ಒಂದು ದಿನದಲ್ಲಿ ಒಂದು ಗಂಟೆ ಸಮಯವನ್ನು ಒಂದು ಬೆಕ್ಕಿನ ರೀತಿ ಬದುಕಲು ಕಲಿಯಿರಿ, ಆಗ ಜೀವನದಲ್ಲಿ ಅಗಾಧ ಬದಲಾವಣೆಗಳನ್ನು ನೋಡುವಿರಿ!!!!!!!!!!??
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ನಾನು
ಒಂದು ವಾರದ ಕಾಲ ಬೆಕ್ಕಿನಂತೆ ಬದುಕಲು ಪ್ರಯತ್ನಿಸಿದೆ—ಇದು ಅದರ ಅನುಭವ….
ಬೆಕ್ಕುಗಳು
ಜೀವನವನ್ನು ಸರಿಯಾಗಿ ಅರ್ಥ ಮಾಡಿಕೊಂಡಂತೆ ಅನಿಸುತ್ತದೆ. ಅವು
ದಿನವಿಡೀ ನಿದ್ದೆ ಮಾಡುತ್ತವೆ, ಮತ್ತು ಇಚ್ಛೆ
ಬಂದಾಗ ಅಥವಾ ಹಸಿವಾದಾಗ ಮಾತ್ರ ಊಟ
ಕೇಳುತ್ತವೆ ಮತ್ತು ಮಾನವರಿಗಿಂತಲೂ ಹೆಚ್ಚಿನ ಪ್ರೈವೆಸಿ ಮತ್ತು
ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುತ್ತವೆ.
ಬೆಕ್ಕುಗಳ ನಿಸ್ಸಂಕೋಚ
ಜೀವನದಿಂದ ಪ್ರೇರಿತನಾಗಿ, ನಾನು ಒಂದು ಸಂಪೂರ್ಣ
ವಾರ ಅಂದರೆ 7 ದಿನಗಳ ಕಾಲ
ಬೆಕ್ಕಿನಂತೆ ಬದುಕಲು ನಿರ್ಧರಿಸಿದೆ. ಇದು ನನಗೆ ಹೇಗೆ
ಅನ್ನಿಸಿತು????!!!!! ಅದರ ಸಂಪೂರ್ಣ ಅನುಭವವನ್ನು ಇಲ್ಲಿ ದಾಖಲಿಸಿದ್ದೇನೆ.
ಈ ಪ್ರಯಾಣವು
ದಿನಕ್ಕೆ
16 ಗಂಟೆಗಳ ಕಾಲ ನಿದ್ರೆ ಮಾಡುವುದರಿಂದ
ಹಿಡಿದು,
ಜನರನ್ನು ನಿರ್ಲಕ್ಷಿಸುವವರೆಗೆ!
ದಿನ
1: ಬೆಕ್ಕಿನ ಮನಸ್ಥಿತಿಗೆ ಹೊಂದಿಕೊಳ್ಳುವುದು
ಮೊದಲ
ಸವಾಲು ನಿದ್ದೆ. ಬೆಕ್ಕುಗಳು ದಿನಕ್ಕೆ 12 ರಿಂದ 16 ಗಂಟೆಗಳ ವರೆಗೆ ನಿದ್ರೆ ಮಾಡುತ್ತವೆ. ನಾನು ಸರಿಯಾಗಿ 7 ಗಂಟೆಗಳ
ಕಾಲ ನಿದ್ದೆ ಮಾಡಲೂ
ಸಾಧ್ಯವಿಲ್ಲ, ಆದ್ದರಿಂದ ಈ ಭಾಗ ನನಗೆ
ಕುತೂಹಲ ಮತ್ತು ಆಶ್ಚರ್ಯಕರವಾಗಿತ್ತು.
ಹೀಗಾಗಿ, ನಾನು ನನ್ನ ಮೊದಲ ದಿನದ
ಬಹುಭಾಗವನ್ನು ಸೋಫಾದ ಮೇಲೆ, ನೆಲದ ಮೇಲೆ ಮತ್ತು
ಕಿಟಕಿಯ ಹತ್ತಿರದ ಬಿಸಿಯ ಜಾಗದಲ್ಲಿ ಮಲಗುವ ಮೂಲಕ ಕಳೆದಿದ್ದೇನೆ. ಹೀಗಾಗಿ
ಈ ದಿನದ ಬೆಕ್ಕಿನ ರೀತಿಯ ಜೀವನವು ಅದ್ಭುತವಾಗಿತ್ತು, ಅದು ಎಲ್ಲಿಯವರೆಗೂ ಅಂದರೆ ನಾನು ಈ ದಿನ ಏನನ್ನೂ
ಉತ್ಪಾದಕವಾಗಿ ಮಾಡಿಲ್ಲ ಎಂಬ ಅರಿವು ಬರುವವರೆಗೆ!!.
ನಾನು
ಬೆಕ್ಕಿನಂತೆ ಸಂಭಾಷಣೆ ನಡೆಸಲು ಸಹ ಪ್ರಯತ್ನಿಸಿದೆ. ಮಾತನಾಡುವ
ಬದಲು, ನಾನು ನನ್ನ ಪಾರ್ಟ್ನರ್
ನ್ನು ಬೇಕೆಂದೆ ಮಿಯಾಂವ್ ಎಂದು ಕರೆದೆ, ಆದರೆ ಅದು ಅವರಿಗೆ
ಬಹುಶಃ ಸಂತೋಷ ತರಲಿಲ್ಲ, ಆದರೆ ನನಗೆ ಇದು
ಬಹಳ ಸ್ವಾತಂತ್ರ್ಯದ ಆನಂದತೆ ಅನಿಸಿತು.
ಆದರೆ, ಮಿಯಾಂವ್ ಎಂಬ ಸಂಭಾಷಣೆ ಪಾರ್ಟ್ನರ್ ಹೊಂದಿಗೆ
ಸಹಕಾರವನ್ನು
ತರಲಿಲ್ಲ.
ದಿನ
2: ಏನೂ ಮಾಡದೆ ಕಾಲ ಕಳೆಯುವುದು
ಬೆಕ್ಕುಗಳು ಏನನ್ನಾದರೂ
ಸಾಧನೆ
ಮಾಡಬೇಕು ಎನ್ನುವ ಒತ್ತಡವನ್ನು
ಅನುಭವಿಸುವುದಿಲ್ಲ. ಅವು ಸರಳವಾಗಿ ಬದುಕುತ್ತವೆ.
ಆದ್ದರಿಂದ, ನಾನು ದಿನದ ಬಹುಭಾಗವನ್ನು
ವಿಶ್ರಾಂತಿ ಮಾಡುತ್ತ, ಹಗುರವಾಗಿ ಬಾಗುತ್ತ ಓಡಾಡುತ್ತಾ ಮತ್ತು
ಅಪಾರ್ಟ್ಮೆಂಟ್ನಲ್ಲಿ ಬಿಸಿಯಾದ ಸ್ಥಳಗಳನ್ನು ಹುಡುಕುವುದರ ಮೂಲಕ ಕಳೆದಿದ್ದೇನೆ.
ನಾನು
ಕಿಟಕಿಯ ಹೊರಗಿನ ಪಕ್ಷಿಗಳನ್ನು ವೀಕ್ಷಿಸುವ ಹೊಸ ಲಾಲಿತ್ಯ
ಪ್ರಪಂಚವನ್ನು ಕಂಡುಕೊಂಡೆ.
ಮಾನವನಾಗಿ, ನಾನು ಅವುಗಳತ್ತ ಗಮನ
ಕೊಟ್ಟಿರಲಿಲ್ಲ, ಆದರೆ ಬೆಕ್ಕುಗಳ ರೀತಿ, ನಾನು
ಅವುಗಳ ಚಲನೆಗಳಿಗೆ ಪರವಶನಾದೆ.
ನನ್ನ
ಮಾನವ ಮೆದುಳು ಇಮೇಲ್ಗಳನ್ನು ಪರಿಶೀಲಿಸಲು ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸಲು ಬಯಸಿತ್ತು, ಆದರೆ ನನ್ನ ಬೆಕ್ಕಿನ
ಮನಸ್ಥಿತಿ ಅದನ್ನು ನಿರಾಕರಿಸಿತು. ಬದಲಿಗೆ, ನಾನು ನನ್ನ (ಕಲ್ಪಿತ)
ತಲೆಯಲ್ಲಿ ಉದಿಸಿದ ಎಲ್ಲಾ
ಅಧಿಸೂಚನೆಗಳನ್ನು ನಿರ್ಲಕ್ಷಿಸಿದೆ.
ದಿನ
3: ವಸ್ತುಗಳನ್ನು ಕೆಳಗೆ ತಳ್ಳುವುದು ಮತ್ತು ಬೇಡಿಕೆಗಳನ್ನು ಮಾಡುವುದು
ಬೆಕ್ಕಿನ
ಜೀವನದ ಅತ್ಯಂತ ಮನೋರಂಜನಾತ್ಮಕ ಭಾಗಗಳಲ್ಲಿ ಒಂದಾಗಿದೆ ಯಾವುದೇ ವಸ್ತುವನ್ನು ಅಸಡ್ಡೆ ತೋರಿ ಕೆಳಗೆ ತಳ್ಳುವುದು.
ಆದ್ದರಿಂದ, ನಾನು ಮೆಜದ ಮೇಲಿನ
ಪೆನ್ನನ್ನು ಕೆಳಗೆ ತಳ್ಳಿದೆ. ನಂತರ ಒಂದು ನೀರಿನ
ಬಾಟಲ್. ನಂತರ ಒಂದು ಪುಸ್ತಕ.
ಪ್ರತಿ ಬಾರಿಯೂ, ಇದು ಸಂತಸದ ಅಚ್ಚರಿಯ
ಕಾರ್ಯತೃಪ್ತಿಯನ್ನು ನೀಡಿತು. ಆದರೆ, ಈ ಕಾರ್ಯವು ನನ್ನ
ಪಾರ್ಟನರ್ ಗೆ ಇದು ಸಂತೋಷ ತರಲಿಲ್ಲ.
ನಾನು
ಎಂದಾದರೂ ಬೇಕಾದಾಗ
ಊಟ ಕೇಳುವ ಸುಂದರ ಕಲೆಯನ್ನು ಕೂಡ
ಕಲಿತುಕೊಂಡೆ. ಬೆಕ್ಕುಗಳು ಎಂದಿಗೂ ಊಟದ
ವೇಳಾಪಟ್ಟಿಯನ್ನು ನಿರೀಕ್ಷಿಸುವುದಿಲ್ಲ; ಅವು ಬೇಕಾದಾಗ ಕೇಳುತ್ತವೆ.
ಆದ್ದರಿಂದ, ನಾನು ನನ್ನ ಪಾರ್ಟ್ನರ್
ನ ಬಳಿಗೆ ಹೋಗಿ, ಅವನಿಗೆ ನಿರೀಕ್ಷೆಯ ಒತ್ತಾಯದ ದೃಷ್ಟಿಯೊಂದಿಗೆ ನೋಡಿದೆ ಮತ್ತು ಮಿಯಾಂವ್ ಎಂದು ಶಬ್ದ ಮಾಡಿದೆ.
ಹಲವಾರು
ವಿಫಲ ಪ್ರಯತ್ನಗಳ ನಂತರ, ಕೊನೆಗೂ ನಾನು ಒಂದು ದೋಸೆಯನ್ನು ಮಾತ್ರ
ಗಳಿಸಿದೆ—ಆದರೆ
ಅದರೊಂದಿಗೆ ಒಂದಷ್ಟು ಕಣ್ಣಿರಿನ ಹನಿಗಳು
ಸಹ ಉಡುಗೊರೆಯಾಗಿ
ದೊರೆತವು.
ದಿನ
4: ಜನರನ್ನು ನಿರ್ಲಕ್ಷಿಸುವುದು (ನಾನು ಗಮನಿಸಬೇಕೆಂದು ಬಯಸುವವರೆಗೂ)
ಬೆಕ್ಕುಗಳು
ಜನರನ್ನು ಅತ್ಯಂತ ನಿಖರವಾಗಿ ನಿರ್ಲಕ್ಷಿಸುವ ಶಕ್ತಿಯನ್ನು ಹೊಂದಿವೆ. ಅವು ಮಾನವರನ್ನು ಅವು
ಬಯಸುವಾಗ ಮಾತ್ರ ಪರಿಗಣಿಸುತ್ತವೆ, ಮತ್ತು ನಾನು ಸಹ ಈ
ಮನೋಭಾವವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.
ಯಾರಾದರೂ
ನನ್ನೊಂದಿಗೆ ಮಾತನಾಡಿದರೆ, ನಾನು ಅವರನ್ನು ನೋಡಿಯೂ
ನೋಡದಂತೆ ನಟಿಸಿ ಮರೆಯಾದೆ. ಯಾರಾದರೂ
ನನ್ನೊಂದಿಗೆ ಸಂಭಾಷಣೆ ನಡೆಸಲು ಪ್ರಯತ್ನಿಸಿದರೆ,
ನಾನು ನಿಧಾನವಾಗಿ ಕಣ್ಣನ್ನು ಮುಚ್ಚಿ, ನೆನೆಸುವಂತೆ ಮುಖ ಮಾಡಿ ಅಲ್ಲಿಂದ ಜಾಗ ಖಾಲಿ
ಮಾಡಿದೆ.
ಆದರೆ
ನಾನು ಗಮನ ಬಯಸಿದಾಗ? ನಾನು
ನನ್ನ ಪಾರ್ಟ್ನರ್ ನ ಮೈಮೇಲೆ ಹಾರಿ, ಅವನ ಭುಜದ ಮೇಲೆ
ನನ್ನ ತಲೆ ಒರಗಿಸಿ, ತಕ್ಷಣದ
ಪ್ರೀತಿ ನಿರೀಕ್ಷಿಸಿದೆ.
ಈ ಪ್ರಯೋಗದ ಬಲದಿಂದ, ನಾನು ತಿಳಿದುಕೊಂಡೆ: ನೀವು
ಅಲಭ್ಯತೆಯ ಅಥವಾ ನಿರ್ಲಕ್ಷತೆಯ
ನಾಟಕ ಮಾಡಿದರೆ, ಜನ ನಿಮ್ಮ ಪ್ರೀತಿಯನ್ನು
ಗೆಲ್ಲಲು ಹೆಚ್ಚು ಪ್ರಯತ್ನಿಸುತ್ತಾರೆ.
ದಿನ
5: ಅಚಾನಕ್ ಓಡಾಟ
ಮತ್ತು ಮಧ್ಯರಾತ್ರಿಯಲ್ಲಿ ಅಟ್ಟಹಾಸ
ಬೆಕ್ಕುಗಳು
ಅಚಾನಕ್ ಶಕ್ತಿಯ
ಮಹಾಪ್ರಳಯವನ್ನು ಹೊಂದಿರುತ್ತವೆ, ಇದನ್ನು "ಝೂಮೀಸ್" ಎಂದು ಕರೆಯುತ್ತಾರೆ. ನಾನು
ಈ ಜೀವನಶೈಲಿಯನ್ನು ಸಂಪೂರ್ಣವಾಗಿ ಅನುಸರಿಸಲು, ಅಪಾರ್ಟ್ಮೆಂಟ್ನಲ್ಲಿ ಹಠಾತ್ ಓಡುವ ಕ್ಷಣಗಳನ್ನು ಅನುಸರಿಸಿದೆ.
ಈ ಕೆಲಸವು ಹಾಸ್ಯಾಸ್ಪದವಾಗಿದೆ
ಆದರೆಅಷ್ಟೇ ಅದ್ಭುತವಾಗಿಯೂ
ಇದೆ. ಉದ್ದೇಶವಿಲ್ಲದೆ
ಸುಮ್ಮನೇ
ಓಡುವುದು ಬಹಳವೇ ಸಂತೋಷ
ತಂದಿತು!
ಬೆಕ್ಕಿನ ಜೀವನದಂತೆ ಪೂರ್ಣವಾಗಿ ತೊಡಗಿಸಿಕೊಳ್ಳಲು, ನಾನು
ರಾತ್ರಿ ಜಾಗೃತವಾಗಿದ್ದು, ಅಚಾನಕ್ ಆಗಿ ವಸ್ತುಗಳನ್ನು ಕೆಳಗೆ ತಳ್ಳಿದೆ. ನನ್ನ ಪಾರ್ಟ್ನರ್ ಗೆ ಇದು
ಸ್ವಲ್ಪವೂ ಹಿಡಿಸಲಿಲ್ಲ, ಆದರೆ
ಆ ನನ್ನ ಸಮಯವು ಬೆಕ್ಕಿನ
ಜೀವನ ದೃಷ್ಟಿಯಿಂದ ನಡೆಯುತ್ತಿದ್ದರಿಂದ,
ಅವನ ಅಭಿಪ್ರಾಯವು ನನಗೆ ಸಂಬಂಧಿಸಿರಲಿಲ್ಲ.
ದಿನ
6: ಸ್ವಚ್ಛತೆಯ ಐಶ್ವರ್ಯ ಮತ್ತು ವೈಯಕ್ತಿಕ ಸ್ಥಳ
ಬೆಕ್ಕುಗಳು
ತಮ್ಮನ್ನು ನಿರಂತರವಾಗಿ ಸ್ವಚ್ಛಪಡಿಸಿಕೊಳ್ಳುತ್ತವೆ ಮತ್ತು ವೈಯಕ್ತಿಕ ಸ್ವಚ್ಛತೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತವೆ.
ನಾನು
ತಲೆಯನ್ನು ನನ್ನ ನಾಲಿಗೆಯಿಂದ ತೊಳೆಯಲು
ಪ್ರಾರಂಭಿಸಿಲ್ಲ
(ಆಗ ಅದು ಅತಿಯಾಗಿ ಹೋಗುತ್ತಿತ್ತು),
ಆದರೆ ನಾನು ಹೆಚ್ಚು ನೀರಿನಿಂದ ಹೆಚ್ಚು ಸಮಯದ ಬಹಳ ಸಲದವರೆಗೂ , ಸ್ನಾನಗಳನ್ನು
ತೆಗೆದುಕೊಂಡೆ ಮತ್ತು ನನ್ನ ಕೂದಲನ್ನು ಹೆಚ್ಚುವರಿಯಾಗಿ
ಆರೈಕೆ ಮಾಡಿದೆ. ನಾನು ನನ್ನ ವೈಯಕ್ತಿಕ
ಜಾಗವನ್ನು ಹೆಚ್ಚುವರಿಯಾಗಿ ಗೌರವಿಸುತ್ತಾ, ವಿಶ್ರಾಂತಿ ಬೇಕಾದಾಗ ಮೌನವಾಗಿ ನನ್ನ ಮೂಲೆ ಹುಡುಕಿಕೊಂಡು
ಸುಮ್ಮನೆ ಕಣ್ಮುಚ್ಚಿ ನಿದ್ರಿಸಿದೆ.
ನಾನು
ಬೆಕ್ಕುಗಳು ಸಹಜವಾಗಿ ಸುಂದರವಾಗಿರಲು ಕಾರಣ ತಿಳಿದುಕೊಂಡೆ—ಅವುಗಳು
ತಾವಾಗಿಯೇ ತಮ್ಮನ್ನು ಹೆಚ್ಚು ಪ್ರೀತಿಸುತ್ತವೆ.
ದಿನ
7: ಚಿಂತನೆ—ಬೆಕ್ಕುಗಳು ಜೀವನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿವೆಯೇ?
ಒಂದು
ವಾರದ ಬೆಕ್ಕಿನ ಜೀವನವನ್ನು ಅನುಸರಿಸಿದ ನಂತರ, ನಾನು ಈ ವಾರದ ನನ್ನ ದಿನಚರಿಯನ್ನು ಅವಲೋಕಿಸಿದೆ. ಕೆಲವೊಂದು ಅಂಶಗಳು ನನಗೆ ಹೆಚ್ಚಿನ ಸವಾಲಾಗಿದ್ದವು
( ಅದರಲ್ಲಿ ಹೆಚ್ಚಿನ ನಿದ್ರೆ
ಮಾಡುವುದು ಮತ್ತು ಪ್ರೊಡಕ್ಟಿವಿಟಿ ಬಿಟ್ಟುಬಿಡುವುದು), ಆದರೆ ಕೆಲವು ಅಂಶಗಳು
ನನಗೆ ಹೊಸ ಅನುಭವದ ಬೆಳಕು ತರುವಂತಾಗಿದ್ದವು.
ಬೆಕ್ಕುಗಳ
ವಿಶ್ರಾಂತಿಯ ಕಲೆ, ಆತ್ಮಸಂರಕ್ಷಣೆ ಮತ್ತು
ತಮ್ಮ ಸುರಕ್ಷತೆಯ ಗಡಿಗಳನ್ನು ಹೊಂದಿಸುವ ಕೌಶಲ್ಯವನ್ನು ಹೊಂದಿವೆ. ಅವು ಒತ್ತಡದಿಂದ ಬದುಕುವುದಿಲ್ಲ,
ಒಪ್ಪಿಗೆಯ ಬಗ್ಗೆ ಚಿಂತಿಸುವುದಿಲ್ಲ, ಮತ್ತು ಬೇಕಾದಾಗ ಮಾತ್ರ ಸಂಪರ್ಕ ಸಾಧಿಸುತ್ತವೆ. ಬೆಕ್ಕಿನಂತೆ ಬದುಕುವುದು ನನಗೆ ವಿಶ್ರಾಂತಿ ಮಾಡುವುದು,
"ಇಲ್ಲ" ಎಂದು ಹೇಳುವುದು
ಮತ್ತು ನಾನು ಅಗತ್ಯವಿರುವುದನ್ನು ಹಿಂದುಮುಂದೂ ನೋಡದೆ ಕೇಳಲು ಸಹಾಯ ಮಾಡಿತು.
ನಾನು
ಸದಾಕಾಲ ಬೆಕ್ಕಿನಂತ ಬದುಕನ್ನು
ಜೀವಿಸಲು ಸಾಧ್ಯವೇ ????
ಬಹುಶಃ
ಇಲ್ಲ…………
ಆದರೆ
ನಾನು ಹೆಚ್ಚು ನಿದ್ರೆಯನ್ನು ಮಾಡಲಿದ್ದೇನೆ,
ಸುರಕ್ಷತೆಯ ಗಡಿಗಳನ್ನು ಸ್ಥಾಪಿಸಲಿದ್ದೇನೆ, ಮತ್ತು ಅನೇಕ ಸಲ
"ಝೂಮೀಸ್" ಅನ್ನು ಖಂಡಿತವಾಗಿಯೂ ಅನುಭವಿಸಲಿದ್ದೇನೆ.!!!!
ನೀವು
ಯಾವಾಗಲಾದರೂ ಮನುಷ್ಯನ ಅತಿಯಾದ ಹೊಣೆಗಾರಿಕೆಯಿಂದ
ಒತ್ತಡ ಅನುಭವಿಸಿದರೆ, ಬೆಕ್ಕಿನಂತೆ ಒಂದು ದಿನ ಬದುಕಲು
ಪ್ರಯತ್ನಿಸಿ. ಬಹುಶಃ ಅವು ಸರಿ ಇದ್ದವು
ಎಂದು ನೀವು ಸಹ ಅರ್ಥೈಸಬಹುದು!
ಮತ್ತು ಸಂತಸವನ್ನು ಅನುಭವಿಸಬಹುದು.
ಧನ್ಯವಾದಗಳು………..🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು