ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಆರ್ಗಾನಿಕ್ ಕೃಷಿ ಆರಂಭಿಸಲು 9 ಸರಳ ಹಂತಗಳು – ಪ್ರತಿ ರೈತನಿಗೂ ಅಗತ್ಯ!

 

                                                     ಆರ್ಗಾನಿಕ್‌ ಕೃಷಿ ಭೂಮಿ

ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೫.೦೪.೨೦೨೬.

ಆರ್ಗಾನಿಕ್ ಫಾರ್ಮಿಂಗ್ ಲಾಭಗಳು – ಕಡಿಮೆ ಖರ್ಚು, ಹೆಚ್ಚು ಆದಾಯ!

ಆರ್ಗಾನಿಕ್ ಫಾರ್ಮಿಂಗ್ ಬಗ್ಗೆ ಸಂಪೂರ್ಣ ಮಾಹಿತಿಲಾಭಗಳು, ವಿಧಾನಗಳು, ಹಾಗೂ ಆರಂಭಿಸುವ ಸರಳ ಮಾರ್ಗಗಳು ಕನ್ನಡದಲ್ಲಿ ತಿಳಿದುಕೊಳ್ಳಿ.

ಆರ್ಗಾನಿಕ್ ಫಾರ್ಮಿಂಗ್ ಎಂದರೇನು?

ಆರ್ಗಾನಿಕ್ ಫಾರ್ಮಿಂಗ್ ಎಂದರೆ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ಜಿಎಂಒಗಳ ಬಳಕೆಯನ್ನು ತಪ್ಪಿಸಿ ನೈಸರ್ಗಿಕ ವಿಧಾನಗಳಲ್ಲಿ ಕೃಷಿ ಮಾಡುವ ಪದ್ಧತಿ. ಇತ್ತೀಚಿನ ವರ್ಷಗಳಲ್ಲಿಆರ್ಗಾನಿಕ್ ಫಾರ್ಮಿಂಗ್ಹೆಚ್ಚು ಜನಪ್ರಿಯವಾಗುತ್ತಿದೆ, ಏಕೆಂದರೆ ಜನರು ಆರೋಗ್ಯಕರ ಆಹಾರ ಸೇವನೆಯ ಕಡೆಗೆ ಹೆಚ್ಚು ಉತ್ತೇಜಿತರಾಗುತ್ತಿದ್ದಾರೆ.

ವ್ಯವಸಾಯ ವಿಧಾನದಲ್ಲಿ ಮಣ್ಣು, ನೀರು ಮತ್ತು ಪರಿಸರವನ್ನು ಸಂರಕ್ಷಿಸುವುದಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ.

ಆರ್ಗಾನಿಕ್ ಕೃಷಿಯ ಮೂಲಭೂತ ತತ್ವಗಳು.

  • ನೈಸರ್ಗಿಕ ಸಂಪನ್ಮೂಲಗಳ ಬಳಕೆ.
  • ಮಣ್ಣಿನ ಆರೋಗ್ಯ ಕಾಪಾಡುವುದು.
  • ರಾಸಾಯನಿಕಗಳು ಮಣ್ಣಿಗೆ ಸೇರುವುದನ್ನು ತಪ್ಪಿಸುವುದು.
  • ಪರಿಸರ ಸ್ನೇಹಿ ಬೇಸಾಯ.

ಆರ್ಗಾನಿಕ್ ಫಾರ್ಮಿಂಗ್ ಇತಿಹಾಸ.

ಆರ್ಗಾನಿಕ್ ಫಾರ್ಮಿಂಗ್ ಹೊಸ ಪದ್ಧತಿಯೇನೂ ಅಲ್ಲ, ಇದು ನಮ್ಮ ಪೂರ್ವಜರು ಅನುಸರಿಸಿದ್ದ  ಪ್ರಾಚೀನ ಕೃಷಿ ವಿಧಾನವೇ ಆಗಿದೆ.

ಭಾರತವು ಸ್ವಾತಂತ್ರ್ಯ ನಂತರದ ದಿನಗಳಲ್ಲಿ, ದೇಶವು ಅಭಿವೃದ್ಧಿಯೆಡೆಗೆ ಸಾಗಲು  ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಆಗ ನಡೆದದ್ದೇ ಹಸಿರು ಕ್ರಾಂತಿ. ಇದರ ಫಲವಾಗಿ, ಹೆಚ್ಚು ಇಳುವರಿ ನೀಡುವ ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರಗಳು, ಹೊಸ ಹೊಸ ಕೃಷಿ ತಂತ್ರಜ್ಞಾನಗಳು ಭಾರತದ ವ್ಯವಸಾಯ ಪದ್ಧತಿಯಲ್ಲಿ ಜಾಗ ಪಡೆದವು. ಹೀಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ಸ್ಥಳವನ್ನು, ರಾಸಾಯನಿಕ ಕೃಷಿ ಪದ್ಧತಿಯು ಆಕ್ರಮಿಸಿತು.

ರಾಸಾಯನಿಕ ಕೃಷಿ ಪದ್ಧತಿಯಿಂದಾಗಿ ಕ್ರಮೇಣ ಮಣ್ಣಿನಲ್ಲಿ, ಮಾನವರ ಆರೋಗ್ಯ ಮತ್ತು  ಪರಿಸರದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾದವು. 1990ರ ದಶಕದಿಂದ ಪರಿಸರ ಜಾಗೃತಿ ಹೆಚ್ಚಾಗಿ ಸಾವಯವ ಕೃಷಿಯತ್ತ ಗಮನ ಹರಿಯಿತು. ಸರ್ಕಾರ ಮತ್ತು ಎನ್‌ಜಿಒಗಳು ಸಾವಯವ ಕೃಷಿಯ ಪ್ರಯೋಜನಗಳನ್ನು ಹೆಚ್ಚು ಪ್ರಚಾರ ಮಾಡತೊಡಗಿದವು.

ಹಾಗಾಗಿ ಸರ್ಕಾರದ ಹನ್ನೊಂದು ಮತ್ತು ಹನ್ನೆರಡನೇ ಪಂಚವಾರ್ಷಿಕ ಯೋಜನೆಗಳಲ್ಲಿ, ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಯಿತು, ಪರಿಸರ ಸ್ನೇಹಿ ಕೃಷಿ ವಿಧಾನಗಳಿಗೆ ಉತ್ತೇಜನ ನೀಡಲಾಯಿತು. ಜೊತೆಗೆ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲಾಗಿ ಪರಂಪರಾಗತ ಕೃಷಿ ವಿಕಾಸ ಯೋಜನೆ (PKVY) ಎಂಬ ಯೋಜನೆಯ ಮೂಲಕ ರೈತರಿಗೆ ಬೆಂಬಲ ನೀಡಲಾಯಿತು. ಹಾಗಾಗಿ ಸಾವಯವ ಕೃಷಿ  ಪದ್ಧತಿಯು  ಈಗ ಮತ್ತೆ ಪ್ರಾಮುಖ್ಯತೆ ಪಡೆದುಕೊಂಡಿದೆ.

ಬೆನ್ನಿಗಂಟಿದ ಹೊಟ್ಟೆಯ ಕಥೆ.👇

https://www.capturingdaysoflife.com/2025/10/blog-post_10.html

ಭಾರತದಲ್ಲಿ ಆರ್ಗಾನಿಕ್ ಕೃಷಿಯ ಬೆಳವಣಿಗೆ..

    ಭಾರತದಲ್ಲಿ ಸರ್ಕಾರ ಮತ್ತು ಹಲವು ಸಂಸ್ಥೆಗಳು ಆರ್ಗಾನಿಕ್ ಕೃಷಿಯನ್ನು ಉತ್ತೇಜಿಸುತ್ತಿವೆ. ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ರೈತರು ವಿಧಾನಕ್ಕೆ ವಾಪಸ್ಸಾಗುತ್ತಿದ್ದಾರೆ.

ಭಾರತದಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಲು ಹಲವು ಯೋಜನೆಗಳು ಜಾರಿಯಲ್ಲಿವೆ:

  • Paramparagat Krishi Vikas Yojana (PKVY):-ರೈತರಿಗೆ ಸಾವಯವ ಕೃಷಿ ತರಬೇತಿ ನೀಡುತ್ತದೆ. ಮತ್ತು ಆರ್ಥಿಕ ಸಹಾಯ ನೀಡುತ್ತದೆ.
  • National Programme for Organic Production:- ಸಾವಯವ ಉತ್ಪನ್ನಗಳ ಪ್ರಮಾಣೀಕರಣ ನಡೆಸಿ, ರಫ್ತು ಉತ್ತೇಜಿಸುತ್ತದೆ.
  • Mission Organic Value Chain Development for North Eastern Region:- ಈಶಾನ್ಯ ರಾಜ್ಯಗಳಲ್ಲಿ ಸಾವಯವ ಕೃಷಿ ಅಭಿವೃದ್ಧಿಗಾಗಿ ಮೀಸಲಾದ ಯೋಜನೆ.

    ಭಾರತವು ಸಾವಯವ ಕೃಷಿಯಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿದೆ.  ಹೆಚ್ಚಿನ ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.  ಅಮೇರಿಕಾ ಮತ್ತು ಯುರೋಪ್ ದೇಶಗಳಿಗೆ ಸಾವಯವ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ.

ಸಾವಯವ ವ್ಯವಸಾಯ ಪದ್ಧತಿಯ ಬೆಳವಣಿಗೆಗೆ ಪ್ರಮುಖ ಕಾರಣಗಳು.

  • ಆರೋಗ್ಯಕರ ಆಹಾರದ ಮೇಲೆ ಜನರ ಆಸಕ್ತಿ.
  • ಪರಿಸರ ಸಂರಕ್ಷಣೆ.
  • ಮಣ್ಣಿನ ಫಲವತ್ತತೆ ಹೆಚ್ಚಿಸುವ ಅಗತ್ಯ.
  • ಸರ್ಕಾರದ ಪ್ರೋತ್ಸಾಹ.

    ಭವಿಷ್ಯದಲ್ಲಿ, ಸಾವಯವ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ, ಯುವ ರೈತರು ಮತ್ತು ಸ್ಟಾರ್ಟ್ಅಪ್ಗಳು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಪ್ರಸ್ತುತ ಡಿಜಿಟಲ್ ಮಾರುಕಟ್ಟೆ (online selling) ಮೂಲಕ ಹೊಸದಾಗಿ ಅವಕಾಶಗಳು ಸೃಷ್ಟಿಯಾಗುತ್ತಿವೆ.  ಭಾರತದಲ್ಲಿ ಸಾವಯವ ಕೃಷಿಯು ಒಂದು ಪರ್ಯಾಯ ವಿಧಾನದಿಂದ ಮುಖ್ಯ ಕೃಷಿ ಚಳವಳಿಯಾಗಿ ರೂಪಾಂತರಗೊಳ್ಳುತ್ತಿದೆ. ಸರಿಯಾದ ಬೆಂಬಲ ಮತ್ತು ಅರಿವಿನಿಂದ ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರವಾಗುವ ಸಾಧ್ಯತೆ ಇದೆ.

ಆರ್ಗಾನಿಕ್ ಫಾರ್ಮಿಂಗ್ ಪ್ರಮುಖ ಲಾಭಗಳು.

ಆರ್ಗಾನಿಕ್ ಫಾರ್ಮಿಂಗ್ ಅನೇಕ ಲಾಭಗಳನ್ನು ನೀಡುತ್ತದೆ. ಇವು ಆರೋಗ್ಯ, ಪರಿಸರ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿವೆ.

ಆರ್ಗಾನಿಕ್ ಆಹಾರಗಳಲ್ಲಿ ರಾಸಾಯನಿಕಗಳಿಲ್ಲ. ಇದರಿಂದ ದೇಹದ ಆರೋಗ್ಯಕ್ಕೆ ಹಾನಿ ಕಡಿಮೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸುರಕ್ಷಿತ ಆಹಾರ ದೊರೆಯುತ್ತದೆ.

ಆರ್ಗಾನಿಕ್‌ ವ್ಯವಸಾಯ ಪದ್ಧತಿಯಿಂದ, ಮಣ್ಣಿನ ಗುಣಮಟ್ಟ ಸುಧಾರಣೆಯಾಗುತ್ತದೆ.  ನೀರಿನ ಮಾಲಿನ್ಯ ಕಡಿಮೆಯಾಗಿ, ಜೀವ ವೈವಿಧ್ಯತೆಯಲ್ಲಿ ಸುಧಾರಣೆಯಾಗುತ್ತದೆ.

ಆರ್ಗಾನಿಕ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುವ ಕಾರಣ, ರೈತರಿಗೆ ಉತ್ತಮ ಆದಾಯ ಸಿಗುತ್ತದೆ.

ಆರ್ಗಾನಿಕ್ ಫಾರ್ಮಿಂಗ್ ಮಾಡುವ ವಿಧಾನಗಳು.

    ಆರ್ಗಾನಿಕ್ ಫಾರ್ಮಿಂಗ್ ಮಾಡಲು ಕೆಲವು ಮುಖ್ಯ ವಿಧಾನಗಳನ್ನು ಅನುಸರಿಸಬೇಕು. ನೈಸರ್ಗಿಕ ಗೊಬ್ಬರಗಳಾದ, ಗೋಮೂತ್ರ, ಹಸುವಿನ ಸಗಣಿ, ವರ್ಮಿ ಕಂಪೋಸ್ಟ್ ಗಳ ಬಳಕೆ ಮಾಡಬೇಕು. ಇವು ಮಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತವೆ.

                                               ವರ್ಮಿ ಕಂಪೋಸ್ಟ್ ತಯಾರಿಸುವ ವಿಧಾನ

    ಬೆಳೆ ಪರಿವರ್ತನೆ (Crop Rotation) ವಿದಾನ ಅಂದರೆ, ಒಂದೇ ಬೆಳೆ ಬೆಳೆಯುವ ಬದಲು ಬೆಳೆಗಳನ್ನು ಬದಲಾಯಿಸುವುದು. ಇದು ಮಣ್ಣಿನ ಪೋಷಕಾಂಶಗಳನ್ನು ಉಳಿಸುತ್ತದೆ.

ಆರ್ಗಾನಿಕ್ ಫಾರ್ಮಿಂಗ್ ಆರಂಭಿಸುವುದು ಹೇಗೆ?

ಇದೀಗ, ಹಂತ ಹಂತವಾಗಿ ಆರ್ಗಾನಿಕ್ ಕೃಷಿ ಮಾಡುವ ವಿಧಾನವನ್ನು ನೋಡೋಣ 👇

 1. ಮಣ್ಣಿನ ಸಿದ್ಧತೆ (Soil Preparation).

ಆರ್ಗಾನಿಕ್ ಕೃಷಿಯಲ್ಲಿ ಮಣ್ಣು ಜೀವಂತವಾಗಿರಬೇಕು. ಹಾಗಾಗಿ ಜಮೀನನ್ನು ಚೆನ್ನಾಗಿ ಉಳುಮೆ ಮಾಡಬೇಕು. ಉಳುಮೆಯ ನಂತರ ಸಗಣಿ(ತಿಪ್ಪೆ ಗೊಬ್ಬರ) ಮತ್ತು  ವರ್ಮಿಕಂಪೋಸ್ಟ್ ಸೇರಿಸಬೇಕು. ರಾಸಾಯನಿಕ ಗೊಬ್ಬರದ ಬಳಕೆಯನ್ನು ತಪ್ಪಿಸಬೇಕು. ಇದರಿಂದ ಮಣ್ಣಿನ ಆರೋಗ್ಯ ಉತ್ತಮವಾಗಿ ಬೆಳೆಯೂ  ಸಹ ಉತ್ತಮವಾಗಿ ಬರುತ್ತದೆ.

2. ನೈಸರ್ಗಿಕ ಬೀಜಗಳ ಆಯ್ಕೆ (Organic Seed Selection)

  • ಸ್ಥಳೀಯ ಮತ್ತು ಜೈವಿಕ ಬೀಜಗಳನ್ನು ಬಳಸಬೇಕು.
  • ರೋಗಮುಕ್ತ ಬೀಜಗಳನ್ನು ಆರಿಸಬೇಕು.
  • ಹೈಬ್ರಿಡ್ ಬೀಜಗಳನ್ನು ತಪ್ಪಿಸುವುದು ಉತ್ತಮ.

 3. ಬೀಜ ಬಿತ್ತನೆ (Sowing Methods).

  • ಸರಿಯಾದ ಕಾಲದಲ್ಲಿ ಬಿತ್ತನೆ ಮಾಡಬೇಕು.
  • ಸಾಲುಗಳಲ್ಲಿ ಬೀಜ ಬಿತ್ತುವುದು ಉತ್ತಮ.
  • ಬೀಜಗಳ ನಡುವೆ ಸರಿಯಾದ ಅಂತರ ಇರಲಿ.

ಇದು ಬೆಳೆಗಳಿಗೆ ಉತ್ತಮ ಬೆಳವಣಿಗೆ ನೀಡುತ್ತದೆ.

 4. ನೀರಾವರಿ ವ್ಯವಸ್ಥೆ (Water Management)

ಆರ್ಗಾನಿಕ್ ಕೃಷಿಯಲ್ಲಿ ನೀರಿನ ಬಳಕೆ ಸಮತೋಲನದಲ್ಲಿರಬೇಕು.

  • ಹನಿ ನೀರಾವರಿ (Drip irrigation).
  • ಮಲ್ಚಿಂಗ್ ಮೂಲಕ ನೀರಿನ ಸಂರಕ್ಷಣೆ.
  • ಮಳೆನೀರು ಸಂಗ್ರಹಣೆ.

ಇತ್ಯಾದಿ ವಿಧಾನಗಳ ಮೂಲಕ ಬೆಳೆಗೇ ನೀರಾವರಿ ವ್ಯವಸ್ಥೆಯನ್ನು ಅನುಸರಿಸುವುದು ಸೂಕ್ತ.

 5. ನೈಸರ್ಗಿಕ ಗೊಬ್ಬರ ಬಳಕೆ (Organic Fertilizers).

ರಾಸಾಯನಿಕ ಗೊಬ್ಬರಗಳ ಬದಲು ನೈಸರ್ಗಿಕ ಗೊಬ್ಬರ ಬಳಸಿ.

  • ಗೋಮೂತ್ರ
  • ಜೀವಾಮೃತ
  • ಪಂಚಗವ್ಯ

ಈ ಸಾವಯವ ಗೊಬ್ಬರಗಳು  ಮಣ್ಣಿನ ಪೋಷಕಾಂಶಗಳನ್ನು ಹೆಚ್ಚಿಸುತ್ತವೆ

6. ಕೀಟ ನಿಯಂತ್ರಣದ ನೈಸರ್ಗಿಕ ವಿಧಾನಗಳು.

ಆರ್ಗಾನಿಕ್ ವಿಧಾನದಲ್ಲಿ ಕೀಟಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಲಾಗುತ್ತದೆ. ಸಸ್ಯಗಳಿಂದ ತಯಾರಿಸಿದ ಕೀಟನಾಶಕಗಳನ್ನು ಬಳಸುವುದು ಉತ್ತಮ.

ನೀಮ್ ಎಣ್ಣೆ ಸ್ಪ್ರೇ,  ಬೆಳ್ಳುಳ್ಳಿ-ಮೆಣಸಿನ ಕಷಾಯ, ಟ್ರ್ಯಾಪ್ಗಳು (pheromone traps) ಕೀಟನಾಶಕವಾಗಿ  ಬಳಕೆಯಾಗುತ್ತವೆ. ಹಾಗೂ  ಕೈಯಿಂದ ಕೀಟ ತೆಗೆದುಹಾಕುವುದು ನೈಸರ್ಗಿಕವಾಗಿ ಕೀಟ ನಿಯಂತ್ರಣದ ಇನ್ನೊಂದು ವಿಧಾನ. ರಾಸಾಯನಿಕ ಕೀಟನಾಶಕಗಳನ್ನು ತಪ್ಪಿಸುವುದು ಇಲ್ಲಿ ತುಂಬಾ ಮುಖ್ಯ.

                                                        ನೀಮ್ ಎಣ್ಣೆ ಸ್ಪ್ರೇ

7. ಬೆಳೆ ಪರಿವರ್ತನೆ (Crop Rotation).

ಒಂದೇ ಬೆಳೆಯನ್ನು ಪುನಃ ಪುನಃ ಬೆಳೆಯುವುದರಿಂದ ಮಣ್ಣು ದುರ್ಬಲವಾಗುತ್ತದೆ. ಆದ್ದರಿಂದ ಬೆಳೆಗಳನ್ನು ಕ್ರಮವಾಗಿ ಬದಲಾಯಿಸುವ ಮೂಲಕ ಮಣ್ಣಿನ ಪೋಷಕಾಂಶ ಸಮತೋಲನ ಕಾಪಾಡಿ.

                                                       ಬೆಳೆ ಪರಿವರ್ತನೆಯ ಚಿತ್ರ

 8. ಕಳೆ ನಿಯಂತ್ರಣ (Weed Management)

ಕೈಯಿಂದ ಕಳೆ ತೆಗೆಯುವುದು ಒಂದು ಸಾಂಪ್ರದಾಯಿಕ ವಿಧಾನವಾಗಿದೆ. ಮಲ್ಚಿಂಗ್ ಬಳಕೆ ಸಹ ಮಾಡಬಹುದು. ಆರ್ಗಾನಿಕ್‌ ಫಾರ್ಮಿಂಗ್‌ ನಲ್ಲಿ ಕಳೆ ನಿಯಂತ್ರಣವು ನೈಸರ್ಗಿಕ ವಿಧಾನಗಳಲ್ಲಿ  ನಡೆಯುತ್ತದೆ.

 9. ಕೊಯ್ಲು ಮತ್ತು ಸಂಗ್ರಹಣೆ (Harvesting & Storage)

  • ಬೆಳೆ ಪಕ್ವವಾದಾಗ ಮಾತ್ರ ಕೊಯ್ಲು ಮಾಡಿರಿ.
  • ಹಾನಿಯಾಗದಂತೆ ಸಂಗ್ರಹಿಸಿರಿ.
  • ರಾಸಾಯನಿಕ ಸಂರಕ್ಷಕಗಳಿಂದ ಬೆಳೆಗಳನ್ನು ಕಾಪಾಡಿ.
                                                                     ಬೆಳೆ ಕೊಯ್ಲು

 ಆರ್ಗಾನಿಕದ ಕೃಷಿಗಾಗಿ ಪ್ರಮುಖ ಸಲಹೆಗಳು

✔️ ಮಣ್ಣಿನ ಪರೀಕ್ಷೆ ಮಾಡಿರಿ.
✔️ ಕೃಷಿ ಇಲಾಖೆಯಿಂದ ರೈತರ ತರಬೇತಿ ಪಡೆಯಿರಿ.
✔️ ಸ್ಥಳೀಯ ಕೃಷಿ ತಜ್ಞರ ಸಲಹೆ ಪಡೆಯಿರಿ.
✔️ ಧೈರ್ಯದಿಂದ ನಿರಂತರ ಪ್ರಯತ್ನ ಮಾಡಿ.

ಆರ್ಗಾನಿಕ್ ವಿಧಾನದಲ್ಲಿ ಬೆಳೆ ಬೆಳೆಯುವುದು ಸ್ವಲ್ಪ ಶ್ರಮ ಮತ್ತು ಸಮಯವನ್ನು ಬೇಡುತ್ತದೆ. ಆದರೆ ದೀರ್ಘಾವಧಿಯಲ್ಲಿ ಇದು ಆರೋಗ್ಯಕರ, ಪರಿಸರ ಸ್ನೇಹಿ ಮತ್ತು ಲಾಭದಾಯಕವಾಗಿದೆ. 

ಆರ್ಗಾನಿಕ್ ಉತ್ಪನ್ನಗಳ ಮಾರುಕಟ್ಟೆ.

ಆರ್ಗಾನಿಕ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಆದ್ದರಿಂದ ಉತ್ಪನ್ನಗಳನ್ನು ಮಾರಾಟ ಮಾಡಲು, ಸ್ಥಳೀಯ ಮಾರುಕಟ್ಟೆಗಳು, ಆನ್ಲೈನ್ ಮಾರಾಟ, ರೈತ ಸಂಘಗಳನ್ನು ಗುರಿಯಾಗಿಸಿ.

👉 ಹೆಚ್ಚಿನ ಮಾಹಿತಿಗಾಗಿ: https://apeda.gov.in (ಭಾರತದ ಆರ್ಗಾನಿಕ್ ಕೃಷಿ ಮಾರ್ಗದರ್ಶನ) ಬೇಟಿ ನೀಡಿ.

ಸಾವಯವ ಕೃಷಿಯಲ್ಲಿನ ಸವಾಲುಗಳು ಮತ್ತು ಪರಿಹಾರಗಳು.

ಆರ್ಗಾನಿಕ್ ಫಾರ್ಮಿಂಗ್ ಸುಲಭ ಅಲ್ಲ, ಆದರೆ ಸರಿಯಾದ ಮಾರ್ಗದರ್ಶನ ಇದ್ದರೆ ಸಾಧ್ಯ.

ಇಲ್ಲಿನ ಸಾಮಾನ್ಯ ಸಮಸ್ಯೆಗಳೆಂದರೆ, ಉತ್ಪನ್ನಗಳ ಕಡಿಮೆ ಉತ್ಪಾದನೆ, ಮತ್ತು ಕೀಟ ಸಮಸ್ಯೆಗಳು ಮತ್ತು ಸ್ಥಳೀಯ ಮಾರುಕಟ್ಟೆ ಸವಾಲು

ಪರಿಹಾರಗಳೆಂದರೆ, ಆರ್ಗಾನಿಕ್‌ ಕೃಷಿಯ ತರಬೇತಿ ಪಡೆಯುವುದು, ಮಾರುಕಟ್ಟೆ ನಿರ್ವಹಣೆ ತಿಳಿಯಲು  ಸಹಕಾರಿ ಸಂಘಗಳಲ್ಲಿ ಸೇರುವುದು, ಮತ್ತು ತಂತ್ರಜ್ಞಾನ ಬಳಕೆ  ಮಾಡುವುದು.

 

FAQs (ಸಾಮಾನ್ಯ ಪ್ರಶ್ನೆಗಳು)

1. ಆರ್ಗಾನಿಕ್ ಫಾರ್ಮಿಂಗ್ ಲಾಭಕರವೇ?

ಹೌದು, ಇದು ಆರೋಗ್ಯ ಮತ್ತು ಆರ್ಥಿಕವಾಗಿ ಲಾಭಕರ.

2. ಆರ್ಗಾನಿಕ್ ಕೃಷಿ ಆರಂಭಿಸಲು ಎಷ್ಟು ವೆಚ್ಚ ಬೇಕು?

ಪ್ರಾರಂಭದಲ್ಲಿ ಸ್ವಲ್ಪ ಹೆಚ್ಚು ವೆಚ್ಚ ಆಗಬಹುದು, ಆದರೆ ನಂತರ ಲಾಭ ಹೆಚ್ಚು.

3. ಆರ್ಗಾನಿಕ್ ಉತ್ಪನ್ನಗಳನ್ನು ಎಲ್ಲಲ್ಲಿ ಮಾರಬಹುದು?

ಸ್ಥಳೀಯ ಮಾರುಕಟ್ಟೆ, ಆನ್ಲೈನ್ ಮತ್ತು ರೈತ ಮೇಳಗಳಲ್ಲಿ ಮಾರಬಹುದು.

4. ಆರ್ಗಾನಿಕ್ ಫಾರ್ಮಿಂಗ್ನಲ್ಲಿ ಯಾವ ಬೆಳೆ ಉತ್ತಮ?

ತರಕಾರಿ, ಹಣ್ಣು ಮತ್ತು ಧಾನ್ಯಗಳು ಉತ್ತಮ.

5. ಕೀಟ ನಿಯಂತ್ರಣ ಹೇಗೆ ಮಾಡುವುದು?

ನೈಸರ್ಗಿಕ ವಿಧಾನಗಳನ್ನು ಬಳಸಬೇಕು.

6. ಆರ್ಗಾನಿಕ್ ಪ್ರಮಾಣಪತ್ರ ಬೇಕೇ?

ಹೌದು, ಮಾರುಕಟ್ಟೆಗಾಗಿ ಪ್ರಮಾಣಪತ್ರ ಸಹಾಯಕ.

Top of Form

 

Bottom of Form

ಆರ್ಗಾನಿಕ್ ಫಾರ್ಮಿಂಗ್ ರೈತರ ಪ್ರೇರಣಾದಾಯಕ ಕಥೆಗಳು.

ಆರ್ಗಾನಿಕ್ ಫಾರ್ಮಿಂಗ್ ಕೇವಲ ಕೃಷಿ ವಿಧಾನವಲ್ಲಅದು ಒಂದು ಜೀವನಶೈಲಿ. ಅನೇಕ ರೈತರು ರಾಸಾಯನಿಕ ಕೃಷಿಯಿಂದ ದೂರ ಸರಿದು, ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ. ಇಲ್ಲಿ ಕೆಲವು ಪ್ರೇರಣಾದಾಯಕ ಕಥೆಗಳು:

ಕರ್ನಾಟಕದ ನಿಜವಾದ ಆರ್ಗಾನಿಕ್ ರೈತರ ಯಶೋಗಾಥೆಗಳು.

ಆರ್ಗಾನಿಕ್ ಫಾರ್ಮಿಂಗ್ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ಭಾರತದಲ್ಲೇ ಮುಂಚೂಣಿಯಲ್ಲಿದೆ. ಇಲ್ಲಿ ಅನೇಕ ರೈತರು ನೈಸರ್ಗಿಕ ಕೃಷಿಯ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ನಿಜವಾದ ಕಥೆಗಳು ನಮಗೆ ಪ್ರೇರಣೆ ನೀಡುತ್ತವೆ.

 1. Subhash Palekar – ಶೂನ್ಯ ಬಜೆಟ್ ನೈಸರ್ಗಿಕ ಕೃಷಿಯ ಪಿತಾಮಹ.

ಸುಭಾಷ್ ಪಾಲೇಕರ್ ಅವರು ಮೂಲ ಮಹಾರಾಷ್ಟ್ರದವರಾದರೂ, ಕರ್ನಾಟಕದ ರೈತರಿಗೆ ಅವರ ಕೊಡುಗೆ ಅಪಾರವಾಗಿದೆ. ಅವರು "Zero Budget Natural Farming (ZBNF)" ವಿಧಾನವನ್ನು ಪರಿಚಯಿಸಿದರು.

                                                         ಸುಭಾಷ್ ಪಾಲೇಕರ್

Zero Budget Natural Farming (ZBNF) ಸ್ಥಾಪನೆ.

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಲ್ಲದೆ ಕೃಷಿ ಮಾಡುವ ವಿಧಾನವನ್ನು ಪರಿಚಯಿಸಿದರು.  ರೈತರು ಖರ್ಚು ಇಲ್ಲದೇ (Zero Budget) ಕೃಷಿ ಮಾಡುವ ಮಾರ್ಗ ತೋರಿಸಿದರು. ಪ್ರಸ್ತುತ ದೇಶದಾದ್ಯಂತ ಲಕ್ಷಾಂತರ ರೈತರು ವಿಧಾನವನ್ನು ಅಳವಡಿಸಿಕೊಂಡಿದ್ದಾರೆ

ಪ್ರಕೃತಿಯೊಂದಿಗೆ ಕೃಷಿ (Natural Farming Concept).

ಮಣ್ಣಿನ ಸಹಜ ಫಲವತ್ತತೆಯನ್ನು ಉಳಿಸುವ ವಿಧಾನವಾಗಿ, ಗೋಮಯ, ಗೋಮೂತ್ರದಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ, ಪರಿಸರ ಸ್ನೇಹಿ ಕೃಷಿ ವಿಧಾನವನ್ನು ಪ್ರಚಾರ ಮಾಡಿದರು

 ZBNF ವಿಧಾನದಿಂದ ಖರ್ಚು ಕಡಿಮೆ + ಲಾಭ ಹೆಚ್ಚು. ಹಲವಾರು ರೈತರು ವಿಧಾನದಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ.

Subhash Palekar ಅವರು 4 ಪ್ರಮುಖ ತಂತ್ರಗಳನ್ನು ಪರಿಚಯಿಸಿದರು:

  • ಜೀವಾಮೃತ (Jeevamrutha) – ಮಣ್ಣಿನ ಜೀವಶಕ್ತಿ ಹೆಚ್ಚಿಸಲು.
  • ಬೀಜಾಮೃತ (Beejamrutha) – ಬೀಜ ಶುದ್ಧೀಕರಣ.
  • ಆಚ್ಛಾದನ (Mulching) – ಮಣ್ಣಿನ ತೇವಾಂಶ ಕಾಪಾಡಲು.
  • ವಾಫ್ಸಾ (Waaphasa) – ಮಣ್ಣಿನಲ್ಲಿ ಗಾಳಿ-ನೀರು ಸಮತೋಲನ.

ಈ ಸಾವಯವ ವಿಧಾನವನ್ನು ಅನುಸರಿಸುವ ಮೂಲಕ, ರಾಸಾಯನಿಕ ಕೃಷಿಯಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಿದರು.  ಆರೋಗ್ಯಕರ ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡಿದರು. ಜೈವಿಕ ವೈವಿಧ್ಯತೆಯನ್ನು ಉಳಿಸಿದರು.

ಸುಭಾಷ್‌ ಪಾಲೇಕರ್‌ ಅವರು ಭಾರತದಲ್ಲಿ ಆರ್ಗಾನಿಕ್ ಕೃಷಿಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು. ಹಲವು ರಾಜ್ಯಗಳಲ್ಲಿ ಸರ್ಕಾರಗಳು ವಿಧಾನವನ್ನು ಉತ್ತೇಜಿಸುತ್ತಿವೆ. ಸಾವಿರಾರು ತರಬೇತಿ ಶಿಬಿರಗಳನ್ನು ನಡೆಸಿ ರೈತರಿಗೆ ಜ್ಞಾನ ಹಂಚಿದರು.ಪ್ರಕೃತಿಯೊಂದಿಗೆ ಕೃಷಿ ಮಾಡಬೇಕುಎಂಬ ತತ್ವವನ್ನು ಜನರಿಗೆ ಪರಿಚಯಿಸಿದರು. ಭಾರತದಲ್ಲಿ ಸಾವಯವ ಕೃಷಿಗೆ ಹೊಸ ಕ್ರಾಂತಿ ತಂದರು. ಇಂದು ಕರ್ನಾಟಕದ ಸಾವಿರಾರು ರೈತರು ಅವರ ವಿಧಾನ ಅನುಸರಿಸುತ್ತಿದ್ದಾರೆ

 2. ಎಲ್‌ ನಾರಾಯಣ ರೆಡ್ಡಿಕರ್ನಾಟಕದ ಆರ್ಗಾನಿಕ್ ಕೃಷಿಯ ಮಾದರಿ ರೈತ.

ಎಲ್‌ ನಾರಾಯಣ ರೆಡ್ಡಿ ಅವರು ದೊಡ್ಡಬಳ್ಳಾಪುರದ ಸೋರಹುಣಸೆ ಗ್ರಾಮದ ರೈತರು. ಇವರು ಕರ್ನಾಟಕದ ಪ್ರಸಿದ್ಧ ಸಾವಯವ ಕೃಷಿ (Organic Farming) ಮಾದರಿ ರೈತರಲ್ಲಿ ಒಬ್ಬರು. ಅವರು ರಾಸಾಯನಿಕ ಕೃಷಿಯನ್ನು ತೊರೆದು, ಸಂಪೂರ್ಣವಾಗಿ ಪ್ರಕೃತಿ ಆಧಾರಿತ ಕೃಷಿ ವಿಧಾನಗಳನ್ನು ಅನುಸರಿಸಿ ಯಶಸ್ಸು ಸಾಧಿಸಿದರು.

                                                ಎಲ್‌ ನಾರಾಯಣ ರೆಡ್ಡಿ  ಕೃಪೆ:ಅಂತರ್ಜಾಲ

    ನೈಸರ್ಗಿಕ ಕೃಷಿಯ ಅನುಷ್ಠಾನ ಮಾಡಿದರು. ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸಂಪೂರ್ಣವಾಗಿ ಬಿಟ್ಟರು. ಮಣ್ಣಿನ ಆರೋಗ್ಯ ಕಾಪಾಡಲು ಮಲ್ಚಿಂಗ್ (Mulching) ವಿಧಾನವನ್ನು ಹೆಚ್ಚು ಬಳಸುತ್ತಾ, ಪ್ರಕೃತಿಯೊಂದಿಗೆ ಹೊಂದಿಕೊಂಡ ಕೃಷಿ ಪದ್ಧತಿಯನ್ನು ಅನುಸರಿಸಿದರು.

    ಬಹುಬೆಳೆ (Multi Cropping) ಪದ್ಧತಿಯನ್ನು ಅನುಸರಿಸಿ, ಒಂದೇ ಜಾಗದಲ್ಲಿ ಹಲವಾರು ಬೆಳೆಗಳನ್ನು ಬೆಳೆಸುವ ಮೂಲಕ ಆದಾಯ ಹೆಚ್ಚಿಸಿಕೊಂಡರು.

    ಮುಖ್ಯವಾಗಿ, ಸಪೋಟಾ (ಚಿಕ್ಕು), ಮಾವು, ಬಾಳೆ, ತೆಂಗು, ಅಡಿಕೆ ಇತ್ಯಾದಿಗಳನ್ನು ಒಟ್ಟಾಗಿ ಬೆಳೆಯುವ ವಿಧಾನವು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ ಮತ್ತು ಅಪಾಯವನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಹೊರಗಿನ ಗೊಬ್ಬರ ಖರೀದಿ ಬೇಡವೆಚ್ಚವು ಕಡಿಮೆ, ಸ್ವಂತ ಸಂಪನ್ಮೂಲಗಳ ಬಳಕೆ ಮಾಡುವುದರಿಂದ, ಈ ಬಹುಬೆಳೆ ಕೃಷಿಯು  ಲಾಭದಾಯಕವಾಗಿದೆ.  ಇಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ಪರಿಸರ ರಕ್ಷಣೆ ಎರಡೂ ಆಗುತ್ತದೆ.ಇದು ಮಣ್ಣಿನ ಜೀವಾಣುಗಳನ್ನು ಕಾಪಾಡುವ ವಿಧಾನವಾಗಿದೆ.

ನೀರಿನ ಸಂರಕ್ಷಣೆ ಮಾಡಿ, ಜೈವಿಕ ವೈವಿಧ್ಯತೆಯನ್ನು (biodiversity) ಉಳಿಸಿದರು. ಇತರ ರೈತರಿಗೆ ಮಾದರಿಯಾದರು. ಅನೇಕ ರೈತರು ಇವರ ಕೃಷಿ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇವರ ತೋಟವನ್ನು ಪ್ರಯೋಗಾಲಯ (model farm) ಆಗಿ ಬಳಸಲಾಗಿ, ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಎಲ್‌ ನಾರಾಯಣ ರೆಡ್ಡಿ ಅವರು,
👉
ಪ್ರಕೃತಿ ಸ್ನೇಹಿ ಕೃಷಿಯನ್ನು ಅನುಸರಿಸಿ ಯಶಸ್ಸು ಸಾಧಿಸಿದರು.
👉
ಬಹುಬೆಳೆ ಪದ್ಧತಿ ಮೂಲಕ ತಮ್ಮ ಆದಾಯ ಹೆಚ್ಚಿಸಿದರು.
👉
ಇತರ ರೈತರಿಗೆ ಪ್ರೇರಣೆ ನೀಡಿದ ಮಾದರಿ ರೈತರಾದರ.

“ಭಾರತದ ಸಾವಯವ ಕೃಷಿ ಮಾರ್ಗದರ್ಶನಕ್ಕಾಗಿ ಇಲ್ಲಿ ಭೇಟಿ ನೀಡಿ”

https://agricoop.nic.in 

ಕವಿತಾ ಮಿಶ್ರಾ ಅವರ ಕಥೆ ಮಹಿಳೆಯರು ಕೃಷಿಯಲ್ಲಿ ಹೇಗೆ ಸ್ವಾವಲಂಬಿಯಾಗಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಅವರು ಕೇವಲ ರೈತೆಯಾಗಿರದೆ, ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿ ನಿಂತಿದ್ದಾರೆ.

                                                                ಶ್ರೀಮತಿ ಕವಿತಾ ಮಿಶ್ರಾ              ಕೃಪೆ:ಪ್ರಜಾವಾಣಿ

ಆರಂಭದ ಜೀವನ ಮತ್ತು ಪ್ರೇರಣೆ.

ಶ್ರೀಮತಿ ಕವಿತಾ ಮಿಶ್ರಾ ಅವರು ರಾಯಚೂರಿನ, ಕವಿತಾಳ್‌ ಎಂಬ ಊರಿನ ಒಂದ ಸಾಮಾನ್ಯ ಕುಟುಂಬದಿಂದ ಬಂದವರು. ಕಂಪ್ಯೂಟರ್‌ ಎಂಜಿನಿಯರ್‌ ಆಗಿದ್ದ ಇವರಿಗೆ  ಆರಂಭದಲ್ಲಿ ಕೃಷಿಯ ಬಗ್ಗೆ ಹೆಚ್ಚಿನ ಅನುಭವ ಇರಲಿಲ್ಲ. ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ ಇವರು, ಇನ್ಫೋಸಿಸ್‌ ನ ಉದ್ಯೂಗವನ್ನು ತೊರೆದು  ಊರಿನಲ್ಲಿಯೇ ಕೃಷಿಯನ್ನು ಆರಂಭಿಸಿದರು.

ಕಡುಬಿಸಿಲಿನ ನಾಡು, ನೀರಿನ ಹಾಹಾಕಾರ ಇರುವ ರಾಯಚೂರಿನಲ್ಲಿ, ಕಲ್ಲುಗುಡ್ಡವನ್ನು ಹಸನು ಮಾಡಿ, ವ್ಯವಸಾಯಕ್ಕೆ ಯೋಗ್ಯವಲ್ಲದ,  ಸುಮಾರು ಎಂಟು ಎಕರೆ ಭೂಮಿಯಲ್ಲಿ ಶ್ರೀಗಂಧವನ್ನು ಬೆಳೆದು ಯಶಸ್ಸು ಕಂಡ ಕರ್ನಾಟಕದ ಧೀಮಂತ ಮಹಿಳೆ ಶ್ರೀಮತಿ ಕವಿತಾ ಮಿಶ್ರ.

ಆರಂಭದಲ್ಲಿ ದಾಳಿಂಬೆ ಬೆಳೆಯನ್ನು ಬೆಳೆದ ಕವಿತಾ ಅವರು, ಸೋಲನ್ನು ಅನುಭವಿಸಿದರು. ನಂತರ ಒಂದೇ ಬೆಳೆಯನ್ನು ಬೆಳೆದರೆ, ಸಫಲತೆ ಸಿಗುವುದಿಲ್ಲ ಎಂದರಿತ ಅವರು, ಮಿಶ್ರ ವ್ಯವಸಾಯವನ್ನು ಆಯ್ದುಕೊಂಡರು. ಅದರಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆದರು. ಶ್ರೀಗಂಧ, ಮಾವು, ದಾಳಿಂಬೆ, ಸೀಬೆ, ಸೀತಾಫಲ,ನಿಂಬೆ, ಬೆಟ್ಟದನೆಲ್ಲಿ, ಸಾಗುವಾನಿ, ಮೋಸಂಬಿ, ಕರಿಬೇವು, ನುಗ್ಗೆಯಂತಹ ಮರ ಗಿಡಗಳ ಜೊತೆಗೆ ಕುರಿ, ಆಡು, ಕೋಳಿ, ಹಸು, ಎಮ್ಮೆಗಳನ್ನು ಸಾಕುತ್ತಿದ್ದಾರೆ. ಇವುಗಳಿಂದ ವರ್ಷಕ್ಕೆ ಸುಮಾರೂ ಇಪ್ಪತ್ತು ಲಕ್ಷಕ್ಕೂ ಮಿಕ್ಕ ಆದಾಯ ಗಳಿಸುತ್ತಿದ್ದಾರೆ. ಈ ರೀತಿಯ ಸಮಗ್ರ ಕೃಷಿಯನ್ನು ಆಯ್ದುಕೊಂಡು ಸ್ಥಿರ ಆರ್ಥಿಕತೆಯಲ್ಲಿ ಆದಾಯ ಗಳಿಸುವ ಮಾರ್ಗವನ್ನು ಯುವಜನತೆಗೆ ತೋರಿಸಿಕೊಟ್ಟಿದ್ದಾರೆ. 

    ಶ್ರೀಮತಿ ಕವಿತಾ ಮಿಶ್ರಾ  ಅವರ ಕಥೆ ಮಹಿಳೆಯರಿಗೆ ಒಂದು ಸಂದೇಶ,  ಕೃಷಿ ಪುರುಷರಿಗಷ್ಟೇ ಸೀಮಿತವಲ್ಲಮಹಿಳೆಯರೂ ಯಶಸ್ವಿ ರೈತರಾಗಬಹುದು. ಸಣ್ಣ ಮಟ್ಟದಿಂದ ಆರಂಭಿಸಿದರೂ ದೊಡ್ಡ ಸಾಧನೆ ಸಾಧ್ಯ.

ಆರ್ಗಾನಿಕ್‌ ಕೃಷಿಯಲ್ಲಿನ ಯಶಸ್ಸಿನ ಗುಟ್ಟುಗಳು.

  • ಧೈರ್ಯ ಮತ್ತು ನಿರಂತರ ಪ್ರಯತ್ನ.
  • ನೈಸರ್ಗಿಕ ವಿಧಾನಗಳಲ್ಲಿ ನಂಬಿಕೆ.
  • ಗ್ರಾಹಕರ ಜೊತೆ ನೇರ ಸಂಪರ್ಕ.
  • ಹೊಸ ತಂತ್ರಜ್ಞಾನ ಬಳಕೆ. Bottom of Form

ಆರ್ಗಾನಿಕ್ ಫಾರ್ಮಿಂಗ್ ನಮ್ಮ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವ ಅತ್ಯುತ್ತಮ ಕೃಷಿ ವಿಧಾನವಾಗಿದೆ. ಇದು ರೈತರಿಗೆ ಉತ್ತಮ ಆದಾಯವನ್ನು ನೀಡುವುದರ ಜೊತೆಗೆ ಸಮಾಜಕ್ಕೆ ಆರೋಗ್ಯಕರ ಆಹಾರ ಒದಗಿಸುತ್ತದೆ. ನೀವು ಕೃಷಿಯಲ್ಲಿ ಆಸಕ್ತಿ ಹೊಂದಿದ್ದರೆ, ಆರ್ಗಾನಿಕ್ ಫಾರ್ಮಿಂಗ್ ಉತ್ತಮ ಆಯ್ಕೆ.

Bottom of Form

 


ಮುಕ್ತಾಯ.

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????