ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ರಕ್ಷಾಬಂಧನ 2025 – ಬಾಂಧವ್ಯದ ಪವಿತ್ರ ಹಬ್ಬದ ಇತಿಹಾಸ, ಕಥೆಗಳು ಮತ್ತು ಸಾಮಾಜಿಕ ಮಹತ್ವ!!!!


🌸 ರಕ್ಷಾಬಂಧನಬಾಂಧವ್ಯದ ಪವಿತ್ರ ಹಬ್ಬ 🌸

ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಸಂಕೇತವಾದ ರಕ್ಷಾಬಂಧನ ಭಾರತೀಯ ಸಂಸ್ಕೃತಿಯಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. ಹಬ್ಬವು ಕೇವಲ ಸಹೋದರಸಹೋದರಿಯರ ಸಂಬಂಧವನ್ನಷ್ಟೇ ಆಚರಿಸುವುದಿಲ್ಲ, ಮಾನವೀಯತೆ ಮತ್ತು ಸಹೋದರತ್ವ ಸಂದೇಶವನ್ನೂ ಸಾರುತ್ತದೆ.

"ರಕ್ಷಾ" ಎಂದರೆ ರಕ್ಷಣೆ ಮತ್ತು "ಬಂಧನ" ಎಂದರೆ ಬಂಧನ ಅಥವಾ ನಂಟು. ಹೀಗಾಗಿ ರಕ್ಷಾಬಂಧನ ಎಂದರೆ ಪ್ರೀತಿ ಮತ್ತು ಭದ್ರತೆಯ ಬಂಧನದ ಹಬ್ಬ.

ಹಬ್ಬದ ಆಚರಣೆಯ  ಕುರಿತು ಹಲವು ಕಥೆಗಳು ಪ್ರಸಿದ್ಧವಾಗಿವೆ.

ಭಾರತದ ಮಹಾಕಾವ್ಯವೆಂದೇ ಪ್ರಸಿದ್ಧವಾದ ಮಹಾಭಾರತದಲ್ಲಿ ದ್ರೌಪದಿ ಶ್ರೀಕೃಷ್ಣನ ಬೆರಳಿಗೆ ಗಾಯವಾದಾಗ ತನ್ನ ಸೀರೆಯ ಅಂಚನ್ನೇ  ಕತ್ತರಿಸಿ ಕಟ್ಟಿ ರಕ್ತ ನಿಲ್ಲಿಸಿದಳು. ಪ್ರತಿಯಾಗಿ ಶ್ರೀಕೃಷ್ಣನು ಅವಳನ್ನು ವಸ್ತ್ರಾಪಹರಣದಿಂದ ರಕ್ಷಿಸಿದನು.

ಮಹಾಭಾರತದ ಸಮಯದಲ್ಲಿ, ಇಂದ್ರಪ್ರಸ್ಥದಲ್ಲಿ ಯುಧಿಷ್ಠಿರನು ರಾಜಸೂಯ ಯಜ್ಞವನ್ನು ನೆರವೇರಿಸಿದ ನಂತರ, ಶ್ರೀಕೃಷ್ಣ, ದ್ರೌಪದಿ, ಪಾಂಡವರು,  ಕುರುಕುಲದ ಇತರ ಸದಸ್ಯರು ಅಲ್ಲಿ ಉಪಸ್ಥಿತರಿದ್ದರು. ಆ ಸಮಯದಲ್ಲಿ, ಒಂದು ದಿನ, ಶ್ರೀಕೃಷ್ಣನು ತನ್ನ ಶಸ್ತ್ರ (ಸುಧರ್ಶನ ಚಕ್ರ)ವನ್ನು ಬಳಸಿ ಶಮಿ ಮರದ ಎಲೆಗಳನ್ನು ಕಡಿದುಕೊಂಡನು. ಸಮಯದಲ್ಲಿ ಅವನ ಬೆರಳಿಗೆ ಸಣ್ಣ ಗಾಯವಾಗಿ ರಕ್ತ ಹರಿಯಿತು. ಅಲ್ಲಿ ಹಾಜರಿದ್ದ ಪಾಂಡವರ ಪತ್ನಿ ದ್ರೌಪದಿಯು, ಹತ್ತಿರದಲ್ಲಿ ಬಟ್ಟೆ ಅಥವಾ ಪಟ್ಟಿ ಹುಡುಕದೆ, ತಕ್ಷಣ ತನ್ನ ಸೀರೆಯ ಸೆರಗಿನ ಒಂದು ತುಂಡು ಕತ್ತರಿಸಿ ಶ್ರೀಕೃಷ್ಣನ ಬೆರಳಿಗೆ ಕಟ್ಟಿ ರಕ್ತ ನಿಲ್ಲಿಸಿದಳು.

ದ್ರೌಪದಿಯ ಘಟನೆ  ಶ್ರೀಕೃಷ್ಣನ ಮನಸ್ಸಿಗೆ ತುಂಬಾ ತಟ್ಟಿತು. ಆತ ಮನಸ್ಸಿನಲ್ಲಿ ಆಕೆಯ ಮೇಲೆ ಜೀವಮಾನದುದ್ದಕ್ಕೂ ಕೃತಜ್ಞತೆ ಮತ್ತು ರಕ್ಷಣೆಯ ವ್ರತ ಕೈಗೊಂಡನು.

" ಇಂದು ನೀನು ನನ್ನನ್ನು ರಕ್ಷಿಸಿದ್ದೀಯ. ನಿನಗೆ ಯಾವಾಗಲಾದರೂ ಅಪಾಯ ಬಂದರೆ, ನಾನು ನಿನ್ನನ್ನು ಕಾಪಾಡುವೆನು."  ಎಂದು ಹೇಳಿದನು

ವರ್ಷಗಳ ನಂತರ, ಹಸ್ತಿನಾಪುರದಲ್ಲಿ ದುರ್ಯೋಧನ ಮತ್ತು ದುಶ್ಶಾಸನರು ಪಾಂಡವರನ್ನು ಮಹಾದ್ಯೂತದಲ್ಲಿ  ಸೋಲಿಸಿ, ದ್ರೌಪದಿಯನ್ನು ಸಭೆಯಲ್ಲಿ ಅವಮಾನಿಸಲು ಯತ್ನಿಸಿದರು. ದುಶ್ಶಾಸನನು ಆಕೆಯ ಸೀರೆ ಎಳೆಯಲು ಪ್ರಾರಂಭಿಸಿದಾಗ, ದ್ರೌಪದಿ ನಿರಾಶೆಯಿಂದ ಕೈಗಳನ್ನು ಮೇಲಕ್ಕೆ ಎತ್ತಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದಳು.
ಸಮಯದಲ್ಲಿ, ಶ್ರೀಕೃಷ್ಣ ತನ್ನ ದಿವ್ಯ ಶಕ್ತಿಯಿಂದ ಅಕ್ಷಯ ವಸ್ತ್ರಗಳನ್ನು ನೀಡಿ ಕಾಪಾಡಿದನು. ಇದರೊಂದಿಗೆ ದ್ರೌಪದಿಯನ್ನು ಅಪಮಾನದಿಂದ ರಕ್ಷಿಸಿದನು.

ಈ ಸಂಬಂಧವು   ಒಡ ಹುಟ್ಟಿದ ಸಹೋದರಸಹೋದರಿಯ ಸಂಬಧಕ್ಕಿಂತ ಮಿಗಿಲಾಗಿ , ಬಾಂಧವ್ಯದ ಶುದ್ಧತೆಯ ಉದಾಹರಣೆಯೊಂದಿಗೆ ಇಂದಿನ ರಕ್ಷಾಬಂಧನ ಆಚರಣೆಗೆ ಪುರಾವೆ ಒದಗಿಸುವ ಸಹೋದರತ್ವದ  ಶ್ರೇಷ್ಠ ಉದಾಹರಣೆಯಾಗಿದೆ .

ಒಮ್ಮೆ ನೀಡಿದ ಸಹಾಯವನ್ನು ಮರೆಯದೆ, ಬದುಕಿನ ಕೊನೆಯವರೆಗೂ ಕೃತಜ್ಞತೆಯಿಂದ ಪ್ರತಿಫಾಲಿಸುವುದು ರಕ್ಷಾ ಬಂಧನದ ಮಹತ್ವವಾಗಿದೆ.

ರಕ್ಷಾಬಂಧನದ ಸಂಕೇತವಾದ  ರಾಖಿಯೊಂದಿಗಿನ ಬಾಂಧವ್ಯವು ಕೇವಲ ದಾರದಿಂದಲ್ಲ, ಪರಸ್ಪರ ವಿಶ್ವಾಸ ಮತ್ತು ಬದ್ಧತೆಯಿಂದ ಕಟ್ಟಲ್ಪಡುವುದು.

ಇತಿಹಾಸದಲ್ಲಿ ದಾಖಲಾದ ಮತ್ತೊಂದು ಕತೆಯು, ಹೇಗೆ ಒಬ್ಬ ತಂಗಿಯ ಸಹಾಯಕ್ಕೆ ಅಣ್ಣನ ಸ್ಥಾನದಲ್ಲಿ ನಿಂತು ನೆರವಾದನು! ಅದೂ ಈ ʼರಕ್ಷಾ ಬಂಧನʼ ದ ರಾಖಿಯ ಕಾರಣದಿಂದ ಹೇಗೆಂಬುದನ್ನು ಇಲ್ಲಿ ತಿಳಿಯೋಣ!!

ಚಿತ್ತೋರ್ಗಢದ ರಾಣಿ ಕರ್ಣಾವತಿ ಮೊಘಲ್ ಸಾಮ್ರಾಟ್ ಹೂಮಾಯೂನ್ಗೆ ರಾಖಿ ಕಳುಹಿಸಿ ತನ್ನ ರಾಜ್ಯವನ್ನು ಕಾಪಾಡಲು ವಿನಂತಿಸಿದಳು. ಹೂಮಾಯೂನ್ ತಕ್ಷಣವೇ ತನ್ನ ಸೇನೆಯೊಂದಿಗೆ ಸಹಾಯಕ್ಕೆ ಧಾವಿಸಿದನು.

ಕ್ರಿ.. ೧೫೨೮ರಲ್ಲಿ, ಚಿತ್ತೋರ್ಗಢ ಕೋಟೆ, ಮೆವಾರ್ (ಇಂದಿನ ರಾಜಸ್ಥಾನ) ನಲ್ಲಿ ಮೆವಾರಿನ ರಾಜ ರಾಣಾ ಸಿಂಗ್‌ ನ ಪತ್ನಿ  ರಾಣಿ ಕರ್ಣಾವತಿಯು ತನ್ನ ಮಗ ವಿಕ್ರಮಾದಿತ್ಯನ ಹೆಸರಿನಲ್ಲಿ  ಆಡಳಿತವನ್ನು  ಕೈಗೆತ್ತಿಕೊಂಡಳು.

ಮೆವಾರಿನ ರಾಣಿ ಕರ್ಣಾವತಿ ವಿಧವೆಯಾಗಿದ್ದರಿಂದ, ರಾಜ್ಯವನ್ನು ರಕ್ಷಿಸುವ ಹೊಣೆ ಅವಳ ಹೆಗಲೇರಿತು.   ಸಮಯದಲ್ಲಿ, ಗುಜರಾತಿನ ಸುಲ್ತಾನ್ ಬಹದ್ದೂರ್ ಶಾ ದೊಡ್ಡ ಸೇನೆಯೊಂದಿಗೆ ಚಿತ್ತೋರ್ಗಢದ ಮೇಲೆ ಎರಡನೇ ಬಾರಿಗೆ ದಾಳಿ ಮಾಡಿದನು.
ಅವನ ಶಕ್ತಿ ಎದುರಿಸಲು ತನ್ನ ಸೇನೆ ಮಾತ್ರ ಸಾಕಾಗದು ಎಂದು ಅರಿತ ರಾಣಿ, ತಕ್ಷಣ ಮೊಘಲ್ ಸಾಮ್ರಾಟ್ ಬಾಬರ್‌ ನ ಮಗ  ಹೂಮಾಯೂನ್ಗೆ ಒಂದು "ರಾಖಿ" ಕಳುಹಿಸಿ, ತನ್ನನ್ನು ಸಹೋದರಿಯೆಂದು ಪರಿಗಣಿಸಿ ರಾಜ್ಯವನ್ನು ಕಾಪಾಡುವಂತೆ ವಿನಂತಿಸಿದಳು.

                   🌟 🌟 🌟 🌟 🌟 🌟 🌟 🌟 🌟 🌟 🌟 🌟 🌟 🌟

🏇 ಹೂಮಾಯೂನ್ ಪ್ರತಿಕ್ರಿಯೆ:

ರಾಖಿ ಹಾಗೂ ಪತ್ರವನ್ನು ಸ್ವೀಕರಿಸಿದ ಹೂಮಾಯೂನ್, ತನ್ನ ವೈಯಕ್ತಿಕ ಯುದ್ಧಗಳಲ್ಲಿ ತೊಡಗಿದ್ದರೂ, ತಕ್ಷಣವೇ ತನ್ನ ಸೇನೆಯೊಂದಿಗೆ ಮೆವಾರ್ ಕಡೆಗೆ ಹೊರಟನು.
ಆದರೆ, ಅವನು ಚಿತ್ತೋರ್ಗಢ ತಲುಪುವಷ್ಟರಲ್ಲಿ, ಕೋಟೆಯೊಳಗೆ ಜೌಹರ್ (ರಾಜಸ್ಥಾನದ ಮಹಿಳೆಯರು ತಮ್ಮ ಗೌರವವನ್ನು ರಕ್ಷಿಸಲು ಮಾಡುವ ಸಾಮೂಹಿಕ ಅಗ್ನಿಪ್ರವೇಶ) ನಡೆದಿತ್ತು ಮತ್ತು ಯುದ್ಧ ಮುಗಿದಿತ್ತು

ಇತಿಹಾಸ ಮಹತ್ವದ ಕಥೆಯನ್ನು ರಕ್ಷಾಬಂಧನದ  ಸಾಮಾಜಿಕ ಮತ್ತು ರಾಜಕೀಯ ಅರ್ಥ ತೋರಿಸುವ ಉದಾಹರಣೆಯಾಗಿ ಹೇಳಲಾಗುತ್ತದೆ.  "ರಾಖಿ" ಕೇವಲ ಕುಟುಂಬ ಸಂಬಂಧಕ್ಕೆ ಸೀಮಿತವಲ್ಲ, ಅದು ರಕ್ಷಣೆಯ ವ್ರತ ಮತ್ತು ನಂಬಿಕೆಯ ಸಂಕೇತವೂ ಆಗಿದೆ. ಹಾಗಾಗಿಯೇ  ಇದಕ್ಕೆ ʼರಕ್ಷಾ ಬಂಧನʼ ಎನ್ನುವ ಹೆಸರು ಸರಿಯಾಗಿ ಹೊಂದಿಕೆಯಾಗುತ್ತದೆ.

ಇತಿಹಾಸಕಾರರು ಘಟನೆಗೆ ಪೂರ್ಣ ಪ್ರಾಮಾಣಿಕ ಸಾಕ್ಷಿ ಇಲ್ಲ ಎಂದರೂ, ಜನಪ್ರಿಯ ಜಾನಪದ ಮತ್ತು ರಾಜಸ್ಥಾನದ ಕಾವ್ಯಗಳಲ್ಲಿ ಇದು ಜೀವಂತವಾಗಿದೆ.

🎉 ಇಂದಿನ ಕಾಲದ ಆಚರಣೆ:

ಶ್ರಾವಣ ಮಾಸದ ಪೌರ್ಣಮಿಯಂದು, ಸಹೋದರಿಯು ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ʼರಕ್ಷಾ ಬಂಧನʼ ವನ್ನು ಆಚರಿಸಲಾಗುತ್ತದೆ.

ಸಹೋದರನಿಗೆ ತಿಲಕ ಇಟ್ಟು, ಅರತಿ ಮಾಡಿ, ಸಿಹಿತಿಂಡಿ ತಿನ್ನಿಸುವುದು ಸಂಪ್ರದಾಯವಾಗಿದೆ. ನಂತರದಲ್ಲಿ ಸಹೋದರನು ರಾಖಿ ಕಟ್ಟಿದ ಸಹೋದರಿಗೆ  ಉಡುಗೊರೆ ನೀಡಿ, ಯಾವ ಸಂಕಷ್ಟದಲ್ಲೂ ಅವಳನ್ನು  ಕಾಪಾಡುವುದಾಗಿ ಶಪಥ ಮಾಡುತ್ತಾನೆ.

ಪ್ರಸ್ತುತ  ರಕ್ಷಾಬಂಧನ ಭಾರತದ ಬಹುತೇಕ ರಾಜ್ಯಗಳಲ್ಲಿ ಆಚರಿಸಲ್ಪಡುತ್ತದಾದರೂ, ಪ್ರತಿ ಪ್ರದೇಶದಲ್ಲಿ ಅದರ ಆಚರಣೆ ಶೈಲಿ, ಸಂಪ್ರದಾಯ, ಹಾಗೂ ಸಾಂಸ್ಕೃತಿಕ ಅರ್ಥ ಸ್ವಲ್ಪ ಭಿನ್ನ ವಿಭಿನ್ನವಾಗಿರುತ್ತದೆ.

 ಭಾರತದ ರಾಜ್ಯವಾರು ರಕ್ಷಾ ಬಂಧನ ಆಚರಣ ಪದ್ಧತಿಯ ವಿವರ ಇಲ್ಲಿದೆ.

 

🕌 ಉತ್ತರ ಭಾರತ

ಉತ್ತರ ಭಾರತದಲ್ಲಿನ ಕೆಲವು ರಾಜ್ಯಗಳಾದ  ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ ಗಳಲ್ಲಿ,  ಸಹೋದರನ ಕೈಗೆ ಸಹೋದರಿ ರಾಖಿ ಕಟ್ಟುವುದು, ಆರತಿ ಬೆಳಗುವುದು, ಸಿಹಿ ತಿನಿಸುವ ಸಂಪ್ರದಾಯವಿದೆ.  ಅನೇಕ ಸ್ಥಳಗಳಲ್ಲಿ ಭಾಯಿ ದೂಜ್ ಶೈಲಿಯಂತೆ ಸಹೋದರ ಸಹೋದರಿಗೆ ಉಡುಗೊರೆ ನೀಡುವ ಸಂಪ್ರದಾಯವಿದೆ.

ರಾಜಸ್ಥಾನದಲ್ಲಿ ಸಹೋದರ ದೂರವಿದ್ದರೂ, ರಾಖಿ ಕಳುಹಿಸುವ ಪೋಸ್ಟಲ್ ರಾಖಿ ಸಂಪ್ರದಾಯವು ಹೆಚ್ಚು ಜನಪ್ರಿಯವಾಗಿದೆ.

 

🪷 ಮಧ್ಯ ಭಾರತ

ಮಧ್ಯ ಭಾರತದ ರಾಜ್ಯಗಳಾದ, ಮಧ್ಯ ಪ್ರದೇಶ, ಛತ್ತೀಸ್ಗಢ ಮುಂತಾದ ರಾಜ್ಯಗಳಲ್ಲಿ ಕುಟುಂಬ ಮಟ್ಟದ ಆಚರಣೆಯ  ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯ ದೇವತೆ ಅಥವಾ ಗ್ರಾಮ ದೇವತೆಯ  ದೇವಾಲಯದಲ್ಲಿರಾಖಿಕಟ್ಟಿ ರಕ್ಷಾ ಬಂಧನ ಆಚರಿಸುವ ಸಂಪ್ರದಾಯವಿದೆ.

 

🌾 ಪಶ್ಚಿಮ ಭಾರತ

ಪಶ್ಚಿಮ ಭಾರತದ ರಾಜ್ಯಗಳಾದ  ಮಹಾರಾಷ್ಟ್ರ, ಗುಜರಾತ್, ಗೋವಾ ರಾಜ್ಯಗಳಲ್ಲಿ ಆಚರಿಸುವ   ರಕ್ಷಾ ಬಂಧನವು ,  “ನಾರಳಿ ಪೌರ್ಣಿಮೆಯೊಂದಿಗೆ ಬರುತ್ತದೆ.  ಮೀನುಗಾರರು ಸಮುದ್ರ ದೇವತೆಗೆ (ಸಮುದ್ರರಾಜ) ಪ್ರಾರ್ಥನೆ ಸಲ್ಲಿಸುತ್ತಾರೆ,  ಮತ್ತು ತೆಂಗಿನಕಾಯಿ ಅರ್ಪಿಸುತ್ತಾರೆ.

ಗುಜರಾತ್ ರಾಜ್ಯದಲ್ಲಿ, ದೇವಸ್ಥಾನಗಳಲ್ಲಿ ಪೂಜಾರಿಗಳಿಗೆ, ಗುರುಗಳಿಗೆ, ಹಾಗೂ ಆತ್ಮೀಯ ಸ್ನೇಹಿತರಿಗೆ ಸಹ ರಾಖಿ ಕಟ್ಟುವ ಸಂಪ್ರದಾಯ.

🌸 ಪೂರ್ವ ಭಾರತ

ಪೂರ್ವ ಭಾರತದ  ರಾಜ್ಯಗಳಾದ  ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾದ  ಕೆಲವು ಕಡೆಗಳಲ್ಲಿ ಇದು  ಹುಣ್ಣಿಮೆ ಭಾಗವಾಗಿ ಆಚರಿಸಲಾಗುತ್ತದೆ. ಬ್ರಾಹ್ಮಣರು ಈ ಸಮಯದಲ್ಲಿ ಪವಿತ್ರ ಧಾಗೆಯನ್ನು ಬದಲಿಸುತ್ತಾರೆ.

ಪಶ್ಚಿಮ ಬಂಗಾಳದಲ್ಲಿ, ಸ್ನೇಹದ ಸಂಕೇತವಾಗಿಬಾಂಧನ್ ಉತ್ಸವವನ್ನು ಆಚರಿಸುವ ಮೂಲಕ  ಶಾಲೆ, ಕಾಲೇಜುಗಳಲ್ಲಿ ಸಹ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿಕೊಳ್ಳುತ್ತಾರೆ.

🌺 ದಕ್ಷಿಣ ಭಾರತ

 ದಕ್ಷಿಣ ಭಾರತದ  ರಾಜ್ಯಗಳಾದ  ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಗಳಲ್ಲಿ  ಉತ್ತರ ಭಾರತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆಚರಣೆಯಲ್ಲಿದೆ, ಆದರೆ ಉತ್ತರ ಮೂಲದ ಕುಟುಂಬಗಳು  ದಕ್ಷಿಣ ಭಾರತದ  ನಗರ ಪ್ರದೇಶಗಳಲ್ಲಿ ಹೆಚ್ಚಿದ್ದು ರಕ್ಷಾ ಬಂಧನವು ಹೆಚ್ಚು ಪ್ರಚಲಿತವಾಗಿದೆ.

ಕರ್ನಾಟಕದ ಕೆಲವು ಹಳ್ಳಿಗಳಲ್ಲಿಶ್ರಾವಣ ಪೂರ್ಣಿಮೆಯಂದು ಹಳ್ಳಿಯ ದೇವರನ್ನು ಪೂಜಿಸುವ ಪದ್ಧತಿಯಿದೆ.

 ನೇಪಾಳ (ಭಾರತ ಹೊರಗಿನ ಉದಾಹರಣೆ) ದಲ್ಲಿ ಇದನ್ನುಜನೈ ಪೂರ್ಣಿಮೆಅಥವಾರಾಖಿ ಬಂಧನಎಂದು ಕರೆಯಲಾಗುತ್ತದೆ. ಸಹೋದರಿಯು ಸಹೋದರನಿಗೆ ದೋ ರೇಖಾ (ಹಳದಿ-ಕೆಂಪು ಬಣ್ಣದ ಧಾರ) ಕಟ್ಟುತ್ತಾಳೆ, ಮತ್ತು ಸಹೋದರ ಉಡುಗೊರೆ ನೀಡುತ್ತಾನೆ.

💌 ಸಾಮಾಜಿಕ ಮಹತ್ವ

ಸಹೋದರತ್ವದ ಸಂಬಂಧದ ಬೆಸುಗೆಯನ್ನು ಗಾಢಗೊಳಿಸುವ ಈ ಹಬ್ಬವು ಕೇವಲ ರಕ್ತಸಂಬಂಧಕ್ಕೆ ಸೀಮಿತವಲ್ಲ.  ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು ಕೂಡ ರಾಖಿ ಬಂಧನದಲ್ಲಿ ಪಾಲ್ಗೊಳ್ಳುತ್ತಾರೆ.

ಈ ರಕ್ಷಾ ಬಂಧನದ ಆಚರಣೆಯು  ಧರ್ಮ, ಭಾಷೆ, ಪ್ರಾಂತಗಳ ಮೀರಿ, ಮಾನವೀಯ ಬಾಂಧವ್ಯವನ್ನು ಬಲಪಡಿಸುತ್ತದೆಸಮಾಜದಲ್ಲಿ ಪರಸ್ಪರ ಜವಾಬ್ದಾರಿ, ಕಾಳಜಿ ಮತ್ತು ವಿಶ್ವಾಸವನ್ನು ಬೆಳೆಸುತ್ತದೆ.

ರಕ್ಷಾಬಂಧನವು ಕೇವಲ ಹಬ್ಬವಲ್ಲ ಬದಲಿಗೆ  ಇದು ಪ್ರತಿಯೊಬ್ಬರೂ ಮತ್ತೊಬ್ಬರನ್ನು ಕಾಪಾಡುವ, ಪ್ರೀತಿಸುವ, ಗೌರವಿಸುವ ಹೊಣೆಗಾರಿಕೆಯ ನೆನಪಾಗಿರಲಿ.
ಪ್ರೀತಿಯ ದಾರವಾದ ರಾಖಿಯು, ನಮ್ಮ ಬಾಂಧವ್ಯದ ಸಂಕೇತವಾಗಲಿ.

೨೦೨೫ ರ ರಕ್ಷಾಬಂಧನವು, ನಿಮ್ಮ ಬಾಂಧವ್ಯವನ್ನು ಮತ್ತಷ್ಟು ಗಾಢಗೊಳಿಸಿ, ಪ್ರೀತಿ ಮತ್ತು ಭದ್ರತೆಯ ಹೊಸ ಕಥೆಗಳನ್ನು ಬರೆಯಲಿ!



ಧನ್ಯವಾದಗಳು......🌷🌷🌷



ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????