ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಆರೋಗ್ಯಕರ ಮಹಿಳೆ – ಸಂತೋಷಕರ ಕುಟುಂಬ.... ಮಹಿಳೆಯರ ಆರೋಗ್ಯದ ಮಹತ್ವ ಮತ್ತು ಸಲಹೆಗಳು

 


ಲೇಖಕಿ:ನಾಗಲಕ್ಷ್ಮಿ ಕೆ.ಎನ್.‌ ದಿನಾಂಕ:೨೪.೦೮.೨೦೨೫

ಹೆಣ್ಣು ಕುಟುಂಬದ ಕಣ್ಣುಎನ್ನುವುದು ಕೇವಲ ಒಂದು ಸುಂದರ ವಾಕ್ಯವಲ್ಲ, ಅದು ಸಮಾಜದ ನಿಜವಾದ ಅನುಭವ.

ಕಣ್ಣು ಎನ್ನುವುದು ದೇಹಕ್ಕೆ ಬೆಳಕು ತೋರಿಸುವ ಅಂಗವಾಗಿದೆ. ಹಾಗಾಗಿ ಕಣ್ಣುಗಳಿಲ್ಲದೆ ಇದ್ದರೆ ಜೀವನ ಅಂಧಕಾರದಲ್ಲಿ ತುಂಬಿಹೋಗುತ್ತದೆ. ಅದೇ ರೀತಿಯಾಗಿ ಹೆಣ್ಣು ಮನೆಯ ಬೆಳಕಾಗಿ, ಮಾರ್ಗದರ್ಶಕಳಾಗಿ,  ಕುಟುಂಬವು ನೆಲೆಗೊಳ್ಳಲು ಹಾಗೂ ಸಮತೋಲನವಾಗಿನಡೆಸಿಕೊಂಡು ಹೋಗಲು ಬೇಕೇ ಬೇಕು.

ಮನೆಯ ಎಲ್ಲಾ ವಿಚಾರಗಳಲ್ಲಿ ಯಾವ ಆಯ್ಕೆ ಸರಿಯೆಂಬುದನ್ನು ತೋರಿಸುವುದು ಹೆಣ್ಣಿನ ಬುದ್ಧಿವಂತಿಕೆ, ತಾಳ್ಮೆ ಮತ್ತು ಜ್ಞಾನ. ಆಕೆಯ ನಿರ್ಧಾರಗಳು ಕುಟುಂಬವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತವೆ.

ಅಮ್ಮ, ಅಜ್ಜಿ, ಅಕ್ಕ, ಪತ್ನಿಯಾವ ರೂಪದಲ್ಲಿದ್ದರೂ ಹೆಣ್ಣು ತನ್ನ ಪ್ರೀತಿ ಮತ್ತು ಕಾಳಜಿಯಿಂದ ಮನೆಯ ಪ್ರತಿಯೊಬ್ಬರ ಹೃದಯವನ್ನು ಹತ್ತಿರಕ್ಕೆ ಸೆಳೆಯುತ್ತಾಳೆ. ಆಕೆಯ ನೋಟವೇ ಭದ್ರತೆ ಮತ್ತು ಮಮತೆಯ ಸಂಕೇತ.

ಮನೆಯ ಸಂಸ್ಕಾರ, ಹಬ್ಬ, ಆಚರಣೆ, ಭಾಷೆ, ಪರಂಪರೆಇವೆಲ್ಲವನ್ನು ಕಾಪಾಡಿ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಹೆಚ್ಚಿನದಾಗಿ ಹೆಣ್ಣಿನ ಮೇಲಿದೆ. ಆಕೆ ಕುಟುಂಬದ ಸಾಂಸ್ಕೃತಿಕ ಕಣ್ಣು.

ಸಂಕಷ್ಟ ಬಂದಾಗ ಹೆಣ್ಣಿನ ಧೈರ್ಯ ಮತ್ತು ಸಹನೆಯೇ ಕುಟುಂಬಕ್ಕೆ ಆಧಾರ. ಆಕೆಯ ಸಮಾಧಾನ ಮತ್ತು ಶಕ್ತಿಯೇ ಕುಟುಂಬದ ಬೆನ್ನೆಲುಬು.

ಮನೆಯಲ್ಲಿನ ಒಗ್ಗಟ್ಟು ಮುಗ್ಧತೆ ತುಂಬಿದ ನಗು  ಇವೆಲ್ಲವನ್ನು ಜೀವಂತವಾಗಿಡುವ ಶಕ್ತಿ ಹೆಣ್ಣಿನಲ್ಲಿದೆ. ಆಕೆ ಇಲ್ಲದ ಮನೆ ಕಣ್ಣಿಲ್ಲದ ಮುಖದಂತೆ ಕಾಣುತ್ತದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯು ಕುಟುಂಬದ  ಮನೆತನದ ಹೃದಯ. ಅಮ್ಮ, ಪತ್ನಿ, ಅಕ್ಕ, ತಾಯಿಯಾವ ಪಾತ್ರದಲ್ಲಿದ್ದರೂ ಕುಟುಂಬದ ಪ್ರತಿಯೊಬ್ಬರ ಜೀವನದಲ್ಲಿ ಅವಳ ಪ್ರಭಾವ ಅಪಾರ. “ಆರೋಗ್ಯಕರ ಹೆಣ್ಣುಸಂತೋಷಕರ ಮನೆತನಎಂಬ ಮಾತು ಯಾದೃಚ್ಛಿಕವಲ್ಲ. ಹೆಣ್ಣಿನ ಆರೋಗ್ಯ ಹಾಳಾದರೆ ಮನೆಯ ಸಂಪೂರ್ಣ ಸಮತೋಲನವೇ ಅಸ್ತವ್ಯಸ್ತವಾಗುತ್ತದೆ.

ಮಹಿಳೆಯರು ಸಾಮಾನ್ಯವಾಗಿ ತಮ್ಮ ಪ್ರೀತಿ ಪಾತ್ರರ  ಆರೈಕೆಯಲ್ಲಿ ತೊಡಗಿಸಿಕೊಂಡು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಆದರೆ ಆಕೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಅಸ್ವಸ್ಥಳಾದರೆ ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರ ಮೇಲೂ ಪರಿಣಾಮ ಬೀಳುತ್ತದೆ.

ಆದ್ದರಿಂದ ಹೆಣ್ಣು ಸಂತೋಷವಾಗಿದ್ದರೆ ಮನೆಯ ವಾತಾವರಣವೂ ಸಂತೋಷಕರವಾಗಿರುತ್ತದೆ. ಒತ್ತಡ, ಕಳವಳ, ಅಸ್ವಸ್ಥತೆ ಇದ್ದರೆ ಅದು ಕುಟುಂಬದ ಪ್ರತಿಯೊಬ್ಬರ ಮನೋಭಾವಕ್ಕೂ ಹಾನಿ ಮಾಡುತ್ತದೆ.

ಹೆಣ್ಣು ಆರೋಗ್ಯಕರಳಾಗಿದ್ದರೆ ಮನೆತನದ ದಿನನಿತ್ಯದ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಅನಾರೋಗ್ಯ ಕಂಡುಬಂದರೆ ಮನೆಯ ಆರ್ಥಿಕತೆ, ಸಮಾಜದಲ್ಲಿನ ಸಮತೋಲನ ಎಲ್ಲವೂ ಕುಸಿಯಬಹುದು.

ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರೆ ಮಕ್ಕಳು ಸಹ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಪ್ರೇರಿತರಾಗುತ್ತಾರೆ. ತಾಯಿ ಮನೆಯ ಮೊದಲ ಗುರು ಎಂಬ ಮಾತು ಇಲ್ಲಿ ನಿಜವಾಗುತ್ತದೆ.

ಗರ್ಭಿಣಿ  ತಾಯಿಯ ಆರೋಗ್ಯವು ಮುಂದಿನ ಪೀಳಿಗೆಯ ಆರೋಗ್ಯವನ್ನು ನಿರ್ಧರಿಸುತ್ತದೆ. ತಾಯಿ ಆರೋಗ್ಯಕರವಾಗಿದ್ದರೆ ಮಗುವೂ ಆರೋಗ್ಯಕರವಾಗಿರುತ್ತದೆ. ಹೀಗಾಗಿ ಹೆಣ್ಣಿನ ಆರೋಗ್ಯ ತಲೆಮಾರುಗಳ ಆರೋಗ್ಯಕ್ಕೆ ನೇರ ಸಂಬಂಧ ಹೊಂದಿದೆ.

ಕುಟುಂಬದಲ್ಲಿ ಹೆಣ್ಣಿನ ಆರೋಗ್ಯ ಕೇವಲ ಆಕೆಯದೇ ವಿಷಯವಲ್ಲ, ಅದು ಮನೆತನದ ಆರೋಗ್ಯ, ಸಂತೋಷ ಮತ್ತು ಭವಿಷ್ಯದ ಆಧಾರ. ಆದ್ದರಿಂದ ಮಹಿಳೆಯರು ತಮ್ಮ ಆಹಾರ, ವ್ಯಾಯಾಮ, ನಿಯಮಿತ ತಪಾಸಣೆ ಮತ್ತು ಮಾನಸಿಕ ಆರೋಗ್ಯಕ್ಕೆ ಸಮರ್ಪಕ ಸಮಯ ಕೊಡುವುದು ಅತ್ಯಂತ ಮುಖ್ಯ.

ಮಹಿಳೆಯರು ಕುಟುಂಬದ ಹೃದಯ. ಮನೆ, ಕೆಲಸ, ಮಕ್ಕಳು, ಸಮಾಜಎಲ್ಲದರಲ್ಲೂ ತೊಡಗಿಕೊಂಡಿರುವ ಅವರು ತಮ್ಮದೇ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದನ್ನು ಮರೆತು ಬಿಡುತ್ತಾರೆ. ಆದರೆ ಮಹಿಳೆಯರ ಆರೋಗ್ಯವೇ ಕುಟುಂಬದ ಆರೋಗ್ಯ ಎನ್ನುವುದು ನಿಜ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ತಮ್ಮ ದೈನಂದಿನ ಜೀವನದಲ್ಲಿ ಅನುಸರಿಸಬೇಕಾದ ಆರೋಗ್ಯ ಕ್ರಮಗಳನ್ನು ತಿಳಿದುಕೊಳ್ಳುವುದು ಅವಶ್ಯಕ.

ಮಹಿಳೆಯರ ಆರೋಗ್ಯಕ್ಕೆ  ಟಿಪ್ಸ್  ಒಂದು ಸಮಗ್ರ ಮಾರ್ಗದರ್ಶನ

ಆರೋಗ್ಯವೆಂದರೆ ಕೇವಲ ರೋಗರಹಿತ ಜೀವನವಲ್ಲ, ಬದಲಾಗಿ ದೇಹ, ಮನಸ್ಸು ಮತ್ತು ಭಾವನೆಗಳ ಸಮತೋಲನ. ಮಹಿಳೆಯರು ತಮ್ಮ ಕುಟುಂಬದ ಆರೈಕೆಯಲ್ಲಿ ನಿರತರಾಗಿರುವುದರಿಂದ ತಮ್ಮದೇ ಆರೋಗ್ಯವನ್ನು ಕಡೆಗಣಿಸುವ ಸಂಭವ ಹೆಚ್ಚು. ಆದರೆಆರೋಗ್ಯಕರ ಮಹಿಳೆಆರೋಗ್ಯಕರ ಕುಟುಂಬಎನ್ನುವ ಮಾತು ಸತ್ಯ. ಆದ್ದರಿಂದ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ ಕೆಲ ಆರೋಗ್ಯಕರ ಟಿಪ್ಸ್ ಇಲ್ಲಿವೆ:

. ಸಮತೋಲನ ಆಹಾರ (Balanced Diet) ಸೇವನೆ.

ಆಹಾರವು ದೇಹಕ್ಕೆ ಇಂಧನ. ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶಗಳ ಸಮತೋಲನ ಕಾಪಾಡಿಕೊಳ್ಳಬೇಕು.

ಹಣ್ಣು, ತರಕಾರಿ, ಹಸಿರು ಸೊಪ್ಪು, ಕಾಳುಗಳು ಬೇಳೆಗಳು  ಮತ್ತು ಹಾಲಿನ ಉತ್ಪನ್ನಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. 

ಕ್ಯಾಲ್ಸಿಯಂ, ಐರನ್ ಹಾಗೂ ಪ್ರೋಟೀನ್ಗಳ ಅಗತ್ಯತೆ  ಮಹಿಳೆಯರಿಗೆ ಹೆಚ್ಚು ಇರುವುದರಿಂದ ಅವುಗಳನ್ನು ನಿಯಮಿತವಾಗಿ ಸೇವಿಸಬೇಕು.

ಐರನ್ (ರಕ್ತಹೀನತೆ ತಡೆಯಲು), ಕ್ಯಾಲ್ಸಿಯಂ (ಎಲುಬುಗಳಿಗೆ), ಪ್ರೋಟೀನ್ (ಸ್ನಾಯುಗಳಿಗೆ) ಹಾಗೂ ವಿಟಮಿನ್ಗಳು (ರೋಗ ನಿರೋಧಕ ಶಕ್ತಿಗೆ) ಮುಖ್ಯ.

ಹೆಚ್ಚು ಎಣ್ಣೆ, ಸಕ್ಕರೆ, ಪ್ಯಾಕೇಜ್ಡ್ ಹಾಗೂ ಫಾಸ್ಟ್ ಫುಡ್ಗಳನ್ನು ನಿಯಂತ್ರಿಸಬೇಕು.

ಹಾಗೆ ದಿನಕ್ಕೆ ಸಾಕಷ್ಟು ನೀರು (ಕನಿಷ್ಠ 2–3 ಲೀಟರ್) ಕುಡಿಯುವುದು ಅನಿವಾರ್ಯ.

 


. ನಿಯಮಿತ ವ್ಯಾಯಾಮ ಮಾಡುವುದು.

ಮಹಿಳೆಯರು ಹೆಚ್ಚು ಹೊತ್ತು ಕುಳಿತುಕೊಳ್ಳುವ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ವ್ಯಾಯಾಮ ಅತ್ಯಗತ್ಯ.

ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದು, ಜಾಗಿಂಗ್ ಅಥವಾ ಸೈಕ್ಲಿಂಗ್ ಮಾಡುವುದು ಆರೋಗ್ಯಕ್ಕೆ ಉತ್ತಮ.

ಯೋಗ, ಪ್ರಾಣಾಯಾಮ, ಸ್ಟ್ರೆಚಿಂಗ್ ವ್ಯಾಯಾಮಗಳು ಹೃದಯ ಮತ್ತು ಮನಸ್ಸಿಗೆ ಚೈತನ್ಯ ನೀಡುತ್ತವೆ.

ವ್ಯಾಯಾಮವು ತೂಕ ನಿಯಂತ್ರಣ, ಹೃದಯದ ಆರೋಗ್ಯ ಹಾಗೂ ಮಾನಸಿಕ ಶಾಂತಿ, ಹಾರ್ಮೋನ್ ಸಮತೋಲನ ಮತ್ತು ರಕ್ತದ ಒತ್ತಡ ನಿಯಂತ್ರಣಕ್ಕೆ ಸಹಕಾರಿ.

 

ಮಹಿಳೆಯರು ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದು, ಯೋಗ ಅಥವಾ ಸಣ್ಣ ವ್ಯಾಯಾಮಗಳನ್ನು ಮಾಡುವುದು, ನಿತ್ಯದ ಮನೆಯ ಜವಾಬ್ದಾರಿಗಳಿಂದ  ದೇಹಕ್ಕೆ ಚೈತನ್ಯ ನೀಡುತ್ತವೆ.

 

. ಮನಸ್ಸಿನ ಆರೈಕೆ (Mental Wellness)ಗೆ ಒತ್ತು ನೀಡಿ.

ಇಂದಿನ ವೇಗದ ಜೀವನದಲ್ಲಿ ಮಹಿಳೆಯರ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಆದ್ದರಿಂದ ಮನಸ್ಸಿನ ಒತ್ತಡವನ್ನು ನಿಯಂತ್ರಿಸಲು ಧ್ಯಾನ, ಪ್ರಾಣಾಯಾಮ, ಹವ್ಯಾಸಗಳಲ್ಲಿ ತೊಡಗುವುದು ಉತ್ತಮ.

ಸಾಕಷ್ಟು ನಿದ್ರೆ (7–8 ಗಂಟೆ) ಮಾಡುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅವಶ್ಯಕ.

ಧ್ಯಾನ, ಪ್ರಾಣಾಯಾಮ, ಹವ್ಯಾಸಗಳಲ್ಲಿ ತೊಡಗುವುದು ಒತ್ತಡ ನಿವಾರಣೆಗೆ ಸಹಕಾರಿ.

ಮನಸ್ಸಿನಲ್ಲಿ ಕಳವಳ, ದೌರ್ಬಲ್ಯ ಅಥವಾ ಮನೋವೇದನೆ ಕಂಡುಬಂದರೆ ಮನೋವೈದ್ಯರ ಸಲಹೆ ಪಡೆಯುವುದರಲ್ಲಿ ಹಿಂಜರಿಯಬೇಡಿ.

 

. ಮಾಸಿಕ ಚಕ್ರದ ಆರೈಕೆಯ ಕಡೆಗೆ ಗಮನವಿರಲಿ.

ಮಾಸಿಕ ಧರ್ಮವು ಮಹಿಳೆಯರ ಆರೋಗ್ಯದಲ್ಲಿ ಅತ್ಯಂತ ಮುಖ್ಯ ಹಂತ. ಅವಧಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ.

ಅಸಹಜ ನೋವು, ಅತಿಯಾದ ರಕ್ತಸ್ರಾವ ಅಥವಾ ಚಕ್ರದ ಅಸಮಂಜಸತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಮಾನಸಿಕ ಆರೈಕೆಗೂ ಹೆಚ್ಚಿನ ಗಮನ ಕೊಡಬೇಕು, ಏಕೆಂದರೆ ಸಮಯದಲ್ಲಿ ಮನೋಭಾವದಲ್ಲಿ ಬದಲಾವಣೆಗಳು ಸಾಮಾನ್ಯ.

ಆದ್ದರಿಂದ ಋತು ಚಕ್ರದ ಸಮಯದಲ್ಲಿ ಶುದ್ಧತೆ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ.

 

. ಆರೋಗ್ಯ ತಪಾಸಣೆ (Health Check-ups) ಮಾಡಿಸಿಕೊಳ್ಳಿ.

ಮಹಿಳೆಯರು ತಮ್ಮ ದೇಹದ ಅನಿಯಂತ್ರಿತ ಬದಲಾವಣೆಯನ್ನು ಅದರ  ಆರೋಗ್ಯ ಪರಿಶೀಲನೆಯನ್ನು   ನಿರ್ಲಕ್ಷಿಸಬಾರದು.

 ರಕ್ತದೊತ್ತಡ, ಶುಗರ್, ಥೈರಾಯ್ಡ್ ಮುಂತಾದವುಗಳನ್ನು ಕನಿಷ್ಠ ವರ್ಷಕ್ಕೆ ಒಮ್ಮೆ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

30 ವರ್ಷ ಮೇಲ್ಪಟ್ಟವರು ಮಹಿಳಾ ಆರೋಗ್ಯ ತಪಾಸಣೆ (ಗೈನಕಾಲಜಿಸ್ಟ್ಚೆಕ್ಅಪ್) ಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು.

ಬ್ರೆಸ್ಟ್ ಕ್ಯಾನ್ಸರ್ ಮತ್ತು ಗರ್ಭಾಶಯ ಸಂಬಂಧಿತ ತಪಾಸಣೆಗಳನ್ನು ನಿರ್ಲಕ್ಷಿಸಬಾರದು.

 

. ಗರ್ಭಧಾರಣೆ ಮತ್ತು ಪ್ರಸವ ನಂತರದ ಆರೈಕೆ

ಗರ್ಭಧಾರಣೆಯ ಅವಧಿಯಲ್ಲಿ ಮತ್ತು ನಂತರ ಮಹಿಳೆಯರಿಗೆ ವಿಶೇಷ ಆರೈಕೆ ಅತ್ಯಗತ್ಯ.

ಗರ್ಭಿಣಿಯರು ವೈದ್ಯರ ಸಲಹೆಯಂತೆ ಪೌಷ್ಟಿಕ ಆಹಾರ ಮತ್ತು ಔಷಧಿ ಸೇವಿಸಬೇಕು.

ಪ್ರಸವದ ನಂತರ ದೈಹಿಕ ಹಾಗೂ ಮಾನಸಿಕ ಚೇತರಿಕೆಗೆ ಅಗತ್ಯ ಸಮಯ ಕೊಡಬೇಕು.

ಮೊದಲಬಾರಿಗೆ ತಾಯಿಯಾಗುತ್ತಿರುವವರು ತಮ್ಮ ಆರೋಗ್ಯವನ್ನು ಕಡೆಗಣಿಸದೆ, ತಜ್ಞರಿಂದ ಸಲಹೆ ಪಡೆಯಬೇಕು.

 

. ಸ್ವಯಂ ಸಮಯ (Me-Time)

ಕುಟುಂಬದ ಜವಾಬ್ದಾರಿಗಳ ಜೊತೆಗೆ ಸ್ವಯಂ ಆರೈಕೆಗೆ  ಪ್ರಾಮುಖ್ಯತೆ ನೀಡಬೇಕು.

ಪುಸ್ತಕ ಓದುವುದು, ಸಂಗೀತ ಕೇಳುವುದು, ಪ್ರವಾಸ ಹೋಗುವುದು, ಸ್ನೇಹಿತರ ಜೊತೆ ಮಾತನಾಡುವುದು ಮನಸ್ಸಿಗೆ ಹಿತ ನೀಡುತ್ತದೆ.

ಸ್ವಯಂ ಆರೈಕೆಗೆ ಪ್ರಾಮುಖ್ಯತೆ ಕೊಟ್ಟರೆ ಮನಸ್ಸು ಹಗುರವಾಗುತ್ತದೆ ಮತ್ತು ದೈಹಿಕ ಆರೋಗ್ಯಕ್ಕೂ ಸಹಾಯವಾಗುತ್ತದೆ.

 ಹಾನಿಕಾರಕ ಅಭ್ಯಾಸಗಳಿಂದ ದೂರವಿರಿ

ಮಹಿಳೆಯರು ತಮ್ಮ  ಆರೋಗ್ಯದ ಹಿತಕ್ಕಾಗಿ ಕೆಳಗಿನ ಅಭ್ಯಾಸಗಳನ್ನು ತೊರೆಯಬೇಕು.

ಮದ್ಯಪಾನ, ಧೂಮಪಾನ, ಅತಿಯಾದ ಕಾಫಿ ಮತ್ತು ಟೀ ಸೇವನೆ ವರ್ಜಿಸುವುದು ಉತ್ತಮ.

ಹೆಚ್ಚು ಹೊತ್ತು ಸ್ಕ್ರೀನ್ ಮುಂದೆ ಕುಳಿತುಕೊಳ್ಳುವುದರಿಂದ ತಪ್ಪಿಸಿ, ಕಣ್ಣುಗಳಿಗೆ ವಿಶ್ರಾಂತಿ ನೀಡಿ.

ಏನನ್ನು ತಿನ್ನದೇ ಉಪವಾಸ ಅಥವಾ ಕ್ರಾಶ್ ಡಯಟ್ಗಳನ್ನು ಮಾಡುವುದು ಅನಾರೋಗ್ಯಕ್ಕೆ ದಾರಿ ಮಾಡುತ್ತದೆ.

 

ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸದೆ, ದೈನಂದಿನ ಜೀವನದಲ್ಲಿ ಸರಳ ಟಿಪ್ಸ್ಗಳನ್ನು ಅನುಸರಿಸಿದರೆ ದೀರ್ಘಕಾಲ ಆರೋಗ್ಯಕರ ಜೀವನ ನಡೆಸಬಹುದು. ಮಹಿಳೆಯರ ಆರೋಗ್ಯವೇ ಕುಟುಂಬದ ಸಂತೋಷದ ನೆಲೆ ಎಂಬುದನ್ನು ಮರೆಯಬೇಡಿ.

ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸುವುದು ಅತೀ ದೊಡ್ಡ ತಪ್ಪು. ದೈನಂದಿನ ಜೀವನದಲ್ಲಿ ಸಮತೋಲನ ಆಹಾರ, ವ್ಯಾಯಾಮ, ಸ್ವಚ್ಛತೆ, ಮಾನಸಿಕ ಆರೈಕೆ, ನಿಯಮಿತ ತಪಾಸಣೆ ಇತ್ಯಾದಿ ಕ್ರಮಗಳನ್ನು ಪಾಲಿಸಿದರೆ ದೀರ್ಘಕಾಲ ಆರೋಗ್ಯಕರ ಜೀವನ ನಡೆಸಬಹುದು.

ಆರೋಗ್ಯಕರ ಮಹಿಳೆಸಂತೋಷಕರ ಕುಟುಂಬ ಎಂಬ ಮಾತನ್ನು ಮರೆಯಬೇಡಿ.

 

👩‍👧‍👦ಹೆಣ್ಣು ಕುಟುಂಬದ ಕಣ್ಣುಎಂದರೆಆಕೆ ಮನೆಯ ಮಾರ್ಗದರ್ಶಕ, ಮಮತೆಯ ಮೂಲ, ಸಂಸ್ಕಾರದ ತಾಯಿ, ಬಲ ಮತ್ತು ಸಂತೋಷದ ಕೇಂದ್ರ. ಹೆಣ್ಣಿಲ್ಲದ ಮನೆಗೆ ಬೆಳಕು ಇರುವುದಿಲ್ಲ.

ಮಹಿಳೆಯರ ಆರೋಗ್ಯವೇ ಮನೆಗೆ ಶಾಂತಿ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಮಾನಸಿಕ ಶಾಂತಿ ಮತ್ತು ಆರೋಗ್ಯ ತಪಾಸಣೆಗಳ ಮೂಲಕ ಹೆಣ್ಣಿನ ಆರೋಗ್ಯ ಕಾಪಾಡಿದರೆ ಕುಟುಂಬ ಸಂಪೂರ್ಣ ಸಂತೋಷ ಮತ್ತು ಸಮತೋಲನದಿಂದಿರುತ್ತದೆ.

 

 

ಧನ್ಯವಾದಗಳು………🌷🌷🌷

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????