಯದ ಕನಸುಗಳನ್ನು ಬಲಪಡಿಸುತ್ತದೆ.

ಪ್ರೇರಣೆಯಿಂದುಂಟಾಗುವ ದೋಷಗಳು

ಪ್ರೇರಣೆಯು  ಕ್ಷಣಿಕವಾದ್ದು. ಅದು ಪ್ರತಿನಿತ್ಯವೂ ಒಂದೇ ಮಟ್ಟದಲ್ಲಿ ಇರದು.

ಪ್ರೇರಣೆಯು ಬಹುಪಾಲು ಸಮಯ ಹೊರಗಿನ ಕಾರಣಗಳ ಮೇಲೆ ಅವಲಂಬಿತವಾಗಿರುತ್ತದೆ.

ಪ್ರೇರೇಪಣೆಯು  ಕುಗ್ಗಿದರೆ, ಕೆಲಸವೂ ನಿಲ್ಲಬಹುದು. ಹಾಗಾಗಿ  ಒಂದಿಷ್ಟು ಹೊತ್ತು ಮಾತ್ರ ಉತ್ಸಾಹದಿಂದ ಕೆಲಸ ಮಾಡಿದರೆ ದೀರ್ಘಕಾಲದ ಸಾಧನೆ ಸಾಧ್ಯವಾಗುವುದಿಲ್ಲ.

 

. ಶಿಸ್ತುಕ್ರಮಬದ್ಧತೆಯ ಮಂತ್ರ

ಶಿಸ್ತು ಎಂದರೆ ಪ್ರೇರಣೆ ಇಲ್ಲದಿದ್ದರೂ ಕೂಡಾ ನಿರಂತರವಾಗಿ ಕೆಲಸ ಮಾಡುವುದು. ಇದು ಅಭ್ಯಾಸದಿಂದ ಹುಟ್ಟುವ ಶಕ್ತಿ. ದಿನವೂ ಬೆಳಗ್ಗೆ ವ್ಯಾಯಾಮ ಮಾಡುವವನು, ದಿನವೂ ಎರಡು ಗಂಟೆ ಅಧ್ಯಯನ ಮಾಡುವ ವಿದ್ಯಾರ್ಥಿ, ಸಮಯಕ್ಕೆ ಕೆಲಸ ಮುಗಿಸುವ ನೌಕರ  ಇವರು ಎಲ್ಲರೂ ಶಿಸ್ತಿನ ಉದಾಹರಣೆಗಳು..

ಶಿಸ್ತಿನಿಂದುಂಟಾಗುವ ಲಾಭಗಳು:

ಶಿಸ್ತು ದೀರ್ಘಕಾಲದ ಸಾಧನೆಗೆ ಬಲವಾದ ಅಸ್ತಿತ್ವ ನೀಡುತ್ತದೆ. ಮತ್ತು ನಿರಂತರ ಚಟುವಟಿಕೆಯಿಂದ ಶಿಸ್ತಿನ ಅಭ್ಯಾಸ  ಆಗುತ್ತದೆ; ಅಂದರೆ ಪ್ರೇರಣೆ ಇಲ್ಲದ ದಿನದಲ್ಲಿಯೂ ಕೆಲಸ ಮುಂದುವರಿಯುತ್ತದೆ. ಇದರಿಂದ ಯಶಸ್ಸನ್ನು  ಕ್ರಮಿಸುವ ದಾರಿ ನೆಮ್ಮದಿಯಿಂದಿರುತ್ತದೆ.

ಶಿಸ್ತಿನಿಂದಾಗುವ ದೋಷಗಳು:

ಶಿಸ್ತನ್ನು ಅಳವಡಿಸಿಕೊಂಡಾಗ ಆರಂಭದಲ್ಲಿ ಕಠಿಣವೆಂದು ತೋರುತ್ತದೆ. ಪ್ರಾರಂಭದಲ್ಲಿ  ಶಿಸ್ತು ಪಾಲಿಸಲು ತಾಳ್ಮೆ ಸ್ವಯಂ ನಿಯಂತ್ರಣ ಮತ್ತು ನಿರಂತರತೆ ಬೇಕಾಗುತ್ತದೆ. ಯಶಸ್ಸಿನ ಕಡೆಗಿನ ಶಿಸ್ತು ಪಾಲನೆಯಲ್ಲಿ ತಕ್ಷಣದ ಫಲಿತಾಂಶ ತೋರದಿರುವುದರಿಂದ ಕೆಲವರಿಗೆ ಬೇಸರ ಉಂಟಾಗಬಹುದು.

ಆದರೆ ದೀರ್ಘಾವಧಿಯಲ್ಲಿ ಶಿಸ್ತು ಜೀವನವನ್ನು ಬದಲಾಯಿಸುತ್ತದೆ.

ಪ್ರೆರಣೆಯಿಂದ ಸಾಗುವ  ಯಶಸ್ಸಿನ ಹಾದಿಯಲ್ಲಿ ಯಶಸ್ಸು  ದೊರೆಯುವ ಸಾಧ್ಯತೆಯು ಕಡಿಮೆ.  ಆದರೆ ಶಿಸ್ತಿನಿಂದ ಯಶಸ್ಸಿನೆಡೆಗೆ  ಸಾಗುವ ಹಾದಿಯಲ್ಲಿ ಗುರಿ ತಲುಪುವ ಸಾಧ್ತೆಯು ಹೆಚ್ಚಿರುತ್ತದೆ. ಉದಾಹರಣೆಗೆ ಯಾವುದಾದರೊಂದು ಫಿಟ್‌ ನೆಸ್‌ ಕುರಿತು ಪುಸ್ತಕ ಓದಿದಾಗ ಅಥವಾ ಅದಕ್ಕೆ ಸಂಬಂಧಿಸಿದ ವಿಡಿಯೋ ನೋಡಿ ಪ್ರೇರಣೆಗೊಂಡು ವ್ಯಾಯಾಮ ಮಾಡುವುದು ಕ್ಷಣಿಕವಾಗಿರುತ್ತದೆ, ಇದನ್ನು ನಿರಂತರವಾಗಿ ಮುಂದುವರೆಸಲು ಅಸಾಧ್ಯವಾಗಬಹುದು. ಇದಕ್ಕೆ ಹೊರತಾಗಿ ಶಿಸ್ತಿನಿಂದ ದಿನನಿತ್ಯ ವ್ಯಾಯಾಮ ಮಾಡುವ ಅಭ್ಯಾಸದಿಂದ  ದೇಹದ ಆರೋಗ್ಯ ಸುಧಾರಿಸುತ್ತದೆ.

ಪ್ರೇರಣೆಯಿಂದ ಉಂಟಾಗುವ ಪರಿಣಾಮಗಳು ಪ್ರಾರಂಭದಲ್ಲಿ ಕುತೂಹಲಕರವಾಗಿರುತ್ತವೆ. ಆದರೆ ದೀರ್ಘಾವದಿಯಲ್ಲಿ ಅನುಕೂಲಕರವಾಗಿರುವುದಿಲ್ಲ. ಶಿಸ್ತಿನಿಂದ ಉಂಟಾಗುವ ಪರಿಣಾಮಗಳು  ಹೆಚ್ಚು ಸಮಯವನ್ನು ಅವಲಂಬಿಸಿರುತ್ತವೆ ಮತ್ತು ನಿರಂತರತೆಯನ್ನು ಬೇಡುತ್ತವೆ.

ಪ್ರೇರಣೆಗೆ ಮೂಲ ಬಹುಶತ ಹೊರಗಿನ ಅಂಶಗಳೇ ಕಾರಣವಾಗುತ್ತವೆ. ಶಿಸ್ತಿಗೆ ಮೂಲ ಹೃದಯಾಂತರಾಳದಿಂದ ಉಂಟಾಗುವ ನಿಯಂತ್ರಣ ಕಾರಣವಾಗಿರುತ್ತದೆ.

ಪ್ರೇರಣೆಯ ಸ್ವಭಾವವು  ಕ್ಷಣಿಕವಾದ ಭಾವನಾಧಾರಿತವಾಗಿರುತ್ತದೆ. ಆದರೆ ಶಿಸ್ತು ಸ್ಥಿರ ಸ್ವಭಾವದ ಅಭ್ಯಾಸ ಆಧಾರಿತವಾಗಿರುತ್ತದೆ.

ಶಿಸ್ತು ಮತ್ತು ಪ್ರೇರಣೆಗೆಯ ನಿಜ ಜೀವನದ ಉದಾಯಹರಣೆಗಳು

ಕೇವಲ ಅಂಕಗಳನ್ನು  ಮಾತ್ರವೆ ಬಯಸುವ ವಿದ್ಯಾರ್ಥಿಯು  ಪರೀಕ್ಷೆಗೆ ಹತ್ತಿರವಾದಾಗ ಮಾತ್ರ ಪುಸ್ತಕ ಓದುತ್ತಾನೆ ಇದರಿಂದ  ಅವನು ತಾತ್ಕಾಲಿಕವಾಗಿ ಅಂದರೆ  ಕೇವಲ ಸರ್ಟಿಫಿಕೇಟ್‌ ಗಾಗಿ  ಉತ್ತಮ ಅಂಕಗಳನ್ನು ಗಳಿಸಬಹುದು, ಆದರೆ ದೀರ್ಘಕಾಲದ ಜ್ಞಾನಾರ್ಜನೆಗೆ ಇದು ಸಾಕಾಗುವುದಿಲ್ಲ.

ಶಿಸ್ತು ಆಧಾರಿತ ಜೀವನದಲ್ಲಿ  ಪ್ರತಿದಿನ ಸಮಯಕ್ಕೆ ಸರಿಯಾಗಿ  ಓದುವ ವಿದ್ಯಾರ್ಥಿಯು , ನಿಧಾನವಾಗಿಯೇ  ಆದರೂ  ದೃಢವಾಗಿ ವಿಷಯವನ್ನು ಅರ್ಥಮಾಡಿಕೊಂಡು  ಆಳವಾಗಿ ತಿಳಿದುಕೊಳ್ಳುತ್ತಾನೆ. ಇದರಿಂದ ಅವನ ಯಶಸ್ಸು ದೀರ್ಘಾವಧಿಯವರೆಗೂ ಸಾಧ್ಯವಾಗುತ್ತದೆ.

ವ್ಯಾಯಾಮವನ್ನು  ಶಿಸ್ತು ಮತ್ತು ಪ್ರೇರಣೆಗೆ ಉತ್ತಮವಾದ ಉದಾಹರಣೆಯಾಗಿ ಎರಡಕ್ಕೂ ನೀಡಬಹುದು. ಕೆಲವರು  ಹೊಸ ವರ್ಷದ ಸಂಕಲ್ಪದ ಪ್ರೇರಣೆಯಿಂದ  ಜನವರಿಯಲ್ಲಿ ಜಿಮ್ ಸೇರಿದ ಕೆಲ ದಿನಗಳು ಮಾತ್ರ  ವ್ಯಾಯಾಮ ಮಾಡುವವರು ಬಹಳಷ್ಟು ಮಂದಿ. ಆದರೆ ಶಿಸ್ತಿನಿಂದ ಪ್ರತಿದಿನ ವ್ಯಾಯಾಮ ಮಾಡುವವರು ಮಾತ್ರ ಆರೋಗ್ಯಕರ ದೇಹವನ್ನು ಹೊಂದಿರುತ್ತಾರೆ.

 


 ಶಿಸ್ತನ್ನು ಬೆಳೆಸಿಕೊಳ್ಳುವ ಹಂತಗಳು

  1. ಗುರಿಗಳನ್ನು ಸಾಧಿಸುವಾಗ ಮೊದಲು  ಸಣ್ಣ ಗುರಿಯಿಂದ ಪ್ರಾರಂಭಿಸಿ ಮತ್ತು ದೊಡ್ಡ ಗುರಿಯನ್ನು ಸಣ್ಣ ಸಣ್ಣ  ಹಂತಗಳಾಗಿ ವಿಂಗಡಿಸಿ ದೊಡ್ಡ ಗುರಿಯೆಡೆಗೆ ಹೆಜ್ಜೆ ಹಾಕಿ.
  2. ನಿರ್ದಿಷ್ಟ ಸಮಯವನ್ನು ನಿಗದಿ ಮಾಡುವ ಮೂಲಕ, ಪ್ರತಿದಿನ ಅದೇ ಸಮಯದಲ್ಲಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. 
  3. ಗುರಿಯನ್ನು ಒಂದು ಕಡೆ ಬರೆಯಿರಿ. ಮನಸ್ಸಿನಲ್ಲೇ ಇಟ್ಟುಕೊಳ್ಳುವುದಕ್ಕಿಂತ ಬರೆಯುವುದು ಪರಿಣಾಮಕಾರಿ.
  4. ಸ್ವಯಂ ನಿಯಂತ್ರಣವನ್ನು ಅಭ್ಯಾಸ ಮಾಡಿರಿ. ಸೋಮಾರಿತನ ಅಥವಾ ಅಲಸ್ಯವನ್ನು ನಿರಾಕರಿಸಿ.
  5. ನಿಮ್ಮ ಪ್ರಗತಿಯನ್ನು ಗಮನಿಸಿಕೊಳ್ಳಿ ಸಣ್ಣ ಸಣ್ಣ ಸಾಧನೆಗಳನ್ನೂ ಆಚರಿಸಿರಿ.

 

ಹಾಗಾದರೆ  ಪ್ರೇರಣೆಯ ಅಗತ್ಯವಿದೆಯೇ?

ಹೌದು. ಪ್ರೇರಣೆ ನಮಗೆ ಆರಂಭದ ಕಿಡಿ ನೀಡುತ್ತದೆ. ಅದು ಕನಸುಗಳಿಗೆ ಬಣ್ಣ ತುಂಬುತ್ತದೆ. ಆದರೆ ಕೇವಲ ಪ್ರೇರಣೆಯಿಂದ ಮಾತ್ರ ಸಾಕಾಗುವುದಿಲ್ಲ. ಪ್ರೇರಣೆ ಬಂದಾಗ ಅದನ್ನು ಶಿಸ್ತಿನ ಮೂಲಕ ಗಟ್ಟಿ ಮಾಡದಿದ್ದರೆ, ಕನಸುಗಳು ಗಾಳಿಯಲ್ಲಿ ಹಾರಿಬಿಡುತ್ತವೆ.

 

ಶಿಸ್ತು ಪ್ರೇರಣೆ  ಸಮನ್ವಯದ  ಅಗತ್ಯತೆ  ಎನು?

  • ಪ್ರೇರಣೆಹೊಸದನ್ನು  ಆರಂಭಿಸಲು.
  • ಶಿಸ್ತುಆರಂಭಿಸಿದ್ದನ್ನು  ಮುಂದುವರಿಸಲು ಮತ್ತು ಗುರಿ ತಲುಪಲು.

ಹೀಗಾಗಿ ದೀರ್ಘಕಾಲದ ಯಶಸ್ಸಿಗೆ ಶಿಸ್ತು ಪ್ರಮುಖ ಅಸ್ತ್ರ. ಆದರೆ ಶಿಸ್ತು ಮತ್ತು ಪ್ರೇರಣೆ ಎರಡೂ ಜೊತೆಯಾಗಿ ಬಂದಾಗ ಜೀವನದಲ್ಲಿ ಅಸಾಧ್ಯವೆನಿಸಬಹುದಾದ ಸಾಧನೆಗಳೂ ಸಾಧ್ಯವಾಗುತ್ತವೆ.

 

🟢 ಶಿಸ್ತನ್ನು ರೂಢಿಸಿಕೊಳ್ಳಲು ಆರಂಭಿಕ ತಂತ್ರಗಳು

. ಸಣ್ಣ ಸಣ್ಣ ಗುರಿಗಳಿಂದ ಪ್ರಾರಂಭಿಸಿ.

ಹೊಸದಾಗಿ ಆರಂಭಿಸುವ ಯೋಜನೆಗಳಲ್ಲಿ, ಒಮ್ಮೆಲೆ ದೊಡ್ಡ ಬದಲಾವಣೆ ತರಲು ಯತ್ನಿಸಬೇಡಿ.

ಉದಾಹರಣೆಗೆ ಪ್ರಾರಂಭದಲ್ಲಿಯೇ  ಪ್ರತಿದಿನ 2 ಗಂಟೆ ವ್ಯಾಯಾಮ ಮಾಡುವ ಬದಲು, ಮೊದಲಿಗೆ 15 ನಿಮಿಷದಿಂದ  ಪ್ರಾರಂಭಿಸಿ. ಇದರಿಂದ ಸಣ್ಣ ಗುರಿ ಸಾಧಿಸಿದ ಅನುಭವ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತರಲಿದೆ.

. ಸ್ಥಿರವಾದ ಸಮಯ ನಿಗದಿ ಮಾಡಿ.

ಶಿಸ್ತು ಎಂದರೆ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಕೆಲಸ ಮಾಡುವುದು. ಪ್ರತಿದಿನ ಅದೇ ಸಮಯಕ್ಕೆ ಏಳುವುದು, ಓದುವುದು, ವ್ಯಾಯಾಮ, ಧ್ಯಾನ  ಇತ್ಯಾದಿ ಯಾವುದಾದರೂ ಕಾರ್ಯವನ್ನು ನಿಶ್ಚಿತ ಸಮಯಕ್ಕೆ ನಿಗದಿ ಮಾಡುವುದು ಅಭ್ಯಾಸಕ್ಕೆ ಸಹಾಯ ಮಾಡುತ್ತದೆ.

. ಒಂದು ರೂಟೀನ್ ರೂಪಿಸಿ.

ದಿನಚರಿ ರೂಢಿಸಿಕೊಂಡಾಗ  ಶಿಸ್ತು ಸ್ವಯಂ ಬೆಳೆಯುತ್ತದೆ.  ಬೆಳಗ್ಗೆ ಎದ್ದ ಮೇಲೆ ಹಾಸಿಗೆ ಸರಿಪಡಿಸುವುದು, ರಾತ್ರಿ ಮಲಗುವ ಮೊದಲು ಪುಸ್ತಕ ಓದುವುದು.
ಇಂತಹ ಸಣ್ಣ ರೂಟೀನ್ಗಳು ದೈನಂದಿನ ಶಿಸ್ತಿಗೆ ಅಡಿಪಾಯವಾಗುತ್ತವೆ.

. ವ್ಯತ್ಯಯಗಳನ್ನು ಕಡಿಮೆ ಮಾಡಿ

ಶಿಸ್ತಿಗೆ ಅಡ್ಡಿಯಾಗುವ ದೊಡ್ಡ ಶತ್ರು ವಿಚಲನೆಗಳು,  ಕೆಲಸ ಮಾಡುವಾಗ ಮೊಬೈಲ್ನ್ನು ದೂರವಿಡಿ.

ಟಿವಿ, ಸೋಷಿಯಲ್ ಮೀಡಿಯಾಗೆ ಬಳಕೆಯಾಗುವ  ಸಮಯವನ್ನು ನಿಯಂತ್ರಿಸಿ.

. ಸ್ವಯಂ ಶಹಬಾಸ್‌ ಗಿರಿ ನೀಡಿ.

ಒಂದು ಗುರಿ ಸಾಧಿಸಿದಾಗ ನಿಮ್ಮನ್ನು ನೀವು ಮೆಚ್ಚಿಕೊಳ್ಳಿ. ಒಂದು ವಾರ ನಿರಂತರವಾಗಿ  ವ್ಯಾಯಾಮ ಮಾಡಿದರೆ ನಿಮಗೆ ಇಷ್ಟವಾದ ಸಣ್ಣ ಉಡುಗೊರೆ ಕೊಳ್ಳಿ.

ಸಾಧನೆಗೆ ಪಾಸಿಟಿವ್ ಅನುಭವ ನೀಡುವುದರಿಂದ ಶಿಸ್ತು ಬಲವಾಗುತ್ತದೆ.

. ಹೆಜ್ಜೆ ಹೆಜ್ಜೆಯಾಗಿ ಅಭ್ಯಾಸ ಮಾಡಿರಿ

ಒಮ್ಮೆಲೆ ಹಲವು ಕ್ಷೇತ್ರಗಳಲ್ಲಿ ಶಿಸ್ತು ತರಲು ಯತ್ನಿಸಬೇಡಿ. ಮೊದಲಿಗೆ ಒಂದೊಂದೆ  ಅಭ್ಯಾಸ (ಉದಾ: ಬೆಳಗ್ಗೆ ಬೇಗ ಎದ್ದುಕೊಳ್ಳುವುದು)ವನ್ನು ರೂಢಿಸಿಕೊಳ್ಳಿ, ಆಗ ಅದು ಬಲವಾದ ನಂತರ  ಮತ್ತೊಂದು ಸೇರಿಸಿಕೊಳ್ಳಿ.

. ಸ್ವಯಂ-ನಿರೀಕ್ಷಣೆ (Self-tracking)

ನೀವು ಮಾಡಿರುವ ಪ್ರಗತಿಯನ್ನು ವಿಶ್ಲೇಷಣೆ ಮಾಡಿಕೊಳ್ಳಿ, ಇದರಲ್ಲಿ ದಿನಚರಿ  ಬರೆಯುವುದು. ಮತ್ತು ಕ್ಯಾಲೆಂಡರ್ನಲ್ಲಿ ಗುರುತು ಹಾಕುವುದು  ಶಿಸ್ತನ್ನು ದೃಢಪಡಿಸುತ್ತವೆ.

. ಪ್ರೇರಣೆಗೂ ಅವಕಾಶ ಕೊಡಿ

ಶಿಸ್ತು ದೀರ್ಘಕಾಲದ ಶಕ್ತಿ ಆದರೆ ಪ್ರೇರಣೆಯೇ  ಆರಂಭದ ಕಿಡಿ. ಆದ್ದರಿಂದ ಪ್ರೇರಣಾದಾಯಕ ಪುಸ್ತಕಗಳನ್ನು ಓದಿ. ಯಶಸ್ವಿ ವ್ಯಕ್ತಿಗಳ ಅನುಭವಗಳನ್ನು  ಕೇಳಿ. ಇವು ಶಿಸ್ತನ್ನು ಅನುಸರಿಸಲು ಹೊಸ ಚೈತನ್ಯ ನೀಡುತ್ತವೆ.

ಪ್ರತಿ ದಿನ ಸ್ವಲ್ಪ ಸ್ವಲ್ಪವಾಗಿ ಮಾಡುವ ಕಾರ್ಯವೇ ಶಿಸ್ತನ್ನು ಗಟ್ಟಿಗೊಳಿಸುತ್ತದೆ.”
ನೀವು ಇಂದು ಒಂದು ಹೆಜ್ಜೆ ಇಟ್ಟರೆ, ನಾಳೆ ಅದು ಸಹಜ ಅಭ್ಯಾಸವಾಗುತ್ತದೆ.

 

🗓️ 30 ದಿನಗಳ ಶಿಸ್ತು ಸಾಧಿಸುವ  ಚಾಲೆಂಜ್

🔹 ವಾರ ಮೂಲ ಅಭ್ಯಾಸ

👉 ಗುರಿ: ದಿನಚರಿಯಲ್ಲಿ  ಸರಳತೆ ತರುವುದು

  • Day 1–3: ಬೆಳಗ್ಗೆ ಮೊದಲಿಗಿಂತ  15 ನಿಮಿಷ ಬೇಗ  ಏಳಿರಿ.
  • Day 4–5: ಎದ್ದು ಹಾಸಿಗೆ ಸರಿಪಡಿಸುವ ಅಭ್ಯಾಸ ಮಾಡಿರಿ.
  • Day 6: ದಿನದಲ್ಲಿ ಅಗತ್ಯವಾದ  3 ಕೆಲಸಗಳನ್ನು ಬರೆದುಕೊಳ್ಳಿ.
  • Day 7:  ದಿನ ಸಂಪೂರ್ಣ ವಿಮರ್ಶೆ  ಇಷ್ಟು ದಿನದ ಶಿಸ್ತು ಪಾಲನೆಯಲ್ಲಿ ಏನು ಚೆನ್ನಾಗಿದೆ, ಏನು ಕಷ್ಟವಾಯಿತು ಎಂಬುದನ್ನು ಬರೆಯಿರಿ.

 

🔹 ವಾರ ಸ್ವಯಂ ನಿಯಂತ್ರಣದ ಕಡೆ ಗಮನ ನೀಡಿ.

👉 ಗುರಿ: ವ್ಯತ್ಯಯಗಳನ್ನು ಕಡಿಮೆ ಮಾಡಿರಿ

  • Day 8–9: ಊಟದ ಸಮಯದಲ್ಲಿ ಮೊಬೈಲ್ ಬಳಸಬೇಡಿ.
  • Day 10–11: ಕೆಲಸ/ಓದುವ ಸಮಯದಲ್ಲಿ 30 ನಿಮಿಷ ಮೊಬೈಲ್ನ್ನು ದೂರವಿಡಿ.
  • Day 12–13: ರಾತ್ರಿ ಮಲಗುವ ಮುನ್ನ 20 ನಿಮಿಷ ಪುಸ್ತಕ ಓದಿ.
  • Day 14: ಹಿಂದಿನ ವಾರಗಳ ಅಭ್ಯಾಸಗಳನ್ನು ಪರಿಶೀಲಿಸಿ.

 

🔹 ವಾರ ದೇಹ ಮತ್ತು ಮನಸ್ಸಿನ ಶಿಸ್ತು

👉 ಗುರಿ: ಆರೋಗ್ಯ ಮತ್ತು ಮನಸ್ಸಿನ ಏಕಾಗ್ರತೆ

  • Day 15–16: ಬೆಳಗ್ಗೆ 10 ನಿಮಿಷ ನಡೆಯಿರಿ ಅಥವಾ ವ್ಯಾಯಾಮ ಮಾಡಿ.
  • Day 17–18: 10 ನಿಮಿಷ ಧ್ಯಾನ (ಶಾಂತವಾಗಿ ಕುಳಿತು ಉಸಿರಾಟದ ಮೇಲೆ ಗಮನ) ಮಾಡಿ.
  • Day 19–20: ಆರೋಗ್ಯಕರ ಆಹಾರ (ಫಾಸ್ಟ್ ಫುಡ್ ಬಿಟ್ಟು ಹಣ್ಣು/ತರಕಾರಿ) ಸೇವನೆ ಮಾಡಿ.
  • Day 21: ದೇಹಮನಸ್ಸಿನ ಬದಲಾವಣೆಗಳನ್ನು ಗಮನಿಸಿ ದಾಖಲಿಸಿಕೊಳ್ಳಿ.

 

🔹 ವಾರ ಗುರಿ ಸಾಧನೆಗೆ ಶಿಸ್ತು

👉 ಗುರಿ: ಗುರಿಯ ಕಡೆಗೆ ನಿರಂತರ ಪ್ರಯತ್ನ ಇರಲಿ

  • Day 22–23: ನಿಮ್ಮ ದೊಡ್ಡ ಗುರಿ ಬರೆದು ಅದನ್ನು ಸಣ್ಣ ಹಂತಗಳಾಗಿ ವಿಭಜಿಸಿ ಪ್ರಯತ್ನಿಸಿ.
  • Day 24–25: ಪ್ರತಿದಿನ ಗುರಿಗೆ ಸಂಬಂಧಿಸಿದ ಕೆಲಸವನ್ನು 20 ನಿಮಿಷಗಳ ಕಾಲ ಮಾಡಿ.
  • Day 26–27: ಸಣ್ಣ ಪ್ರಗತಿಯನ್ನೂ ದಾಖಲಿಸಿ (ಡೈರಿ/ನೋಟ್ಬುಕ್ನಲ್ಲಿ).
  • Day 28: ಒಂದು ಸಣ್ಣ ಸಾಧನೆಯನ್ನು ಆಚರಿಸಿ.
  • Day 29: ಶಿಸ್ತು ಯಾವೆಲ್ಲ ಕಡೆ ರೂಢಿಯಾಗಿದೆ ಎಂಬುದನ್ನು ಗುರುತಿಸಿ.
  • Day 30: ಈ ಮಾದರಿಗಳನ್ನು  ಅನುಸರಿಸಿ ನಿಮ್ಮದೇಶಿಸ್ತು ಪ್ಲ್ಯಾನ್ಬರೆಯಿರಿ.

 

 

ಪ್ರೇರಣೆ ನಿಮಗೆ ಆರಂಭಿಸಲು ಪ್ರಚೋದನೆ ಕೊಡುತ್ತದೆ, ಆದರೆ ಶಿಸ್ತು ನಿಮ್ಮ ಗುರಿ ತಲುಪಿಸುತ್ತದೆಎಂಬ ಮಾತು ಇಲ್ಲಿ ಸತ್ಯ.
ನಾವು ಜೀವನದಲ್ಲಿ ಏನನ್ನೇ ಸಾಧಿಸಲು ಬಯಸಿದರೂ, ಪ್ರೇರಣೆಯ ಕಿಡಿಯನ್ನು ಶಿಸ್ತಿನ ಬೆಂಕಿಯಲ್ಲೇ ಬೇಯಿಸಬೇಕು. ಕ್ಷಣಿಕ ಉತ್ಸಾಹವು ನಿಮ್ಮನ್ನು  ಮೊದಲ ಹೆಜ್ಜೆಗೆ ನಾಂದಿ ಹಾಡುತ್ತದೆ, ಆದರೆ ಶಿಸ್ತು ಮಾತ್ರ ನಿಮ್ಮನ್ನು ಅಂತಿಮ ಗುರಿಯವರೆಗೆ ಕೊಂಡೊಯ್ಯುತ್ತದೆ.

ಹೀಗಾಗಿ, ದೀರ್ಘಾವಧಿಯ ಯಶಸ್ಸಿಗೆ ಶಿಸ್ತು ಮುಖ್ಯಪ್ರೇರಣೆ ಅದರ ಪೂರಕ.

ಸಣ್ಣ ಸಣ್ಣ ಹಂತಗಳಿಂದ ಪ್ರಾರಂಭಿಸಿನಿರಂತರವಾಗಿ ಮಾಡಿಪ್ರಗತಿ ದಾಖಲಿಸಿಸಾಧನೆಕಡೆಗೆ ನಿಮ್ಮನ್ನು ಒಡ್ಡಿಕೊಳ್ಳಿ.

 

 

 

ಧನ್ಯವಾದಗಳು……..🌷🌷🌷🌷🌷

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......