ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

🌿 Conversations that stayed in my heart 💌 (ನನ್ನ ಹೃದಯದಲ್ಲಿ ಉಳಿದ ಮಾತುಗಳು).....!!!!!

 

                                                                         ಹೃದಯದ ಮಾತುಗಳು ಅಕ್ಷರದಲ್ಲಿ

ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ:೦೨.೧೧.೨೦೨೫.

🌿 Conversations that stayed in my heart 💌
(ನನ್ನ ಹೃದಯದಲ್ಲಿ ಉಳಿದ ಮಾತುಗಳು)

ಭೂಮಿ ಮೇಲಿನ ಈ ಜೀವನದ  ಪ್ರಯಾಣದಲ್ಲಿ ನಿರಂತರವಾಗಿ ಹೊಸ ಹೊಸ ವ್ಯಕ್ತಿಗಳನ್ನು ಭೇಟಿ ಮಾಡುತ್ತಿರುತ್ತೇವೆ ಮತ್ತು  ಹೊಸ ಹೊಸ  ಸಂಭಾಷಣೆಗಳನ್ನು ಪರಿಚಯಿಸಿಕೊಳ್ಳುತ್ತಲಿರುತ್ತೇವೆ. ಆ ಸಂಭಾಷಣೆಯಲ್ಲಿ ಹಲವರು ನಮ್ಮ ಬದುಕಿನ  ಕೆಲವು ಕ್ಷಣಗಳ ಅತಿಥಿಗಳಾಗುತ್ತಾರೆ; ಆ ಸಮಯದಲ್ಲಿನ ಕೆಲವೊಂದು ಮಾತುಗಳು ಕೇವಲ ಕಿವಿಗೆ ಮಾತ್ರ ತಾಗುತ್ತವೆ, ಇನ್ನೂ ಕೆಲವು ಮಾತುಗಳು ನೇರವಾಗಿ ನಮ್ಮ  ಹೃದಯವನ್ನೇ  ಮುಟ್ಟಿ ಬಿಡುತ್ತವೆ. ತದನಂತರವೂ ಕೆಲವೊಮ್ಮೆ  ಕಾಲನ ಆದೇಶಕ್ಕೂ ತಲೆಬಾಗದೆ, ಒಪ್ಪಿಗೆಯಿಲ್ಲದೆಯೇ  ನಮ್ಮೊಳಗೆ ಉಳಿದುಬಿಡುತ್ತವೆ

ಈ ಎಲ್ಲದರ ನಡುವೆ  ಕೆಲವು ಶಬ್ದಗಳ  ಒಂದು ಸರಳ ಮಾತು ನಮ್ಮೊಳಗೆ ಆಳವಾದ ಪ್ರಭಾವ ಬೀರುತ್ತದೆ.  ಅದು ಕೇವಲ ಕಿವಿಗೆ ಬಿದ್ದ ಶಬ್ದವಾಗಿರುವುದಿಲ್ಲ, ಬದುಕಿನ ಆಂತರ್ಯವಾಗಿರುತ್ತದೆ. ಧೈರ್ಯಗುಂದಿದ, ದಿಕ್ಕುಗೆಟ್ಟ ಎಷ್ಟೋ ಸಂದರ್ಭಗಳಲ್ಲಿ ಇದೇ  ಮಾತುಗಳು ನಮ್ಮ ಹೃದಯದಲ್ಲಿ ನೆಲೆಸಿ, ಕತ್ತಲೆಯ ಕ್ಷಣಗಳಲ್ಲಿ ಬೆಳಕಿನಂತೆ ಮಾರ್ಗದರ್ಶನ  ನೀಡುತ್ತವೆ.
ಹಗಲಿನಲ್ಲಿ ಕೇಳಿದ, ಮಾತಾಡಿದ  ಎಲ್ಲ ಮಾತುಗಳು ಮರುದಿನಕ್ಕೆ  ಮರೆಯಲ್ಪಡುತ್ತವೆ, ಆದರೆ ಕೆಲವು ಮಾತುಗಳು ಮಾತ್ರ ಹೃದಯದ ನಿಶ್ಶಬ್ದದ ಕೊನೆಯವರೆಗೂ ಪ್ರತಿಧ್ವನಿಸುತ್ತವೆ. ಇನ್ನೂ  ಕೆಲವು ಮಾತುಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸುತ್ತವೆ. ಇದೇ  ಮಾತುಗಳು ಕಾಲದ ಹಾದಿಯಲ್ಲಿಯೇ ಮಸುಕಾಗದೆ, ಹೃದಯದ ಆಳದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತವೆ

ಒಮ್ಮೆ ಮುಂಗಾರಿನ ಸಮಯ, ಆಫೀಸ್‌ ಮುಗಿಸಿ ಮನೆಗೆ ಹೊರಟಾಗ ಹಾದಿ ಮಧ್ಯೆ ಜೋರು ಮಳೆಗೆ ಸಿಕ್ಕು, ಪಕ್ಕದಲ್ಲಿಯೇ ಇದ್ದ ಕಾಫಿ ಅಂಗಡಿಗೆ ನುಗ್ಗಿದೆ. ಬಳಿಯಿದ್ದ ಸಣ್ಣ ಕರವಸ್ತ್ರದಲ್ಲಿಯೇ ತಲೆಮೇಲಿನ ನೀರನ್ನು ಒರೆಸಿಕೊಳ್ಳುತ್ತಾ ಖಾಲಿಯಿದ್ದ ಸೀಟೋಂದರಲ್ಲಿ ಕುಳಿತೆ.  ಮನೆ ತಲುಪುವ ಸಮಯಕ್ಕೆ ಈ ಮಳೆಯೊಂದು ಅಡ್ಡಿ ಎಂದುಕೊಳ್ಳುತ್ತ, ಒಂದು ಕಾಫಿ ಹೇಳೋಣ ಎನಿಸಿ ತಿರುಗಿ ನೋಡುತ್ತಲೇ, ಪಕ್ಕದ ಛೇರಿನಲ್ಲಿ ಕುಳಿತಿದ್ದ, ನನ್ನ ಹೈಸ್ಕೂಲು ಗೆಳತಿಯೊಬ್ಬಳು ಸಿಕ್ಕಳು.  ಬಹಳ ದಿನಗಳ ನಂತರದ ಈ ಆಕಸ್ಮಿಕ ಭೇಟಿಯು, ನನ್ನ ಗುರಿ ಕನಸುಗಳ ಮೇಲೆ ಎಳೆದಿದ್ದ ಮುಸುಕನ್ನು  ಧೂಳು ಸಹಿತ  ಗುಡಿಸಿಹಾಕಿತ್ತು.
ನೀನು ಇಡುವ ಪ್ರತಿಯೊಂದು ಹೆಜ್ಜೆಯೂ ಹೆಣ್ಣುಕುಲಕ್ಕೆ ಮಾದರಿಯಾಗಬೇಕು ನಿನಗೆ ನೆನಪಿದೆಯಾ ಶಾಲಾ ದಿನಗಳಲ್ಲಿ ನೀನು ನಿನ್ನ ಕನಸುಗಳನ್ನು ಡೈರಿಯಲ್ಲಿ ಬರೆಯುತ್ತಿದ್ದೆ, ಮದುವೆಯಾದ ಮೇಲೆ ಎಲ್ಲವನ್ನೂ ಬದಿಗಿಟ್ಟೆಯಾ!!  ಸಂಸಾರದ ಹೊರೆಯನ್ನು  ಭುಜದ ಮೇಲೆ ಹೊತ್ತು  ನಿನ್ನೊಳಗಿನ ಬೆಳಕನ್ನೂ ಕಳೆದುಕೊಳ್ಳಬೇಡ.” ಅವಳು ಹೇಳಿದ  ಆ ಮಾತು ಅಂದು  ಕೇವಲ ಒಂದು ಸಲಹೆಯಂತೆ ತೋರಿತು ನನಗೆ, ಆದರೆ ಕೆಲವು ದಿನಗಳಲ್ಲಿಯೇ  ಕೆಲಸದ ಸ್ಥಳದಲ್ಲಿ ಉಂಟಾದ ಏರುಪೇರುಗಳಿಂದ  ನನ್ನ  ಜೀವನದಲ್ಲಿ  ಕತ್ತಲಾವರಿಸಿದಾಗ, ಮಾತು ಪಂಜಿನಂತೆ  ಘೋಚರಿಸಿತು. 🌧️☕

                                                      ಗೆಳತಿಯರ ಮನಃಪೂರ್ವಕ ಸಂಭಾಷಣೆ

🌼 ತಂದೆ - ತಾಯಿಯ ಒಲವಿನ ಪಾಠ

ಅಮ್ಮನ  ಮಾತುಗಳು ಯಾವಾಗಲೂ ಹೃದಯವನ್ನು ಮುಟ್ಟುತ್ತವೆ. ಅದು ಕೋಪದ ಬೈಗುಳವೇ ಆಗಲಿ, ಪ್ರೀತಿಯ ಸವಿನುಡಿಗಳೇ ಆಗಲಿ......
ಒಮ್ಮೆ ಅಮ್ಮ ಹೇಳಿದರು. “ನಿನ್ನನ್ನು ನೀನು  ಪ್ರೀತಿಸುವುದನ್ನು ಕಲಿ, ಆಗ ಲೋಕವೂ ನಿನ್ನನ್ನು ಪ್ರೀತಿಸುತ್ತದೆ.” ನಮ್ಮ ಅಂತರಂಗದ ಶಾಂತಿ ಮತ್ತು ಸ್ವೀಕೃರಾರ್ಹವೆ ನಿಜವಾದ ಶಕ್ತಿ ಎಂಬುದನ್ನು   ಅಮ್ಮನ  ಸರಳ ವಾಕ್ಯದಿಂದ ಮೈಗೂಡಿಸಿಕೊಂಡೆ.

ನಿನ್ನ ಎದುರಿವವರು ಶತ್ರುಗಳೆ ಆದರೂ, ನಿನಗೆ ಕೆಟ್ಟದ್ದು ಬಯಸಿದರೆಂದು ತಿಳಿದರೂ  ನೀನು ಅವರನ್ನು ದ್ವೇಷಿಸಬೇಡ, ಅವರನ್ನು ಕ್ಷಮಿಸು ಆಗ ನಿನ್ನ ಹೃದಯವು ಶಾಂತವಾಗುತ್ತದೆ, ವಿನಾಕಾರಣ ದ್ವೇಷ ಬಾವನೆ ಬೆಳೆಯಲು ಬಿಟ್ಟರೆ ಮುಂದೆ ನಿನ್ನ ಮನಸ್ಸಿಗೆ ಆಪತ್ತು ಸಂಭವಿಸಬಹುದು... ಆದ್ದರಿಂದ ನಿನ್ನೆಡೆಗೆ  ಕಲ್ಲು ಬೀರಿದವನಿಗೆ, ಹೂವಿನಿಂದ ಹೊಡೆದು ನಿನ್ನ ಕೋಪವನ್ನು ತೀರಿಸಿಬಿಡು ಎಂದು  ನನ್ನ ತಂದೆಯು ಹೇಳಿದ ಮಾತುಗಳು ಇಂದಿಗೂ ಅತಿಯಾಗಿ  ಕೋಪಗೊಂಡ ಸಮಯದಲ್ಲಿ ನೆನಪಾಗುತ್ತವೆ.

 

                                                                                        ಅಮ್ಮನ ಪ್ರೀತಿ

ಮೊದಲ ಪ್ರೀತಿಯ ಅಮರತ್ವ 🌸

ಜೀವನದಲ್ಲಿನ  ಕೆಲವು ಕ್ಷಣಗಳು ಕಾಲವನ್ನೇ  ಮೀರಿಸುತ್ತವೆ. ಆ ದಿನಗಳು  ಆ ಮಾತುಗಳು ಮಧುರಾನುಭೂತಿಯ ನೆನಪುಗಳು, ಮತ್ತು ಹೃದಯಾಂತರಾಳದ ಸವಿನುಡಿಗಳು…… ಮೊದಲ ಪ್ರೀತಿಯ  ಬೆಚ್ಚಗಿನ ಭಾವ ಪ್ರಪಂಚದ ನವಿರು ಕಾಮನೆಗಳು

ಮೊದಲ ಪ್ರೀತಿಪ್ರತಿಯೊಬ್ಬರ  ಜೀವನದ ಮೊದಲ ಒಲವ ಹೂವು. ಅಲ್ಲಿ ನಿಸ್ವಾರ್ಥತೆ, ಸೌಮ್ಯತೆ, ಮತ್ತು ನಿರ್ಲೋಭ ಭಾವನೆಯೇ  ತುಂಬಿರುತ್ತದೆ.
ನಾವು ಮೊದಲ ಬಾರಿಗೆ ಯಾರನ್ನಾದರೂ ಹೃದಯಕ್ಕಿಳಿಸಿ, ಒಲುಮೆಯ ನೋಟದಿಂದ ನೋಡಿದಾಗ, ಆ ಕಣ್ಣಿನ ಮೌನವೇ ಸಾವಿರ ಮಾತುಗಳಿಗಿಂತ ಹೆಚ್ಚು ಹೇಳುತ್ತದೆ.

ಅಂತಹ  ಪ್ರೀತಿಯನ್ನು ಎಂದಿಗೂ ಮರೆಯಲಾಗದು,ಕಾರಣ ಪ್ರಥಮ ಪ್ರೇಮ  ನಮಗೆಪ್ರೀತಿ ಎಂದರೆ ಏನು?” ಎನ್ನುವ ಪಾಠ ಕಲಿಸುತ್ತದೆ, ಅದು ಬರೆದ ಪತ್ರವಾಗಿರಬಹುದು,
ಅಥವಾ ಕೇವಲ “ನಿನ್ನನ್ನು ನೋಡಿದರೆ ಸಾಕು” ಎನ್ನುವ ನೋಟವಾಗಿರಬಹುದು…!! ಹೃದಯವನ್ನು ಪುಳಕಿತಗೊಳಿಸುವ  ಮನಸ್ಸಿನಲ್ಲಿ ಜನ್ಮ ತಳೆಯುವ ಆತ್ಮವನ್ನೇ ಮೀಟುವ  ಸಾಗರೋಪಾದಿಯ ಭಾವಾಂತರಂಗದ ಅಲೆಗಳು   ಕೊನೆಯ ಉಸಿರಿರುವವರೆಗೂ   ಉಳಿಯುತ್ತವೆ.

ಮೊದಲ ಪ್ರೀತಿಯನ್ನೇ ಸಂಗಾತಿಯಾಗಿ ಪಡೆಯುವ ಪುಣ್ಯ  ಎಲ್ಲರಿಗೂ ಸಿಗುವುದಿಲ್ಲ, ಯಾರಿಗಾದರೂ ಸಿಕ್ಕರೆ, ಅದರಿಂದನಿಜವಾದ ಪ್ರೀತಿಯ ಅರ್ಥಕಲಿಯುತ್ತಾರೆ.  ಕೈಗಳೆರಡನ್ನು  ಬೊಗಸೆಯಾಗಿಸಿ ಬೆಳಕಿನ ಪುಂಜವನ್ನು ಜೋಪಾನ ಮಾಡಿದಂತೆ….. ಹಿಡಿಯಲಾಗದು, ಬಿಡಲಾಗದು,
ಎಂದಿಗೂ ಬೆಳಗುತ್ತಾ  ಸಂತೋಷವಾಗಿರಲಿ ಎಂಬ ಹೃದಯದ ಪ್ರಾರ್ಥನೆ ಒಂದೇ ಇಲ್ಲಿ ಫಲಿಸುವುದು.

ಪ್ರೀತಿ ಎಂದರೆ ಕೇವಲ ಇಬ್ಬರ ಕಥೆ ಅಲ್ಲ, ಹೃದಯದ ಪ್ರಾಮಾಣಿಕತೆಯ ಶಕ್ತಿ.💖

ಮೊದಲ ಪ್ರೀತಿ  ಎಲ್ಲರನ್ನೂ  ಬದಲಿಸುತ್ತದೆ, ಗಂಟಲಿನ ಮಾತುಗಳನ್ನು ಮೌನಗೊಳಿಸಿ,
ಆತ್ಮಕ್ಕೆ ಮಾತನ್ನು ಕಲಿಸುತ್ತದೆ.

ಇದರಿಂದಾಗಿಯೇ  ಮೊದಲ ಪ್ರೀತಿಯ  ಮಾತುಗಳು ಹೃದಯದಲ್ಲಿ ಉಳಿಯುತ್ತವೆ
ಮತ್ತೂ  ಕೆಲವರು ಜೀವನದ ಪಯಣದಲ್ಲಿ ಶಾಶ್ವತವಾಗಿ ಹೃದಯದೊಳಗೆ ಜೀವಿಸುತ್ತಾರೆ. 💫

                                                                                 ಪ್ರೇಮಿಗಳ ಮಧುರ  ಕ್ಷಣ

 🌸  ಕಲಿಯುವ ಹಾದಿಗೆ ಸ್ವಾಗತದ ನುಡಿಗಳು

ನನಗಿನ್ನೂ ನೆನಪಿದೆ ನನ್ನೂರಿನ  ಶಾಲಾ ಶಿಕ್ಷಣವನ್ನು ಮುಗಿಸಿ, ಮುಂದಿನ ಕಲಿಕೆಗೆ ಪಕ್ಕದೂರಿನ  ಶಾಲೆಗೆ ಹೋದ  ಆರಂಭಿಕ ದಿನ…… ಶಾಲೆಯ ಮುಂಬಾಗದ ಗೋಡೆಗಳಲ್ಲಿ ದಪ್ಪಕ್ಷರಗಳಲ್ಲಿ ಬರೆದಿದ್ದ ನಾಣ್ಣುಡಿಗಳು ಮತ್ತು ಸುಭಾಷಿತಗಳು…ನನ್ನನ್ನು ಬಹುವಾಗಿ ಸೆಳೆದಿದ್ದವು. ಅವುಗಳನ್ನು ನನ್ನ ಪುಸ್ತಕದ ಮೊದಲ ಹಾಳೆಯಲ್ಲಿಯೇ ಕೆಲವನ್ನು ನವೀನ ರೀತಿಯಲ್ಲಿ ಬರೆದುಕೊಂಡು ಖುಷಿಪಡುತ್ತಿದ್ದೆ.

“ಜ್ಞಾನಮಂದಿರವಿದು ಕೈಮುಗಿದು ಒಳಗೆ ಬಾ”

“ತಲೆ ತಗ್ಗಿಸಿ ನನ್ನನ್ನು ಓದು, ನಿನ್ನನ್ನು ತಲೆಯೆತ್ತುವಂತೆ ಮಾಡುವೆ”

“ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ”

“ಬಾಳುವಷ್ಟು ಕಾಲವೂ ಕಲಿಯುತ್ತಲೇ ಇರಬೇಕು”

"ಕಾಯಕವೇ ಕೈಲಾಸ"

"ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ" ......ಇನ್ನೂ ಮುಂತಾದವು.!!!

ಸುಭಾಷಿತಗಳನ್ನು ಓದುವ ಗೀಳು ಅಕ್ಷರ ಕಲಿತಾಗಿನಿಂದಲೂ  ಇದೆ. ಮತ್ತು ಇಂದಿಗೂ ಇದೆ. ಎಲ್ಲಿಯೇ ಸುಭಾಷಿತದ ಸಾಲು ಕಂಡರೂ ಓದುವೆ.. ಮತ್ತು ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವೆ. ಹೃದಯಕ್ಕೆ  ಇದು ಒಂದು ರೀತಿಯ ನೆಮ್ಮದಿ ನೀಡುವ ವಿಷಯವಾಗಿದೆ.

ಹೃದಯದಲ್ಲಿ ಉಳಿದ ಮಾತುಗಳು ನಮ್ಮ ಬದುಕಿನ ಅತಿ ಅಮೂಲ್ಯ ಸಂಪತ್ತು.ಯಾವುದೇ ದೊಡ್ಡ ಭಾಷಣಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.ಕಾರಣ ಇವೆಲ್ಲವೂ ನಿಜವಾದ ಅನುಭವದಿಂದ ಬಂದಿರುತ್ತವೆಜೀವನದ ಹಾದಿಯಲ್ಲಿ ಎಡವಿ ಬಿದ್ದಾಗ, ಇಂತಹ  ಮಾತುಗಳು ಎದ್ದು ನಿಲ್ಲಲು ಸಹಾಯಮಾಡುತ್ತವೆ, ಮತ್ತೆ ಮುನ್ನಡೆಯಲು ಪ್ರಾರಂಭಿಸಿದಾಗ ನಗು ತರಿಸುತ್ತವೆ, ಮತ್ತೆ ಬದುಕಿನ ಮೇಲಿನ ನಂಬಿಕೆಯನ್ನು ಪೋಷಿಸುತ್ತವೆ. ಹಾಗಾಗಿ  ಇವುಗಳನ್ನು  ಮನದಾಳದಲ್ಲಿಯೇ ಇಟ್ಟುಕೊಳ್ಳಿ.
 ಹೃದಯದ ನಿಶ್ಯಬ್ದದಲ್ಲಿ, ಮತ್ತೆ ಮತ್ತೆ ಬದುಕು ತುಂಬುವ ಸಣ್ಣ ಅದ್ಭುತಗಳು ಇವ. 💫

👉[https://capturingdaysoflife.blogspot.com/2025/10/blog-post_31.html]

💫 ಒಂದು ನಿಶ್ಶಬ್ದ ಹೀರೋನ ಕಥೆ

ಮಳೆ ಬೀಳುತ್ತಿದ್ದ ಸಂಜೆ. ಬಸ್ನಿಲ್ದಾಣದ ಅಂಚಿನಲ್ಲಿ ಜನರು ಮನೆಗಳಿಗೆ ತೆರಳುವ  ಆತುರದಲ್ಲಿ ನಿಂತಿದ್ದರು. ನಾನೂ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದೆ. ಚಳಿ ತೀವ್ರವಾಗಿತ್ತು, ಜನರು ತಾವು ತೋಯದಂತೆ ಛತ್ರಿಗಳ ಅಡಿಯಲ್ಲಿ ಅಡಗಿಕೊಂಡಿದ್ದರು.

ಅದಾಗಿಯೇ ನನ್ನ ಕಣ್ಣಿಗೆ ಬಿದ್ದದ್ದು,  ರಸ್ತೆ ಬದಿಯಲ್ಲೊಂದು ಹಳೆಯ ಪ್ಲಾಸ್ಟಿಕ್ ಚೀಲದ ಅಡಿಯಲ್ಲಿ ಕುಳಿತಿದ್ದ ವೃದ್ಧೆ ಒಂದು ಪಾದರಕ್ಷೆಯೂ ಇಲ್ಲದೆ, ಮರದ ಆಸರೆಗೆ ಒರಗಿ ಕುಳಿತಿದ್ದಳು. ಮತ್ತು ಯಾರೂ ಅವಳ ಕಡೆಗೆ ಗಮನ ಕೊಡುತ್ತಿರಲಿಲ್ಲ.

ಅಷ್ಟರಲ್ಲಿ, ಒಬ್ಬ ಯುವಕ ಬಸ್ನಿಂದ ಇಳಿದ. ಸರಳ ಬಟ್ಟೆ, ಮುಗುಳ್ನಗೆ ತುಂಬಿದ ವದನ.
ಅವನು ನೇರವಾಗಿ ವೃದ್ಧೆಯ ಬಳಿ ಹೋದ. ಜೋರಾಗಿ ಮಾತಾಡದೆ, ಅವಳ ಪಕ್ಕದಲ್ಲಿ ಕುಳಿತ.
ತನ್ನ ಬ್ಯಾಗ್ ನಲ್ಲಿದ್ದ ಒಂದು ಚಿಕ್ಕ ಕವರ್ ತೆಗೆದು ಅವಳಿಗೆ ಕೊಟ್ಟ.
ನಾನು ದೂರದಿಂದ ನೋಡುತ್ತಿದ್ದೆ, ಅದು ಆಹಾರ ಮತ್ತು ಔಷಧಿ ಇರಬಹುದೆಂದು ಭಾಸವಾಯಿತು.

ವೃದ್ಧೆಯ ಕಣ್ಣಲ್ಲಿ ನೀರು ತುಂಬಿತು. ಅವಳ ತುಟಿಗಳಿಂದ ನಿಧಾನವಾಗಿ ಕೇಳಿಬಂತು?!!

ನಿನ್ನ ಹೆಸರೇನು ಮಗನೇ?”

ಅವನು ಸಹ ನಗುತ್ತ ಹೇಳಿದ,

ಹೆಸರು ಮುಖ್ಯವಲ್ಲ ಅಮ್ಮಾಆದರೆ ನಿನ್ನ ನಗು ನನ್ನ ದಿನದ ಪ್ರಾರಂಭ.”

ಮಾತು ನನ್ನ ಹೃದಯದೊಳಗೆ ನೇರವಾಗಿ ಇಳಿಯಿತು. 🌧️

ಅವನು ಯಾರಿಗೂ ಹೇಳದೆ, ಯಾರೂ ಕೇಳದೆ ತನ್ನ ದಾರಿಯಲ್ಲೇ ಮತ್ತೆ ಮುಂದುವರಿದ.
ಕ್ಷಣದಲ್ಲಿ ನನಗೆ ಅರಿವಾಯಿತು, ಹೃದಯ ಶ್ರೀಮಂತಿಕೆ ಎಂದರೆ, ಬಣ್ಣ ಬಣ್ಣದ  ಪೋಷಾಕುಗಳು ಧರಿಸಿ ವೇದಿಕೆಯ ಮೇಲೆ ದೊಡ್ಡ ದೊಡ್ಡ ಮಾತಾಡುವುದಲ್ಲ,
ಯಾರಿಗೂ ತಿಳಿಯದ ಸ್ಥಳದಲ್ಲಿ ಮೌನವಾಗಿ ಬೆಳಕನ್ನು ನೀಡುವುದೇ  ನಿಜವಾದ ಮಾನವತ್ವ.

ಮತ್ತೆ ಮಳೆ ಸುರಿಯತೊಡಗಿತು, ಆದರೆ ದೃಶ್ಯ ನನ್ನ ಮನಸ್ಸಿನಲ್ಲಿ ಅದೃಶ್ಯವಾಗಲಿಲ್ಲ.
ಎಷ್ಟೇ ದಿನಗಳು ಕಳೆದರೂ, ಯುವಕನ ಮಾತು ಮತ್ತು ಅವನ ನಿಶ್ಶಬ್ದ ಸೇವೆ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯಿತು.

ದಯೆಯ ಮೇಲಿನ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು.👇

https://capturingdaysoflife.blogspot.com/2025/10/blog-post_31.html 

( ಈ ಕಥೆ ಸಾಮಾಜಿ ಜಾಲತಾಣದಲ್ಲಿ ನಾನು ನೋಡಿದ ಮತ್ತೆ ನನ್ನ ಹೃದಯಕ್ಕೆ ಹತ್ತಿರವಾದ ಸನ್ನೀವೇಶವನ್ನು ಕಂಡು ಬರೆದಿರುವುದು)

ಇವುಗಳನ್ನೂ ಓದಿ👇

ಮಾನವೀಯ ಮೌಲ್ಯಗಳು / ಜೀವನ ಪಾಠಗಳು

https://kannada.goodreads.com     (ಜೀವನ, ಪ್ರೀತಿ, ಅನುಭವ ಕುರಿತ ಉಲ್ಲೇಖಗಳಿಗೆ)

ಮಾನವತ್ವ / ಪ್ರೇರಣಾದಾಯಕ ಕಥೆಗಳು

https://www.betterindia.com

🌿 ನಾವು ಎಲ್ಲರೂ ಯಾವುದೋ ಸಮಯದಲ್ಲಿ ಯಾರಿಗಾದರೂ ಬೆಳಕಾಗಬಹುದು.
ಒಂದು ಸಣ್ಣ ಸಹಾಯ, ಒಂದು ನಗು, ಅಥವಾ ಒಂದೇ ಮಾತು,  ಅದು ಯಾರಾದರೂ ಜೀವನದಲ್ಲಿಸಣ್ಣ ಬದಲಾವಣೆ ತರಬಹುದು.
ಹೆಸರಿಲ್ಲದ ಯುವಕನಂತೆ, ನಾವು ಸಹ ಅನಾಮಧೇಯವಾಗಿ ಸಣ್ಣ ಸೌಂದರ್ಯವನ್ನು ಲೋಕದಲ್ಲಿ ಹರಡಬಹುದು.

ಏಕೆಂದರೆ, ಕಾಲದ ಮರೆಯಲ್ಲಿ ಎಲ್ಲ ಹೆಸರುಗಳು ಮಸುಕಾಗಬಹುದು,
ಆದರೆ ಒಳ್ಳೆಯ ಮಾತುಗಳು ಮತ್ತು ಕೃತ್ಯಗಳು  ಹೃದಯದಲ್ಲಿ ಎಂದಿಗೂ ಉಳಿಯುತ್ತವೆ. 💖

💖 ಮಾತುಗಳು ಕೇವಲ ಧ್ವನಿ ಅಲ್ಲ, ಅವು ಜೀವದ ಬಲ, ಭರವಸೆ, ಬೆಳಕು. ಎಲ್ಲೋ ಎಂದೋ  ಕೇಳಿದ ಒಂದು ವಾಕ್ಯ ನಿನ್ನ ಜೀವನದ ತಿರುವಾಗಬಹುದು. ಹೀಗಾಗಿ ಪ್ರತಿಯೊಂದು ಮಾತಿನ ಅರ್ಥವನ್ನು ಮನದಿಂದ ಕೇಳು, ಏಕೆಂದರೆ  ಒಂದು ಸತ್ಯವಾದ ಮಾತು ನಿನ್ನ ಹೃದಯದಲ್ಲಿ ನಿನ್ನ ಹೊಸ ಕಥೆ ಆರಂಭಿಸಬಹುದು.

Keep those conversations close — they are not just words, they are wings that help you rise again. 🌿

🌸 ನಮ್ಮ ಬದುಕಿನಲ್ಲಿ ಕೆಲವು ಮಾತುಗಳು ಪುಸ್ತಕಗಳಲ್ಲಿ ಸಿಗುವುದಿಲ್ಲ ಅವು ಅನುಭವದಲ್ಲಿ ಬರೆದ ಪಾಠಗಳು. ಮಾತುಗಳೇ ನಮ್ಮ ಹೃದಯದ ದಿನಚರಿಯಲ್ಲಿ ಅಮೂಲ್ಯ ಅಧ್ಯಾಯಗಳಾಗುತ್ತವೆ.
ಹೀಗಾಗಿ, ಯಾರು ಏನಾದರೂ ಸುಂದರವಾಗಿ ಮಾತನಾಡಿದಾಗ, ಕ್ಷಣವನ್ನು ಮನದಲ್ಲಿ ಇಟ್ಟುಕೊಳ್ಳಿಏಕೆಂದರೆ ಕೆಲ ಸಂಭಾಷಣೆಗಳು ಕೇವಲ ಕೇಳಲು ಅಲ್ಲ  ಬದುಕಲು. ❤️

 

 

 

 

ಧನ್ಯವಾದಗಳು……..🌷🌷🌷🌷🌷🌷

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......