ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

“ ತಕ್ಷಣಕ್ಕೆ ತಯಾರಾಗುವ ದಕ್ಷಿಣ ಭಾರತದ ಶಾಖಾಹಾರಿ ಆಹಾರ ರೆಸಿಪಿಗಳು 🍛🌿”

   

                                                                              ದಕ್ಷಿಣ ಬಾರತದ ಆಹಾರಗಳು


ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೦೭.೧೧.೨೦೨೫

ದಕ್ಷಿಣ ಭಾರತದ ಶಾಖಾಹಾರಿ ಆಹಾರ  ರೆಸಿಪಿಗಳು.

ಇಂದಿನ ಬಿಡುವಿಲ್ಲದ  ಜೀವನದಲ್ಲಿ,  ಪೋಷಕಾಂಶಯುಕ್ತ, ರುಚಿಯಾದ ಮತ್ತು ಶುಚಿಯಾದ ಸಮತೋಲನವಾದ ಆರೋಗ್ಯಕರ ಆಹಾರವನ್ನು ಕಡಿಮೆ ಸಮಯದಲ್ಲಿ,  ತಯಾರಿಸಲು ಸಾಧ್ಯವೇ?

ಹೌದು!
ಭಾರತವು ಮಸಾಲೆಯುಕ್ತ   ಸಾಂಬಾರು ಪದಾರ್ಥಗಳನ್ನು ಯಥೇಚ್ಛವಾಗಿ ಬೆಳೆಯುವ ದೇಶ, ಅದರಲ್ಲೂ  ದಕ್ಷಿಣ ಭಾರತವು, ಸಾಂಬಾರು ಪದಾರ್ಥಗಳ ಜೊತೆಗೆ, ರಾಗಿ, ಜೋಳ, ಭತ್ತ, ಅರಿಶಿನ, ಶೇಂಗಾ, ಹುರುಳಿಕಾಳು, ಹೆಸರುಕಾಳು ಹೀಗೆ ತರಾವರಿ ಧಾನ್ಯಗಳನ್ನು ಬೆಳೆದು, ಅದರಲ್ಲಿಯೇ ಶುಚಿ-ರುಚಿ ತುಂಬಿದ ಆರೋಗ್ಯಕರ ತಿನಿಸುಗಳನ್ನು ತಯಾರಿಸುವಲ್ಲಿ ಇಡೀ ವಿಶ್ವದ ಗಮನ ಸೆಳೆದಿದೆ.

ಆರೋಗ್ಯಕರ ಆಹಾರವೇ ನಿಜವಾದ “ಔಷಧಿ”, ಆಹಾರವು ಕೇವಲ ದೇಹವನ್ನಷ್ಟೇ ಅಲ್ಲ, ಮನಸ್ಸಿನ ಗುಣವನ್ನೂ ನಿರೂಪಿಸುತ್ತದೆ. ಸಾತ್ವಿಕವಾದ  ಪೌಷ್ಠಿಕ ಆಹಾರ ಸೇವನೆಯಿಂದ  ಮನಸ್ಸು ಶಾಂತವಾಗಿ  ಏಕಾಗ್ರತೆಯ, ಉತ್ಸಾಹದ ಬುಗ್ಗೆಯಂತಾಗುತ್ತದೆ.

ಈ ಆರೋಗ್ಯಕರ ಆಹಾರ ಎಂದರೆ ಪ್ರಕೃತಿದತ್ತ ಪದಾರ್ಥದಿಂದ ತಯಾರಾದ ತಿಂಡಿ ತಿನಿಸುಗಳು. ಋತುವಿಗನುಸಾರ ಪ್ರಕೃತಿಯಲ್ಲಿ ತಯಾರಾಗುವ ತಾಜಾ ಹಣ್ಣುಗಳು, ತರಕಾರಿ- ಧಾನ್ಯಗಳು ಮತ್ತು ನೀರು ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ, ದೇಹದ ಪ್ರಾಕೃತಿಕ ಚಕ್ರವು ಎಂದಿನಂತೆ ತನ್ನ ಗತಿಯಲ್ಲಿರುತ್ತದೆ.

ತಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯ ಬಯಸುವವರು ಹಾಗೂ ಆರೋಗ್ಯಕರ ಮತ್ತು ಸಾಂಪ್ರದಾಯಿಕ ಆಹಾರದ ಸವಿಯ ಹುಡುಕಾಟದಲ್ಲಿರುವವರಿಗೆ, ದಕ್ಷಿಣ ಭಾರತದ ಈ ಜನಪ್ರಿಯ ತಿನಿಸುಗಳು ಎಲ್ಲರಿಗೂ  ಬಲು ಇಷ್ಟವಾಗುತ್ತವೆ.

ಯೋಗ ಮತ್ತು ಉತ್ತಮ ಆಹಾರ ಉತ್ತಮ ನಿದ್ರೆಯ ಮಂತ್ರ👇

https://capturingdaysoflife.blogspot.com/2025/03/blog-post_97.html 

🍋  ನಿಂಬೆ ರೈಸ್ (Lemon Rice / Chitranna)

ಬೇಕಾಗುವ ಪದಾರ್ಥಗಳು:
ಉದುರು ಉದುರಾಗಿ ಬೇಯಿಸಿದ ಅನ್ನ, ಕಡಲೇ ಬೀಜ, ಕಡಲೇ ಬೇಳೆ, ಸಾಸಿವೆ, ಕರಿಬೇವು, ನಿಂಬೆ ರಸ, ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ, ಶೇಂಗಾ, ಉಪ್ಪು, ಅರಿಶಿನ ಪುಡಿ, ಎರಡು ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣದಾಗಿ ಕತ್ತಿರಿಸಿದ್ದು ಹಾಗೂ ಅಡುಗೆ ಎಣ್ಣೆ.

                                                                             ನಿಂಬೆ ರೈಸ್/ಚಿತ್ರಾನ್ನ

ತಯಾರಿಸುವ ವಿಧಾನ:
ಮೊದಲು ಸ್ಟೌವ್‌ ಮೇಲೆ ಬಾಣಲೆ ಇಟ್ಟು  ನಾಲ್ಕರಿಂದ ಐದು ಸ್ಪೂನ್‌ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ನಂತರ ಸಾಸಿವೆ ಸೇರಿಸಿ. ಸಾಸಿವೆ ಸಿಡಿಯುತ್ತಲೇ , ಕಡಲೇ ಬೀಜ ಮತ್ತು ಕಡಲೇ ಬೇಳೆ ಸೇರಿಸಿ ಸಣ್ಣ ಹುರಿಯಲ್ಲಿ  ಕಂದು ಬಣ್ಣ ಬರುವವರೆಗೆ ಒಂದು ನಿಮಿಷ ಬೇಯಿಸಿಕೊಳ್ಳಿ. ನಂತರ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು  ಈರುಳ್ಳಿ ಸೇರಿಸಿ ಚೆನ್ನಾಗಿ  ಬಾಡಿಸಿ, ಈರುಳ್ಳಿ ಸ್ವಲ್ಪ ಮೆತ್ತಗಾದ ನಂತರ ಕರಿಬೇವು ಸೇರಿಸಿ. ಈರುಳ್ಳಿ ಲೈಟ್‌ ಆಗಿ ಬಣ್ಣ ಬದಲಾಗುವಾಗ ಒಂದೆರಡು ಚಿಟಿಕೆ ಅರಿಶಿನ ಸೇರಿಸಿ ನಂತರ ಸ್ಟೌವ್‌ ಆಫ್‌ ಮಾಡಿಕೊಂಡು, ಕತ್ತರಿಸಿದ  ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ( ಈ ಸಮಯದಲ್ಲಿ ಹಸಿತೆಂಗಿನ ತುರಿ ಸೇರಿಸಿದರೆ ಇನ್ನೂ ರುಚಿ ಹೆಚ್ಚುತ್ತದೆ) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಗೊಜ್ಜು ರೆಡಿಯಾಗಿದೆ.  ಗೊಜ್ಜು ಮಾಡಿದ ಬಾಣಲೆಯಿಂದ, ಸ್ವಲ್ಪ ಗೊಜ್ಜನ್ನು ತೆಗೆದಿಟ್ಟುಕೊಂಡು, ಉಳಿದ ಗೊಜ್ಜಿಗೆ ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿದರೆ ಲೆಮನ್‌ ರೈಸ್‌ ಅಥವಾ ನಿಂಬೆಹಣ್ಣಿನ ಚಿತ್ರನ್ನ ಸವಿಯಲು ಸಿದ್ದ.

 

👉 ದಕ್ಷಿಣ ಭಾರತೀಯ ಶಾಖಾಹಾರಿ ಆಹಾರದ ಲಾಭಗಳು

https://www.healthline.com/nutrition/south-indian-diet

 ರಾಗಿ ದೋಸೆ (Ragi Dosa)

ಬೇಕಾಗುವ ಪದಾರ್ಥಗಳು:
ರಾಗಿ ಹಿಟ್ಟು, ಗೋದಿ ಹಿಟ್ಟು, ರವೆ, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಶುಂಠಿ, ತುರಿದ ಕ್ಯಾರೆಟ್‌( ಮತ್ತೂ ಬೇಕೆಂದರೆ ಇನ್ನಿತರ ತರಕಾರಿ-ಸೊಪ್ಪುಗಳಾದ, ಬೀಟ್ರೂಟ್,‌ ಹುರುಳಿಕಾಯಿ, ಸಬ್ಬಸ್ಸಿಗೆ ಸೊಪ್ಪು, ಮೆಂಥ್ಯೆ ಸೊಪ್ಪು ಸಣ್ಣದಾಗಿ ಕತ್ತರಿಸಿ ಬಳಸಬಹುದು ಇಚ್ಛೆಯನುಸಾರ) ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಉಪ್ಪು, ಜೀರಿಗೆ, ನೀರು.

 

                                                                                          ರಾಗಿ ದೋಸೆ

ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಮೊದಲು ಒಂದು ಕಪ್‌ ರಾಗಿ ಹಿಟ್ಟನ್ನು ತೆಗೆದುಕೊಳ್ಳಿ ಅದಕ್ಕೆ ಎರಡು ಸ್ಪೂನ್‌ ಗೋಧಿ ಹಿಟ್ಟು ಮತ್ತು ಎರಡು ಟೇಬಲ್‌ ಚಮಚ ರವೆ ಹಾಕಿ ಡ್ರೈ ಆಗಿಯೇ  ಚೆನ್ನಾಗಿ  ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿದ ಸೊಪ್ಪುಗಳಾದ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಕ್ಯಾರೆಟ್‌ ತುರಿ, ಕತ್ತರಿಸಿದ ಈರುಳ್ಳಿ, ತುರಿದ ಶುಂಠಿ ಮತ್ತು ಖಾರ ಹೆಚ್ಚು ಬೇಕೆಂದರೆ ಒಂದೆರಡು ಹಸಿಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಹಾಕಿ, ಹಿಟ್ಟಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಕಪ್‌ ನೀರನ್ನು ಸೇರಿಸಿ ಗಂಟುಗಳು ಮೂಡದಂತೆ   ಪೇಸ್ಟ್ ತಯಾರಿಸಿ,  ನಂತರ ಮತ್ತೊಂದು ಕಪ್‌ ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ದಪ್ಪವಾಗಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬಾಟರ್‌ ಅನ್ನು ತಯಾರಿಸಿಕೊಳ್ಳಿ.

ಈಗ ಸ್ಟೌವ್‌  ಮೇಲೆ ತವಾ ಅಥವಾ ಹೆಂಚನ್ನು ಇರಿಸಿ, ಕಾದ  ಹೆಂಚಿನ ಮೇಲೆ ಎಣ್ಣೆ ಸವರಿ ಹಿಟ್ಟನ್ನು ತೆಳುವಾಗಿ  ಹರಡಿ ಎರಡೂ ಕಡೆ ಬೇಯಿಸಿಕೊಳ್ಳಿ. ಈಗ ಬಿಸಿ ಬಿಸಿ  ರುಚಿಯಾದ ಫೋಷಕಾಂಶಯುಕ್ತ ರಾಗಿ ದೋಸೆಯು  ಹುರಿಗಡಲೇ ಚಟ್ನಿ ಮತ್ತು ಟೋಮೆಟೋ ಚಟ್ನಿ ಜೊತೆ ಸವಿಯಲು ಸಿದ್ದವಾಗಿದೆ. 

3.  ಅಕ್ಕಿ ತರಿ , ಅವರೆಕಾಳು ಉಪ್ಪಿಟ್ಟು 

ಬೇಕಾಗುವ ಪದಾರ್ಥಗಳು:
ಅಕ್ಕಿ ತರಿ(ದಪ್ಪ ಅಕ್ಕಿ ರವೆ), ಹಸಿ ಅವರೆಕಾಳು,  ಉದ್ದಿನ ಬೇಳೆ, ಕಡ್ಲೇಬೇಳೆ, ಸಾಸಿವೆ, ಕರಿಬೇವು, ಕಾಳುಮೆಣಸು ಮತ್ತು ಜೀರಿಗೆ ಪುಡಿ, ಅಡುಗೆ ಎಣ್ಣೆ, ಸಾಸಿವೆ, ತುಪ್ಪ ಕೊತ್ತಂಬರಿ ಸೊಪ್ಪು, ಹಸಿ ತೆಂಗಿನಕಾಯಿ ತುರಿ, ನಿಂಬೆ ರಸ.


                                                                                  ಅವರೆಕಾಳು ಉಪ್ಪಿಟ್ಟು

ತಯಾರಿಸುವ ವಿಧಾನ:
ಮೊದಲಿಗೆ ಅಕ್ಕಿ ತರಿಯನ್ನು ಬಾಣಲೆಗೆ ಹಾಕಿ ಹದವಾಗಿ ಹುರಿದಿಟ್ಟುಕೊಳ್ಳಿ. ಬಿಡಿಸಿದ ಹಸಿ ಅವರೆಕಾಳನ್ನು ಕುಕ್ಕರ್‌ ಗೆ ಎರಡರಷ್ಟು ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಾಲ್ಕು ವಿಷಲ್‌ ಹಾಕಿಸಿ ಬೇಯಿಸಿದ  ನೀರು  ಸಹಿತ ತೆಗೆದಿಟ್ಟುಕೊಳ್ಳಿ.

ಪಾತ್ರೆಯನ್ನು ಸ್ಟೌವ್‌ ಮೇಲಿಟ್ಟುಕೊಂಡು ಎಣ್ಣೆ ಮತ್ತು ಸ್ವಲ್ಪ ತುಪ್ಪ  ಹಾಕಿಕೊಂಡು ಹುರಿಯನ್ನು ಸಣ್ಣದಾಗಿಟ್ಟುಕೊಳ್ಳಿ. ಎಣ್ಣೆ ಕಾದ ನಂತರ ಸಾಸಿವೆ, ಉದ್ದಿನಬೇಳೆ, ಕಡಲೇಬೇಳೆ ಹಾಕಿ ಕೆಂಪಗೆ ಹುರಿಯಿರಿ. ನಂತರ ಖಾರಕ್ಕೆ ಹಸಿಮೆಣಸಿನಕಾಯಿ ಸೇರಿಸಿ, ನಂತರ ಒಂದುವರೆ ಸ್ಪೂನ್‌ ನಷ್ಟು ಮೆಣಸು ಮತ್ತು ಜೀರಿಗೆ ಪುಡಿ ಹಾಗೂ ಒಂದಷ್ಟು ಕರಿಬೇವು ಹಾಕಿ. ನಂತರ ಬೇಯಿಸಿಟ್ಟ ಅವರೆಕಾಳನ್ನು ಅದರ ನೀರಿನ ಸಹಿತ ಹಾಕಿ, ಸ್ವಲ್ಪ ಹೊತ್ತು ಕುದಿಯಲು ಬಿಡಿ. ಕುದಿ ಬಂದು ನಂತರ ಹುರಿದ ಅಕ್ಕಿ ತರಿಯನ್ನು ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಸೇರಿಸಿಕೊಂಡು ಕಲಸುತ್ತಾ ಇರಿ, ಮುಕ್ಕಾಲು ಭಾಗಕ್ಕಿಂತ  ಹೆಚ್ಚಿನ ನೀರಿನಂಶ ಡ್ರೈ ಆಗುತ್ತಲೇ  ಸ್ಟೌವ್‌ ಆಫ್‌ ಮಾಡಿ ಒಂದೆರಡು ನಿಮಿಷಗಳ ಕಾಲ ಹಾಗೆಯೇ ಮುಚ್ಚಿ ಇಟ್ಟುಬಿಡಿ. ನಂತರ ಕೊತ್ತಂಬರಿ ಸೊಪ್ಪು ಹಸಿತೆಂಗಿನ ತುರಿ, ಅರ್ಧ ಹೋಳು ನಿಂಬೆ ರಸ ಹಾಕಿ ಹದವಾಗಿ ಮಿಶ್ರಣ ಮಾಡಿಕೊಂಡರೆ, ಬಿಸಿ ಬಿಸಿ, ರುಚಿ ರುಚಿ  ಅಕ್ಕಿ ತರಿ ಅವರೆಕಾಳು ಉಪ್ಪಿಟ್ಟು ತಿನ್ನಲು ಸಿದ್ದವಾಗುತ್ತದೆ. 

ವಿಶೇಷ ಸೂಚನೆ:- ಈ ರೆಸಿಪಿಯು ಕನ್ನಡದ ನಟಿ ಹಿತಾ ಚಂದ್ರಶೇಖರ್‌ ಅವರದ್ದು, ಈ ರೆಸಿಪಿಯ ಪೂರ್ತಿ ವಿಡಿಯೋಗಾಗಿ ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ.

https://www.facebook.com/share/v/1Bec1xwqhy/  


👉 ರಾಗಿ ಮತ್ತು ಮಿಲ್ಲೆಟ್ಸ್‌ನ ಆರೋಗ್ಯ ಪ್ರಯೋಜನಗಳು
https://www.icrisat.org/millets

ಆರೋಗ್ಯಕರ ಶಾಖಾಹಾರಿ ಜೀವನಶೈಲಿ👇
https://www.who.int/news-room/fact-sheets/detail/healthy-diet 

Millet Pongal ಆರೋಗ್ಯಕರ ಆಹಾರವೇ?👇
https://www.indianhealthyrecipes.com/millet-pongal

 

🍛  ಆರ್ಕ ಪೊಂಗಲ್ (Millet Pongal)

ಬೇಕಾಗುವ ಪದಾರ್ಥಗಳು:
ಆರ್ಕಾ ಅಕ್ಕಿ, ಹೆಸರು ಬೇಳೆ, ಅರಿಶಿನ, ಜೀರಿಗೆ, ಮೆಣಸುತುಪ್ಪ, ಗೋಡಂಬಿ, ಕರಿಬೇವು, ತರಿತರಿಯಾಗಿ ರುಬ್ಬಿದ ಕಾಳುಮೆಣಸು ಮತ್ತು ಜೀರಿಗೆ ಸಂಗಮ, ಶುಂಠಿ, ಹಸಿಮೆಣಸಿನಕಾಯಿ .

                                                                                        ಪೊಂಗಲ್

ತಯಾರಿಸುವ ವಿಧಾನ:

ಒಂದು (೧೦೦ಎಮ್‌ ಎಲ್‌ ಗಾತ್ರದ)  ಅಳತೆಯ ಲೋಟದಲ್ಲಿ  ಆರ್ಕವನ್ನು ತೆಗೆದುಕೊಂಡು, ಅದೇ ಅಳತೆಯಲ್ಲಿ  ಹೆಸರು ಬೇಳೆಯನ್ನು ಸಹ ತೆಗೆದುಕೊಳ್ಳಬೇಕು. ಮೊದಲಿಗೆ  ಎವೆರಡನ್ನೂ ಪೊಂಗಲ್‌  ಮಾಡಲಿಕ್ಕೆ ಬಳಸುವ ಕುಕ್ಕರ್ ಗೆ ಹಾಕಿ ಸಣ್ಣ ಹುರಿಯಲ್ಲಿ ಏಳರಿಂದ ಎಂಟು ನಿಮಿಷಗಳವರೆಗೆ  ಹುರಿದುಕೊಳ್ಳಬೇಕು, ಒಳ್ಳೆ ಘಮ ಬರುವವರೆಗೆ ಹುರಿದು, ಮತ್ತೊಂದು ಪಾತ್ರೆಗೆ ಸುರಿದುಕೊಂಡು ಒಂದೆರಡು ಬಾರಿ ನೀರನ್ನು ಸೇರಿಸಿ ಚೆನ್ನಾಗಿ ತೊಳೆದುಕೊಂಡು, ಹುರಿಯಲು ಬಳಸಿದ ಅದೇ ಕುಕ್ಕರ್‌ ಗೆ ಸೇರಿಸಿಕೊಳ್ಳಿ. ಮತ್ತುಾದಕ್ಕೆ  ಐದು ಲೋಟ ನೀರನ್ನು ಸೇರಿಸಿ.( ಒಂದು ಲೋಟ ಆರ್ಕಾ ಮತ್ತು ಒಂದು ಲೋಟ ಬೇಳೆಗೆ ಐದು ಲೋಟ ನೀರು)ಮತ್ತು ರುಚಿಗೆ ಸ್ವಲ್ಪ ಉಪ್ಪು, ಒಂದು ಚಿಟಿಕೆ ಅರಿಶಿನ, ಅರ್ಧ ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಕಲಸಿ ಕುಕ್ಕರ್‌ ಮುಚ್ಚಳ ಮುಚ್ಚಿ,  ಮಂದ ಉರಿಯಲ್ಲಿ ಮೂರು ವಿಷಲ್‌ ಬರುವವರೆಗೆ ಬೇಯಿಸಿಕೊಂಡು ಸ್ಟೌವ್‌ ಆಫ್‌ ಮಾಡಿಬಿಡಿ. ಕುಕ್ಕರ್‌ ನ ವಿಷಲ್‌ ಆವಿಯಾದ ನಂತರ ಮುಚ್ಚಳ ತೆಗೆಯಿರಿ. ಈಗ ಆರ್ಕಾ ಅಕ್ಕಿ ಮತ್ತು ಬೇಳೆ ಚೆನ್ನಾಗಿ ಬೆಂದಿರುತ್ತದೆ. ಈಗ ಪೊಂಗಲ್‌ ನಿಮಗೆ ಬೇಕಾದ  ಹದವನ್ನು ನೋಡಿಕೊಂಡು ಆದಷ್ಟು ಕುದಿಯುವ ನೀರನ್ನು ಸೇರಿಸಿಕೊಂಡು, ಸಣ್ಣ ಹುರಿಯಲ್ಲಿ ಬೇಯಿಸಿಕೊಳ್ಳಿ.

 ಈಗ ಒಗ್ಗರಣೆಗಾಗಿ ತುಪ್ಪವನ್ನು ತೆಗೆದುಕೊಳ್ಳಿ, ಪೊಂಗಲ್‌ ಮಾಡುವಾಗ ಒಗ್ಗರಣೆಗೆ ಯಾವಾಗಲೂ ಗರಿಗರಿಯಾದ ತುಪ್ಪವನ್ನೇ ಬಳಸಿದರೆ ರುಚಿ ಹೆಚ್ಚುತ್ತದೆ. ಒಗ್ಗರಣೆ ಪ್ಯಾನ್‌ ಗೆ ಮೂರು ಸ್ಪೂನ್‌ ತುಪ್ಪ ಹಾಕಿಕೊಂಡು ಸಣ್ಣ ಹುರಿಯಲ್ಲಿ ಕಾಯಿಸಿ, ನಂತರ ಹತ್ತರಿಂದ ಹದಿನೈದು ಗೋಡಂಬಿಯನ್ನು ಹಾಕಿ ನಸುಗೆಂಪು ಬರುವವರೆಗೂ ಹುರಿಯಿರಿ. ತುಪ್ಪದಲ್ಲಿ ಹುರಿದ ಗೋಡಂಬಿಯು ಪೊಂಗಲ್‌ಗೆ ವಿಶೇಷ ವಾದ ಘಮ ನೀಡುತ್ತದೆ.  ನಂತರ ಒಂದು ಸ್ಪೂನ್‌  ತರಿತರಿಯಾಗಿ ಕುಟ್ಟಿ ಪುಡಿಮಾಡಿದ  ಮೆಣಸು ಮತ್ತು ಜೀರಿಗೆಯನ್ನು ಹಾಕಿ ಲೈಟ್‌ ಆಗಿ ಹುರಿಯಿರಿ. ನಂತರ ಸಣ್ಣ ಸಣ್ಣದಾಗಿ ಹೆಚ್ಚಿದ ಶುಂಠಿ, ಹೋಳಾಗಿ ಕತ್ತರಿಸಿದ ಒಂದೆರಡು ಹಸಿಮೆಣಸು ಖಾರಕ್ಕೆ ತಕ್ಕಂತೆ, ಮತ್ತೆ ಬೇಕಾದಷ್ಟು ಕರಿಬೇವಿನ ಹಸಿ ಎಲೆಗಳನ್ನು ಹಾಕಿ ಚೆನ್ನಾಗಿ ಬಾಡಿಸಿ. ಮೊದಲೇ  ಅರ್ಧ ಸ್ಪೂನ್‌  ಹಿಂಗನ್ನು ನೀರಲ್ಲಿ ನೆನೆಸಿಟ್ಟುಕೊಳ್ಳಿ ಮತ್ತು  ಕೊನೆಯಲ್ಲಿ ನೀರಿನ ಸಹಿತ  ಹಿಂಗನ್ನು ಒಗ್ಗರಣೆಗೆ ಸೇರಿಸಿ. ಒಂದು ಕುದಿ ಬಂದ ನಂತರ ಈ ಒಗ್ಗರಣೆಯನ್ನು ಬಿಸಿಯಿರುವ ಪೊಂಗಲ್‌ ಗೆ ಸೇರಿಸಿ ಚೆನ್ನಾಗಿ ತಿರುಗಿಸಿಕೊಳ್ಳಿ.  ಈಗ ಸ್ವಾಧಿಷ್ಟ ರುಚಿಯ ಬಿಸಿ ಬಿಸಿ ಆರ್ಕಾ ಪೊಂಗಲ್‌ ಸಿದ್ದವಾಗಿದೆ. ಈ ಪೊಂಗಲ್‌ ಗೆ ಹುರಿಗಡಲೇ ಚಟ್ನಿ ಮತ್ತು ಟೋಮೆಟೋ ಚಟ್ನಿ ಇದ್ದರಂತೂ,  ತಿನ್ನುವ ಎಲೆಯ ಹೆಚ್ಚಿದ ಅಲಂಕಾರ, ಹೊಟ್ಟೆಗೂ ಮನಸ್ಸಿಗೂ ಮುದ ನೀಡುವುದು ಗ್ಯಾರಂಟಿ. 

ಮಾನಸಿಕ ಶ್ರೇಯಸ್ಸಿಗೆ ವಿಶೇಷ ಮಾರ್ಗದರ್ಶನ👇

 https://capturingdaysoflife.blogspot.com/2025/07/blog-post_5.html 

ಪೊಂಗಲ್‌ ಗೆ  ಈ ತುಪ್ಪದ ಒಗ್ಗರಣೆ ಬಹಳ ಮುಖ್ಯ, ಕಾರಣ ತುಪ್ಪದಲ್ಲಿ ಸೇರಿದ ಗೋಡಂಬಿ, ಮೆಣಸು, ಜೀರಿಗೆ, ಕರಿಬೇವು, ಶುಂಠಿ, ಹಿಂಗು ಇವುಗಳ ಘಮ ಈ ಆಹಾರಕ್ಕೆ ನೀಡಿದ  ವಿಶೇಷವಾದ ರುಚಿಯ ಸೊಬಗನ್ನು ನೀವು ಸವಿಯುತ್ತೀರಿ. 

ಈಗ ಮೇಲಿನ ಎಲ್ಲಾ ತಿಂಡಿಗಳಿಗೂ ಸರಿಹೊಂದುವಂತಹ ಹಾಗೂ ರುಚಿಯನ್ನು ಹೆಚ್ಚಿಸುವ ಒಂದು ಚಟ್ನಿ ಮಾಡುವುದು ಹೇಗೆಂದು ಇಲ್ಲಿ ತಿಳಿಯೋಣ.

ಪೊಂಗಲ್‌, ರಾಗಿ ದೋಸೆ, ನಿಂಬೆಹಣ್ಣಿನ ಚಿತ್ರನ್ನ ಇವುಗಳಿಗೆ ಹುರಿಗಡಲೆ ಚಟ್ನಿ ಯಾವಾಗಲೂ ಸೂಪರ್‌ ಕಾಂಬಿನೇಷನ್.‌

 

                                                                             ಚಟ್ನಿ

ಆರೋಗ್ಯಕರ ಆಹಾರ ಸೇವನೆಯು ಕೇವಲ ಆಯುಷ್ಯವನ್ನು  ಹೆಚ್ಚಿಸುವುದಲ್ಲ; ನಿರಂತರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯವು ಹೆಚ್ಚು ಚುರುಕಾಗಿ, ಉತ್ಸಾಹಭರಿತವಾಗಿ, ಖುಷಿಯಿಂದ ಮತ್ತು ಕಾರ್ಯನಿರ್ವಹಿಸಲು ಸಹಾಯಮಾಡುತ್ತದೆ.

ಆರೋಗ್ಯಕರ ಆಹಾರ ಆಯ್ಕೆ ಕೇವಲ ಒಂದು ದಿನದ ಆಚರಣೆ ಅಲ್ಲ, ಅದು ಜೀವನಶೈಲಿಯಲ್ಲಿನ ಒಂದು ಕ್ರಮಬದ್ದತೆ.



ಧನ್ಯವಾದಗಳು..........🌷🌷🌷🌷


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......