"ದ್ರೌಪದಿ – ಮಹಾಭಾರತದ ಸ್ತ್ರೀಶಕ್ತಿಯ ಪ್ರತೀಕ, ಸ್ವಯಂವರ, ವಸ್ತ್ರಾಪಹರಣ, ಕುರುಕ್ಷೇತ್ರ"
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ದ್ರೌಪದಿ
ಲೇಖಕಿ:ನಾಗಲಕ್ಷ್ಮಿ ಕೆ.ಎನ್ ದಿನಾಂಕ:೧೩.೦೮.೨೦೨೫
ದ್ರೌಪದಿ
ಮಹಾಭಾರತದ ಪ್ರಮುಖ ಹಾಗೂ ಅತ್ಯಂತ ಪ್ರಭಾವಶಾಲಿ
ಮಹಿಳಾ ಪಾತ್ರಗಳಲ್ಲಿ ಒಬ್ಬಳು. ಭಾರತೀಯ
ಸಂಸ್ಕೃತಿಯಲ್ಲಿ ಸ್ತ್ರೀಶಕ್ತಿ, ಧೈರ್ಯ, ನ್ಯಾಯಪ್ರಜ್ಞೆ ಮತ್ತು ಆತ್ಮಗೌರವದ ಪ್ರತೀಕಳಾಗಿದ್ದಾಳೆ. ಅವಳು
ಅಪರೂಪದ ಸೌಂದರ್ಯವತಿ, ಜ್ಞಾನವತಿ ಮತ್ತು ಅತ್ಯಂತ ಸ್ವಾಭಿಮಾನಿ. ಅವಳ ಕುರಿತಾದ ಕಥೆ ಕೇವಲ ಪೌರಾಣಿಕ
ಗಾಥೆಯಷ್ಟೇ ಅಲ್ಲ, ಅದು ಧೈರ್ಯ, ಗೌರವ,
ಪ್ರತೀಕಾರ ಮತ್ತು ಧರ್ಮದ ಪ್ರಶ್ನೆಗಳಿಗೂ ಸಾಕ್ಷಿಯಾಗಿದೆ.
ದ್ರೌಪದಿ
ಪಾಂಚಾಲ ರಾಜ್ಯದ ದ್ರುಪದ ಮಹಾರಾಜನ ಮಗಳು. "ದ್ರೌಪದಿ" ಎಂಬ ಹೆಸರು "ದ್ರುಪದನ
ಮಗಳು" ಎಂಬ ಅರ್ಥ ನೀಡುತ್ತದೆ. ಅವಳ
ಜನ್ಮ ಸಾಮಾನ್ಯ ರೀತಿಯಲ್ಲಿ
ಆದದ್ದಲ್ಲ. ಪಾಂಚಾಲ ದೇಶದ ರಾಜ ದ್ರುಪದ
ಮತ್ತು ದ್ರೋಣಾಚಾರ್ಯರ ನಡುವೆ ವೈಮನಸ್ಯ ಇತ್ತು.
ಆ ಕಾರಣವಾಗಿ ದ್ರುಪದನು
ದ್ರೋಣಾಚಾರ್ಯರ ವಿರುದ್ಧ ಪ್ರತೀಕಾರ ಪಡೆಯಲು ಮಾಡಿದ ಯಜ್ಞದ ಅಗ್ನಿಕುಂಡದಿಂದ ಅವಳು ಜನಿಸುತ್ತಾಳೆ ಆದ್ದರಿಂದ ಇವಳನ್ನು ಅಯೋನಿಜೆ ಎಂದು ಸಹ ಕರೆಯಲಾಗುತ್ತದೆ.
ದ್ರೋಣರ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು
ದ್ರುಪದ ಮಹಾರಾಜನು ಯಜ್ಞವನ್ನು ನಡೆಸಿದಾಗ ಬಯಸದೇ ಬಂದ ಮಗಳಾಗಿ ದ್ರೌಪದಿಯ ಹುಟ್ಟು ಆಗುತ್ತದೆ, ಜೊತೆಯಲ್ಲಿ
ಅವಳ
ಸಹೋದರನಾಗಿ ಧೃಷ್ಟದ್ಯುಮ್ನ
ಸಹ ಅದೇ
ಯಜ್ಞ ಕುಂಡದಿಂದ ಜನಿಸುತ್ತಾನೆ.
ದ್ರೌಪದಿಯ
swayamvara (ಸ್ವಯಂವರ) ಮಹಾಭಾರತದ ಪ್ರಸಿದ್ಧ ಘಟನೆ.
ಪಾಂಚಾಲ
ದೇಶದ ರಾಜಕುಮಾರಿ ದ್ರೌಪದಿಯ ಸ್ವಯಂವರ. ಸ್ವಯಂವರಕ್ಕೆ
ಬಂದಿದ್ದ ಅತಿರಥ ಮಹಾರಥ ರಾಜರುಗಳಿಗೆ ದ್ರುಪದ ಮಹಾರಾಜ ಒಂದು ಸವಾಲನ್ನು ಒಡ್ಡಿದ್ದ, ಯಾರು ತನ್ನ ಮಗಳನ್ನು
ವಿವಾಹವಾಗಲು ಬಯಸುವರೋ ಅವರು, ಅಲ್ಲಿದ್ದ ದೇವಧನಸ್ಸನ್ನು
ಎತ್ತಿ ಎತ್ತರದ ಕಂಭದ ಮೇಲೆ ಚಕ್ರದಲ್ಲಿ ತಿರುಗುತ್ತಿರುವ ಮೀನಿನ ಕಣ್ಣಿಗೆ ಗುರಿಯಿಟ್ಟು ಒಡೆದು
ನನ್ನ ಮಗಳನ್ನು ಒಲಿಸಿಕೊಳ್ಳಬೇಕು. ಸ್ವಯಂವರಕ್ಕೆ ಬಂದಿದ್ದ ರಾಜರುಗಳು ಬಾಣ ಹೊಡೆಯುವುದಿರಲಿ, ಧನಸ್ಸನ್ನು ಮೇಲೆತ್ತಲಾಗಲಿಲ್ಲ.
ಆಗ ತುಂಬಿದ ಸಭೆಯಿಂದ ಮೇಲೆದ್ದು ಬಂದಿದ್ದನು ಅಂಗ
ರಾಜ್ಯದ ರಾಜ ಮಹಾರಥಿ ಕರ್ಣ. ರೂಪ, ಗುಣ, ವಿಧ್ಯೆ , ಪರಾಕ್ರಮಿ ಎಲ್ಲದರಲ್ಲೂ ಅಪ್ರತಿಮನಾಗಿದ್ದ ಕರ್ಣನನ್ನು
ಕಂಡು ಬೆರಗಾಗಿದ್ದಳು ರಾಜಕುಮಾರಿ ದ್ರೌಪದಿ. ಎಲ್ಲವನ್ನೂ ಕಡೆಗಣ್ಣಿನಲ್ಲಿಯೇ ಕಂಡಿದ್ದ ಮಹಾಭಾರತದ
ಸಾರಥಿ ಶ್ರೀ ಕೃಷ್ಣ, ರಾಜಕುಮಾರಿಗೆ ಕಣ್ಸನ್ನೆ ಮಾಡಿದ್ದ ಕರ್ಣನನ್ನು ನಿರಾಕರಿಸಲು. ಕರ್ಣ ಧನಸ್ಸು ಎತ್ತಿ ಇನ್ನೇನು ಶರವನ್ನು ಗುರಿ ಮುಟ್ಟಿಸಬೇಕು ಎನ್ನುವಷ್ಟರಲ್ಲಿ
“ ಕರ್ಣನನ್ನು ನಾನು ವರಿಸಲಾರೆ, ಅವನು ಕ್ಷತ್ರೀಯನಲ್ಲ ” ಎಂದುಬಿಟ್ಟಳು. ತುಂಬು ಸಭೆಯಲ್ಲಿ ದ್ರೌಪದಿಯಿಂದಾದ ತಿರಸ್ಕಾರಕ್ಕೆ
ಕೋಪಗೊಂಡ
ಕರ್ಣನು ದುರ್ಧಾನ ತೆಗೆದುಕೊಂಡವನಂತೆ ಅಲ್ಲಿಂದ ಹೊರಟುಬಿಟ್ಟ.
ಪಾಂಡವರು
ಅರಗಿನ ಮನೆಯ ಬೆಂಕಿ ದುರಂತದಿಂದ ಪಾರಾಗಿ ಬಂದು ಬ್ರಾಹ್ಮಣ ವೇಷದಲ್ಲಿ ಇರುವ ಸಮಯದಲ್ಲಿ, ಪಾಂಚಾಲದಲ್ಲಿ
ದ್ರೌಪದಿಯ ಸ್ವಯಂವರ ನಡೆಯುವಾಗ ಅರ್ಜುನನು
ವೇಷ ಬದಲಿಸಿ ಬಂದು, ನೀರಿನಲ್ಲಿರುವ ಬಿಂಬವನ್ನು ನೋಡಿಕೊಂಡು, ತಿರುಗುತ್ತಿರುವ ಚಕ್ರದಲ್ಲಿರುವ ಮೀನಿನ ಕಣ್ಣಿಗೆ ಗುರಿಯನ್ನು
ಇಟ್ಟು ಹೊಡೆದು ಸ್ವಯಂವರದಲ್ಲಿ ಜಯಿಸಿದನು ಮತ್ತು
ಅರ್ಜುನ
ದ್ರೌಪದಿಯನ್ನು ಮನೆಗೆ ಕರೆದುಕೊಂಡು ಬಂದನು
ಮನೆಗೆ
ಹಿಂತಿರುಗಿದಾಗ ಕುಂತಿದೇವಿ "ನೀವು ತಂದಿದ್ದನ್ನು ಎಲ್ಲರೂ
ಹಂಚಿಕೊಳ್ಳಿರಿ" ಎಂದು ಹೇಳಿದ ಕಾರಣ
ಪಾಂಡವರು
ಅವಳನ್ನು ಐದು ಮಂದಿ ಸಹೋದರರು ಒಟ್ಟಿಗೆ ವಿವಾಹ ಮಾಡಿಕೊಂಡರು.
ದ್ರೌಪದಿ
ಐದು ಮಂದಿ ಸಹೋದರರನ್ನು ವಿವಾಹವಾದರೂ ಅವಳು ಬಯಸದೇ ಆಕಸ್ಮಿಕವಾಗಿ ನಡೆದದ್ದು. ಹಿರಿಯರ ಮಾತಿಗೆ ಮನ್ನಣೆ
ನೀಡಿ ಅವಳು ಈ ವಿವಾಹಕ್ಕೆ ಒಪ್ಪಿಗೆ ನೀಡಿದಳು. ದ್ರೌಪದಿಯ ಈ ಸ್ಥಿತಿ ತುಂಬಾ ವಿಚಿತ್ರವಾದ್ದು, ಈ
ಸಮಯದಲ್ಲಿನ ಅವಳ ಮಾನಸಿಕ ಸ್ಥಿತಿ ನಮಗೆ ಪ್ರಶ್ನೆ ಎನಿಸಿದಂತೆ, ಅವಳಿಗೂ ಆ ಸಮಯದಲ್ಲಿ ಪ್ರಶ್ನೆಯಾಗಿಯೇ
ಇದ್ದಿರಬಹುದು.
ಪಾಂಡವರು
ದ್ರೌಪದಿಯೊಂದಿಗೆ ಇಂದ್ರಪ್ರಸ್ಥದ ರಾಜಧಾನಿಯಲ್ಲಿ ಶ್ರೀಮಂತವಾಗಿ ತುಂಬು ಜೀವನ ನಡೆಸುತ್ತಿದ್ದರು.
ದ್ರೌಪದಿ ಐದು ಗಂಡಂದಿರಿದ್ದರೂ ಪತಿವ್ರತೆ ಆಗಿದ್ದಳು.
ಪಾಂಡವರು
ವನವಾಸದಲ್ಲಿದ್ದಾಗ ಒಮ್ಮೆ ಕೃಷ್ಣನ ಪತ್ನಿ ಸತ್ಯಭಾಮೆಯು
ಸಹ ದ್ರೌಪದಿಯನ್ನು ಪ್ರಶ್ನಿಸುತ್ತಾಳೆ ನೀನು ಹೇಗೆ
ಐದು ಜನರಿಗೂ ಒಳ್ಳೆಯ ಪತ್ನಿಯಾಗಿ ಇರುವೇ ?? ಎಂದು ಕೇಳಿದ್ದಳಂತೆ. ಅಂದರೆ ಒಬ್ಬ ಗಂಡನೊಂದಿಗೆ ಜೀವಿಸುವುದೇ ಕಷ್ಟವೆನಿಸುತ್ತದೆ,
ನೀನು ಐದು ಜನರೊಂದಿಗೆ ಹೇಗಿರುತ್ತಿ ಎಂದು ತಮಾಷೆ ಮಾಡುವ ರೀತಿಯಲ್ಲಿ ಕೇಳಿದ್ದಳಂತೆ
ಇಂದ್ರಪ್ರಸ್ಥದಲ್ಲಿ
ಅರಮನೆಗೆ ಸಂಬಂಧಿಸಿದ ಯಾವುದೇ ಕೆಲಸಗಳಲ್ಲಿ ದ್ರೌಪದಿ ಎಲ್ಲವನ್ನೂ ಸಂಭಾಳಿಸುತ್ತಾ ದಿಟ್ಟೆಯಾಗಿ ,
ಧೈರ್ಯವಾಗಿ ಎಲ್ಲವನ್ನು ಎದುರಿಸಿದ್ದಳು..
ಅವಳ
ಈ ಕಾರ್ಯವೈಖರಿಯು ಮಹಾಭಾರತದಲ್ಲಿ ಅವಳ
ಬುದ್ಧಿವಂತಿಕೆ, ರಾಜಕೀಯ ದೂರದೃಷ್ಟಿ, ಮತ್ತು ಮಾತಿನ ತೀಕ್ಷ್ಣತೆ ಹಲವಾರು ಬಾರಿ ಪಾಂಡವರಿಗೆ ಬೆಂಬಲ
ನೀಡಿದೆ.
ವಾಸ್ತ್ರಾಪಹರಣ
ಮತ್ತು ಅವಮಾನ
ಪಾಂಡವರು
ದ್ರೌಪದಿಯನ್ನು ವರಿಸಿ, ತಮ್ಮ ರಾಜ್ಯಕ್ಕೆ ಹಿಂದಿರುಗುತ್ತಾರೆ, ಹೀಗೆ ಕಾಲ ಉರುಳುತ್ತಿರಲು, ಕೌರವರ
ಹಿರಿಯವ ದುರ್ಯೋಧನನು ದಾಯಾದಿ ಮತ್ಸರದಿಂದ ಹೇಗಾದರೂ
ಮಾಡಿ ಪಾಂ ಡವರನ್ನು ರಾಜ್ಯದಿಂದ ಹೊರಗಿಡಬೇಕು ಎಂದು ಆಲೋಚಿಸಿ ಪಾಂಡವರೊಂದಿಗೆ ದ್ಯೂತ ಆಡಲು ಯೋಜಿಸಿ
ಅವರನ್ನು ತನ್ನ ಅರಮನೆಗೆ ಕರೆಸುತ್ತಾನೆ.
ಪಾಂಡವರು
ಮತ್ತು ಕೌರವರು ಆಡಿದ ದ್ಯೂತದ ಆಟದಲ್ಲಿ ಧರ್ಮರಾಯನು ಸೋತುಹೋಗುತ್ತಾನೆ. ತನ್ನ ಸಹೋದರರು , ವಸ್ತ್ರಗಳು
ಸಹಿತ ದ್ರೌಪದಿಯನ್ನು ಪಣಕ್ಕಿಟ್ಟು ಎಲ್ಲವನ್ನೂ ಸೋತುಹೋಗುತ್ತಾನೆ.
ಆಗ
ದುರ್ಯೋಧನನು ದ್ರೌಪದಿಯನ್ನು ಸಭೆಗೆ ಎಳೆದುತಂದು ಬಟ್ಟೆಯನ್ನು ಎಳೆಯಲು ದುಶ್ಯಾಸನನಿಗೆ ಆದೇಶಿಸುತ್ತಾನೆ.
ಆಗ
ಕೌರವರ ಸಭೆಯಲ್ಲಿ ದುಶಾಸನ ದ್ರೌಪದಿಯನ್ನು ಎಳೆದುಕೊಂಡು ಬಂದು ವಸ್ತ್ರಾಪಹರಣ ಮಾಡಲು
ಯತ್ನಿಸಿದನು.
ದ್ಯೂತದಲ್ಲಿ
ಸೋತಿದ್ದು ಧರ್ಮರಾಯ ತಾನು ಸೋತು ತನ್ನನ್ನು ಪಣಕ್ಕಿಟ್ಟಿದ್ದು ಯಾವ ಧರ್ಮ,
ಯಾವ ನ್ಯಾಯ ಎಂದು ಪ್ರಶ್ನೆ
ಮಾಡುತ್ತಾಳೆ, ತುಂಬಿದ ಸಭೆಯಲ್ಲಿ ಕೌರವರ ದರ್ಪದ ಎದುರು ಒಂಟಿಯಾಗಿ
ನಿಂತಿದ್ದರೂ ಯಾರೂ ಅವಳ ಪರ
ನಿಲ್ಲಲಿಲ್ಲ.
ಕಡೆಗೆ
ದ್ರೌಪದಿಯೂ ಶ್ರೀಕೃಷ್ಣನನ್ನು ಪ್ರಾರ್ಥಿಸುತ್ತಾಳೆ, ಶ್ರೀಕೃಷ್ಣನು ಅವಳ ವಸ್ತ್ರವನ್ನು ಅಕ್ಷಯ
ವಸ್ತ್ರವಾಗಿಸಿ ಅವಳ ಗೌರವ ಕಾಪಾಡುತ್ತಾನೆ..
ತುಂಬಿದ
ಸಭೆಯಲ್ಲಿ ದ್ರೌಪದಿಗೆ ಆದ ಈ ಅವಮಾನವೇ ಕುರುಕ್ಷೇತ್ರ ಯುದ್ಧಕ್ಕೆ ನಾಂದಿಯಾಗುತ್ತದೆ.
ಈ
ಘಟನೆ ಅವಳ ಮನಸ್ಸಿನಲ್ಲಿ ಕುರುಕುಲವನ್ನು ನಾಶಮಾಡುವ ಪ್ರತೀಕಾರದ
ಜ್ವಾಲೆಯನ್ನು ಹುಟ್ಟಿಸಿತು ಮತ್ತು ಕುರುಕ್ಷೇತ್ರ ಯುದ್ಧದ ಪ್ರಮುಖ ಕಾರಣಗಳಲ್ಲಿ ಒಂದಾಯಿತು.
ವನವಾಸ ಮತ್ತ ಅಜ್ಞಾತವಾಸ
ಜೂಜಾಟದಲ್ಲಿ ಸೋತಾಗ ನಿಯಮದ ಪ್ರಕಾರ ಪಾಂಡವರು ೧೨ ವರ್ಷಗಳ ವನವಾಸ ಮತ್ತು ೧ ವರ್ಷ ಅಜ್ಞಾತ ವಾಸ ನಡೆಸಿದರು. ಈ ಸಮಯದಲ್ಲಿ ದ್ರೌಪದಿಯ ಹಲವು ಅಪಾಯಗಳನ್ನು ಎದುರಿಸಿದಳು. ರಾಜಕುಮಾರಿಯಾಗಿ ಮಹಾರಾಣಿಯಾಗಿ ಮೆರೆದವಳು ಕಾಡಿನಲ್ಲಿ ವಾಸಿಸುತ್ತಾ ವೇಷ ಮರೆಸಿಕೊಂಡು ದಾಸಿಯಾಗಿ ಜೀವನ ನಡೆಸಿದಳು.
ಕೀಚಕನು
ದ್ರೌಪದಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡು ಅಪಮಾನ
ಮಾಡಲು ಮುಂದಾದಾಗ ಪಾಂಡವರು ಅವನನ್ನು ಕೊಂದರು (ಕೀಚಕ ವಧೆ ಎಂದು ಪ್ರಸಿದ್ಧ).
ಪಾಂಡವರು
ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿ ಬಂದು ತಮ್ಮ ರಾಜ್ಯವನ್ನು ಹಿಂದಿರುಗಿಸುವಂತೆ ಕೇಳಿಕೊಂಡಾಗ,
ದುರ್ಯೋಧನನು ಒಂದಿಂಚೂ ಭೂಮಿಯನ್ನು ಕೊಡಲಾರೆ ಎನ್ನುತ್ತಾನೆ. ನನ್ನೊಂದಿಗೆ ಯುದ್ದ ಮಾಡಿ ನಿಮ್ಮ ರಾಜ್ಯವನ್ನು
ತೆಗೆದುಕೊಳ್ಳಿ ಎನ್ನುತ್ತಾನೆ.
ಆದರೆ
ಭೂಮಿಗಾಗಿ ಯುದ್ದ ಮಾಡಲು ಧರ್ಮರಾಯನು ತಯಾರಿರುವುದಿಲ್ಲ, ಹಾಗಾಗಿ ಅರ್ಜುನ ಭೀಮ ನಕುಲರೂ ಸಹ ಯುದ್ಧ
ಬೇಡವೆಂದು ತಮ್ಮ ಅಣ್ಣನನ್ನೇ ಅನುಸರಿಸುತ್ತಾರೆ. ಆದರೆ ಸಹದೇವನು ಕುರುಕ್ಷೇತ್ರ ಯುದ್ಧವನ್ನು ಮಾಡಲೇಬೇಕೆಂದು
ಹೇಳುತ್ತಾನೆ. ನಾವು ಮಾಡುವ ಈ ಯುದ್ಧ ಕೇವಲ ಭೂಮಿಗಾಗಿ
ಅಲ್ಲ ಬದಲಿಗೆ ದ್ರೌಪದಿಗೆ ಆದ ಅವಮಾನಕ್ಕೆ ನಾವು ಪ್ರತಿಕಾರ ತೀರಿಸಿಕೊಳ್ಳಲೇಬೇಕು. ನೀವು ಯಾರು ಯುದ್ದ ಮಾಡಲು
ಬರದಿದ್ದರೂ, ಉಪಪಾಂಡವರನ್ನಾದರೂ ಕರೆದುಕೋಂಡು ಹೋಗಿ ಯುದ್ದ ಮಾಡಿಯೇ ತೀರುತ್ತೇನೆ ಎನ್ನುತ್ತಾನೆ ಸಹದೇವ.
ಕುರುಕ್ಷೇತ್ರದ
ಯುದ್ದದಲ್ಲಿ ದ್ರೌಪದಿಯ ಪಾತ್ರ.
ಮೇಲ್ನೋಟಕ್ಕೆ
ಕುರುಕ್ಷೇತ್ರ ಯುದ್ದಕೌರವರು ಮತ್ತು ಪಾಂಡವರ ನಡುವಿನ ಆಸ್ತಿಗಾಗಿ ದಾಯಾದಿ ಕಲಹ ದಂತೆ ಕಾಣುತ್ತದೆ. ದ್ವಾಪರಯುಗದಲ್ಲಿ ದುಷ್ಟರನ್ನು ಮಣಿಸಲು ನಡೆಸಿದ ಈ ದುಷ್ಟಸಂಹಾರವೆ ಕುರುಕ್ಷೇತ್ರ ಯುದ್ದ. ಕಾಲದ
ಚಕ್ರದಲ್ಲಿ ಈ ದುಷ್ಟ ಸಂಹಾರಕ್ಕೆ ಯಾವುದಾದರೂ ಒಂದು
ಕಾರಣ ಬೇಕಿತ್ತು ಆ ಒಂದು ಕಾರಣವೇ ದ್ರೌಪದಿ ಮತ್ತು ದ್ರೌಪದಿಗೆ ಆದ ಈ ಅವಮಾನದ ಪ್ರತಿಕಾರ. ಮೂಲದಿಂದ ದ್ರೌಪದಿ ಯುದ್ಧವನ್ನು
ಪ್ರಾರಂಭಿಸುವ ನೇರ ಸೇನಾನಾಯಕಿ ಅಲ್ಲ,
ಆದರೆ ಅವಳ ಸಂಕಲ್ಪ, ಶಾಪಗಳು,
ಮತ್ತು ಪಾಂಡವರನ್ನು ಪ್ರೋತ್ಸಾಹಿಸುವ ಮಾತುಗಳು ಯುದ್ಧದ ಅದಮ್ಯ ಕಾರಣವಾಗಿದ್ದವು. ಶ್ರೀ ಕೃಷ್ಣನು ಯುದ್ಧ ಬೇಕೋ ಬೇಡವೋ ಎಂದು
ಕುಂತಿಯನ್ನು ಕೇಳಿದಾಗ, ಯುದ್ಧದ ವಿಚಾರದಲ್ಲಿ ದ್ರೌಪದಿ ಏನು ಹೇಳುತ್ತಾಳೋ ಅದೆ ಆಗಲಿ ಎಂದು ದ್ರೌಪದಿಯನ್ನು
ಬೆಂಬಲಿಸುತ್ತಾಳೆ.
ಕುರುಕ್ಷೇತ್ರ
ಯುದ್ಧ
ದ್ರೌಪದಿಯು
ಕುರುಕ್ಷೆತ್ರ ಯುದ್ಧದ ವೇಳೆ ಪಾಂಡವರಲ್ಲಿ ಪ್ರತೀಕಾರದ
ಜ್ವಾಲೆ ಎಬ್ಬಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಳು. ದುಶಾಸನನ ಹತ್ಯೆ, ದುರ್ಯೋಧನನ ಸೋಲು ಇವೆಲ್ಲವೂ ಅವಳ
ಮಾನ ಗೌರವಕ್ಕಾಗಿ ನಡೆದಿದ್ದವು.
ಯುದ್ಧಾನಂತರದ
ಜೀವನ
ಯುದ್ಧದ
ನಂತರ ಪಾಂಡವರು ಹಸ್ತಿನಾಪುರದ ಸಿಂಹಾಸನಕ್ಕೇರಿದರು.
ದ್ರೌಪದಿ
ತನ್ನ ಐದು ಮಕ್ಕಳನ್ನು ಕಳೆದುಕೊಂಡಳು . ಅಶ್ವತ್ಥಾಮನು ಅವಳ ಐದು ಪುತ್ರರನ್ನು
ಯುದ್ದದ ನಂತರ ಕೊಂದನು.
ಈ
ನೋವಿನ ನಡುವೆಯೂ ಅವಳು ರಾಜಮಾತೆಯಾಗಿ ತನ್ನ ಧರ್ಮವನ್ನು
ಪಾಲಿಸಿದಳು. ಯುದ್ಧದ ನಂತರವೂ, ಅವಳು ತನ್ನ ಗೌರವ
ಮತ್ತು ಧರ್ಮವನ್ನು ಅತಿದೊಡ್ಡ ಮೌಲ್ಯವೆಂದು ತಿಳಿದಿದ್ದಳು.
ದ್ರೌಪದಿ
ಮಹಾಭಾರತದ ಪೌರಾಣಿಕ
ಸಾಹಿತ್ಯದಲ್ಲಿ ಗೌರವ ಮತ್ತು ನ್ಯಾಯಕ್ಕಾಗಿ
ಹೋರಾಡುವ ಮಹಿಳೆಯ ಪ್ರತೀಕ.
ಅಂತಿಮ
ಯಾತ್ರೆ
ಪಾಂಡವರು
ರಾಜ್ಯ ತ್ಯಜಿಸಿ ಹಿಮಾಲಯದತ್ತ ಮಹಾಪ್ರಸ್ಥಾನಕ್ಕೆ ಹೊರಟಾಗ, ದ್ರೌಪದಿ ಮೊದಲಿಗಳಾಗಿ ತನ್ನ
ದೇಹ ತ್ಯಾಗವನ್ನು ಮಾಡುತ್ತಾಳೆ.
ಯುಧಿಷ್ಠಿರನು
ಹೇಳಿದಂತೆ, ಅವಳಲ್ಲಿ ಸ್ವಲ್ಪ ಪತಿಯರ ಮೇಲಿನ ಭೇದಭಾವ (ಅರ್ಜುನನ ಕಡೆ ಹೆಚ್ಚು ಪ್ರೀತಿ)
ಇತ್ತು. ಇದೇ ಅವಳ ಪತನಕ್ಕೆ
ಕಾರಣ ಎನ್ನುತ್ತಾನೆ.
ದ್ರೌಪದಿ ಪಾಂಡವರಿಗೆ ನಿಷ್ಠಳಾಗಿ ಎಲ್ಲಿಯೂ
ಹೆಚ್ಚು ಕಡಿಮೆಯಾಗದಂತೆ ಸಮತೋಲನದಲ್ಲಿ ನಡೆದುಕೊಳ್ಳುತ್ತಾಳೆ. ದ್ರೌಪದಿ ಕೇವಲ ಪಾಂಡವರ ಪತ್ನಿಯಾಗಲ್ಲದೆ,
ಮಹಾಭಾರತದಲ್ಲಿ ಧೈರ್ಯ, ಗೌರವ, ಬುದ್ಧಿವಂತಿಕೆ, ತುಲನಾತ್ಮಕ ಮನೋಭಾವ
ಮತ್ತು ನ್ಯಾಯದ ಹೋರಾಟದ ಪ್ರತೀಕವಾಗಿದ್ದಾಳೆ .ಮಹಾಭಾರತದಲ್ಲಿ ಅತ್ಯಂತ ತೌಲನಾತ್ಮಕ ಪಾತ್ರವಾಗಿ
ದ್ರೌಪದಿಯು ಕಾಣಿಸಿಕೊಳ್ಳುತ್ತಾಳೆ. ಅವಳ
ಕಥೆ ಇಂದಿ ಗೂ ಮಹಿಳಾ ಶಕ್ತಿಯ ಸ್ಫೂರ್ತಿದಾಯಕ ಉದಾಹರಣೆಯಾಗಿದೆ.
ಧನ್ಯವಾದಗಳು…...🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು