ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ನಾಯಕ ಹೇಳಿದ್ದೆಲ್ಲಾ ಸರಿಯಲ್ಲ!!!??........ “ನಾಯಕನಾ? ಖಳನಾಯಕನಾ? – ಸಮಾಜದ ಕಣ್ಣಿನಲ್ಲಿ ನಾಯಕತ್ವದ ನಿಜ ಮುಖ”

 


ಲೇಖಕಿ:ನಾಗಲಕ್ಷ್ಮಿ ಕೆ. ಎನ್‌ ದಿನಾಂಕ:೧೫.೦೯.೨೦೨೫

ನಾಯಕ ಹೇಳಿದ್ದೆಲ್ಲಾ ಸರಿಯಲ್ಲ!!!??

ನಾಯಕ ಎಂದರೆ ನಾವು ಸಾಮಾನ್ಯವಾಗಿ ನಮ್ಮ ಪರವಾಗಿ ಮಾತಾಡುವವನು, ನಮ್ಮನ್ನು ಮುನ್ನಡೆಸುವವನು ಎಂದು ಭಾವಿಸುತ್ತೇವೆ. ಆದರೆ ಪ್ರತಿಯೊಬ್ಬನೂ ನಾಯಕನಾದ ಪ್ರತಿಯೊಬ್ಬನೂ  ಅವನು ಹೇಳುವ ಮಾತುಗಳು ಎಲ್ಲವೂ ಸತ್ಯ, ಎಲ್ಲವೂ ಶ್ರೇಷ್ಠ ಎಂದು ಭಾವಿಸುವುದು ದೊಡ್ಡ ತಪ್ಪು.

ಹಾಗಾದರೆ ನಾಯಕ ಎಂದರೆ ಯಾರು,??

ಈ ನಾಯಕ ಎಂದರೆ ಯಾರು, ಎಂಬ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರ ಕೊಡಲು ಆಗುವುದಿಲ್ಲ. ಏಕೆಂದರೆ ನಾಯಕತ್ವ ಬಹುವಾದ  ಅರ್ಥಗಳನ್ನು ಹೊಂದಿದೆ.

ನಾಯಕ ಎಂದರೆ, ರಾಜಕೀಯದಲ್ಲಿದ್ದು ದೇಶದ ಅತ್ಯುನ್ನತ ಪದವಿಯಲ್ಲಿರುವ, ಪ್ರಧಾನಮಂತ್ರಿ, ರಾಷ್ಟ್ರಪತಿ, ಸಚಿವರೆಲ್ಲರೂ “ನಾಯಕ” ಎಂದು ಕರೆಯಲ್ಪಡುತ್ತಾರೆ. ಆದರೆ ಈ ಸ್ಥಾನಮಾನವೇ ನಾಯಕತ್ವವಲ್ಲ.

ಚಲನಚಿತ್ರಗಳಲ್ಲಿ ನಟಿಸುತ್ತಾ, ತೆರೆಯ ಮೇಲೆ ಮಿಂಚಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವವ ಅಥವಾ ಜನರಿಂದ ಅತಿಹೆಚ್ಚು  ಮತ ಪಡೆದು  ಜನಪ್ರಿಯತೆ ಹೊಂದಿದವನು ಮಾತ್ರ ನಾಯಕನಾಗುವುದಿಲ್ಲ.

ಈ ರೀತಿಯ ಜನಪ್ರಿಯತೆ ಅಥವಾ  ಅಧಿಕಾರದಿಂದ ಜನರನ್ನು ಕಟ್ಟಿ ಹಾಕಬಹುದು, ಆದರೆ ಅದನ್ನು “ನಾಯಕತ್ವ” ಅಂತ ಕರೆಯಲು ಆಗುವುದಿಲ್ಲ.

ಹಾಗಾದರೆ ನಿಜವಾದ ನಾಯಕ ಎಂದರೆ ಯಾರು????????

👉 ನಾಯಕ ಎಂದರೆ ದಾರಿ ತೋರಿಸುವವನು.

ಜನರ ಹಿತಕ್ಕಾಗಿ ಕೆಲಸ ಮಾಡುವವನು. ತನ್ನ ಮಾತಿನ ಮೇಲೆ  ನಿಲ್ಲುವವನು. ಸಮಸ್ಯೆ ಬಂದಾಗ

ಮುಂದೆ ನಿಂತುಕೊಳ್ಳುವವನು, ಲಾಭ ಬಂದಾಗ ಹಿಂದೆ ಸರಿಯುವವನು. “ಜನರಿಗಾಗಿ ನಾನು” ಎಂಬ ಮನೋಭಾವ ಹೊಂದಿರುವವನು.

ಈಗ ಒಂದು ಉದಾಹರಣೆಯನ್ನು ನೋಡೋಣ……..

ಒಮ್ಮೆ ಮಹಾರಾಜನು ತನ್ನನ್ನು ತಾನು  “ದೆಶದ ನಾಯಕ” ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದ.
ಆಗ ತೆನಾಲಿರಾಮನು ಬುದ್ಧಿವಂತಿಕೆಯಿಂದ ಕೇಳಿದ:
“ಮಹಾರಾಜ, ಗಾಡಿಯನ್ನು  ಹಸು ಎಳೆಯುತ್ತಿದೆಯೋ? ಅಥವಾ ಗಾಡಿ ಹಸುವನ್ನು ಎಳೆಯುತ್ತಿದೆಯೋ?”
ರಾಜನು ನಕ್ಕು “ಹಸುವೇ ಗಾಡಿಯನ್ನು ಎಳೆಯುತ್ತದೆ” ಅಂದ.
ತೆನಾಲಿರಾಮ ಹೇಳಿದ: “ಆಗ ಜನರೇ ನಿಮ್ಮನ್ನು ಎಳೆಯುತ್ತಿದ್ದಾರೆ. ನೀವು ನಿಜವಾದ ನಾಯಕನಾಗಬೇಕೆಂದರೆ, ಗಾಡಿ ಎಳೆಯುವ ಹಸುವಿನ ಬಲವನ್ನು ಕಾಪಾಡಬೇಕು. ಗಾಡಿ ಹಸುವನ್ನು ಎಳೆಯುವಂತೆ ನಡೆದುಕೊಂಡರೆ, ಅದು ನಾಯಕತ್ವವಲ್ಲ, ಬೂಟಾಟಿಕೆ.”

👉 ನಾಯಕ ಎಂದರೆ ಜನರ ಹಿತಕ್ಕಾಗಿ ಜವಾಬ್ದಾರಿ ಹೊರುವವನು, ದಾರಿ ತೋರಿಸುವವನು, ಮತ್ತು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವವನು.
ಅವನ ಮಾತು ಮತ್ತು ಕೆಲಸ  ಒಂದೇ ಆಗಿರಬೇಕು, ಹಾಗಾಗದಿದ್ದ ಪಕ್ಷದಲ್ಲಿ ಅವನು “ನಾಯಕ” ಅಲ್ಲ, “ಖಳನಾಯಕ” ಆಗುತ್ತಾನೆ.

 

🔟 ನಾಯಕನ ಗುಣಲಕ್ಷಣಗಳು

  1. ದೃಷ್ಟಿಕೋನ (Vision) – ಮುಂದೆ ಏನು ಮಾಡಬೇಕು, ಜನರನ್ನು ಯಾವ ದಾರಿಯಲ್ಲಿ ನಡೆಸಬೇಕು ಅನ್ನುವುದರ  ಸ್ಪಷ್ಟ ಚಿತ್ರಣ ಹೊಂದಿರಬೇಕು.
  2. ನೈತಿಕತೆ (Integrity) – ಮಾತಿನಲ್ಲೂ ಕೆಲಸದಲ್ಲೂ  ಒಂದೇ ಆಗಿರಬೇಕು; ಸುಳ್ಳು–ಮೋಸದಿಂದ ನಾಯಕತ್ವ ಸಾಧ್ಯವಿಲ್ಲ.
  3. ಧೈರ್ಯ (Courage) – ಸಂಕಟ, ಅಪಾಯ, ಟೀಕೆಗಳು, ವಿರೋಧ ಬಂದಾಗ ಹಿಂದೆ ಸರಿಯದೆ ಎದುರಿಸುವ ಸಾಮರ್ಥ್ಯ.
  4. ವಿನಮ್ರತೆ (Humility) – “ನನ್ನದೇನಿಲ್ಲ,  ಜನರೇ ನನ್ನ ಶಕ್ತಿ” ಅನ್ನುವ ಮನೋಭಾವ.
  5. ಸಹಾನುಭೂತಿ (Empathy) – ಜನರ ನೋವು–ಸಂತೋಷಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ.
  6. ನಿರ್ಧಾರ ಸಾಮರ್ಥ್ಯ (Decision Making) – ಸೂಕ್ತ ಸಮಯದಲ್ಲಿ ಹೌದು-ಇಲ್ಲ ಎಂದು  ತೀರ್ಮಾನ ತೆಗೆದುಕೊಳ್ಳುವ ನಿಖರತೆ.
  7. ಸಂವಹನ (Communication) – ತನ್ನ ಮಾತನ್ನು ಜನರ ಹೃದಯಕ್ಕೆ ತಲುಪಿಸುವ ಶಕ್ತಿ.
  8. ನ್ಯಾಯಬುದ್ಧಿ (Fairness) – ತನ್ನವರಿಗೂ, ಪರರಿಗೂ ಸಮಾನ ಬೆಂಬಲ. ಪಕ್ಷಪಾತ ಬೇಡ.
  9. ಪ್ರೇರಣೆ (Inspiration) – ಜನರಿಗೆ ಆತ್ಮವಿಶ್ವಾಸ, ಉತ್ಸಾಹ, ನಂಬಿಕೆ ಕೊಡುವ ಶಕ್ತಿ.
  10. ಜವಾಬ್ದಾರಿ (Responsibility) – ಯಶಸ್ಸು ಜನರದ್ದು, ತಪ್ಪು–ವೈಫಲ್ಯ ತನ್ನದ್ದು ಎನ್ನುವ ಸ್ವಭಾವ.

 

🌿 ತೆನಾಲಿರಾಮನ ಉಪಮೆ ಉದಾಹರಣೆ…

ಒಮ್ಮೆ ರಾಜನು ಕೇಳಿದ: “ನಾಯಕನ ದೊಡ್ಡ ಗುಣ ಯಾವುದು?”
ತೆನಾಲಿರಾಮ ಉತ್ತರಿಸಿದ:
“ಮಹಾರಾಜ, ಹಡಗಿನಲ್ಲಿ ನಾವಿಕನ ಕೈಯಲ್ಲಿ ದಿಕ್ಸೂಚಿಯ ದಂಡ ಇದೆ. ಅದನ್ನು ಬಲವಾಗಿ ಹಿಡಿಯದೇ ಇದ್ದರೆ ಹಡಗು ಮುಳುಗುತ್ತದೆ. ಅದೇ ರೀತಿ ನಾಯಕನಿಗೆ ದೃಷ್ಟಿ ಮತ್ತು ಜವಾಬ್ದಾರಿ ಬಲವಾಗಿರಬೇಕು; ಬಾಕಿ ಎಲ್ಲಾ ಗುಣಗಳು ಆ ದಂಡಕ್ಕೆ ಹಿಡಿದ ಸಹಾಯಕನಂತೆ.”

👉 ಹೀಗಾಗಿ, ನಾಯಕನು ಅಧಿಕಾರದಿಂದ ಗುರುತಿಸಿಕೊಳ್ಳುವುದಿಲ್ಲ, ಗುಣಗಳಿಂದ ಗುರುತಿಸಿಕೊಳ್ಳುತ್ತಾನೆ.

Top of Form

 

Bottom of Form

 

ನಾಯಕತ್ವ vs. ಖಳನಾಯಕತ್ವ

ನಾಯಕತ್ವವೆಂದರೆ ಜನರ ಹಿತಾಸಕ್ತಿ, ನ್ಯಾಯ, ಸಮಾನತೆ, ನೈತಿಕತೆಗಳನ್ನು ಕಾಪಾಡುವುದು. ಆದರೆ ವಾಸ್ತವದಲ್ಲಿ ಅನೇಕ ನಾಯಕರು ಬೂಟಾಟಿಕೆಯ  ಕಾರುಬಾರು, ಸ್ವಾರ್ಥದ ರಾಜಕೀಯವನ್ನು ನಾಯಕತ್ವದ ಮುಖವಾಡದ ಹಿಂದೆ ನಡೆಸುತ್ತಾರೆ. ಅವರು ಹೇಳುವ ಮಾತುಗಳು ಜನರ ಹಿತಾಸಕ್ತಿಯಲ್ಲಿ ಆಸಕ್ತಿ ತೋರುವಂತೆ ಕಾಣಬಹುದು, ಆದರೆ ಒಳಗೆ ಖಾಸಗಿ ಲಾಭವೇ ಅವರ ಗುರಿಯಾಗಿರುತ್ತದೆ.

ಅದಕ್ಕೇ ಈ  ಪ್ರಶ್ನೆ
ನಾಯಕ ಹೇಳಿದ್ದೆಲ್ಲಾ ಸರಿಯೇ? ಅಥವಾ ಖಳನಾಯಕನಾಗಿ  ತನ್ನ ಆಟವಾಡುತ್ತಿದಾನೆಯೇ?

ಜನರ ಮೌನವೇ ಶಕ್ತಿ

ನಾಯಕನು ಹೇಳಿದಂತೆ ನಂಬಿ ಮೌನವಾಗಿರುವ ಜನರು, ಅಜ್ಞಾತವಾಗಿ ಅವನ ತಪ್ಪಿಗೆ ಪರೋಕ್ಷವಾಗಿ  ಬೆಂಬಲ ನೀಡುತ್ತಿರುತ್ತಾರೆ.

 ಜನರು ಮೌನವಾಗಿರುತ್ತಾರೆಂದರೆ ಅವರು ಬಲಹೀನರು ಅಲ್ಲ, ಆದರೆ ತಮ್ಮ ಧ್ವನಿಯನ್ನು ಬಳಸದೇ ಹೋದರೆ ಅದು ನಾಯಕನ ದುರ್ನೀತಿಗೆ ಬಲ ನೀಡಿದಂತಾಗುತ್ತದೆ.

ಕಠಿಣವಾಗಿ ಪ್ರಶ್ನೆ ಮಾಡುವ ಜನರು ಮಾತ್ರ ನಾಯಕನಿಗೆ ನಿಜವಾದ ಹೊಣೆಗಾರಿಕೆಯನ್ನು ನೆನಪಿಸುತ್ತಾರೆ.

ಕಂತೆಗೆ ತಕ್ಕ ಬೊಂತೆ!

ನಾಯಕತ್ವಕ್ಕೆ ತಕ್ಕಂತೆ ನಡೆದುಕೊಂಡರೆ ಅವನು ನಿಜವಾದ ನಾಯಕ. ಆದರೆ ಸುಳ್ಳು, ಸ್ವಾರ್ಥ, ಕುತಂತ್ರ, ಬೂಟಾಟಿಕೆ ನಡೆಸಿ, ಜನರ ನಂಬಿಕೆಗೆ ದ್ರೋಹ ಮಾಡಿದರೆಅವನು ನಾಯಕನಲ್ಲ, ಖಳನಾಯಕ ಆಗುತ್ತಾನೆ.

ಸತ್ಯ ಹುಡುಕುವ ಧೈರ್ಯ !!

ನಾಯಕ ಹೇಳಿದ್ದೆಲ್ಲಾ ಸರಿಯಲ್ಲಎಂಬ ಅರಿವು ಬಂದಾಗ ಜನರು ಸ್ವತಃ ವಿಚಾರಿಸಬೇಕು:

  • ನಾಯಕನ ಮಾತು ಮತ್ತು ಅವನ ಕೆಲಸಗಳ  ನಡುವೆ ಏನು ವ್ಯತ್ಯಾಸವಿದೆ?
  • ಜನರ ಹಿತದ ಹೆಸರಿನಲ್ಲಿ ಯಾರು ತಮ್ಮ ಸ್ವ ಹಿತವನ್ನು ನೋಡಿಕೊಳ್ಳುತ್ತಿದ್ದಾರೆ?
  • ನಾವು ಕೇಳುತ್ತಿರುವುದು ನಾಯಕನ ನಿಜವಾದ  ಧ್ವನಿಯೋ, ಅಥವಾ ಮುಖವಾಡದ ಆಟವೋ?

ಜನರು ಈ ಎಲ್ಲಾ ವಿಚಾರಗಳನ್ನು  ಸ್ಪಷ್ಟವಾಗಿ ತಿಳಿದು, ವಿಮರ್ಶಿಸಿ ನಿರ್ಧಾರ ಕೈಗೊಳ್ಳಬೇಕು.

ನಾಯಕನು ಮಾತನಾಡುತ್ತಿದ್ದಾನೆ, ಎಂದಾಗ ಅವನ ಮಾತುಗಳ ಹಿಂದೆ ಸತ್ಯವಿದೆಯೋ  ಇಲ್ಲವೋ ಎಂಬುದನ್ನು ತೀರ್ಮಾನಿಸುವುದು ಜನರ ಜವಾಬ್ದಾರಿ.
ನಾಯಕನು ಜನರ ಕಣ್ಗಳನ್ನು ಮೋಸಗೊಳಿಸಬಹುದು, ಆದರೆ ಜನರು ಪ್ರಶ್ನೆ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ನಿಜವಾದ ನಾಯಕತ್ವ ಹೊರಬರುತ್ತದೆ.


ನಾಯಕ ಹೇಳಿದ್ದೆಲ್ಲಾ ಸರಿಯಲ್ಲ. ಸರಿಯಾದದ್ದನ್ನು ಗುರುತಿಸುವ ಹೊಣೆಗಾರಿಕೆ ಜನರದ್ದು.

ನಾಯಕನು ಮಾತನಾಡುತ್ತಿದ್ದಾನೆ ಎಂದರೆ  ಜನರಿಗೆ  ಅಷ್ಟೆ ಸಾಕು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುತ್ತಾರೆ.

ಇಲ್ಲಿ ಪ್ರಶ್ನೆ ಏನೆಂದರೆ  ನಾಯಕ ಹೇಳಿದ ಮಾತ್ರಕ್ಕೆ  ಅದು  ಸತ್ಯವೇ? ದೈವವಾಣಿಯೇ?

ಇಲ್ಲ!
ಇಲ್ಲಿ ನಾಯಕ ಹೇಳಿದ್ದೆಲ್ಲಾ ಸರಿಯಲ್ಲ. ಎಲ್ಲವೂ ಮುಖವಾಡದ ಆಟಗಳು.

ನಮ್ಮ ಈ  ಕಾಲದ ಬಹುತೇಕ ನಾಯಕರು ಒಂದು ಮುಖದಲ್ಲಿ ಜನಸೇವೆ, ಮತ್ತೊಂದು ಮುಖದಲ್ಲಿ ಸ್ವಾರ್ಥ ಸೇವೆ ಇಟ್ಟುಕೊಂಡಿದ್ದಾರೆ.

  • ಭಾಷಣದಲ್ಲಿ ಜನರ ಬಗ್ಗೆ ಕಾಳಜಿ ಇರುವಂತೆ ಮಾತನಾಡುತ್ತಾರೆ,
  • ಆದರೆ ಕೆಲಸ ಕಾರ್ಯದಲ್ಲಿ ಹಣದ ಬಗ್ಗೆ ಕಾಳಜಿ ವಹಿಸುತ್ತಾರೆ.

ಇಂತಹವರ ಮಾತುಗಳನ್ನು ಕೇಳಿಇವನೇ ನಮ್ಮ ಭವಿಷ್ಯದ ನಾಯಕಎಂದು ನಂಬುವ ಜನರು,  ತಮ್ಮ ಭವಿಷ್ಯವನ್ನೇ ಬಲಿ ಕೊಡುತ್ತಾರೆ.

ಇವರು ನಮಗೆ ನಾಯಕರಾ? ಖಳನಾಯಕರಾ?

ಕಂತೆಗೆ ತಕ್ಕ ಬೊಂತೆ ಎನ್ನುವಂತೆ, ಹಿಂಬಾಲಕರನ್ನು ಒಳಗೊಂಡ  ನಾಯಕನ ನಡೆ-ನುಡಿ ಅವನನ್ನು ನಾಯಕನನ್ನಾಗಿಸುತ್ತದೆ.

  • ಅವನು ಸತ್ಯ, ನೈತಿಕತೆ, ಧರ್ಮದ ಜೊತೆ ನಿಂತರೆ ನಾಯಕ.
  • ಅವನು ಕುತಂತ್ರ, ಬೂಟಾಟಿಕೆ, ಕಾರುಬಾರು ನಡೆಸಿದರೆ ಖಳನಾಯಕ.

ಹಾಗಾದರೆ ಇಲ್ಲಿ ನಾವು ಒಂದು ಪ್ರಶ್ನೆಯನ್ನು ಸ್ಪಸ್ಟವಾಗಿ ನಮ್ಮನದನೇ ಕೇಳಿಕೊಳ್ಳಬೇಕು…… ನಾವು ಹಿಂಬಾಲಿಸುತ್ತಿರುವವನು ನಾಯಕನಾ? ಖಳನಾಯಕನಾ?

ನಾಯಕನು ಏನೇ  ಹೇಳಿದರೂ  ಜನರು ತಲೆಬಾಗುತ್ತಾರೆ, ಮೌನವಾಗುತ್ತಾರೆ. ಎಂದರೆ   ಮೌನವೇ ಅವನ ಅತಿ ದೊಡ್ಡ ಬಲ. ಪ್ರಶ್ನೆ ಮಾಡುವವರಿಲ್ಲದಾಗ ನಾಯಕನಿಗೆ ಸುಳ್ಳು ಹೇಳುತ್ತಾ ದ್ರೋಹ ಮಾಡುವುದು ಸುಲಭ.

👉 ನಿಜವಾದ ನಾಯಕತ್ವ ಎಂದರೆ ಜನರ ನಂಬಿಕೆಗೆ ತಕ್ಕಂತೆ ನಡೆಯುವುದು.
👉 ಖಳನಾಯಕತ್ವ ಎಂದರೆ ಜನರ ನಂಬಿಕೆಯನ್ನು ವಂಚಿಸಿ ನಡೆವುದು.

ಆದ್ದರಿಂದ, ನೆನಪಿಡಿ
ನಾಯಕ ಹೇಳಿದ್ದೆಲ್ಲಾ ಸರಿಯಲ್ಲ.
ಸರಿಯಾದದ್ದನ್ನು ಗುರುತಿಸುವ ಹೊಣೆಗಾರಿಕೆ ನಮ್ಮದು!

 


ದೃಷ್ಟಾಂತ : ಕತ್ತೆಯ ಮೆಚ್ಚಿನ ಗಾನ

ಒಂದಾನೊಂದು ಕಾಲದಲ್ಲಿ ಕತ್ತೆ, ಸಿಂಹದೊಂದಿಗೆ ಸ್ನೇಹ ಮಾಡಿತ್ತು. ಸಿಂಹ ಏನು ಹೇಳಿದರೂ  ಕತ್ತೆ ತಲೆಬಾಗುತ್ತಿತ್ತು.
ಒಂದು ದಿನ ಸಿಂಹ: “ನೀನು ಹಾಡಿದರೆ ಕಾಡು ಕುಣಿಯುತ್ತದೆಎಂದು  ಹೇಳಿತು.

ಕತ್ತೆ ಸಿಂಹದ ಈ ಮಾತನ್ನು  ನಂಬಿ ಹೃದಯದಿಂದ ಗಾನ ಶುರುಮಾಡಿತು. ಇದರ ಫಲ? ಎಲ್ಲಾ ಕಾಡಿನ ಪ್ರಾಣಿಗಳು ನಗುತ್ತಾ ಓಡಿ ಹೋದವು.
👉 ಸಿಂಹ ಸುಳ್ಳು ಹೇಳಿದರೂ ಕತ್ತೆಯು ಅದರ ಮೇಲಿನ   ನಂಬಿಕೆಯಿಂದ ಸಿಂಹವನ್ನು  ಪ್ರಶ್ನಿಸಲಿಲ್ಲ.
ಈಗ ಇದರ ಸ್ಥಿತಿನಾಯಕ ಹೇಳಿದ್ದು  ಸರಿ ಅಂತ ನಂಬಿದ್ರೆ ಜನರ ಜೀವನ ಕತ್ತೆಯ ಹಾಡಿನಂತೆ ಹಾಸ್ಯವಾಗುತ್ತದೆ.

ದೃಷ್ಟಾಂತ : ಮಹಾಭಾರತದಲ್ಲಿ ಧೃತರಾಷ್ಟ್ರ

ಮಹಾಭಾರತದಲ್ಲಿ ಧೃತರಾಷ್ಟ್ರನು ಸದಾ ತನ್ನ ಮಕ್ಕಳ ಪರವಾಗಿ ನಿಂತ.

ದುರ್ಯೋಧನ ಏನು ಮಾಡಿದರೂ ಸರಿ ಅಂತ ಒಪ್ಪಿಕೊಂಡ. ಅವನನ್ನು ನಾಯಕಎಂದು ಒಪ್ಪಿಕೊಂಡ  ಧೃತರಾಷ್ಟ್ರ, ವಾಸ್ತವದಲ್ಲಿ ಖಳನಾಯಕತ್ವಕ್ಕೆ ಬೆಂಬಲ ನೀಡಿದ.
👉 ನಾಯಕ ಹೇಳಿದ್ದೆಲ್ಲಾ ಸರಿಯಲ್ಲ ಎಂಬುದಕ್ಕೆ ಪುರಾಣದ   ಸಾಕ್ಷಿ ದೊಡ್ಡ ಉದಾಹರಣೆ.

ದೃಷ್ಟಾಂತ : ಹಾಲಿಗೆ ನೀರು ಸೇರಿಸಿದ ವ್ಯಾಪಾರಿ

ಒಬ್ಬ ವ್ಯಾಪಾರಿ ಹಾಲಿಗೆ ನೀರು ಸೇರಿಸಿ ಮಾರುತ್ತಿದ್ದ.
ಗ್ರಾಮಸ್ಥರುಅವನು ಒಳ್ಳೆಯವನುಎಂದು ನಂಬಿ ಖರೀದಿಸುತ್ತಿದ್ದರು. ಆದರೆ ಒಂದು ದಿನ ಹಾಲು ಬದಲುಬಿಳಿ ನೀರೇಸಿಕ್ಕಿತು.
👉 ಮಾತುಗಳಿಂದ ಮೋಸ ಮಾಡೋ ನಾಯಕರು ಕೂಡ ಇಂತಹ ಹಾಲಿಗೆ ನೀರು ಸೇರಿಸಿದ ವ್ಯಾಪಾರಿಯಂತೆಯೇ.

ಇಲ್ಲಿ ಒಂದು ನಾಟಕವನ್ನು ಚಿತ್ರಿಸಿದ್ದೇನೆ.

ನಾಟಕದ ಹೆಸರು: ನಾಯಕ ಹೇಳಿದ್ದೆಲ್ಲಾ ಸರಿಯಲ್ಲ

ಪಾತ್ರಗಳು

  • ನಾಯಕಬಾಯಲ್ಲಿ ಜನಸೇವೆ, ಹೃದಯದಲ್ಲಿ ಸ್ವಾರ್ಥ
  • ತೆನಾಲಿರಾಮತೀಕ್ಷ್ಣ ಬುದ್ಧಿಯ ವ್ಯಂಗ್ಯಗಾರ
  • ಜನತೆನಂಬಿಕೆ ಇಡುವವರು, ಕೆಲವೊಮ್ಮೆ ಪ್ರಶ್ನಿಸುವವರು
  • ರಾಜನಿಶ್ಶಬ್ದವಾಗಿ ಕೇಳುವ ಸಾಕ್ಷಿ

 

(ವೇದಿಕೆಯ ಮೇಲೆ ಚಿನ್ನದ ಕುರ್ಚಿ, ನಾಯಕ ಅದರಲ್ಲಿ ಕುಳಿತಿದ್ದಾನೆ. ಹಿಂಬದಿಯಲ್ಲಿಜನರ ಸೇವೆ, ದೇಶದ ಹಿತಎಂಬ ದೊಡ್ಡ ಬೋರ್ಡ್. ಜನತೆ ಕುಳಿತಿದ್ದಾರೆ. ಬೆಳಕು ನಾಯಕನ ಮೇಲೆ ಮಾತ್ರ ಬೀಳುತ್ತಿದೆ.)

ನಾಯಕ:
(ಗಂಭೀರ ಧ್ವನಿಯಲ್ಲಿ, ಕೈ ಎತ್ತಿ)
ಜನರೇ! ನಾನು ಹೇಳುವುದೆಲ್ಲಾ ನಿಮಗಾಗಿ!
ನಾನು ಮಾಡಿದುದೆಲ್ಲಾ ದೇಶದ ಹಿತಕ್ಕಾಗಿ!
ನನ್ನ ಮಾತುಗಳನ್ನು ಅನುಮಾನಿಸಬೇಡಿನನ್ನ ಮಾತೇ ಸತ್ಯ!”

ಜನರು ಚಪ್ಪಾಳೆ ಹೊಡೆಯುತ್ತಾರೆ. ಅಲ್ಲಿ ಬೆಳಕು ಚಪ್ಪಾಳೆಗೆ ತಕ್ಕಂತೆ ಮಿನುಗುತ್ತದೆ.

 

ಬೆಳಕಿನ ಅಂಚಿನಿಂದ ತೆನಾಲಿರಾಮ ನಕ್ಕು ಬರುತ್ತಾನೆ. ಅವನ ಕೈಯಲ್ಲಿ ಒಂದು ಚಿಕ್ಕ ಕನ್ನಡಕ.

ತೆನಾಲಿರಾಮ:
(ನಗು ತಡೆಯುತ್ತಾ)
ಅಯ್ಯೋ ಮಹಾಶಯ! ನೀವು ಹೇಳಿದ್ದ ಸತ್ಯವೇ? ಅಥವಾ ದೈವವಾಣಿಯೇ?
ನಿಮ್ಮ ಮಾತುಗಳು ಕೆಲವೊಮ್ಮೆ ಕತ್ತೆಯ ಹಾಡನ್ನೇ ಗಾನವೆಂದು, ಹಾಲಿಗೆ ನೀರು ಸೇರಿಸಿದ ವ್ಯವಹಾರವನ್ನೇ ಸೇವೆ ಎಂದೂ ತೋರಿಸುತ್ತವೆ!”

(ಜನರಲ್ಲಿ ಚಿಕ್ಕದಾಗಿ ನಗು ಚಿಮ್ಮುತ್ತದೆ.)

 

 

ನಾಯಕ:
(ಕೈ ಬಡಿದು)
ಓಹ್! ನೀನು ನನ್ನ ಮಾತುಗಳ ಮೇಲೆ ಅನುಮಾನ ಪಡ್ತೀಯಾ?
ನಾನು ಹೇಳಿದ್ದೆಲ್ಲಾ ಸತ್ಯ!”

ತೆನಾಲಿರಾಮ:
ಸತ್ಯವೇ ಸತ್ಯ, ಮಹಾಶಯ. ಆದರೆ ನಿಮ್ಮ ಸತ್ಯಕ್ಕೆ ಯಾವಾಗಲೂ ಬೆಂಕಿಯ ಹಾಸಿಗೆಯ ನೆರಳು ಇರುತ್ತದೆ.
ಸೇನಾಪತಿ ಹಿಮದ ಮೇಲೆ ನಿದ್ರೆ ಮಾಡಿದರೂ ಚಳಿ ತಟ್ಟಲಿಲ್ಲ ಎಂದು ನೀವು ಘೋಷಿಸಿದ್ರಿ.
ಆದರೆ ಅದರ  ಹತ್ತಿರದಲ್ಲೇ ಬೆಂಕಿ ಉರಿಯುತ್ತಿತ್ತು ನೀವು ಅದನ್ನೂ ಹೇಳಬೇಕಲ್ಲಾ?”

ಜನತೆಅಹಾ!” ಎಂದು ಬಾಯಿಬಿಡುತ್ತಾರೆ. ನಾಯಕ ಸ್ವಲ್ಪ ಗಾಬರಿಗೊಳ್ಳುತ್ತಾನೆ.

 

ನಾಯಕ (ಹೇಮ್ಮೆಯಿಂದ):ಆದರೆ ಜನರು ನನ್ನ ಮಾತುಗಳಿಗೆ ಚಪ್ಪಾಳೆ ಹೊಡೆಯುತ್ತಾರೆ!”

ತೆನಾಲಿರಾಮ(ಚುಟುಕಾಗಿ ನಗುತ್ತಾ):“ಅಯ್ಯಾ, ಜನರು ಕೆಲವೊಮ್ಮೆ ಕತ್ತೆಯನ್ನು ಕುದುರೆ ಅಂತಲೂ ಹೊಗಳುತ್ತಾರೆ. ಇದರಿಂದ ಕತ್ತೆ ಕುದುರೆ ಆಗಿಬಿಡುತ್ತದೆಯೇ?
ಹಾಗೆಯೇಜನರು ಚಪ್ಪಾಳೆ ಹೊಡೆದರೆ ನಿಮ್ಮ ಸುಳ್ಳು ಸತ್ಯವಾಗುವುದಿಲ್ಲ.”

(ಜನರು ನಕ್ಕು ಬಿಡುತ್ತಾರೆ. ನಾಯಕನ ಮುಖ ಕೆಂಪಾಗುತ್ತದೆ.)

 

 


ನಾಯಕ(ಅಸಹನೆಯಿಂದ):“ನೀನು ನನ್ನ ನಾಯಕತ್ವವನ್ನು ಪ್ರಶ್ನಿಸುತ್ತೀಯಾ?”

ತೆನಾಲಿರಾಮ(ಗಂಭೀರವಾಗಿ, ಕನ್ನಡಕ ಎತ್ತಿ):“ಹೌದು! ಏಕೆಂದರೆ ನಾಯಕತ್ವಕ್ಕೆ ತಕ್ಕ ಬೊಂತೆ ಇರಬೇಕು. ನೀವು ಜನರ ಹಿತದ ಪರವಾಗಿ ನಿಂತರೆನೀವು ನಾಯಕ.
ನೀವು ಬೂಟಾಟಿಕೆ, ಸ್ವಾರ್ಥ, ಕಾರುಬಾರು ಮಾಡಿದರೆನೀವು ಖಳನಾಯಕ.

(ಬೆಳಕು ಜನರ ಮೇಲೆ ಹರಿಯುತ್ತದೆ. ಜನರು ಒಂದೇ ಧ್ವನಿಯಲ್ಲಿ ಕೂಗುತ್ತಾರೆ.)

ಜನತೆ:ಸರಿ ಹೇಳಿದ್ರಿ! ನಾಯಕ ಹೇಳಿದ್ದೆಲ್ಲಾ ಸರಿಯಲ್ಲ.
ಸತ್ಯವನ್ನು ಪ್ರಶ್ನೆ ಮಾಡಿದರೆ ಮಾತ್ರ ಗೊತ್ತಾಗುತ್ತದೆ!”

(ಚಪ್ಪಾಳೆ. ನಾಯಕ ತಲೆ ತಗ್ಗಿಸುತ್ತಾನೆ. ತೆನಾಲಿರಾಮ ನಗುತ್ತಾ ಹೊರಟು ಹೋಗುತ್ತಾನೆ.)

 

👉 ನಾಯಕನು ಮಾತುಗಳಿಂದ ಮೋಸ ಮಾಡಬಹುದು.
ಆದರೆ ತೆನಾಲಿರಾಮನ ಬುದ್ಧಿ, ಜನರ ಪ್ರಶ್ನೆಗಳು ಮಾತ್ರ ಸತ್ಯವನ್ನು ಹೊರಗೆಳೆಬಹುದು.

 

Top of Form

 


ಧನ್ಯವಾದಗಳು.......🌷🌷🌷🌷🌷🌷

ಕಾಮೆಂಟ್‌ಗಳು

thoghts of 20's

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......