ಎಣ್ಣೆ ಬಳಸದೆ ಸಕ್ಕರೆ ಇಲ್ಲದೇ ತಯಾರಿಸುವ ಸಿಹಿ ಅಡುಗೆಗಳು ಆಧುನಿಕತೆಯ ಸೊಬಗನ್ನು ಹೆಚ್ಚಿಸಿ ಟ್ರೆಂಡ್ ಸೃಷ್ಟಿಸುವಲ್ಲಿ ಸಫಲತೆ !!!!!!!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ರುಚಿಕರವಾದ ಕಡಿಮೆ ತೈಲ ಮತ್ತು ಸಕ್ಕರೆ
ರಹಿತ ಡೆಸೇರ್ಟ್ ಗಳ ಆಯ್ಕೆಗಳು:-
ಹಣ್ಣುಗಳ ಡೆಸರ್ಟ್ಗಳು :-
1. ಬೇಕ್ಡ್
ಆಪಲ್ಗಳು :-– ಆಪಲ್ಗಳನ್ನು , ಹುರಿದ
ನಟ್ಸ್, ದಾಲ್ಚಿನ್ನಿ ಮತ್ತು ಸ್ವಲ್ಪ ಜೇನುತುಪ್ಪ ಮತ್ತು ಕಳಿದ
ಬಾಳೆಹಣ್ಣುಗಳಿಂದ
ತುಂಬಿಸಿದರೆ ರುಚಿಕರವಾದ ಡೆಸರ್ಟ್
ತಯಾರಾಗುತ್ತದೆ.
2. ಚಿಯಾ
ಪುಡಿಂಗ್ – ಚಿಯಾ ಬೀಜಗಳನ್ನು ಸಕ್ಕರೆ
ರಹಿತ ಬಾದಾಮಿ ಹಾಲು ಮತ್ತು ವೆನಿಲ್ಲಾ
ಜೊತೆ ಮಿಕ್ಸ್ ಮಾಡಿ, ನಂತರ ಹಣ್ಣುಗಳೊಂದಿಗೆ ಅಲಂಕರಿಸಿ.
3. ಫ್ರೋಜನ್
ಬಾಳೆಹಣ್ಣು ಐಸ್ ಕ್ರೀಂ – ಫ್ರೋಜನ್
ಬಾಳೆಹಣ್ಣುಗಳನ್ನು ಸ್ವಲ್ಪ ಹಾಲು ಮತ್ತು ದಾಲ್ಚಿನ್ನಿಯೊಂದಿಗೆ
ಮಿಕ್ಸ್ ಮಾಡಿ, ಫ್ರೀಝರ್ ನಲ್ಲಿಟ್ಟರೆ ತಣ್ಣಗಿನ ಐಸ್ ಕ್ರೀಂ ರೆಡಿ.
ಚಾಕೋಲೇಟ್ ಟ್ರೀಟ್ಸ್:-
1. ಅವಕಾಡೋ
ಚಾಕೋಲೇಟ್ ಮೂಸ್ – ಮೆದುವಾದ ಅವಕಾಡೋ,
ಕೋಕೋ ಪುಡಿ, ಮತ್ತು ನ್ಯಾಚುರಲ್ ಸಿಹಿಗೆ
ಖರ್ಜೂರ
ಅಥವಾ ಸ್ಟೀವಿಯಾ ಬಳಸಿ ಮಿಕ್ಸ್ ಮಾಡಿ.
2. ಖರ್ಜೂರ
ಮತ್ತು ನಟ್ಸ್ ಎನರ್ಜಿ ಬಾಲ್ಸ್ : – ಖರ್ಜೂರ, ಬಾದಾಮಿ, ಕೋಕೋ ಪುಡಿ, ಮತ್ತು
ಸ್ವಲ್ಪ ಉಪ್ಪನ್ನು ಮಿಕ್ಸ್ ಮಾಡಿ, ನಂತರ ಲಡ್ಡುಗಳಾಗಿ ಉಂಡೆ
ಮಾಡಿಕೊಳ್ಳಿ.
3. ಡಾರ್ಕ್
ಚಾಕೋಲೇಟ್-ಡಿಪ್ ಮಾಡಿದ ಸ್ಟ್ರಾಬೆರಿ
– ಸಕ್ಕರೆ ರಹಿತ ಅಥವಾ ಕೆಮಿಕಲ್
ರಹಿತ ಸಿಹಿಯಾದ ಡಾರ್ಕ್ ಚಾಕೋಲೇಟ್ ಬಳಸಿ.
ಬೇಕ್ಡ್
ಗೂಡ್ಸ್:-
1. ಓಟ್ಸ್
ಕುಕೀಸ್ – ಸಕ್ಕರೆ ಮತ್ತು ಬೆಣ್ಣೆ ಬದಲು ಮೆದುವಾದ ಬಾಳೆಹಣ್ಣು
ಅಥವಾ ಆಪಲ್ ಪೇಸ್ಟ್ ಬಳಸಿ.
2. ಬಾದಾಮಿ
ಹಿಟ್ಟಿನ ಬ್ರೌನೀಸ್ – ಖರ್ಜೂರ ಅಥವಾ ಕಳಿದ ಬಾಳೆಹಣ್ಣುಗಳೊಂದಿಗೆ
ಸಿಹಿ ಮಾಡಿ, ಎಣ್ಣೆ ಕಡಿಮೆ ಬಳಸಿ.
3. ಪೂರ್ಣ
ಗೋಧಿ ಬಾಳೆಹಣ್ಣು ಬ್ರೆಡ್ – ಸಿಹಿಯಾದ ಬಾಳೆಹಣ್ಣು ಬಳಸಿ, ತೈಲದ ಬದಲು ಮೊಸರು
ಬಳಸಿ.
ಕ್ರೀಮಿ
ಮತ್ತು ಪುಡಿಂಗ್ ಶೈಲಿ ಡೆಸೇರ್ಟ್ಗಳು:-
1. ತೆಂಗಿನ ಹಾಲಿನ ಮೊಸರು ಹಣ್ಣುಗಳು ಮತ್ತು ನಟ್ಸ್ ಗಳೊಂದಿಗೆ – ಸಕ್ಕರೆ ರಹಿತ ತೆಂಗಿನ ಹಾಲಿನ ಮೊಸರನ್ನು ಹೊಸ ಹಣ್ಣುಗಳು ಮತ್ತು ದಾಲ್ಚಿನ್ನಿಯೊಂದಿಗೆ ಮಿಕ್ಸ್ ಮಾಡಿ.
2. ಪಂಪ್ಕಿನ್
ಸ್ಪೈಸ್ ಪುಡಿಂಗ್ – ಕುಂಬಳಕಾಯಿ ಪೇಸ್ಟ್, ದಾಲ್ಚಿನ್ನಿ, ಜಾಯಿಕಾಯಿ ಮತ್ತು ಸಕ್ಕರೆ ರಹಿತ ಬಾದಾಮಿ ಹಾಲನ್ನು
ಮಿಕ್ಸ್ ಮಾಡಿ.
ಇಲ್ಲಿ
ಪ್ರತಿಯೊಂದು ಡೆಸೇರ್ಟ್ ಐಡಿಯಾಕ್ಕೆ ಎರಡು ರುಚಿಕರವಾದ ರೆಸಿಪಿಗಳು
ಇವೆ:
ಹಣ್ಣುಗಳ
ಡೆಸೇರ್ಟ್ಗಳು
1. ಬೇಕ್ಡ್
ಆಪಲ್ಗಳು
ಆಪಲ್ನ ತಿರುಳನ್ನು ಒಳಗಿನಿಂದ ತೆಗೆದು, ಹುರಿದ ನಟ್ಸ್, ಹುರಿದ ಕಿಸ್ಮಿಸ್, ದಾಲ್ಚಿನ್ನಿ, ಮತ್ತು ಒಂದು ಚಮಚ ಸಕ್ಕರೆ
ರಹಿತ ಆಪಲ್ ಪೇಸ್ಟ್ ತುಂಬಿಸಿ.
175°C ತಾಪಮಾನದಲ್ಲಿ 20 ನಿಮಿಷ ಬೇಯಿಸಿದಾಗ ಬೇಕ್ಡ್ ಆಪಲ್ ಗಳು ತಯಾರಾಗುತ್ತದೆ.
ಆಪಲ್
ತುಂಡುಗಳಾಗಿ ಕತ್ತರಿಸಿ, ದಾಲ್ಚಿನ್ನಿ ಮತ್ತು ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ.
375°F (190°C) ತಾಪಮಾನದಲ್ಲಿ
15 ನಿಮಿಷ ಬೇಯಿಸಿ, ನಂತರ ಖರ್ಜೂರವನ್ನು
ಅದರ ಮೇಲಿಟ್ಟು
ಸವಿಯಿರಿ.
2. ಚಿಯಾ
ಪುಡಿಂಗ್ :-
3 ಟೇಬಲ್ಸ್ಪೂನ್ ಚಿಯಾ ಬೀಜಗಳನ್ನು 1 ಕಪ್
ಸಕ್ಕರೆ ರಹಿತ ಬಾದಾಮಿ ಹಾಲು,
½ ಚಮಚ ವೆನಿಲ್ಲಾ ಜೊತೆ ಮಿಶ್ರಣ ಮಾಡಿ,
ರಾತ್ರಿ ಪೂರ್ತಿ ನೆನೆಸಿಡಿ. ತಾಜಾ ಹಣ್ಣುಗಳು ಮತ್ತು
ಹುರಿದ ನಟ್ಸ್ನೊಂದಿಗೆ ಸವಿಯಿರಿ.
½ ಕಪ್
ಮಾವಿನ ಹಣ್ಣನ್ನು 1 ಕಪ್ ತೆಂಗಿನ ಹಾಲಿನೊಂದಿಗೆ
ಮಿಶ್ರಣ ಮಾಡಿ ಮಿಕ್ಸರ್ ಗ್ರೈಂಡರ್ ನಲ್ಲಿ ರುಬ್ಬಿ
, 3 ಟೇಬಲ್ಸ್ಪೂನ್ ಚಿಯಾ ಬೀಜ ಸೇರಿಸಿ
ನಂತರ 2-3 ಗಂಟೆಗಳ
ಕಾಲ ನೆನೆಸಿಡಿ, ನಂತರ ತುರಿದ ತೆಂಗಿನಕಾಯಿ ಚೂರುಗಳನ್ನು ಸೇರಿಸಿ ಸವಿಯಿರಿ.
3. ಫ್ರೋಜನ್
ಬಾಳೆಹಣ್ಣು ಐಸ್ ಕ್ರೀಂ :-
2 ಫ್ರೋಜನ್
ಬಾಳೆಹಣ್ಣುಗಳನ್ನು 1 ಚಮಚ ವೆನಿಲ್ಲಾ ಮತ್ತು
ಸ್ವಲ್ಪ ಬಾದಾಮಿ ಹಾಲಿನೊಂದಿಗೆ ಮಿಕ್ಸ್ ಮಾಡಿ ತಕ್ಷಣ ಸೇವಿಸಿ ಅಥವಾ 30 ನಿಮಿಷಗಳ ಕಾಲ ಫ್ರೀಜ್ ಮಾಡಿ, ನಂತರ ಸೇವಿಸಿ.
2 ಫ್ರೋಜನ್
ಬಾಳೆಹಣ್ಣುಗಳನ್ನು 1 ಟೇಬಲ್ಸ್ಪೂನ್ ಕೋಕೋ ಪುಡಿ ಮತ್ತು
1 ಟೇಬಲ್ಸ್ಪೂನ್ ಬೆಣ್ಣೆಯೊಂದಿಗೆ
ಮಿಕ್ಸ್ ಮಾಡಿ ನಂತರ ಫ್ರೀಜ್
ನಲ್ಲಿಟ್ಟು ಬಳಸಿ.
ಚಾಕೋಲೇಟ್
ಟ್ರೀಟ್ಸ್
4. ಅವಕಾಡೋ ಚಾಕೋಲೇಟ್ ಮೋಸ್:-
1 ಮೆದುವಾದ
ಅವಕಾಡೋ, 2 ಟೇಬಲ್ಸ್ಪೂನ್ ಕೋಕೋ ಪುಡಿ, ಮತ್ತು
1 ಟೇಬಲ್ಸ್ಪೂನ್ ಮೆಪಲ್ ಸಿರಪ್ (ಇಚ್ಚೆಯಿದ್ದರೆ) ಮಿಕ್ಸ್ ಮಾಡಿ. ತಾಜಾ ಹಣ್ಣುಗಳೊಂದಿಗೆ ಸವಿಯಿರಿ.
1 ಅವಕಾಡೋ,
1 ಟೇಬಲ್ಸ್ಪೂನ್ ಕೋಕೋ ಪುಡಿ, ½ ಬಾಳೆಹಣ್ಣು,
ಮತ್ತು ಸ್ವಲ್ಪ ದಾಲ್ಚಿನ್ನಿ ಮಿಕ್ಸ್ ಮಾಡಿ, ತಕ್ಷಣ ಸೇವಿಸಬಹುದು ಅಥವಾ 1 ಗಂಟೆ ಫ್ರಿಜ್ನಲ್ಲಿ
ಇಟ್ಟು ಬಳಸಬಹುದು.
5. ಖರ್ಜೂರ
ಮತ್ತು ನಟ್ಸ್ ಎನರ್ಜಿ ಬಾಲ್ಸ್:-
1 ಕಪ್
ಖರ್ಜೂರ, ½ ಕಪ್ ಬಾದಾಮಿ, 2 ಟೇಬಲ್ಸ್ಪೂನ್ ಕೋಕೋ ಪುಡಿ, ಮತ್ತು
1 ಚಮಚ ವೆನಿಲ್ಲಾ ಮಿಕ್ಸ್ ಮಾಡಿ, ಉಂಡೆ ಕಟ್ಟಿ ಫ್ರಿಜ್ನಲ್ಲಿ ಇಟ್ಟು ಸೇವಿಸಬಹುದು.
1 ಕಪ್
ಖರ್ಜೂರ, ½ ಕಪ್ ಗೋಡಂಬಿ, 2 ಟೇಬಲ್ಸ್ಪೂನ್ ಪುಟ್ಟನಾರ ಬೀಜ ಬೆಣ್ಣೆ, ಮತ್ತು
ಸ್ವಲ್ಪ ಉಪ್ಪು ಮಿಕ್ಸ್ ಮಾಡಿ. ಉಂಡೆ ಮಾಡಿ, ರುಬ್ಬಿದ
ತೆಂಗಿನ ಕಾಯಿ ರಸದೊಳಗೆ ಉರುಳಿಸಿದರೆ
ತಿನ್ನಲು ರೆಡಿ.
6. ಡಾರ್ಕ್
ಚಾಕೋಲೇಟ್-ಡಿಪ್ ಮಾಡಿದ ಸ್ಟ್ರಾಬೆರಿ:-
ರಹಿತ
ಡಾರ್ಕ್ ಚಾಕೋಲೇಟ್ ಕರಗಿಸಿ, ತಾಜಾ ಸ್ಟ್ರಾಬೆರಿಯಲ್ಲಿ ಮುಳುಗಿಸಿ,
ಫ್ರಿಜ್ನಲ್ಲಿ 15 ನಿಮಿಷ ಇಡಿ.
ಡಾರ್ಕ್
ಚಾಕೋಲೇಟ್ ಕರಗಿಸಿ, 1 ಚಮಚ ತೆಂಗಿನ ಎಣ್ಣೆ
ಸೇರಿಸಿ, ಮತ್ತು ಸ್ಟ್ರಾಬೆರಿ ಅದರಲ್ಲಿ ಮುಳುಗಿಸಿ. ನಂತರ ಹುರಿದ ನಟ್ಸ್‌ನಲ್ಲಿ ಮುಳುಗಿಸಿ, ಫ್ರಿಜ್‌ನಲ್ಲಿ ಇಡಿ.
ಬೇಕ್ಡ್ ಆಹಾರಗಳು
ಓಟ್ಸ್ ಕುಕೀಸ್
2 ಮೆದುಸಾದ ಬಾಳೆಹಣ್ಣು, 1 ಕಪ್ ಓಟ್ಸ್, ಮತ್ತು ½ ಚಮಚ ದಾಲ್ಚಿನ್ನಿ ಮಿಶ್ರಣ ಮಾಡಿ., 175°C ತಾಪಮಾನದಲ್ಲಿ 15 ನಿಮಿಷ ಬೇಯಿಸಿದ ನಂತರ ಸವಿಯಿರಿ.
1 ಕಪ್
ಓಟ್ಸ್, ¼ ಕಪ್ ಬಾದಾಮಿ ಬೆಣ್ಣೆ,
½ ಕಪ್ ಮೆದುವಾದ ಖರ್ಜೂರ, ಮತ್ತು ½ ಚಮಚ ವೆನಿಲ್ಲಾ ಮಿಶ್ರಣ
ಮಾಡಿ. 175°C ತಾಪಮಾನದಲ್ಲಿ 12 ನಿಮಿಷ ಬೇಯಿಸಿ.
8. ಬಾದಾಮಿ
ಹಿಟ್ಟಿನ ಬ್ರೌನೀಸ್ :-
1 ಕಪ್
ಬಾದಾಮಿ ಹಿಟ್ಟು, ¼ ಕಪ್ ಕೋಕೋ ಪುಡಿ,
½ ಕಪ್ ಸಿಪ್ಪೆ
ತೆಗೆದು ಕತ್ತರಿಸಿದ ಬಾಳೆಹಣ್ಣು,
ಮತ್ತು 1 ಚಮಚ ವನಿಲ್ಲಾ ಮಿಶ್ರಣ
ಮಾಡಿ. ಮಂದ ಉರಿಯಲ್ಲಿ 20 ನಿಮಿಷ
ಬೇಯಿಸಿ.
1 ಕಪ್
ಬಾದಾಮಿ ಹಿಟ್ಟು, ½ ಕಪ್ ಖರ್ಜೂರ, ¼ ಕಪ್
ಕೋಕೋ ಪುಡಿ, ಮತ್ತು ½ ಕಪ್ ಬಾದಾಮಿ ಹಾಲು
ಮಿಶ್ರಣ ಮಾಡಿ. ಲೋ ಫ್ಲೇಮ್ ನಲ್ಲಿ 18 ನಿಮಿಷ
ಬೇಯಿಸಿ.
9. ಪೂರ್ಣ
ಗೋಧಿ ಬಾಳೆಹಣ್ಣು ಬ್ರೆಡ್:-
2 ಮೆದುವಾದ
ಬಾಳೆಹಣ್ಣು, 1 ಕಪ್ ಗೋಧಿ
ಹಿಟ್ಟು, ½ ಚಮಚ ಬೇಕಿಂಗ್ ಸೋಡಾ,
ಮತ್ತು 1 ಚಮಚ ದಾಲ್ಚಿನ್ನಿ ಮಿಶ್ರಣ
ಮಾಡಿ, ಹೈ ಫ್ಲೇಮ್ ನಲ್ಲಿಟ್ಟು ಇಡ್ಲಿ ಬೇಯಿಸುವ ಪಾತ್ರೆಯಲ್ಲಿ 30 ನಿಮಿಷ
ಬೇಯಿಸಿ.
1½ ಕಪ್ ಗೋಧಿ
ಹಿಟ್ಟು, ½ ಕಪ್ ಆಪಲ್ ಪೇಸ್ಟ್,
2 ಬಾಳೆಹಣ್ಣು,
ಮತ್ತು 1 ಚಮಚ ವೆನಿಲ್ಲಾ ಸೇರಿಸಿ
ಚೆನ್ನಾಗಿ ಮಿಶ್ರಣ ಮಾಡಿ ಹಬೆಯಲ್ಲಿ
40 ನಿಮಿಷ
ಬೇಯಿಸಿದರೆ ಗೋಧಿ ಬಾಳೆಹಣ್ಣು ಬ್ರೆಡ್
ತಯಾರಾಗಿಬಿಡುತ್ತದೆ.
ಕ್ರೀಮಿ
ಮತ್ತು ಪುಡಿಂಗ್ ಶೈಲಿ ಡೆಸೇರ್ಟ್ಗಳು
10. ತೆಂಗಿನ
ಹಾಲಿನ ಮೊಸರು ಹಣ್ಣುಗಳು ಮತ್ತು ನಟ್ಸ್ ಜೊತೆ
ಸಕ್ಕರೆ
ರಹಿತ ತೆಂಗಿನ ಹಾಲಿನ ಮೊಸರು, ತಾಜಾ ರಾಸ್ಪ್ಬೆರಿ,
ಮತ್ತು ಹುರಿದ ಅಕೋಟಿ ಮಿಶ್ರಣ ಮಾಡಿ ಸವಿಯಿರಿ.
ತೆಂಗಿನ
ಹಾಲಿನ ಮೊಸರು, ಬ್ಲೂಬೆರಿ, ಬಾದಾಮಿ, ಮತ್ತು ಸ್ವಲ್ಪ ಬಾದಾಮಿ ಬೆಣ್ಣೆ ಮಿಶ್ರಣ ಮಾಡಿ ಸವಿಯಿರಿ.
11. ಪುಂಪ್ಕಿನ್
ಸ್ಪೈಸ್ ಪುಡಿಂಗ್:-
1 ಕಪ್ ಕುಂಬಳಕಾಯಿ ಪೇಸ್ಟ್, ½ ಕಪ್ ಸಕ್ಕರೆ ರಹಿತ ಬಾದಾಮಿ ಹಾಲು, ದಾಲ್ಚಿನ್ನಿ, ಮತ್ತು ಜಾಯಿಕಾಯಿ ಮಿಶ್ರಣ ಮಾಡಿ. 1 ಗಂಟೆ ಫ್ರಿಜ್ನಲ್ಲಿ ಇಡಿ.
1 ಕಪ್
ಕುಂಬಳಕಾಯಿ ಪೇಸ್ಟ್, ¼ ಕಪ್ ಚಿಯಾ ಬೀಜ,
ಮತ್ತು ½ ಚಮಚ ವೆನಿಲ್ಲಾ ಮಿಶ್ರಣ
ಮಾಡಿ. ರಾತ್ರಿ ಪೂರ್ತಿ ಫ್ರಿಜ್ನಲ್ಲಿ ಇಡಿ.
ಧನ್ಯವಾದಗಳು….....🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು