ನಿತ್ಯ ಜೀವನದಲ್ಲಿ ಹಣ ಉಳಿತಾಯ ಮಾಡುವ 20 ಸರಳ ಮತ್ತು ಪರಿಣಾಮಕಾರಿ ವಿಧಾನಗಳು ಜೊತೆಗೆ ಬಜೆಟ್ ಪ್ಲಾನಿಂಗ್‌ನಿಂದ ಹಿಡಿದು ದಿನನಿತ್ಯದ ಖರ್ಚಿನ ಸಲಹೆಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ: ನಾಗಲಕ್ಷ್ಮಿ ಕೆ.ಎನ್. ದಿನಾಂಕ:೧೬.೦೮.೨೦೨೫.
ಹಣ ಎಂದರೆ ಕೇವಲ ʼ ಕೈಯಲ್ಲಿ ನಗದು ಇರುವುದುʼ ಅಷ್ಟೇ ಅಲ್ಲ , ಇದು ಬದುಕನ್ನು ಸಾಗಿಸಲು, ಕನಸುಗಳನ್ನು ಸಾಧಿಸಲು ಹಾಗೂ ಭವಿಷ್ಯವನ್ನು ಭದ್ರಗೊಳಿಸಲು ಬೇಕಾದ ಮೂಲವಸ್ತು.
ಇಂದಿನ ದಿನಮಾನದಲ್ಲಿ ಹಣದ ಅಗತ್ಯತೆಯು ಎಲ್ಲೆಲ್ಲಿ ಬೀಳುವುದೆಂದು ನೋಡುವುದಾದರೆ, ಆಹಾರ, ಬಟ್ಟೆ, ಮನೆ, ಆರೋಗ್ಯ ಸೇವೆ, ವಿದ್ಯುತ್, ಇಂಧನ, ಶಾಲೆ ಕಾಲೇಜು, ಅನಾರೋಗ್ಯ, ಅಪಘಾತ, ಆರೋಗ್ಯವಿಮೆ, ಜೀವವಿಮೆ, ಕೆಲಸ, ವ್ಯಾಪಾರ, ಪ್ರವಾಸ, ಟಿಕೆಟ್ ಗಳು, ಮದುವೆ ಮುಂಜಿ, ಹಬ್ಬ, ಕುಟುಂಬ ಕಾರ್ಯಕ್ರಮಗಳು, ಪೋಷಕರ ನಿರ್ವಹಣೆ, ಮಕ್ಕಳ ಭವಿಷ್ಯ, ನಿವೃತ್ತಿ ಜೀವನಕ್ಕೆ ಸಂಗ್ರಹ, ಹೂಡಿಕೆಗಳು, ತಂತ್ರಜ್ಞಾನ ಸೇವೆಗಳು, ಸೌಲಭ್ಯಗಳು.....ಅಬ್ಬಬ್ಬ ಹೇಳುತ್ತಾ ಹೋದರೆ ಹಣವು ಇಲ್ಲದೆ ಜೀವನವೇ ಇಲ್ಲ ಎಂಬಂತಾಗಿದೆ ಇಂದಿನ ಜೀವನ ಸ್ಥಿತಿ.
೨೦೨೫ರ ಇಂದಿನ ಡಿಜಿಟಲ್ ಯುಗದ ಜೀವನಶೈಲಿಯಲ್ಲಿ ಹಣವು ಅವಕಾಶಗಳನ್ನು ತೆರೆಸುವ ಬಾಗಿಲು ಮತ್ತು ಅಪಾಯಗಳಿಂದ ರಕ್ಷಣೆ ನೀಡುವ ಕವಚವಾಗಿದೆ.
ಹಣವಿಲ್ಲದೆ ಬದುಕು ನಿರ್ವಹಣೆ ಮಾತ್ರವಲ್ಲ, ಬೆಳವಣಿಗೆಗೂ ಅಡ್ಡಿಯಾಗುತ್ತದೆ.
ಹಣದ ಕಲ್ಪನೆ ಎಂದರೆ ಮೂಲತಃ ವಸ್ತುಗಳು ಮತ್ತು ಸೇವೆಗಳ ವಿನಿಮಯಕ್ಕೆ ಬಳಸುವ ಸಾಮಾನ್ಯ ಮಾಧ್ಯಮ ಎಂದೇ ಚಿತ್ರಿಸಬಹುದು.
ಪ್ರಾಚೀನ ಕಾಲದಲ್ಲಿ ಹಣದ ಕಲ್ಪನೆ ಇರಲಿಲ್ಲ, ನೇರವಾಗಿ ವಸ್ತುಗಳನ್ನು ಕೊಟ್ಟು ತೆಗೆದುಕೊಳ್ಳು ಮೂಲಕ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ನಂತರ ಚಿನ್ನ ಬೆಳ್ಳಿ ನಾಣ್ಯಗಳು ಪ್ರಚಲಿತಕ್ಕೆ ಬಂದವು.
ನಂತರದಲ್ಲಿ ಸರ್ಕಾರಗಳು ಸ್ಥಾಪನೆಯಾದ ಮೇಲೆ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಬಿಡುಗಡೆಯಾದವು.
ಹಿಂದಿನ ಈ ಎಲ್ಲ ಹಣದ ಸ್ವರೂಪಕ್ಕಿಂತ ಇಂದಿನ ಹಣದ ರೂಪವೂ ಬಹಳಷ್ಟು ಬದಲಾಗಿದೆ. ನಗದು, ಡಿಜಿಟಲ್ ಹಣ, ಕ್ರಿಪ್ಟೋ ಕರೆನ್ಸಿ, ಸರ್ಕಾರದ ಡಿಜಿಟಲ್ ಕರೆನ್ಸಿ ಇನ್ನೂ ಮುಂತಾದವುಗಳು.
ಇಂದು ಹಣವು ಬದುಕು ಸಾಗಿಸಲು ಬೇಕಾದ ಉಪಕರಣವಾಗಿದೆ, ಆರ್ಥಿಕ ಸ್ವಾತಂತ್ರ್ಯದ ಸಾಧನವಾಗಿದೆ.
ಸಾಮಾಜಿಕ ಪ್ರಭಾವವನ್ನು ಅಳೆಯುವ ಪರಿಮಾಣವಾಗಿ, ಸಮಯದ ಮೌಲ್ಯವನ್ನು ತಿಳಿಸುವ ಸಾಧನವಾಗಿದೆ. ಆದ್ದರಿಂದ ಹಣದ ಅವಶ್ಯಕತೆ ಅನಿವಾರ್ಯತೆಯನ್ನು ಮನಗಂಡು ಅದನ್ನು ಉಳಿಸಿ ಕೂಡಿಟ್ಟು ಬೆಳೆಸುವ ಮಾರ್ಗಗಳನ್ನು ತಿಳಿಯುವುದು ಅತ್ಯವಶ್ಯಕ.
ಆದ್ದರಿಂದ ಈ ಬರಹದಲ್ಲಿ ಹಣವನ್ನು ಉಳಿಸುವ ಸುಲಭ ಸರಳ ವಿಧಾನಗಳನ್ನು ತಿಳಿಸುತ್ತಿದ್ದೇನೆ.
ನಿತ್ಯ
ಜೀವನದಲ್ಲಿ ಹಣ ಉಳಿತಾಯ ಮಾಡುವ 20 ಸರಳ ವಿಧಾನಗಳು
ಹಣ
ಉಳಿತಾಯ ಮಾಡುವುದು ಕೇವಲ ಬ್ಯಾಂಕ್ನಲ್ಲಿ
ಹಣ ಇಡುವುದು ಮಾತ್ರವಲ್ಲ, ಒಳ್ಳೆಯ
ಜೀವನ ಶೈಲಿಯೂ ಸಹ ಆಗಿದೆ. ದಿನನಿತ್ಯದ ಜೀವನದಲ್ಲಿ ಸ್ವಲ್ಪ ಜಾಣ್ಮೆ, ನಿಯಂತ್ರಣ, ಹಾಗೂ ಪ್ಲಾನಿಂಗ್ ಮಾಡಿದರೆ,
ದೊಡ್ಡ ಮಟ್ಟದಲ್ಲಿ ಹಣ ಉಳಿಸಬಹುದು. ಇಲ್ಲಿದೆ
ಸರಳ
ಹಾಗೂ ಪರಿಣಾಮಕಾರಿ ವಿಧಾನಗಳು.
1. ಬಜೆಟ್ ತಯಾರಿಸಿ
ತಿಂಗಳ
ಆದಾಯ ಮತ್ತು ಖರ್ಚುಗಳ ಪಟ್ಟಿ ಮಾಡಿ, ಬಜೆಟ್ ಅನ್ನು ಅನುಸರಿಸಿದರೆ ಅನಗತ್ಯ ಖರ್ಚು ತಪ್ಪುತ್ತದೆ.
ಮೊದಲು
ಪ್ರತಿತಿಂಗಳೂ ಪಡೆಯುವ
ಒಟ್ಟು ಆದಾಯವನ್ನು ಲೆಕ್ಕಹಾಕಿಕೊಳ್ಳಿ. ಉದಾಹರಣೆಗೆ ವೇತನ, ವ್ಯವಹಾರದಿಂದ ಬರುವ ಲಾಭ, ಬಡ್ಡಿ,
ಬಾಡಿಗೆ ಇತ್ಯಾದಿ.
ಮುಂದಿನ
ಹಂತದಲ್ಲಿ ಮನೆಯಲ್ಲಿ ಪ್ರತಿತಿಂಗಳ
ಮನೆ
ಬಾಡಿಗೆ / ಗೃಹ ಸಾಲ ಕಂತು,
ವಿದ್ಯುತ್, ನೀರು, ಇಂಟರ್ನೆಟ್, ಶಾಲಾ ಶುಲ್ಕ, ವಿಮೆ ಕಂತುಗಳು ಇತ್ಯಾದಿ ಸ್ಥಿರ ಖರ್ಚುಗಳನ್ನು ನೋಡಿಕೊಳ್ಳಿ.
ಅನಿಯಮಿತ
ಖರ್ಚುಗಳಾದ
ಆಹಾರ, ಸಾರಿಗೆ, ಮನರಂಜನೆ, ಪ್ರವಾಸ, ಶಾಪಿಂಗ್ ಇವುಗಳು
ತಿಂಗಳಿಗೊಮ್ಮೆ ಬದಲಾಗಬಹುದು, ಆದರೂ ಸರಾಸರಿ ಅಂದಾಜು ಮಾಡಿ.
ಆದಾಯ
- ಖರ್ಚು ವ್ಯತ್ಯಾಸಗಳನ್ನು ಪರಿಶೀಲಿಸಿ
ಖರ್ಚಿಗಿಂತ ಆದಾಯ ಹೆಚ್ಚಿದ್ದರೆ ಉಳಿದ ಮೊತ್ತವನ್ನುಉಳಿತಾಯ/ಹೂಡಿಕೆಗೆ ಹಾಕಿ. ಆದಾಯಕ್ಕಿಂತ ಖರ್ಚು ಹೆಚ್ಚಿದ್ದ ಸಮಯದಲ್ಲಿ ಅನಗತ್ಯ ಖರ್ಚುಗಳನ್ನು
ಕಡಿಮೆ ಮಾಡಿ.
2. ಅನಗತ್ಯ ಚಂದಾ ಸೇವೆಗಳನ್ನು ರದ್ದುಗೊಳಿಸಿ
ನೀವು
ಉಪಯೋಗಿಸದ OTT (Netflix,
Amazon Prime), ಜಿಮ್ ಅಥವಾ ಮ್ಯಾಗಜಿನ್ ಸಬ್ಸ್ಕ್ರಿಪ್ಶನ್ಗಳನ್ನು ರದ್ದು ಮಾಡಿ. ಉದಾಹರಣೆ – 6 ತಿಂಗಳಿಂದ Netflix ತೆರೆದಿಲ್ಲದಿದ್ದರೆ ಅದು ನಿಮ್ಮ ಹಣವನ್ನು
ವ್ಯರ್ಥ ಮಾಡುತ್ತಿದೆ ಎಂದರ್ಥ.
3. ಶಾಪಿಂಗ್ಗೆ ಲಿಸ್ಟ್ ಮಾಡಿ
ಲಿಸ್ಟ್
ಇಲ್ಲದೆ ಶಾಪಿಂಗ್ ಹೋಗುವುದರಿಂದ
ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ. ಮಾರ್ಕೆಟ್ಗೆ
ಹೋಗುವ ಮೊದಲು ಬೇಕಾದ ವಸ್ತುಗಳ ಪಟ್ಟಿಯನ್ನು ತಯಾರಿಸಿ. ಉದಾಹರಣೆ – ತರಕಾರಿ, ಹಾಲು, ಬ್ರೆಡ್ ಮಾತ್ರ ಬೇಕಿದ್ದರೂ ಲಿಸ್ಟ್ ಇಲ್ಲದಿದ್ದರೆ ಚಿಪ್ಸ್, ಚಾಕೊಲೇಟ್ ಕೂಡಾ ತೆಗೆದುಕೊಳ್ಳಬಹುದು.
4. ಸೇಲ್ ಮತ್ತು ಡಿಸ್ಕೌಂಟ್ಗಳನ್ನು ಬಳಸಿಕೊಳ್ಳಿ
ಡಿಸ್ಕೌಂಟ್
ಗಳು ನಿಜವಾಗಿಯೂ ಬೇಕಾದ
ವಸ್ತುಗಳಿಗೇ ಅನ್ವಯಿಸಲಿ. ನಿಜವಾಗಿಯೂ ಬೇಕಾದ ವಸ್ತುಗಳಿಗೇ ಮಾತ್ರ ಸೇಲ್ ಬಳಸಿರಿ. ಉದಾಹರಣೆ
– ಫೆಸ್ಟಿವಲ್ ಆಫರ್ನಲ್ಲಿ ಫ್ರಿಡ್ಜ್
20% ಡಿಸ್ಕೌಂಟ್ನಲ್ಲಿ ದೊರೆತರೆ ಅದು ಖರೀದಿಸಲು ಒಳ್ಳೆಯ
ಸಮಯ.
5. ಮನೆಯಲ್ಲಿ ಅಡುಗೆ ಮಾಡಿ
ಹೊರಗೆ
ಊಟ ಮಾಡುವ ಬದಲು ಮನೆಯಲ್ಲಿ ಅಡುಗೆ
ಮಾಡಿದರೆ ತಿಂಗಳಿಗೆ ಸಾವಿರಾರು ರೂಪಾಯಿ ಉಳಿಯಬಹುದು. ಉದಾಹರಣೆ – ಹೋಟೆಲ್ ಊಟ ₹200, ಅದೇ ಊಟ ಮನೆಯಲ್ಲಿ
ಮಾಡಿದರೆ ₹50ಕ್ಕೆ ಸಿಗುತ್ತದೆ.
6. ಎನರ್ಜಿ ಸೇವಿಂಗ್ ಸಾಧನ ಬಳಸಿ
LED ಬಲ್ಬ್ಗಳು, ಎನರ್ಜಿ ಎಫಿಶಿಯಂಟ್
ಫ್ಯಾನ್ಸ್ ಬಳಸುವುದರಿಂದ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ. ಉದಾಹರಣೆ
– ಹಳೆಯ ಟ್ಯೂಬ್ಲೈಟ್ ಬದಲು 9W LED ಹಾಕಿದರೆ
ವರ್ಷಕ್ಕೆ ₹1,000 ಕ್ಕಿಂತ ಹೆಚ್ಚು ಉಳಿಸಬಹುದು.
7. ಸಾರ್ವಜನಿಕ ಸಾರಿಗೆ ಬಳಸಿ
ಬಸ್, ಮೆಟ್ರೋ
ಅಥವಾ ಶೇರ್ ಆಟೋ ಬಳಸಿ. ಸಾಧ್ಯವಾದರೆ
ಸೈಕಲ್ ನಲ್ಲಿ ಅಥವಾ ನಡೆದು ಹೋಗುವುದನ್ನು
ಅಭ್ಯಾಸ ಮಾಡಿ ಇದು ಆರೋಗ್ಯಕ್ಕೂ ಒಳ್ಳೆಯದು. ಉದಾಹರಣೆ
– ಆಫೀಸ್ಗೆ ಬಸ್ ಪ್ರಯಾಣ
₹20, ಕಾರು ಪೆಟ್ರೋಲ್ ವೆಚ್ಚ ₹100.
8. ನೀರಿನ ವ್ಯರ್ಥ ತಪ್ಪಿಸಿ
ಟ್ಯಾಪ್
ಲೀಕ್ಗಳನ್ನು ಸರಿಪಡಿಸಿ, ಬಕೆಟ್ನಲ್ಲಿ ಸ್ನಾನ ಮಾಡಿ. ಉದಾಹರಣೆ ಲೀಕ್
ಆಗುವ ಟ್ಯಾಪ್ ತಿಂಗಳಿಗೆ ನೂರಾರು ಲೀಟರ್ ನೀರನ್ನು ವ್ಯರ್ಥ ಮಾಡುತ್ತದೆ.
9. ಹಳೆಯ ವಸ್ತುಗಳನ್ನು ಪುನಃ ಬಳಸಿ
ಫರ್ನಿಚರ್,
ಬಟ್ಟೆ ಅಥವಾ ಇತರ ಉಪಕರಣಗಳನ್ನು
ರಿಪೇರ್ ಮಾಡಿ ಬಟ್ಟೆಗಳನ್ನು
ನವೀಕರಿಸಿ. ಉದಾಹರಣೆ – ಹಳೆಯ ಟೇಬಲ್ ಬಣ್ಣ
ಹಚ್ಚಿದರೆ ಅದು ಹೊಸದಾಗಿ ಕಾಣಿಸುತ್ತದೆ.
10. ಕ್ರೆಡಿಟ್ ಕಾರ್ಡ್ ದುರುಪಯೋಗ ತಪ್ಪಿಸಿ
ತಿಂಗಳಿಗೆ
ಭರಿಸಲಾಗದಷ್ಟು ಖರ್ಚು ಮಾಡಬೇಡಿ. ಉದಾಹರಣೆ
– ₹5,000 ಬಿಲ್ ಭರಿಸಲಾಗದ ಸಮಯದಲ್ಲಿ ಬಡ್ಡಿ ₹500 ಹೆಚ್ಚಾಗಬಹುದು.
11. ಮೊಬೈಲ್ ಡೇಟಾ ಪ್ಲಾನ್ ಪರಿಶೀಲಿಸಿ
ನಿಮ್ಮ
ಬಳಕೆಗೆ ಸರಿಯಾದ ಪ್ಲಾನ್ ಆಯ್ಕೆಮಾಡಿ. ಉದಾಹರಣೆಗೆ ದಿನಕ್ಕೆ
1GB ಡೇಟಾ ಬೇಕಾದರೆ 3GB ಪ್ಲಾನ್ಗೆ ಹೆಚ್ಚು ಹಣ
ಹಾಕಬೇಡಿ.
12. ಸ್ವಂತ ಹೂವು-ತರಕಾರಿ ಬೆಳೆಸಿರಿ
ಟೆರೇಸ್
ಗಾರ್ಡನಿಂಗ್ ಮೂಲಕ ತಾಜಾ ಉತ್ಪನ್ನವೂ
ಸಿಗುತ್ತದೆ, ಹಣವೂ ಉಳಿಯುತ್ತದೆ. ಈ ಮೂಲಕ ತಾಜಾ
ತರಕಾರಿ ಮತ್ತು ಹಣ್ಣುಗಳನ್ನು ಬೆಳೆಸಬಹುದು. ಉದಾಹರಣೆ – ಟೊಮ್ಯಾಟೋ, ಮೆಂತ್ಯೆ, ಸೊಪ್ಪು ಬೆಳೆದರೆ ತಿಂಗಳಿಗೆ ₹500 ಉಳಿಯಬಹುದು.
13. ಇಂಧನ ಉಳಿತಾಯವಾಗುವ ರೀತಿ ಚಾಲನೆ ಮಾಡಿ
ಸಮ
ಪ್ರಗತಿ ಮತ್ತು ಕಡಿಮೆ ಸ್ಪೀಡ್ ಇಂಧನ ಉಳಿಸುತ್ತದೆ. ಉದಾಹರಣೆ
– 60km/h ಸ್ಪೀಡ್ನಲ್ಲಿ ಚಾಲನೆ ಮಾಡಿದರೆ ಮೈಲೇಜ್ ಹೆಚ್ಚುತ್ತದೆ.
14. ಉಪಯೋಗಿಸಿದ ವಸ್ತುಗಳನ್ನು ಖರೀದಿ ಮಾಡಿ
ಪರಿಪೂರ್ಣ
ಸ್ಥಿತಿಯಲ್ಲಿರುವ ಸೆಕೆಂಡ್ ಹ್ಯಾಂಡ್ ವಸ್ತುಗಳು ಕಡಿಮೆ ದರಕ್ಕೆ ದೊರೆಯುತ್ತವೆ. OLX, Facebook
Marketplace ಮೂಲಕ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿ ಮಾಡಿ. ಉದಾಹರಣೆ – ಹೊಸ ಟೇಬಲ್ ₹5,000, ಆದರೆ
ಉಪಯೋಗಿಸಿದ ಟೇಬಲ್ ₹1,500.
15. ಲೋನ್ ಬಡ್ಡಿದರ ಹೋಲಿಕೆ ಮಾಡಿ
ಹೊಸ
ಸಾಲ ತೆಗೆದುಕೊಳ್ಳುವ ಮೊದಲು ಹಲವಾರು ಬ್ಯಾಂಕ್ಗಳ ಬಡ್ಡಿದರಗಳನ್ನು ಪರಿಶೀಲಿಸಿ.
ಉದಾಹರಣೆ
– ₹5 ಲಕ್ಷ ಸಾಲದಲ್ಲಿ 1% ಬಡ್ಡಿದರ ವ್ಯತ್ಯಾಸ ವರ್ಷಕ್ಕೆ ₹5,000 ಉಳಿಸುತ್ತದೆ.
16. ಕಿಟಕಿ ಮತ್ತು ಬಾಗಿಲು ಇನ್ಸುಲೇಷನ್ ಮಾಡಿ.
ಏರ್ಕಂಡಿಷನರ್ ಅಥವಾ ಹೀಟರ್ ಬಳಕೆಯ
ವೆಚ್ಚ ಕಡಿಮೆಯಾಗುತ್ತದೆ. ಉದಾಹರಣೆ – ಬಾಗಿಲಿನ ಗ್ಯಾಪ್ ಮುಚ್ಚಿದರೆ AC ಹೆಚ್ಚು ಪರಿಣಾಮಕಾರಿ ಆಗುತ್ತದೆ.
17. ಆಫರ್ಗಳ ಆಧಾರದ ಮೇಲೆ ಊಟ ಯೋಜನೆ ಮಾಡಿ.
ಮಾರ್ಕೆಟ್ನಲ್ಲಿ ಸಿಗುವ ಆಫರ್ಗಳನ್ನು ನೋಡಿ
ಮೆನು ತಯಾರಿಸಿ. ಉದಾಹರಣೆ – ಆಫರ್ನಲ್ಲಿ ದೊರಕುವ
ತರಕಾರಿಯಿಂದ ವಾರದ ಮೆನು ತಯಾರಿಸಿ.
18. ಉಡುಗೊರೆಗಳನ್ನು ಸ್ವಂತವಾಗಿ ತಯಾರಿಸಿ ನೀಡಿ.
ಹಸ್ತ
ಕಲೆ ಮೂಲಕ ಮಾಡಿದ ಉಡುಗೊರೆಗಳು
ವಿಶೇಷವಾಗಿರುತ್ತವೆ ಮತ್ತು ಕಡಿಮೆ ಖರ್ಚಾಗುತ್ತವೆ. ಉದಾಹರಣೆ – ಹ್ಯಾಂಡ್ಮೇಡ್ ಫೋಟೋ ಫ್ರೇಮ್
₹100 ಒಳಗೆ ಸಿದ್ಧವಾಗುತ್ತದೆ.
19. ಬ್ಯಾಂಕ್ ಚಾರ್ಜ್ಗಳನ್ನು ಗಮನಿಸಿ ಖಾತೆ ನಿರ್ವಹಿಸಿ.
ಅನಗತ್ಯ
ಫೀಸ್ ತಪ್ಪಿಸಲು ಸರಿಯಾದ ಖಾತೆ ಪ್ಲಾನ್ ಆಯ್ಕೆಮಾಡಿ.
ಉದಾಹರಣೆ – ಹೆಚ್ಚು ಟ್ರಾನ್ಸಾಕ್ಷನ್ ಮಾಡುವವರಿಗೆ ಜಿರೋ-ಬ್ಯಾಲೆನ್ಸ್ ಖಾತೆ
ಉತ್ತಮ.
20. ಉಳಿತಾಯವನ್ನು ಸ್ವಯಂಚಾಲಿತಗೊಳಿಸಿ.
ಪ್ರತಿ
ತಿಂಗಳು ನಿರ್ದಿಷ್ಟ ಮೊತ್ತವನ್ನು ಸ್ವಯಂಚಾಲಿತವಾಗಿ ಸೆವಿಂಗ್ಸ್ಗೆ ವರ್ಗಾಯಿಸಿ. ಉದಾಹರಣೆ
– ವೇತನ ಬಂದ ತಕ್ಷಣ ₹2,000 ಸೆವಿಂಗ್ಸ್
ಖಾತೆಗೆ ಹೋಗುವಂತೆ ಸೆಟ್ ಮಾಡಿ.
💰 ವೈಯಕ್ತಿಕವಾಗಿ ಹಣಕಾಸು
ನಿರ್ವಹಣೆಗೆ ಉತ್ತಮ ಸಲಹೆಗಳು!!
- ಬಜೆಟ್
ತಯಾರಿ ಮಾಡಿ
ತಿಂಗಳ ಆದಾಯ ಮತ್ತು ಖರ್ಚುಗಳ ಪಟ್ಟಿ ಮಾಡುವುದರಿಂದ ಹಣ ಹಂಚಿಕೆ ಮಾಡಲು ಸಹಾಯ ಆಗುತ್ತದೆ.
ಉದಾಹರಣೆ: ₹50,000 ಆದಾಯವಿದ್ದರೆ, ₹20,000 ಅಗತ್ಯ ವೆಚ್ಚ, ₹10,000 ಉಳಿತಾಯ, ₹5,000 ಹೂಡಿಕೆ, ಉಳಿದದು ಬೇರೆ ವೆಚ್ಚಗಳಿಗೆ. - ಮೊದಲು
ಉಳಿತಾಯ, ನಂತರ ವೆಚ್ಚದ ಕಡೆ ಗಮನವಹಿಸಿ.
ಆದಾಯ ಬಂದ ಕೂಡಲೇ ಉಳಿತಾಯದ ಭಾಗವನ್ನು ಬೇರ್ಪಡಿಸಿ.
ಉದಾಹರಣೆ: ವೇತನ ಬಂದ ದಿನವೇ ₹5,000 ಅನ್ನು ಸೆವಿಂಗ್ಸ್ ಖಾತೆಗೆ ಹಾಕಿ. - ತುರ್ತು
ನಿಧಿ
(Emergency Fund)ಯನ್ನು
ಹೊಂದಿರಿ.
ಕನಿಷ್ಠ 3–6 ತಿಂಗಳ ವೆಚ್ಚಕ್ಕೆ ತಕ್ಕಷ್ಟು ಹಣದ ನಿಧಿಯನ್ನು ಸೇರಿಸಿ.
ಉದಾಹರಣೆ: ತಿಂಗಳಿಗೆ ₹20,000 ವೆಚ್ಚವಿದ್ದರೆ, ಕನಿಷ್ಠ ₹60,000–₹1,20,000 ಸಂಗ್ರಹಿಸಿ. - ಸಾಲದ
ಭಾರ ಕಡಿಮೆ ಮಾಡಿಕೊಳ್ಳಿ.
ಬಡ್ಡಿದರ ಹೆಚ್ಚು ಇರುವ ಸಾಲಗಳನ್ನು ಮೊದಲು ತೀರಿಸಿ.
ಉದಾಹರಣೆ: ಕ್ರೆಡಿಟ್ ಕಾರ್ಡ್ ಸಾಲವನ್ನು ಬೇಗ ತೀರಿಸುವುದು ಉತ್ತಮ. - ಭವಿಷ್ಯಕ್ಕೆ
ಹೂಡಿಕೆ ಮಾಡಿರಿ.
ಉಳಿತಾಯವನ್ನು ಬ್ಯಾಂಕ್ನಲ್ಲಿ ಮಾತ್ರ ಇರಿಸದೇ, ಮ್ಯೂಚುಯಲ್ ಫಂಡ್ಸ್, ರಿಕರಿಂಗ್ ಡಿಪಾಸಿಟ್, ಷೇರುಗಳು ಅಥವಾ ಚಿನ್ನದಲ್ಲಿ ಹೂಡಿಕೆ ಮಾಡಿ. - ವಿಮೆ
ತೆಗೆದುಕೊಳ್ಳಿ.
ಜೀವ ವಿಮೆ ಮತ್ತು ಆರೋಗ್ಯ ವಿಮೆ ತುರ್ತು ಪರಿಸ್ಥಿತಿಯಲ್ಲಿ ಹಣದ ಬಾಧೆ ತಪ್ಪಿಸುತ್ತವೆ. - ಅನಗತ್ಯ
ಖರ್ಚುಗಳನ್ನು
ತಪ್ಪಿಸಿ.
ತಕ್ಷಣದ ಆಕರ್ಷಣೆಗೆ ಒಳಗಾಗದೇ, ನಿಜವಾಗಿಯೂ ಅಗತ್ಯವಿರುವುದನ್ನು ಮಾತ್ರ ಖರೀದಿ ಮಾಡಿ.
ಉದಾಹರಣೆ: ಫ್ಯಾಷನ್ ಸೇಲ್ ನೋಡಿದಾಗ ತಕ್ಷಣ ಖರೀದಿ ಮಾಡುವ ಬದಲು, ಅಗತ್ಯವಿದೆಯೇ ಎಂದು ಯೋಚಿಸಿ. - ನಿರಂತರ
ಹಣಕಾಸು ಶಿಕ್ಷಣ ಪಡೆಯಿರಿ.!!
ಹಣಕಾಸು ಸಂಬಂಧಿತ ಪುಸ್ತಕಗಳು ಓದಿ, ಕೋರ್ಸ್ಗಳನ್ನು ಮಾಡಿ, ಆರ್ಥಿಕ ಸುದ್ದಿಗಳನ್ನು ಅನುಸರಿಸಿ.
ಹಣದ
ಉಳಿತಾಯ ಪ್ರಕ್ರಿಯೆಯು ಒಂದು ದಿನದಲ್ಲಿ ಸಾಧ್ಯವಾಗುವುದಿಲ್ಲ.
ಇದು ದಿನನಿತ್ಯದ ಅಭ್ಯಾಸಗಳಿಂದ ಬರುತ್ತದೆ. ಈ 20 ಸರಳ ವಿಧಾನಗಳನ್ನು
ಅಳವಡಿಸಿಕೊಂಡರೆ, ನೀವು ಹಣ ಉಳಿಸುವ
ಜೊತೆಗೆ ಜೀವನದಲ್ಲಿ ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತೀರಿ.
ಧನ್ಯವಾದಗಳು…….🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು