ಅನ್ವೇಷಣೆಗೆ ಕಾಯುತ್ತಿರುವ ಪ್ರಕೃತಿಯ ಅದ್ಭುತಗಳು – ಭಾರತದ Hidden Natural Wonders ಬಗ್ಗೆ 7 ಆಶ್ಚರ್ಯಕರ ಸ್ಥಳಗಳು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಅನ್ವೇಷಣೆಗೆ ಕಾಯುತ್ತಿರುವ ಪ್ರಕೃತಿಯ ಅದ್ಭುತಗಳು
ಲೇಖಕಿ:ನಾಗಲಕ್ಷ್ಮಿ ಕೆ. ಎನ್ ದಿನಾಂಕ:೦೮.೦೪.೨೦೨೬.
ಅನ್ವೇಷಣೆಗೆ
ಕಾಯುತ್ತಿರುವ ಪ್ರಕೃತಿಯ ಅದ್ಭುತಗಳು!!
ಪ್ರಕೃತಿ ನಮ್ಮ ಭೂಮಿಯ ಅತ್ಯಂತ
ಅದ್ಭುತ ಕಲಾವಿದೆ. ಅದರ ಸೃಷ್ಟಿಯಲ್ಲಿ ನಾವು
ಕಾಣುವ ಕೆಲವು ಸ್ಥಳಗಳು ಸಾಮಾನ್ಯವಾಗಿದ್ದರೆ, ಇನ್ನೂ ಕೆಲವು ಸ್ಥಳಗಳು ಅನ್ವೇಷಣೆ ಬಯಸುವ ಅಜ್ಞಾತ ಸೌಂದರ್ಯಗಳು ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ.
ಇವು ಪ್ರಕೃತಿಯ ವೈಚಿತ್ರ್ಯ, ವೈವಿಧ್ಯ ಮತ್ತು ಅದ್ಭುತ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ.
ಪ್ರಕೃತಿಯಿಂದ ನಿರ್ಮಿತವಾಗಿರುವ, ಅಪರೂಪದ ಮತ್ತು ವಿಶೇಷವಾದ ಸ್ಥಳಗಳಾದ ಇವು, ವಿಶಿಷ್ಟ ಭೂಗೋಳಿಕ ರಚನೆ, ಅಪರೂಪದ ಬಣ್ಣಗಳು ಅಥವಾ ಆಕಾರಗಳು, ವಿಜ್ಞಾನಕ್ಕೂ
ಸವಾಲಾಗುವ ರಹಸ್ಯಗಳು, ಅಪರೂಪದ ಜೀವ ವೈವಿಧ್ಯ ಇತ್ಯಾದಿ ಲಕ್ಷಣಗಳನ್ನು
ಹೊಂದಿರುತ್ತವೆ. ಈ ರೀತಿಯ ಸ್ಥಳಗಳು
ಪ್ರವಾಸಿಗರಿಗೆ ಮಾತ್ರವಲ್ಲ, ವಿಜ್ಞಾನಿಗಳಿಗೆ ಕೂಡ ಆಕರ್ಷಣೆಯಾಗಿವೆ.
ಪ್ರಪಂಚವು ಅಸಂಖ್ಯಾತ ಸೌಂದರ್ಯಗಳಿಂದ ತುಂಬಿದೆ. ಆದರೆ ನಾವು ಹೆಚ್ಚು
ಗಮನ ಹರಿಸುವುದು ಪ್ರಸಿದ್ಧ ಪ್ರವಾಸಿ ತಾಣಗಳ ಮೇಲಷ್ಟೇ. ಈ ಭೂಮಿಯ ಮೇಲೆ ಅನೇಕ ಅಜ್ಞಾತ ಸ್ಥಳಗಳು
(Hidden Places in the World), ಇನ್ನೂ
ಜನಸಂದಣಿಯಿಂದ ದೂರವಾಗಿದ್ದು, ಪ್ರಕೃತಿಯ ನೈಸರ್ಗಿಕ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿವೆ. ಈ ಲೇಖನದಲ್ಲಿ,
ಅಜ್ಞಾತ ಸೌಂದರ್ಯಗಳ ಕಥೆ (Unknown Natural
Wonders), ಅವುಗಳ ವಿಶಿಷ್ಟತೆ, ಮತ್ತು ಪ್ರವಾಸ ಪ್ರಿಯರಿಗೆ ಅವು ನೀಡುವ ಅನನ್ಯ
ಅನುಭವಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
1. ಅಜ್ಞಾತ ಸೌಂದರ್ಯ ಎಂದರೇನು?
ಅಜ್ಞಾತ ಸೌಂದರ್ಯ (Hidden Beauty) ಎಂದರೆ, ಇನ್ನೂ ವ್ಯಾಪಕವಾಗಿ ಜನರಿಗೆ ಪರಿಚಿತವಾಗದ, ಆದರೆ ಅದ್ಭುತವಾದ ಪ್ರಕೃತಿ
ಅಥವಾ ಮಾನವ ನಿರ್ಮಿತ ಸ್ಥಳಗಳು.
ಇವುಗಳಲ್ಲಿ.
- ಕಾಡಿನ
ಒಳಗಿನ ರಮಣೀಯ ಜಲಪಾತಗಳು.
- ಅಪರೂಪದ
ದ್ವೀಪಗಳು.
- ಗುಪ್ತ
ಪರ್ವತ ಪ್ರದೇಶಗಳು.
- ಸ್ಥಳೀಯ
ಸಂಸ್ಕೃತಿಯಿಂದ ತುಂಬಿರುವ ಹಳ್ಳಿಗಳು.
ಇಂತಹ
ಸ್ಥಳಗಳು "Offbeat
Travel Destinations" ಎಂಬ
ಹೆಸರಿನಿಂದಲೂ ಪ್ರಸಿದ್ಧವಾಗುತ್ತಿವೆ.
ಅನ್ವೇಷಣೆಗೆ
ಕಾಯುತ್ತಲಿರುವ, ಭಾರತದಲ್ಲಿ ಅಡಗಿರುವ ರತ್ನಗಳು.
ಭಾರತವು ವೈವಿಧ್ಯಮಯ ಭೌಗೋಳಿಕ ರೂಪಗಳು, ಸಂಸ್ಕೃತಿ,
ಹಾಗೂ ಜೈವಿಕ ವೈವಿಧ್ಯತೆಯ ದೇಶವಾಗಿದೆ. ಹಿಮಾಲಯದ ಹಿಮಾಚ್ಛಾದಿತ ಶಿಖರಗಳಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯ
ದಂಡೆಯ ಹಸಿರು ಅರಣ್ಯಗಳವರೆಗೆ, ಭಾರತದ ಪ್ರಕೃತಿಯು ಅನೇಕ ಅದ್ಭುತಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ.
ಇಲ್ಲಿ, ಇನ್ನೂ ಹೆಚ್ಚಿನ ಜನರಿಗೆ ತಿಳಿಯದ, ಅನ್ವೇಷಣೆಗೆ ಕಾಯುತ್ತಿರುವ ಭಾರತದ ಕೆಲ ಅಪರೂಪದ ಪ್ರಕೃತಿ
ಅದ್ಭುತಗಳನ್ನು ಅಧ್ಯಯನಾತ್ಮಕವಾಗಿ ಪರಿಶೀಲಿಸೋಣ.
ಲಿವಿಂಗ್
ರೂಟ್ ಬ್ರಿಡ್ಜ್‌ಗಳು (Living Root Bridges) ಜೀವಂತ ಸೇತುವೆಗಳು.
ಮೇಘಾಲಯ ರಾಜ್ಯದ ಚಿರಾಪುಂಜಿ ಮತ್ತು ಮಾವ್ಲಿನ್ನಾಂಗ್
ಪ್ರದೇಶಗಳಲ್ಲಿ ಕಂಡುಬರುವ ಲಿವಿಂಗ್ ರೂಟ್ ಬ್ರಿಡ್ಜ್‌ಗಳು (Living Root Bridges), ಪ್ರಕೃತಿ
ಮತ್ತು ಮಾನವ ಸಹಜ ಸಂಯೋಜನೆಯ ಅತ್ಯುತ್ತಮ ಉದಾಹರಣೆಗಳಾಗಿವೆ. ಇವು ಸಾಮಾನ್ಯ ಸೇತುವೆಗಳಂತೆ ಕಟ್ಟಲ್ಪಡುವುದಿಲ್ಲ;
ಬದಲಿಗೆ ಮರಗಳ ಜೀವಂತ ಬೇರುಗಳಿಂದ ವರ್ಷಗಳ ಕಾಲ ಬೆಳೆದು ಬೆಸೆಯಲ್ಪಡುತ್ತವೆ. ಈ ಪ್ರದೇಶವು ಭೂಮಿಯಲ್ಲೇ ಅತ್ಯಧಿಕ ಮಳೆಯಾಗುವ ಪ್ರದೇಶಗಳಲ್ಲಿ
ಒಂದಾಗಿದೆ.
ಈ ಸೇತುವೆಗಳು ರಬ್ಬರ್ ಮರಗಳ ಬೇರುಗಳನ್ನು ವರ್ಷಗಳ ಕಾಲ ತರಬೇತುಗೊಳಿಸಿದಾಗ ನಿರ್ಮಾಣವಾಗುತ್ತವೆ. ಇವುಗಳನ್ನು ಸ್ಥಳೀಯ ಖಾಸಿ (Khasi) ಜನಾಂಗದವರು ನಿರ್ಮಿಸುತ್ತಾರೆ. ಮೊದಲು ರಬ್ಬರ್ ಮರಗಳ (Ficus elastica) ಬೇರುಗಳನ್ನು ಆಯ್ಕೆ ಮಾಡುತ್ತಾರೆ. ಆ ಬೇರುಗಳನ್ನು ಬಿದಿರು ಅಥವಾ ಮರದ ಚೌಕಟ್ಟುಗಳ ಮೂಲಕ ನದಿಯ ಮೇಲೆ ದಿಕ್ಕು ನೀಡುತ್ತಾರೆ. ಹಾಗೆಯೇ ವರ್ಷಗಳ ಕಾಲ (15–30 ವರ್ಷ) ಬೆಳೆಸುತ್ತಾರೆ. ಬೇರುಗಳು ಬಲಿಷ್ಠವಾಗಿ ಬೆಳೆದಾಗ ಸೇತುವೆಯಾಗಿ ರೂಪುಗೊಳ್ಳುತ್ತದೆ. ಇದು ಒಂದು ನಿಧಾನವಾದ ಆದರೆ ಪರಿಸರ ಸ್ನೇಹಿ ಇಂಜಿನಿಯರಿಂಗ್ ತಂತ್ರಜ್ಞಾನ ಪ್ರಕ್ರಿಯೆಯಾಗಿದೆ.
ಪರಿಸರ ಸ್ನೇಹಿ ಪ್ರವಾಸ👇
https://www.capturingdaysoflife.com/2025/03/blog-post_26.html
ಈ ಲಿವಿಂಗ್ ರೂಟ್ ಬ್ರಿಡ್ಜ್ ಗಳ ವಿಶೇಷತೆಗಳೆಂದರೆ, ಸಂಪೂರ್ಣವಾಗಿ ಜೀವಂತ ಮತ್ತು ಬಲಿಷ್ಠವಾಗಿರುತ್ತವೆ. ಮಳೆಗಾಲದಲ್ಲೂ ಸುಲಭವಾಗಿ ಬಳಕೆಯಾಗುತ್ತವೆ. 500 ವರ್ಷಗಳವರೆಗೆ ಜೀವಿಸಬಲ್ಲ ಸಾಮರ್ಥ್ಯ ಹೊಂದಿವೆ. ಸಂಪೂರ್ಣವಾಗಿ ನೈಸರ್ಗಿಕ ಮತ್ತು ಸ್ಥಿರತೆಯನ್ನು ಹೊಂದಿವೆ.
ಜೀವಂತ ಬೇರುಗಳಿಂದ ನಿರ್ಮಿತ ಸೇತುವೆ
Lonar Crater Lake – ಉಲ್ಕಾಪಾತದ ರಹಸ್ಯ.
ಭಾರತದ
ಮಹಾರಾಷ್ಟ್ರ ರಾಜ್ಯದಲ್ಲಿರುವ ಲೋಣಾರ್ ಕ್ರೇಟರ್ ಸರೋವರವು
ವಿಶಿಷ್ಟ ಪ್ರಕೃತಿ ಅದ್ಭುತಗಳಲ್ಲಿ ಒಂದಾಗಿದ್ದು, ವಿಜ್ಞಾನಿಗಳಿಗೂ ಪ್ರವಾಸಿಗರಿಗೂ ಒಂದೇ ರೀತಿಯಲ್ಲಿ
ಆಕರ್ಷಣೀಯವಾಗಿದೆ. ಸುಮಾರು 50,000 ವರ್ಷಗಳ ಹಿಂದೆ ಉಲ್ಕಾಪಾತದಿಂದ ನಿರ್ಮಾಣಗೊಂಡ ಭೂಗರ್ಭಶಾಸ್ತ್ರೀಯ
ಅದ್ಭುತ. ಇದು ವಿಶ್ವದಲ್ಲಿನ ಅತ್ಯಂತ ಅಪರೂಪದ ಉಲ್ಕಾಪಾತ ಸರೋವರಗಳಲ್ಲಿ ಒಂದಾಗಿದೆ.
ಉಲ್ಕಾಪಾತದ
ವೈಜ್ಞಾನಿಕ ಮಹತ್ವ:
- ಉಪ್ಪು
ಮತ್ತು ಕ್ಷಾರೀಯ ನೀರಿನ ಗುಣ ಹೊಂದಿದೆ.
- ಅಪರೂಪದ
ಜೀವಾಣುಗಳು (extremophiles) ಇಲ್ಲಿ ಕಂಡುಬರುತ್ತವೆ.
- ಭೂಗರ್ಭಶಾಸ್ತ್ರ
ಮತ್ತು ಜೈವಿಕ ಸಂಶೋಧನೆಗೆ (Astrobiology) ಅಧ್ಯಯನಕ್ಕೆ ಉಪಯುಕ್ತ.
ಇದೇ
ಕಾರಣಕ್ಕೆ NASA ಸಹ ಈ ಪ್ರದೇಶದಲ್ಲಿ ಸಂಶೋಧನೆಗೆ ಆಸಕ್ತಿ ತೋರಿಸಿದೆ.
ಲೋಣಾರ್ ಸರೋವರದ ಸುತ್ತಮುತ್ತ, ಹಸಿರು ಕಾಡುಗಳು,
ವಿವಿಧ ಪಕ್ಷಿಗಳು ಮತ್ತು ಪ್ರಾಣಿಗಳು, ವಿಭಿನ್ನ ಸಸ್ಯ ಜಾತಿಗಳಿದ್ದು ಜೀವವೈವಿಧ್ಯತೆಗೆ ಉತ್ತಮ ಉದಾಹರಣೆ.
ಸರೋವರದ
ಸುತ್ತಮುತ್ತ ಅನೇಕ ಹಳೆಯ ದೇವಾಲಯಗಳು ಸಹ ಇವೆ.
- ದೈತ್ಯಸೂದನ
ದೇವಸ್ಥಾನ.
- ಕಾಮಲಾಜಾ
ದೇವಿ ದೇವಸ್ಥಾನ.
ಈ
ಪ್ರದೇಶವು ಧಾರ್ಮಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದಲೂ ಮಹತ್ವ ಹೊಂದಿದೆ.
ಇತ್ತೀಚಿನ
ವರ್ಷಗಳಲ್ಲಿ, ಮಾಲಿನ್ಯ, ನೀರಿನ ಬಣ್ಣ ಬದಲಾವಣೆ (ಕೆಲವೊಮ್ಮೆ ಗುಲಾಬಿ ಬಣ್ಣ), ಪ್ರವಾಸೋದ್ಯಮದ ಒತ್ತಡ,ಈ
ಕಾರಣಗಳಿಂದ ಸಂರಕ್ಷಣೆಯ ಅಗತ್ಯತೆ ಹೆಚ್ಚಾಗಿದೆ.
ಅಕ್ಟೋಬರ್‌ನಿಂದ
ಮಾರ್ಚ್‌ವರೆಗೆ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ
ಸಮಯವಾಗಿದೆ. ಕ್ರೇಟರ್‌ನೊಳಗೆ ಹೋಗಲು ಟ್ರೆಕ್ಕಿಂಗ್ ನ ರೀತಿಯ ಸಿದ್ಧತೆ ಅಗತ್ಯವಾಗುತ್ತದೆ. ಇಲ್ಲಿ ಹೋದಾಗ ಸೂರ್ಯಾಸ್ತದ ದೃಶ್ಯವನ್ನು ತಪ್ಪಿಸಿಕೊಳ್ಳಬೇಡಿ. ಪರಿಸರವನ್ನು
ಸ್ವಚ್ಛವಾಗಿರಿಸಿ ಸೂರ್ಯಾಸ್ತದ ದೃಶ್ಯವನ್ನು ತಪ್ಪಿಸಿಕೊಳ್ಳಬೇಡಿ.
ಲೋಣಾರ್ ಕ್ರೇಟರ್ ಸರೋವರವು ಪ್ರಕೃತಿ, ವಿಜ್ಞಾನ ಮತ್ತು ಇತಿಹಾಸದ ಅಪರೂಪದ ಸಂಯೋಜನೆ. ಇದು ಕೇವಲ ಒಂದು ಪ್ರವಾಸಿ ತಾಣವಲ್ಲ, ಭೂಮಿಯ ರಹಸ್ಯಗಳನ್ನು ಅನಾವರಣಗೊಳಿಸುವ ಜೀವಂತ ಪ್ರಯೋಗಾಲಯವಾಗಿದೆ.
ಲೋಣಾರ್ ಕ್ರೇಟರ್ ಸರೋವರ
Silent
Valley National Park – ಮೌನದ ಕಾಡಿನ ಮಾಯೆ.
ಭಾರತದ ಅತ್ಯಂತ ಅಪರೂಪದ ಹಾಗೂ ಸಂರಕ್ಷಿತವಾದ
ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಇದು ಪ್ರಕೃತಿಯ ಶುದ್ಧತೆಯನ್ನು ಇನ್ನೂ ಉಳಿಸಿಕೊಂಡಿರುವ ಸ್ಥಳವಾಗಿ
ಪ್ರಸಿದ್ಧವಾಗಿದೆ. ದಕ್ಷಿಣ ಭಾರತದ Kerala ರಾಜ್ಯದ ಪಶ್ಚಿಮಘಟ್ಟಗಳಲ್ಲಿ (Western Ghats) ಇದೆ.
ಇದು Palakkad district ಜಿಲ್ಲೆಯಲ್ಲಿ ಹರಡಿಕೊಂಡಿದ್ದು, ಉನ್ನತ ಪರ್ವತಗಳು, ದಟ್ಟವಾದ ಕಾಡುಗಳು
ಮತ್ತು ನದಿಗಳಿಂದ ಕೂಡಿದೆ. ಈ ರಾಷ್ಟ್ರೀಯ ಉದ್ಯಾನವು, ಮಾನವ ಹಸ್ತಕ್ಷೇಪದಿಂದ ಬಹುತೇಕ ದೂರ ಉಳಿದಿರುವ
ಶುದ್ಧ ಅರಣ್ಯ ಪ್ರದೇಶವಾಗಿದೆ.
ಈ ಅರಣ್ಯವನ್ನು “Silent” ಎಂದು ಕರೆಯಲು ಪ್ರಮುಖ
ಕಾರಣ, ಇಲ್ಲಿ ಸಾಮಾನ್ಯವಾಗಿ ಕೇಳುವ ಜೀರುಂಡೆ (cicada) ಕೀಟಗಳ ಶಬ್ದ ಇಲ್ಲದೆ, ಶಾಂತತೆಯಿಂದ ಕೂಡಿದ
ಕಾಡು ಇದಾಗಿದೆ.
ದಟ್ಟವಾದ
ಉಷ್ಣವಲಯದ ಮಳೆಕಾಡುಗಳು (Tropical Rainforests), ವಿಶಿಷ್ಟ ಜೈವ ವೈವಿಧ್ಯತೆ,
(Biodiversity), ಅಪರೂಪದ ಸಸ್ಯ ಮತ್ತು ಪ್ರಾಣಿ ಜಾತಿಗಳು, Lion-tailed macaque ಎಂಬ ಅಪರೂಪದ
ಕಪಿಗಳು ಹೀಗೆ ಅಪರೂಪದ ಜೀವಿಗಳ ಆಶ್ರಯವಾದ ಕಾರಣ ಈ ಕಾಡನ್ನು Biodiversity hotspot ಆಗಿ ಪರಿಗಣಿಸಲಾಗಿದೆ.
ಈ ಕಾಡಿನೊಳಗೆ ಹರಿಯುವ Kunthipuzha River ಈ ಪ್ರದೇಶದ ಜೀವನಾಡಿಯಾಗಿದೆ. ಇದು Bharathapuzha
River ನದಿಯ ಉಪನದಿಯಾಗಿದೆ
Silent Valley National Park ಅನ್ನು 1984ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲಾಯಿತು. ಇದನ್ನು ರಕ್ಷಿಸಲು ನಡೆದ Silent Valley Movement ಭಾರತದ ಪ್ರಮುಖ ಪರಿಸರ ಚಳುವಳಿಗಳಲ್ಲೊಂದು. ಇದು ಪ್ರಕೃತಿಯ untouched beauty ಅನ್ನು ಅನುಭವಿಸಲು ಸೂಕ್ತ ಸ್ಥಳ. ಇಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಇದ್ದುದರಿಂದ, ಇದು ನೈಸರ್ಗಿಕ ಸಂರಕ್ಷಣೆಯ ಒಂದು ಮಾದರಿಯಾಗಿದೆ.
Silent Valley National Park
Spiti
Valley – ಹಿಮಾಲಯದ ಚಂದ್ರಭೂಮಿ.
ಸ್ಪಿಟಿ ವ್ಯಾಲಿ ಭಾರತದ ಅತ್ಯಂತ ಅದ್ಭುತ ಹಾಗೂ
ವಿಭಿನ್ನ ಪ್ರಕೃತಿ ಸೌಂದರ್ಯ ಹೊಂದಿರುವ ಪ್ರದೇಶಗಳಲ್ಲಿ ಒಂದು. ಇದು “Little Tibet” ಎಂದು
ಪ್ರಸಿದ್ಧವಾಗಿದೆ, ಏಕೆಂದರೆ ಇದರ ಭೌಗೋಳಿಕತೆ, ಸಂಸ್ಕೃತಿ ಮತ್ತು ಧರ್ಮವು ಟಿಬೆಟ್‌ನಂತೆ ಕಾಣುತ್ತದೆ.
Himachal Pradesh ರಾಜ್ಯದ ಸ್ಪಿಟಿ ವ್ಯಾಲಿ, ಅದರ ಬತ್ತಿದ ಭೂದೃಶ್ಯ ಮತ್ತು ಉನ್ನತ ಪರ್ವತಗಳಿಗಾಗಿ
ಪ್ರಸಿದ್ಧವಾಗಿದೆ.
ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಇರುವ ಒಂದು
ಹೈ-ಆಲ್ಟಿಟ್ಯೂಡ್ (High Altitude) ಶೀತ ಮರುಭೂಮಿ ಪ್ರದೇಶ. ಸ್ಪಿಟಿ ವ್ಯಾಲಿ ತನ್ನ ವಿಶಿಷ್ಟ ಲ್ಯಾಂಡ್‌ಸ್ಕೇಪ್‌ಗಾಗಿ
ಪ್ರಸಿದ್ಧವಾಗಿದ್ದು, ಹಿಮಾಚ್ಛಾದಿತ ಪರ್ವತಗಳು, ಮರುಭೂಮಿ ಪ್ರಾಂತ್ಯ, ನೀಲಿ ನದಿಗಳು ಮತ್ತು ಸರೋವರಗಳು
ಇದ್ದು, ಕ್ಲಿಯರ್ ಸ್ಕೈ – ಸ್ಟಾರ್ಗೇಜಿಂಗ್‌ಗೆ ಸೂಕ್ತ ಸ್ಥಳವಾಗಿದೆ.
ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬೌದ್ಧ ಮಠ
ಸ್ಪಿಟಿಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. “Moon Lake” ಎಂದೂ ಕರೆಯಲಾಗುವ, ನೀಲಿಯ ಸರೋವರ ಫೋಟೋಗ್ರಫಿಗೆ
ಪ್ರಸಿದ್ಧವಾಗಿದೆ. ಸ್ಪಿಟಿ ವ್ಯಾಲಿ ನಲ್ಲಿ ಬೌದ್ಧ ಸಂಸ್ಕೃತಿ ಪ್ರಬಲವಾಗಿದ್ದು, ಇಲ್ಲಿ ಮಠಗಳು
(Monasteries), ಟಿಬೇಟನ್ ಜೀವನ ಶೈಲಿಯ ಹಬ್ಬಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ.
ಸ್ಪಿಟಿ ವ್ಯಾಲಿ ಪ್ರಕೃತಿ ಪ್ರೇಮಿಗಳಿಗೆ, ಸಾಹಸ
ಪ್ರಯಾಣಿಕರಿಗೆ ಮತ್ತು ಶಾಂತತೆಯನ್ನು ಹುಡುಕುವವರಿಗೆ ಪರಿಪೂರ್ಣ ಸ್ಥಳ. ಇಲ್ಲಿ ಇರುವ rugged
beauty ಮತ್ತು untouched landscape ನಿಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಜಗತ್ತಿನ
ಅತಿ ಎತ್ತರದಲ್ಲಿರುವ ವಾಸಿಸುವ ಗ್ರಾಮಗಳಲ್ಲಿ ಒಂದಾಗಿದೆ. ಇದು ಚಂದ್ರನಂತೆ ಕಾಣುವ ಭೂಮಿಯ ವಿನ್ಯಾಸ ಹೊಂದಿದೆ.
ಸ್ಪಿಟಿ ವ್ಯಾಲಿ
ಬಂಗಾರಂ
ದ್ವೀಪ – ಅರಬ್ಬೀ ಸಮುದ್ರದ ಮಣಿಯಂತೆ ಹೊಳೆಯುವ, ನೀಲಿ ಸಮುದ್ರದ ಸ್ವರ್ಗ.
ಭಾರತದ ಅತಿ ಸುಂದರ ಹಾಗೂ ಶಾಂತ ಪ್ರವಾಸಿ ಸ್ಥಳಗಳಲ್ಲಿ
ಒಂದಾದ ಬಂಗಾರಂ ದ್ವೀಪವು ಲಕ್ಷ ದ್ವೀಪಸಮೂಹದಲ್ಲಿ ಇರುವ ಒಂದು ಅಪರೂಪದ ರತ್ನವಾಗಿದೆ. ಪ್ರಕೃತಿಯ ಮಡಿಲಲ್ಲಿ
ಮೌನವಾಗಿ ಅಡಗಿರುವ ಈ ದ್ವೀಪವು ತನ್ನ ಕ್ರಿಸ್ಟಲ್ ಕ್ಲಿಯರ್ ನೀರು, ಬಿಳಿ ಮರಳು ತೀರಗಳು ಮತ್ತು ನೀಲಿ
ಆಕಾಶದಿಂದ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಲಕ್ಷದ್ವೀಪ ಸಮೂಹದಲ್ಲಿರುವ ಬಂಗಾರಂ ದ್ವೀಪವು,
ತನ್ನ ಶುದ್ಧ ನೀರು ಮತ್ತು ಮೃದುವಾದ ಮರಳುಗಾಗಿ ಪ್ರಸಿದ್ಧವಾಗಿದೆ.
ಬಂಗಾರಂ ದ್ವೀಪವು ಲಕ್ಷದ್ವೀಪದ ರಾಜಧಾನಿಯಾದ
Kavaratti ನಿಂದ ಸುಮಾರು 8 ಕಿಮೀ ದೂರದಲ್ಲಿದೆ. ಇದು ಜನಸಂಖ್ಯೆ ಕಡಿಮೆ ಇರುವ ಒಂದು ಸಣ್ಣ, ದ್ವೀಪವಾಗಿದ್ದು,
ಇಲ್ಲಿ ಶಾಂತಿ ಮತ್ತು ಸ್ವಚ್ಛತೆ ತುಂಬಾ ವಿಶೇಷವಾಗಿದೆ.
ಅರಬ್ಬೀ ಸಮುದ್ರದ ಮಧ್ಯದಲ್ಲಿ ಇರುವ ಪ್ರೈವೇಟ್
ಸ್ವರೂಪದ ಈ ದ್ವೀಪವು ನೀಲಿ–ಹಸಿರು ಬಣ್ಣದ ಸಮುದ್ರ (lagoon) ಮತ್ತು ಬಿಳಿ ಮರಳು (white sand)
ತೀರಗಳನ್ನು ಹೊಂದಿದ್ದು ಮಾನವನ ಕಡಿಮೆ ಹಸ್ತಕ್ಷೇಪ ಹೊಂದಿದೆ.
ಈ
ದ್ವೀಪವು ಪ್ರಕೃತಿ ಪ್ರಿಯರಿಗಾಗಿ ನಿಜವಾದ ಸ್ವರ್ಗವಾಗಿದೆ. ಪಾರದರ್ಶಕ ನೀರು (Crystal clear
water), ಸಮುದ್ರದೊಳಗಿನ ಸುಂದರ ಜೀವ ಜಾಲ (Coral reefs), ಆ ಶಾಂತ ವಾತಾವರಣ ಮತ್ತು ಶುದ್ಧ ಗಾಳಿ ಅಬ್ಬಾ ಎಲ್ಲವೂ ಸುಂದರ.
ಮೈಕ್ರೋ ಅಡ್ವೆಂಚರ್ ಗಳ ಮಾಹಿತಿ👇
https://www.capturingdaysoflife.com/2025/11/blog-post_13.html
ಇಲ್ಲಿ ಕಾಣುವ coral reefs ಮತ್ತು ವಿವಿಧ
ಬಣ್ಣದ ಮೀನುಗಳು snorkeling ಮತ್ತು scuba diving ಮಾಡುವವರಿಗೆ ಅದ್ಭುತ ಅನುಭವವನ್ನು ನೀಡುತ್ತವೆ.
ಬಂಗಾರಂ
ದ್ವೀಪದಲ್ಲಿ ವಿವಿಧ ಸಾಹಸ ಚಟುವಟಿಕೆಗಳನ್ನು ಅನುಭವಿಸಬಹುದು:
- ಸ್ಕೂಬಾ
ಡೈವಿಂಗ್ (Scuba Diving).
- ಸ್ನಾರ್ಕೆಲಿಂಗ್
(Snorkeling.)
- ಕಯಾಕಿಂಗ್
(Kayaking).
- ಡೀಪ್
ಸೀ ಫಿಶಿಂಗ್ (Deep Sea Fishing).
- ಸನ್‌ಸೆಟ್
ವೀಕ್ಷಣೆ.
ಈ ಚಟುವಟಿಕೆಗಳು ಪ್ರವಾಸಿಗರಿಗೆ ಜೀವನಪರ್ಯಂತ
ಮರೆಯಲಾಗದ ಅನುಭವವನ್ನು ನೀಡುತ್ತವೆ.
ಬಂಗಾರಂ ದ್ವೀಪ
ಬಂಗಾರಂ ದ್ವೀಪವು ಪ್ರಕೃತಿಯ ಅದ್ಭುತ ಸೌಂದರ್ಯವನ್ನು
ನೇರವಾಗಿ ಅನುಭವಿಸಲು ಇಚ್ಛಿಸುವವರಿಗೆ ಪರಿಪೂರ್ಣ ಸ್ಥಳವಾಗಿದೆ. ನಗರದ ಗದ್ದಲದಿಂದ ದೂರವಾಗಿ, ಶಾಂತಿ
ಮತ್ತು ಸುಂದರತೆಯನ್ನು ಅನುಭವಿಸಲು ಈ ದ್ವೀಪ ಅತ್ಯುತ್ತಮ ಆಯ್ಕೆಯಾಗಿದೆ.
ಜಿರೋ
ವ್ಯಾಲಿ – ಸಂಸ್ಕೃತಿ ಮತ್ತು ಪ್ರಕೃತಿಯ ಸಂಗಮ.
ಜಿರೋ ವ್ಯಾಲಿ ಭಾರತದ ಉತ್ತರ–ಪೂರ್ವ ಭಾಗದಲ್ಲಿರುವ
ಅರುಣಾಚಲ ಪ್ರದೇಶ ರಾಜ್ಯದ ಒಂದು ಸುಂದರ ಕಣಿವೆ. ಇದು ಹಸಿರು ಹೊಲಗಳು, ಮಂಜಿನ ವಾತಾವರಣ ಮತ್ತು ಅಪಾತಾನಿ
ಜನಾಂಗದ ವಿಶಿಷ್ಟ ಜನಜೀವನಕ್ಕಾಗಿ ಪ್ರಸಿದ್ಧವಾಗಿದೆ.
ಸಮುದ್ರಮಟ್ಟದಿಂದ ಸುಮಾರು 1,500 ಮೀಟರ್ ಎತ್ತರದಲ್ಲಿದ್ದು,ಭತ್ತದ
ಹಸಿರು ಹೊಲಗಳು (Paddy fields) ಮತ್ತು ಪೈನ್ ಮರಗಳಿಂದ ತುಂಬಿ ಹೋಗಿದೆ. ತಂಪಾದ ಹವಾಮಾನ ಮತ್ತು
ಮಂಜಿನ ವಾತಾವರಣ ಪರಿಸರವನ್ನು ಸಪರಿವಾರ ಸ್ವಚ್ಛ ಮತ್ತು
ಶಾಂತ ಪ್ರದೇಶವನ್ನಾಗಿಸಿದೆ.
ಜಿರೋ ವ್ಯಾಲಿಯ ವಿಶಿಷ್ಟ ಲ್ಯಾಂಡ್‌ಸ್ಕೇಪ್
ಇದು ಭಾರತದ ಅತ್ಯಂತ ಸುಂದರ ಕಣಿವೆಗಳಲ್ಲಿ ಒಂದಾಗಿಸಿದೆ. ಜಿರೋ ವ್ಯಾಲಿಯ ಪ್ರಮುಖ ಆಕರ್ಷಣೆಯೆಂದರೆ
ಇಲ್ಲಿ ವಾಸಿಸುವ ಅಪಾತಾನಿ ಜನಾಂಗ. ಇವರು ಪ್ರಾಚೀನ ಕೃಷಿ ಪದ್ಧತಿ (wet rice cultivation
without animals) ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅನುಸರಿಸುತ್ತಾರೆ. ಮಹಿಳೆಯರ ಪಾರಂಪರಿಕ
ಮುಖದ ಅಲಂಕಾರ (historical nose plugs & tattoos – ಈಗ ಕಡಿಮೆಯಾಗಿದೆ) ಇಲ್ಲಿ ವಿಶೇಷವಾಗಿದೆ.
ಇವರ ಸಮುದಾಯ ಆಧಾರಿತ ಜೀವನ ಮತ್ತು ಅವರ ಸಂಸ್ಕೃತಿಯಿಂದಾಗಿ UNESCO Heritage tentative listನಲ್ಲಿ
ಕೂಡ ಸೇರಿಸಲಾಗಿದೆ.
Ziro Music Festival ಜಿರೋ ವ್ಯಾಲಿಯ ಪ್ರಮುಖ
ಆಕರ್ಷಣೆ. ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯುತ್ತದೆ. ದೇಶ–ವಿದೇಶದ ಸಂಗೀತ ಕಲಾವಿದರು ಭಾಗವಹಿಸುತ್ತಾರೆ.
ನೈಸರ್ಗಿಕ ವಾತಾವರಣದಲ್ಲಿ ಲೈವ್ ಮ್ಯೂಸಿಕ್ ಅನುಭವ ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಇದು ಭಾರತದ
ಅತ್ಯಂತ unique music festivalsಗಳಲ್ಲಿ ಒಂದು.
ಜಿರೋ
ವ್ಯಾಲಿಯಲ್ಲಿ ನೋಡಬಹುದಾದ ಸ್ಥಳಗಳು:
- Talley
Valley Wildlife Sanctuary.
- Pine
Grove Forests.
- Meghna
Cave Temple.
- Ziro
Puto Hill – ಸೂರ್ಯೋದಯದ
ಸುಂದರ ದೃಶ್ಯ.
ಜಿರೋ ವ್ಯಾಲಿ ಪ್ರಕೃತಿ, ಸಂಸ್ಕೃತಿ ಮತ್ತು
ಶಾಂತ ಜೀವನವನ್ನು ಒಟ್ಟುಗೂಡಿಸಿದ ಒಂದು ಅಪರೂಪದ ಸ್ಥಳ. ಇಲ್ಲಿ ನೀವು ಕೇವಲ ಪ್ರವಾಸವಲ್ಲ, ಒಂದು ವಿಭಿನ್ನ
ಜೀವನ ಶೈಲಿಯ ಅನುಭವವನ್ನು ಪಡೆಯುತ್ತೀರಿ. ಪ್ರಕೃತಿಯ ಮಧ್ಯೆ ವಿಶ್ರಾಂತಿ ಪಡೆಯಲು ಮತ್ತು ಹೊಸ ಸಂಸ್ಕೃತಿಯನ್ನು
ಅರಿಯಲು ಇದು ಅತ್ಯುತ್ತಮ ಸ್ಥಳವಾಗಿದೆ.
ಜಿರೋ ವ್ಯಾಲಿ
ವೈಜ್ಞಾನಿಕ
ಮತ್ತು ಪರಿಸರದ ದೃಷ್ಟಿಕೋನ.
ಈ ಪ್ರಕೃತಿಯ ಅದ್ಭುತಗಳು ಕೇವಲ ಪ್ರವಾಸಿ ತಾಣಗಳಲ್ಲ; ಇವು ಪರಿಸರ ಸಂರಕ್ಷಣೆ
ಮತ್ತು ವೈಜ್ಞಾನಿಕ ಅಧ್ಯಯನಕ್ಕೆ ಪ್ರಮುಖವಾಗಿವೆ. ಉದಾಹರಣೆಗೆ:
- ಲೋಣಾರ್
ಸರೋವರವು ಅಂತರಿಕ್ಷಜೀವಶಾಸ್ತ್ರ (Astrobiology) ಅಧ್ಯಯನಕ್ಕೆ ಸಹಾಯಕವಾಗಿದೆ.
- ಸೈಲೆಂಟ್
ವ್ಯಾಲಿಯು ಜೀವವೈವಿಧ್ಯತೆಯ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿದೆ.
ಈ ಅದ್ಭುತ ಸ್ಥಳಗಳು ಪರಿಸರದ ಮೇಲೆ ಹೆಚ್ಚುತ್ತಿರುವ ಮಾನವ ಒತ್ತಡದಿಂದ ಅಪಾಯದಲ್ಲಿವೆ. ಹಾಗಾಗಿ ಇವುಗಳ ಸಂರಕ್ಷಣೆಯ ಪ್ರಾಮುಖ್ಯತೆ ಅಗತ್ಯವಾಗಿದೆ. ಜವಾಬ್ದಾರಿಯುತ ಪ್ರವಾಸೋದ್ಯಮ (Responsible Tourism)ವನ್ನು ನಿರ್ವಹಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಣದಲ್ಲಿರಿಸಬೇಕು. ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆ ಇಲ್ಲಿ ಮುಖ್ಯವಾಗುತ್ತದೆ.
👉ಹೆಚ್ಚಿನ ಮಾಹಿತಿಗಾಗಿ: https://www.incredibleindia.org
👉ಹೆಚ್ಚಿನ ಮಾಹಿತಿಗಾಗಿ: https://www.nationalgeographic.com
ಏಕೆ
ಅಜ್ಞಾತ ಸ್ಥಳಗಳಿಗೆ ಭೇಟಿ ನೀಡಬೇಕು?
(1) ಶಾಂತಿ ಮತ್ತು ನಿಶ್ಶಬ್ದತೆ: ಪ್ರಸಿದ್ಧ ಸ್ಥಳಗಳಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಆದರೆ ಅಜ್ಞಾತ ಸ್ಥಳಗಳಲ್ಲಿ
ನೀವು ಪ್ರಕೃತಿಯ ನಿಜವಾದ ಶಾಂತಿಯನ್ನು ಅನುಭವಿಸಬಹುದು.
(2) ನೈಸರ್ಗಿಕ ಸೌಂದರ್ಯದ ಅನುಭವ: ಇಂತಹ ಸ್ಥಳಗಳಲ್ಲಿ ಪ್ರಕೃತಿ
ತನ್ನ ಮೂಲ ಸ್ವರೂಪದಲ್ಲಿ ಉಳಿದಿರುತ್ತದೆ.
ಇದು “Eco Travel
Experience” ನೀಡುತ್ತದೆ.
(3) ಸ್ಥಳೀಯ ಸಂಸ್ಕೃತಿಯ ಪರಿಚಯ: ಅಜ್ಞಾತ ಹಳ್ಳಿಗಳು ಮತ್ತು ಪ್ರದೇಶಗಳಲ್ಲಿ ಸ್ಥಳೀಯ ಜನರ ಜೀವನ ಶೈಲಿ,
ಆಹಾರ, ಸಂಸ್ಕೃತಿ ಇನ್ನಷ್ಟು ನೈಸರ್ಗಿಕವಾಗಿರುತ್ತದೆ.
ಪ್ರತಿ ಅಜ್ಞಾತ ಸ್ಥಳದ ಹಿಂದೆ ಒಂದೊಂದು ಕಥೆ ಇರುತ್ತದೆ. ಕೆಲವು
ಸ್ಥಳಗಳು ಪುರಾಣಗಳಲ್ಲಿ ಉಲ್ಲೇಖಗೊಂಡಿರುತ್ತವೆ. ಸ್ಥಳೀಯ ಜನರ ನಂಬಿಕೆಗಳಿಗೆ ಸಂಬಂಧಿಸಿದ್ದಾಗಿರುತ್ತವೆ.
ಮತ್ತು ಇತಿಹಾಸದ ಘಟನೆಗಳಿಗೆ ಸಾಕ್ಷಿಯಾಗಿರುತ್ತವೆ.
ಉದಾಹರಣೆಗೆ, ಕೆಲವು ಪರ್ವತಗಳು ದೇವತೆಗಳ ನಿವಾಸ ಎಂದು ನಂಬಲಾಗುತ್ತದೆ.ಇನ್ನೂ
ಕೆಲವು ಸರೋವರಗಳು ಶಾಪಿತ ಎಂದು ಹೇಳಲಾಗುತ್ತದೆ. ಈ
ಕಥೆಗಳು ಪ್ರವಾಸಿಗರ ಅನುಭವವನ್ನು ಇನ್ನಷ್ಟು ರೋಚಕವಾಗಿಸುತ್ತವೆ.
ಇತ್ತೀಚಿನ ವರ್ಷಗಳಲ್ಲಿ “Sustainable
Travel” (ಸ್ಥಿರ ಪ್ರಯಾಣ)
ಟ್ರೆಂಡ್ಗಳು ಹೆಚ್ಚಾಗುತ್ತಿವೆ. ಇದರಿಂದ
ಜನರು ಜನಸಂದಣಿ ಕಡಿಮೆ ಇರುವ ಸ್ಥಳಗಳನ್ನು ಹುಡುಕುತ್ತಿದ್ದಾರೆ.
ಆದರೆ, ಇದು ಒಂದು ಸವಾಲನ್ನೂ
ಎದುರು ತಂದಿದೆ. ಅಜ್ಞಾತ ಸ್ಥಳಗಳು ಹೆಚ್ಚು ಪ್ರಸಿದ್ಧವಾದಂತೆ, ಅವುಗಳ ನೈಸರ್ಗಿಕ ಸೌಂದರ್ಯ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ, ಪ್ರವಾಸಿಗರು
ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಗತ್ಯ.
ಭಾರತದ ಪ್ರಕೃತಿ ಸಂಪತ್ತು ಅನಂತವಾಗಿದೆ. ಆದರೆ,
ಅನೇಕ ಅದ್ಭುತಗಳು ಇನ್ನೂ ಜನರಿಗೆ ತಿಳಿಯದೆ ಉಳಿದಿವೆ. ಇಂತಹ ಸ್ಥಳಗಳನ್ನು ಅನ್ವೇಷಿಸುವುದು ಕೇವಲ
ಪ್ರವಾಸವಲ್ಲ, ಅದು ಪ್ರಕೃತಿಯೊಂದಿಗೆ ನಮ್ಮ ಸಂಪರ್ಕವನ್ನು ಗಟ್ಟಿಗೊಳಿಸುವ ಒಂದು ಅವಕಾಶವಾಗಿದೆ.
ಪ್ರಕೃತಿಯ ಈ ಅಡಗಿದ ರತ್ನಗಳನ್ನು ಕಾಪಾಡುವುದು
ನಮ್ಮ ಹೊಣೆಗಾರಿಕೆಯಾಗಿದೆ. ಮುಂದಿನ ಬಾರಿ ನೀವು ಪ್ರವಾಸಕ್ಕೆ ಹೋಗುವಾಗ, ಪ್ರಸಿದ್ಧ ಸ್ಥಳಗಳಿಗಿಂತ
ಇಂತಹ ಅನ್ವೇಷಣೆಗೆ ಕಾಯುತ್ತಿರುವ ಸ್ಥಳಗಳನ್ನು ಆರಿಸಿ – ನೀವು ಅದ್ಭುತ ಅನುಭವವನ್ನು ಪಡೆಯುವಿರಿ.
"ಅನ್ವೇಷಣೆ ಎಂದರೆ ಹೊಸ ಸ್ಥಳಗಳನ್ನು ನೋಡುವುದಷ್ಟೇ ಅಲ್ಲ, ಹೊಸ ದೃಷ್ಟಿಕೋನವನ್ನು ಕಂಡುಕೊಳ್ಳುವುದು."
"ಈ ಲೇಖನ
ನಿಮಗೆ ಇಷ್ಟವಾದರೆ ಶೇರ್ ಮಾಡಿ"
"ನಿಮ್ಮ ಮುಂದಿನ
ಪ್ರವಾಸ ಯಾವುದು?" ಎಂದು ಕಮೆಂಟ್ ಮಾಡಿ.
ಮುಕ್ತಾಯ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು