ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಇ-ಕಾಮರ್ಸ್‌ ಮತ್ತು ಡ್ರಾಪ್‌ ಶಿಪ್ಪಿಂಗ್‌ : ಸ್ವಂತ ಬುಸಿನೆಸ್‌ ಮಾಡಲು ಆಸಕ್ತಿ ಉಳ್ಳವರಿಗೆ ಉತ್ತಮ ಪ್ಲಾಟ್‌ ಫಾರ್ಮ್‌ ಒದಗಿಸುವಲ್ಲಿ ಯಾವುದೇ ಅನುಮಾನವಿಲ್ಲ...!!!!!

 


                                                


ಸ್ವಯಂ ಉದ್ಯೋಗ: ನಿಮ್ಮ ಸ್ವಂತ ವ್ಯವಹಾರ ಶುರುಮಾಡಲು ಟಿಪ್ಸ್

ಸ್ವಯಂ ಉದ್ಯೋಗವು ವ್ಯಕ್ತಿಗಳಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಸೃಜನಶೀಲತೆಯ ಮೆಟ್ಟಿಲುಗಳನ್ನು ಏರಲು ದೊಡ್ಡ ಅವಕಾಶ ನೀಡುತ್ತದೆ. ನಿಮ್ಮ ಸ್ವಂತ ವ್ಯವಹಾರವನ್ನು ಆರಂಭಿಸಲು ಕೆಲವು ಉಪಯುಕ್ತ ಟಿಪ್ಸ್ ಇಲ್ಲಿವೆ :

1. ಆಲೋಚನೆ ಮತ್ತು ಯೋಜನೆ:

ಮೊದಲಿಗೆ, ನೀವು ಹೆಚ್ಚಿಗೆ  ಆಸಕ್ತಿ ವಹಿಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಆಯ್ಕೆ ಮಾಡಿದ ಕ್ಷೇತ್ರದ  ಮಾರುಕಟ್ಟೆಯ ಬಗ್ಗೆ  ತಜ್ಞರ ಸಲಹೆ ಪಡೆಯಿರಿ  ಮತ್ತುಅದಕ್ಕೆ ಬೇಕಾದಂತಹ  ತರಬೇತಿ ಪಡೆದುಕೊಳ್ಳಿ  ಜೊತೆಗೆ ನಿಮ್ಮ ಹಣಕಾಸು ಬಜೆಟ್ ಮತ್ತು ಸಮಯವನ್ನು ಪರಿಗಣಿಸಿ.

2. ಮಾರುಕಟ್ಟೆ ಅಧ್ಯಯನ:

ನಿಮ್ಮ ಉತ್ಪನ್ನ ಅಥವಾ ಸೇವೆಗೆ ಬೇಡಿಕೆ ಎಷ್ಟು ಮತ್ತು ಹೇಗಿರಬಹುದು ಎಂಬುದನ್ನು ಅಧ್ಯಯನ ನಡೆಸಿ.  ಸ್ಪರ್ಧೆಯ ಮಟ್ಟ ಮತ್ತು ಗ್ರಾಹಕರ ಬೇಡಿಕೆಗಳನ್ನು ಅರಿತುಕೊಳ್ಳಿ.

3. ಆರ್ಥಿಕ ವ್ಯವಸ್ಥೆ:

ಆರಂಭಿಕ ಬಂಡವಾಳದ ಅಗತ್ಯತೆ  ಎಷ್ಟಿದೆ  ಎಂಬುದನ್ನು ಲೆಕ್ಕ ಹಾಕಿ. ಬ್ಯಾಂಕ್ ಸಾಲಗಳು, ಸರ್ಕಾರಿ ಸಬ್ಸಿಡಿಗಳು ಅಥವಾ ಮಿತಯುಕ್ತ ಸಾಲಗಳ ಸಂಪೂರ್ಣ ಮಾಹಿತಿ ಮತ್ತು ಅದರ ಸಮಯದ ಬಗ್ಗೆ  ತಿಳಿದುಕೊಳ್ಳಿ.

4. ವ್ಯವಹಾರ ಆಯ್ಕೆ:

ಗೃಹ ವ್ಯಾಪಾರಗಳಾದಂತಹ , ಆಹಾರ ಉತ್ಪನ್ನಗಳು, ಹಸ್ತಕಲಾ ವಸ್ತುಗಳು, ಟೇಲರಿಂಗ್ ಮುಂತಾದವುಗಳನ್ನು  ಸಣ್ಣ ಮಟ್ಟದಲ್ಲಿ ಮೊದಲಿಗೆ ಪ್ರಾರಂಭಿಸಿ, ನಂತರದಲ್ಲಿ  ಪ್ಯಾಕ್ ಮಾಡಿದ ಆಹಾರಗಳ  ವಿತರಣಾ ಸೇವೆ, ಕೈಮಗ್ಗ ಉತ್ಪನ್ನಗಳು, ಬಟ್ಟೆ ವ್ಯಾಪಾರ ಇತ್ಯಾದಿಗಳನ್ನು ನಂತರದಲ್ಲಿ ಜೊತೆ ಸೇರಿಸುತ್ತಾ ಬನ್ನಿ ಹೀಗೆಯೇ ವ್ಯಾಪಾರವು ಬೆಳೆಯುತ್ತಾ ಹೋದಂತೆ ನಿಮ್ಮ ಉದ್ಯಮದ  ಮಾರ್ಕೆಟ್‌ ಗಾತ್ರವನ್ನು ವಿಸ್ತರಿಸುತ್ತಾ ಬನ್ನಿ .

5. ಅಧಿಕೃತ ಪರವಾನಿಗೆ ಮತ್ತು ನೋಂದಣಿ:

ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ಕಾನೂನುಮಟ್ಟದ ಪರವಾನಿಗೆಗಳನ್ನು ಪಡೆಯಿರಿ ಮತ್ತು

ಸ್ಥಳೀಯ ಸಂಸ್ಥೆಗಳ ನಿಬಂಧನೆಗಳನ್ನು ಪಾಲಿಸುವ ಮೂಲಕ ನಿಮ್ಮ ವ್ಯವಹಾರವನ್ನು ಪಾರದರ್ಶಕವಾಗಿ ಲೀಗಲ್‌ ಮತ್ತು ಎಥಿಕಲ್‌ ಆಗಿ ಇರುವಂತೆ ನೋಡಿಕೊಳ್ಳಿ.

6. ಮಾರ್ಕೆಟಿಂಗ್ ಮತ್ತು ಪ್ರಚಾರ:

ಸಾಮಾಜಿಕ ಮಾಧ್ಯಮಗಳ ಮೂಲಕ ಉಚಿತ ಅಥವಾ ಕಡಿಮೆ ವೆಚ್ಚದ ಮಾರ್ಕೆಟಿಂಗ್‌  ಮಾಡಿ. ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರು ಮತ್ತು ಸ್ಥಳೀಯ ಗ್ರಾಹಕರನ್ನು ಪ್ರಾರಂಭಿಕ ಗ್ರಾಹಕರನ್ನಾಗಿ  ಪರಿಗಣಿಸಿ.

7. ಸಹನೆ ಮತ್ತು ಸದೃಢತೆ:

ಪ್ರಾರಂಭದಲ್ಲಿ ಸಣ್ಣಸಣ್ಣ  ಸವಾಲುಗಳು ಎದುರಾಗಬಹುದು. ತಾಳ್ಮೆಯಿಂದ ನಿಮ್ಮ  ನಿರಂತರ ಪ್ರಯತ್ನ ಮಾಡಿ.

ಗ್ರಾಹಕರ ಅಭಿಪ್ರಾಯವನ್ನು ಸ್ವೀಕರಿಸಿ ಮತ್ತು  ನಿಮ್ಮ ಉತ್ಪನ್ನ ಅಥವಾ  ಸೇವೆಯ ಗುಣಮಟ್ಟತೆಯನ್ನು ಕಾಲ ಕಾಲಕ್ಕೆ  ಸುಧಾರಿಸಿಕೊಳ್ಳಿ.

ನಿಮ್ಮ ಉದ್ಯಮದ ಮೇಲೆ ವಿಶ್ವಾಸವಿಟ್ಟು, ಉತ್ತಮ ಯೋಜನೆಯೊಂದಿಗೆ ಮುನ್ನಡೆದರೆ, ಖಂಡಿತ ಯಶಸ್ಸು ನಿಮ್ಮದಾಗುತ್ತದೆ!

ಶುಭಾಶಯಗಳು!

                         🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺


  


ಹೆಂಗಸರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಸಲಹೆಗಳು ಮತ್ತು ಅತ್ಯುತ್ತಮ ಆಯ್ಕೆಗಳು

ಹೆಂಗಸರು ಸ್ವಾವಲಂಬಿಗಳಾಗಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು , ತಮ್ಮ ಆಸಕ್ತಿಯನ್ನೇ ವೃತ್ತಿಯನ್ನಾಗಿ ಪರಿವರ್ತಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ಗೃಹ ಆಧಾರಿತ  ಚುಟುಕು ಕಾರ್ಯಗಳು ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆಯೂ ಸುಲಭವಾಗಿ ನಿರ್ವಹಿಸಬಹುದಾದಂತಹ ಸ್ವಂತ ಉದ್ಯೋಗಗಳು ಇವೆ.

ಸ್ವಂತ ಉದ್ಯೋಗ ಪ್ರಾರಂಭಿಸಲು ಪ್ರಾರಂಭಿಕ ಸಲಹೆಗಳು:

  1. ಹವ್ಯಾಸವನ್ನು ಗುರುತಿಸಿ: -ನಿಮ್ಮ ಹವ್ಯಾಸ, ಕೌಶಲ್ಯತೆ ಅಥವಾ ಅನುಭವ ಯಾವ ಕ್ಷೇತ್ರದಲ್ಲಿದೆಯೋ ಅದನ್ನು ಗುರುತಿಸಿ.
  2. ಯೋಜನೆ ಮತ್ತು ಸಂಶೋಧನೆ:- ಮಾರುಕಟ್ಟೆಯ ಬೇಡಿಕೆ, ಸ್ಪರ್ಧೆ ಮತ್ತು ಗ್ರಾಹಕರ ಆಕಾಂಕ್ಷೆಗಳನ್ನು ಅಧ್ಯಯನ ಮಾಡಿ.
  3. ಬಂಡವಾಳ ಮತ್ತು ಸಂಪತ್ತು:-ಬಂಡವಾಳದ ಲೆಕ್ಕಾಚಾರ ಮಾಡಿ. ಸ್ಟಾರ್ಟಪ್ಲೋನ್ಗಳು ಅಥವಾ ಸರ್ಕಾರದ ಸಬ್ಸಿಡಿಗಳು ಲಭ್ಯವಿರುವುದನ್ನು ಪರಿಶೀಲಿಸಿ.
  4. ಕಾನೂನು ಅನುಮತಿ:-ಸ್ಥಳೀಯ ಆಡಳಿತದಿಂದ ಅಗತ್ಯ ಪರವಾನಿಗೆಗಳು ಮತ್ತು ನೋಂದಣಿಗಳನ್ನು ಪಡೆಯಿರಿ.
  5. ಮಾರುಕಟ್ಟೆ ಮತ್ತು ಪ್ರಚಾರ:-ಡಿಜಿಟಲ್ ಪ್ಲಾಟ್ಫಾರ್ಮ್ಗಳಾದ , ಸಾಮಾಜಿಕ ಮಾದ್ಯಮಗಳ ಮೂಲಕ ನಿಮ್ಮ ಉತ್ಪನ್ನ ಅಥವಾ ಸೇವೆಯನ್ನು ಪ್ರಚಾರ ಮಾಡಿ.

💡 ಗೃಹಿಣಿಯರಿಗೆ ಸರಿಹೊಂದುವಂತಹ  ಸ್ವಂತ ಉದ್ಯೋಗದ ಆಯ್ಕೆಗಳು

1. ಗೃಹ ವ್ಯಾಪಾರಗಳನ್ನಾಗಿ ಅಡುಗೆ ಮತ್ತು ಬೇಕಿಂಗ್:- ಹೋಂ  ಮೇಡ್‌ ಬೇಕರಿ ಐಟಮ್ಸ್, ಕೇಕ್ ಡೆಕೋರೇಷನ್, ಕುರುಚಲು ತಿಂಡಿಗಳ ತಯಾರಿ , ಮತ್ತು ಇತ್ತೀಚೆಗೆ ಹೆಚ್ಚು ಟ್ರೆಂಡ್‌ ನಲ್ಲಿರುವ ಕ್ಲೌಡ್‌ ಕಿಚನ್‌‌ ಐಡಿಯಾಸ್‌ ಇನ್ನೂ  ಮುಂತಾದವು.

ಟೈಲರಿಂಗ್‌  ಮತ್ತು ಸ್ಟಿಚಿಂಗ್:  ಬಟ್ಟೆಗಳ ಹೊಲಿಗೆ, ಪೋಷಾಕುಗಳ ವಿನ್ಯಾಸ,  ಹಳೆಯ ಮತ್ತು ಹೆಚ್ಚು ಉಪಯೋಗವಾಗಿಲ್ಲದ ಬಟ್ಟೆಗಳನ್ನು ಟ್ರೆಂಡ್‌ ಗೆ ತಕ್ಕಂತೆ ವಿನ್ಯಾಸ ಮಾಡುವುದು,  ಟೇಲರಿಂಗ್.

ಹಸ್ತಕಲಾ ಉತ್ಪನ್ನಗಳು:  ಹ್ಯಾಂಡ್‌ ಮೇಡ್‌  ಜ್ಯುವೆಲ್ಲರಿಸ್ ,  ಪೇಪರ್ ಕ್ರಾಫ್ಟ್, ಪೇಯಿಂಟಿಂಗ್.




2. ಸೇವಾ ಆಧಾರಿತ ಉದ್ಯಮಗಳು

ಬ್ಯೂಟಿ ಪಾರ್ಲರ್ ಅಥವಾ ಮೆಹಂದಿ ಆರ್ಡರ್:- ಮನೆಯಲ್ಲಿಯೇ ಸಣ್ಣದಾಗಿ ಪಾರ್ಲರ್ಪ್ರಾರಂಭಿಸಿ.

ಟ್ಯೂಷನ್ ಮತ್ತು ತರಬೇತಿ:- ಮಕ್ಕಳಿಗೆ ಟ್ಯೂಷನ್, ಸಂಗೀತ, ಚಿತ್ರಕಲೆ ತರಬೇತಿ ನೀಡುವುದು.

ಹೋಂ ಡೇ ಕೇರ್:- ಕೆಲಸಕ್ಕೆ ಹೋಗುವ ಪಾಲಕರ ಮಕ್ಕಳಿಗೆ ಡೇ ಕೇರ್ ಸೆಂಟರ್.

3. ಡಿಜಿಟಲ್ ಉದ್ಯಮಗಳು:-

ಫ್ರೀಲ್ಯಾನ್ಸಿಂಗ್‌  ಬರವಣಿಗೆ:- ಕಂಟೆಂಟ್ ರೈಟಿಂಗ್, ಬ್ಲಾಗಿಂಗ್, ಕಾಪಿರೈಟಿಂಗ್.

ಗ್ರಾಫಿಕ್ ಡಿಸೈನ್ ಮತ್ತು ವೆಬ್ ಡೆವಲಪ್ಮೆಂಟ್:- ಸಣ್ಣ ಉದ್ಯಮಗಳಿಗೆ ಲೋಗೋ ವಿನ್ಯಾಸ , ವೆಬ್ಸೈಟ್ ವಿನ್ಯಾಸ.

ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್:- ಕಂಪನಿಗಳಿಗೆ ಆನ್ಲೈನ್ ಪ್ರಚಾರ.

4. ಕೃಷಿ ಆಧಾರಿತ ಉದ್ಯಮಗಳು

ಆರ್ಗಾನಿಕ್ ಫಾರ್ಮಿಂಗ್:- ಸಸ್ಯಹಾರಿ ಉತ್ಪನ್ನಗಳು, ಮನೆಯಲ್ಲಿಯೇ ತಯಾರಿಸಲು ಸಾಧ್ಯವಾಗುವ  ಹೈಡ್ರೋಪೊನಿಕ್ಸ್.

ಹಣ್ಣು-ಹೂವು ಬೆಳೆದು ಮಾರಾಟ:- ಗೃಹ ತೋಟಗಾರಿಕೆ, ನರ್ಸರಿ ಬಿಜಿನೆಸ್.

5. -ಕಾಮರ್ಸ್ ಮತ್ತು ಡ್ರಾಪ್ಶಿಪಿಂಗ್

ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ.

ಫೇಸ್ಬುಕ್, ಇನ್ಸ್ಟಾಗ್ರಾಮ್, ಮತ್ತು ಇಟ್ಸಿ (Etsy) ಮುಂತಾದ ಪ್ಲಾಟ್ಫಾರ್ಮ್ಗಳಲ್ಲಿ ಸ್ಟೋರ್ ಓಪನ್ ಮಾಡಿ.


ನಿಮ್ಮ ಆಸಕ್ತಿ , ಕೌಶಲ್ಯತೆ ಮತ್ತು ಸಾಮರ್ಥ್ಯವನ್ನು ಗಮನದಲ್ಲಿ ಇಟ್ಟುಕೊಂಡು, ಸೂಕ್ತ ಉದ್ಯಮವನ್ನು ಆರಿಸಿ. ಧೈರ್ಯ, ಸಹನೆ ಮತ್ತು ನಿರಂತರ ಪ್ರಯತ್ನಗಳೊಂದಿಗೆ ಯಶಸ್ಸು ಸಾಧಿಸಬಹುದು. ನಿಮ್ಮ ಸ್ವಂತ ಉದ್ಯಮ ಆರಂಭಿಸಲು ಇಂದೇ ಪ್ರೇರಣೆಯಾಗಲಿ!

ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು!

                       🍉🍉🍉🍉🍉🍉🍉🍉🍉🍉🍉🍉🍉🍉🍉🍉🍉


ಸ್ತ್ರೀಯರಿಗೆ ಮನೆಯಲ್ಲಿಯೇ ಇದ್ದು ಮಾಡಲು ಅನುಕೂಲವಾದಂತಹ  ಇ- ಕಾಮರ್ಸ್‌ ಉದ್ಯಮದ ಸಂಪೂರ್ಣ ಮಾಹಿತಿ ನಿಮಗಾಗಿ!!!!!!!

 

-ಕಾಮರ್ಸ್ ಮತ್ತು ಡ್ರಾಪ್ಶಿಪಿಂಗ್: ಪ್ರಾರಂಭದಿಂದ ಸಂಪೂರ್ಣ ಮಾಹಿತಿ

-ಕಾಮರ್ಸ್ (E-commerce) ಮತ್ತು ಡ್ರಾಪ್ಶಿಪಿಂಗ್ (Dropshipping)  ಆನ್‌ ಲೈನ್‌  ಉದ್ಯಮದ  ಮಾದರಿಗಳಾಗಿದ್ದು, ನಿಮಗೆ ಮೂರನೇ ವ್ಯಕ್ತಿಯ ಸಹಾಯದಿಂದ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಒದಗಿಸುತ್ತವೆ. ರೀತಿಯ ಉದ್ಯಮವನ್ನು ಪ್ರಾರಂಭಿಸಲು ಹೆಚ್ಚಿನ ಬಂಡವಾಳ ಅಥವಾ ಸ್ಟಾಕ್ ನಗದು ಒಟ್ಟುಗೂಡಿಸುವ ಅನಿವಾರ್ಯವಿರುವುದಿಲ್ಲ.


1. -ಕಾಮರ್ಸ್ ಎಂಬುದು ಏನು?

-ಕಾಮರ್ಸ್ ಅಂದರೆ ಇಂಟರ್‍ ನೆಟ್ ಮೂಲಕ ಉತ್ಪನ್ನಗಳನ್ನು  ಮತ್ತು ಸೇವೆಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಪ್ರಕ್ರಿಯೆ  ಆಗಿದೆ. Amazon, Flipkart, Meesho, ಮತ್ತು Myntra ಇವು  ಪ್ರಸ್ತುತ  ಪ್ರಚಲಿತದಲ್ಲಿರುವ ಜನಪ್ರಿಯ -ಕಾಮರ್ಸ್ ಪ್ಲಾಟ್ಫಾರ್ಮ್ಗಳಾಗಿವೆ.

-ಕಾಮರ್ಸ್ ಬಿಸಿನೆಸ್ ಮಾಡಬಹುದಾದಂತಹ ವಿಧಾನಗಳು:

ಸ್ವಂತ -ಕಾಮರ್ಸ್ ವೆಬ್ಸೈಟ್  ಪ್ರಾರಂಬಿಸಲು Shopify, Wix, WordPress ಇತ್ಯಾದಿಗಳನ್ನು  ಬಳಸಿಕೊಳ್ಳಬಹುದು.

ಮಾರುಕಟ್ಟೆ ಪ್ಲಾಟ್ಫಾರ್ಮ್ಗಳಲ್ಲಿ ಮಾರಾಟ:- Amazon, Flipkart, Etsy, Meesho.

ಸೋಶಿಯಲ್ ಮೀಡಿಯಾ ಮಾರಾಟ:- Instagram, Facebook Marketplace.


2. ಡ್ರಾಪ್ಶಿಪಿಂಗ್ ಎಂದರೇನು?

ಡ್ರಾಪ್ಶಿಪಿಂಗ್ ಎಂದರೆ ನೀವು ಯಾವುದೇ ಉತ್ಪನ್ನವನ್ನು ಸ್ಟಾಕ್ ಮಾಡದೇ, ಮೂರನೇ ವ್ಯಕ್ತಿ (ಸಪ್ಲೈಯರ್) ಮೂಲಕ ಗ್ರಾಹಕರಿಗೆ ನೇರವಾಗಿ ಉತ್ಪನ್ನವನ್ನು ರವಾನಿಸುವ ವಿಧಾನ.

ಡ್ರಾಪ್ಶಿಪಿಂಗ್ನಲ್ಲಿ ಕೆಲಸ ಮಾಡುವ ವಿಧಾನ:

ಆನ್‌ ಲೈನ್ ಸ್ಟೋರ್ ರಚನೆ‌ ಮಾಡಿ :- Shopify, WooCommerce, Ecwid ಮುಂತಾದ ಪ್ಲಾಟ್ಫಾರ್ಮ್ಗಳ ಮೂಲಕ ಆನ್ಲೈನ್ ಶಾಪ್ ಸ್ಥಾಪಿಸಿ.

ಸಪ್ಲೈಯರ್ ಆಯ್ಕೆ:- AliExpress, Spocket, Oberlo, Meesho Dropshipping ಇತ್ಯಾದಿಗಳಿಂದ ವಸ್ತುಗಳನ್ನು ಆಯ್ಕೆಮಾಡಿ.

ಮಾರ್ಕೆಟಿಂಗ್:- ಸಾಮಾಜಿಕ ಮಾಧ್ಯಮಗಳು, ಗೂಗಲ್ ಜಾಹೀರಾತುಗಳು, ಇಮೇಲ್ ಮಾರ್ಕೆಟಿಂಗ್ಮೂಲಕ ಉತ್ಪನ್ನಗಳನ್ನು ಪ್ರಚಾರ ಮಾಡಿ.

ಆರ್ಡರ್ ಪ್ರೊಸೆಸಿಂಗ್:- ಗ್ರಾಹಕರು ಆರ್ಡರ್ ಮಾಡಿದಾಗ, ಸಪ್ಲೈಯರ್ಗೆ ಆರ್ಡರ್ ಫಾರ್ವರ್ಡ್ ಆಗುತ್ತದೆ.

ಲಾಭ:- ಮಾರಾಟ ಬೆಲೆಯಿಂದ ಸಪ್ಲೈಯರ್ ಬೆಲೆಯನ್ನು ಕತ್ತರಿಸಿದ ನಂತರ ಉಳಿಯುವ ಮೊತ್ತವೇ ನಿಮ್ಮ ಲಾಭ.


3. ಡ್ರಾಪ್ಶಿಪಿಂಗ್ ಮತ್ತು -ಕಾಮರ್ಸ್ ಪ್ರಾರಂಭಿಸಲು ಅಗತ್ಯವಿರುವುದು:

ವ್ಯಾಪಾರ ಐಡಿಯಾ:- ಯಾವ ರೀತಿಯ ಉತ್ಪನ್ನವನ್ನು ಮಾರಾಟ ಮಾಡಬೇಕೆಂದು ನಿಖರವಾಗಿ ನಿರ್ಧರಿಸಿ.

ಡೊಮೇನ್ ಮತ್ತು ವೆಬ್ಸೈಟ್:- Shopify, WooCommerce ಅಥವಾ Wix ಬಳಸಿ ವೆಬ್ಸೈಟ್ ರಚಿಸಿ.

ಸಪ್ಲೈಯರ್ಗಳ ಹುಡುಕಾಟ:- ವಿಶ್ವಾಸಾರ್ಹ ಸಪ್ಲೈಯರ್ ಅಥವಾ ಡ್ರಾಪ್ಶಿಪಿಂಗ್ ಪ್ಲಾಟ್ಫಾರ್ಮ್ ಆಯ್ಕೆಮಾಡಿ.

ಪಾವತಿ ಗೇಟ್ವೇ:- Paytm, Razorpay, Stripe ಮುಂತಾದ ಪಾವತಿ ಆಯ್ಕೆಗಳನ್ನು ಸೇರಿಸಿ.

ಡಿಜಿಟಲ್ ಮಾರ್ಕೆಟಿಂಗ್: ಸಾಮಾಜಿಕ ಮಾಧ್ಯಮ ಜಾಲಗಳು, Influencer Marketing, SEO ಗಳನ್ನು ರಚಿಸಿ ಪ್ರಚಾರ ಮಾಡಿ.


4. -ಕಾಮರ್ಸ್ ಮತ್ತು ಡ್ರಾಪ್ಶಿಪಿಂಗ್ ಪ್ರಯೋಜನಗಳು:

  • ಸ್ಟಾಕ್ ಮತ್ತು ವೆರ್ಹೌಸ್ ಗಾಗಿ ಬಂಡವಾಳ ಹೂಡುವುದು ಬೇಡ.
  • ಕಡಿಮೆ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ಉದ್ಯಮ.
  • ಗ್ಲೋಬಲ್ ಮಾರುಕಟ್ಟೆ ಪ್ರವೇಶ.
  • ಫ್ಲೆಕ್ಸಿಬಲ್ ಕೆಲಸದ ಸಮಯ.
      


5. ಯಶಸ್ವಿಯಾಗಲು ಟಿಪ್ಸ್:

ಪ್ರಾಮಾಣಿಕ  ಸಪ್ಲೈಯರ್ಆಗಿರಿ.

ಗ್ರಾಹಕರಿಗೆ ನೀಡುವ ಸೇವೆ ಉತ್ತಮವಾಗಿರಲಿ.

ವಿಸ್ತರಿಸಿದ ಮಾರ್ಕೆಟಿಂಗ್ ಮೂಲಕ ಹೆಚ್ಚು ಗ್ರಾಹಕರನ್ನು ತಲುಪಿಕೊಳ್ಳಿ.

ಹೆಚ್ಚು ಮಾರಾಟ ಮಾಡುವ ಉತ್ಪನ್ನಗಳ ಬಗ್ಗೆ  ವಿಶ್ಲೇಷಣೆ ಮಾಡಿ.

 ಗ್ರಾಹಕರ ಅಭಿಪ್ರಾಯಗಳನ್ನು ಪರಿಗಣಿಸಿ ಮತ್ತು ನಿರಂತರವಾಗಿ ಸೇವೆಗಳನ್ನು ಸುಧಾರಿಸಿಕೊಳ್ಳಿ.


-ಕಾಮರ್ಸ್ ಮತ್ತು ಡ್ರಾಪ್ಶಿಪಿಂಗ್ ಬಿಸಿನೆಸ್ ಆರಂಭಿಸಲು ಇದು ಅತ್ಯುತ್ತಮ ಸಮಯ. ನೀವು ತಾಳ್ಮೆಯಿಂದ ಸರಿಯಾದ ಯೋಜನೆ ಮತ್ತು ನಿರ್ವಹಣೆಯೊಂದಿಗೆ ಮುಂದುವರೆದರೆ, ಇದು ನಿಮಗೆ ಉತ್ತಮ ಆದಾಯದ ಮೂಲವಾಗಿ ಪರಿಣಮಿಸಬಹುದು.

ಶುಭಾಶಯಗಳು! 😊



ಧನ್ಯವಾದಗಳು.........🌷🌷🌷

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......