“ಕೃಷ್ಣ–ಕುಚೇಲರಿಂದ ಕರ್ಣ–ದುರ್ಯೋಧನರ ತನಕ, ಜೀವನದಲ್ಲಿ ಸ್ನೇಹದ ಶಾಶ್ವತ ಮೌಲ್ಯ, ಮಾನಸಿಕ ಬೆಂಬಲ ಮತ್ತು ನಿಸ್ವಾರ್ಥ ಬಾಂಧವ್ಯದ ಬಗ್ಗೆ ಆಳವಾದ ಕನ್ನಡ ಲೇಖನ.”
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಲೇಖಕಿ:ನಾಗಲಕ್ಷ್ಮಿ ಕೆ.ಎನ್ ದಿನಾಂಕ:೦೬.೧೨.೨೦೨೫.
“ಸ್ನೇಹದ ನಿಜವಾದ ಮೌಲ್ಯ, ಪುರಾಣ ಕಥೆಗಳು, ಮಾನಸಿಕ ಆರೋಗ್ಯಕ್ಕೆ ನೀಡುವ ಬಲ, ಮತ್ತು ಬದುಕನ್ನು ಬದಲಾಯಿಸುವ ಗೆಳೆತನದ ಸಾರ್ಥಕತೆಯನ್ನು ವಿವರಿಸುವ ಕನ್ನಡ ಲೇಖನ.”
ಮಾನವನ
ಜೀವನದಲ್ಲಿ ಅನೇಕ ಸಂಬಂಧಗಳು ಹೃದಯವನ್ನು ಸ್ಪರ್ಶಿಸುತ್ತವೆ. ಅದರಲ್ಲಿ
ಕೆಲವು ಕಾಲಾವಧಿಯ ಸಂಬಂಧದೊಂದಿಗೆ
ಕಟ್ಟಿಹಾಕಲ್ಪಟ್ಟಿದ್ದರೆ,ಇನ್ನೂ
ಕೆಲವು
ಜವಾಬ್ದಾರಿಯವು, ಮತ್ತೂ ಕೆಲವು ನಿಶ್ಚಿತ ಕರ್ತವ್ಯಗಳಿಂದ ಬೆಸೆದಿರುತ್ತವೆ. ಆದರೆ ಮನಸ್ಸಿನ ಭಾವನೆಗಳನ್ನು ಅರಿತು,
ನೋವಿನಲ್ಲಿ ಬೆಂಬಲ ನೀಡುವ, ಸಂತಸದ ಸಮಯದಿ ಹೃದಯದಿಂದ ನಕ್ಕು ಹಾರೈಸುವ ‘ಸ್ನೇಹ’ ಎಂಬ ಬಾಂಧವ್ಯ ಮಾತ್ರ
ಶಾಶ್ವತ ಮೌಲ್ಯ ಹೊಂದಿದೆ.
ಸ್ನೇಹವು ನಮ್ಮ ವ್ಯಕ್ತಿತ್ವಕ್ಕೆ ಬಣ್ಣ
ತುಂಬುವ, ಮತ್ತು ನಮ್ಮ ಬದುಕನ್ನು ನೆಮ್ಮದಿಯಿಂದ
ಸಾಗಿಸುವ, ಪ್ರತಿ ಕ್ಷಣಕ್ಕೂ ಅರ್ಥ ನೀಡುವ ಅಪರೂಪದ
ಸಂಬಂಧ. ನಿಜವಾದ ಸ್ನೇಹ ಒಮ್ಮೆ ಜೀವನಕ್ಕೆ ಬಂದರೆ, ಅದು ಕತ್ತಲೆಯ ಪ್ರಯಾಣಕ್ಕೆ ಬೆಳಕು ನೀಡುವ ದೀಪವಾಗುತ್ತದೆ; ಮನಸ್ಸಿಗೆ ನೆಲೆ ನೀಡುವ ಮನೆಯಾಗುತ್ತದೆ.
ಸ್ನೇಹ ಒಂದು ನಿಷ್ಕಪಟ ಭಾವನೆ. ಇದು ಸ್ವಾರ್ಥವಿಲ್ಲದ ಸಂಬಂಧ, ಆತ್ಮೀಯತೆ ಮತ್ತು ಅರ್ಥಪೂರ್ಣ ಸಂಬಂಧದ ಪ್ರತೀಕ. ಜೀವನಕ್ಕೆ ಉಲ್ಲಾಸವೂ, ಕಷ್ಟಕಾಲದಲ್ಲಿ ದೊರೆಯುವ ಧೈರ್ಯವೂ ಸ್ನೇಹಿತರಿಂದಲೇ ಸಾಧ್ಯ.
ಸ್ನೇಹ
ಎಂದರೆ ನಗುನಗುತ್ತಾ ಮಾತನಾಡುವುದು, ಜೊತೆಯಾಗಿ ಸಮಯ ಕಳೆಯುವುದಲ್ಲ. ಒಬ್ಬರಿಗೊಬ್ಬರು
ಪರಸ್ಪರರೆಡೆಗೆ ತೋರುವ ನಿಸ್ವಾರ್ಥ ಭಾವನೆಗಳು, ವಿಶ್ವಾಸ, ಸಹಾನುಭೂತಿ, ಮತ್ತು ಎಲ್ಲವನ್ನು ಒಪ್ಪಿಕೊಳ್ಳುವ
ಶಕ್ತಿಯೂ ಆಗಿರುವ
ಅತ್ಯಂತ ಗಾಢವಾದ ಜೀವನಸಂಬಂಧ.
ನಾವು
ದಿನವಿಡೀ ಸಮಾಜದೊಂದಿಗೆ ವ್ಯವಹರಿಸಲು ಅನೇಕ ಮುಖಗಳನ್ನು ಧರಿಸುತ್ತೇವೆ.
ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ, ಜಗತ್ತಿನ ನಿರೀಕ್ಷೆಗಳು….. ಹೀಗೆ ಇನ್ನೂ ಹಲವು, ಆದರೆ ಸ್ನೇಹಿತನ ಮುಂದೆ
ಮಾತ್ರ ನಾವು ನಿಜವಾದ ನಾವು ಮಾತ್ರವೇ
ಆಗಿರುತ್ತೇವೆ.
ಸ್ನೇಹಿತರು ನಮ್ಮ ವ್ಯಕ್ತಿತ್ವವನ್ನು, ನಮ್ಮ
ದುರ್ಬಲತೆಗಳನ್ನು, ನಮ್ಮ ತಪ್ಪುಗಳನ್ನೂ ಒಪ್ಪಿಕೊಂಡೇ
ನಮ್ಮೆಡೆಗೆ ನಿಂತುಕೊಳ್ಳುತ್ತಾರೆ.
ಅವರು ನಮಗೆ ಶಾಂತಿ, ಭರವಸೆ
ತುಂಬಿದ ಜಗತ್ತಿನ ಸುರಕ್ಷಿತ
ಸ್ಥಳ ನೀಡುತ್ತಾರೆ.
ಮೌಲ್ಯಗಳನ್ನು ಪ್ರತಿಬಿಂಬಿಸುವ ದೈನಂದಿನ ಅಭ್ಯಾಸಗಳು.👇
https://capturingdaysoflife.blogspot.com/2025/09/blog-post.html
ನಿಜವಾದ ಸ್ನೇಹವೆಂದರೆ ಸ್ವಾರ್ಥರಹಿತವಾಗಿ, ಲಾಭ-ನಷ್ಟಗಳನ್ನು ಲೆಕ್ಕಿಸದೆ ನಮ್ಮ ಜೊತೆ ಬೆಂಬಲವಾಗಿ ನಿಂತುಕೊಳ್ಳುವುದು.
ಸತ್ಯವು ನೋವು
ನೀಡುತ್ತದೆ ಎಂದು ತಿಳಿದರೂ, ಪ್ರಾಮಾಣಿಕ ಸಲಹೆ
ಹೇಳುವ ಧೈರ್ಯ ಹೊಂದಿರುವ ವ್ಯಕ್ತಿ.
ನಮ್ಮ
ಮಾತುಗಳ ಅರ್ಥವನ್ನು ಮುಖಾರವಿಂದವನ್ನು
ನೋಡಿಯೇ ಏನೆಂದು ಕಂಡುಹಿಡಿಯುವ, ನಮ್ಮ ನಗುವಿನ ಹಿಂದಿರುವ
ನೋವನ್ನು ಹೇಳದೆಯೇ ಗುರುತಿಸುವವನು.
ಒಂದೇ ತರದ ಮನಸ್ಸಿನ ಹರಿವುಳ್ಳವನೇ
ನಿಜವಾದ ಸ್ನೇಹಿತ.
ದೇಹಗಳು ಕಾಲದ ಅಂತರದಲ್ಲಿ ಎಷ್ಟೇ ದೂರ
ಇದ್ದರೂ ಮನಸ್ಸುಗಳು ದೂರವಾಗದ ಸಂಬಂಧಮತ್ತು ನಿರಂತರ ವಿಶ್ವಾಸದ ಬಲ ಹೊಂದಿರುವ
ಸಂಬಂಧವೇ ಈ ಸ್ನೇಹ ಸಂಬಂಧ.
ಈ“ಸ್ನೇಹ” ಎನ್ನುವುದು ಒಂದು ಅಚ್ಚರಿಯ ಸಂಬಂಧ. ಇದು ನೈಸರ್ಗಿಕವಾಗಿ ಬೆಳೆಯುವುದು, ಮನಸ್ಸುಗಳಿಂದ ಕಟ್ಟಲ್ಪಡುವುದು, ಮತ್ತು ಕಾಲದೊಂದಿಗೆ ಆಸಕ್ತಿಯಿಲ್ಲದೇ ಬೆಳೆಯುವ ನಂಟು.
ಸ್ನೇಹದಹೆಸರಿನಲ್ಲಿಅನೇಕ ಮಂದಿ ಪರಿಚಯವಾಗುತ್ತಾರೆ, ನಸು ನಗುತ್ತಾರೆ, ಹೃದಯ ಮುಟ್ಟುತ್ತಾರೆ ! ಆದರೆ ಕೆಲವರು ಮಾತ್ರ ನಮ್ಮನ್ನು ಸಂಪೂರ್ಣ ಬದಲಾಯಿಸುತ್ತಾರೆ. ಅಂತವರೇ ನಮ್ಮ ಅತ್ಯಮೂಲ್ಯ ಸ್ನೇಹಿತರು, ಇಂತವರ ಗೆಳೆತನವೇ ನಮ್ಮ
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಸಂತೋಷದ ಹಾರ್ಮೋನನ್ನು ಹೆಚ್ಚಿಸುತ್ತದೆ. ಜೀವನದ ದೃಷ್ಟಿಕೋನವನ್ನು ಆಳಗೊಳಿಸುತ್ತದೆ.
ಸ್ನೇಹ
ಸಂಬಂಧ ಮಾನಸಿಕ ಆರೋಗ್ಯಕ್ಕೆ ಬಲ ನೀಡುತ್ತದೆ. ಉತ್ತಮ ಸ್ನೇಹಿತರು ಇದ್ದರೆ ಬದುಕಿನ ಒತ್ತಡ ಹಗುರವಾಗುತ್ತದೆ. ಅವರು ಬದುಕಿಗೆ ನಗು, ಧೈರ್ಯ, ಮತ್ತು
ಮನಸ್ಸಿಗೆ ಆಮ್ಲಜನಕದಂತೆ ಕೆಲಸ ಮಾಡುತ್ತಾರೆ.
ಜೀವನನಿರ್ಧಾರಗಳಲ್ಲಿ
ದೃಢತೆ ತೋರುವುದರಲ್ಲಿ ಒಬ್ಬ ಉತ್ತಮ ಸ್ನೇಹಿತನ
ಸಲಹೆಯು, ಭವಿಷ್ಯವನ್ನು
ಬದಲಾಯಿಸುವಷ್ಟು ಶಕ್ತಿಯನ್ನು ಹೊಂದಿದೆ.
ಸ್ನೇಹಿತರು
ನಮ್ಮ ತಪ್ಪುಗಳನ್ನು ಗುರುತಿಸಿ ಸರಿಯಾದ ದಿಕ್ಕಿನಲ್ಲಿ ನಡೆಸುವ ಕನ್ನಡಿಯ ಪ್ರತಿಬಿಂಬದಂತೆ.
ಸಾಮಾನ್ಯ
ಕ್ಷಣಗಳನ್ನೂ ವಿಶೇಷ ಮಾಡಿ ಜೀವನಕ್ಕೆ ಬಣ್ಣ ಬಳಿದು ಬಿಡುವ ಮಾಯಾ ಶಕ್ತಿಯನ್ನು ಸ್ನೇಹಿತರು
ಮಾತ್ರ ಹೊಂದಿರುತ್ತಾರೆ.
ಎಷ್ಟೋ
ಪುರಾಣ ಕಥೆಗಳು ಮತ್ತು ಮಹಾಭಾರತದ ಘಟನೆಗಳು ಸ್ನೇಹ ಎಂಬ ಅಮೂಲ್ಯ ಬಾಂಧವ್ಯದ
ಸಾರ್ಥಕತೆಯನ್ನು ಹೇಳುತ್ತವೆ. ಕೃಷ್ಣ–ಕುಚೇಲ, ಕೃಷ್ಣ–ಅರ್ಜುನ, ಕರ್ಣ–ದುರ್ಯೋಧನ ಇವರ
ಸ್ನೇಹ ಮಾರ್ಗವೇ ವಿಭಿನ್ನ.
ಕೃಷ್ಣ
ಮತ್ತು ಕುಚೇಲರು ತಮ್ಮ ಬಾಲ್ಯದಲ್ಲಿ
ಶಿಕ್ಷಣ ಪಡೆಯುವಾಗ ಗುರುಕುಲದಲ್ಲಿ
ಒಂದೇ ಆಶ್ರಮದಲ್ಲಿ ಇದ್ದವರು. ಒಟ್ಟಿಗೆ ಆಟವಾಡಿದವರು, ವಿದ್ಯೆ ಕಲಿಯುವಾಗಿನ ಕಷ್ಟ–ಸುಖಗಳನ್ನು ಹಂಚಿಕೊಂಡವರು. ಶಿಕ್ಷಣ ಪೂರೈಸಿದ ನಂತರ, ಕೃಷ್ಣನು ಮಥುರದ ರಾಜನಾಗಿ, ಕುಚೇಲನು ದಾರಿದ್ರ್ಯದಲ್ಲಿ ಬದುಕುತ್ತಿದ್ದರೂ, ಅವರ ಸ್ನೇಹವು ಯಾವುದೇ ಸ್ಥಿತಿ-ಗತಿಗಳಿಗೆ ಮಣಿಯದೇ ಅಷ್ಟೇ ಪರಿಶುದ್ಧವಾಗಿ ಮುಂದುವರೆದಿತ್ತು.
ಪುರಾಣ ಕಥೆಗಳ ವ್ಯಕ್ತಿತ್ವಗಳು👇
https://capturingdaysoflife.blogspot.com/2025/03/blog-post_28.html
ಒಮ್ಮೆ
ಕುಚೇಲನು ತನ್ನ ಬಾಲ್ಯದ ಸ್ನೇಹಿತನನ್ನು
ಬೇಟಿ ಮಾಡುವ ಸಮಯದಲ್ಲಿ ತಂದಿದ್ದ ಹಿಡಿ ಅವಲಕ್ಕಿಯನ್ನೇ
ಕೃಷ್ಣನು
ಸಂತೋಷದಿಂದ ಸ್ವೀಕರಿಸಿದ
ಕ್ಷಣವು, ಸ್ನೇಹದಲ್ಲಿ
ವಸ್ತುವಿನ ಬೆಲೆಗಿಂತ ಭಾವನೆಯೇ ಅಮೂಲ್ಯ ಎಂದು ಸಾರುತ್ತದೆ.
ಕೃಷ್ಣನು ತನ್ನ
ಗೆಳೆಯನು ಬೇಡುವ ಮುಂಚೆಯೇ ಸ್ನೇಹಿತನ
ಹೃದಯವನ್ನು ಓದಿ, ಅವನ ಮನೆತನವನ್ನೇ
ಪರಿಪೂರ್ಣ ಸಮೃದ್ಧಿಯಲ್ಲಿಟ್ಟನು. ಇದರಿಂದ ನಿಜವಾದ ಸ್ನೇಹದಲ್ಲಿ ಶ್ರದ್ಧೆ
ಮತ್ತು ನಿರ್ಲೋಪ ಪ್ರೀತಿ ಮಾತ್ರವೆ ಪ್ರಮುಖ.
ಇಲ್ಲಿ ಸ್ಥಾನಮಾನ, ಶ್ರೀಮಂತಿಕೆ,ದಾರಿದ್ರ್ಯ, ಅಧಿಕಾರ ಇವುಗಳಿಗೆ ಸ್ಥಾನ ಇಲ್ಲ.
ಕೃಷ್ಣ
ಮತ್ತು ಅರ್ಜುನರ ಸ್ನೇಹವು ಕೇವಲ ವೈಯಕ್ತಿಕ ಬಾಂಧವ್ಯವಲ್ಲ,
ಅದು ಧರ್ಮ–ನೀತಿ–ನಿಸ್ವಾರ್ಥ
ಮಾರ್ಗದ ಬಂಧ. ಅರ್ಜುನನು ಬಹುತೇಕ ಸಂದರ್ಭಗಳಲ್ಲಿ ಸಂಶಯದಲ್ಲಿ
ಕುಸಿದಾಗ,
ಕೃಷ್ಣನು ಗೆಳೆಯನಾಗಿ, ಗುರುವಾಗಿ, ದೇವರಾಗಿ ಮಾರ್ಗದರ್ಶಕನಾಗಿ ಜೊತೆಗೆ
ನಿಲ್ಲುತ್ತಾನೆ.
ಕೃಷ್ಣಾರ್ಜುನರ
ಸ್ನೇಹದಲ್ಲಿ
ಮುಖ್ಯವಾದುದು ಪರಸ್ಪರ ನಂಬಿಕೆ.
ಕೃಷ್ಣನು ಅರ್ಜುನನನಿಗೆ ಭಗವದ್ಗೀತೆಯನ್ನೇ
ಭೋಧಿಸಿ, ಯೋಧನಿಂದ ಯೋಗಿಯಾಗಿಯೂ
ರೂಪಿಸಿ, ಧರ್ಮ ರಕ್ಷಣೆಗಾಗಿ ತನ್ನನ್ನೇ
ಸಾರ್ಥಕಪಡಿಸಿಕೊಂಡ ಕ್ಷಣ.
ನಿಜವಾದ ಸ್ನೇಹಿತನು, ಯಾವಾಗಲೂ ನಮ್ಮ
ತಪ್ಪುಗಳನ್ನು ಸರಿ ಮಾಡಿ, ಸರಿದಾರಿಗೆ ಕೊಂಡುಯ್ಯುವವನಾಗಿರುತ್ತಾನೆ.
ಕೇವಲ ಸಮಾಧಾನ ನೀಡುವವನಾಗಿರದೆ.!
ವೈಜ್ಞಾನಿಕ ದೃಷ್ಠಿಕೋನದಿಂದ ಪುರಾಣಗಳ ವಿಶ್ಲೇಷಣೆ.👇
https://capturingdaysoflife.blogspot.com/2025/06/blog-post_17.html
ಕರ್ಣನು
ಸಮಾಜದಿಂದ ತಿರಸ್ಕರಿಸಲ್ಪಟ್ಟಾಗ, ದುರ್ಯೋಧನನೊಬ್ಬನೇ ಅವನನ್ನು ಸ್ನೇಹಿತನಾಗಿ ಸ್ವೀಕರಿಸಿದನು. ಆ ಕ್ಷಣದಿಂದಲೇ ಕರ್ಣನು
ದುರ್ಯೋಧನನನ್ನು ತನ್ನ ಪ್ರಾಣ ಸ್ನೇಹಿತನಾಗಿ ನೋಡಿದನು.
ಕರ್ಣ
ದುರ್ಯೋಧನರ ಸ್ನೇಹದಲ್ಲಿ ನಂಬಿಕೆ,
ಬದ್ಧತೆ ಮತ್ತು ಕೃತಜ್ಞತೆಗಳು ಮಹಾಭಾರತದುದ್ದಕ್ಕೂ ಎದ್ದು ತೋರುತ್ತವೆ. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನು ಕೌರವರ ಪರವಾಗಿ ಹೋರಾಡಿದ್ದು ಇದಕ್ಕೆ ಮಹತ್ತರ ಸಾಕ್ಷಿಯನ್ನು ಒದಗಿಸುತ್ತದೆ. ಯುದ್ದದ ಸಮಯದಲ್ಲಿ ಶ್ರೀ ಕೃಷ್ಣನಿಂದ ತನ್ನ ಜನ್ಮ ರಹಸ್ಯವನ್ನು ತಿಳಿದಿದ್ದ ಕರ್ಣನು ದುರ್ಯೋಧನನಿಗಾಗಿ ತನ್ನದೇ ಜೀವನ, ತನ್ನ ಕುಲ, ತನ್ನ
ಸತ್ಯ, ತನ್ನ ಹಕ್ಕು ಎಲ್ಲವನ್ನೂ
ತ್ಯಜಿಸಿ ತನ್ನ ಆಪ್ತಮಿತ್ರನ ಜೊತೆ ನಿಂತನು.
ಆದರೆ
ದುರ್ಯೋಧನನ ಮಾರ್ಗ ಅಧರ್ಮದ ದಿಕ್ಕಿನಲ್ಲಿ
ಸಾಗುತ್ತಿದ್ದರಿಂದ, ಕರ್ಣನ ಮಹಾ ಗುಣಗಳು ಜಗತ್ತಿನ
ಕಣ್ಣಿಗೆ ಕಾಣಲಿಲ್ಲ. ಸ್ನೇಹದ
ಬದ್ಧತೆ ಸರಿಯಾದ ವ್ಯಕ್ತಿಗೆ, ಸರಿಯಾದ ಮಾರ್ಗಕ್ಕೆ ಸೇರಿದಾಗ ಮಾತ್ರ ಅದು
ಪುಣ್ಯಕ್ಕೆ ಬದ್ದ, ಇಲ್ಲದಿದ್ದರೆ ಅದು ದುಃಖದ
ಬಲೆ.
ಸ್ನೇಹ
ಬಲವಾದದ್ದೇ ಆದರೂ ಅಧರ್ಮದ ಮಾರ್ಗದಲ್ಲಿ ನಿಂತ ಸ್ನೇಹ ಕೊನೆಯಲ್ಲಿ
ನೋವನ್ನೇ ತರಬಹುದು.
ಬದ್ಧತೆಯು ಸ್ನೇಹದಲ್ಲಿ ಮೌಲ್ಯವಾದದ್ದೇ
ಆದರೂ, ಸತ್ಯ–ಧರ್ಮಕ್ಕಿಂತ ಮೇಲಿಲ್ಲ.
ಇಂದಿನ
ಡಿಜಿಟಲ್ ಯುಗದಲ್ಲಿ ‘ಫ್ರೆಂಡ್ಸ್ ಲಿಸ್ಟ್’ ತುಂಬಾ ದೊಡ್ಡದಿರುತ್ತದೆ, ಆದರೆ ಮನದೊಳಗಿನ ಬಂಧಕ್ಕೆ
ಒಳಗಾದ ಸ್ನೇಹಿತರ ಸಂಖ್ಯೆ
ಬೆರಳೆಣಿಕೆಯಷ್ಟು ಮಾತ್ರವೆ.
ಸಾಮಾಜಿಕ ಜಾಲತಾಣಗಳು ಎಲ್ಲರನ್ನು ಹತ್ತಿರ
ತಂದರೂ, ನಿಜವಾದ ಸ್ನೇಹ ಮಾತ್ರ ಮುಖಾಮುಖಿಯಾಗಿ ಮಾತನಾಡಿ ಅರಿತುಕೊಂಡು ನಂಬಿಕೆ ಇಟ್ಟಾಗ
ಬೆಳೆಯುತ್ತದೆ.
ಉತ್ತಮ
ಸ್ನೇಹವನ್ನು ಪಡೆದಾಗ ಅದನ್ನು ಉಳಿಸುಕೊಳ್ಳುವುದು ಸಹ ಅಷ್ಟೇ
ಮುಖ್ಯವಾಗುತ್ತದೆ. ಸ್ನೇಹದಲ್ಲಿ
ಕೇವಲ ಮಾತನಾಡುವುದಲ್ಲ, ಕೇಳುವುದು ಇದೆ.
ಮತ್ತು ಸುಳ್ಳು ಹೇಳುವುದರಿಂದ ಸಂಬಂಧಗಳು
ದೀರ್ಘಕಾಲ ಬಾಳುವುದಿಲ್ಲ. ನಿರೀಕ್ಷೆಯಿಂದಲೇ ನಡೆಯುವ ಎಲ್ಲಾ ಸಂಬಂಧಗಳಂತೆ
ಸ್ನೇಹವೂ ಸಹ ಕಾಳಜಿ ಮತ್ತು ಸಮಯವನ್ನು ಬೇಡುತ್ತದೆ.
ಗೆಳೆಯರ ತಪ್ಪುಗಳನ್ನೂ
ದೋಷಗಳನ್ನೂ ಮನಸು ತುಂಬಿಸಿಕೊಂಡರೆ ಸ್ನೇಹ
ನಾಶವಾಗುತ್ತದೆ. ಆದ್ದರಿಂದ ಸ್ನೇಹದಲ್ಲಿ ಕ್ಷಮೆಯ ಗುಣವೂ ಮುಖ್ಯವಾಗುತ್ತದೆ.
ಉತ್ತಮ
ಬದುಕಿಗೆ ಹೇಗೆ ಗೆಳೆತನವು ಕಾರಣವಾಗುವುದೋ ಅಂತಹ ಸ್ನೇಹವನ್ನು ಕಳೆದುಕೊಳ್ಳುವ ಸಮಯಗಳೂ ಒಮ್ಮೊಮ್ಮೆ ಬಂದುಬಿಡುತ್ತವೆ. ಆದ್ದರಿಂದ ಸ್ನೇಹದಲ್ಲಿ
ಅತಿಯಾದ
ನಿರೀಕ್ಷೆಗಳು ಸಲ್ಲ. ಸ್ನೇಹಿತರು ಸುಲಭಕ್ಕೆ
ಸಿಕ್ಕರೆಂದು ಬೆಲೆಕೊಡದ ನಿರ್ಲಕ್ಷ್ಯ
ಮಾಡಬಾರದು. ಎಂತಹುದೇ ಸಮಯದಲ್ಲಿ
ನಂಬಿಕೆಯ ದ್ರೋಹ ಎಸಗಬಾರದು.
ಬೇರೊಬ್ಬರೊಂದಿಗೆ ತಮ್ಮ ಸ್ನೇಹಿತರನ್ನು ಹೋಲಿಕೆ ಮಾಡಿ ಅಸೂಯೆ
ಪಡಬಾರದು.
ಸ್ನೇಹವನ್ನು
ಪಡೆದು ಹೇಗೆ ಬದುಕಿಗೆ ಉಲ್ಲಾಸವನ್ನು ತುಂಬಿಕೊಳಳುತ್ತೇವೆಯೋ ಹಾಗೆಯೇ ಸ್ನೇಹವನ್ನು ಕಳೆದುಕೊಳ್ಳುವುದು ಸಹ ಜೀವನದ
ದೊಡ್ಡ ನೋವು ತರುವ ಸಂಗತಿಯಾಗಬಹುದು.
ಅದಕ್ಕೆ ಉತ್ತಮ ಸ್ನೇಹವನ್ನು ಮತ್ತು
ಅದಕ್ಕೆ ಕಾರಣರಾದ ಗೆಳೆಯರನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ.
"Friendship isn’t about who
you’ve known the longest. It’s about who walked in and stayed." “ಸ್ನೇಹ ಎಂದರೆ ಎಷ್ಟೋ ಕಾಲದಿಂದ ಇರುವವರಲ್ಲ, ನಂಬಿಕೆಯಿಂದ ಉಳಿಯುವವರ ಬಗ್ಗೆ!"
" ಮುಗ್ಧವಾದ ಮನಸ್ಸುಗಳ ಪ್ರೀತಿಯೇ ಸ್ನೇಹ."
"ಸ್ನೇಹ ಎಂಬುದೊಂದು
ಕೇವಲ ಒಂದು ಎಮೋಷನ್ ಅಲ್ಲ… ಅದು ಆತ್ಮದ ಸಂಪರ್ಕ."
ಕನ್ನಡ ಬಾಷೆ ಒಂದು ಸಂಸ್ಕ್ರತಿಯ ರಾಯಭಾರಿ👇
https://capturingdaysoflife.blogspot.com/2025/06/blog-post_9.html
1990ರ ದಶಕದಲ್ಲಿನ
ಗೆಳೆತನವು ಮೊಬೈಲ್ ಇಲ್ಲದೆ, ಇಂಟರ್ನೆಟ್ ಇಲ್ಲದೆಯೂ ಸ್ನೇಹದ ಸ್ಪರ್ಶ ಆಳವಾಗಿತ್ತು. ಆಗೆಲ್ಲ ವಿಶೇಷ ಸಂದರ್ಭಗಳಲ್ಲಿ ಕೈಯಿಂದ ಬರೆದ ಕಾರ್ಡ್ಗಳು, ಪ್ರತಿ ಕಾರ್ಡಿಗೆ ಒಂದೊಂದು ವೈಯಕ್ತಿಕ ಬರಹ ಸಂದೇಶ, ಒಂದೊಂದು ಚಿತ್ರ, ಒಂದೊಂದು ನೆನಪುಗಳನ್ನು ಹೊತ್ತ ದಿನಮಾನಗಳು ಆಗಿದ್ದವು.
ಶಾಲಾ
ಕಾಲೇಜುಗಳ ದಿನಗಳಲ್ಲಿ ಬರೆಯುತ್ತಿದ್ದ ಕೆಂಪು ಟಿಪ್ಪಣಿಗಳ ಡೈರಿ, ಅಲ್ಲಿ ಎಲ್ಲ ಗೆಳೆಯರ ಹೆಸರು, ಅವರ ಬಗ್ಗೆ ಒಬ್ಬೊಬ್ಬರು ಬರೆದಿದ್ದ ಸ್ನೇಹಪೂರ್ಣ ಸಾಲುಗಳು!..... ಎಲ್ಲವೂ ಅದ್ಭುತ ರೋಮಾಂಚನಕಾರಿ ಸ್ನೇಹದಲ್ಲಿ.
ಇಂದಿನ ಡಿಜಿಟಲ್
ಯುಗದಲ್ಲಿ ಸ್ನೇಹ
ಬಾಂದವ್ಯದ ಅಳತೆ ಬದಲಾಗಿಲ್ಲ. ಆದರೆ ಅದನ್ನು ಹೇಗೆ ವ್ಯಕ್ತಪಡಿಸುತ್ತೇವೆ ಎಂಬುದು ಮಾತ್ರ ತೀವ್ರವಾಗಿ ಬದಲಾಗಿದೆ.
Instagram Reels ಗಳಲ್ಲಿ ಸ್ನೇಹದ ಥ್ರೋಬ್ಯಾಕ್ ಫೋಟೋಗಳ ಜೊತೆಗೆ ಒಂದು ಸೌಂಡ್ ಟ್ರ್ಯಾಕ್ ಹಳೆಯ ದಿನಗಳ ನೆನಪನ್ನು ಮರುಕಳಿಸುತ್ತದೆ.
WhatsApp Stickers ಗಳಲ್ಲಿ ರಾರಾಜಿಸುವ ಸ್ನೇಹಿತರಿಗೆ ಕಳುಹಿಸಲ್ಪಡುವ
“You are my 4AM friend” ಅಥವಾ “Yaari
Forever” ಎಂಬ ಸ್ಟಿಕರ್ಗಳು.
Group Calls & Zoom Meets
ಆಪ್ ಗಳ ಮೂಲಕ ದೂರದೂರಿನಲ್ಲಿ ನೆಲೆಸಿರುವ ಗೆಳೆಯರು ಈಗ ಒಂದು ಕ್ಲಿಕ್ನಲ್ಲಿ ಹತ್ತಿರವಾಗುವರು.
ಹಳೆಯ
ದಿನಗಳಲ್ಲಿ ಸ್ನೇಹವು ನಗೆಯ ಆಸರೆಯಂತಿತ್ತು. ಆದರೆ ಇಂದಿನ ಸ್ನೇಹವು ಮಾತ್ರ ಮಾನಸಿಕ ನೆಮ್ಮದಿಯನ್ನು ಹಂಚಿಕೊಳ್ಳಲು ಆಧಾರವಾಗಿದೆ. ಆದ್ದರಿಂದ ಸ್ನೇಹಿತರಾದ, ನಾವು ಒಬ್ಬರಿಗೊಬ್ಬರು ಬಾಳಿನ ಹೊರೆಗಳನ್ನು ಹಂಚಿಕೊಳ್ಳುವ ಹಕ್ಕು ಮತ್ತು ಜವಾಬ್ದಾರಿಯನ್ನು ಹೊಂದಿದ್ದೇವೆ.
ಸ್ನೇಹ
ಅಂದಿಗೂ ಇಂದಿಗೂ ಸಹಾಯವಾಣಿ (Helpline) ಯಾಗಿದೆ. ಸ್ನೇಹ ಇಂದಿಗೂ ಗೆಳೆಯರ ಭಾವನೆಗಳನ್ನು ಅರಿಯುವ ಕಣ್ಣು. ಸ್ನೇಹ ಇಂದಿಗೂ ನಮಗಾಗಿ ನಿಲ್ಲುವ ಸಹಚರ.
ಕಾಲದ
ಬದಲಾವಣೆಯ ಮಧ್ಯೆಯೂ ಸ್ಥಿರವಾದುದು ಸ್ನೇಹದ ಸತ್ಯತೆ.
"ಸ್ನೇಹ ಎನ್ನುವುದು ದೂರವಿದ್ದರೂ ಬಾಳಿನಲ್ಲಿ ಹತ್ತಿರವಿರುವ ನಂಟು."
ನಮ್ಮ ಸಾಧನೆಗಳನ್ನು ಹಂಚಿಕೊಳ್ಳುವವರು, ನೊಂದು ನಕ್ಕು ನಮ್ಮ ನೋವನ್ನು ಕರಗಿಸುವವರು, ನೀರಸ ಸಮಯದಲ್ಲಿ ಮಾತಿಲ್ಲದೆ ನಮ್ಮೊಡನೆ ಕೂರುವರು.
ಕಾಲ ಬದಲಾಗಬಹುದು, ತಂತ್ರಜ್ಞಾನ ಬದಲಾಗಬಹುದು, ನಮ್ಮ ಜೀವನ ಶೈಲಿ ಬದಲಾಗಬಹುದು. ಆದರೆ , ಸ್ನೇಹದ ಅಗತ್ಯ ಎಂದಿಗೂ ಬದಲಾಗಲಾರದು.
ಇವುಗಳನ್ನೂ ಓದಿ👇
Mental Health & Friendship – WHO
https://www.who.int/news-room/fact-sheets/detail/mental-health-strengthening-our-response
Bhagavad Gita – Krishna & Arjuna Context
https://www.holy-bhagavad-gita.org
Psychology of Friendship
https://www.psychologytoday.com/us/basics/friendship
ಬದುಕಿನಲ್ಲಿ
ಏನಾದರು ಆಗುವುದಿರಲಿ, ಅಥವಾ ಏನಾದರು
ಬಂದು ಹೋಗುವುದೇ
ಇರಲಿ, ನಮ್ಮ ಜೊತೆ ನಿಂತುಕೊಳ್ಳುವವರು
ಕೆಲವೇ ಜನ; ಅವರಲ್ಲಿ ನಿಜವಾದ ಸ್ನೇಹಿತರಾಗುವುದು ಅಪರೂಪದ ರತ್ನಗಳು ಮಾತ್ರ. ಸ್ನೇಹವು ಕೇವಲ ಒಂದು ಸಂಬಂಧವಲ್ಲ
ಅದು ಮನಸ್ಸಿಗೆ ದೊರೆಯುವ ವಿಶ್ವಾಸ, ವಿಶ್ರಾಂತಿ, ಪ್ರಾಮಾಣಿಕತೆ ಮತ್ತು ನಿಸ್ವಾರ್ಥತೆಯ ಆಶ್ರಯ.
ಈ ಬಾಂಧವ್ಯವನ್ನು ಅರಿತು ಕಾಪಾಡಿದರೆ, ಜೀವನದ ಕಠಿಣ ಕ್ಷಣಗಳೂ ಸಹ
ಸುಲಭವಾಗಿ ಎದುರಿಸಬಹುದಾಗಿದೆ; ಸಂತೋಷಗಳು ಇನ್ನಷ್ಟು ಮಧುರವಾಗುತ್ತವೆ.
ಹೀಗಾಗಿ,
ನಿಮ್ಮ ಜೀವನದಲ್ಲಿರುವ ಪ್ರತಿಯೊಬ್ಬ ಸ್ನೇಹಿತನನ್ನು ಒಂದು ನಿಧಿಯ ಮೌಲ್ಯವನ್ನಾಗಿ ನೋಡಿ.
“ನೀನು
ನನಗೆ ಮುಖ್ಯ” ಎಂದು ಹೇಳುವ ವಾಕ್ಯವು
ಕೂಡ ಯಾವುದೇ ಒಂದು ಸಂಬಂಧವನ್ನು ಜೀವನಪರ್ಯಂತ
ಗಟ್ಟಿಗೊಳಿಸುತ್ತದೆ.
ಬದುಕು
ಎಲ್ಲಕ್ಕಿಂತಲೂ ದೊಡ್ಡದು,
ಆದರೆ ಅದರಲ್ಲಿ ಇರುವ ಸ್ನೇಹ ತೋರುವ
ಗೆಳೆತನ, ಜೀವನವನ್ನು ಮತ್ತಷ್ಟು ಅದ್ಭುತವಾಗಿಸುವ
ಅತ್ಯಂತ ದೊಡ್ಡ ಬಲ.
ಧನ್ಯವಾದಗಳು…......🌷🌷🌷🌷🌷
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು