ಡಿಜಿಟಲ್ ಆರೋಗ್ಯ ಉಪಕ್ರಮಗಳು ಗ್ರಾಮೀಣ ಭಾರತದ ಬದುಕನ್ನು ಹೇಗೆ ಬದಲಾಯಿಸುತ್ತಿವೆ?

ಇಮೇಜ್
                                                                           ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಆರೋಗ್ಯ ಕ್ರಾಂತಿ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೧೮.೦೫.೨೦೨೬. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಡಿಜಿಟಲ್ ಆರೋಗ್ಯ ಉಪಕ್ರಮಗಳ ಪ್ರಭಾವ. ಡಿಜಿಟಲ್ ಆರೋಗ್ಯ ಉಪಕ್ರಮಗಳು ವಿಶ್ವದಾದ್ಯಂತ ಆರೋಗ್ಯ ಕ್ಷೇತ್ರವನ್ನು ವೇಗವಾಗಿ ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ , ಉತ್ತಮ ವೈದ್ಯಕೀಯ ಸೇವೆಗಳ ಲಭ್ಯತೆ ಸೀಮಿತವಾಗಿರುವ ಸಂದರ್ಭದಲ್ಲಿ , ಈ ಉಪಕ್ರಮಗಳು ಮಹತ್ವದ ಬದಲಾವಣೆಯನ್ನು ತರುತ್ತಿವೆ . ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ . ಭಾರತದಲ್ಲಿ ಗ್ರಾಮೀಣ ಆರೋಗ್ಯ ಸೇವೆಯನ್ನು ಪರಿವರ್ತಿಸುತ್ತಿರುವ ಡಿಜಿಟಲ್ ಆರೋಗ್ಯ ಉಪಕ್ರಮಗಳು ಭಾರತದ ಗ್ರಾಮೀಣ ಆರೋಗ್ಯ ವ್ಯವಸ್ಥೆಯು ಹಲವು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ...

ಕವಲೊಡೆದ ಕಥೆ!!!!!!!!

 


ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ: ೨೯.೦೯.೨೦೨೫

ಕವಲೊಡೆದ ಕಥೆಜೀವನದ ಪ್ರತೀಕ

ಜೀವನವೆಂಬ ಪಯಣವು ನೇರ ರೇಖೆಯಂತಿರೋದಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಸೋಲು, ನೋವು, ನಿರಾಶೆ, ಮೋಸಇವುಗಳು ಸಹಜವಾಗಿ ನಮ್ಮ ದಾರಿಯಲ್ಲಿ ಬಂದು ಸೇರಿ ಬಿಡುತ್ತವೆ. ಆದರೆ ಕಷ್ಟಗಳ ಮೂಲಕವೇ ಭವಿಷ್ಯದ ಸಿಹಿ ಫಲವನ್ನು ನಾವು ಅನುಭವಿಸುತ್ತೇವೆ ಎಂಬುದನ್ನು ಕವಲೊಡೆದ ಕಥೆಯು ಪ್ರತಿಬಿಂಬಿಸುತ್ತದೆ.

ಜೀವನದಲ್ಲಿ ಸೋಲು ಎಂದರೆ ಅಂತ್ಯ ಎಂಬ ಭ್ರಮೆ ನಮ್ಮ ಸಮಾಜದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಂದು ವಿಫಲವಾದ ಪ್ರಯತ್ನವೇ ಜೀವನವನ್ನು ನಿರ್ಣಯಿಸುತ್ತದೆ ಎಂಬ ಭಾವನೆ ಅನೇಕರ ಮನಸ್ಸನ್ನು ಕಾಡುತ್ತದೆ. ಆದರೆ ಇತಿಹಾಸವೂ ಸೇರಿದಂತೆ, ಸಮಾಜದ ನೈಜ ಉದಾಹರಣೆಗಳು ನಮಗೆ ಕಲಿಸುವುದು ಬೇರೇನೂ ಅಲ್ಲ,  ಸೋಲು ಎಂದರೆ ಹೊಸ ಬೆಳಕಿಗೆ ದಾರಿ ಎನ್ನುವುದು ಕವಲೊಡೆದ ಕಥೆಯ ಪ್ರತೀಕ ಇದಕ್ಕೆ ಸೂಕ್ತವಾಗಿದೆ.

    ಒಬ್ಬ ರೈತ ತನ್ನ ಹೊಲದಲ್ಲಿ ವರ್ಷಗಳಿಂದ ಶ್ರಮಿಸುತ್ತಿದ್ದ. ಮಳೆ ಬರದ ವರ್ಷಗಳಲ್ಲಿ ಬಿತ್ತನೆ ಹಾಳಾಯಿತು, ಬೆಳೆ ನಾಶವಾಯಿತು. ಮನೆಯವರು ತಿನ್ನಲು ಆನೂ ಇಲ್ಲದಂತ ಸ್ಥಿತಿ ಎದುರಾಯಿತು. ಆದರೆ ಅವನು ಕೈಚೆಲ್ಲಲಿಲ್ಲ. ಅವನ ನಿರಂತರ ಹೋರಾಟಕ್ಕೆ, ಅಚ್ಚುಕಟ್ಟಾದ ಪರಿಶ್ರಮಕ್ಕೆ ಕೊನೆಗೂ ಭಗವಂತನು ಕರುಣಿಸಿದ. ಮಳೆಯೂ ಚೆನ್ನಾಗಿ ಬಂತು, ಅವನು ಬೆಳೆದ ಬೆಳೆ ಅವನಿಗೆ ಸಿರಿವಂತಿಕೆಯ ಬಾಗಿಲು ತೆರೆಯಿತು. ಇಂದಿಗೂ ಗ್ರಾಮದಲ್ಲಿ ಅವನು ಬದುಕಿನ ಹೋರಾಟದಲ್ಲಿ ಸೋತವನು ಅಲ್ಲ, ಗೆದ್ದವನು ಎಂಬ ಹೆಸರಿನಲ್ಲಿ ಪ್ರಸಿದ್ಧನಾಗಿದ್ದಾನೆ.

    ಹಾಗೆಯೇ ಒಬ್ಬ ವ್ಯಾಪಾರಿ ವರ್ಷಗಳಿಂದ ಕುಂಟುತ್ತಲೇ ನಡೆಸುತ್ತಿದ್ದ  ವ್ಯವಹಾರವನ್ನು ಎಳೆದುಕೊಂಡು ಹೋಗುತ್ತಿದ್ದ. ಅನೇಕ ಬಾರಿ ದಿವಾಳಿಯಾದನು. ಸಮಾಜದಲ್ಲಿ "ಇವನಿಂದ ಏನನ್ನೂ ಸಾಧಿಸಲು  ಆಗುವುದಿಲ್ಲ" ಎಂದು ಹಲವರು ಕೀಳಾಗಿ ನೋಡಿದರು. ಆದರೆ ಆತನು ನಿರಾಶೆಯಾಗದೆ ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಾ ಹೋರಾಡಿದ. ಕೊನೆಗೆ ಒಂದು ಅವಕಾಶ ಸಿಕ್ಕಿತುಅದು ಅವನ ವ್ಯವಹಾರವನ್ನು ಶಿಖರಕ್ಕೆ ಏರಿಸಿತು. ಇಂದು ಅವನ ಯಶಸ್ಸಿನ ಕಥೆ ಅನೇಕರಿಗೆ ಪ್ರೇರಣೆಯಾಗುತ್ತಿದೆ.

    ಜೀವನದ ಒಂದು ಹಂತದಲ್ಲಿ ನಾವು ಪ್ರೀತಿಸಿದವರು, ನಮ್ಮನ್ನು ನಂಬಿಸಿದವರು ದ್ರೋಹ ಮಾಡಿದಾಗ ಹೃದಯವೇ ಒಡೆದುಹೋಗುತ್ತದೆ.

    ಒಬ್ಬ ಯುವಕ ತಾನು  ಪ್ರೀತಿಸಿದ ಹುಡುಗಿಯನ್ನು  ಮನಸಾರೆ ನಂಬಿದ್ದ. ಆದರೆ ಅವಳು ಮೋಸ ಮಾಡಿ ದೂರಾದಾಗ ಅವನ ಜೀವನ ಕತ್ತಲೆಯಲ್ಲಿ ತುಂಬಿತು. ನಿರಾಶೆಯಲ್ಲಿ ಮುಳುಗಿದ ಅವನಿಗೆ ತನ್ನ ಬದುಕೇ ಅರ್ಥವಿಲ್ಲವೆಂದು ಅನಿಸಿತು. ಆದರೆ ಕಾಲ ಕಳೆದಂತೆ ಅವನ ಬದುಕಿಗೆ  ಹೃದಯದಾಳದಿಂದ  ಪ್ರೀತಿ  ಮಾಡುವ ಹುಡುಗಿ  ಸಹಧರ್ಮಿಣಿಯಾಗಿ ಬಂದಳು. ಅವಳ ಸಾನ್ನಿಧ್ಯದಿಂದ ಮನೆಯೂ, ಮನವೂ ಬೆಳಗಿತು. ಹಿಂದಿನ ಮೋಸದ ನೋವು ಮರೆಯಾಗಿ, ಸತ್ಯವಾದ ಪ್ರೀತಿಯ ಬೆಳಕು ಅವನ ಜೀವನವನ್ನೇ ಬದಲಿಸಿತು.

    ಹೀಗಾಗಿ,  ಸೋಲು, ನೋವು, ದ್ರೋಹ, ನಿರಾಶೆಗಳು ಜೀವನದ ಅಂತಿಮ ತಾಣವಲ್ಲ. ಅವು ಹೊಸ ಬೆಳಕಿಗೆ ದಾರಿ ಮಾಡಿಕೊಡುವ ಕತ್ತಲೆಯಷ್ಟೆ. ಭಗವಂತನ ಕೃಪೆಯಿಂದ ಅಥವಾ ಕಾಲದ ನಿಯಮದಿಂದ, ಬದುಕಿನಲ್ಲಿ ಒಮ್ಮೆ  ಸುಖ, ಸತ್ಯವಾದ ಯಶಸ್ಸು, ಪ್ರಾಮಾಣಿಕ ಪ್ರೀತಿ ನಮ್ಮದಾಗುವುದು ಖಚಿತ

    ಜೀವನವೆಂಬ ಸಾಗರದಲ್ಲಿ ಕೆಲವರು ತೇಲಿ ಸಾಗುತ್ತಾರೆ, ಕೆಲವರು ಬಿರುಗಾಳಿಗೆ ಸಿಲುಕುತ್ತಾರೆ. ಆದರೆ ಬಿರುಗಾಳಿಯ ನಂತರವೂ ಸೂರ್ಯೋದಯ ಖಂಡಿತವಾಗಿಯೂ ಆಗುತ್ತದೆ.

     ಕವಲೊಡೆದ ಕಥೆ ನಮಗೆ ಕಲಿಸುವುದು ಏನೆಂದರೆಭಗವಂತನು ನಮ್ಮ ಬದುಕಿನಲ್ಲಿ ಕಷ್ಟ, ಮೋಸ, ನೋವುಗಳನ್ನು ತಂದೊಡ್ಡಿದರೂ, ಕೊನೆಯಲ್ಲಿ ಒಳ್ಳೆಯದೇ ಆಗುವಂತೆ ಮಾಡುತ್ತಾನೆ. ನಂಬಿಕೆ ಮತ್ತು ತಾಳ್ಮೆ ಇದ್ದರೆ  ಖಂಡಿತ  ಶುಭವಾಗುತ್ತದೆ.

    ಜೀವನದಲ್ಲಿ ಕೆಲವರು ಸೋಲು ಕಂಡು ತಲೆತಗ್ಗಿಸುತ್ತಾರೆ, ಇನ್ನೂ ಕೆಲವರು ಸೋಲು ಕಂಡರೂ ಅದನ್ನು ಹೊಸ ದಾರಿಯ ಪ್ರಾರಂಭವನ್ನಾಗಿ ಪರಿವರ್ತಿಸುತ್ತಾರೆ. “ಕವಲೊಡೆದ ಕಥೆಎಂಬ ತಾತ್ಪರ್ಯವನ್ನು ಸಮಾಜದ ಘಟನೆಯೊಂದರೊಂದಿಗೆ ಹೋಲಿಸಬೇಕೆಂದರೆ, ನಿರ್ಮಾ ಕಂಪನಿಯ ಕಥೆ ಒಂದು ಸವಿಯಾದ ಉದಾಹರಣೆ.

ನಿರ್ಮಾದ ಉದಯ!

    ಒಬ್ಬ ಸಾಮಾನ್ಯ ವ್ಯಕ್ತಿಯಾದ  ಕರಸನ್ಭಾಯಿ ಪಟೇಲ್ ಅವರ ಕನಸಿನಿಂದ ಹುಟ್ಟಿದನಿರ್ಮಾ”, ಸೈಕಲ್ ಮೇಲೆ ಮನೆಮನೆಗೆ ತಲುಪುತ್ತಿದ್ದ ಕಡಿಮೆ ಬೆಲೆಯ ಡಿಟರ್ಜೆಂಟ್ಆಗಿತ್ತು. ಒಮ್ಮೆ ಭಾರತದೆಲ್ಲೆಡೆವಾಷಿಂಗ್ ಪೌಡರ್ ನಿರ್ಮಾಹಾಡು ಕೇಳಿ ಬಾರದ ಮನೆ ಇರಲಿಲ್ಲ. ಕೇವಲ 5 ರೂಪಾಯಿಯ ಪ್ಯಾಕೇಟ್ ಸಾವಿರಾರು ಬಡ ಕುಟುಂಬಗಳಿಗೆ ಉಪಯೋಗವಾಯಿತು.   ಸಮಯದಲ್ಲಿ ದೊಡ್ಡ ದೊಡ್ಡ ಬಹುಜಾತಿ ಕಂಪನಿಗಳು ಮಾರುಕಟ್ಟೆಗೆ ಲಗ್ಗೆಇಟ್ಟಿದ್ದವು. ಆದರೆ ಜನಸಾಮಾನ್ಯರ ಅವಶ್ಯಕತೆ ಅರಿತು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನ ತಯಾರಿಸುವ ಮೂಲಕ ನಿರ್ಮಾ ಜನಮನ ಗೆದ್ದಿತು.
    ವಾಷಿಂಗ್ ಪೌಡರ್ ನಿರ್ಮಾಎನ್ನುವ ಜಾಹೀರಾತು ಒಂದೇ ತಲೆಮಾರಿಗೆ ನೆನಪಿನ ಹಾಡಾಯಿತು. ಇದು ಕವಲೊಡೆದ ಕಥೆಯ ಯಶಸ್ಸಿನ ಭಾಗ. ಅಸಾಧ್ಯವೆಂದು ಕಂಡ ಹೋರಾಟವು ಸಾಮಾನ್ಯ ವ್ಯಕ್ತಿಯನ್ನು ದೇಶವ್ಯಾಪಿ ಬ್ರಾಂಡ್ ಸ್ಥಾಪಕನನ್ನಾಗಿಸಿತು.

 


ನಿರ್ಮಾದ ಸವಾಲುಗಳುಸೋಲಿನ ಹಂತ

    ಆದರೆ ಕಾಲ ಬದಲಾಯಿತು. ಜನರ ಅಭಿರುಚಿಗಳು ಬದಲಾಗಿ,  ಬರುಬರುತ್ತಾ  ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗಳು  ಬದಲಾದವು. ಹೊಸ ತಲೆಮಾರುಗಳು  ಜೈವಿಕ, ಪ್ರೀಮಿಯಮ್ ಉತ್ಪನ್ನಗಳತ್ತ ಒಲವು ತೋರಿದವು.  ಬೃಹತ್ ಬಹುಜಾತಿ ಕಂಪನಿಗಳು ಹೆಚ್ಚು ಪ್ರಬಲ ಜಾಹೀರಾತು, ವಿತರಣ ಶಕ್ತಿ ಮತ್ತು ಸಂಶೋಧನೆಗಳಿಂದ ಮಾರುಕಟ್ಟೆಯನ್ನು ಪ್ರಭಾವಿಸಿದವು. ಹೊಸ ಜಾಹೀರಾತು, ಆಕರ್ಷಕ ಪ್ಯಾಕೇಜಿಂಗ್, ಅಂತರಾಷ್ಟ್ರೀಯ ಕಂಪನಿಗಳ ಒತ್ತಡಇವುಗಳ ನಡುವೆ ನಿರ್ಮಾ ತನ್ನ ಜಾಗವನ್ನು ಕಳೆದುಕೊಂಡಿತು.  ತನ್ನ ಹಿಂದಿನ ಪ್ರಭಾವ ಕಳೆದುಕೊಂಡಿತು . ಡಿಟರ್ಜೆಂಟ್ ಕ್ಷೇತ್ರದಲ್ಲಿ ಅದು ಹಿಂದಿನಂತಿಲ್ಲ; ಹಿಂದುಳಿಯುವ ಹಂತ  ಎನ್ನುವ ಅಭಿಪ್ರಾಯ ಮೂಡುತ್ತಿದೆ.

    ಆದರೂ ಕಂಪನಿ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಹೊಸ ಹಾದಿಗಳತ್ತ ತಿರುಗಿತುಔಷಧೋದ್ಯಮ, ಸಿಮೆಂಟ್, API ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ.  ತಮ್ಮ ವ್ಯವಹಾರವನ್ನು ಡಿಟರ್ಜೆಂಟ್ನಿಂದ ಬೇರೆ ಕ್ಷೇತ್ರಗಳಿಗೆ ತಿರುಗಿಸಿದರು.  ಸಿಮೆಂಟ್, ಔಷಧ ತಯಾರಿಕೆ, ಎಜುಕೇಶನ್ ಸಂಸ್ಥೆಗಳುಇವುಗಳ ಮೂಲಕ ನಿರ್ಮಾ ಮರುಹುಟ್ಟು ಪಡೆದುಕೊಳ್ಳುತ್ತಿದೆ.

    ಸೋಲು ಇದ್ದರೂ ಅದು ಕತ್ತಲೆ ಅಲ್ಲ, ಹೊಸ ಬೆಳಕಿನ ದಾರಿ ಎಂಬುದನ್ನು ನಿರ್ಮಾ ತೋರಿಸಿತುಇದೊಂದು ಹೊಸ ಬೆಳಕಿನ ಹುಡುಕಾಟ. ಅಂತೆಯೇ, ಕವಲೊಡೆದ ಕಥೆಯಂತೆಯೇ ಸೋಲು ಅಂತ್ಯವಲ್ಲ.

ಐಟಿ ಉದ್ಯೋಗಿಗಳ ಕೃಷಿ ಪ್ರವೃತ್ತಿ!

    ಇಂದು ಹಲವಾರು ಐಟಿ ಉದ್ಯೋಗಿಗಳು ಕಾರ್ಪೋರೇಟ್‌ ಜಗತ್ತಿನ ದಣಿವಿನಿಂದ, ಒತ್ತಡದಿಂದ, ಮಾನಸಿಕ ಅಶಾಂತಿಯಿಂದ ಕಂಗೆಟ್ಟು ಹೊಸ ದಾರಿಯನ್ನು ಹುಡುಕುತ್ತಿದ್ದಾರೆ. ತಮ್ಮ ಅನುಭವ, ಸಂಪಾದನೆಗಳನ್ನು ಬಳಸಿಕೊಂಡು ಕೃಷಿ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

  • ಕೆಲವರು ಆರ್ಗಾನಿಕ್ ಕೃಷಿ ಆರಂಭಿಸಿದ್ದಾರೆ.
  • ಕೆಲವರು ಅಗ್ರೋ ಸ್ಟಾರ್ಟ್ಅಪ್ಗಳನ್ನು ನಿರ್ಮಿಸಿದ್ದಾರೆ.
  • ಕೆಲವರು ನಗರ ಜೀವನ ಬಿಟ್ಟು ಹಳ್ಳಿಗಳಲ್ಲಿ  ನೆಲೆಯೂರಿ ಹೊಸ ಜೀವನದತ್ತ ಮುಖ ಮಾಡಿದ್ದಾರೆ.

ಇದು ಕೂಡಾಕವಲೊಡೆದ ಕಥೆ ಇನ್ನೊಂದು ರೂಪಒತ್ತಡ, ನಿರಾಶೆ, ದಣಿವಿನಿಂದ ತಾತ್ಕಾಲಿಕ ಸೋಲು ಕಂಡವರು ಭೂಮಿಯ ಮಡಿಲಲ್ಲಿ ಹೊಸ ಶಾಂತಿ, ನಿಜವಾದ ಸುಖ ಕಂಡುಕೊಳ್ಳುವಲ್ಲಿ ಪ್ರವೃತ್ತರಾಗಿದ್ದಾರೆ.

    ನಿರ್ಮಾ ಕಂಪನಿಯ ಪಯಣವು  ನಮಗೆ ಕಲಿಸುವ ಗುಣಪಾಠವೆಂದರೆ, ಯಶಸ್ಸು ಶಾಶ್ವತವಲ್ಲ.

    ಸೋಲು ಶಾಶ್ವತವಲ್ಲ. ಆದರೆ ಹೊಸ ಹಾದಿ ಹುಡುಕುವ ಸಾಮರ್ಥ್ಯವೇ ಶಾಶ್ವತಹಾಗೆಯೇ, ನಮ್ಮ ವೈಯಕ್ತಿಕ ಜೀವನದಲ್ಲೂ ಪ್ರೀತಿಯಲ್ಲಿ ಮೋಸ, ಉದ್ಯೋಗದಲ್ಲಿ ದಣಿವು, ಸಮಾಜದಲ್ಲಿ ಕೀಳುಮಟ್ಟದ ಮಾತುಗಳು ಬಂದರೂ, ಅದನ್ನು ಅಂತಿಮ ಸೋಲಾಗಿ ನೋಡುವ ಅಗತ್ಯವಿಲ್ಲ.

ಸೋಲು, ನೋವು, ಮೋಸಇವೆಲ್ಲವು ಕೇವಲ ಕತ್ತಲೆಯಂತೆ; ಬೆಳಕನ್ನು ನೋಡುವುದಕ್ಕೆ ಅವು ಹಾದಿ ಮಾಡಿಕೊಡುತ್ತವೆಸೋಲು ಅಂತ್ಯವಲ್ಲ, ಅದು ಹೊಸ ದಾರಿಯ ಪ್ರಾರಂಭ.

ಅಮಿತಾಬ್ ಬಚ್ಚನ್ಕುಸಿತದಿಂದ ಪುನರುತ್ಥಾನ.

     ಬಾಲಿವುಡ್ ಶಹೆನ್ಶಾ ಆಗಿದ್ದ ಅಮಿತಾಬ್ ಬಚ್ಚನ್, 1990 ದಶಕದ ಕೊನೆಯಲ್ಲಿ ಭಾರೀ ಹಣಕಾಸಿನ ಸಂಕಷ್ಟ ಎದುರಿಸಿದರು. ತಮ್ಮ ಕಂಪನಿ “ABCL” ಭಾರೀ ನಷ್ಟದಲ್ಲಿ ಮುಳುಗಿ, ಬ್ಯಾಂಕ್ಗಳು ಕಂಪನಿಯ  ಬಾಗಿಲು ತಟ್ಟಿದ್ದವು. ಅಮಿತಾಬ್ ಬದುಕುಇಲ್ಲಿಂದ ಎಲ್ಲವೂ ಮುಗಿದು ಹೋಯಿತುಎನ್ನುವ ಸ್ಥಿತಿಗೆ ಬಂತು.

    ಆದರೆ ಬಚ್ಚನ್‌  ಕೈಚೆಲ್ಲಲಿಲ್ಲ.  ದೂರದರ್ಶನದತ್ತ ಮುಖಮಾಡಿ ಕೌನ್ ಬನೇಗಾ ಕರೋಡ್‌ಪತಿ ಎಂಬ ಕಾರ್ಯಕ್ರಮವನ್ನು ನಿರ್ವಹಿಸಲು ಒಪ್ಪಿಕೊಂಡರು. ಸಿನಿರಂಗದ   ಹಲವರುಸಿನಿಮಾ ತಾರೆ ಟಿವಿಗೆ ಬಂದ್ರೆ ಕೀಳು ಹಂತಎನ್ನುವ ಮನಸ್ಥಿತಿ ಉಳ್ಳವರು. ಆದರೆ ಅಮಿತಾಭ್‌ ಬಚ್ಚನ್‌ ಕಿರುತೆರೆಯಲ್ಲಿ  ಮತ್ತೆ ಜನಮನ ಗೆದ್ದರು. ಹೊಸ ಚೈತನ್ಯ ಪಡೆದರು. ಪುನಃ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಲು ಆರಂಭಿಸಿದರು. ಇಂದು ಬಚ್ಚನ್ ಕೇವಲ ನಟನಲ್ಲ, ಬದುಕಿನ ಪಾಠವಾಗಿದ್ದಾರೆ.  ಸೋಲು ಎಂದರೆ ಅಂತ್ಯವಲ್ಲ, ಅದು ಮರುಜನ್ಮದ ಅವಕಾಶ. 

ಅಮೂಲ್ ಗೆಲುವು.

    1960 ದಶಕದಲ್ಲಿ, ಗುಜರಾತಿನಲ್ಲಿ  ಹೈನುಗಾರಿಕೆಯಲ್ಲಿನ ರೈತರು ಮಧ್ಯವರ್ತಿಗಳ ದೌರ್ಜನ್ಯದಿಂದ ನರಳುತ್ತಿದ್ದರು. ರೈತರಿಗೆ ಅವರು ನೀಡುತ್ತಿದ್ದ ಹಾಲಿಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಎಲ್ಲರೂಹೈನುಗಾರಿಕೆ ನಡೆಸುತ್ತಿದ್ದರೂ ಬದುಕು ಸುಧಾರಿಸುತ್ತಿಲ್ಲಎಂದು ಬೇಸರಿಸಿದರು.

ಸಂದರ್ಭದಲ್ಲಿ ವರ್ಗೀಸ್ ಕುರಿಯನ್ ಅವರ ನೇತೃತ್ವದಲ್ಲಿ ಅಮೂಲ್ ಸಹಕಾರ  ಸಂಸ್ಥೆಹುಟ್ಟಿತು.
👉 ರೈತರು ನೇರವಾಗಿ ಸಹಕಾರ ಸಂಘಕ್ಕೆ ಹಾಲು ಹಾಕಲು ಪ್ರಾರಂಭಿಸಿದರು.
👉 ಪ್ರತಿ ಹನಿ ಹಾಲಿಗೂ ನ್ಯಾಯವಾದ ಬೆಲೆ ಸಿಕ್ಕಿತು.
👉 ಅಲ್ಪಸಂಖ್ಯಾತ ರೈತರು ಸೇರಿ ಮಾಡಿದ ಹೋರಾಟವೈಟ್ ರೆವಲ್ಯೂಶನ್ಆಗಿ ಬದಲಾಯಿತು.

    ಇಂದು ಭಾರತವು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರಮಧ್ಯವರ್ತಿಗಳ ದೌರ್ಜನ್ಯದಲ್ಲಿ ಸೋತ ರೈತರು, ತಮ್ಮ ಒಗ್ಗಟ್ಟಿನಿಂದ ವಿಶ್ವದ ಗಮನ ಸೆಳೆದರು.

    ಇವು ಎಲ್ಲಾ ಒಂದೇ ಸಂದೇಶ ನೀಡುತ್ತವೆ: ಸೋಲು ಶಾಶ್ವತವಲ್ಲ; ಹಾಗಾಗಿ  ಹೋರಾಟ ಶಾಶ್ವತವಾಗಿರಲಿ.

    ವೈಯಕ್ತಿಕ ಬದುಕಿನಲ್ಲಿಯೂ ಇದೇ ತತ್ವವು ಅನ್ವಯಿಸುತ್ತದೆ. ಮೋಸ ಮಾಡಿದ ಪ್ರೇಮಿ ದೂರಾದರೂ, ಸತ್ಯವಾದ ಪ್ರೀತಿಯೊಂದಿಗೆ ಬರುವ  ಸಹಧರ್ಮಿಣಿ ಬದುಕನ್ನು ಬೆಳಗಿಸುತ್ತಾಳೆ. ಉದ್ಯೋಗದಲ್ಲಿ ಸೋಲಿದ್ದರೂ, ಹೊಸ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ. 

    ಕವಲೊಡೆದ ಕಥೆಯ ಸಾರವೆಂದರೆಭಗವಂತನು ತೋರಿಸುವ ಪ್ರತಿಯೊಂದು ಸೋಲು, ಪ್ರತಿಯೊಂದು ನೋವು, ಪ್ರತಿಯೊಂದು ದ್ರೋಹವೂ ಹೊಸ ಬೆಳಕಿನ ಮುನ್ನೋಟ.

    ಸಮಾಜದ ಕಥೆಗಳಾಗಲಿ, ಕಂಪನಿಗಳ ಪಯಣವಾಗಲಿ, ವೈಯಕ್ತಿಕ ಬದುಕಾಗಲಿಎಲ್ಲೆಡೆ ಸಂದೇಶ ಒಂದೇ, ಸೋಲಿನಲ್ಲಿ ತಲೆಬಾಗಬೇಡಿ, ಏಕೆಂದರೆ ಬೆಳಕು ಹತ್ತಿರದಲ್ಲೇ ಕಾದಿದೆ. ಇದು ಕವಲೊಡೆದ ಕಥೆಯ ಪ್ರಾರಂಭ.

 

Top of Form

 

Bottom of Form

ಧನ್ಯವಾದಗಳು……...🌷🌷🌷🌷🌷

 

 


ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

💫 ದಯೆಯ ಮೇಲೆ ನನ್ನ ನಂಬಿಕೆಯನ್ನು ಬಲಪಡಿಸಿದ ಕ್ಷಣಗಳು 👇 🌷

ಮನೆಯಲ್ಲೇ ಫರ್ಮೆಂಟೇಶನ್ ಪ್ರಕ್ರಿಯೆ ಮಾಡುವುದು ಇಷ್ಟು ಸುಲಭವೇ? ತಿಳಿದುಕೊಳ್ಳಿ!

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

"ಡಿಜಿಟಲ್ ಯುಗದ ಬಂಧನ — ನಾವು ಸ್ವತಂತ್ರರಾಗಿದ್ದೇವೆ ಎಂಬ ಭ್ರಮೆ." "ಬದ್ಧತೆ — ನೋಡಲು ಸ್ಥಿರತೆ, ಅನುಭವಕ್ಕೆ ಒತ್ತಡ."

ಸ್ಟಾರ್ಟ್‌ಅಪ್‌ಗಳು ಮತ್ತು ವಿದ್ಯಾರ್ಥಿಗಳಿಗೆ Design & Development ಯಾಕೆ ಗೇಮ್‌ಚೇಂಜರ್????