ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

🌾 ಮರೆತುಹೋದ ಹಾದಿ!!!!!!!

 

ಲೇಖಕಿ:ನಾಗಲಕ್ಷ್ಮಿ ಕೆ. ಎನ್‌.  ದಿನಾಂಕ: ೦೭.೧೦.೨೦೨೫.

ಮರೆತುಹೋದ ಹಾದಿ  ಇಲ್ಲಿ ಮೌನದ ಆಳವಿದೆ, ನೆನಪುಗಳ ನಾದವಿದೆ, ಹಾಗೂ ಆತ್ಮಶೋಧನೆಯ ಸುವಾಸನೆ ಇದೆ.

🌾 ಮರೆತುಹೋದ ಹಾದಿ

ನಮ್ಮ ಜೀವನದ ಕೆಲವು ಹಾದಿಗಳು ಕಾಲದ ಧೂಳಿನಲ್ಲಿ ಮಸುಕಾಗುತ್ತವೆ. ನಂತರ ಮರೆಯಾಗುತ್ತವೆ.
ಅವುಗಳ ಮೇಲೆ ನಿಂತು ನಡೆದ ನಮ್ಮ ಹೆಜ್ಜೆಯ  ಗುರುತುಗಳು ಇಂದು ಕಾಣದಿದ್ದರೂ, ಅಲ್ಲಿ ಇನ್ನೂ ನಮ್ಮ ಆತ್ಮದ ನಿಶ್ವಾಸ ಉಳಿದಿರುತ್ತದೆ.

ಪ್ರತಿಯೊಬ್ಬನ ಜೀವನದಲ್ಲೂ ಒಂದು ಮರೆತುಹೋದ ಹಾದಿ ಇರುತ್ತದೆ.  ಅದು ಕನಸುಗಳ ಹಾದಿಯಾಗಿರಬಹುದು, ಪ್ರೀತಿಯ ಪಥವಾಗಿರಬಹುದು, ಅಥವಾ ಆತ್ಮಶೋಧನೆಯ ದಾರಿ ಆಗಿರಬಹುದು. ನಾವು ಹೊಸ ಗುರಿಗಳನ್ನು ತಲುಪುವ ಪ್ರಯತ್ನದಲ್ಲಿ ಹಳೆಯ ಹಾದಿಯನ್ನು ಮರೆತುಬಿಡುತ್ತೇವೆ. ಆದರೆ ಹಾದಿಯನ್ನು  ಮರೆತ ಮಾತ್ರಕ್ಕೆ  ಅದು ತನ್ನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ.

ಹಾದಿ ಕೆಲವೊಮ್ಮೆ ರಾತ್ರಿ ಹೊತ್ತಿನ ಏಕಾಂತದಲ್ಲಿ , ಕೆಲವೊಮ್ಮೆ ಸುಳಿಗಾಳಿ ಹೊಮ್ಮುವಾಗ ಹೃದಯದಲ್ಲಿ ಪಿಸುಗುಟ್ಟುತ್ತದೆ,  ನೀನು ಎಂದೋ   ದಾರಿಯಲ್ಲಿ ನಿನ್ನ ಹೃದಯದ ನಾದವನ್ನು ಬಿಟ್ಟು ಬಿಟ್ಟಿದ್ದೀಯ…”

ಹಾದಿ ನಮ್ಮೊಳಗಿನ ಅಂತರಂಗದ ತಾತ್ವಿಕ ತಿರುಳು. ನಮ್ಮ ಸತ್ಯತೆಯ ನೆನಪು, ನಮ್ಮ ಪ್ರಾರಂಭದ ಶುದ್ಧತೆ. ಸಮಾಜದ ವೇಗ, ಜೀವನದ ಹೊಣೆಗಾರಿಕೆ, ಯಶಸ್ಸಿನ ಆಕರ್ಷಣೆ , ಇವೆಲ್ಲವು ಶುದ್ಧ ಹಾದಿಯ ಮೇಲೆ ತಮ್ಮದೇ ಆದ  ಹೊಸದೊಂದು ಬಟ್ಟೆ ಹೊದಿಸುತ್ತವೆ. ಆದರೆ ಆತ್ಮವು ಅದನ್ನು ಮರೆಯುವುದಿಲ್ಲ.

ತಾತ್ವಿಕವಾಗಿ ನೋಡಿದರೆ, “ಮರೆತುಹೋದ ಹಾದಿಎಂದರೆ ನಮ್ಮ ಮೂಲಸ್ವರೂಪವನ್ನು ಮರೆತ ಸ್ಥಿತಿ. ಅಂದರೆ ನಾವು ಯಾರು, ನಾವು ಏನನ್ನು ನಂಬುತ್ತಿದ್ದೆವು, ಯಾವ ಮೌಲ್ಯಗಳಿಂದ ಬದುಕುತ್ತಿದ್ದೆವು ಅದನ್ನು ಕಳೆದುಕೊಂಡಿರುವ ಸ್ಥಿತಿ. ಹಾದಿಯನ್ನು ಪುನಃ ಹುಡುಕುವುದು ಅಂದರೆ ಆತ್ಮದತ್ತ ಹಿಂದಿರುಗುವ ಯಾತ್ರೆ.

 

🌅 ಒಮ್ಮೆ ಯೋಚಿಸಿ ನೋಡಿ  ನಮ್ಮ ಹೃದಯದ ಒಂದು ಭಾಗ ಯಾವುದೋ ಒಂದಷ್ಟು  ಹಳೆಯ ನೆನಪುಗಳ ತೀರದಲ್ಲೇ ನಿಂತಿದೆ. ಆದರೆ ಕಾಲ, ಕರ್ತವ್ಯ, ಭಯ  ಇವು ಅದನ್ನು ಮುಂದೆ ಸಾಗಲು ಬಿಡುವುದಿಲ್ಲ. ಹಾದಿಯನ್ನು ಮತ್ತೆ ಹುಡುಕಬೇಕಾದರೆ ಮೊದಲು ನಿಲ್ಲಬೇಕು. ಒಮ್ಮೆ ನಿಂತು ಹಳೆಯ ನೆನಪಿನ ಧೂಳನ್ನು ಕೊಡವಿ  ನೋಡುವ ಧೈರ್ಯ ಬೇಕು.

.
ನಾವು ಒಮ್ಮೆ ನಂಬಿದ್ದ ಮಾರ್ಗವನ್ನು ಮತ್ತೆ ಹಿಡಿದು ನಡೆಯುವ  ದೃಢತೆ ಬೇಕು. ಆಗ  ನಮ್ಮ ಕನಸುಗಳ ಕಡೆ ಹಿಂದಿರುಗುವ ಕರೆಯನ್ನು ನಾವು ಆಲಿಸುತ್ತೇವೆ.

ನಮ್ಮೊಳಗೆ ಇನ್ನೂ ಬಾಳುತ್ತಿರುವ ಎಳೆಯ ವಯಸ್ಸಿನನಾವು ಅವನ ಕನಸುಗಳು, ಅವನ ನಿರ್ಭೀತ ನಗು, ಅವನ ನಂಬಿಕೆ, ಅವನೆ ಹಾದಿಯ ಬೆಳಕು. ಅವನನ್ನು ಮತ್ತೆ ಗುರುತಿಸಬೇಕು.

ಜೀವನದ ವೇಗವನ್ನು ಸ್ವಲ್ಪ ನಿಧಾನಗೊಳಿಸಿ ನೋಡಿದರೆ, ನಮ್ಮೊಳಗಿನ ಮರೆತುಹೋದ ಹಾದಿ ಮತ್ತೆ ಗೋಚರವಾಗುತ್ತದೆ. ಅದು ಹೊಸ ದಿಕ್ಕು ತೋರುತ್ತದೆ, ಹೊಸ ಶಕ್ತಿ ಕೊಡುತ್ತದೆ.

 

 

🌼  ನಾರದ ಮುನಿಯ ಮರೆತುಹೋದ ಹಾದಿಯಲ್ಲಿ ಸತ್ಯದ ಹುಡುಕಾಟ

ನಾರದ ಮುನಿ ಪರಬ್ರಹ್ಮನ ಮಗನಾಗಿ ಮಹಾವಿಷ್ಣುವಿನ ಮಗನಾಗಿದ್ದರೂ, ಕೆಲವೊಮ್ಮೆ ಅಹಂಕಾರದಿಂದ  ನಾನು ಎಲ್ಲ  ತಿಳಿದವನುಎನ್ನುವ ಭಾವದಿಂದ ತಲ್ಲೀನನಾಗುತ್ತಾನೆ. ಹೀಗೆ ನಾರದ ಮುನಿಯ ಅಹಂ ಅನ್ನು ಅಳಿಸಲು  ಒಮ್ಮೆ ವಿಷ್ಣುವು ಅವನಿಗೆ ಪಾಠ ಕಲಿಸಲುಮಾಯೆಯ ಹಾದಿತೋರಿಸುತ್ತಾನೆ.
ನಾರದನು ಕ್ಷಣದಲ್ಲೇ ಮಾನವನಾಗಿ ಜನಿಸಿ, ಎಲ್ಲವನ್ನು  ಮರೆತುಹೋಗಿ, ಬದುಕಿನ ತಲ್ಲಣದಲ್ಲಿ ಮುಳುಗಿ ಹೋಗುತ್ತಾನೆ.

ಅವನಿಗೆ ಕೊನೆಗೆ ನಾರದರಿಗೆ  ನೆನಪಾಗುತ್ತದೆ — “ತಾನು ಯಾರು?” ಎಂಬುದು…
ಕ್ಷಣದಲ್ಲಿ ಅವನು ತನ್ನ ಮರೆತುಹೋದ ಹಾದಿಯನ್ನು ಕಂಡುಕೊಳ್ಳುತ್ತಾನೆ. ಅದೇ ಶ್ರೀ ಹರಿ ನಾರಾಯಣನ ಭಕ್ತಿಯ ದಾರಿ.
ಮರೆತುಹೋದ ಹಾದಿ ಎಂದರೆ ನಾವು ನಮ್ಮ ಸತ್ಯಸ್ವರೂಪವನ್ನು ಮರೆತ ಕ್ಷಣ;
ಅದನ್ನು ನೆನಪಿಸಿಕೊಳ್ಳುವುದು ಎಂದರೆ ಆತ್ಮಜಾಗೃತಿದೈವಸ್ಮರಣೆ.

 

🔥 ನಚಿಕೇತ  ಮರಣದ ಹಾದಿಯ ಹಿಂದಿನ ಶಾಶ್ವತ ಜ್ಞಾನ

ಕಠೋಪನಿಷತ್ತಿನಲ್ಲಿ ಕಾಣ ಸಿಗುವ  ನಚಿಕೇತನ  ಕಥೆ ಒಂದು ಆಳವಾದ ಪಾಠ ನೀಡುತ್ತದೆ.
ಯಮಧರ್ಮರಾಜನ ಬಳಿಗೆ ಹೋಗಿ, ನಚಿಕೇತಸಾವಿನ  ಸತ್ಯವೇನು?” ಎಂದು ಕೇಳುತ್ತಾನೆ.ಆಗ ಯಮನು   ನಿತ್ಯೋ ನೈತದ್ಧ್ಯೇನಾಶ್ಯತಿ” – ಆತ್ಮ ಅಮರ. ಎಂದು ಭೋದಿಸುತ್ತಾನೆ. ನಚಿಕೇತನು ಬದುಕಿದ್ದಾಗಲೇ  ಜೀವನ್ಮುಕ್ತಿಯನ್ನು ಪಡೆದು ಮರಳಿ ಬರುತ್ತಾನೆ.

ಅವನ ಹಾದಿ ಆತ್ಮವನ್ನು  ಜ್ಞಾನಮಾರ್ಗದ  ಬೆಳಕಿನಿಂದ  ಪುನರುಜ್ಜೀವನಗೊಳಿಸುವುದೇ ಸತ್ಯದ ಹಾದಿ.
ಮಾನವರು ಮರಣದ ಭಯದಲ್ಲಿ ಬದುಕು ಅರ್ಥವಿಲ್ಲದಂತೆ ನಡೆಸುತ್ತಾರೆ. ನಚಿಕೇತನು ಮರೆತುಹೋದ ಹಾದಿಯನ್ನು ಮತ್ತೆ ಬೆಳಗಿಸುತ್ತಾನೆ.
ಜೀವನದ ನಿಜವಾದ ದಾರಿಯು ಹೊರಗಿನ ಯಶಸ್ಸಿನಲ್ಲಿ ಅಲ್ಲ; ಅದು ಒಳಗಿನ ಶಾಂತಿಯಲ್ಲಿ ಇದೆ.

 

🌊 . ವಾಲ್ಮೀಕಿ ಮಹರ್ಷಿಯ ಪರಿವರ್ತನೆ

ವಾಲ್ಮೀಕಿ ಮೂಲತಃ ಮುತ್ತು ರತ್ನಗಳ ದರೋಡೆಕೋರ. ಇದರಿಂದಾಗಿಯೇ  ವಾಲ್ಮೀಕಿಯ   ಬದುಕು ಪಾಪದ ಹಾದಿಯಲ್ಲಿ ಮುಳುಗಿತ್ತು. ಒಮ್ಮೆ ಋಷಿಗಳ ಉಪದೇಶದಿಂದ ಅವನೊಳಗೆ ಬೆಳಕು ಬೆಳಗಿತು. ಅವನು ಧ್ಯಾನಕ್ಕೆ ಕುಳಿತುಕೊಂಡುರಾಮನಾಮವನ್ನು ಜಪಿಸುತ್ತಿದ್ದ,  ಅವನ ಸುತ್ತ ಕೀಟಗಳು ಗೂಡುಗಟ್ಟಿದರೂ ನಿಲ್ಲಲಿಲ್ಲ.

ಧ್ಯಾನದಲ್ಲಿ ಮುಳುಗಿರಾಮಎಂಬ ನಾಮವನ್ನು ಜಪಿಸಿದಾಗಲೇ  ಅವನೊಳಗಿನ ಹಾದಿ ಪುನಃ ಪ್ರಕಾಶವಾಯಿತು. ಅವನು ಕಾವ್ಯದ ನದಿಯಂತೆ ಹರಿಯುವ ವಾಲ್ಮೀಕಿ ಮಹರ್ಷಿ ಆದರು.
ಮರೆತುಹೋದ ಹಾದಿಯು ಕೆಲವೊಮ್ಮೆ ನಾಳೆಯ ಪಶ್ಚಾತ್ತಾಪದಿಂದ ಹುಟ್ಟುತ್ತದೆ.
ಅರಿಯದೇ  ತಪ್ಪು ಮಾರ್ಗ ಹಿಡಿದರೂ,  ಒಮ್ಮೆ ಸತ್ಯದ ಕಡೆ ತಿರುಗಿದರೆ ಹೊಸ ಜೀವನ ಹುಟ್ಟುತ್ತದೆ.

 

🌅  ಭಗವಾನ್ ಬುದ್ಧರಾಜಕುಮಾರನಿಂದ ತಪಸ್ವಿಯೆಡೆಗೆ

ಸಿದ್ಧಾರ್ಥನು ಸಕಲ ಸಂಪತ್ತು  ಐಶ್ವರ್ಯದಿಂದ ಕೂಡಿದ ವೈಭವೋಪೇತ ಅರಮನೆಯ ಜೀವನ ನಡೆಸುತ್ತ,  ಬದುಕಿನ ಅರ್ಥವನ್ನು ಮರೆತಿದ್ದ.
ವೃದ್ಧಾಪ್ಯ, ರೋಗ, ಮರಣವನ್ನು ಕಂಡಾಗ ಅವನು ಮಾನವನ  ಮರೆತುಹೋದ ಹಾದಿಯನ್ನು  ನೆನಪಿಸಿಕೊಳ್ಳಲು  ಬಂದ. ಆಗ  ಅರಮನೆ ತೊರೆದು ನಿಜವಾದ ಶಾಂತಿಯ ಹಾದಿಯನ್ನು ಹುಡುಕುತ್ತಾ ಹೊರಟನು. ಮತ್ತು ಬುದ್ಧನಾಗಿ ಮರಳಿ ಹಿಂತಿರುಗುವ ವೇಳೇಗೆ  ಅವನು ಕಂಡುಕೊಂಡ  ಹಾದಿ ಮನುಷ್ಯನ ಆಂತರಿಕ ಮುಕ್ತಿಯ ದಾರಿ.

🪔 ನಮ್ಮೊಳಗಿನ ಹಾದಿ ಹೊರಗಿನ ವೈಭವಕ್ಕಿಂತ ಒಳಗಿನ ಪ್ರಜ್ಞೆಯಲ್ಲಿ ಇದೆ.

 

🕊️ . ಅಶೋಕನ ಪರಿವರ್ತನೆಕ್ರೂರತೆಯಿಂದ ಧರ್ಮದತ್ತ

ಮೌರ್ಯ ಚಕ್ರವರ್ತಿ ಅಶೋಕನು ಕಳಿಂಗಯುದ್ಧದಲ್ಲಿ ಲಕ್ಷಾಂತರ  ಜೀವಹಾನಿಯನ್ನು ಕಂಡು ನಡುಗಿದನು. ಯುದ್ಧವೇ ಅವನಿಗೆ ಮರೆತುಹೋದ ಮಾನವೀಯತೆಯ  ಹಾದಿಯ ನೆನಪು ಮಾಡಿತು. ಅವನು ಬೌದ್ಧ ಧರ್ಮವನ್ನು ಸ್ವೀಕರಿಸಿ, ಅಹಿಂಸೆಯ ಮಾರ್ಗದಲ್ಲಿ ರಾಷ್ಟ್ರವನ್ನು ನಡೆಸಿದನು.
ಮರೆತುಹೋದ ಹಾದಿ ಕೆಲವೊಮ್ಮೆ ಪಶ್ಚಾತ್ತಾಪದ ಕಡಲಿನಿಂದ  ಕಂಡುಬರುತ್ತದೆ. ಅದು  ಸ್ವತಃ ನಾವೇ ನವೀಕರಿಸುವ ಹಾದಿಯಾಗುತ್ತದೆ.


ಮರೆತುಹೋದ ಹಾದಿಎಂದರೆ ನಾವೇ ಬಿಟ್ಟುಬಿಟ್ಟ ನಿಜವಾದನಾವು’.
ಅದನ್ನು ನೆನಪಿಸಿಕೊಳ್ಳುವುದು ಅಂದರೆ
👉 ಪಾಪದಿಂದ ಪವಿತ್ರತೆಗೆ,
👉 ಅಜ್ಞಾನದಿಂದ ಜ್ಞಾನಕ್ಕೆ,
👉 ಭ್ರಮೆಯಿಂದ ಶಾಂತಿಗೆ,
👉 ಬಾಹ್ಯದಿಂದ ಆಂತರ್ಯಕ್ಕೆಹಿಂದಿರುಗುವ ಪಯಣ.

 

ಬೆಳಗಿನ ಮಂಜು ಇನ್ನೂ ನದಿಯ ತೀರದಲ್ಲಿ ಹರಡಿಕೊಂಡಿತ್ತು.
ಹಳ್ಳಿಯ ದಾರಿಯಲ್ಲಿ  ಒಬ್ಬನೇ  ಒಬ್ಬ ವ್ಯಕ್ತಿ ನಿಧಾನವಾಗಿ ನಡೆಯುತ್ತಿದ್ದ.ಅವನ ಕೈಯಲ್ಲಿ ಹಳೆಯ ಚೀಲ, ಕಣ್ಣಿನಲ್ಲಿ ಕ್ಷೀಣವಾಗಿರುವ ಹೊಳಪು, ಆದರೆ ಮನದಲ್ಲಿ ಸಾವಿರ ಪ್ರಶ್ನೆಗಳು.

ಅವನ ಹೆಸರು ಆದಿತ್ಯ  ನಗರದಲ್ಲಿ ಬದುಕು ಕಟ್ಟಿಕೊಂಡಿದ್ದ, ನೆಚ್ಚಿನ ಉದ್ಯೋಗ, ಒಳ್ಳೆಯ ಸಂಬಳ, ಯಶಸ್ಸು ಎಲ್ಲವೂ ಇತ್ತು, ಆದರೆ ಹೃದಯದೊಳಗೆ ಏನೋ ಖಾಲಿತನ.
ಒಂದು ದಿನ ಅವನು ತನ್ನ ಹುಟ್ಡೂರು ಹಳ್ಳಿಯತ್ತ ಹೊರಟ.
ಅವನ ಅಜ್ಜ ಹೇಳುತ್ತಿದ್ದ ಹಾದಿ ಅವನು ಬಾಲ್ಯದಲ್ಲಿ ನಡೆಯುತ್ತಿದ್ದ ಕಾಡಿನ ಪಕ್ಕದ ಮಣ್ಣಿನ ದಾರಿ. ಅದನ್ನು ಹುಡುಕಬೇಕೆಂಬ ಆಕಾಂಕ್ಷೆ ಅವನೊಳಗೆ ಹುಟ್ಟಿತ್ತು. ಅವನು ತನ್ನ ಕಾಲಿನಲ್ಲಿದ್ದ ಪಾದರಕ್ಷೆಗಳನ್ನು  ತೆಗೆದು  ಬರಿಗಾಲಿನಲ್ಲಿ ನಿಂತು ಮಣ್ಣನ್ನು ತನ್ನ ಹಿಡಿಯಲ್ಲಿತೆಗೆದುಕೊಂಡ, ಒಂದು ವಿಚಿತ್ರವಾದ ಶಾಂತಿ ಎದೆಯನ್ನು ತುಂಬಿತು.

 

🌿 ಹೃದಯ ತುಂಬಿದ   ಹಾದಿಯ ನೆನಪು ಮರಗಳ ಮಧ್ಯೆ ಹಾದಿ ಇನ್ನೂ ಇತ್ತು  ಆದರೆ ಹುಲ್ಲು ಮುಳ್ಳಿನ ಗಿಡಗಳಿಂದ ಮುಚ್ಚಿಕೊಂಡಿತ್ತು, ಹುಲ್ಲಿನಿಂದ ತುಂಬಿದ, ಹೆಜ್ಜೆ ಗುರುತುಗಳಿಲ್ಲದ ಆ ಹಾದಿಯಲ್ಲಿ ಆದಿತ್ಯ ನಿಧಾನವಾಗಿ ನಡೆಯತೊಡಗಿದ. ಅವನ ಕಿವಿಗೆ ಹಕ್ಕಿಗಳ ಕೂಗು ಕೇಳಿಸಿತು   ಶಬ್ದವನ್ನು ಅವನು ವರ್ಷಗಳಿಂದ ಕೇಳಿರಲಿಲ್ಲ. ಪ್ರತಿ ಹೆಜ್ಜೆಯೂ ಅವನೊಳಗಿನ ಮರೆತುಹೋದ ಏನನ್ನೋ ಎಚ್ಚರಿಸುತ್ತಿತ್ತು. ಆಗ  ಅವನಿಗೆ ನೆನಪಾಯಿತು  ಬಾಲ್ಯದಲ್ಲಿ ಹಾದಿಯ ಕೊನೆಯಲ್ಲಿ ಒಂದು ನದಿ ಇತ್ತು, ಅಲ್ಲಿ ಅವನು ಅಜ್ಜನೊಂದಿಗೆ ಕುಳಿತುಕೊಳ್ಳುತ್ತಿದ್ದ.
ಅಜ್ಜ ಹೇಳಿದ್ದ,

ಹಾದಿ ಕೇವಲ ನದಿಯತ್ತ ಕರೆದೊಯ್ಯುವುದಿಲ್ಲ ಕಂದ, ಇಲ್ಲಿ ನಡೆಯುತ್ತಿದ್ದರೆ ಮನಸ್ಸು ಅದರೊಳಗಿನ  ಶಾಂತಿಯೆಡೆಗೆ ಹೋಗುತ್ತಿದೆ, ಎನಿಸುತ್ತದೆ.ಆದಿತ್ಯ ಅದನ್ನು ಆಗ ನಗುನಗುತ್ತ ಕೇಳಿದ್ದ. ಇಂದು ಮಾತು ಅವನ ಹೃದಯದಲ್ಲಿ ಮಿಂಚಿನಂತೆ ಹೊಳೆಯಿತು.

 

🌅 ಅವನು ನಡೆದುಕೊಂಡು ಹೋಗುತ್ತಿರುವ, ಆ ಹಾದಿಯ  ಮೌನದ ಮಧ್ಯೆ ಒಂದು ಧ್ವನಿ ಕೇಳಿದಂತಾಯಿತು……“ನೀನು ನಿನ್ನಿಂದ ಎಷ್ಟು ದೂರ ಬಂದಿದ್ದೀಯಾ?”

ಅವನು ನಿಂತಲ್ಲೇ  ಕಣ್ಣುಮುಚ್ಚಿದ. ಅವನೊಳಗೆ ನಗರಜೀವನದ ಗದ್ದಲ, ಕಚೇರಿಯ ಒತ್ತಡ, ಜನರ ನಿರಂತರ ಸ್ಪರ್ಧೆ  ಎಲ್ಲವೂ  ಮಸ್ತಿಷ್ಕದಲ್ಲಿ ತೇಲಿ ಬಂದವು.
ಧ್ವನಿ ಮತ್ತೆ ಕೇಳಿತು:

ನಿನ್ನ ಹಾದಿಯು  ಕಳೆದುಹೋಗಿಲ್ಲ, ನೀನೇ ಅದರತ್ತ ನೋಡದೇ ಕಣ್ಮಚ್ಚಿದ್ದೆ.”

ಅವನ ಕಣ್ಣು ತುಂಬಿತು. ಅವನು ಬಾಗಿ ಮಣ್ಣನ್ನು ಮುಟ್ಟಿ, ದೀರ್ಘವಾಗಿ ಉಸಿರೆಳೆದುಕೊಂಡ, ಆ ಮಣ್ಣಿನ ಸುಗಂಧದಲ್ಲಿ ಅವನ ಹಳೆಯ ಕನಸುಗಳ ನಾದ ಕೇಳಿಸಿತು . ಏನಾದರೂ ಸಾಹಿತ್ಯದಲ್ಲಿ  ಬರೆಯಬೇಕೆಂದು ಬಯಸಿದ ಕನಸು, ಸಂಗೀತ ಕಲಿಯಬೇಕೆಂದಿದ್ದ ಆಸೆ, ಎಲ್ಲವೂ  ಬದುಕಿನ ಓಟದಲ್ಲಿ ಮರೆತುಹೋದವು.

 


🌊 ಹಾದಿಯನ್ನು ಸವೆಸಿದ  ಕೆಲವು ಗಂಟೆಗಳ ನಂತರ ಅವನು ಆ  ನದಿಯ ತೀರಕ್ಕೆ ತಲುಪಿದ. ನದಿ ಹಳೆಯದಾದರೂ, ಅದೇ ಹೊಳಪಿನಲ್ಲಿ  ಶಾಂತವಾಗಿಯೇ ಹರಿಯುತ್ತಿತ್ತು. ಅವನ ಅಜ್ಜನ ಹಳೆಯ ಮಾತುಗಳು ಹೃದಯದಲ್ಲಿ ಮತ್ತೆ ಮೊಳಗಿದವು.

ನದಿಯ ಶಬ್ದದಲ್ಲಿ ದೇವರ ಪಿಸುಗುಟ್ಟುವಿಕೆಯಿದೆ.” ಆದಿತ್ಯ ಕಣ್ಣೀರು ಹಾಕಿದ. ಅವನು ಅರಿತುಕೊಂಡ. ನದಿ ಹೊರಗೆ ಅಲ್ಲ, ಅದು ಅವನೊಳಗೆ ಹರಿಯುತ್ತಿದೆ. ಅವನೊಳಗಿನ ಮರೆತುಹೋದ ಆ ಹಾದಿಯು ಈಗ ಮತ್ತೆ ಕಾಣಿಸಿತು.

ಅವನು ಹಾದಿಯಿಂದ  ಹಿಂತಿರುಗುತ್ತಾ ಬರೆದ,

ಜೀವನದಲ್ಲಿ ಕೆಲ ಹಾದಿಗಳು ಕಣ್ಣಿನಿಂದ  ಮರೆಯಾಗುತ್ತವೆ,
ಆದರೆ ಅವು ಯಾವತ್ತೂ ಅಳಿಯುವುದಿಲ್ಲ.
ನಾವು ಮಾತ್ರ ಅವುಗಳಿಂದ ದೂರ ಸರಿಯುತ್ತೇವೆ.
ಹಾದಿಯತ್ತ ಹಿಂದಿರುಗಿದರೆ ನಾವು ಮತ್ತೆ ನಮ್ಮನ್ನೇ ಕಾಣುತ್ತೇವೆ.”

 

🌺  ಆದಿತ್ಯ  ಮತ್ತೆ ನಗರಕ್ಕೆ ಹಿಂದಿರುಗಿದ. ಆದರೆ ಅವನೊಳಗೆ ಏನೋ ಬದಲಾಗಿದೆ.
ಅವನ ಹೆಜ್ಜೆಗಳು ಶಾಂತವಾಗಿದ್ದವು, ಮೃದು ಮಾತುಗಳು, ನಿಜವಾದ ನಗು.
ಅವನ ದಿನಪತ್ರಿಕೆಯಲ್ಲಿ ಮೊದಲ ಸಾಲು ಹೀಗಿತ್ತು…..

ಮರೆತುಹೋದ ಹಾದಿಯು ನನ್ನೊಳಗಿನ ಬೆಳಕಿಗೆ ದಾರಿ.
ನಾನು ಅದನ್ನು ಕಂಡುಬಂದೆ,
ಅದು ನಿಜವಾಗಿಯೂ ನನ್ನ ಮನೆ.”

 

ಮರೆತುಹೋದ ಹಾದಿಕೇವಲ ಒಂದು ದಾರಿಯ ಕಥೆಯಲ್ಲ . ಇದು ಪ್ರತಿಯೊಬ್ಬರ ಆತ್ಮಯಾತ್ರೆಯ ಕನ್ನಡಿ. ನಾವು ಎಲ್ಲರೂ ಯಾವುದೋ ಒಂದು  ಹಾದಿಯನ್ನು ಮರೆತು ಬದುಕುತ್ತಿದ್ದೇವೆ.
ಪ್ರೀತಿಯ ಹಾದಿ, ಸತ್ಯದ ಹಾದಿ, ಶಾಂತಿಯ ಹಾದಿ, ಅಥವಾ ಕನಸಿನ ಹಾದಿ.
ಆದರೆ ಯಾವ ಕ್ಷಣದಲ್ಲಿ ನಾವು ನಮ್ಮ ಹೃದಯದ ಎದುರು  ನಿಂತುನಾನು ಎಲ್ಲಿ ತಪ್ಪಿದೆ?” ಎಂದು ಕೇಳುತ್ತೇವೋ, ಕ್ಷಣವೇ ಆ ಮರೆತುಹೋದ  ಹಾದಿಯ ಪ್ರಾರಂಭ.

👉 ಮರೆತುಹೋದ ಹಾದಿ ಹುಡುಕುವುದು ಎಂದರೆ ಹೊಸ ದಾರಿಯತ್ತ ಸಾಗುವುದಲ್ಲ; ಅದು ನಿಜವಾದ ನಾವೇ ಆಗಿ ಬದುಕಲು ಪ್ರಾರಂಭಿಸುವುದಾಗಿದೆ.

ಹೀಗಾಗಿ, ನಿನ್ನೊಳಗಿನ ಮರೆತುಹೋದ ಹಾದಿಯನ್ನು ಹುಡುಕಿ.
ಅದು ನಿನ್ನ ಕನಸಿನ ಮೂಲ, ನಿನ್ನ ಆತ್ಮದ ನಾಡಿ, ನಿನ್ನ ಜೀವನದ ನಿಜವಾದ ನಕ್ಷೆ.
ಹಾದಿಯ ಮೇಲೆ ಮತ್ತೆ ನಡೆದು ನೋಡು ದಾಖಲಿಸು ಆಗ  ನೀನು ನಿನ್ನನ್ನೇ ಮತ್ತೆ ಕಾಣುವೆ. 🌿

Top of Form

 

Bottom of Form

 


Top of Form

ಧನ್ಯವಾದಗಳು……….🌷🌷🌷🌷🌷🌷

 

Bottom of Form

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????