ವಿಚ್ಛೇದನಕ್ಕೆ ಮೊದಲು ತಿಳಿಯಬೇಕಾದ 7 ಸತ್ಯಗಳು – ಬಹುತೇಕ ಜನರಿಗೆ ಗೊತ್ತಿಲ್ಲ!

ಇಮೇಜ್
                                                            ವಿಚ್ಛೇದನದ ಭಾವನಾತ್ಮಕ ಕ್ಷಣ ಲೇಖಕಿ:ನಾಗಲಕ್ಷ್ಮಿ ಕೆ. ಎನ್.‌ ದಿನಾಂಕ:೨೮.೦೩.೨೦೨೬. " ವಿಚ್ಛೇದನ ನಿರ್ವಹಣೆ : 10 ಪ್ರಮುಖ ಮಾರ್ಗಗಳು ಜೀವನವನ್ನು ಪುನರ್ ನಿರ್ಮಿಸಲು "                                          ವಿಚ್ಛೇದನ ನಿರ್ವಹಣೆ!! ವಿವಾಹ ಬಂಧನವು ಮಾನವನ ಜೀವನದಲ್ಲಿ ಮಹತ್ವದ ಸಂಬಂಧವಾಗಿದ್ದು, ಪ್ರೀತಿ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಿತವಾಗಿದೆ. ಆಗಿದ್ದಾಗ್ಯೂ ಕೆಲವು ಸಂದರ್ಭಗಳಲ್ಲಿ ದಾಂಪತ್ಯ ಜೀವನದಲ್ಲಿ ಅಸಮ್ಮತಿ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನ ಅನಿವಾರ್ಯವಾಗಬಹುದು. ವಿಚ್ಛೇದನವು ಕೇವಲ ಕಾನೂನು ಪ್ರಕ್ರಿಯೆಯಷ್ಟೇ ಅಲ್ಲ, ಅದು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಸಂಕೀರ್ಣವಾದ ಹಂತವಾಗಿದೆ. ಆದ್ದರಿಂದ ವಿಚ್ಛೇದನ ನಿರ್ವಹಣೆ ಎಂದರೆ ಕಾನೂನು ನಿಯಮಗಳನ್ನನುಸರಿಸುವುದು ಮಾತ್ರವಲ್ಲ, ವ್ಯಕ್ತಿಯ ಮಾನಸಿಕ ಸ್ಥೈರ್ಯ, ಕುಟುಂಬದ ಬೆಂಬಲ ಮತ್ತು ಜೀವನ ಭವಿಷ್ಯದ ಪುನರ್‌ ನಿರ್ಮಾಣ...

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು - ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್

 

ಲೇಖಕಿ:ನಾಗಲಕ್ಷ್ಮಿ ಕೆ.ಎನ್.‌ ದಿನಾಂಕ: ೧೦.೦೯.೨೦೨೫.

🌸 ನನ್ನ ನೆಚ್ಚಿನ ಗುರುಗಳಿಗೆ ಹೃದಯಪೂರ್ವಕ ಅಭಿನಂದನೆಗಳು 🌸

                                                                      🪔

ಗುರುವೆಂದರೆ ಬೆಳಕಿನ ದೀಪ,
ಅಜ್ಞಾನ ಹಗಲುಗತ್ತಲೆಗೆ ತೀಪ.

ಅವರು ತೋರಿಸುವ ಜ್ಞಾನದ ದಾರಿ,
ನಮ್ಮ ಬದುಕಿಗೆ ಸತ್ಯಸಿರಿ.

ಗುರು ಮಾತು ಜೀವನದ ಮಂತ್ರ,
ಅದರೊಂದಿಗೆ ಬದಲಾಗುತ್ತದೆ ಅಂತರ.

ಗುರು ಪ್ರೇರಣೆ ಹೃದಯದ ಶಕ್ತಿ,
ಅದರ ಬೆನ್ನೇರಿ ಸಾಧನೆ ಭಕ್ತಿ.

🙏 ಗುರುಗಳಿಗೆ ನಮೋ ನಮಃ,
ಅವರ ಆಶೀರ್ವಾದವೇ ನಮ್ಮ ಸಂಪತ್ತು ಸಮಃ

ಶಿಕ್ಷಣವೆಂಬುದು ಕೇವಲ ವೃತ್ತಿ ಅಥವಾ ಉದ್ಯೋಗವಲ್ಲ, ಬದಲಿಗೆ ಸಮಾಜ ಪರಿವರ್ತನೆಯ ಶಕ್ತಿ.!

ಜೀವನದಲ್ಲಿ ನಾವು  ಎಷ್ಟೇ  ಎತ್ತರವನ್ನು ತಲುಪಿದರೂ,ಗುರುವರ್ಯರಿಗೆ ತೀರಿಸಬೇಕಾದ ಋಣವನ್ನು ಮರೆಯಲು ಸಾಧ್ಯವಿಲ್ಲ. ಗುರುಗಳ ಆಶೀರ್ವಾದವಿಲ್ಲದೆ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸುವುದು ಕಷ್ಟಸಾಧ್ಯ.

"ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ" ಎಂಬ ಶ್ಲೋಕವು ಶಿಕ್ಷಕರ ಸ್ಥಾನಮಾನವನ್ನು ಸ್ಪಷ್ಟಪಡಿಸುತ್ತದೆ. ಶಿಕ್ಷಕರು ದೇವರಂತೆಯೇ ನಮ್ಮ ಬದುಕನ್ನು ಬೆಳಕಿನಿಂದ ತುಂಬಿಸುವವರು.

ಇಂತಹ ಶಿಕ್ಷಕರು ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ.

ಗುರುಗಳು ಕೇವಲ ಪಾಠ ಕಲಿಸುವುದಲ್ಲದೆ, ಮೌಲ್ಯಗಳು, ಶಿಸ್ತು, ಸತ್ಯನಿಷ್ಠೆ, ಮಾನವೀಯತೆಗಳನ್ನು ಬೋಧಿಸುತ್ತಾರೆ.

ಮಕ್ಕಳ ಕನಸುಗಳನ್ನು ಬೆಳೆಸುವಲ್ಲಿ, ಅವರ ಪ್ರತಿಭೆಯನ್ನು ಗುರುತಿಸುವಲ್ಲಿ, ಹಾಗೂ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ.

ಒಬ್ಬ ಶಿಕ್ಷಕನಿಂದ ಪ್ರೇರಿತಗೊಂಡು ಅನೇಕ ವಿದ್ಯಾರ್ಥಿಗಳು ವಿಜ್ಞಾನಿ, ಕವಿ, ನಾಯಕ, ವೈದ್ಯ, ಇಂಜಿನಿಯರ್, ಅಥವಾ ಸಮಾಜಸೇವಕರಾಗಿ ಬೆಳೆದಿದ್ದಾರೆ.

ಗುರು ಎಂದರೆ ಕೇವಲ ಪಾಠ ಹೇಳುವವನು ಅಲ್ಲ, ಬದುಕನ್ನು ರೂಪಿಸುವ ಶಿಲ್ಪಿ. ನನ್ನ ಜೀವನದಲ್ಲಿ ಅಂತಹ ಶಿಲ್ಪಿಯಾಗಿ ದಾರಿದೀಪವಾದವರು ನನ್ನ ನೆಚ್ಚಿನ ಶಿಕ್ಷಕರು. ವರ್ಷದ "ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ಪಡೆದ ಮಹನೀಯರು. ಈ ಬಿರುದು ಪ್ರಶಸ್ತಿಯು ಅವರಿಗೆ ದೊರೆತಿರುವುದು ಕೇವಲ ಅವರ ಸಾಧನೆ ಅಲ್ಲ, ನಮ್ಮಂತಹ ವಿದ್ಯಾರ್ಥಿಗಳ ಹೆಮ್ಮೆಯ ದಿನವೂ ಹೌದು.

 


🎉 ಅಭಿನಂದನೆಗಳು 🎉
ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಪಾತ್ರರಾದ ಎಂ. ಹರೀಶ್ ಕುಮಾರ್ ಸರ್ಗೆ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ತ್ಯಾಗ, ಪರಿಶ್ರಮ ಮತ್ತು ವಿದ್ಯಾರ್ಥಿ ಪ್ರೀತಿ ಸದಾ ನಮಗೆ ಪ್ರೇರಣೆ. 🌹

 

🌟 "ಗುರುಗಳ ತ್ಯಾಗಕ್ಕೆ ದೊರೆತ ಮಾನ್ಯತೆ" 🌟

ಶಿಕ್ಷಕರ ದಿನಾಚರಣೆ ಅಂದರೆ ಕೇವಲ ಒಂದು ದಿನ ಗುರುಗಳನ್ನು ನೆನೆಸಿಕೊಳ್ಳುವುದಲ್ಲ, ಅವರ ತ್ಯಾಗ, ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯನ್ನು ಸಮಾಜವೇ ಮೆಚ್ಚಿಕೊಳ್ಳುವ ಕ್ಷಣ. ಇಂತಹ ಗೌರವಕ್ಕೆ ಪಾತ್ರರಾದವರು ನಮ್ಮ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ಎಂ. ಹರೀಶ್ ಕುಮಾರ್.

ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ಅವರು ಕನಸು ಕಾಣಲು ಮತ್ತು ಅದನ್ನು ನನಸು ಮಾಡಲು ಧೈರ್ಯ ತುಂಬಬೇಕು ಎಂಬ ಹಂಬಲದಿಂದ, ತಮ್ಮ ಜೀವನವನ್ನು ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಿಸಿಕೊಂಡಿರುವವರು ಹರೀಶ್ ಕುಮಾರ್. ಪಾಠ ಹೇಳುವುದು ಮಾತ್ರವಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ, ಶಿಸ್ತು, ಮೌಲ್ಯಗಳನ್ನು ಬೆಳೆಸುವಲ್ಲಿ ಅವರು ತೋರಿದ ಶ್ರಮವೇ ಇಂದಿನ ಸಮ್ಮಾನಕ್ಕೆ ಕಾರಣವಾಗಿದೆ.

ಗುರು ಎಂದರೆ ಕೇವಲ ಪಾಠಗಾರನಲ್ಲ, ಬದುಕಿನ ದಾರಿ ತೋರಿಸುವ ದಾರಿದೀಪ. ಇಂತಹ ದೀಪವನ್ನು ಬೆಳಗಿಸುತ್ತಾ, ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ದೀಪ್ತಿಮಂತಗೊಳಿಸಿರುವುದರಿಂದ ಹರೀಶ್ ಕುಮಾರ್ ಅವರಿಗೆ ದೊರೆತ ರಾಜ್ಯ ಪ್ರಶಸ್ತಿ, ಕೇವಲ ಅವರಿಗಲ್ಲ, ವಿದ್ಯಾರ್ಥಿಗಳಿಗೂ, ಪೋಷಕರಿಗೂ, ಹಾಗೂ ಸಂಪೂರ್ಣ ಶಿಕ್ಷಣ ಕ್ಷೇತ್ರಕ್ಕೂ ಸಿಗುವ ಗೌರವ.

ಇವರ ಈ ಸಾಧನೆ ನಮಗೆ ಹೇಳವುದೇನೆಂದರೆ:

👉 ಗುರುಗಳ ಪರಿಶ್ರಮವನ್ನು ಯಾವಾಗಲೂ ಗೌರವಿಸಬೇಕು.
👉 ಅವರ ಪ್ರೇರಣೆಯಿಂದಲೇ ಸಮಾಜ ಉತ್ತಮ ದಿಕ್ಕಿಗೆ ಸಾಗುತ್ತದೆ.
👉 ನಿಜವಾದ ನಾಯಕರು ತರಗತಿಗಳಲ್ಲೇ ಹುಟ್ಟುತ್ತಾರೆ.

ಹರೀಶ್ ಕುಮಾರ್ ಅವರಂತಹ ಗುರುಗಳೇ ಮಕ್ಕಳ ಕನಸುಗಳನ್ನು ಸಾಕಾರಗೊಳಿಸುವ ಶಕ್ತಿಶಾಲಿ ಕೈಗಳು. ಅವರ ಜೀವನವೇ ಶಿಕ್ಷಕರ ಅರ್ಥವನ್ನು ನಿಜವಾಗಿ ಪ್ರತಿಬಿಂಬಿಸುತ್ತದೆ.

🌹 ಇಂತಹ ಗುರುಗಳಿಗೆ ನಮೋ ನಮಃ! 🌹

 

ನಾನು ನನ್ನ ಈ ಗುರುಗಳ  ಬಗ್ಗೆ ಹೆಮ್ಮೆಪಡುವೆ

ಗುರುಗಳೆಂದರೆ ಜೀವನದ ಹಾದಿಗೆ ಬೆಳಕುಚೆಲ್ಲುವವರು. ಆದರೆ ನನಗೆ ವಿಶೇಷ ಹೆಮ್ಮೆ ಎನ್ನುವುದೇನೆಂದರೆ, ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ಪಡೆದ ಎಂ. ಹರೀಶ್ ಕುಮಾರ್ ಸರ್ಅವರ ಸಾವಿರಾರು ಶಿಷ್ಯೆಮಂದಿಯಲ್ಲಿ ನಾನೂ ಒಬ್ಬಳಾಗಿರುವುದು.

ಅವರು ಶಿಕ್ಷಕ ವೃತ್ತಿ ಆರಂಭಿಸಿದ ದಿನಗಳಲ್ಲಿ  ಅವರು ನಮ್ಮ ಶಾಲೆಯಲ್ಲಿ ಇಂಗ್ಲೀಷ್‌ ಭಾಷೆಯನ್ನು ಬೋಧನೆ ಮಾಡುತ್ತಿದ್ದರು. ಅವರು  ನಮ್ಮ ಶಾಲೆಗೆ ಮೊದಲಬಾರಿ ಬಂದದ್ದು ನನಗೆ ಈಗಲೂ ನೆನಪಿದೆ. ಪ್ರೇಯರ್‌ ಹಾಲ್‌ ನಲ್ಲಿ ಅವರನ್ನು ನಮಗೆ ಪರಿಚಯಿಸಲಾಯಿತು. ಗಂಭಿರತೆ ಹೊದ್ದ ಮೊಗ, ಹೊಳೆಯುವ ಕಂಗಳು, ಫಾರ್ಮಲ್‌ ಡ್ರೆಸ್‌ ನಲ್ಲಿ ನಿಂತಿದ್ದ  ಯುವಕ …… ಇವರನ್ನು ಕಂಡಾಗ ನಮಗೆ ಆಕರ್ಷಣೆಗಿಂತ ಹೆಚ್ಚಾಗಿ ಭಯವೇ ಆಯಿತು.  ಕಾರಣ ಇಂಗ್ಲೀಷ್‌ ನ ಗಂಧ ಗಾಳಿಯೇ ನಮಗಿರಲಿಲ್ಲವಾದ್ದರಿಂದ  ಇವರ ಹತ್ರ ಇನ್ನು ಎಷ್ಟು ಒದೆ ತಿನ್ನಬೇಕೋ ಎಂದೆನಿಸಿದ್ದುಂಟು. ತರಗತಿಯಲ್ಲಿ ಕುಳಿತಿದ್ದ ನಮಗೆ ಬರುಬರುತ್ತಾ ಇಂಗ್ಲೀಷ್‌ ಭಾಷೆ ಅರಿವಾಯಿತು ಎಲ್ಲಾ ವಿಷಯಗಳಿಗಿಂತಲೂ ಇಂಗ್ಲೀಷ್‌ ನಲ್ಲಿ ತರಗತಿಯ ಮಕ್ಕಳೆಲ್ಲರೂ ಮುಂದಿರುತ್ತಿದ್ದೆವು. ವರ್ಷಗಳುರುಳಿದರೂ ಅವರ ಗಂಭಿರತೆಯೇನೂ ಕಡಿಮೆಯಾಗಲಿಲ್ಲ ಈ ವಿಷಯವೇ ಇಂದಿಗೂ ನನಗೆ ಆಶ್ಚರ್ಯವೆನಿಸುವುದು.

ಐದನೇ ತರಗತಿಗೆ ಹೊಸ ಶಾಲೆಗೆ  ಹೊಸದಾಗಿ ಸೇರಿದ್ದ ನನಗೆ ಈ  ಹೊಸ ಗುರುಗಳ, ಹೊಸ ಉತ್ಸಾಹ, ನಮ್ಮನ್ನು ಅವರತ್ತ ಸೆಳೆಯುವ ಆಕರ್ಷಕ ಬೋಧನೆ, ಇವೆಲ್ಲವೂ ಇನ್ನೂ ಮನಸ್ಸಿನ ಪರದೆ ಮೇಲೆ ತಾಜಾ ನೆನಪುಗಳಂತೆ ಉಳಿದಿವೆ.

ಹರೀಶ್ ಕುಮಾರ್ ಸರ್ಪಾಠ ಹೇಳುವುದರಲ್ಲಿ ಮಾತ್ರ ಸೀಮಿತವಾಗಿರಲಿಲ್ಲ. ಅವರು ಪ್ರತಿಯೊಂದು ವಿಷಯವನ್ನು ಬದುಕಿನೊಂದಿಗೆ ಜೋಡಿಸಿ, ನಮಗೆ ಅರ್ಥವಾಗುವಂತೆ ಹೇಳುತ್ತಿದ್ದರು. ಪಾಠ ಕಲಿಸುವುದಕ್ಕಿಂತಲೂ ಜೀವನ ಕಲಿಸುವುದೇ ಅವರ ನಿಜವಾದ ಶಕ್ತಿ.

ಸಣ್ಣ ತಪ್ಪು ಮಾಡಿದಾಗ ಗದರಿಸುತ್ತ, ದೊಡ್ಡತಪ್ಪುಗಳಿಗೆ ನೇರವಾಗಿ ಬಿಸಿಬಿಸಿ ಕಜ್ಜಾಯಗಳನ್ನೇ ಕೊಟ್ಟು ನಮ್ಮನ್ನು ಸರಿದಾರಿಗೆ ಕರೆತರುತ್ತಿದ್ದ ನಮ್ಮ ಹರೀಶ್‌ ಕುಮಾರ್‌  ಸರ್‌, ನಮ್ಮ ಯಶಸ್ಸನ್ನು ತಮ್ಮದೇ ಯಶಸ್ಸಿನಂತೆ ಸಂಭ್ರಮಿಸುತ್ತಿದ್ದರು. ವಿದ್ಯಾರ್ಥಿಗಳ ಕನಸುಗಳನ್ನು ಅವರು ತಮ್ಮದೇ ಕನಸುಗಳಂತೆ ಕಾಣುತ್ತಿದ್ದರು.

ನಮ್ಮ ಗುರುವರ್ಯರ ಇನ್ನೊಂದು ವಿಶೇಷ ಗುಣ ಎಲ್ಲರೊಂದಿಗೆ ಹಂಚಿಕೊಳ್ಳಲೇಬೇಕು, ಶಾಲೆಯಲ್ಲಿ ಪ್ರತಿ ಪಾಠದ ಭೋದನೆಯ ನಂತರ ಆ ಪಾಠಕ್ಕೆ ಒಂದು  ಟೆಸ್ಟ್‌ ಇರುತ್ತಿತ್ತು. ಆ ಟೆಸ್ಟ್‌ ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಏನಾದರೊಂದು ಉಡುಗೊರೆ ನೀಡುತ್ತಿದ್ದರು. ಕ್ರಮವಾಗಿ ಪ್ರಥಮಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಈ ಉಡುಗೊರೆ ಲಭ್ಯವಾಗುತ್ತಿದ್ದವು. ಉಡುಗೊರೆಗಳಾಗಿ ಪೆನ್‌, ಪುಸ್ತಕ, ಜಾಮಿಟ್ರಿ ಬಾಕ್ಸ್‌ , ಪೆನ್ಸಿಲ್, ಇನ್ನೂ ಮುಂತಾದವು. ತರಗತಿಯಲ್ಲಿ ಹೆಚ್ಚು ಅಂಕಗಳಿಸಿದವರನ್ನು ಬೋರ್ಡ್‌ ನ ಮುಂದೆ  ನಿಲ್ಲಿಸಿ, ಅವರಿಗೆ ಉಡುಗೊರೆ ನೀಡಿ, ಥ್ಯಾಂಕ್ಸ್‌ ಕೊಟ್ಟು ಬೆನ್ನು ತಟ್ಟುತ್ತಿದ್ದರು. ಈ ರೀತಿ ಮಾಡಿ ತರಗತಿಯಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯು ಹೆಚ್ಚು ಅಂಕ ಗಳಿಸಬೇಕೆಂದು ಪ್ರೇರೇಪಿಸುತ್ತಿದ್ದರು. ಅವರಿಂದ ಉಡುಗೊರೆ ಪಡೆಯುವ ವಿದ್ಯಾರ್ಥಿ ಸಾಲಿನಲ್ಲಿ ನಾನು ಯಾವಗಲೂ ಇರುತ್ತಿದ್ದೆ. ಬಡತನದಲ್ಲಿದ್ದ ನನಗೆ ಅವರ ಈ ಉಡುಗೊರೆಗಳೆ  ಹೆಚ್ಚು ಓದಲು ಉತ್ತೇಜಿಸುತ್ತಿದ್ದವು. ಮತ್ತು ಅವರಿಂದ ಪಡೆಯುವ ಹಸ್ತಲಾಘವ ನನಗೆ ಹೆಚ್ಚಿನ ಮಮತೆಯನ್ನು ನೀಡಿತ್ತು. ಈ ರೀತಿಯ ಉಡುಗೊರೆ ನಮಗೆ ನೀಡಿದ್ದು ನಮ್ಮ ಹರೀಶ್‌ ಮೇಷ್ಟ್ರ ಮಾತ್ರವೆ, ಈ ಸೌಭಾಗ್ಯ ನಮಗೆ ಬೇರೆಲ್ಲೂ ಸಿಗಲಿಲ್ಲ.

ನಮ್ಮ ಹರೀಶ್‌ ಮಾಸ್ತರರ ಹತ್ತಿರ ಕಲಿಯುವ ಭಾಗ್ಯ ದೊರೆತಿದ್ದು ಮೂರು ವರ್ಷ ಮಾತ್ರವೇ, ಈ ಸಮಯದಲ್ಲಿಯೇ ಅವರು ನಮಗೆ ಬೇಕಾದಷ್ಟು ಕಲಿಸಿದರು. ಅಲ್ಲಿಂದ ಕಲಿತು ಮುಂದೆ ಸಾಗಿದ ಮೇಲೂ ಅವರು ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ಶಾಲೆಯಲ್ಲಿ ಏಳನೇ ತರಗತಿ ಮುಗಿಸಿ ಅತಿ ಹೆಚ್ಚು ಅಂಕ ಪಡೆದು ಹೊರಟ ವಿದ್ಯಾರ್ಥಿಗಳಿಗೆ  ಹೆಚ್‌ಎಂಟಿ ರಿಸ್ಟ್‌ ವಾಚನ್ನು ಉಡುಗೊರೆ ನೀಡುತ್ತಿದ್ದರು. ಅವರು ಕೊಟ್ಟ ಆ ರಿಸ್ಟ್‌ ವಾಚ್‌ ಈಗಲೂ ನನ್ನ ಬಳಿಯಿದೆ.  

ಇಂದು ಅವರು ರಾಜ್ಯ ಪ್ರಶಸ್ತಿ ಪಡೆದಿದ್ದಾರೆಂಬ ಸುದ್ದಿ ನನಗೆ ಅಚ್ಚರಿ ತರಲಿಲ್ಲ, ಏಕೆಂದರೆ ಅವರು ಇಂತಹ ಸಮ್ಮಾನಕ್ಕೆ  ಅರ್ಹರು ಎಂಬ ನಂಬಿಕೆ ನನಗೆ ಅವರ ಮೊದಲ ಪಾಠದ ದಿನದಿಂದಲೇ ಇತ್ತು. 🌹

ನಾನು ಇಂದು ಜೀವನದಲ್ಲಿ ಎಲ್ಲಿ ನಿಂತಿದ್ದರೂ, ನನ್ನಲ್ಲಿರುವ ಆತ್ಮವಿಶ್ವಾಸ, ಶಿಸ್ತು, ಮತ್ತು ಮೌಲ್ಯಗಳಲ್ಲಿ ಅವರ ಸ್ಪಷ್ಟವಾದ ಗುರುತು ಇದೆ. ಗುರುಗಳು ಜೀವನದ ನಿಜವಾದ ಶಿಲ್ಪಿಗಳು ಎಂಬುದಕ್ಕೆ   ಅವರ ಈ ಬದುಕೇ ಸಾಕ್ಷಿ.

🙏 ನನಗೆ ಇಂತಹ ಪ್ರೇರಣಾದಾಯಕ ಗುರು ಸಿಕ್ಕಿದ್ದಾರೆಂಬ ಹೆಮ್ಮೆ ಸದಾ ಹೃದಯ ತುಂಬಿರುತ್ತದೆ.

Top of Form

ನನ್ನ ಗುರುನನ್ನ ನೆನಪಿನ ಪ್ರವಾಸ

ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ಸುದ್ದಿ ನೋಡಿದಾಗ ನನ್ನ ಹೃದಯ ತುಂಬಿ ಬಂತು. ನನ್ನ ಗುರು ಎಂ. ಹರೀಶ್ ಕುಮಾರ್ ಅವರು ತಮ್ಮ ಶಾಲೆಯ ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳಿರುವ ಚಿತ್ರವನ್ನು ನೋಡಿದ ಕ್ಷಣ, ನಾನು ಅವರ ವಿದ್ಯಾರ್ಥಿಯಾಗಿದ್ದ ದಿನಗಳ ನೆನಪುಗಳು ಮಳೆಯಂತೆ ಸುರಿದವು.

ಅವರು ಶಿಕ್ಷಕ ವೃತ್ತಿ ಆರಂಭಿಸಿದಾಗಲೇ, ಶಿಕ್ಷಣ ಎಂದರೆ ಕೇವಲ ಪಾಠ ಪುಸ್ತಕವಲ್ಲ ಎಂಬುದನ್ನು ನಮಗೆ ಕಲಿಸಿದ್ದರು. ಜೀವನವನ್ನು ಬದುಕುವ ಕಲೆಯೇ ನಿಜವಾದ ಶಿಕ್ಷಣ ಎಂದು ಅವರು ಪ್ರತಿಯೊಂದು ಪಾಠದ ಮೂಲಕ ಸಾರುತ್ತಿದ್ದರು.

ಪ್ರವಾಸ ಎಂದರೆ ಮಕ್ಕಳಿಗೆ ಕೇವಲ ಸಂಭ್ರಮವಲ್ಲ, ಅದು ಒಂದುರೀತಿಯ ಪಾಠಶಾಲೆಯೇ. ಹೊಸ ಜಾಗ, ಹೊಸ ಅನುಭವ, ಹೊಸ ಅರಿವುಇವೆಲ್ಲವೂ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನೂ ಆತ್ಮವಿಶ್ವಾಸವನ್ನೂ ಮೂಡಿಸುತ್ತವೆ. ಹರೀಶ್ ಕುಮಾರ್ ಸರ್ತಮ್ಮ ವಿದ್ಯಾರ್ಥಿಗಳಿಗೆ ಇದೇ ಅನುಭವವನ್ನು ನೀಡುತ್ತಿದ್ದಾರೆ ಎಂಬುದನ್ನು ನೋಡಿದಾಗ ನನಗೆ ಅಪಾರ ಸಂತೋಷವಾಯಿತು.

ನಾನು ವಿದ್ಯಾರ್ಥಿಯಾಗಿದ್ದಾಗಲೂ ಅವರು ಸದಾ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ನಮ್ಮ ಸಣ್ಣ ಸಾಧನೆಗಳನ್ನೇ ದೊಡ್ಡದಾಗಿ ಪರಿಗಣಿಸಿ, ಆತ್ಮವಿಶ್ವಾಸ ತುಂಬುತ್ತಿದ್ದರು. ಇಂದು ಅವರ ವಿದ್ಯಾರ್ಥಿಗಳು ಪ್ರವಾಸದ ಮೂಲಕ ಬದುಕನ್ನು ಕಲಿಯುತ್ತಿರುವುದು ಕಂಡ  ನನಗೆ ತೋರುತ್ತಿರುವುದು,ಗುರುವರ್ಯರು ಹೇಗಿದ್ದರೋ ಹಾಗೆಯೇ ಇಂದಿಗೂ ಇದ್ದಾರೆ: ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ದಾರಿದೀಪ.”ದ ಹಾಗೆ…

🌹 ನನ್ನ ಜೀವನದಲ್ಲಿ ಗುರು ಎಂ. ಹರೀಶ್ ಕುಮಾರ್ ಅವರ ಮಾರ್ಗದರ್ಶನ ಸಿಕ್ಕದ್ದು ನನ್ನ ಭಾಗ್ಯ. ಅವರ ಶಿಷ್ಯೆಯಾಗಿರುವ ಹೆಮ್ಮೆ, ಅವರ  ಪ್ರತಿಯೊಂದು ಸುದ್ದಿಯೂ, ಪ್ರತಿಯೊಂದು ಸಾಧನೆಯಲ್ಲಿ ಮತ್ತಷ್ಟು ಹೆಚ್ಚುತ್ತಿದೆ.

 

Top of Form

Bottom of Form

🌷 🌷 🌷 🌷 🌷 🌷 🌷 🌷 🌷 🌷 🌷 🌷 🌷 🌷 🌷 🌷 🌷 🌷 🌷 🌷

Bottom of Form

 

ಮಕ್ಕಳಿಗಾಗಿಯೇ ಬದುಕು ಮೀಸಲಿಟ್ಟವರು ನಮ್ಮ ಮೇಷ್ಟ್ರು

ನಮ್ಮ ಗುರು ಯಾವಾಗಲೂ ಮಕ್ಕಳಿಗಾಗಿ ಜೀವಿಸುತ್ತಿದ್ದರು. ಪಾಠದ ಸಮಯದಲ್ಲಾಗಲಿ, ಪಾಠದ ಹೊರಗೆ ಆಗಲಿಯಾರಾದರೂ ವಿದ್ಯಾರ್ಥಿ ಸಹಾಯ ಕೇಳಿದರೆ ತಕ್ಷಣ ಮುಂದೆ ಬಂದು ನೆರವಾಗುತ್ತಿದ್ದರು. ನಾವು ಸರ್ಕಾರಿ ಶಾಲೆಯ ಮಕ್ಕಳು, ನಮ್ಮ ಪರಿಸ್ಥಿತಿ ಎಲ್ಲರಿಗೂ ಗೊತ್ತಿತ್ತು. ಆದರೆ ಗುರು ನಮ್ಮ ಹಿನ್ನೆಲೆಯತ್ತ ನೋಡದೇ, "ಓದಿ ಮುಂದುವರಿಯಬೇಕು" ಎಂಬ ದೃಢ ನಂಬಿಕೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾರ್ಗದರ್ಶನ ನೀಡುತ್ತಿದ್ದರು.

ಕಟ್ಟುನಿಟ್ಟಿನ ಪಾಠಹೃದಯದ ಮಮತೆ

ತರಗತಿಯಲ್ಲಿ ಅವರು ಬಹಳ ಕಟ್ಟುನಿಟ್ಟಾಗಿದ್ದರು. ಅವರು ಬೋಧಿಸುತ್ತಿದ್ದ ವಿಷಯದಲ್ಲಿ ಯಾರೂ ಹಿಂದೆ ಉಳಿಯದಂತೆ  ಪಾಠ ಮಾಡುತ್ತಿದ್ದರು. ಕೆಲವೊಮ್ಮೆ ಅವರ ಕಟ್ಟುನಿಟ್ಟಿಗೆ ಮಕ್ಕಳು ಬೆದರಿದರೂ, ಅಂತಃಕರಣದಲ್ಲಿ ಎಲ್ಲರೂ ಅವರಿಗೆ ಅಪಾರ ಗೌರವ ಮತ್ತು ಪ್ರೀತಿ ಇಟ್ಟಿದ್ದರು. ಅವರ ಪಾಠಗಳಲ್ಲಿ ಶಿಸ್ತು, ಜ್ಞಾನ ಮತ್ತು ಮಾನವೀಯತೆ ತುಂಬಿಕೊಂಡಿದ್ದವು.

ಶಾಲಾ ಪ್ರವಾಸದ ಮಮತೆ

ಶಾಲಾ ಪ್ರವಾಸದ ಸಮಯದಲ್ಲಿ ಗುರುಗಳ ಮಮತೆ ಇನ್ನೂ ಸ್ಪಷ್ಟವಾಗುತ್ತಿತ್ತು. ಮಕ್ಕಳಿಗೆ ಏನೂ ತೊಂದರೆ ಆಗಬಾರದು ಎಂದು ಪ್ರತಿಯೊಬ್ಬರ ಮೇಲೂ ಕಣ್ಣಿಟ್ಟಿದ್ದರು. ಊಟ, ವಸತಿ, ಸುರಕ್ಷತೆ  ಪ್ರತಿಯೊಂದು ವಿಚಾರದಲ್ಲೂ ಮಕ್ಕಳ ಬಗ್ಗೆ ತಾಳ್ಮೆಯಿಂದ ನೋಡಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳು ತಮ್ಮ ಮನೆಯವರಿಂದ ದೂರ ಇದ್ದರೂ, ಗುರು ಅವರ ಹತ್ತಿರ ಇದ್ದರೆ ಸುರಕ್ಷಿತವಾಗಿದ್ದೆವು ಎಂಬ ಭರವಸೆಯನ್ನು ನಮಗೆ ಕೊಟ್ಟಿದ್ದರು.

ನೂತನ ಕಲಿಕೆಬೇಸಿಗೆ ತರಗತಿಗಳು

ಇಪ್ಪತ್ತು ವರ್ಷಗಳ ಹಿಂದೆಯೇ ಅವರು ನಮ್ಮಿಗಾಗಿ ಬೇಸಿಗೆ ರಜೆಯ ದಿನಗಳಲ್ಲಿ ವಿಶೇಷವಾಗಿ ಇಂಗ್ಲೀಷ್ ತರಗತಿಗಳನ್ನು ನಡೆಸುತ್ತಿದ್ದರು. ಸರ್ಕಾರಿ ಶಾಲೆಯಲ್ಲಿ ಇಂತಹ ಅವಕಾಶ ನಮಗೆ ದೊರೆಯುವುದು ಅಪರೂಪ. ಆದರೆ ನಮ್ಮ ಗುರುಗಳ ದೂರದೃಷ್ಟಿ ಮತ್ತು ನಿಷ್ಠೆಯಿಂದ ನಾವು ಆಂಗ್ಲಭಾಷೆಯ ಮೂಲಾಧಾರವನ್ನು ಅರ್ಥಮಾಡಿಕೊಂಡೆವು. ಇಂತಹ ಪ್ರಯತ್ನಗಳು ನಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ದಾರಿತೋರಿದವು.

ವಿದ್ಯಾರ್ಥಿಗಳ ಜೀವನದ ಶಿಲ್ಪಿ

ವಿದ್ಯಾರ್ಥಿಗಳ ಸ್ಥಿತಿಪರಿಸ್ಥಿತಿಗಳನ್ನು ಅರಿತು ಅವರಿಗೆ ಕೈಲಾದಷ್ಟು ಸಹಾಯ ಮಾಡುವುದು, ಬಡತನ ಅಥವಾ ಅಡಚಣೆಗಳನ್ನು ಕಡೆಗಣಿಸಿ ಮಕ್ಕಳನ್ನು ಮುಂದೆ ಓದುವಂತೆ ಮಾಡುವುದುಇವೆಲ್ಲಾ ನಮ್ಮ ಗುರುಗಳ ವಿಶೇಷತೆಗಳು. ನಮ್ಮಲ್ಲಿ ಅನೇಕರು ಜೀವನದಲ್ಲಿ ಸಾಧನೆ ಮಾಡಿರುವುದಕ್ಕೆ ಅವರ ದಾರಿದೀಪದ ಮಾರ್ಗದರ್ಶನವೇ ಕಾರಣ.

ನಮ್ಮ ಹೆಮ್ಮೆನಮ್ಮ ಗುರು

ಇಂದು ಅವರಿಗೆ "ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ದೊರೆತಿರುವುದು ಅವರ ಪರಿಶ್ರಮಕ್ಕೆ ಸಿಕ್ಕ ನ್ಯಾಯ. ನಮ್ಮಂತಹ ಹಳೆಯ ವಿದ್ಯಾರ್ಥಿಗಳಿಗೆ ಇದು ಅಪಾರ ಸಂತೋಷದ ಕ್ಷಣ.

🙏 ಪ್ರಿಯ ಗುರುಗಳೇ, ನಿಮ್ಮ ಕಟ್ಟುನಿಟ್ಟಿನ ಪಾಠ, ನಿಮ್ಮ ಮಮತೆಯ ಬೆಂಬಲ, ಮತ್ತು ನಿಮ್ಮ ಮಾರ್ಗದರ್ಶನ ನಮ್ಮ ಬದುಕನ್ನು ರೂಪಿಸಿದೆ. ಪ್ರಶಸ್ತಿ ನಿಮ್ಮದು ಮಾತ್ರವಲ್ಲ, ನಮ್ಮ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಮ್ಮೆಯ ಸಂಕೇತವೂ ಹೌದು.

🌷 ನಿಮಗೆ ಹೃತ್ಪೂರ್ವಕ ಅಭಿನಂದನೆಗಳು! 🌷

 

 


ಧನ್ಯವಾದಗಳು........🌷🌷🌷🌷🌷🌷🌷

ಕಾಮೆಂಟ್‌ಗಳು

E Ranjith Kumar ಹೇಳಿದ್ದಾರೆ…
Harish Sir, my 7th-grade English teacher, was a truly inspiring person. He wasn't just a teacher; he was a mentor who helped me see a bigger future for myself. I wanted to share a few things about him that have stayed with me:
​He was brilliant at explaining topics, making even difficult concepts easy to understand.
​He always encouraged us to participate in sports, competitions, and to learn about general knowledge. He was the one who taught me to think big.
​He dedicated his life to his students, and you could see how much he cared in everything he did.
​His encouraging and positive thoughts also inspired other teachers.
​He taught not only English but also Hindi.
​He was known for being the best science quiz master, always involving students and motivating us to compete and win.
​He was a practical-oriented teacher, which made learning much more interesting and real.
​He remains an inspiration for me throughout my life.
​I'm so grateful for his guidance and the lessons he taught me, both inside and outside the classroom.
I am happy that you got State-level best teacher award❤️
Thanks a lot sir 🍂💐
capturing Laxmi ಹೇಳಿದ್ದಾರೆ…
Thanks for your valuable words my friend.!

thoghts of 20's

💄 "ಬಣ್ಣದಿಂದ ಹೊರತಾಗಿಯೂ ನಿಮ್ಮ ಶಕ್ತಿ ಹೊಳೆಯಲಿ – ಲಿಪ್‌ಸ್ಟಿಕ್‌ ಅಂದರೆ ಸ್ತ್ರೀಶಕ್ತಿಯ ಬಣ್ಣದ ಹೆಜ್ಜೆ!" ✨ "ನ್ಯಾಷನಲ್ ಲಿಪ್‌ಸ್ಟಿಕ್ ಡೇ (National Lipstick Day)"

🥭 "ಮಕ್ಕಳಿಗೊಂದು ಕ್ರಿಯೇಟಿವ್ ಟ್ರೀಟ್: ಹೋಮ್‌ಮೇಡ್ ಐಸ್‌ಕ್ರೀಂ ಸ್ಯಾಂಡ್ವಿಚ್‌ ರೆಸಿಪಿಗಳು", ✏️ "ಕಲೆಯ ಮೂಲಕ ಬುದ್ಧಿವಿಕಾಸ: ನ್ಯಾಷನಲ್ ಕಲರಿಂಗ್ ಬುಕ್ ಡೇ ಸ್ಪೆಷಲ್ ಆಕ್ಟಿವಿಟಿಗಳು"

ನಮ್ಮ ಆಹಾರದ ಆಯ್ಕೆ ನಮ್ಮ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುತ್ತದೆ......... ನಮ್ಮ ದೇಹದ seasonal needs ಗೆ ನೇರವಾಗಿ ಉತ್ತರಿಸುವ, ಋತುಮಾನಕ್ಕನುಸಾರ ಆಹಾರ ಸೇವನೆ!!!!!

🌿 ಆರೋಗ್ಯಕರ ಬದುಕಿಗಾಗಿ ಭಾರತೀಯ ಜೀವನಪದ್ಧತಿ 🌿

"ನಾವು AI ನ್ನು ರೂಪಿಸುತ್ತಿದ್ದೇವೋ? ಅಥವಾ ಅದು ನಮ್ಮನ್ನು ರೂಪಿಸುತ್ತಿದೆಯೋ??? ಈ ಅವಕಾಶಗಳ ಮಧ್ಯೆ ನಾವು ಶಿಸ್ತಿನಿಂದ, ಜವಾಬ್ದಾರಿಯಿಂದ AI ಬಳಸುವಿಕೆ ಕಲಿಯಬೇಕಾಗಿದೆ.!!!!

ಹರಕೆ ಹೊತ್ತರೆ ನಿಜವಾಗಿಯೂ ಪಾಪ ತೀರಿಬಿಡುತ್ತದೆಯೇ???????

ಕವಲೊಡೆದ ಕಥೆ!!!!!!!!

“ಪೂರ್ವಜನ್ಮದ ಬಾಂಧವ್ಯ ಸ್ನೇಹ, ಅದು ನಿರ್ದಿಷ್ಟವಾದ ನೆನೆಪುಗಳ ಸಂಗ್ರಹ.” “ಕೋಪದಿಂದ ಸಂಬಂಧ ಮರೆಯಾಗುತ್ತದೆ… ಕ್ಷಮೆ ನೀಡಿದರೆ ಪ್ರೀತಿ ಪುನಃ ಹುಟ್ಟುತ್ತದೆ.”

!!! ಮೈಕ್ರೋ ಅಡ್ವೆಂಚರ್‌ಗಳು!!! ಸಣ್ಣ ಯಾನಗಳ ಮಾಹಿತಿ.......