ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಹಾರ್ಧಿಕ ಶುಬಾಷಯಗಳು🌹🌹 “ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ನಮಸ್ಕಾರ"

 


ಲೇಖಕಿ:ನಾಗಲಕ್ಷ್ಮಿ. ಕೆ.ಎನ್.‌ ದಿನಾಂಕ: ೧೫.೦೮.೨೦೨೫.

ಮುಂದುವರಿದ ಭಾಗ.....

೧೯೪೨ ರ ನಂತರದ ಕ್ವಿಟ್‌ ಇಂಡಿಯಾ ಚಳುವಳಿಯ ನಂತರದಲ್ಲಿ, ಭಾರತದಲ್ಲಿನ ಸ್ವಾತಂತ್ರ್ಯ ಪೂರ್ವ ಚಳುವಳಿಗಳು ಬೇರೆಯದೆ ಹಂತ ಪ್ರವೇಶಿಸಿದವು. ಈ ಸಮಯದಲ್ಲಿ ಎರಡನೇ ವಿಶ್ವ ಯುದ್ಧದಲ್ಲಿ ಬ್ರಿಟೀಷರು ಯುದ್ಧದಲ್ಲಿ ತೊಡಗಿಸಿಕೊಂಡಿದ್ದರಿಂದ ಚಳುವಳಿಗೆ ಪೂರಕವಾಗಿ  ಭಾರತದಲ್ಲಿನ ರಾಜಕೀಯ, ಸಾಮಾಜಿಕ ಹಾಗೂ ಸೈನಿಕ ಚಟುವಟಿಕೆಗಳು ಹೆಚ್ಚು ಹುರುಪುಗೊಂಡವು.

ಕ್ವಿಟ್‌ ಇಂಡಿಯಾ ಚಳುವಳಿಯ ಪರಿಣಾಮವಾಗಿ ಅನೇಕ ನಾಯಕರು ಬ್ರಿಟಿಷ್‌ ಸರ್ಕಾರದಿಂದ ಬಂಧಿತರಾದರು.  ಈ ಸಮಯದಲ್ಲಿ ಮತ್ತೋರ್ವ ಕ್ರಾಂತಿಕಾರಿ ಗುಂಪಿಗೆ ಸೇರಿದ, ರಾಮ್‌ ಮನೋಹರ್‌ ಲೋಹಿಯಾ, ಜಯಪ್ರಕಾಶ ನಾರಾಯಣರಂತವರು ತಪ್ಪಿಸಿಕೊಂಡು ಭೂಗತವಾಗಿದ್ದುಕೊಂಡೆ ಅಂಚೇಕಛೇರಿ, ರೈಲ್ವೆ, ಪೋಲಿಸ್‌ ಠಾಣೆಗಳಂತಹ ಮೂಲಭೂತ ಸೌಕರ್ಯಗಳನ್ನು ಹಾನಿಗೊಳಿಸಿದರು.

ಎರಡನೇ  ವಿಶ್ವಯುದ್ಧದ ಸಮಯದಲ್ಲಿ ಜಪಾನಿನಲ್ಲಿ ಬ್ರಿಟೀಷರ ಸೈನ್ಯವು ಪರಾಭವಗೊಂಡು, ಅದರಲ್ಲಿದ್ದ ಭಾರತೀಯ ಸೈನಿಕರನ್ನು ಒಟ್ಟುಗೂಡಿಸಿ ಮೋಹನ್‌ ಸಿಂಗ್‌ ಅವರು  ಮೊದಲ ಬಾರಿಗೆ ಐ ಎನ್‌ ಎ ಅನ್ನು ರಚಿಸಿದರು. ೧೯೪೩ ರಲ್ಲಿ ಸುಭಾಶ್‌ ಚಂದ್ರ ಬೋಸರು ಜಪಾನ್‌ ನಿಯಂತ್ರಣದ ಸಿಂಗಾಪೂರಕ್ಕೆ ಬಂದು ಐ ಎನ್‌ ಏ ಸೈನ್ಯವನ್ನು ಸಂಘಟಿಸಿ  ಅದಕ್ಕೆ ʼಆಜಾದ್‌ ಹಿಂದ್‌ ಫೌಜ್‌ʼ ಎಂದು ಹೆಸರಿಟ್ಟರು.

ಸುಭಾಷ್ ಚಂದ್ರ  ಬೋಸ್ ರು "Give me your blood, and I will give you freedom" ಎಂಬ ಘೋಷಣೆಯನ್ನು   ರೇಡಿಯೋ ಪ್ರಸಾರಗಳ ಮೂಲಕ ಭಾರತದ ಜನರ ಮನಸ್ಸಿನಲ್ಲಿ ಕ್ರಾಂತಿ ಕಿಡಿಯನ್ನು  ಹೆಚ್ಚಿಸಿದರು.  

೧೯೪೫ ರಲ್ಲಿ ಎರಡನೇ ವಿಶ್ವ ಯುದ್ಧದಲ್ಲಿ ಜಪಾನ್‌ ಶರಣಾಗತಿಯ ನಂತರ ಐ ಎನ್ ಏ ಸಹ ಶರಣಾಗತವಾಯಿತು. ಈ ಕಾರಣವಾಗಿ ಐ ಎನ್‌ ಏ ಸೈನ್ಯದ ಯೋಧರನ್ನು  ರೆಡ್ ಫೋರ್ಟ್ ವಿಚಾರಣೆ (Red Fort Trials) ಯಲ್ಲಿ ದ್ರೋಹದ ಆರೋಪದಲ್ಲಿ ವಿಚಾರಣೆ ನಡೆಸಲಾಯಿತು.  ಈ ವಿಚಾರಣೆಗಳು ದೇಶದಾದ್ಯಂತ  ಬ್ರಿಟೀಷರ ವಿರುದ್ಧ ಚಳುವಳಿಗೆ ಕಾರಣವಾದವು.

 ರೆಡ್ ಫೋರ್ಟ್ ವಿಚಾರಣೆ (Red Fort Trials) ಯ ಪರಿಣಾಮವಾಗಿ ಕ್ರಿ.ಶ. 1946 ರಲ್ಲಿ ನಡೆದ   ನೌಕಾಪಡೆ ದಂಗೆಯಂತಹ ಘಟನೆಗಳು, ಬ್ರಿಟಿಷರ ಸ್ವಾತಂತ್ರ್ಯ   ನಿರ್ಧಾರಕ್ಕೆ ಹೆಚ್ಚಿನ ಒತ್ತಡ ಒದಗಿಸಿತು.

ಕ್ರಿ.ಶ. 1947 ರಲ್ಲಿ  ಮೌಂಟ್ಬ್ಯಾಟನ್ ಯೋಜನೆಯಂತೆ ಭಾರತ ಮತ್ತು ಪಾಕಿಸ್ತಾನ ವಿಭಜನೆಯ ನಿರ್ಧಾರ ಕೈಗೊಳ್ಳಲಾಯಿತು.

ಕ್ರಿ.ಶ. 1947ರಲ್ಲಿ  ಆಗಸ್ಟ್‌ 15 ರಂದು  ಭಾರತವು  ಸ್ವತಂತ್ರ ರಾಷ್ಟ್ರವಾಗಿ ಘೋಷಿಸಲ್ಪಟ್ಟಿತು, ಜವಾಹರಲಾಲ್ ನೆಹರು ಮೊದಲ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು.

 


1947 ಆಗಸ್ಟ್‌ 15ರಂದು ಭಾರತಕ್ಕೆ ತ್ವರಿತವಾಗಿ  ಸ್ವಾತಂತ್ರ್ಯ ನೀಡಲು ಬ್ರಿಟಿಷರು ನಿರ್ಧರಿಸಿದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಅವುಗಳನ್ನು ಐತಿಹಾಸಿಕ ಹಿನ್ನೆಲೆಯ  ಜೊತೆಗೆ ಈ ರೀತಿ  ವಿವರಿಸಬಹುದು.

1939-1945ರ ಕಾಲಘಟ್ಟದಲ್ಲಿ ನಡೆದ  ದ್ವಿತೀಯ ವಿಶ್ವಯುದ್ಧದಲ್ಲಿ ಬ್ರಿಟನ್ ಭಾರೀ ಆರ್ಥಿಕ ನಷ್ಟ ಅನುಭವಿಸಿತು. ಭಾರತದಿಂದ ಹೊತ್ತೊಯ್ದ  ಯುದ್ಧಕ್ಕೆ ಬೇಕಾದ ಸೈನಿಕರು, ಸಂಪನ್ಮೂಲಗಳು, ಹಣ ಎಲ್ಲವೂ ಮುಗಿದು ಹೋದವು. ಹೀಗಾಗಿ, ಬ್ರಿಟನ್ ತನ್ನ ವಸಾಹತುಶಾಹಿ ರಾಜ್ಯಗಳ  ಮೇಲೆ ಹಿಡಿತ ಸಾಧಿಸಲು  ಸಾಮರ್ಥ್ಯ ಕಳೆದುಕೊಂಡಿತು.

 

1942ರಲ್ಲಿ ಭಾರತದಾದ್ಯಂತ ವ್ಯಾಪಕವಾಗಿ ನಡೆದ  ಭಾರತ ಬಿಟ್ಟು ತೊಲಗಿ  ಚಳುವಳಿ (Quit India Movement) ದೇಶಾದ್ಯಂತ ವ್ಯಾಪಕ ಅಶಾಂತಿ ಉಂಟುಮಾಡಿತು. ಇದರ ಪರಿಣಾಮವಾಗಿ ಗಾಂಧೀಜಿ, ನೆಹರು, ಸರ್ದಾರ್  ವಲ್ಲಭ ಬಾಯಿ ಪಟೇಲ್ಸೇರಿದಂತೆ ಸಾವಿರಾರು ನಾಯಕರು ಬಂಧಿತರಾದರೂ ಜನರ ಹೋರಾಟ ನಿಲ್ಲಲಿಲ್ಲ, ಭೂಗತವಾಗಿ ಕ್ರಾಂತಿಕಾರಿ ಚಟುವಟಿಕೆಗಳು ನಡೆದವು.

ಈ ಎಲ್ಲಾ ಘಟನೆಗಳು ಜನರಲ್ಲಿ ಬ್ರಿಟಿಷರ ವಿರುದ್ಧ ಗಟ್ಟಿಯಾದ ಏಕತೆಯನ್ನು  ಮೂಡಿಸಲು ದಾರಿಯಾದವು.

೧೯೪೬ರಲ್ಲಿ ನಡೆದ ಇದುವರೆಗೂ ಪಠ್ಯದಲ್ಲಿ ನಾವು ತಿಳಿದಿರದ   ನೌಕಾಪಡೆ ದಂಗೆಯಂತಹ ಸೈನಿಕ ಬಂಡಾಯಗಳು.  ಫೆಬ್ರವರಿ 1946ರಲ್ಲಿ ಮುಂಬೈಯಲ್ಲಿ ರಾಯಲ್ ಇಂಡಿಯನ್ ನೇವಿ ಸೈನಿಕರು ಬಂಡಾಯ ಎದ್ದರು,  ಸೈನ್ಯಕ್ಕೆ ಸರಬರಾಜಾಗುತ್ತಿದ್ದ ಊಟದ ಸಾಮಗ್ರಿಗಳು ಯುದ್ದೋಪಕರಣಗಳು ಕಡಿಮೆ ಗುಣಮಟ್ಟದ್ದಾಗಿದ್ದವು ಎಂಬುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಬಂಡಾಯವು ಮುಂಬೈ, ಕಲ್ಕತ್ತಾ, ಮದ್ರಾಸ್ ಸೇರಿದಂತೆ ಅನೇಕ ಸ್ಥಳಗಳಿಗೆ ಹರಡಿತು. ಸೈನಿಕರಲ್ಲಿಯೂ ಬ್ರಿಟಿಷರ ವಿರುದ್ಧ ಅಸಮಾಧಾನ ಹೆಚ್ಚುತ್ತಿರುವುದು ಬ್ರಿಟಿಷರಿಗೆ ಎಚ್ಚರಿಕೆ ನೀಡಿತು. (ವಾಸ್ತವವಾಗಿ ನಾವಿಕ ಸೇನೆಯು ಬಂಡಾಯವೇಳಲು ಐ ಎನ್‌ ಏ ಸೈನಿಕರಿಗೆ ವಿಧಿಸಿದ ಕೆಂಪು ಕೋಟೆಯ ವಿಚಾರಣೆ)

ಯುದ್ಧದ ನಂತರ, ವಿಶ್ವದಾದ್ಯಂತ ವಸಾಹತುಶಾಹಿತ್ವವನ್ನು ಮುಕ್ತಿಗೊಳಿಸುವ ಹೋರಾಟಗಳು ಬಲ ಪಡೆದವು. ಅಮೆರಿಕಾ ಹಾಗೂ ಸೋವಿಯತ್ ಒಕ್ಕೂಟಗಳಂತಹ  ಶಕ್ತಿಶಾಲಿ ರಾಷ್ಟ್ರಗಳು  ವಸಾಹತುಶಾಹಿಯನ್ನು ವಿರೋಧಿಸುತ್ತಿದ್ದವು.

ಈ ಕಾರಣಗಳಿಂದಾಗಿ ಬ್ರಿಟನ್ ಮೇಲೆ “India must be free” ಎಂಬ ಜಾಗತಿಕ ಒತ್ತಡವಿತ್ತು ಎಂದು ತೋರುತ್ತದೆ.

೧೯೪೦ರ ದಶಕದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಹೆಚ್ಚಿತ್ತು. ರಾಷ್ಟ್ರೀಯ ಕಾಂಗ್ರೇಸ್‌ ನಿಂದ ಪ್ರತ್ಯೇಕವಾಗಿ ಸ್ಥಾಪನೆಯಾದ ಮುಸ್ಲಿಂ ಲೀಗ್ (ಮೊಹಮ್ಮದ್ ಅಲಿ ಜಿನ್ನಾ) ಪ್ರತ್ಯೇಕ ಪಾಕಿಸ್ತಾನದಗ ಬೇಡಿಕೆಗೆ ಒತ್ತಡ ತಂದಿತು.

ದೇಶದಲ್ಲಿದ್ದ ಧಾರ್ಮಿಕ ಪ್ರತ್ಯೇಕತೆಯು, ಸ್ವಾತಂತ್ರ್ಯವನ್ನು ವಿಳಂಬ ಮಾಡಿದರೆ ದೇಶದೊಳಗಿನ ಗಲಾಟೆ ಇನ್ನಷ್ಟು ರಕ್ತಪಾತವಾಗುತ್ತದೆ ಎಂದು ಬ್ರಿಟಿಷರು ಭಾವಿಸಿದರು.

೧೯೪೬ ರಲ್ಲಿ ಬ್ರಿಟನ್ ಭಾರತಕ್ಕೆ ಹೊಸ ಸಂವಿಧಾನ ರಚಿಸುವ ಕುರಿತು  ಚರ್ಚೆ ನಡೆಸಲು ಕ್ಯಾಬಿನೆಟ್ ಮಿಷನ್ ಕಳುಹಿಸಿತು. ಆದರೆ ಈ ಚರ್ಚೆಯು ಫಲಪ್ರದವಾಗಲಿಲ್ಲ.

ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಿನ ಭಿನ್ನಾಬಿಪ್ರಯಾಕ್ಕೆ ಪರಿಹಾರ ದೊರೆಯಲಿಲ್ಲ. ಇದರಿಂದ ಬ್ರಿಟಿಷರಿಗೆ ಸ್ಪಷ್ಟವಾಯಿತು ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕೆಂದು.

ಭಾರತದ ಕೊನೆಯ ವೈಸರಾಯ್  ಲಾರ್ಡ್ ಮೌಂಟ್ಬ್ಯಾಟನ್, ಸ್ವಾತಂತ್ರ್ಯದ ದಿನಾಂಕವನ್ನು 1948ರಿಂದ 1947 ಆಗಸ್ಟ್‌ 15ಕ್ಕೆ ಹಿಂದೂಡಿದರು.

ಅಶಾಂತಿ ಮತ್ತು ಗಲಭೆಗಳ ಅಲೆ ಹೆಚ್ಚಾಗುತ್ತಿದ್ದ ಕಾರಣ  ಬ್ರಿಟಿಷರು ತಮ್ಮ ಸೇನೆ ಮತ್ತು ಅಧಿಕಾರಿಗಳನ್ನು ಸುರಕ್ಷಿತವಾಗಿ ಹಿಂಪಡೆಯಲು ಬೇಗ ಬೇಗ  ಕಾರ್ಯಾಚರಣೆ ನಡೆಸಬೇಕಿತ್ತು.

ಲಾರ್ಡ್ ಮೌಂಟ್ಬ್ಯಾಟನ್  ಭಾರತಕ್ಕೆ ಸ್ವಾತಂತ್ರ್ಯ ನೀಡಲು ಆಗಸ್ಟ್‌ 15 ಎಂಬ ದಿನಾಂಕವನ್ನು ಆಯ್ಕೆ ಮಾಡಲು ಕಾರಣ 1945 ಆಗಸ್ಟ್‌ 15ರಂದು ಜಪಾನ್ ಶರಣಾಗತಿ ಸಲ್ಲಿಸಿದ ದಿನ, ಇದು ಮೌಂಟ್ಬ್ಯಾಟನ್ಗೆ “Victory Day” ಆಗಿತ್ತು.


ಮೇಲಿನ ವಿಚಾರಗಳಿಂದ ಬ್ರಿಟಿಷರು 1947 ಆಗಸ್ಟ್‌ 15ರಂದು ಭಾರತಕ್ಕೆ ಸ್ವಾತಂತ್ರ್ಯ ನೀಡಲು ನಿರ್ಧರಿಸಿದ ಪ್ರಮುಖ ಕಾರಣಗಳು ,  ಆರ್ಥಿಕ ಕುಸಿತ, ಜನರ ಹೋರಾಟ, ಸೈನಿಕ ಬಂಡಾಯ, ಅಂತರಾಷ್ಟ್ರೀಯ ಒತ್ತಡ, ಧಾರ್ಮಿಕ ಉದ್ವಿಗ್ನತೆ ಮತ್ತು ತ್ವರಿತ ಶಾಂತಿ ಸಾಧಿಸುವ ಅಗತ್ಯತೆ ಎಂದು ನಾವು ತಿಳಿಯಬಹುದಾಗಿದೆ.


ಸ್ವಾತಂತ್ರ್ಯ ಪೂರ್ವದ ಆಖಂಡ ಭಾರತವು ಭೌಗೋಳಿಕವಾಗಿ ವಿಶಾಲವಾಗಿ, ಸಾಂಸ್ಕೃತಿಕವಾಗಿ ಏಕತೆಯಾದ, ಆರ್ಥಿಕವಾಗಿ ಬಲಿಷ್ಠವಾದ ಪ್ರದೇಶವಾಗಿತ್ತು.
ಬ್ರಿಟಿಷರ ವಸಾಹತುಶಾಹಿ ನೀತಿ, ಧಾರ್ಮಿಕ ವಿಭಜನೆ, ಮತ್ತು ರಾಜಕೀಯ ಒತ್ತಡದಿಂದಾಗಿ ಅದು 1947ರಲ್ಲಿ ವಿಭಜನೆಯ ಮೂಲಕ ಎರಡು ರಾಷ್ಟ್ರಗಳಾಗಿ ಮಾರ್ಪಟ್ಟಿತು.

 ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಬ್ರಿಟೀಷರ ರಾಜಕೀಯ ನೀತಿಗಳ ವಿಶ್ಲೇಷಣೆ

ಬ್ರಿಟೀಷರು 17ನೇ ಶತಮಾನದಲ್ಲಿ ವ್ಯಾಪಾರಿಗಳಾಗಿ ಭಾರತ ಪ್ರವೇಶಿಸಿದರೂ, 18ನೇ ಶತಮಾನದ ಮಧ್ಯಭಾಗದಲ್ಲಿ ಪ್ಲಾಸಿ ಯುದ್ಧ (1757)ವನ್ನು  ಜಯಿಸುವ ಮೂಲಕ ರಾಜಕೀಯ ಅಧಿಕಾರವನ್ನು ಹಂತ ಹಂತವಾಗಿ ವಶಪಡಿಸಿಕೊಂಡರು. ನಂತರದ 190 ವರ್ಷಗಳಲ್ಲಿ ಅವರು ಭಾರತವನ್ನು ವಸಾಹತುಶಾಹಿ ಆಳ್ವಿಕೆಗೆ ಒಳಪಡಿಸಿ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಆಳವಾದ ಬದಲಾವಣೆಗಳನ್ನು ತಂದರು.

(a) ವಿಭಜನೆ ಮತ್ತು ಆಳ್ವಿಕೆ (Divide and Rule)

ಧಾರ್ಮಿಕತೆ, ಭಾಷೆ ಮತ್ತು ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸಿ ಶಕ್ತಿಯನ್ನು ದುರ್ಬಲಗೊಳಿಸುವ ನೀತಿಯನ್ನು ಅನುಸರಿಸಿದರು.

ಹಿಂದೂ-ಮುಸ್ಲಿಂ ಗಲಭೆಗಳನ್ನು ಪ್ರೋತ್ಸಾಹಿಸಿ ರಾಜಕೀಯ ಒಕ್ಕೂಟಗಳನ್ನು ತಡೆಹಿಡಿದರು.

ಇದಕ್ಕೆ 1905ರಲ್ಲಿ  ಜಾರಿಗೊಳಿಸಿದ ಬಂಗಾಳ ವಿಭಜನೆ ನೀತಿಯ ದೊಡ್ಡ ಉದಾಹರಣೆಯಾಗಿದೆ.

(b) ಪ್ರಾಂತೀಯ ಆಡಳಿತ ವ್ಯವಸ್ಥೆ

ಬ್ರಿಟಿಷ್ ಇಂಡಿಯಾ ವನ್ನು ವಿವಿಧ ಪ್ರಾಂತಗಳಾಗಿ ವಿಭಜಿಸಿ, ಗವರ್ನರ್ಗಳ ಮೂಲಕ ನೇರ ಆಡಳಿತವನ್ನು ನಡೆಸುತ್ತಿದ್ದವರು, ಸಂಸ್ಥಾನದ ರಾಜ್ಯಗಳಲ್ಲಿ "ಒಪ್ಪಂದ" (Subsidiary Alliance)ಗಳ ಮೂಲಕ ಪರೋಕ್ಷ ನಿಯಂತ್ರಣ ಮಾಡುವ ಹುನ್ನಾರ ನಡೆಸುತ್ತಿದ್ದರು.

1833, 1853, 1919, 1935 ಭಾರತೀಯ ಆಡಳಿತ ಕಾಯ್ದೆಗಳ ಮೂಲಕ ಕಾನೂನು ಬದಲಾವಣೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿದರು.

Doctrine of Lapse (Lord Dalhousie)  ಉತ್ತರಾಧಿಕಾರಿ ಇಲ್ಲದ ರಾಜ್ಯವನ್ನು ವಶಪಡಿಸಿಕೊಳ್ಳುವುದು.

ಇದರಿಂದ ಅನೇಕ ಸ್ಥಳೀಯ ರಾಜ್ಯಗಳು ನಾಶವಾಗಿ ಬ್ರಿಟಿಷರ ಭಾಗವಾದವು.

(d) ಪ್ರತಿನಿಧಿ ಆಡಳಿತದ ಭರವಸೆ

ಪ್ರಾರಂಭದಲ್ಲಿ ಜನರಿಗೆ ರಾಜಕೀಯ ಹಕ್ಕುಗಳ ಭರವಸೆ ಕೊಟ್ಟರೂ, ನಿಜವಾದ ಅಧಿಕಾರ ಬ್ರಿಟಿಷರ ಕೈಯಲ್ಲೇ ಇತ್ತು.

1909 ಮೋರ್ಲೆಮಿಂಟೋ ಸುಧಾರಣೆ, 1919 ಮಾಂಟೆಗ್ಯೂಚೆಲ್ಮ್ಸ್ಫೋರ್ಡ್ ಸುಧಾರಣೆ, 1935 ಭಾರತೀಯ ಆಡಳಿತ ಕಾಯ್ದೆall gave limited power.

(e) ತುರ್ತು ನಿಯಮಗಳು ಮತ್ತು ದಮನಾತ್ಮಕ ಕ್ರಮಗಳು

1919 ರೌಲಟ್ ಕಾಯ್ದೆಯು ಯಾವುದೇ ವಿಚಾರಣೆ ಇಲ್ಲದೆ ಬಂಧನವನ್ನು ಜಾರಿಗೊಳಿಸಿತು.

ಜಲಿಯನ್ವಾಲಾ ಬಾಗ್ ಹತ್ಯಾಕಾಂಡ  ವಿರೋಧವನ್ನು ಹಿಂಸಾತ್ಮಕವಾಗಿ ಕುಗ್ಗಿಸುವ ಉದಾಹರಣೆ.

1942 ಭಾರತ ಬಿಟ್ಟು ಹೋಗು ಚಳುವಳಿಯ ಸಮಯದಲ್ಲಿ ಸಾವಿರಾರು ಜನರನ್ನು ಬಂಧಿಸಿದರು.

 

ಬ್ರಿಟೀಷರ ರಾಜಕೀಯ ನೀತಿಗಳ ಉದ್ದೇಶ

 ಯಾವುದೇ ಸ್ವಾತಂತ್ರ್ಯ ಚಳುವಳಿಯನ್ನು ತಡೆಹಿಡಿಯುವುದನ್ನು ಆಡಳಿತ ನಿಯಂತ್ರಣಕ್ಕೆ ಒಳಪಡಿಸಲಾಯಿತು .

ಆರ್ಥಿಕ ಶೋಷಣೆಗೆ ಅನುಕೂಲವಾಗಲು,  ಸಂಪತ್ತು, ಸಂಪನ್ಮೂಲಗಳನ್ನು ಸುಲಭವಾಗಿ ಕಬಳಿಸಲು ಈ ನೀತಿಗಳನ್ನು ಅನುಸರಿಸಿದರು.

 ಪಾಶ್ಚಾತ್ಯ ಶಿಕ್ಷಣ, ಕಾನೂನು, ಆಡಳಿತವನ್ನು ಹೇರಿಕೆ ಮಾಡುವುದರ ಮೂಲಕ ತಮ್ಮ ಸಾಂಸ್ಕೃತಿಕ ಪ್ರಾಬಲ್ಯ ಮೆರೆದರು .

ವಿಭಜನೆಯ ಮೂಲಕ ಏಕತೆಯನ್ನು  ಕುಗ್ಗಿಸಿ, ಜನರನ್ನು ಒಗ್ಗೂಡದಂತೆ ತಡೆದು ಶಾಶ್ವತ ಆಳ್ವಿಕೆಗೆ ಅವಕಾಶವನ್ನು ಪಡೆದುಕೊಳ್ಳಲು ನೋಡಿದರು.

 

 ಎಲ್ಲದರ ಪರಿಣಾಮವಾಗಿ ಭಾರತದಲ್ಲಿ:-

ರಾಜಕೀಯ ಜಾಗೃತಿಗಾಗಿ  ಕಾಂಗ್ರೆಸ್, ಮುಸ್ಲಿಂ ಲೀಗ್, ಕ್ರಾಂತಿಕಾರ ಸಂಘಟನೆಗಳು ಹುಟ್ಟಿಕೊಂಡವು.

ಧಾರ್ಮಿಕ ಭೇದ ನೀತಿಯು  ಹಿಂದೂ-ಮುಸ್ಲಿಂ ವಿಭಜನೆಗೆ ಕಾರಣವಾಗಿ 1947 ವಿಭಜನೆಗೆ ದಾರಿ ಮಾಡಿತು.

ಆರ್ಥಿಕ ಕುಸಿತವಾಗಿ  ಸ್ವದೇಶಿ ಕೈಗಾರಿಕೆಗಳು ಹಾಳಾದವು.

ಸ್ವಾತಂತ್ರ್ಯ ಚಳುವಳಿ ವೇಗ ಪಡೆದು ಗಾಂಧೀಜಿ, ನೆಹರು, ಪಟೇಲ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ನಾಯಕರು ಜನರಲ್ಲಿ ಹೋರಾಟ ಮನೋಭಾವ ಹೆಚ್ಚಿಸಿದರು.

 

 

ಮುಕ್ತಾಯ.


ಧನ್ಯವಾದಗಳು…….🌷🌷🌷

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......