ಮಧ್ಯಯುಗದ ಇತಿಹಾಸದ ಅಪರೂಪದ ಸತ್ಯಗಳು ನಿಮಗೆ ಗೊತ್ತೇ?
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ:ನಾಗಲಕ್ಷ್ಮಿ ಕೆ. ಎನ್. ದಿನಾಂಕ:೦೫.೦೫.೨೦೨೬.
ಮಧ್ಯಯುಗದ
ಇತಿಹಾಸ
(Medieval Period): ಸಮಾಜದ
ರೂಪಾಂತರ.
ಮಾನವ ನಾಗರಿಕತೆಯ ಪಯಣದಲ್ಲಿ
ಮಧ್ಯಯುಗವು ಒಂದು ಮಹತ್ವದ ತಿರುವಿನಂತಿದೆ.
ಈ ಕಾಲದಲ್ಲಿ ಸಮಾಜವು ಕೇವಲ ರಾಜರು ಮತ್ತು
ಸಾಮ್ರಾಜ್ಯಗಳ ಸುತ್ತಲೇ ಅಲ್ಲ, ಆದರೆ ಧರ್ಮ, ಸಂಸ್ಕೃತಿ,
ಆರ್ಥಿಕತೆ ಮತ್ತು ಸಾಮಾನ್ಯ ಜನರ ದಿನನಿತ್ಯ ಜೀವನದ
ಮೂಲಕವೂ ರೂಪುಗೊಂಡಿತು. ಸಣ್ಣ ಗುಂಪುಗಳಲ್ಲಿ ಬದುಕುತ್ತಿದ್ದ
ಮಾನವರು ಹೇಗೆ ಸಂಘಟಿತ ರಾಜ್ಯ
ವ್ಯವಸ್ಥೆಗೆ ಬಂದರು? ರಾಜತಂತ್ರ ಹೇಗೆ ಬೆಳೆಯಿತು? ಮತ್ತು
ಅದೇ ವ್ಯವಸ್ಥೆ ಹೇಗೆ ಪ್ರಜಾಪ್ರಭುತ್ವದ ಬೀಜಗಳನ್ನು
ಬಿತ್ತಿತು? — ಈ ಪ್ರಶ್ನೆಗಳ ಉತ್ತರಗಳನ್ನು
ಮಧ್ಯಯುಗದ ಇತಿಹಾಸದಲ್ಲಿ ಕಾಣಬಹುದು.
ಮಧ್ಯಯುಗದ ಇತಿಹಾಸವು ಮಾನವ ನಾಗರಿಕತೆಯ ಅತ್ಯಂತ
ಪ್ರಮುಖ ಮತ್ತು ರೋಚಕ ಹಂತಗಳಲ್ಲಿ ಒಂದಾಗಿದೆ.
ಈ ಕಾಲವು ರಾಜರು, ಸಾಮ್ರಾಜ್ಯಗಳು, ಧರ್ಮ ಮತ್ತು ಸಂಸ್ಕೃತಿಯ
ಪ್ರಭಾವದಿಂದ ತುಂಬಿದ್ದು, ಸಮಾಜದ ರಚನೆ ಮತ್ತು ಜೀವನಶೈಲಿಯನ್ನು
ಆಳವಾಗಿ ಬದಲಾಯಿಸಿದೆ. ವಿಶೇಷವಾಗಿ ಭಾರತದಲ್ಲಿ ಮಧ್ಯಯುಗವು ರಾಜಕೀಯ ಬದಲಾವಣೆಗಳಷ್ಟೇ ಅಲ್ಲದೆ, ಕಲೆ, ವಾಸ್ತುಶಿಲ್ಪ, ಸಾಹಿತ್ಯ
ಮತ್ತು ಆಧ್ಯಾತ್ಮಿಕತೆಯ ಉತ್ತೇಜನದ ಕಾಲವಾಗಿತ್ತು.
ರಾಜರ ಆಳ್ವಿಕೆಯ ಕಾಲವು ಏಕಾಏಕಿ ಹುಟ್ಟಿಕೊಂಡ ವ್ಯವಸ್ಥೆಯಲ್ಲ; ಅದು ಮಾನವ ಸಮಾಜದ ನಿಧಾನವಾದ ಬೆಳವಣಿಗೆ, ಅವಶ್ಯಕತೆಗಳು ಮತ್ತು ಸವಾಲುಗಳಿಂದ ರೂಪುಗೊಂಡ ಒಂದು ವ್ಯವಸ್ಥೆ. ಈ ವಿಷಯವನ್ನು ಸರಳವಾಗಿ ನೋಡಿದರೆ, “ರಾಜ್ಯ” ಮತ್ತು “ರಾಜರು” ಎಂಬ ಕಲ್ಪನೆ ಮಾನವರ ಸುರಕ್ಷತೆ, ಶಿಸ್ತು ಮತ್ತು ಸಂಘಟಿತ ಬದುಕಿನ ಅಗತ್ಯದಿಂದಲೇ ಹುಟ್ಟಿಕೊಂಡವು ಎಂದು ತಿಳಿಯಬಹುದಾಗಿದೆ.
ರಾಜರ
ಆಳ್ವಿಕೆಯ ಕಾಲ ಹೇಗೆ ಪ್ರಾರಂಭವಾಯಿತು?
ಪ್ರಾರಂಭಿಕವಾಗಿ ಮಾನವರು ಸಣ್ಣ ಸಣ್ಣ ಗುಂಪುಗಳಲ್ಲಿ (ಕುಲ, ಗೊತ್ರ) ಬದುಕುತ್ತಿದ್ದರು.
ಆಗ ಯಾವುದೇ ನಿಯಮ, ಆಡಳಿತ ವ್ಯವಸ್ಥೆ ಅಥವಾ ಕೇಂದ್ರ ನಾಯಕತ್ವ
ಇರಲಿಲ್ಲ. ಆದರೆ ಕಾಲಕ್ರಮೇಣ ಕೆಲವು
ಪ್ರಮುಖ ಸಮಸ್ಯೆಗಳು ಎದುರಾದವು:
- ಆಹಾರಕ್ಕಾಗಿ
ಸ್ಪರ್ಧೆ.
- ನೆಲದ
(ಭೂಮಿ) ಹಕ್ಕಿನ ವಿವಾದಗಳು.
- ಹೊರಗಿನ
ಗುಂಪುಗಳಿಂದ ದಾಳಿ.
- ಒಳಗಿನ
ಕಲಹಗಳು.
ಈ ಸಮಸ್ಯೆಗಳನ್ನು ನಿಯಂತ್ರಿಸಲು ಒಂದು ಶಕ್ತಿಶಾಲಿ ನಾಯಕನ ಅವಶ್ಯಕತೆ ಉಂಟಾಯಿತು. ಈ ನಾಯಕನು ನಿಧಾನವಾಗಿ “ಮುಖ್ಯಸ್ಥ”ನಿಂದ “ರಾಜ”ನಾಗಿ ರೂಪುಗೊಂಡನು.
ರಾಜರ
ಆಳ್ವಿಕೆಯ ಉದಯಕ್ಕೆ ಕಾರಣಗಳು.
1. ಭದ್ರತೆ ಮತ್ತು ರಕ್ಷಣೆಯ ಅಗತ್ಯ.
ಮಾನವರು ಕೃಷಿಯನ್ನು ಪ್ರಾರಂಭಿಸಿದ ನಂತರ, ಸಮುದಾಯವಾಗಿ ಒಂದೇ ಸ್ಥಳದಲ್ಲಿ ನೆಲೆಸಲು ಶುರುಮಾಡಿದರು. ಇದರಿಂದ ಅವರ ಮೇಲೆ ದಾಳಿಗಳ ಸಾಧ್ಯತೆ ಹೆಚ್ಚಾಯಿತು. ಹಾಗಾಗಿ ಹಳ್ಳಿಗಳನ್ನು ಮತ್ತು ನಗರಗಳನ್ನು ಶತ್ರುಗಳಿಂದ ಕಾಪಾಡಲು, ಒಬ್ಬ ಶಕ್ತಿಶಾಲಿ ನಾಯಕನ ಅಗತ್ಯವಾಯಿತು. ಇದರಿಂದ ರಾಜತಂತ್ರ (Monarchy) ಬೆಳವಣಿಗೆ ಕಂಡಿತು.
2. ಕೃಷಿ ಮತ್ತು ಆರ್ಥಿಕ ವ್ಯವಸ್ಥೆ
ಕೃಷಿಯ
ಬೆಳವಣಿಗೆಯೊಂದಿಗೆ ಭೂಮಿಯ ಮಹತ್ವ ಹೆಚ್ಚಾಯಿತು.
- ನೀರಾವರಿ
ವ್ಯವಸ್ಥೆ.
- ಬೆಳೆಯ
ಸಂಗ್ರಹಣೆ.
- ತೆರಿಗೆ
ಸಂಗ್ರಹಣೆ.
ಈ ಎಲ್ಲವನ್ನು ನಿಯಂತ್ರಿಸಲು ಒಂದು ಕೇಂದ್ರ ಆಡಳಿತ ವ್ಯವಸ್ಥೆ ಬೇಕಾಯಿತು. ಇದರ ಅಗತ್ಯತೆಯನ್ನು ಮನಗಂಡ ರಾಜರು ಈ ವ್ಯವಸ್ಥೆಯನ್ನು ನಿರ್ವಹಿಸಿದರು.
3. ಸಮಾಜದಲ್ಲಿ ಶಿಸ್ತು ಮತ್ತು ನಿಯಮಗಳು.
ಸಮಾಜದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಕಲಹಗಳು ಹೆಚ್ಚಾದವು. ಇದರಿಂದ ಕಾನೂನು ಮತ್ತು ನಿಯಮಗಳಲ್ಲಿ ನ್ಯಾಯ ನೀಡುವ ವ್ಯವಸ್ಥೆಯ ಅವಶ್ಯಕತೆ ಕಾರಣ ರಾಜರು ನ್ಯಾಯಾಧೀಶರಾಗಿ ಕೆಲಸ ಮಾಡಿ ಸಮಾಜದಲ್ಲಿ ಶಿಸ್ತು ತರಲು ಸಹಾಯ ಮಾಡಿದರು.
4. ಧರ್ಮದ ಪ್ರಭಾವ.
ಹಳೆಯ ಕಾಲದಲ್ಲಿ ಧರ್ಮವು ರಾಜಕೀಯದ ಜೊತೆಗೂಡಿ ಇತ್ತು. ರಾಜರನ್ನು ದೇವರ ಪ್ರತಿನಿಧಿಗಳೆಂದು ಪರಿಗಣಿಸಲಾಗುತ್ತಿತ್ತು. ಜನರು ರಾಜನಿಗೆ ವಿಧೇಯರಾಗಲು ಧಾರ್ಮಿಕ ಕಾರಣಗಳು ಸಹ ಸಹಕಾರಿಯಾದವು. ಇದರಿಂದ ರಾಜರ ಸ್ಥಾನ ಮತ್ತಷ್ಟು ಬಲವತ್ತಾಯಿತು.
5. ಯುದ್ಧ ಮತ್ತು ವಿಸ್ತರಣೆ.
ವಿವಿಧ ಗುಂಪುಗಳು ತಮ್ಮ ಪ್ರಭಾವವನ್ನು ಮತ್ತೊಂದು ಗುಂಪುಗಳ ಮೇಲೆ ವಿಸ್ತರಿಸಲು ಯುದ್ಧಗಳನ್ನು ನಡೆಸುತ್ತಿದ್ದರು. ಜಯಗಳಿಸಿದ ನಾಯಕರು ದೊಡ್ಡ ಪ್ರದೇಶಗಳನ್ನು ಆಳಲು ಪ್ರಾರಂಭಿಸಿದರು. ಸಣ್ಣ
ರಾಜ್ಯಗಳು ಸೇರಿ ದೊಡ್ಡ ಸಾಮ್ರಾಜ್ಯಗಳಾಗಿ
ರೂಪುಗೊಂಡವು. ಇದರಿಂದ ರಾಜರ ಶಕ್ತಿ ಹೆಚ್ಚಿತು.
6. ನಾಯಕತ್ವದ ಗುಣಗಳು.
ಕೆಲವರು ತಮ್ಮ ಧೈರ್ಯ, ಬುದ್ಧಿವಂತಿಕೆ ಮತ್ತು ಯುದ್ಧಕೌಶಲ್ಯದಿಂದ ಜನರ ವಿಶ್ವಾಸ ಗಳಿಸಿದರು. ಜನರು ಅವರನ್ನು ನಾಯಕರೆಂದು ಒಪ್ಪಿಕೊಂಡರು. ಅವರ ಕುಟುಂಬವು ಮುಂದಿನ ತಲೆಮಾರುಗಳ ಕಾಲ ಆಡಳಿತ ಮುಂದುವರಿಸಿತು. ಇದರಿಂದ ವಂಶಪಾರಂಪರ್ಯ ಆಡಳಿತ (hereditary monarchy) ಪ್ರಾರಂಭವಾಯಿತು.
ರಾಜತಂತ್ರದ
ಸ್ಥಿರತೆ ಹೇಗೆ ಬೆಳೆದಿತು?
ರಾಜರ
ಆಳ್ವಿಕೆಯು ದೀರ್ಘಕಾಲ ಉಳಿಯಲು ಕೆಲವು ವ್ಯವಸ್ಥೆಗಳು ಸಹಕಾರಿಯಾದವು.
- ಸೇನೆ
(Army).
- ಅಧಿಕಾರಿಗಳು
(Officials).
- ತೆರಿಗೆ
ವ್ಯವಸ್ಥೆ.
- ಕಾನೂನು
ಮತ್ತು ನ್ಯಾಯ ವ್ಯವಸ್ಥೆ.
ಈ ಎಲ್ಲಾ ಅಂಶಗಳು ಸೇರಿ ರಾಜ್ಯವನ್ನು ಬಲಪಡಿಸಿದವು.
ರಾಜರ
ಆಳ್ವಿಕೆಯ ಪರಿಣಾಮಗಳು.
ಸಕಾರಾತ್ಮಕ
ಪರಿಣಾಮಗಳು.
- ಸಮಾಜದಲ್ಲಿ
ಶಿಸ್ತು ಮತ್ತು ಸ್ಥಿರತೆ.
- ಕಲೆ,
ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಬೆಳವಣಿಗೆ.
- ವ್ಯಾಪಾರ
ಮತ್ತು ಆರ್ಥಿಕ ಅಭಿವೃದ್ಧಿ.
ನಕಾರಾತ್ಮಕ
ಪರಿಣಾಮಗಳು
- ಅಧಿಕಾರದ
ದುರುಪಯೋಗ.
- ಜನರ
ಸ್ವಾತಂತ್ರ್ಯದ ಕೊರತೆ.
- ಯುದ್ಧಗಳು
ಮತ್ತು ಹಿಂಸಾಚಾರ.
ಮಧ್ಯಯುಗ
ಎಂದರೇನು?
ಮಧ್ಯಯುಗವು ಪ್ರಾಚೀನ ಇತಿಹಾಸ ಮತ್ತು ಆಧುನಿಕ ಇತಿಹಾಸದ ನಡುವಿನ ಹಂತವಾಗಿದೆ. ಸಾಮಾನ್ಯವಾಗಿ ಕ್ರಿ.ಶ. 6ನೇ
ಶತಮಾನದಿಂದ 16ನೇ ಶತಮಾನದವರೆಗೆ ಇರುವ
ಕಾಲವನ್ನು ಮಧ್ಯಯುಗ ಎಂದು ಕರೆಯಲಾಗುತ್ತದೆ. ಈ
ಸಮಯದಲ್ಲಿ ರಾಜಕೀಯ ಶಕ್ತಿಗಳು ಬದಲಾಗುತ್ತಾ, ಹೊಸ ಸಾಮ್ರಾಜ್ಯಗಳು ಹುಟ್ಟಿಕೊಂಡು,
ಕೆಲವು ಪತನಗೊಂಡವು.
ಸಾಮ್ರಾಜ್ಯಗಳ
ಉದಯ ಮತ್ತು ಪತನ
ಮಧ್ಯಯುಗದ
ಪ್ರಮುಖ ಲಕ್ಷಣವೇ ಸಾಮ್ರಾಜ್ಯಗಳ ಉದಯ ಮತ್ತು ಪತನ.
ಈ ಕಾಲದಲ್ಲಿ ಹಲವು ಶಕ್ತಿಶಾಲಿ ರಾಜರು
ಮತ್ತು ಸಾಮ್ರಾಜ್ಯಗಳು ಉದಯಿಸಿ, ತಮ್ಮ ಆಡಳಿತವನ್ನು ವಿಸ್ತರಿಸಿದವು.
ರಾಜತಂತ್ರದಿಂದ
ಪ್ರಜಾಪ್ರಭುತ್ವಕ್ಕೆ—ಒಂದು ಸಹಜ ಪರಿವರ್ತನೆ
ಆದಿಯಲ್ಲಿ,
ಎಲ್ಲಾ ಅಧಿಕಾರವೂ ರಾಜನ ಕೈಯಲ್ಲಿ ಕೇಂದ್ರೀಕೃತವಾಗಿತ್ತು.
- ರಾಜನೇ
ಕಾನೂನು ರೂಪಿಸುತ್ತಿದ್ದ.
- ರಾಜನೇ
ನ್ಯಾಯ ತೀರ್ಪು ನೀಡುತ್ತಿದ್ದ.
- ರಾಜನೇ
ಸೇನೆಯನ್ನು ನಿಯಂತ್ರಿಸುತ್ತಿದ್ದ.
ಈ
“ಸಂಪೂರ್ಣ ಅಧಿಕಾರ” ವ್ಯವಸ್ಥೆ ಕಾಲಕ್ರಮೇಣ ಸಮಸ್ಯೆಗಳನ್ನು ಹುಟ್ಟಿಸಿತು. ಜನರಲ್ಲಿ ಅಸಮಾಧಾನ ಹೆಚ್ಚಿತು. ಈ ಅಸಮಾಧಾನವೇ ಪ್ರಜಾಪ್ರಭುತ್ವದ
ಬೀಜ ಬಿತ್ತಿತು.
1. ಅಧಿಕಾರದ ದುರುಪಯೋಗದಿಂದ ಜನಜಾಗೃತಿ.
ರಾಜತಂತ್ರದಲ್ಲಿ
ಕೆಲವು ರಾಜರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡರು.
- ಹೆಚ್ಚುವರಿ
ತೆರಿಗೆ.
- ಅನ್ಯಾಯ
ತೀರ್ಪುಗಳು.
- ಜನರ
ಸ್ವಾತಂತ್ರ್ಯಕ್ಕೆ ಅಡ್ಡಿ.
ಈ
ಸಂದರ್ಭಗಳಲ್ಲಿ ಜನರು ಪ್ರಶ್ನಿಸಲು ಪ್ರಾರಂಭಿಸಿದರು:
“ರಾಜನಿಗೆ ಮಾತ್ರ ಎಲ್ಲಾ ಅಧಿಕಾರವು ಯಾಕೆ?”
ಈ
ಪ್ರಶ್ನೆಯೇ ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು
ಮೂಡಿಸಿತು. ಇದು ಪ್ರಜಾಪ್ರಭುತ್ವದ ಮೊದಲ
ಹೆಜ್ಜೆ.
2. ಕಾನೂನು ಮತ್ತು ಹಕ್ಕುಗಳ ಅಭಿವೃದ್ಧಿ.
ರಾಜತಂತ್ರದ
ಕಾಲದಲ್ಲೇ ಕೆಲವು ಮಹತ್ವದ ಕಾನೂನುಗಳ ಕಲ್ಪನೆಗಳು ಹುಟ್ಟಿಕೊಂಡವು.
- ಎಲ್ಲರಿಗೂ
ಒಂದೇ ಕಾನೂನು.
- ನ್ಯಾಯದ
ಅವಶ್ಯಕತೆ.
- ಸುಭದ್ರ
ಆಡಳಿತಕ್ಕೆ ನಿಯಮಗಳು.
ಉದಾಹರಣೆಗೆ, ಇಂಗ್ಲೆಂಡ್ನಲ್ಲಿ ರಾಜನ ಅಧಿಕಾರವನ್ನು ನಿಯಂತ್ರಿಸಲು
“ಮ್ಯಾಗ್ನಾ ಕಾರ್ಟಾ” ಎಂಬ ಒಪ್ಪಂದ ಜಾರಿಯಾಯಿತು.
ಇದು “ರಾಜನಿಗೂ ಕಾನೂನು ಇದೆ” ಎಂಬ ತತ್ವವನ್ನು
ಪರಿಚಯಿಸಿತು. ಇದು ಮುಂದಿನ ಪ್ರಜಾಪ್ರಭುತ್ವದ
ಮೂಲ ಸಿದ್ಧಾಂತವಾಯಿತು.
3. ಪ್ರತಿನಿಧಿತ್ವದ ಕಲ್ಪನೆ.
ರಾಜನು ಒಬ್ಬನೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಸಚಿವರು, ಸಲಹೆಗಾರರು, ಸ್ಥಳೀಯ ನಾಯಕರುಗಳನ್ನು ಮುಖ್ಯಸ್ಥರನ್ನಾಗಿ ನಿಯೋಜಿಸಲಾಯಿತು.
ಇದು “ಜನರ ಪರವಾಗಿ ನಿರ್ಧಾರ
ಮಾಡುವವರು” ಎಂಬ ಕಲ್ಪನೆಯನ್ನು ಹುಟ್ಟಿಸಿತು.
ಮತ್ತು ಈ ಕಲ್ಪನೆ ಮುಂದಿನ ದಿನಗಳಲ್ಲಿ ಚುನಾವಣಾ ವ್ಯವಸ್ಥೆಯಾಗಿ ರೂಪುಗೊಂಡಿತು.
4. ಸಭೆಗಳು ಮತ್ತು ಸಂಸತ್ತಿನ ಹುಟ್ಟು.
ಕೆಲವು ರಾಜರು ಜನರ ಅಭಿಪ್ರಾಯವನ್ನು ಕೇಳಲು
ಸಭೆಗಳನ್ನು ನಡೆಸಿದರು. ಉದಾಹರಣೆಗೆ, ಇಂಗ್ಲೆಂಡ್ನಲ್ಲಿ ಸಂಸತ್ ವ್ಯವಸ್ಥೆ ಮತ್ತು ಯೂರೋಪಿನಲ್ಲಿ ಪ್ರತಿನಿಧಿ ಸಭೆಗಳು. ಈ ಸಭೆಗಳು ಆರಂಭದಲ್ಲಿ
ರಾಜನ ಸಲಹಾ ಮಂಡಳಿಗಳಾಗಿದ್ದರೂ, ನಂತರ
ಸ್ವತಂತ್ರ ಶಕ್ತಿಯನ್ನೂ ಪಡೆದುಕೊಂಡವು. ಇದು ಇಂದಿನ ಸಂಸತ್
ವ್ಯವಸ್ಥೆಯ ಮೂಲವಾಗಿದೆ.
5. ಕ್ರಾಂತಿಗಳು ಮತ್ತು ಬದಲಾವಣೆಗಳು.
ರಾಜತಂತ್ರದ
ವಿರುದ್ಧ ಜನರ ಅಸಮಾಧಾನ ಕ್ರಾಂತಿಗಳಿಗೆ
ಕಾರಣವಾಯಿತು.
- ಇಂಗ್ಲೆಂಡ್
ಕ್ರಾಂತಿ.
- ಅಮೇರಿಕನ್
ಕ್ರಾಂತಿ.
- ಫ್ರೆಂಚ್
ಕ್ರಾಂತಿ.
- ಭಾರತದ
ಸ್ವಾತಂತ್ರ ಹೋರಾಟ.
ಈ
ಕ್ರಾಂತಿಗಳು “ಅಧಿಕಾರ
ಜನರದ್ದು” ಎಂಬ ಮಹತ್ವದ ಸಂದೇಶ
ನೀಡಿದವು. ಇದು ಪ್ರಜಾಪ್ರಭುತ್ವದ ಪ್ರಮುಖ
ತತ್ವವಾಗಿದೆ.
6. ಸಮಾನತೆ ಮತ್ತು ಸ್ವಾತಂತ್ರ್ಯದ ಕಲ್ಪನೆ.
ರಾಜತಂತ್ರ
ಅಧಿಕಾರಾವಧಿಯಲ್ಲಿ, ಸಮಾಜದಲ್ಲಿ
ಅಸಮಾನತೆ ಹೆಚ್ಚಾಗಿತ್ತು.
- ಶ್ರೀಮಂತರು
vs ಬಡವರು.
- ಉನ್ನತ
ವರ್ಗ vs ಸಾಮಾನ್ಯ ಜನ.
ಈ ಅಸಮಾನತೆಯ ವಿರುದ್ಧ
ಜನರು ಹೋರಾಡಿದರು. ಇದರ ಫಲವಾಗಿ, ಸಮಾನತೆ, ಸ್ವಾತಂತ್ರ್ಯದಂತಹ ಮೌಲ್ಯಯುತ ಹಕ್ಕುಗಳು
ಬೆಳವಣಿಗೆ ಕಂಡವು. ಇವು ಪ್ರಜಾಪ್ರಭುತ್ವದ ಅಡಿಪಾಯವಾಗಿವೆ.
7. ಆಡಳಿತ ವ್ಯವಸ್ಥೆಯ ಪರಿಷ್ಕರಣೆ.
ರಾಜ ಮಹಾರಾಜರ ಆಳ್ವಿಕೆಯ ಅವಧಿಯ ಅನುಭವದಿಂದ ಜನರು, ಒಂದು ವ್ಯಕ್ತಿಗೆ ಸಂಪೂರ್ಣವಾಗಿ ಅಧಿಕಾರ ಕೊಡುವುದು ಅಪಾಯಕಾರಿ ಎಂದು ಅರಿತುಕೊಂಡದ್ದರಿಂದ, ಅಧಿಕಾರ ವಿಭಜನೆ (Executive,
Legislature, Judiciary), ನಿಯಂತ್ರಣ
ಮತ್ತು ಸಮತೋಲನ (Checks and Balances)
ವ್ಯವಸ್ಥೆಗಳು
ರೂಪುಗೊಂಡವು.
ಪ್ರಜಾಪ್ರಭುತ್ವಕ್ಕೆ
ರಾಜತಂತ್ರಗಳ ಕೊಡುಗೆ.
ರಾಜರ
ಆಳ್ವಿಕೆಯಲ್ಲಿ ಅನುಸರಿಸಲಾಗುತ್ತಿದ್ದ ವ್ಯವಸ್ಥೆಗಳು ನೇರವಾಗಿ ಪ್ರಜಾಪ್ರಭುತ್ವವಲ್ಲ,
ಆದರೆ ಅವು ಕೆಲವು ಮುಖ್ಯ
ಅಂಶಗಳನ್ನು ಮೂಲ ಅಡಿಪಾಯವಾಗಿ
ಕೊಟ್ಟಿವೆ.
- ಆಡಳಿತ
ವ್ಯವಸ್ಥೆಯ ಮೂಲ.
- ಕಾನೂನು
ಮತ್ತು ನ್ಯಾಯದ ಕಲ್ಪನೆ.
- ತೆರಿಗೆ
ಮತ್ತು ಆರ್ಥಿಕ ವ್ಯವಸ್ಥೆ.
- ಸೇನೆ
ಮತ್ತು ಭದ್ರತಾ ವ್ಯವಸ್ಥೆ.
ಈ
ಅಂಶಗಳನ್ನು ಸುಧಾರಿಸಿ ಪ್ರಜಾಪ್ರಭುತ್ವ ರೂಪುಗೊಂಡಿತು.
ಪ್ರಜಾಪ್ರಭುತ್ವವು ಒಂದು ದಿನದಲ್ಲಿ ಹುಟ್ಟಿದ
ವ್ಯವಸ್ಥೆಯಲ್ಲ. ಅದು ರಾಜತಂತ್ರಗಳ ಅನುಭವ,
ತಪ್ಪುಗಳು ಮತ್ತು ಸುಧಾರಣೆಗಳಿಂದ ನಿಧಾನವಾಗಿ ಬೆಳೆಯಿತು.
ಪ್ರಜಾಪ್ರಭುತ್ವ (Democracy) ಮತ್ತು ರಾಜತಂತ್ರ (Monarchy) ಒಂದಕ್ಕೊಂದು ವಿರುದ್ಧವಾದ ವ್ಯವಸ್ಥೆಗಳಂತೆ ಕಾಣಬಹುದು. ಆದರೆ ಇತಿಹಾಸವನ್ನು ಆಳವಾಗಿ
ನೋಡಿದರೆ, ಪ್ರಜಾಪ್ರಭುತ್ವವು ಶೂನ್ಯದಿಂದ ಹುಟ್ಟಿಕೊಂಡುದಲ್ಲ—ಅದು ರಾಜತಂತ್ರಗಳ ಅನುಭವ,
ಸವಾಲುಗಳು ಮತ್ತು ಬದಲಾವಣೆಗಳ ಫಲವಾಗಿದೆ. ಅಂದರೆ, ರಾಜತಂತ್ರಗಳು ಪ್ರಜಾಪ್ರಭುತ್ವಕ್ಕೆ ಪೂರಕ ನೆಲೆಯನ್ನು ಹಾಕಿದವು.
ಆದ್ದರಿಂದ, ರಾಜರ ಕಾಲದ ಆಡಳಿತವನ್ನು ಪ್ರಜಾಪ್ರಭುತ್ವದ ಶತ್ರುವಾಗಿ ನೋಡುವುದಕ್ಕಿಂತ, ಅದರ ಬೆಳವಣಿಗೆಗೆ ಕಾರಣವಾದ
ಹಂತವಾಗಿ ನೋಡುವುದು ಸೂಕ್ತ.
ರಾಜಾಳ್ವಿಕೆಯು
“ಒಬ್ಬನ ಆಡಳಿತ” ಆಗಿದ್ದರೆ, ಪ್ರಜಾಪ್ರಭುತ್ವವು “ಜನರ ಆಡಳಿತ”ವಾಗಿದೆ.Bottom of Form
ಮಧ್ಯಯುಗದಲ್ಲಿ
ಧಾರ್ಮಿಕ ಬದಲಾವಣೆಗಳು ಮತ್ತು ಸಾಮಾಜಿಕ ಸ್ಥಿತಿಗತಿಗಳು.
ಮಧ್ಯಯುಗ (ಸುಮಾರು ಕ್ರಿ.ಶ. 6ನೇ
ಶತಮಾನದಿಂದ 16ನೇ ಶತಮಾನ)ವು
ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಆಳವಾದ
ಪರಿವರ್ತನೆಗಳನ್ನು ಕಂಡ ಕಾಲ. ಈ
ಹಂತದಲ್ಲಿ ಧರ್ಮ ಮತ್ತು ಸಮಾಜ
ಪರಸ್ಪರವಾಗಿ ಪ್ರಭಾವಿತಗೊಂಡು, ಜನರ ಬದುಕು, ಆಚಾರ-ವಿಚಾರ, ಸಂಸ್ಕೃತಿ ಮತ್ತು ರಾಜಕೀಯವನ್ನು ರೂಪಿಸಿದವು. ಧಾರ್ಮಿಕ ಚಳುವಳಿಗಳು ಹೊಸ ಮೌಲ್ಯಗಳನ್ನು ಪರಿಚಯಿಸಿದರೆ,
ಸಾಮಾಜಿಕ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ಬದಲಾವಣೆಯೂ ಒಂದೇ ಸಮಯದಲ್ಲಿ ಕಂಡುಬಂತು.
“ಮಧ್ಯಯುಗದ ಗ್ರಾಮೀಣ ‘ಸಮಯ ವ್ಯವಸ್ಥೆ’ ಮತ್ತು ದಿನಚರಿ” ಒಂದು ಅಪರೂಪದ ಕಥೆ.
ಮಾನವ ಜೀವನವು ಇಂದಿನಂತೆ ಗಡಿಯಾರ,
ಮೊಬೈಲ್, ಅಲಾರಂ, ಕ್ಯಾಲೆಂಡರ್, ಡಿಜಿಟಲ್ ವೇಳಾಪಟ್ಟಿ ಯಾವುದೂ ಇಲ್ಲದ ಕಾಲ ಅದು. ಆದರೆ
ಮಧ್ಯಯುಗದ ಜನರು ಸಮಯವನ್ನು ಹೇಗೆ
ಅಳೆಯುತ್ತಿದ್ದರು? ಅವರ ದಿನ ಹೇಗೆ
ಸಾಗುತ್ತಿತ್ತು? ಇದು ಬಹಳ ಆಸಕ್ತಿದಾಯಕ
ವಿಷಯ.
ಆದರೆ ಆಶ್ಚರ್ಯಕರವಾಗಿ, ಅವರ
ಜೀವನ ತುಂಬಾ ವ್ಯವಸ್ಥಿತವಾಗಿತ್ತು. ಈ ವ್ಯವಸ್ಥೆಯ ಮೂಲ
“ಪ್ರಕೃತಿ” ಆಗಿತ್ತು.ಇಂದು ನಾವು ನಿಮಿಷ,
ಸೆಕೆಂಡ್ಗಳ ಮಟ್ಟದಲ್ಲಿ ಸಮಯ
ಅಳೆಯುತ್ತೇವೆ. ಆದರೆ ಮಧ್ಯಯುಗದ ಜನರು
ಸಮಯವನ್ನು “ಅನುಭವ” ಮತ್ತು “ಸಂಕೇತ”ಗಳ ಮೂಲಕ ಅಳೆಯುತ್ತಿದ್ದರು.
ಗಡಿಯಾರ
ಇಲ್ಲದೆ, ಕಾಲ ಸಮಯವನ್ನು
ಹೇಗೆ ತಿಳಿದುಕೊಳ್ಳುತ್ತಿದ್ದರು?
ಮಧ್ಯಯುಗದಲ್ಲಿ ಸಾಮಾನ್ಯ ಜನರಿಗೆ ಗಡಿಯಾರ ಎಂಬುದು ಇರಲಿಲ್ಲ. ಆದರೂ ಅವರು ಸಮಯವನ್ನು
ನಿಖರವಾಗಿ ಅಳೆಯುವ ತಮ್ಮದೇ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದರು:
1. ಸೂರ್ಯವನ್ನು
ನೋಡುತ್ತಾ ಸಮಯ ತಿಳಿಯುವುದು.
- ಬೆಳಗಿನ
ಸೂರ್ಯೋದಯ = ದಿನದ ಆರಂಭ/ಮುಂಜಾನೆ.
- ಮಧ್ಯಾಹ್ನ
ಸೂರ್ಯ ನೆತ್ತಿಯ ಮೇಲೆ = ಮಧ್ಯಾಹ್ನ.
- ಸೂರ್ಯಾಸ್ತ
= ದಿನದ ಅಂತ್ಯ/ಸಂಜೆ.
ಇನ್ನೂ ಕೆಲವು ಗ್ರಾಮಗಳಲ್ಲಿ ಜನರು “ನೆರಳಿನ ಉದ್ದ” ನೋಡಿ ಸಮಯದ ಅಂದಾಜು
ಮಾಡುತ್ತಿದ್ದರು. ನೆರಳು ಚಿಕ್ಕದಾದರೆ = ಮಧ್ಯಾಹ್ನ, ನೆರಳು ಉದ್ದವಾದರೆ = ಬೆಳಗ್ಗೆ ಅಥವಾ ಸಂಜೆಇದು ನಿಜಕ್ಕೂ
ಒಂದು ಪ್ರಕೃತಿ ಆಧಾರಿತ ವಿಜ್ಞಾನವೇ ಆಗಿತ್ತು.
2. ಪ್ರಕೃತಿ ಸೂಚನೆಗಳು.
- ಕೋಳಿಯು
ಕೂಗಿದಾಗ ಬೆಳಗಾಯಿತೆಂದು ತಿಳಿಯುತ್ತಿದ್ದರು.
- ಪಕ್ಷಿಗಳ
ಚಿಲಿಪಿಲಿ ಕೂಗು = ಬೆಳಗಿನ ಕೆಲಸದ ಸಮಯವಾಯಿತೆಂದು ಹೊರಡುವುದು.
- ಹಸುಗಳು
ಕೊಟ್ಟಿಗೆಗೆ ಹಿಂತಿರುಗಿದಾಗ, ಸಂಜೆಯಾಯಿತೆಂದು ತಿಳಿಯುತ್ತಿದ್ದರು.
ಇವುಗಳು
ಅವರ “ಜೀವಂತ ಗಡಿಯಾರ” ಆಗಿದ್ದವು.
3. ದೇವಸ್ಥಾನ ಮತ್ತು ಮಸೀದಿ ಸೂಚನೆಗಳು.
ದೇವಾಲಯದ ಘಂಟೆ, ಮಸೀದಿಯ ಅಜಾನ್ ಕೂಗುವ ಸಮಯ, ಇವು ದಿನದ ಸಮಯವನ್ನು ತಿಳಿಸುವ
ಪ್ರಮುಖ ಸಂಕೇತಗಳಾಗಿದ್ದವು. ಇದು ಕೇವಲ ಧಾರ್ಮಿಕ
ಕಾರ್ಯವಲ್ಲ, ಒಂದು “ಸಾಮಾಜಿಕ ಸಮಯ ವ್ಯವಸ್ಥೆ” ಆಗಿತ್ತು.
ಮಧ್ಯಯುಗದಲ್ಲಿನ ದಿನಚರಿಯಂತೆ,
ಒಂದು ಸಾಮಾನ್ಯ ರೈತನ ಜೀವನವನ್ನು ಕಲ್ಪಿಸಿ ನೋಡುವುದಾದರೆ, ಬೆಳಗ್ಗೆ
ಸೂರ್ಯೋದಯದ ವೇಳೆಯ ಕೋಳಿ ಕೂಗಿಗೆ
ಎಚ್ಚರಿಕೆಗೊಂಡು ನಿತ್ಯದ ಕೆಲಸಗಳನ್ನು
ಪ್ರಾರಂಭಿಸುವುದು, ಜಾನುವಾರುಗಳ ಆರೈಕೆ ಮಾಡುವುದು. ಮತ್ತು ಹೊಲಕ್ಕೆ ತೆರಳುವುದು.
ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುವಾಗ
ಮಧ್ಯಾಹ್ನದ ಹೊತ್ತಿನಲ್ಲಿ,ಹೊಲದಲ್ಲಿ
ಕೆಲಸ ಮಾಡುತ್ತ, ಮರದ ನೆರಳಲ್ಲಿ ವಿಶ್ರಾಂತಿ ಪಡೆದು
ಸರಳ ಆಹಾರ ಸೇವಿಸುವುದು.
ಸಂಜೆ ಮನೆಗೆ ವಾಪಸ್ಸು ಹೊರಟು,
ಕುಟುಂಬದೊಂದಿಗೆ ಸಮಯ
ಕಳೆಯುತ್ತಾ ದೇವರ ಸ್ತುತಿ ಮತ್ತು ಪ್ರಾರ್ಥನಾ
ಗೀತೆಗಳನ್ನು ಹಾಡುವುದು. ರಾತ್ರಿ ಬೇಗನೆ
ನಿದ್ರೆ (ವಿದ್ಯುತ್ ಇಲ್ಲದ ಕಾರಣ).
ಇಲ್ಲಿ ಮುಖ್ಯವಾಗಿ ಗಮನಿಸುವುದು,
“8 ಗಂಟೆ ಕೆಲಸ – 8 ಗಂಟೆ ವಿಶ್ರಾಂತಿ” ಎಂಬ
ಕಲ್ಪನೆ ಇರಲಿಲ್ಲ. ಜೀವನ ಸಂಪೂರ್ಣವಾಗಿ ಪ್ರಕೃತಿಗೆ
ಹೊಂದಿಕೊಂಡಿತ್ತು.
ಇದು
ಒಂದು ರೀತಿಯಲ್ಲಿ “ಸಾಮಾಜಿಕ ವೇಳಾಪಟ್ಟಿ” ಆಗಿತ್ತು.
ಚಂದ್ರ
ಮತ್ತು ನಕ್ಷತ್ರಗಳು.
ರಾತ್ರಿ
ಸಮಯದಲ್ಲಿ, ಚಂದ್ರನ ಹಂತಗಳು (ಅಮಾವಾಸ್ಯೆ, ಪೂರ್ಣಿಮೆ). ನಕ್ಷತ್ರಗಳ ಸ್ಥಾನ.
ಇವುಗಳಿಂದ
ತಿಂಗಳು, ಹಬ್ಬಗಳು ಮತ್ತು ಕಾಲಮಾನ ನಿರ್ಧಾರವಾಗುತ್ತಿತ್ತು.
ಒಂದು
ಆಶ್ಚರ್ಯಕರ ವಿಷಯ – “ಎರಡು ಹಂತದ ನಿದ್ರೆ” (Segmented Sleep).
ಇದು ಬಹಳ ಅಪರೂಪದ
ಮತ್ತು ಆಸಕ್ತಿದಾಯಕ ಸಂಗತಿ. ಮಧ್ಯಯುಗದಲ್ಲಿ ಜನರು ಒಂದೇ ಬಾರಿ
7–8 ಗಂಟೆ ನಿದ್ರೆ ಮಾಡುತ್ತಿರಲಿಲ್ಲ. ಅವರು ಎರಡು ಹಂತಗಳಲ್ಲಿ
ನಿದ್ರೆ ಮಾಡುತ್ತಿದ್ದರು:
- ಮೊದಲ
ನಿದ್ರೆ (First
Sleep) – ಸಂಜೆಯಿಂದ
ಮಧ್ಯರಾತ್ರಿ ತನಕ.
- ಎರಡನೇ
ನಿದ್ರೆ (Second
Sleep) – ಮಧ್ಯರಾತ್ರಿಯಿಂದ
ಬೆಳಿಗ್ಗೆತನಕ.
ಮಧ್ಯದಲ್ಲಿ,
ಪ್ರಾರ್ಥನೆ, ಮಾತುಕತೆ, ಕೆಲವೊಮ್ಮೆ ಸಣ್ಣ ಕೆಲಸಗಳು ನಡೆಯುತ್ತಿದ್ದವು.
👉ಇದು ಇಂದಿನ
ವಿಜ್ಞಾನದಲ್ಲಿಯೂ
“natural sleep cycle” ಎಂದು
ಗುರುತಿಸಲಾಗಿದೆ!
ಕೆಲಸ
ಮತ್ತು ಸಮಯದ ಮೇಲೆ ಅವರ ಮನೋಭಾವ.
ಇಂದಿನಂತೆ
“deadline”, “productivity pressure” ಇರಲಿಲ್ಲ.
- ಕೆಲಸ
= ಜೀವನದ ಒಂದು ಭಾಗ.
- ಪ್ರಕೃತಿ
= ಮುಖ್ಯ ಮಾರ್ಗದರ್ಶಕ.
- ಸಮಯ
= ಕಟ್ಟುನಿಟ್ಟಾದ ಅಳತೆ ಅಲ್ಲ, ಅನುಭವ
ಈ
ವಿಚಾರಗಳು ಜೀವನವನ್ನು ಹೆಚ್ಚು
ಸಮತೋಲನಗೊಳಿಸುತ್ತಿತ್ತು.
ಸಮೂಹ
ಜೀವನ – ಸಮಯದ ಹಂಚಿಕೆ.
ಮಧ್ಯಯುಗದಲ್ಲಿ ಸಮಯವು ವೈಯಕ್ತಿಕವಾಗಿ ಪರಿಗಣಿಸಲ್ಪಡುತ್ತಿರಲಿಲ್ಲ.
ಗ್ರಾಮದಲ್ಲಿ ಒಟ್ಟಿಗೆ
ಕೆಲಸ, ಹಬ್ಬಗಳು, ಜಾತ್ರೆಗಳು, ನೀರಾವರಿ ಕೆಲಸಗಳಲ್ಲಿ ಸಹಕಾರ ಈ ರೀತಿ ಪರಸ್ಪರರಲ್ಲಿ ಸಹಕರಿಸಿಕೊಳ್ಳುವ
ಸಮೂಹದದ್ದಾಗಿತ್ತು.
👉 “Time = Community
rhythm” ಎಂಬ ಕಲ್ಪನೆ ಇತ್ತು.
ಈ ವ್ಯವಸ್ಥೆಯಿಂದಾಗಿ, ಜನರಲ್ಲಿ ಮಾನಸಿಕ ಒತ್ತಡ ಕಡಿಮೆ ಇತ್ತು. ಪ್ರಕೃತಿಯೊಂದಿಗಿನ ಹೊಂದಾಣಿಕೆಯಿಂದ ಸಮೂಹ ಜೀವನವು ಬಲವಾಗಿತ್ತು.
ಆದರೂ
ಇಲ್ಲೊಂದಷ್ಟು ಸಮಸ್ಯೆಗಳಿದ್ದವು. ವ್ಯಕ್ತಿಗತವಾದ ವೈಯಕ್ತಿಕ ಸ್ವಾತಂತ್ರ್ಯ ಕಡಿಮೆಯಿದ್ದು, ಕಾರ್ಯಕ್ಷಮತೆಗೆ ಮಿತಿಗಳನ್ನು ಹೇರಲಾಗಿತ್ತು. ಹಾಗೂ ಮುಖ್ಯವಾಗಿ
ಈಗಿನಂತೆ ಆಗ ತಂತ್ರಜ್ಞಾನ ಇರಲಿಲ್ಲ.
ಈ
ಮರೆಯಾದ ಮಧ್ಯಯುಗದ ಸಮಯ ವ್ಯವಸ್ಥೆಯು ನಮಗೆ
ಕೆಲವು ಮಹತ್ವದ ಪಾಠಗಳನ್ನು ಕೊಡುತ್ತದೆ:
- ಪ್ರಕೃತಿಯೊಂದಿಗೆ
ಹೊಂದಿಕೊಂಡು ನಡೆಸುವ
ಜೀವನ ಆರೋಗ್ಯಕರವಾಗಿರುತ್ತದೆ.
- ಮತ್ತು
ಹೆಚ್ಚು ಒತ್ತಡವಿಲ್ಲದ
ಕೆಲಸವಿರುವ ಜೀವನ ಉತ್ತಮ.
- ಸಮೂಹ
ಜೀವನದ ಮಹತ್ವವನ್ನು ಸಾರಿ ಹೇಳುತ್ತದೆ.
ಮಧ್ಯಯುಗದ ಇತಿಹಾಸವು ಕೇವಲ ರಾಜರು, ಯುದ್ಧಗಳು
ಮತ್ತು ಸಾಮ್ರಾಜ್ಯಗಳ ಕಥೆಯಷ್ಟೇ ಅಲ್ಲ; ಅದು ಮಾನವ ಜೀವನದ
ಪರಿವರ್ತನೆಯ ಕಥೆಯಾಗಿದೆ. ಈ ಕಾಲದಲ್ಲಿ ಹುಟ್ಟಿಕೊಂಡ
ರಾಜತಂತ್ರವು ಸಮಾಜಕ್ಕೆ ಶಿಸ್ತು ಮತ್ತು ವ್ಯವಸ್ಥೆಯನ್ನು ನೀಡಿದರೆ, ಅದೇ ಸಮಯದಲ್ಲಿ ಅದರ
ಮಿತಿಗಳು ಪ್ರಜಾಪ್ರಭುತ್ವದ ಅಗತ್ಯತೆಯನ್ನು ಹೊರಹಾಕಿದವು. ಧಾರ್ಮಿಕ ಚಳುವಳಿಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸಿದರೆ, ಸಾಮಾಜಿಕ ವ್ಯವಸ್ಥೆಗಳು ಸಹಬಾಳ್ವೆ ಮತ್ತು ಸಂಘರ್ಷಗಳೆರಡನ್ನೂ ತೋರಿಸಿವೆ.
ಇದಲ್ಲದೆ,
ಮಧ್ಯಯುಗದ ಸಾಮಾನ್ಯ ಜನರ ಸರಳ ಜೀವನಶೈಲಿ
— ಪ್ರಕೃತಿಯೊಂದಿಗೆ ಹೊಂದಿಕೊಂಡ ಸಮಯ ವ್ಯವಸ್ಥೆ, ಸಮೂಹ
ಜೀವನದ ಮಹತ್ವ — ಇವುಗಳು ಇಂದಿನ ವೇಗದ ಬದುಕಿಗೆ ಒಂದು
ಸಮತೋಲನದ ಸಂದೇಶ ನೀಡುತ್ತವೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೆಬ್ಸೈಟ್ ಗಳಿಗೆ ಭೇಟಿ ನೀಡಿ.👇
👉 ಅಂತಿಮವಾಗಿ, ಮಧ್ಯಯುಗವು
ಇತಿಹಾಸದ ಒಂದು ಅಧ್ಯಾಯವಷ್ಟೇ ಅಲ್ಲ;
ಅದು ನಮ್ಮ ಇಂದಿನ ಬದುಕಿನ
ಬೇರುಗಳನ್ನು ತಿಳಿಯುವ ದಾರಿ.
👉
“ಹಿಂದಿನ ಅನುಭವಗಳನ್ನು ಅರ್ಥಮಾಡಿಕೊಂಡಾಗ ಮಾತ್ರ, ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದು” ಎಂಬ ಪಾಠವನ್ನು ಈ
ಕಾಲವು ನಮಗೆ ನೀಡುತ್ತದೆ.
ಮುಕ್ತಾಯ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು