ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

🌿 ಹಳೆಯ ಅಧ್ಯಾಯಗಳು!!!!!!

 


ಲೇಖಕಿ: ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ: ೦೯.೧೦.೨೦೨೫

🌿 ಹಳೆಯ ಅಧ್ಯಾಯಗಳು

ಜೀವನದ ಪಠ್ಯದಲ್ಲಿ ಕೆಲವು ಅಧ್ಯಾಯಗಳು ಮುಗಿದಂತಾಗುತ್ತವೆಯಾದರೂ, ಅವು ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಅವು ನಮ್ಮ ಒಳಗೆ ಮೌನದೊಳಗೆ ಧ್ವನಿಯಾಗಿ, ಮರೆತ ಕ್ಷಣಗಳಲ್ಲಿ ಬೆಳಕಾಗಿ ಒಂದೊಂದು ನುಡಿಗಳಂತೆ ಉಳಿಯುತ್ತವೆ..
ಹಳೆಯ ಅಧ್ಯಾಯಗಳು ಕೇವಲ ನೆನಪುಗಳ ಸಂಗ್ರಹವಲ್ಲ, ಅವು ನಮ್ಮ ಬದಲಾಗುವ ಸ್ವರೂಪದ ಸಾಕ್ಷಿಗಳು. ಒಂದು ಕಾಲದಲ್ಲಿ ನೋವನ್ನು ನೀಡಿದ ಅನುಭವವೇ ಇಂದು ಧೈರ್ಯದ ಪಾಠವಾಗಿರಬಹುದು. ಹಳೆಯದನ್ನು ಮುಚ್ಚಿ ಹಾಕುವುದಕ್ಕಿಂತ, ಅದರಲ್ಲಿ ಅಡಕವಾದ ಅರ್ಥವನ್ನು ಅರಿಯುವುದು. ಜೀವನಕ್ಕೆ ಬೇಕಾದ ನಿಜವಾದ ಪ್ರೌಢತೆ.

ಪ್ರತಿಯೊಬ್ಬರ ಜೀವನವೂ ಒಂದೊಂದು ರೀತಿಯ  ಪುಸ್ತಕದಂತೆ. ಆ ಪುಸ್ತಕದಲ್ಲಿ  ಕೆಲವು ಪುಟಗಳು ಬೆಳಕಿನಿಂದ ತುಂಬಿರುತ್ತವೆ, ಕೆಲವು ಕತ್ತಲೆಯ ಕವಲು ಹಾದಿಗಳಲ್ಲಿ ನಿಂತು ನೆನಪಿನ ಹನಿಗಳನ್ನು ಸುರಿಸುತ್ತಿರುತ್ತವೆ. ಆದರೆ ಆ ಪ್ರತಿ ಅಧ್ಯಾಯಗಳೂ  ಹೇಗೇ ಇರಲಿ  ಎಲ್ಲವೂ  ನಮ್ಮ ಬೆಳವಣಿಗೆಯ  ಹೆಜ್ಜೆಗಲ್ಲುಗಳು.

ಹಳೆಯ ಅಧ್ಯಾಯಗಳನ್ನು ತಿರುಗಿ ನೋಡುವಾಗ  ಕೆಲವೊಂದು  ನೋವಿನವು, ಕೆಲವೊಮ್ಮೆ ಮಧುರತೆ ತುಂಬಿದ  ನೆನಪುಗಳ ಅನುಭವವನ್ನು ನೀಡುವುದು ಸಹಜವೇ ಸರಿ. ಆದರೆ ನಿಜವಾದ ತಾತ್ವಿಕ ದೃಷ್ಟಿಯಲ್ಲಿ ನೋಡಿದರೆ, ಅವುಗಳ ನಮ್ಮ  ಜೀವನಾನುಭವದ   ಪಾಠಗಳನ್ನು ಭೋದಿಸಿ, ಆತ್ಮಕ್ಕೆ ಹಿಡಿಯುವ ಕೈಗನ್ನಡಿಗಳು.

ಒಂದು ಬೀಜವು ಮಣ್ಣಿನೊಳಗೆ ಅಡಗಿ ಹೋಗುತ್ತದೆ, ಕ್ಷಣಿಕವಾಗಿ ಕಳೆದುಹೋದಂತಾಗುತ್ತದೆ.
ಆದರೆ ಮಣ್ಣಿನೊಳಗಿನ ಅಂಧಕಾರವೇ ಅದರ ಬೆಳವಣಿಗೆಗೆ ಪೋಷಕವಾಗುತ್ತದೆ.
ಹಳೆಯ ಅಧ್ಯಾಯಗಳು ಕೂಡ ಹೀಗೆಯೇ  ಕೆಲವು ಕ್ಷಣಗಳು ನಮ್ಮೊಳಗೆ ಕಳೆದು ಹೋಗುತ್ತವೆ, ಆದರೆ ಅದೇ ಕ್ಷಣಗಳು ಮುಂದಿನ ಬೆಳವಣಿಗೆಗೆ ಬೀಜಗಳಾಗುತ್ತವೆ. ಹಳೆಯ ಅನುಭವಗಳನ್ನು ದುರಂತವೆಂದು ನೋಡುವುದಕ್ಕಿಂತ, ಅವುಗಳನ್ನು ಶಿಕ್ಷಕರಂತೆ ಸ್ವೀಕರಿಸಿದರೆ ಜೀವನದಲ್ಲಿನ  ಹೊಸ ಹಾದಿಗಳು ಸ್ಪಷ್ಟವಾಗುತ್ತವೆ.

ಗಾಯಗಳು ನಮ್ಮ ಒಳಗಿನ ಬಲವನ್ನು ತೋರಿಸುತ್ತವೆ. ಒಮ್ಮೆ ನೋವು ನೀಡಿದ ಅದೇ  ಘಟನೆಯು, ಮುಂದೆ ಇತರರನ್ನು ಅರ್ಥಮಾಡಿಕೊಳ್ಳುವ ಕರುಣೆಗೆ ಕಾರಣವಾಗಬಹುದು. ಹಳೆಯ ಅಧ್ಯಾಯಗಳ ನೋವುಗಳು, ಹೊಸ ಅಧ್ಯಾಯಗಳ ರಚನೆಗೆ ಶಕ್ತಿ ಆಗಬಹುದು. ಯಾಕೆಂದರೆಜೀವನಾನುಭವದ ಬೆಂಕಿಯಲ್ಲಿ ಹೃದಯ ಪಕ್ವವಾಗುತ್ತದೆ.”

🕊️ ಹಳೆಯದನ್ನು ತ್ಯಜಿಸುವುದಲ್ಲ, ಅರ್ಥಮಾಡಿಕೊಳ್ಳುವುದು ನಾವು ಅನೇಕ ಬಾರಿ "ಹಳೆಯದನ್ನು ಮರೆಯೋಣ" ಎಂದು ಹೇಳುತ್ತೇವೆ. ಆದರೆ ವಾಸ್ತವದಲ್ಲಿನ  ಸತ್ಯ ಏನೆಂದರೆ, ಇಲ್ಲಿ  ಹಳೆಯದನ್ನು ಮರೆಯುವ ಅವಶ್ಯಕತೆಯೇ  ಇಲ್ಲ; ಅದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.
ಅಲ್ಲಿ ಮಾಡಿದ ತಪ್ಪುಗಳು, ಉಂಟಾದ ನೋವುಗಳು, ಒಡೆದ ಕನಸುಗಳು  ಇವೆಲ್ಲವೂ ನಮಗೆ ಸತ್ಯದ  ಬೆಳಕಿನೆಡೆಗೆ ಕರೆದೊಯ್ಯುವ ಅನುಭವಗಳೇ.

ನದಿಯು  ತನ್ನ ತೀರವನ್ನು ಬಿಟ್ಟು ಸಾಗುತ್ತಾಳೆ, ಆದರೆ ಹರಿಯುವಾಗೆಲ್ಲಾ ಅದೇ  ತೀರದ ಆಕಾರವನ್ನು ಅಳವಡಿಸಿಕೊಂಡು ಸಾಗುತ್ತಲೇ ಇರುತ್ತಾಳೆ.
ಅದೇ ರೀತಿಯಲ್ಲಿ ನಮ್ಮ  ಜೀವನವೂ ಸಹ,  ಹಳೆಯ ಅಧ್ಯಾಯಗಳನ್ನು ಮತ್ತು ಅವುಗಳಿಂದ ಬಂದ ಪಾಠಗಳನ್ನು ಹೃದಯದಲ್ಲಿ ಇರಿಸಿಕೊಂಡು ಮುಂದೆ ಸಾಗಬೇಕು.

🌅  ಹಳೆಯ ಅಧ್ಯಾಯಗಳಿಂದ ಕಲಿತ  ಪಾಠಗಳನ್ನು ಮನಸ್ಸಿನಲ್ಲಿ ಬರೆದಿಟ್ಟುಕೊಂಡು, ಪುಟವನ್ನು ಶಾಂತವಾಗಿ ಮುಚ್ಚಿ ಮುಂದುವರೆಯುವುದು ಒಂದು  ಕಲೆಯಾಗಿದೆ.
ಹಳೆಯ ಅಧ್ಯಾಯಕ್ಕೆ ಅಲ್ಲಿಯೇ ಅಂಟಿಕೊಂಡು ಬಾಳುವುದಲ್ಲ, ಅದರಿಂದ ಮುಂದಕ್ಕೆ ಸಾಗುವುದೇ ನಿಜವಾದ ಉತ್ಕೃಷ್ಟ  ಬೆಳವಣಿಗೆ.

ಹೊಸ ಬೆಳಗಿನ ಉದಯ ಆಗಬೇಕಾದರೆ, ರಾತ್ರಿಯು ಸಂಪೂರ್ಣವಾಗಿ ಕಳೆದಿರಬೇಕು.
ಅದೇ ರೀತಿಯಲ್ಲಿ, ಜೀವನದ ಹೊಸ ಬೆಳಕು ಕಾಣಬೇಕಾದರೆ, ಹಳೆಯ ಅಧ್ಯಾಯಗಳೊಳಗಿನ ಅಂಧಕಾರವನ್ನು ಸ್ವೀಕರಿಸಿ ಬಿಡುವುದು ಅತ್ಯಗತ್ಯ.

 

🌼 🌾 ಹಳೆಯ ಅಧ್ಯಾಯಗಳು

ಬೆಳಗಿನ ಕಿರಣಗಳು ಹಳ್ಳಿಯ ಹಿಂದಿರುವ ಗುಡ್ಡದ  ತುದಿಯ ಕಣಿವೆಯ  ಮೇಲೆ ರಂಗೇರುತ್ತಿರುವಾಗ.
ಮಂಜಿನ ಹನಿಗಳು ಕಣಕಣವಾಗಿ, ಹಸಿರೆಲೆಗೆ ಮುತ್ತಿಕ್ಕುತ್ತಿರುವ ಸಮಯದೀ  ಹೃದಯ ಮೆಲ್ಲಗೆ  ತಾಜಾ ಆಗುವ ನಸುಕಿನಲ್ಲಿ, ರಘು ತನ್ನ  ಹಳೆಯ ಮನೆಯಿಂದ ಹೊರಬಂದು ನದಿತೀರದ ಹಾದಿಯಲ್ಲಿ ನಡೆದುಹೋಗುತ್ತಿದ್ದ.

                                                      

ಹಾದಿಯಲ್ಲಿ ಅವನು ತನ್ನ ಬಾಲ್ಯದ ನಗುವನ್ನು ಅಲ್ಲಿಯೇ  ಬಿಟ್ಟಿದ್ದ, ಕನಸುಗಳನ್ನು ಕಳೆದುಕೊಂಡಿದ್ದ, ಒಂದು ಕಾಲದ ತನ್ನ ಚೆಂದದ ನಲಿವಿನ ಕಥೆಯನ್ನು ಬಿಟ್ಟು ಬಂದಿದ್ದ.

 

🕰️  ಹದಿನೈದು ವರ್ಷಗಳ ಹಿಂದಿನ ರಘು, ಒಬ್ಬ  ಉತ್ಸಾಹಿ ಯುವಕನಾಗಿದ್ದ ಸಮಯ. ಹಳ್ಳಿಯ ಶಾಲೆಯಲ್ಲಿ ಶಿಕ್ಷಕನಾಗಿದ್ದ ಆಗ ಅವನಿಗೆ  ಹಲವು  ಕನಸುಗಳಿದ್ದವು.  ಮಕ್ಕಳಿಗೆ ಹೊಸ ರೂಪದ ವೈಚಾರಿಕತೆಯ  ಶಿಕ್ಷಣ ನೀಡಬೇಕು, ಊರಿನ ಮಕ್ಕಳ  ಬಾಳು ಬದಲಿಸಬೇಕು ಎಂದು.
ಆದರೆ ಜೀವನದ ಹಾದಿಯಲ್ಲಿ ಎಲ್ಲವೂ ಅಂದುಕೊಂಡ ಹಾಗೆ ನಡೆಯಲಿಲ್ಲ. ಊರಿನಲ್ಲಿ ನಡೆದ  ಒಂದು ಅಸಮಾಧಾನಕರ ಘಟನೆ, ಜನರ ನಿರಾಕರಣೆ, ತನ್ನ ಪ್ರಯತ್ನಗಳಿಗೆ ದೊರಕದ ಸ್ಪಂದನೆ ಮತ್ತು  ತನ್ನ ಪ್ರಯತ್ನಗಳಿಗೆ ದೊರಕದ ಪ್ರೋತ್ಸಾಹ ಇವೆಲ್ಲವೂ ಅವನ ಮನಸ್ಸಿನ ಕನಸ್ಸಿನ  ಪುಟಗಳನ್ನು ಕಿತ್ತುಹಾಕಿದಂತಾಗಿತ್ತು.

ಇದೆಲ್ಲದರಿಂದ ಬೇಸತ್ತ ರಘು ಒಂದು ದಿನ ಹೊಸ ಜೀವನ ಹುಡುಕಿ, ಹೊಸ ಸ್ಥಳಕ್ಕೆ  ಮೌನವಾಗಿ   ಊರಿನಿಂದ ಹೊರಟುಹೋಗಿದ್ದ ಹೊಸ ದಿಕ್ಕಿನ ಹುಡುಕಾಟದಲ್ಲಿ.

 

🌙 ಹೊಸ ನಗರದಲ್ಲಿ ಹೊಸ ಜೀವನದ  ಆರಂಭ,  ನಗರವು ತನ್ನ ಹಳ್ಳಿಗಿಂತ ಬೇರೊಂದು  ಪ್ರಪಂಚದಂತಿತ್ತು . ನಗರವು ಹಳ್ಳಿಗಿಂತ ಸಂಪೂರ್ಣ ವಿಭಿನ್ನ   ಶಬ್ದ, ವೇಗ, ಹೋರಾಟ,  ಕಿಕ್ಕಿರಿದ  ಜನಸಂದಣಿ, ಒತ್ತಡ ತುಂಬಿದ  ಕೆಲಸ, ಯಶಸ್ಸಿನ ಹಂಬಲದ ಹಿಂದೆ ನಿಲ್ಲದ ಓಟ. ರಘು ಇಲ್ಲಿಯೂ ಕೆಲಸ ದಸಿಕ್ಕಿಕೊಂಡ, ರಘು ಕೆಲಸವನ್ನು ಪಡೆದುಕೊಂಡರೂ ಮನಸ್ಸಿನಲ್ಲಿ ಒಂದು  ಶೂನ್ಯತೆ ಇದ್ದೇ ಇತ್ತು. ಜೀವನ ಹಾಗೂ ಹೀಗೂ  ಮುಂದುವರೆಯುತ್ತಿತ್ತು.
ಆದರೆ ರಘುವಿನ  ಅಂತರಂಗದಲ್ಲಿನ  ಶೂನ್ಯತೆಯಿಂದ, ಏನೋ ಒಂದು ಅಪೂರ್ಣತೆ ಸದಾ ಕಾಡುತ್ತಿತ್ತು. ಆಗೆಲ್ಲಾ ಅವನೊಳಗೆ ಒಮ್ಮೆ ಮೌನವಾಗಿ ಕೇಳಿಬರುವ ಆ ಪ್ರಶ್ನೆ……

ನೀನು ನಿನ್ನ ಹಳೆಯ ಅಧ್ಯಾಯವನ್ನು ಮುಚ್ಚಿಬಿಟ್ಟಿದ್ದೀಯಾ, ಅಥವಾ ಅದರಿಂದ ದೂರಓಡಿಹೋಗುತ್ತೀದ್ದೀಯಾ?”

 

🌿  ವರ್ಷಗಳು ಕಳೆದ  ಬಳಿಕ ಒಂದು ದಿನ, ರಘು ತನ್ನ ಹಳ್ಳಿಗೆ ಹಿಂತಿರುಗಲು ನಿರ್ಧರಿಸಿದ.
ನದಿತೀರದ ಹಾದಿಯಲ್ಲಿನ ಆ ಹಳೆಯ ಮರಗಳ ಸಾಲು,  ಶಾಲೆಯ ಬಾಗಿಲಿನ ಮುಂದೆ  ಕಿತ್ತು ಬಿದ್ದಿದ್ದ ಬಾಗಿಲು,  ಎಲ್ಲವೂ ಮೌನದಲ್ಲೇ ಮಾತನಾಡುತ್ತಿದ್ದವು. ಮೌನದಲ್ಲಿ ಅವನು ತನ್ನ ಹಳೆಯ ಜೀವಂತಿಕೆಯನ್ನು ಕಂಡ.

ಅವನು  ನದಿಯ ತೀರದಲ್ಲಿ ಕುಳಿತು , ಕಣ್ಣು ಮುಚ್ಚಿದ. ಹಳೆಯ ನೆನಪುಗಳು ಮಳೆಹನಿಗಳಂತೆ ಸುರಿಯುತ್ತ ಬಂದವು. ಆದರೆ ಬಾರಿ ನೋವಿನಂತೆ ಅಲ್ಲ ,ಕೃತಜ್ಞತೆಯಂತೆ. ಅವನು ಅರ್ಥಮಾಡಿಕೊಂಡ. ಅಲ್ಲಿ ಕಣ್ಣೀರಾಕಿದ್ದ ಆ  ಕ್ಷಣಗಳು ಈಗ ಬೆಳಕಿನ ಕಿರಣಗಳಾಗಿ  ಹೃದಯದಲ್ಲಿ ಕಂಗೊಳಿಸುತ್ತಿದ್ದುವು.  ಹಳೆಯ ಅಧ್ಯಾಯಗಳು ಕೇವಲ ನೆನಪುಗಳಲ್ಲ, ಅವು ಬದುಕಿನ ಪಾಠಗಳ ಪುಸ್ತಕ.”

  

ಅದೇ ಹಳೆಯ ಅಧ್ಯಾಯಗಳು ಈಗ  ಮತ್ತೆ ತೆರೆಯಲ್ಪಟ್ಟಿದ್ದವು. ಆದರೆ ಈಗ ಅವು ನೋವಿನ ಪುಟಗಳಲ್ಲ, ಬೆಳಕಿನ ದೀಪಗಳಾಗಿದ್ದವು.

 

🌙  ಹಳೆಯ ಗಾಯಗಳಿಂದ ಹೊಸ ಶಕ್ತಿ ಪಡೆದುಕೊಂಡಿದ್ದ, ನದಿಯ ನೀರನ್ನು ಕೈಯಲ್ಲಿ ಹಿಡಿದುಕೊಂಡು  ರಘು ಒಮ್ಮೆ  ಯೋಚಿಸಿದ,
ನದಿ ಹಳೆಯ ತೀರವನ್ನು ಬಿಟ್ಟು ಸಾಗುತ್ತದೆ, ಆದರೆ ತೀರದ ಆ ಸ್ಪರ್ಶವನ್ನು ಮರೆಯುವುದಿಲ್ಲ ಬದಲಾಗಿ ಅದರ ಸ್ಮೃತಿ ಹೊತ್ತುಕೊಂಡೇ ಹರಿಯುತ್ತದೆ,”.
ಅದೇ ರೀತಿಯಲ್ಲಿ, ನಾವು ಹಳೆಯ ಕ್ಷಣಗಳನ್ನು ಬಿಡಬೇಕು.  ಆದರೆ ಅವುಗಳಿಂದ ಬಂದ ಬೆಳಕನ್ನು ಉಳಿಸಿಕೊಳ್ಳಬೇಕು.  ಹಳೆಯ ಜೀವನವನ್ನು ತ್ಯಜಿಸುವುದಲ್ಲ  ಅದನ್ನು ಅರ್ಥಮಾಡಿಕೊಂಡು ಬದುಕು ವುದೇ ಬೆಳವಣಿಗೆ.

ಹಳೆಯ ಅಧ್ಯಾಯಗಳು ಆ ನದಿಯ ತೀರದಲ್ಲಿ ರಗುವಿಗೆ ಅಶರೀರವಾಣಿ ನುಡಿದಂತಾಗಿತ್ತು.

ನಮ್ಮಿಂದ ಓಡಿಹೋಗಬೇಡ.
ನಮ್ಮಿಂದ ಕಲಿತು ಮುಂದೆ  ಬೆಳೆಯುವುದು ನೋಡು.”

ಹಳೆಯ ನೋವಿನಿಂದ ಹೊಸ ಶಕ್ತಿ ಹುಟ್ಟುತ್ತದೆ.
ಅದೇ ಶಕ್ತಿ ಮುಂದಿನ ದಾರಿಯನ್ನು ಬೆಳಗುತ್ತದೆ.

🌸   ಸಂಜೆ, ರಘು ಅವನು ಕೆಲಸ ಮಾಡುತ್ತಿದ್ದ ಹಳೆಯ  ಶಾಲೆಯ ಬಾಗಿಲು ತೆರೆದು ಒಳಗೆ ಹೋದ.
ಮಕ್ಕಳು ಕಿಟಕಿಯ ಬಳಿ ಆಟವಾಡುತ್ತಿದ್ದ ದೃಶ್ಯ ಕಣ್ಣಲ್ಲಿ ತುಂಬಿತು. ಆಗ  ಅವನೊಳಗಿನ ಶಿಕ್ಷಕ ಮತ್ತೆ ಹುಟ್ಟಿಬಂದ.

ಅವನು ನಗುತ ಹೇಳಿದ
ಇದು ಹಳೆಯ ಪುಟವಲ್ಲ, ಹೊಸ ಅಧ್ಯಾಯದ ಆರಂಭ.”

 

ಹಳೆಯ ಅಧ್ಯಾಯಗಳು ಕೇವಲ ಅಳಿದುಹೋದ ನೆನಪುಗಳಲ್ಲ  ಅವು ಜೀವಿತದ  ಪುಸ್ತಕದಲ್ಲಿನ ಪಾಠಗಳು. ಅವುಗಳಿಂದ ನಾವು ನೋವು, ನಂಬಿಕೆ, ಭರವಸೆ, ಸಹನೆ,ವಾತ್ಸಲ್ಯ,  ಪ್ರೀತಿಯ ಅರ್ಥ  ಎಲ್ಲವನ್ನೂ ಕಲಿಯುತ್ತೇವೆ. ಇದೇ ಹಳೆಯ ಅಧ್ಯಾಯಗಳನ್ನು ಓದುತ್ತಾ ನಮಗೆ  ನಾವೇ ನಮ್ಮ ನಿಜವಾದ ರೂಪವನ್ನು ಕಂಡುಕೊಳ್ಳುತ್ತೇವೆ. ಅವು ತಪ್ಪಾದ  ಕಥೆಗಳಲ್ಲ. ಪರಿವರ್ತನೆಯ ದಾರಿಗಳೇ.

ರಘುವಿನಂತೆ, ನಾವು ಎಲ್ಲರೂ ಜೀವನದ ಯಾವದೋ ಹಂತದಲ್ಲಿ ಹಳೆಯ ಪುಟವನ್ನು ಅಳಿಸಿ  ಹೋಗಿರುತ್ತೇವೆ. ಆದರೆ ಜೀವನದ ತಾತ್ವಿಕತೆ  ಆ ಮುಚ್ಚಿಹೋದ ಪುಟದಲ್ಲೇ ಇದೆ.

ಹಳೆಯ ಅಧ್ಯಾಯಗಳ ಧೂಳಿನೊಳಗೇ ಹೊಸ ಬೆಳಕಿನ ಬೀಜ ಮಲಗಿರುತ್ತದೆ.”

                                    

🌿🌾 ಹಳೆಯ ಅಧ್ಯಾಯಗಳ ಒಮ್ಮೆ ತಮ್ಮಲ್ಲಿರುವುದನ್ನು ಹೇಳುವ ಮನಸ್ಸು ಮಾಡಿದರೆ ಅದರ  ಧ್ವನಿಯು  ಹೀಗಿರಬಹುದೇ:

ನನ್ನನ್ನು ಅಳಿಸಬೇಡ, ಅರ್ಥಮಾಡಿಕೋ.
ನಾನು ನಿನ್ನ ಮುಂಬರುವ ಬೆಳಕಿನ ಮೂಲ.”

ಹಳೆಯ ಅಧ್ಯಾಯಗಳು ನಮಗೆ ಯಾವಾಗಲೂ  ಹೇಳುವ ಸಂದೇಶ ಒಂದೇ,

ನನ್ನಿಂದ ದೂರ  ಓಡಬೇಡ; ನನ್ನಿಂದ ಕಲಿತು ಹೊಸದಾಗಿ ಬೆಳೆ.”

ನಡೆದಿರುವುದು ಯಾವುದೂ  ತಪ್ಪಾಗಿರುವ ಕಥೆಗಳಲ್ಲ, ಎಲ್ಲವೂ  ಪರಿವರ್ತನೆಯ ಪುಟಗಳು.
ಅವು ಮುಗಿಯುವಂತೆ ಕಾಣುತ್ತಿರುವ  ಕ್ಷಣದಲ್ಲೇ ಹೊಸ ದಿಕ್ಕು ಉದಯಿಸುತ್ತದೆ.

ಹೀಗಾಗಿ ಜೀವನದ ಪುಸ್ತಕದ ಪ್ರತಿ ಪುಟವನ್ನು ತಿರುಗಿಸುವಾಗ ಕಣ್ಣಲ್ಲಿ ಕೃತಜ್ಞತೆ ಇರಲಿ, ಹೃದಯದಲ್ಲಿ ಧೈರ್ಯ ಇರಲಿ.
ಹಳೆಯ ಅಧ್ಯಾಯಗಳು ಮುಗಿದಾಗ ಮಾತ್ರ ಹೊಸ ಬೆಳಕಿನ ಅಧ್ಯಾಯಗಳು ಆರಂಭವಾಗುತ್ತವೆ. 🌻

 

ಹಳೆಯ ಅಧ್ಯಾಯಗಳನ್ನು ತಿರುಗಿ ನೋಡುವುದು ಎಂದರೆ ಕೇವಲ  ಹಿಂದೆಮುಂದೆ ನೋಡುವ ಪ್ರಯಾಣವಲ್ಲ; ಅದು ನಮ್ಮ ಬೆಳವಣಿಗೆಯ ಪಥವನ್ನು ಗುರುತಿಸುವ ಧ್ಯಾನ.
ಹಿಂದಿನ ಘಟನೆಗಳು ಕಣ್ಣೀರಾಗಿರಬಹುದು, ಸಂತಸಗಳಾಗಿರಬಹುದು.  ಆದರೆ ಅವುಗಳಲ್ಲೇ ನಮ್ಮ ಇಂದು ಇರುವ ಬಾಳಿನ ಬೀಜಗಳು ಬಿತ್ತಲ್ಪಟ್ಟಿವೆ.
ಆದ್ದರಿಂದ ಹಳೆಯ ಅಧ್ಯಾಯಗಳನ್ನು ಮರೆತಂತೆ ಅಲ್ಲ, ಆದರೆ ಆಭಾರದಿಂದ ಮುಚ್ಚಬೇಕು.
ಅವುಗಳ ಮೌನದಲ್ಲಿ ಹೊಸ ಕಥೆಯ ಮೊದಲ ಅಕ್ಷರಗಳು ಅಡಗಿವೆ; ಮುಗಿದಂತಾದದ್ದು, ನಿಜಕ್ಕೂ ಮತ್ತೊಂದು ಆರಂಭವಾಗಿರಬಹುದು. 🌅

 

Top of Form

 

ಧನ್ಯವಾದಗಳು…….🌷🌷🌷🌷🌷

 

Bottom of Form

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......